ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ

ಸೆಪ್ಟೆಂಬರ್ 14ನ್ನು 1949ರಿಂದಲೂ ಹಿಂದಿ ದಿವಸವೆಂದು ಭಾರತದಲ್ಲಿ ಆಚರಿಸಿಕೊಂಡು ಬರಲಾಗ್ತಾ ಇದೆ. ಈ ಬಾರಿಯೂ ಎಲ್ಲಾ ಕಡೆ ಆಚರ್ಸೋ ಹಂಗೇ ನಮ್ಮ ರಾಜ್ಯದ ಒಂದೊಂದು ಊರಲ್ಲೂ ಆಚರಿಸ್ತಾರೆ ಗುರು! ಈ ಹಿಂದಿ ದಿವಸ ಏನು? ಯಾಕೆ? ಅಂತೆಲ್ಲಾ ಇವತ್ತು ಒಂಚೂರು ವಿಚಾರ ಮಾಡೋಣ.

ಹಿಂದಿ ಒಪ್ಸಕ್ಕೆ ನೂರಾರು ದಾರಿ!

ಭಾರತಕ್ಕೆ ಸ್ವಾತಂತ್ರ್ಯ ಬರಕ್ಕೆ ಮೊದಲಿಂದಲೇ ಈ ಭಾರತ ಹೇಗಿರಬೇಕು? ಇದರ ಆಡಳಿತ ಹೇಗಿರಬೇಕು? ಅಂತ ಅವತ್ತಿನ ನಾಯಕ್ರು ಯೋಚನೆ ಮಾಡಿದ್ರು. ಬ್ರಿಟೀಷರನ್ನು ಓಡಿಸಿದ ಮೇಲೆ ನಮ್ಮ ಆಡಳಿತ ಎಲ್ಲಾ ನಮ್ಮ ಜನರ ಭಾಷೇಲೇ ಆಗಬೇಕು ಅನ್ನೋ ಸರಿಯಾದ ಆಲೋಚನೆ ಅವರಿಗಿದ್ರೂ ನಮ್ಮ ಜನರ ಭಾಷೆ ಯಾವ್ದು ಅನ್ನೋದ್ನ ಅರ್ಥ ಮಾಡ್ಕೊಳ್ಳೋದ್ರಲ್ಲಿ ಎಡವುದ್ರು. ಸ್ವತಂತ್ರ ಹೋರಾಟದ ಸಮಯದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ, ಬಂಗಾಲಾದಿಂದ ಬಾಂಬೆ ತನಕ ಯಾರೇ ಹಿಂದೀಲಿ ’ಭಾರತ್ ಮಾತಾ ಕೀ’ ಅಂದರೂ ಎದ್ರುಗಿರೋ ಜನ ’ಜೈ’ ಅಂತ ಅನ್ತಿದ್ರು, ಹಾಗಾಗಿ ಹಿಂದೀನ ರಾಷ್ಟ್ರಭಾಷೆ ಮಾಡೇ ಬಿಡೋಣ ಅಂತ ಮುಂದಾದ್ರು. ಆಗ ಕೇಂದ್ರ ಸರ್ಕಾರಕ್ಕೆ ತಮಿಳರಿಗೆ, ಬೆಂಗಾಲಿಗಳಿಗೆ, ಕನ್ನಡಿಗರಿಗೆ, ಪಂಜಾಬಿಗಳಿಗೆ, ಮಲಯಾಳಿಗಳಿಗೆ, ತೆಲುಗರಿಗೆ, ಮರಾಠಿಗರಿಗೆ, ಗುಜರಾತಿಗಳಿಗೆ... ಹಿಂದೀನು ಇಂಗ್ಲಿಷಿನಂತೆಯೇ ಅವರದ್ದಲ್ಲದ ಭಾಷೇ ಅಂತ ಯಾಕೋ ಮರತೇ ಹೋಗ್ಬಿಡ್ತು.

ಹಿಂದಿ ಒಕ್ಕೂಟದ ಒಗ್ಗಟ್ಟಿಗೆ ಸಾಧನ ಅಲ್ಲ

ಒಂದು ದೇಶ ಅಂದ್ರೆ ಅದಕ್ ಒಂದೇ ಭಾಷೆ ಇರಬೇಕು ಅನ್ನೋದ್ನ ಅದ್ಯಾರು ಹೇಳ್ಕೊಟ್ರೋ ಗೊತ್ತಿಲ್ಲ, ಜಪಾನೀಸ್ ಭಾಷೆ ಇರೋದ್ರಿಂದ ಜಪಾನ್ ಆಗಿದೆ ಅನ್ನೋದನ್ನು ಮರೆತು ಜಪಾನಿರೋದ್ರಿಂದಲೇ ಜಪಾನೀಸ್ ಭಾಷೆ ಇದೆ ಅಂತ ಅಂದ್ಕೊಂಡು ಅದೇ ಥರಾನೆ ಭಾರತಕ್ಕೆಲ್ಲ ಒಂದೇ ಭಾಷೆ ಇರಬೇಕು ಅಂದ್ಕೊಂಡ್ರು ಆ ಮಹಾನುಭಾವರು ಅನ್ಸುತ್ತೆ. ಆದ್ರೆ ನಾನಾ ಭಾಷಾ ಪ್ರಾಂತ್ಯಗಳಿರೋ ಭಾರತದಲ್ಲಿ ಒಂದು ಭಾಷೇಗೆ ದೊಡ್ಡ ಸ್ಥಾನ ಕೊಟ್ರೆ, ಅದರಲ್ಲೇ ಭಾರತದ ಮೂಲೆಮೂಲೇಲಿ ಆಡಳಿತ ಮಾಡ್ಬೇಕು ಅಂತ ಅಂದ್ಕೊಂಡು ಅದುನ್ನ ಜಾರಿಗೆ ತರಕ್ ಹೊರಟ್ರೆ ಒಕ್ಕೂಟ ಅನ್ನೋದರ ಮೂಲತತ್ವಾನ್ನೇ ತಪ್ಪಾಗಿ ಅರ್ಥೈಸಿದ ಹಾಗೆ ಅಂತ ಅದ್ಯಾಕೆ ಗೊತ್ತಗಲಿಲ್ವೋ ದೇವರೇ ಬಲ್ಲ. ಹೀಗೆ ಹಿಂದೀನ ರಾಷ್ಟ್ರಭಾಷೆ ಮಾಡಕ್ ಮುಂದಾದ್ರೆ ಹಿಂದಿ ಭಾಷಿಕರಿಗೆ ಸಲ್ಲದ ಅನುಕೂಲ ಮಾಡಿಕೊಟ್ಟಂಗಾಗಿ ಭಾರತದಲ್ಲಿ ಅಸಮಾನತೆಯಿಂದಾಗಿಯೇ ಇರೋ ಒಗ್ಗಟ್ಟೂ ಅಳಿದು ಹೋಗುತ್ತೆ ಅಂತ ಅವ್ರಿಗೆ ಅದ್ಯಾಕೆ ಯಾರೂ ಹೇಳಲಿಲ್ವೋ? ಒಂದು ಭಾಷೇನಾ ರಾಷ್ಟ್ರಭಾಷೆ ಅನ್ನೋದು ಅನೇಕ ಭಾಷಾ ಪ್ರಾಂತ್ಯಗಳಿರೋ ಭಾರತದ ಒಗ್ಗಟ್ಟಿನ ಸಾಧನ ಆಗೋಕೆ ಅಸಾಧ್ಯ ಅಂತ ಅರವತ್ತು ವರ್ಷ ಕಳೆದ ಮೇಲಾದ್ರೂ ಕೇಂದ್ರ ಸರ್ಕಾರ ಅರಿತುಕೋಬೇಕಿತ್ತು! ಅದುನ್ನ ಬಿಟ್ಟು ಸಂವಿಧಾನದ ಆಶಯ ಅಂತ ಹಿಂದೀ ಹೇರಿಕೆ ನಡುಸ್ತಿರೋದು ಪ್ರಜಾಪ್ರಭುತ್ವ ಅನ್ನೋದ್ರ ಕಗ್ಗೊಲೆ ಅಲ್ವಾ ಗುರು?

ರಾಷ್ಟ್ರಭಾಷೆ ಮಾಡಕ್ ಆಗ್ಲಿಲ್ಲ ಅಂತ ರಾಜಭಾಷೆ ಅನ್ನೋ ಹಿಂಬಾಗಿಲ ಹೇರಿಕೆ

1949ರಲ್ಲಿ ಹಿಂದೀನ ರಾಷ್ಟ್ರಭಾಷೇ ಮಾಡೋ ಪ್ರಯತ್ನ ತಮಿಳುನಾಡು, ಪಶ್ಚಿಮ ಬಂಗಾಳ ಥರದ ನಾಡುಗಳ ವಿರೋಧದಿಂದ ಜಾರಿ ಆಗ್ದೆ ಕಡೆಗೆ ಅದುನ್ನ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಅಂತ ಕರ್ದು ರಾಷ್ಟ್ರಭಾಷೆ ಅನ್ನಕ್ ಆಗ್ದೆ ರಾಜ್ ಭಾಷೆ ಅಂತ ಸ್ಥಾನ ಮಾಡಿಕೊಟ್ರು. ರಾಜ್ಯ ರಾಜ್ಯಗಳ ನಡುವಿನ, ರಾಜ್ಯ ಕೇಂದ್ರಗಳ ನಡುವಿನ ವ್ಯವಹಾರಕ್ಕೆ ಬೇಕಾದ ಆಡಳಿತ ಭಾಷೆ ಅಂತ ಮುಂದಾದ್ರು, ಪ್ರತಿರೋಧ ಕಮ್ಮಿ ಮಾಡಕ್ಕೆ ಇಂಗ್ಲಿಷನ್ನೂ ಕೂಡಾ ಇನ್ನೊಂದು ಪೂರಕ ಭಾಷೆ ಅಂದ್ರು. ಆದ್ರೂ ತಮ್ಮೊಳಗಣ ಉದ್ದೇಶವಾದ "ಹಿಂದಿಯನ್ನು ಭಾರತದ ತುಂಬಾ ತುಂಬಿ ಇಡೀ ಒಕ್ಕೂಟದ ಆಡಳಿತ ಭಾಷೆ" ಮಾಡೊ ಹಿಂಬಾಗಿಲ ಯತ್ನ ಕೈ ಬಿಡ್ದೆ ಇನ್ನು ಹದಿನೈದು ವರ್ಷ ಆದಮೇಲೆ ಇಂಗ್ಲಿಷನ್ನು ಕೈ ಬಿಡ್ತೀವಿ ಅಂತ ಮೆತ್ತುಗ್ ಅಂದುಬಿಟ್ರು.

ಭುಗಿಲೆದ್ದ ಹಿಂದಿ ವಿರೋಧಿ ಚಳವಳಿ

1965 ಹತ್ರ ಬಂತು, ಮರೆತು ಹೋಗಿದ್ದ ರಾಜಭಾಷಾ ವಿಷಯಕ್ಕೆ ಜೀವ ಬಂತು. ಹದಿನೈದು ವರ್ಷದ ಗಡುವು ಮುಗೀತು, ಸಂವಿಧಾನದ ಆಶಯದಂತೆ ಇಂಗ್ಲಿಷನ್ನು ನಮ್ಮ ನೆಲದಿಂದ ಬಡಿದೋಡಿಸಿ ಹಿಂದಿ ರಾಜ್ಯಲಕ್ಷ್ಮಿಯನ್ನು ಪ್ರತಿಷ್ಠಾಪಿಸುತ್ತೇವೆ ಅಂದಿತು ಕೇಂದ್ರ ಸರ್ಕಾರ. ಅಯ್ಯಾ ನನ್ ಮಕ್ಕುಳ್ರಾ ಇದು ನಿಮ್ಮ ನೆಲ ಅಲ್ಲಾ, ತಮಿಳುನಾಡು ಅಂತ ತಮಿಳು ನಾಡು ಹಿಂದಿ ವಿರುದ್ಧ ದೊಡ್ಡ ಸಮರಕ್ಕೆ ಮುಂದಾಯ್ತು. "ಹಿಂದುಸ್ತಾನ್ ಮೇ ರೆಹತೇ ಹೋ, ಹಿಂದಿ ನಹೀ ಮಾಲೂಮ್" ಅಂದವರಿಗೆ "ಹಿಂದೀ ಒಪ್ಪಲೇ ಬೇಕು ಅಂದ್ರೆ ಹಿಂದುಸ್ತಾನಾನೆ ಬೇಡ... ಗುಡ್ ಬೈ" ಅಂದ್ಬಿಟ್ರು ತಮಿಳ್ರು. ಏಳು ಜನ ಆತ್ಮಾಹುತಿ ಮಾಡಿಕೊಂಡು, ಅರವತ್ತಕ್ಕೂ ಹೆಚ್ಚು ಜನ ಪೊಲೀಸ್ ಗುಂಡಿಗೆ ಬಲಿಯಾದ ನಂತರ ಕೇಂದ್ರ ಸರ್ಕಾರ ಬಗ್ತು, ’ಇಲ್ಲಾ ಭಾರತದ ಎಲ್ಲಾ ರಾಜ್ಯಗಳು ಒಪ್ಪೋ ತನಕ ಇಂಗ್ಲಿಷೂ ಮುಂದುವರೆಯುತ್ತೆ, ಹಿಂದಿ ಹೇರಲ್ಲ’ ಅನ್ನಲೇ ಬೇಕಾಯ್ತು.

ಶುರುವಾಯ್ತು ಹಿಂಬಾಗಿಲ ಹೇರಿಕೆ

ಆದ್ರೆ ಸಂವಿಧಾನದ ಆಶಯ ಪೂರೈಸ್ದೆ ಇದ್ರೆ ಆಗುತ್ಯೇ? ಅದಕ್ಕೇ ಅಂತ "ಡಿಪಾರ್ಟ್’ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್" ಮೂಲಕ ಹಿಂಬಾಗಿಲ ಹೇರಿಕೆ ಶುರು ಹಚ್ಕೊಂಡ್ತು ಭಾರತ ಸರ್ಕಾರ. ಹಿಂದಿ ಪ್ರಚಾರ ಸಭಾಗಳೇನು? ಅವುಕ್ಕೆ ವರ್ಷ ವರ್ಷ ಕೊಡೋ ಕೋಟ್ಯಾಂತರ ರೂಪಾಯಿ ನಿಧಿ ಏನು? ಪ್ರತಿವರ್ಷ ಇವ್ರು ಹಾಕಿಕೊಳ್ಳೋ ಗುರಿಗಳೇನು? ಇಡೀ ಭಾರತ ಸರ್ಕಾರ ಹಿಂದೀನ ಭಾರತದ ತುಂಬಾ ನಿಧಾನವಾಗಿ ಹರಡಕ್ಕೆ ಬಳ್ಸೋ ವಿಧಾನಗಳೇನು? ಒಂದಕ್ಕಿಂತ ಒಂದು ಅದ್ಭುತ ಕಲೆಗಾರಿಕೆ!!
ಹಿಂದಿ ಕಲೀರಿ ಭಡ್ತಿ ಗಳಿಸಿ, ದಿನಕ್ಕೊಂದು ಹಿಂದಿ ಪದ ಕಲೀರಿ, ಹಿಂದಿ ಓದಕ್ ಬರಲ್ವಾ? ಇಂಗ್ಲಿಷ್ ಮೂಲಕ ಹಿಂದಿ ಕಲೀರಿ, ಹಿಂದಿ ಸಿನಿಮಾ ನೋಡ್ರಿ, ಹಿಂದಿ ಎಫ್.ಎಂ ಕೇಳ್ರಿ, ಹಿಂದಿ ಭಾಷೇನ ರಾಷ್ಟ್ರಭಾಷೆ ಅಂತ ಶಾಲೇಲಿ ಹೇಳುಸ್ಕೊಳ್ಳಿ, ಹಿಂದಿ ಕಲೀದಿದ್ರೆ ಭಾರತದ ಒಗ್ಗಟ್ಟು ಹಾಳಾಗುತ್ತೆ ಅನ್ನೋದನ್ನು ನಂಬಿ, ನೀವು ಮಾತ್ರಾ ಮೂರುಮೂರು ಭಾಷೆ ಕಲೀರಿ, ಹಿಂದಿ ಭಾಷಿಕರು ಎರಡು ಕಲೀತಾರೆ, ವಿಶ್ವಸಂಸ್ಥೇಲಿ ಹಿಂದೀನ ಭಾರತದ ಭಾಷೆ ಅನ್ತೀವಿ, ನೀವೂ ಹೊರದೇಶದಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ ಅಂತನ್ನಿ, ಕೇಂದ್ರ ಸರ್ಕಾರದಲ್ಲಿ ಕೆಲಸ ಬೇಕು ಅಂದ್ರೆ ಹಿಂದೀಲೆ ಅರ್ಜಿ ಬರೀರಿ, ರೈಲಲ್ಲಿ ಸುರಕ್ಷತೆ ಬೇಕಂದ್ರೆ ಹಿಂದಿ ಕಲಿತು ಓದಿಕೊಳ್ಳಿ-ಇಲ್ದಿದ್ರೆ ನೆಗೆದ್ ಬಿದ್ದು ಸಾಯ್ರಿ, ಐ ಎ ಎಸ್ - ಐ ಪಿ ಎಸ್ ಅಧಿಕಾರಿ ಆಗಿದ್ರೆ ಹಿಂದಿ ಭಾಷೇಲಿ ಆಡಳಿತ ಸಭೆ ಮಾಡಿ ಇಲ್ದಿದ್ರೆ ಶಿಕ್ಷೆ ಅನುಭವ್ಸಿ, ವಿಜ್ಞಾನಿ ಆಗಿದ್ರೆ ಹಿಂದೀಲಿ ನಿಮ್ಮ ಪೇಪರ್ ಪ್ರೆಸೆಂಟ್ ಮಾಡ್ರಿ, ನಿಮ್ಮೂರಲ್ಲೇ ಸಭೆ ಮಾಡಿ ಕನ್ನಡಾನ ಮನೇಲಿ ಬಳುಸ್ರಿ, ಹಿಂದೀನ ಕಛೇರಿಲಿ ಬಳಸಿ ಅಂತ ದೊಡ್ದಾಗಿ ಬೋರ್ಡ್ ನೇತು ಹಾಕಿದ್ರೂ ಒಪ್ಕೊಂಡು ಸಭೇಲಿ ಭಾಗವಹಿಸ್ರಿ, ಪ್ರಧಾನಿ ಆಗಿ ಕೆಂಪುಕೋಟೆ ಮೇಲೆ ನಿಂತು ಮಾತಾಡೋದೇ ಅದ್ರೂ, ನೀವು ದೇವೆಗೌಡ್ರೇ ಆಗಿದ್ರೂ ಕನ್ನಡದಲ್ಲಿ ಬರ್ಕೊಂಡು ಹಿಂದೀಲೇ ಭಾಷಣ ಮಾಡ್ರಿ, ಕರ್ನಾಟಕ - ತಮಿಳುನಾಡಿನ ಸರ್ಕಾರಗಳು ನಿಮ್ಮೊಳಗೆ ವ್ಯವಹರಿಸಬೇಕಾದ್ರೂ ಈ ವರ್ಷ 55% ಹಿಂದೀಲಿ ವ್ಯವಹರ್ಸಿ.... ಅಬ್ಬಬ್ಬಾ...ಹಿಂದೀನ ಹೇರಕ್ಕೆ ಕೇಂದ್ರ ಸರ್ಕಾರ ಸಾಧ್ಯವಿರೋ ಎಲ್ಲಾ ಕಸರತ್ತೂ ಮಾಡ್ತಿದೆ.

ಸೆಪ್ಟೆಂಬರ್ 14: ಹಿಂದಿ ದಿವಸ - ಹಿಂದಿ ಹೇರಿಕೆ ವಿರೋಧಿ ದಿನವಾಗಲಿ

ಇದಕ್ಕೆ ಸಾಧನವಾಗಿ ಸೆಪ್ಟೆಂಬರ್ 14ನ್ನು ಹಿಂದಿ ದಿವಸ್ ಅಂತ ಎಲ್ಲ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಆಚರಣೆ ಮಾಡ್ತಾರೆ. ಆ ದಿನ ವೈಭವದ ಕಾರ್ಯಕ್ರಮ ಮಾಡ್ತಾ ಹಿಂದಿ ಸ್ಪರ್ಧೆಗಳು, ಹಿಂದಿ ಮನರಂಜನೆ ಅಂತ ಮಾಡಿ ಗೆದ್ದೋರಿಗೆ ಬಹುಮಾನ ಕೊಡ್ತಾರೆ. ಕಳೆದ ವರ್ಷ ಇಂಥಾ ಒಂದು ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತಾಡಿದ್ದಕ್ಕೆ ಕೆಲ ಹಿಂದಿ ಭಾಷಿಕರು ಹಿಂದಿ ದಿವಸದ ಕಾರ್ಯಕ್ರಮಾನ ಹಿಂದೀಲೇ ಮಾಡಿ ಅಂತಂದ ಘಟನೇನೂ ನಡೆದಿದೆ ಗುರು! ಮೊದಮೊದಲು ಹಿಂದಿ ದಿನ ಆಗಿದ್ದುದು ಈಗ ಹಿಂದಿ ಸಪ್ತಾಹ, ಹಿಂದಿ ಪಕ್ಷಕ್ಕೆ ಬಂದು ನಿಂತಿದೆ. ಇಂಥಾ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಎಲ್ಲಾ ಭಾಷೆಗಾಳಿಗೂ ಸಮಾನ ಸ್ಥಾನಮಾನ ಇಲ್ಲ ಅಂತ ಸಾರುತ್ತಾ ಇರೋ ಕೇಂದ್ರ ಸರ್ಕಾರ ಅನ್ನೋ ಭೂತದ ಬಾಯಲ್ಲಿ ಮಾತ್ರಾ ಸಮಾನತೆಯೇ ಭಾರತದ ತಳಹದಿ ಅನ್ನೋ ಭಗವದ್ ಗೀತೆ! ಕನ್ನಡಿಗರು ಎಚ್ಚೆತ್ತು ಈ ಹಿಂದಿ ಹೇರಿಕೆಯನ್ನು ತಡೀಬೇಕು. ಇಲ್ಲಾ ಅಂದ್ರೆ ಇನ್ನೊಂದು ಹತ್ತು ವರ್ಷದಲ್ಲಿ ವರ್ಷಕ್ಕೊಮ್ಮೆ ಕನ್ನಡ ದಿನ ಅಂತ ಆಚರಿಸಿ ಕನ್ನಡಾ ಅಂತ ಒಂದು ಭಾಷೆ ಇತ್ತು ಅಂತ ನೆನಪಿಸಿಕೊಳ್ಳೋ ಪರಿಸ್ಥಿತಿ ಬರುತ್ತೆ ಅಷ್ಟೆ. ಮೊದಲ ಹೆಜ್ಜೆಯಾಗಿ ಸಾಂಕೇತಿಕವಾಗಿ ಹಿಂದಿ ದಿವಸದ ಆಚರಣೆಗೆ ಕೊನೆ ಹಾಡಬೇಕು ಗುರು!!

12 ಅನಿಸಿಕೆಗಳು:

Anonymous ಅಂತಾರೆ...

this is akshaya,
hindi has become part of the education. naavu hindi ge jaasti protsaaha kodtaidivi. this has to be stopped. I realised that IT IS JUST ENFORCING HINDI IN KARNATAKA. If u go to chennai or thiruvananthapuram which are are one of the metro's, people hardly speak in hindi, whilst hindi has become a kind of aadu bhashe in bangalore. hindi picturegalu, fm nalli hindi haadugalu. janarige hindi ontaraa cool bhashe anno ondu impression kodtaidare. idu nillisbeku. janarige yaavaga aarivu agodu ?

Anonymous ಅಂತಾರೆ...

ಅಕ್ಷಯ ರವರೆ,
ನೀವು ಸರಿಯಾಗಿಯೇ ಗಮನಿಸಿದ್ದೀರ! ಹಿ೦ದಿ ಒ೦ದು ಕೂಲ್ ಭಾಷೆನೂ ಅಲ್ಲ ಮಣ್ಣೂ ಅಲ್ಲ. ಹಿ೦ದಿ ಅ೦ದರೆ ಡೌನ್ ಮಾರ್ಕೆಟ್ ಅ೦ತ ಎಫ್.ಎ೦ ಗಳಿಗಾಗಲೇ ಜ್ನಾನೋದಯವಾಗಿದೆ. ಆದ್ದರಿ೦ದಲೇ ಬೆ೦ಗಳೂರಿನಲ್ಲಿ ಕನ್ನಡ ಹಾಡುಗಳು ಕಾರ್ಯಕ್ರಮಗಳು ಸಕ್ಕತ್ತಾಗಿ ಪ್ರಸಾರ ಆಗ್ತಿರೋದು. ಕನ್ನಡಿಗರು ಹಿ೦ದಿ ಹೇರಿಕೆಗೆ ಜಗ್ಗರು, ತಮ್ಮ ಭಾಷೆ ಬಿಟ್ಟು ಹಿ೦ದಿ ಗುಲಾಮರಾಗರು, ಇವರು ಕನ್ನಡ ಸಿನಿಮಾನೇ ನೋಡ್ತಾರೆ, ಕನ್ನಡದಲ್ಲೇ ವ್ಯವಹರಿಸ್ತಾರೆ, ಕನ್ನಡದಲ್ಲೇ ಒದ್ತಾರೆ, ಕನ್ನಡವನ್ನೇ ಎಲ್ಲೆಡೆ ಬಳುಸ್ತಾರೆ, ಜಾಸ್ತಿ ಹಿ೦ದಿ ಗಿ೦ದಿ ಅ೦ತ ತೆಗುದ್ರೆ ತಿರುಗಿಸಿ ಕನ್ನಡದಲ್ಲೇ ರಾಚುತ್ತಾರೆ ಅ೦ತ ಕೇ೦ದ್ರಕ್ಕೆ ಮನವರಿಕೆಯಾಗುವ ಕಾಲ ದೂರವಿಲ್ಲ ಅಕ್ಷಯ.

clangorous ಅಂತಾರೆ...

@ veerakesari...

neevu heLidange agida dina hotte tumba haaLu kudithini guru...aadru yesto dashagaLinda ee herike mithi meeruttide... yesto kannadada makkaLu Hindi namma raashtra bhaashe antha aagle brain wash agogiddare... hindi nalli mathadidre yeno levellu anno thara agogide.... . halavaaru bhashikaru mathadovaaga... ee hindiyavaru raja roshavaagi karnatakadalle kannada mathadbeda hindi upyogisu yellarigu artha agutte anthare... viparyaasa yenu andre ee naduve hindi virodhigaLagidda tamiLaru IT company gaLalli tamma beLe beyisikoLLalu hindiyavarana impress madokko yeno hindi cinema nododenu .. saryagi baradidru hindi mathadodenu yella nadistha iddare. iddane encash madkondu hindi yavaru tamiLu chitrgaLanna hogolodenu... amma thayi thara iro rajanikanth na melersodenu ... yella naditha ide guru...innondu udaharane andre... hogenakkal vivada teevragondaaga 'Sun Network' samstheya 93.5 FM navru modalu bari kannadavannu prasara maduttiddavaru hindi herike madalu mundadaru guru...ivarribbaru ( hindi haagu tamiLu ) seri bharathadalli bere bhashegaLige kantakavannuntu maduttiddare annodu maathra kaTina satya guru.

Anonymous ಅಂತಾರೆ...

ಭಾರತದ ಇತಿಹಾಸನ ಒಂದ್ಸಾರಿ ತಿರಗ್ಸಿ ನೋಡಿದ್ರೆ ಅಲ್ಲಿ ಎಷ್ಟ್ ಬಾಗ ಹಿಂದಿ ಇತ್ತು ಅಂತ ಗೊತ್ತಾಗುತ್ತೆ...... ಅಲ್ಲಿ ಕನ್ನಡನೇ ೬೦% ರಷ್ಟು ಆಡಳಿತ ಭಾಷೆ ಆಗಿತ್ತು...... ಅಲ್ಲೊಂದು ಇಲ್ಲೊಂದು ಹಿಂದಿ ಪದ ಕೇಳ್ತಿತ್ತು.....ಇದನ್ನೇ ನೆಪ ಮಾಡ್ಕೊಂಡು ಈತರ ಹೇರಿಕೆ ಮಾಡೋದು ಮಾನವೀಯತೆ ಅಲ್ಲ......

Anonymous ಅಂತಾರೆ...

ನಮಗ್ಯಾಕ್ರಿ ಹಿಂದಿ..ಇವನೌನ ಅದನ್ನ ಓಡಿಸುವುದು ಒಳ್ಳೇದು...ಎಲ್ಲಾರೂ ಕೈಗೂಡಿಸಬೇಕು..ಏನಂತೀರಿ ಗೆಳೆಯರೆ???? ಸಾವಿರಾರು ವರುಶ ಇತಿಹಾಸವಿರುವ ಕನ್ನಡ ಮುಂದೆ ಇದ್ಯಾವ ಮಹಾ? ಅದೊಂದು ಭಾಶೆ ಅಶ್ಟೆ.

ಇವ,
ಗಿರೀಶ ರಾಜನಾಳ.

Unknown ಅಂತಾರೆ...

ಹೌದು. ನಾವ್ ಯಾಕೆ ಆದಿನವನ್ನ "ಹಿಂದಿ ಹೇರಿಕೆ ವಿರೋಧಿ ದಿನ" ಎಂದು ಒಂದು ಜಾತಾವನ್ನ ಹಮ್ಮಿಕೊಳ್ಳಬಾರದು ???

Anonymous ಅಂತಾರೆ...

naanu ready 'hindi herike viroda dina'da jaathakke....


Thanks,
Manju

Anonymous ಅಂತಾರೆ...

ಖಂಡಿತ ಇದನ್ನು ಹಿಂದಿ ಹೇರಿಕೆ ವಿರೋಧಿ ದಿವಸ ಅಂತ ಆಚರಿಸಬೇಕು.

Anonymous ಅಂತಾರೆ...

sarygi helidri sandeep.
idu hindi virodi dinane.. Karnataka na odedu hakode E hindi herikeya uddesha.. Bengaluru bere karnataka bere antare.. E daridra hindi jana..

Shridhar Sahukar ಅಂತಾರೆ...

ಗುರು,

ಕನ್ನಡ ಭಾಷೆ ಬಗ್ಗೆ ನಂಗೂ ಅಭಿಮಾನ ಇದೆ. ಜೊತೆಗೆ ಕನ್ನಡಾನ ಉಳಿಸೋ ಮತ್ತು ಬೆಳೆಸೋ ಜವಾಬ್ದಾರಿ ನಮ್ಮ ಮೇಲೆ ಇದೆ ಅನ್ನೋ ಅರಿವೂ ಇದೆ. ಆದ್ರೆ ಹಿಂದಿ ಭಾಷೆಯನ್ನ ರಾಷ್ಟ್ರಭಾಷೆಯಾಗಿ ಕಲಿಯೋ ವಿಚಾರದಲ್ಲಿ ನಾವು ಸ್ವಲ್ಪ practicle ಆಗಿ ಯೋಚಿಸಬೇಕು ಅಂತ ನಂಗೆ ಅನ್ನಿಸುತ್ತೆ. ಇದರ ಬಗ್ಗೆ ನನ್ನ ಅನಿಸಿಕೆ ಹೀಗಿದೆ:

ಭಾರತದಲ್ಲಿ ಒಟ್ಟು ೨೮ ರಾಜ್ಯಗಳು ಮತ್ತು ೭ ಕೇಂದ್ರಾಡಳಿತ ಪ್ರದೇಶಗಳಿವೆ. ಇದ್ರಲ್ಲಿ ಯುಪಿ, ಬಿಹಾರ್, ಜಾರ್ಖಂಡ್, ಮಧ್ಯ ಪ್ರದೇಶ್, ರಾಜಸ್ಥಾನ್, ಚತ್ತೀಸ್ ಗಡ, ಹಿಮಾಚಲ್ ಪ್ರದೇಶ್, ಹರ್ಯಾಣ, ಮತ್ತೆ ದೆಹಲಿ, ಅಂದ್ರೆ ಒಟ್ಟು ೯ ರಾಜ್ಯಗಳಲ್ಲಿ ಹಿಂದಿ ರಾಜ್ಯಭಾಷೆ ಆಗಿದೆ. ಮುಂಬೈಯಲ್ಲೂ ಹಿಂದೆ ಪ್ರಾಮುಖ್ಯತೆ ಇದೆ. ಈ ರೀತಿಯಿಂದ ನೋಡಿದ್ರೆ ಭಾರತದಲ್ಲಿ ಹಿಂದಿ'ನ ಮಾತೃಭಾಷೆ ಅಂತ ಆಡೋರ ಸಂಖ್ಯೆ ಜಾಸ್ತಿ ಇದೆ.

ಪ್ರವಾಸದ ಮೇಲೆ, ಅಥವಾ ಕೆಲಸದ ಮೇಲೆ ನೀವು ಅಸ್ಸಾಂ ಗೆ ಹೋಗ್ತೀರಾ ಅಂದ್ಕೊಳ್ಳಿ. ಅಲ್ಲಿ ಕನ್ನಡ ಮಾತಾಡೋಕೆ ಆಗುತ್ತಾ? ಅಥವಾ ಅಷ್ಟಕ್ಕೊಸ್ಕರ ನೀವು ಅಸ್ಸಾಮಿ ಭಾಷೆ ಕಲಿಯೋಕಾಗುತ್ತ? ಅದೇ ನೀವು ಅಲ್ಲೇ ತುಂಬಾ ದಿವ್ಸ ಇರ್ತೀರಾ ಅಂದ್ರೆ ಅಲ್ಲಿನ ಭಾಷೆ ಕಲಿಯೋದು ಅನಿವಾರ್ಯ ಆಗುತ್ತೆ. ಆದರೆ ಜನರ ಮಧ್ಯೆ ಸಾಮನ್ಯ ಸಂವಹನೆಗಾಗಿ ಒಂದು common ಭಾಷೆ ಬೇಕೆ ಬೇಕು ಅಂತ ನಿಮಗೆ ಅನಿಸೊಲ್ವ?

ದಿನಕ್ಕೆ ಲಕ್ಷಾಂತರ ಜನರು ಪ್ರವಾಸ, ವ್ಯಾಪಾರ, ವ್ಯವಹಾರ ಅಂತ ಎಲ್ಲಾ ರಾಜ್ಯಗಳ ಮಧ್ಯೆ ಅಲೆದಾಡುತ್ತ ಇರ್ತಾರೆ. ಅಂಥವರಿಗೆ ಒಂದು ಸಾಮನ್ಯ (common) ಭಾಷೆ ಇರಲೇ ಬೇಕಲ್ವೆ?

ಮೇಲೆ ಹೇಳಿದ ಹಾಗೆ ಹಿಂದಿ ಭಾಷೆಯನ್ನು ಉಪಯೋಗಿಸೋ ಜನರೇ ಜಾಸ್ತಿ ಇರೋದ್ರಿಂದ, ಹಿಂದಿಯನ್ನೇ ರಾಷ್ಟ್ರಭಾಷೆಯಾಗಿ ಉಪಯೋಗಿಸಿದರೆ ತಪ್ಪೇನು?

ಆನಂದ್ ಅಂತಾರೆ...

ಪ್ರೀತಿಯ ಶ್ರೀಧರ್,

ಇಲ್ಲಿ ಎರಡು ಧರ್ಮ ಅಂತ ಇದೆ, ಒಂದು ವಲಸಿಗನ ಧರ್ಮ - ಇದರ ಬಗ್ಗೆ ನೀವು ಹೇಳ್ತಿರೋದು ಸರ್ಯಾಗೇ ಇದೆ. ಮತ್ತೊಂದು ಪ್ರವಾಸಿ ಧರ್ಮ. ನಾವೇ ಜಪಾನ್, ಜರ್ಮನಿ, ಫ್ರಾನ್ಸ್ ದೇಶಗಳಿಗೆ ಪ್ರವಾಸ ಹೋದರೆ ಏನ್ ಮಾಡ್ತೀವಿ? ಎಲ್ಲ ಕಡೆ ಇಂಗ್ಲಿಷ್ ನಡ್ಯಲ್ಲವಲ್ಲಾ? ಅಲ್ಲಿಗೆ ತರ್ಜುಮೆದಾರರನ್ನು ಇಟ್ಕೊಂಡು ಹೋಗ್ತೀವಿ ಅಥವಾ ಅಗತ್ಯವಾದ ಕೆಲವು ಆಯಾ ಭಾಷಾ ಪದಗಳನ್ನು ಕಲಿತುಕೊಂಡು ಹೋಗ್ತೀವಿ ಅಥವಾ ಸನ್ನೆ ಮಾಡಿ ಸಂವಹನ ಮಾಡ್ತೀವಿ. ಭಾರತದಲ್ಲಿದೀವಿ ಅನ್ನೋ ಕಾರಣದಿಂದಲೇ ಹಿಂದಿ ಅನ್ನೋ ನಮ್ಮದಲ್ಲದ ಭಾಷೆ ಕಲೀಬೇಕು ಅನ್ನೋದು ಸರೀನಾ? ಅಸ್ಸಾಮಿಗಳ ನುಡಿ ಅಸ್ಸಾಮಿ, ಅದು ಹಿಂದಿ ಅಲ್ಲ. ಅವರೂ ಹಿಂದಿ ಕಲೀಲಿ ಅಂತ ನಿರೀಕ್ಷೆ ಮಾಡ್ತೀರಾ? ಕಲೀದಿದ್ರೆ ತಪ್ಪು ಅಂತೀರಾ? ಇದುನ್ನೇ ಅಲ್ವಾ ನಾವು ಹೇರಿಕೆ ಅಂತ ಕರೀತಿರೋದು? ತಮಿಳರು, ಮಲಯಾಳಿಗಳು, ಕನ್ನಡಿಗರು, ತೆಲುಗರು ಅಲ್ಲರೂ ತಮ್ಮಲ್ಲಿಗೆ ಬರೋ ಪ್ರವಾಸಿಗಳಿಗಾಗಿ ಹಿಂದಿ ಕಲೀಬೇಕು ಅನ್ನೋದು ತಪ್ಪಲ್ವಾ? ಅಷ್ಟು ಅಗತ್ಯವಿದ್ರೆ ಇಂಗ್ಲಿಷ್ ಇದ್ದೇ ಇದೆಯಲ್ಲಾ? ಹೇಗಿದ್ರೂ ಎಲ್ಲಾ ಇಂಗ್ಲಿಷ್ ಕಲೀತಾನೆ ಇದೀವಲ್ಲಾ? ಏನಂತೀರಾ?

clangorous ಅಂತಾರೆ...

@ shreedhara

neevu alli list madiroo raajyagaLalli jharkhand, chattisgarh hosadagi roopa gonda rajya gaLu... inn rajasthan dalli rajasthani annodu ittu... hindi herike inda adu naashavaaythu... ade reethi yesto bhaashegaLu udaharanege bhojpuri,marathi munthadavugaLu ee hindi herike indagi shoschaneeya sthitiyallive. heege munduvaridare mundakke kannadakku ade gathi barolla antha hege heLodu ?. neevu patti madida raajyagaLalli hindi sampoornavagiddaddu UP, Bihar mattu MP aste. neeve helida haage mooriddaddu 9 kke beLedide. bharatadde aada yesto bhaashegaLu ee hindi ya pidugininda nashisuvudu yaava nyaya neeve heLi ?, aagale yesto bhaashegaLu heLa hesarillade hogide... innu assam bagge heLiddiri alli ULFA sangaTane yaava karaNakkagi sthapitha vagiddu ? ee hindiya herike virudda... ee herike poorakagintha maarakave hecchu. english annodu antharashtriya bhaashe andare yesto deshagaLu voppikolluttave heLi ? ade reethi hindi annodanna rasthra bhaashe antha voppuvudu asadhya.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails