ಗಣಿಗಾರಿಕೆಯಿಂದ ಗರಿಷ್ಟ ಲಾಭ ಸಿಗ್ಬೇಕು


ಇತ್ತೀಚಿಗೆ ಮುಖ್ಯಮಂತ್ರಿಗಳು ಗಣಿ ಪರವಾನಿಗೆ ಬೇಕಂದ್ರೆ ಉಕ್ಕು ಕಾರ್ಖಾನೇನೂ ಸ್ಥಾಪಿಸಬೇಕು ಅಂತಂದ ಸೊಗಸಾದ ಹೇಳಿಕೆ ಕೊಟ್ಟಿದಾರೆ ಗುರು! ನಿಜಕ್ಕೂ ಇದು ಒಂದು ಒಳ್ಳೆಯ ಅತ್ಯಗತ್ಯವಾದ ನಡೆಯಾಗಿದೆ.

ಕರಗೋ ನೈಸರ್ಗಿಕ ಸಂಪತ್ತು

ನಮ್ಮ ನಾಡು ಬಹಳ ಸಮೃದ್ಧವಾದ ನಾಡು. ಇವತ್ತಿಗೂ ಕನ್ನಡನಾಡಲ್ಲೇ ಅತಿ ಹೆಚ್ಚು ಚಿನ್ನ ಸಿಗ್ತಿರೋದು. ಹಾಗೇ ನೋಡ್ತಾ ಹೋದ್ರೆ ನಮ್ಮ ಕಾಡುಗಳಲ್ಲಿ ಬೆಳೆಯೋ ಅನೇಕ ಮರಗಳು ಅತ್ಯಂತ ಬೆಲೆಬಾಳೋ ಅಪೂರ್ವವಾದವುಗಳು. ನಮ್ಮ ನಾಡಲ್ಲಿ ಹರಿಯೋ ನದಿಗಳು ಅನೇಕ... ಒಟ್ಟಲ್ಲಿ ಆ ದೇವರು ಒಳ್ಳೇ ಮೂಡಲ್ ಇದ್ದಾಗ ಸೃಷ್ಟಿ ಮಾಡಿದ್ದು ನಮ್ ನಾಡನ್ನ ಅಂದ್ರೆ ತಪ್ಪಾಗಲ್ಲಾ ಗುರು! ಇಂಥಾ ಸಮೃದ್ಧ ನಾಡಿನ ನೈಸರ್ಗಿಕ ಸಂಪತ್ತಿನ ಹಕ್ಕುದಾರರು ಯಾರು? ತಲತಲಾಂತರಗಳಿಂದ ಇದೇ ಮಣ್ಣಲ್ಲಿ ಬದುಕಿದ ನಮ್ಮ ಹಿರಿಯರು, ಈಗ ಬದುಕುತ್ತಿರೋ ನಾವು ಮತ್ತು ಮುಂದಿನ ನಮ್ಮ ನೂರಾರು ತಲೆಮಾರುಗಳು. ಈ ನೈಸರ್ಗಿಕ ಸಂಪತ್ತನ್ನು ನಾವು ಕರಗ್ಸೋದಾದ್ರೆ ಮುಂದಿನೋರಿಗೆ ಏನುತ್ತರ ಕೊಟ್ಟೇವು? ಹಾಗಂದ್ರೆ ಇದನ್ನು ನಾವು ಖರ್ಚು ಮಾಡಲೇ ಬಾರದೆನು? ಇಂದು ನಾವಲ್ಲದಿದ್ರೆ ಮುಂದಿನ ಇನ್ಯಾರಾದರೋ ಇದನ್ನು ಬಳಸಲೇ ಬೇಕು. ಆಗಲೇ ಇದನ್ನು ಸಂಪನ್ಮೂಲ ಅನ್ನಕ್ಕೆ ಸಾಧ್ಯ. ಇದು ತೆಗೆದ ಹಾಗೆಲ್ಲಾ ಕರಗೋ ಸಂಪತ್ತು ಅನ್ನೋದು ಎಷ್ಟು ಸತ್ಯಾನೋ, ತೆಗೀದೆ ಇರೋದು ಪೆದ್ದುತನ ಅನ್ನೋದೂ ಅಷ್ಟೆ ಸತ್ಯಾ ಗುರು!ಹಾಗಿದ್ರೆ ಇದನ್ನು ಎಷ್ಟು ಯೋಗ್ಯವಾಗಿ ಹೇಗೆ ಬಳಸಬೇಕು ಅನ್ನೋದೊಂದೇ ನಮ್ಮ ಮುಂದಿರೋ ಪ್ರಶ್ನೆ ಅಲ್ವಾ!

ಗರಿಷ್ಟ ಲಾಭ ತಂದುಕೊಡಬೇಕು ಗಣಿ!

ಇವತ್ತಿನ ದಿನ ಒಂದು ಟನ್ ಕಬ್ಬಿಣದ ಅದಿರನ್ನು ತೆಗೆದಾಗ ಅಂತಹ ಗಣಿ ಉದ್ಯಮಿ ಸರ್ಕಾರಕ್ಕೆ ಕಟ್ಟೋ ಶುಲ್ಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ದಕ್ಕೋದು ಶೇಕಡಾ ಒಂದರಷ್ಟು ಮಾತ್ರಾ ಅಂದ್ರೆ ಇಪ್ಪತ್ತು ರೂಪಾಯಿಗಿಂತಲೂ ಕಮ್ಮಿ!!! ನಮ್ಮ ನಾಡಲ್ಲಿ ಗಣಿಗಾರಿಕೆ ಮಾಡಿ ನಮ್ಮ ಸಂಪನ್ಮೂಲಾನ ಶಾಶ್ವತವಾಗಿ ಬರಿದು ಮಾಡೋದಕ್ಕೆ ಅನುಮತಿಸಿದ್ದಕ್ಕೆ ನಮಗೆ ಸಿಗ್ತಿರೋ ಪ್ರತಿಫಲ ಇಷ್ಟೇ ಆದ್ರೆ ಹೆಂಗೆ ಗುರು? ಗಣಿಗಾರಿಕೆಯಿಂದ ನಮ್ಮ ಸರ್ಕಾರಕ್ಕೆ ಸಂಪನ್ಮೂಲ ಹರಿಹರಿದು ಬರಬೇಕು. ನಿಜಕ್ಕೂ ಗಣಿಯಿಂದ ಅದಿರು ತೆಗೆಯೋ ಪರವಾನಿಗೆ ಇರೋರಿಗೆ ಸಿಗಬೇಕಾದ್ದು ಬರೀ ಸಂಸ್ಕರಣಾ ಶುಲ್ಕ ಮಾತ್ರಾ ಅಲ್ವಾ ಗುರು? ಗಣಿಗಾರಿಕೆಯಿಂದ ತೆಗೆದ ಕಬ್ಬಿಣದ ಅದಿರನ್ನು ಇಲ್ಲೇ ಸಂಸ್ಕರಿಸಿ ಉಕ್ಕು ಕಾರ್ಖಾನೆ ತೆಗೆದರೆ ನಮ್ಮ ಜನಕ್ಕೆ ದೊರಕುವ ಉದ್ಯೋಗಗಳ ಸಂಖ್ಯೆ ಹೆಚ್ಚುತ್ತೆ. ಆ ಕಾರಣದಿಂದ ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆ ಆ ಮಟ್ಟಿಗೆ ನಾಡಿಗೆ ಉಪಯೋಗಕಾರಿಯಾಗಿದೆ. ಆದ್ರೆ ಇಷ್ಟರಿಂದಲೇ ನಾವು ತೃಪ್ತರಾದ್ರೆ ತಪ್ಪಾಗುತ್ತೆ, ನಿಜಕ್ಕೂ ನಮ್ಮ ಜನರ ಸಂಪತ್ತನ್ನು ನಾವು ಮಾರಿಕೊಳ್ಳೋದರಿಂದ ಸಿಗೋ ಅಷ್ಟೂ ಬೆಲೆ ನಮ್ಮ ಸರ್ಕಾರಕ್ಕೇ ಸಿಗಬೇಕಾದದ್ದೂ, ಹಾಗೆ ಸಿಕ್ಕೋ ಸಂಪತ್ತಿಂದ ನಮ್ಮ ಜನರ ಕಲ್ಯಾಣ, ಕಲಿಕೆ, ಉದ್ಯೋಗಗಳಿಗೆ ನೆರವು ಸಿಗೋದು... ಇದೇ ಸರಿ ಅಲ್ವಾ ಗುರು?
ಕೊನೆಹನಿ : ಒಂದು ಟನ್ ಮರಳಿಗೆ ಸರ್ಕಾರ ಗಳಿಸೋ ರಾಯಧನ 25 ರೂಪಾಯಿ, ಆದ್ರೆ ಕಬ್ಬಿಣದ ಅದಿರಿಗೆ ಸಿಗೋದು ಬರೀ 15 ರೂಪಾಯಿ ಅನ್ನೋದು ಎಂಥಾ ಸೋಜಿಗದ ವಿಷ್ಯಾ ಅಲ್ವಾ ಗುರು?

5 ಅನಿಸಿಕೆಗಳು:

Hussain ಅಂತಾರೆ...

eiden Guru!!

intha ondu pramaanika prayatna bayasodu bari uhae idahange.

sarkara nadisore idrinda swantakke laabha padiyodanna nodkotare hortu, samaajakke anta sarkarakke anta gani vyavahara na nivu ankondashtu paaradarshakate torodilla. badlagi tamma competitors business na illa vaagisodu maadko taare ;) athva tamma laabha hecchiso gimmicks maadtare.

Bellary ge 4 varsha munche nodidavrige iega karkond hogi torsi, vivaravagi heltare alliya parisara da badalavane bagge mattu saamajika abhadra stitiya bagge.

Bellary bisili gashte prasiddi aagittu iega nettage oosiradalu kuda shubra gaali illadante aagide. bari dhoolu, taar road annode kaanodilla bari pothole iro kaccha raste nod bahudu. yella hotel galalli rasa paana da hole hariyutte. hotel staff, kannada ballavarantu siguvude virala.

patti yeno belita hogutte, otnalli sookta parisar snehi vooradre saaku. kone paksha haalu Hampi tara aagde iddre saaku. yenantira?

Anonymous ಅಂತಾರೆ...

ನಮ್ಮ ಅಜ್ಜ ಒಂದು ಮಾತು ಹೇಳುತ್ತಿದ್ದರು. ಜಪಾನ್ ದೇಶ ಅಷ್ಟು ಪುಟ್ಟ ರಾಶ್ಟ್ರವಾಗಿದ್ದು ಅಷ್ಟೊಂದು ಭೂಕಂಪಗಳಿರುವ ದೇಶವಾಗಿದ್ದು ಅಷ್ಟೊಂದು ಮುಂದುವರೆದಿದೆ ಎಲ್ಲಾ ವಿಶಯಗಳಲ್ಲು. ಅವರು ಒಂದು ಮಾತು ಹೇಳಿದ್ದರಂತೆ, ಕರ್ನಾಟಕದಷ್ಟು ದೊಡ್ಡ ಅಷ್ಟು ಫಲವತ್ತಾದ ಭೂಮಿ ಇರುವ ನಾಡು ನಮಗೆ ಕೊಟ್ಟಿದ್ದರೆ ಸಿಕ್ಕಾಪಟ್ಟೆ ಕೆಲಸ ಮಾಡುತ್ತಿದ್ದೆವು ಅಂತ. ಸುಮ್ಮನೆ ಗಣಿ ದೊರೆಗಳ ಹೊಟ್ಟೆಗೆ ಹಾಕದೆ ನಮ್ಮ ರಜ್ಯಕ್ಕೆ ರಾಜ್ಯದ ಜನರಿಗೆ ಉಪಯೋಗ ಆಗುವಂತೆ ನೋಡಿಕೊಳ್ಳಬೇಕು.

Anonymous ಅಂತಾರೆ...

ಗಣಿಗಾರಿಕೆಯನ್ನು ಖಾಸಗಿಕರಣ ಮಾಡದೆ ಅದರ ಸಂಪೂರ್ಣ ಲಾಭ-ನಷ್ಟವನ್ನು ಸರ್ಕಾರವೇ ವಹಿಸಿಕೊಂಡು ಆ ಗಣಿಗಾರಿಕೆಯಲ್ಲಿ ದೊರೆಯುವ ಸಂಪತ್ತು ೧೦೦% ಕರ್ನಾಟಕದಲ್ಲೇ ವಿನಿಯೋಗವಾದರೆ ಕರ್ನಾಟಕವು ಕೈಗಾರಿಕಾ ಕ್ಷೇತ್ರದಲ್ಲಿ ದೇಶದಲ್ಲೇ ಸಂವೃದ್ದಿ ಹೊಂದಿದ ರಾಜ್ಯ ನಮ್ಮ ಕರ್ನಾಟಕ ರಾಜ್ಯವಾಗುತ್ತದೆ.

Anonymous ಅಂತಾರೆ...

Kannadigas should come together and fight for it. Either they should share the profit with us or stop mining !!

Anonymous ಅಂತಾರೆ...

namma nadu svargave sari.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails