ಹಿಂದಿ ಅನ್ನುವ ಆಕ್ಟೋಪಸ್!



ಕನ್ನಡ ನಾಡಿನ ಮೇಲೆ ಕನ್ನಡ ಜನರ ಮೇಲೆ ಹಿಂದಿ ಹೇರಿಕೆ ನಿಜವಾಗ್ಲೂ ನಡೀತಾ ಇದೆಯಾ? ಅಥ್ವಾ ನಾವು ಹುಚ್ಚುಚ್ಚಾಗಿ ಕಾಲ್ಪನಿಕ ಶತ್ರೂನ ಹುಟ್ ಹಾಕ್ಕೊಂಡಿದೀವಾ ಅಂತ ಇವತ್ ನೋಡ್ಮಾ ಬಾ ಗುರು!

ಹಿಂದಿ ಹೇರಿಕೆಯೆನ್ನುವ ಆಕ್ಟೊಪಸ್ಸಿನ ಕಬಂಧ ಬಾಹುಗಳು!!

ಕೇಂದ್ರ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಯಾಕೆ ಹಿಂದಿ?

ಯಾಕೆ ಭಾರತದ ಎಲ್ಲಾ ಭಾಷೆಗಳಿಗೂ ಆ ಸ್ಥಾನಮಾನ ಇಲ್ಲ?

ಹದಿನೈದು ವರ್ಷ ಆದ ಕೂಡಲೆ ಇಂಗ್ಲಿಷ್ ತೆಗ್ದು ಬರಿ ಹಿಂದಿ ಒಂದನ್ನೇ ರಾಜಭಾಷೆ ಯಾಕೆ ಮಾಡಬೇಕು?

ಕರ್ನಾಟಕ ತಮಿಳುನಾಡಿನ ಜೊತೆ, ಗುಜರಾತಿನ ಜೊತೆ ವ್ಯವಹಾರ ಮಾಡಲು ಹಿಂದಿ ಯಾಕೆ ಬೇಕು?

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಂತಹ ಪ್ರಚಾರ ಸಭೆಗಳು ಯಾಕೆ ಬೇಕು?

ಹಿಂದಿ ಪ್ರಚಾರಕ್ಕೆ "ಇಂಡಿಯನ್ ಅಫಿಷಿಯಲ್ ಆಕ್ಟ್" ಯಾಕೆ?

ಹಿಂದಿ ಪ್ರಚಾರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಯಾಕೆ?

ಕನ್ನಡದವರಿಗೆ ಕೇಂದ್ರ ಸರ್ಕಾರಿ ಅಧೀನದ ಬ್ಯಾಂಕಲ್ಲಿ ಕೆಲಸಕ್ಕೆ ಅರ್ಜಿ ಹಾಕಬೇಕು ಅಂದ್ರೆ ಅವರ ಅಂಕಪಟ್ಟೀಲಿ ಹಿಂದಿ ಅನ್ನೋ ವಿಷಯ ಇರಲೇ ಬೇಕಂತೆ ಯಾಕೆ?

ಕರ್ನಾಟಕದಾಗೆ ಹರಡಿರೋ ನೈಋತ್ಯ ರೇಲ್ವೆಯಲ್ಲಿ ಕೆಲಸ ಬೇಕಂದ್ರೆ ಎಂಟನೆ ತರಗತಿ ವಿದ್ಯಾರ್ಹತೆ ಸಾಕು, ಆದ್ರೆ ಅರ್ಜಿ ಹಿಂದೀಲಿ ಬರೀಬೇಕು ಅನ್ನೋ ನಿಬಂಧನೆ ಹಾಕಿರೋದು ಯಾಕೆ?

ಕರ್ನಾಟಕದ ರೈಲು ಗಾಡಿಗಳಲ್ಲಿ ಸುರಕ್ಷತಾ ಸೂಚನೆ ಕನ್ನಡದಲ್ಲಿ ಇಲ್ಲಾ.... ಯಾಕೆ?


ನಮ್ಮ ಮನೆಯಲ್ಲಿ ಬಳಸೋ ಗ್ಯಾಸ್ ಸಿಲಿಂಡರ್ ಮೇಲಿರೋ ಸುರಕ್ಷತಾ ಸೂಚನೆಗಳು ಯಾಕೆ ಹಿಂದಿಯಲ್ಲಿದೆ?


ನಮ್ಮೂರ ದೂರ ತಿಳಿಸೋ ಮೈಲಿಗಲ್ಲುಗಳು ಯಾಕೆ ಹಿಂದಿಯಲ್ಲಿವೆ?

ನಮ್ಮ ಬೆಂಗಳೂರಿನ ಖಾಸಗಿ ಎಫ್.ಎಂ ವಾಹಿನಿಗಳಲ್ಲಿ ಜಾಹೀರಾತುಗಳು ಯಾಕೆ ಹಿಂದಿಯಲ್ಲಿರುತ್ತವೆ?


ಕನ್ನಡ ಕಾಮನ ಬಿಲ್ಲು ಎಂದು ಹಿಂದಿ ಹಾಡುಗಳನ್ನು, ಹಿಂದಿಯಲ್ಲೇ ನಿರೂಪಣೆಯನ್ನು ಬೆಂಗಳೂರಿನ ಆಕಾಶವಾಣಿಯ ಎಫ್.ಎಂ ರೈನ್ ಬೋ ಪ್ರಸಾರ ಮಾಡುತ್ತದೆ ಯಾಕೆ?

ಎಲ್ಲ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಯಾಕೆ ದಿನಕ್ಕೊಂದು ಹಿಂದಿ ಪದವನ್ನು ಹೇಳಿಕೊಡಲಾಗುತ್ತದೆ.

ಕನ್ನಡದ ಮಕ್ಕಳಿಗೆ ಯಾಕೆ ತ್ರಿಭಾಷಾ ಸೂತ್ರವೆಂಬ ಶೂಲದ ಮೂಲಕ ಹಿಂದಿ ಕಲಿಕೆ ಯಾಕೆ?

ನಮ್ಮೂರ ಪೆಟ್ರೋಲ್ ಬಂಕುಗಳಲ್ಲಿ ಹಿಂದೀನ ಇಂಗ್ಲಿಷ್ ಮೂಲಕ ಕಲಿಸುತ್ತಿರೋದು ಯಾಕೆ?


ಅಯ್ಯೋ ಇನ್ನೆಷ್ಟು ಉದಾಹರಣೆ ಬೇಕ್ರೀಪಾ? ಎಲ್ಲದಕ್ಕೂ ಸಂವಿಧಾನದ ಆಶಯ ಇದು ಅನ್ತಾ ಅನ್ತಾನೆ ನಮ್ಮ ಬದುಕುವ ಹಕ್ಕು ಕಿತ್ಕೊಳೋ ಈ ವ್ಯವಸ್ಥೇನಾ ಬದಲಾಯಿಸೋದೇ ಬೇಡ್ವಾ ಗುರು!ಹಿಂದಿ ಹೇರಿಕೆಯ ಆಕ್ಟೋಪಸ್ಸಿನ ವಿಷದ ಕಬಂಧ ಬಾಹುಗಳು ಕನ್ನಡವನ್ನು ಕಬಳಿಸೋ ಮೊದಲು ಎಚ್ಚೆತ್ಕೊಳೋಣ ಗುರು! ದೇಶದ ವೈವಿಧ್ಯತೆಯನ್ನು ಸರ್ವನಾಶ ಮಾಡಕ್ ಮುಂದಾಗಿರೋ ಈ ಹಿಂದಿ ಹೇರಿಕೆಯನ್ನು ಕೊನೆ ಮಾಡಕ್ಕೆ ಕನ್ನಡಿಗರು, ಬೆಂಗಾಲಿಗಳು, ತಮಿಳರು, ತೆಲುಗರು, ಮರಾಠಿಗಳು, ಗುಜರಾಥಿಗಳು, ಸಿಂಧಿಗಳು, ರಾಜಾಸ್ಥಾನಿಗಳು, ಪಂಜಾಬಿಗಳು, ಅಸ್ಸಾಮಿಗಳು, ಕಾಶ್ಮೀರಿಗಳು ಎಲ್ರೂ ಒಂದಾಗಬೇಕು... ಮುಂದಾಗಬೇಕು ಗುರು!

23 ಅನಿಸಿಕೆಗಳು:

clangorous ಅಂತಾರೆ...

illi vyakthavagiruva vishayagaLonde alla guru. shalegalalli makkagalige hindi namma rasthra bhaShe mannu masi anthu chikka vayassinindale tappu beeja bittuttiddare, kendriya shaalegaLalli kannada prashne patrikegaLalli prashnegaLanna english nalli keLuva sthiti huttu haktha iddare, keludre makkale/poshakare aa reethi beku anthare anno pollu neethigaLanna anusarisuttiddare. yesto kannadigarige hindi namma rashtrabhaashe anno buddi brahmaNe agogide guru. kendriya onde alla namma rajyada shale gaLallu kannada da sthiti shochaneeya. Egale yesto kannadigaru onde ondu saalannu poorthi kannadalli mathanadalu tadakaduttare, ide reethi mundu varidare kannadavennuvudu bari itihaasa agodu aascharyavenalla guru.

Anonymous ಅಂತಾರೆ...

೧೦೮ ಕೋಟಿ ಭಾರತೀಯರು...........
೩೧ ರಾಜ್ಯಗಳು
೧೬೧೮ ವಿವಿದ ಭಾಷೆಗಳು
೧೪ ರಾಷ್ಟ್ರೀಯ ಅದಿಕೃತ ಬಾಷೆಗಳು
೬೪೦೦ ಜಾತಿಗಳು
೩ ರಾಷ್ಟ್ರೀಯ ಹಬಬಗಳು
೨೯ ಸಾಂಸ್ಕೃತಿಕ ಹಬ್ಬಗಳು
ಒಂದು ಜಾತ್ಯಾತೀತ ರಾಷ್ಟ್ರ.

ಹೆಮ್ಮೆಯಿಂದ ನೀ ಹೇಳು ನಾವು ಭಾರತೀಯರೆಂದು.....
ಜೈ ಹಿಂದ್, ವಂದೇ ಮಾತರಂ.

ಎಷ್ಟೊಂದು ವೈವಿದ್ಯಮಯ ನಮ್ಮ ಸಂಸ್ಕೃತಿಯಲ್ಲಿ......... ಹೀಗಿರೋವಾಗ ಹಿಂದಿ ಭಾಷೆಗೆ ಬೆಣ್ಣೆ - ಉಳಿದಿದ್ದಕ್ಕೆ ಸುಣ್ಣ.


ಹಿಂದಿನ ರಾಷ್ಟ್ರಿಯ ಭಾಷೆ ಅಂತ ಘೋಷಣೆ ಮಾಡೋವಾಗ ಯಾವೊಬ್ಬ ಪ್ರಜಾಪ್ರತಿನಿದಿನು... ಯಾರ್ನ್ನು ಕೇಳ್ದೆ ಅವರಷ್ಟಕ್ಕೆ ಅವ್ರೆ ಗೊಶ್ನೆ ಮಾಡ್ಕೊಂಡ್ರೆ ಅದ್ಯೆಂಗೆ ರಾಜ ಭಾಷೆ ಅಂತ ಅನ್ಸೋಕೊಳ್ಳುತ್ತೆ.....ನಾನಂತೂ ಕಂಡಿತ ಇದನ್ನ ಒಪ್ಪೋಲ್ಲ.....ಹಿಂದಿ ಭಾಷೆ.... ಕೇವಲ ಕೇಂದ್ರ ಸರ್ಕಾರದ ಅದಿನದಲ್ಲಿರುವ ಕಛೇರಿಗಳಲ್ಲಿ ಮಾತ್ರ ಬಳಕೆ ಆಗೋದು...... ಬಿಟ್ರೆ ಮೂರು ನಯ ಪೈಸೆ ಗೆ ಬೆಲೆ ಇಲ್ಲ.... ಅಥವಾ ಹಿಂದಿ ಕಲ್ತೊರಿಗೆಲ್ಲ ಕೇಂದ್ರ ಕಛೇರಿಗಳಲ್ಲಿ ಕೆಲಸನು ಕೊಡೋಲ್ಲ.... ಹೀಗಿರೋವಾಗ, ಇದೆ ಹೇರಿಕೆಯನ್ನು ಆಯಾ ರಾಜ್ಯದ ಮಾತೃ ಭಾಷೆ ಮೇಲೆ ಮಾಡಿದ್ರೆ ಎಲ್ಲಾ ಭಾರತದ ಎಲ್ಲಾ ರಾಜ್ಯದವರು.. ತಮ್ಮ ಪಾಡಿಗೆ ತಾವು ತಮ್ಮ ರಾಜ್ಯದ ಅಭಿವ್ರುದ್ದಿಯಾ ಪತದ ಕಡೆ ನಡೆಯುತ್ತವೆ.

ದೇಶ ಯಾವತ್ತು ಅಭಿವೃದ್ದಿ ಆಗೋಲ್ಲ, ಅಭಿವೃದ್ದಿ ಅಗ್ಬೇಕಿರೋದು ನಮ್ಮ ನಮ್ಮ ಭಾಷೆ , ನಮ್ಮ ಹಳ್ಳಿಗಳು, ನಮ್ಮ ಸಂಸ್ಕೃತಿ, ನಮ್ಮ ಗುಡಿ ಕೈಗಾರಿಕೆಗಳು, ನಮ್ಮ ರಸ್ತೆ ಮತ್ತು ಮೂಲಭೂತ ಸೌಕರ್ಯಗಳು. ಇದರಿಂದ ರಾಜ್ಯದ ಅಭಿವೃದ್ದಿ,ರಾಜ್ಯದಿಂದ ರಾಷ್ಟ್ರದ ಅಭಿವೃದ್ದಿ. ಆಗಲೇ ದೇಶದ ಐಕ್ಯತೆ ಮಾತ್ರ ಸಾದ್ಯ)....

ಕೇವಲ ಹಿಂದಿ ಭಾಷ ಹೇರಿಕೆಯಿಂದ ದೇಶದ ಅಭಿವೃದ್ದಿ ಎಂಧು ಸಾದ್ಯವಿಲ್ಲ, ಸಾದ್ಯವಿಲ್ಲ, ಸಾದ್ಯವಿಲ್ಲ.

Anonymous ಅಂತಾರೆ...

Ivella yaake omme Income tax dept.(MAL corporate office bali iruva building) ge hogi nodi.alli prati dina ondu english shabda mattu adakke hindiya artha bareetare.Nanage ondu artha aagtillaa,alliroru karnataka dalli irtaaro athava uttara bhaaratadalli irataaro endu..

Anonymous ಅಂತಾರೆ...

manju abhi avare, jai hindh vande mataram annodu hindi
so bhaarata maatege vandisuttene anni kannadadalli ...

clangorous ಅಂತಾರೆ...

swamy anonymous avare jai hindh , vande mataram annodu samskrutha, hindiya maathru baashe. hindiya lipi kooda devanagiri andare samskrutha.

Shridhar Sahukar ಅಂತಾರೆ...

ತಿಮ್ಮಯ್ಯ ಅವರೇ,

ನನ್ನ ಅಭಿಪ್ರಾಯಗಳಿಗೆ ತಮ್ಮ ಉತ್ತರ ನೀಡಿದ್ದಕ್ಕೆ ಸಂತೋಷ. ಆದರೆ ಹಿಂದಿ ಬಗ್ಗೆ ನಾನು ಹೇಳಿರುವ ಕೆಲವು ವಿಷಯಗಳನ್ನು ಇನ್ನು ಸ್ವಲ್ಪ ವಿಶಾಲ ದೃಷ್ಟಿಕೋನದಿಂದ ನೋಡಬೇಕು ಅನ್ಸುತ್ತೆ.

ಈಗ ನೋಡಿ, ಭಾರತೀಯರಿಗೆ ಚೀನಾಗಿಂತ ಮಾಹಿತಿ ತಂತ್ರಜ್ಞಾನದಲ್ಲಿ ಹೆಚ್ಚು ಅವಕಾಶಗಳು ದೊರಕುತ್ತಿರುವುದು ನಾವು ಇಂಗ್ಲಿಷನ್ನು ಅವರಿಗಿಂತ ಚೆನ್ನಾಗಿ ಬಲ್ಲೆವು ಎನ್ನುವ ಕಾರಣದಿಂದ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಬದಲಾಗುತ್ತಿದೆ. ಚೀನಿಯರು ಮತ್ತು ಜಪಾನೀಯರು ಇಂಗ್ಲಿಷಿನಲ್ಲಿ ತಮ್ಮ ಪ್ರೌಢಿಮೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಐಟಿ ಉದ್ಯಮದಲ್ಲಿ ಸಾಕಷ್ಟು ಸ್ಪರ್ಧೆ ಉಂಟಾಗುತ್ತಿದೆ. ಎಲ್ಲಾ ದೇಶಗಳೂ ಇಂಗ್ಲಿಷನ್ನು common language ಅಂತ ಒಪ್ಪಿಕೊಂಡಿವೆ. ಇದರಿಂದಾಗಿ ಎಲ್ಲರಿಗೂ ಜಾಗತಿಕ ಮಾರುಕಟ್ಟೆಯಲ್ಲಿ ಅವಕಾಶಗಳು ಹೆಚ್ಚಾಗಿವೆ. ಮೊದಮೊದಲು ಐಟಿ ಅನ್ನೋದು ಕೇವಲ ಅಮೆರಿಕಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಹಾಗಲ್ಲ. ಆಫ್ರಿಕದ ಚಿಕ್ಕ ಪುಟ್ಟ ದೇಶಗಳೂ ಸಹ ಐಟಿ ಕ್ಷೇತ್ರಕ್ಕೆ ಕಾಲಿಡುತ್ತಿವೆ. ಹಾಗಾಗಿ ಆ ದೇಶಗಳಿಗೆ ಇಂಗ್ಲಿಷ್ ಅನ್ನು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲ.
ಇಂಥದ್ದರಲ್ಲಿ ಇಂಗ್ಲಿಷ್ ಕಲಿಯುವುದು ಬೇಡ ಅಂತ ನಾವು ಸುಮ್ಮನೆ ಕೂತರೆ ನಷ್ಟವಾಗೋದು ನಮಗೇ ಹೊರತು ಅವರಿಗಲ್ಲ.

ಹಾಗೆಯೇ, ನೀವು ಅಸ್ಸಾಂ ಪ್ರವಾಸದ ಬಗ್ಗೆ ಹೇಳಿದಿರಿ. ನೀವು ಗಮನಿಸಿದ್ದಿರೋ ಇಲ್ವೋ, almost ಎಲ್ಲ ಪ್ರವಾಸಿ ತಾಣಗಳಲ್ಲಿ ಇರುವ ವ್ಯಾಪಾರಿಗಳು ಸ್ವಲ್ಪ ಸ್ವಲ್ಪವಾದರೂ ಸರಿ, ಹಿಂದಿ ಮತ್ತು ಇಂಗ್ಲಿಷನಲ್ಲಿ ಮಾತಾಡೋದನ್ನ ಕಲಿತುಕೊಂಡಿರುತ್ತಾರೆ. ಇದು ಅವರ ಅವಶ್ಯಕತೆ. ನಾವು ಹಿಂದಿಯನ್ನ ನಮ್ಮ ಅವಶ್ಯಕತೆಗಾಗಿ ಕಲಿಯಬೇಕಾಗಿದೆ ಹೊರತು ಬೇರೆಯವರು ಹೇರುತ್ತಿದ್ದಾರೆ ಅಂತ ಅಲ್ಲ. so, ಜಾಗತಿಕ ಮಾರುಕಟ್ಟೆಯ ತರಹ ದೇಶೀಯ ಮಾರುಕಟ್ಟೆಯನ್ನು ನೀವು ಗಣನೆಗೆ ತೆಗೆದುಕೊಂಡರೆ, ಒಂದು ಸಾಮನ್ಯ ಸಂವಹನ ಭಾಷೆಯ ಅವಶ್ಯಕತೆ ಇದೆ. ಹಾಗಂತ ಅವಿದ್ಯಾವಂತರು ಕೂಡಾ ಇಂಗ್ಲಿಷ್ ಕಲಿಯಬೇಕು ಅನ್ನೋದು ಸಾಧ್ಯವಿಲ್ಲ. ಬದಲಾಗಿ ಹಿಂದಿ ಭಾಷೆ ಎಷ್ಟೋ ಕಾಲದಿಂದ ನಮ್ಮಲ್ಲಿ ಬೇರೂರಿದೆ. ಮೇಲೆ ತಿಳಿಸಿದ ಹಾಗೆ, ಬಹುಪಾಲು ರಾಜ್ಯಗಳ ಜನರಿಗೆ ಹಿಂದಿನೇ ಮಾತೃ ಭಾಷೆ ಆಗಿದೆ. ಇಲ್ಲಿನ ಎಷ್ಟೋ ಜನ ಮುಸ್ಲಿಮರು ಮಾತಡೋದೂ localized ಹಿಂದಿನೆ ಹೊರತು ಉರ್ದು ಅಲ್ಲ. ಹೀಗಾಗಿ ಹಿಂದಿಯನ್ನು ಸಾಮನ್ಯ ಭಾಷೆಯಾಗಿ ಒಪ್ಪಿಕೊಳ್ಳುವುದು ತಪ್ಪು ಅಂತ ಯಾಕೆ ಅಂತೀರ?

ವಂದನೆಗಳೊಂದಿಗೆ,
ಶ್ರೀಧರ್

ಆನಂದ್ ಅಂತಾರೆ...

ಶ್ರೀಧರ್ ಅವರೆ,

ಭಾಷಾ ಆಧಾರಿತ, ಸೇವಾ ಆಧಾರಿತ ಸಮಾಜ/ ಅರ್ಥ ವ್ಯವಸ್ಥೆಯಿಂದ ದೇಶ ಕಟ್ತೀವಿ ಅಂದ್ರೆ ಸದಾ ಅವರಿವರ ಎಕಾನಮಿ ಮೇಲೆ ಡಿಪೆಂಡ್ ಆಗಿರ್ತೀವಿ ಅಂತ ಅರ್ಥ. ಇವತ್ತಿನ ಸ್ಥಿತಿ ಇದೇ ಆಗಿದ್ರೂ ಸರಿಯಾದ ಸ್ಥಿತಿ ಅಂದ್ರೆ ಜ್ಞಾನ ಆಧರಿಸಿದ ಎಕಾನಮಿ ಕಟ್ಟೋದು. ಅದನ್ನು ಮಾಡಕ್ಕೆ ತಾಯಿನುಡಿಯೇ ಸಾಧನ. ಇರಲಿ, ಇಷ್ಟಕ್ಕೂ ನಮಗೆ ಕನ್ನಡ ಬಿಟ್ಟು ಉಳಿದದ್ದೆಲ್ಲಾ ನಮ್ಮದಲ್ಲ. ಅಂದ್ರೆ ಹಿಂದೀನೂ ಇಂಗ್ಲಿಷೂ ಎರಡೂ ಒಂದೆ. ಯಾವುದರ ಜೊತೆಗೂ ಭಾವನಾತ್ಮಕ ಸಂಬಂಧವಿಲ್ಲ. ಇರೋದೇನಿದ್ರೂ ಸದ್ಯಕ್ಕೆ ಯಾವುದರಿಂದ ಲಾಭವೋ ಅದುನ್ನ ಬಳುಸ್ತೀವಿ ಅನ್ನೋದು. ಇವತ್ತಿನ ದಿನ ಜ್ಞಾನ ವಿಜ್ಞಾನ ತಂತ್ರಜ್ಞಾನ ಎಲ್ಲ ಇಂಗ್ಲಿಷಲ್ಲಿ ಕಲೀತಿದೀವಿ, ಸೋ ಇಂಗ್ಲಿಷ್ ಇರಲಿ. ಇಡೀ ಭಾರತದ ಎಲ್ಲಾ ಶಾಲೆಗಳಲ್ಲೂ ಇಂಗ್ಲಿಷ್ ಕಲ್ಸೇ ಕಲ್ಸೋದ್ರಿಂದ ನಮ್ಮ ತಾಯಿನುದಿ ಮತ್ತು ಇಂಗ್ಲಿಷ್ ಎರಡು ಸಾಕಲ್ವಾ? ಮೂರನೇ ಭಾಷೆ ಹಿಂದಿ ಯಾಕೆ? ಪ್ರವಾಸಿ ತಾಣದೋರು ಪ್ರವಾಸಿಗಳನ್ನು ಮೆಚ್ಚಿಸೋಕೆ ಅವರ ಭಾಷೆ ಕಲೀತಾರೆ ಅಂತ ನೀವೆ ಹೇಳಿದ್ದೀರಾ... ಅದ್ಸರಿ, ಮೈಸೂರಿಗೆ ಹೋಗಿ ನೋಡಿ ಅವನು ಹಿಂದಿ, ತಮಿಳು, ತೆಲುಗು, ಇಂಗ್ಲಿಷ್ ಮುಂತಾದ ಹತ್ತಾರು ಭಾಷೆ ಕಲ್ತಿರ್ತಾನೆ. ಅದಕ್ಕೇ ಅಂತ ಹಿಂದೀನ ರಾಷ್ಟ್ರಭಾಷೆ ಮಾಡಕ್ ಆಗಲ್ಲ.
ಇಷ್ಟಕ್ಕೂ ಯಾಕೆ ಹಿಂದಿ ಬಗ್ಗೆ ವಿರೋಧ ಅಂದ್ರೆ.... ಭಾರತದ ಕೇಂದ್ರ ಸರ್ಕಾರಿ ಕೆಲಸ ಬೇಕು ಅಂದ್ರೆ ಹಿಂದಿ ಕಲಿತಿರಬೇಕು, ಹಿಂದಿ ಕಲಿತರೆ ಪ್ರಮೋಶನ್ನು ಅನ್ನೋ ನಿಯಮಾನ ಕೇಂದ್ರ ಸರ್ಕಾರ ಮಾಡೋದ್ರು ಜೊತೆ ನಮ್ಮ ಭಾಷೇನೆ ನಮ್ಮ ಬದುಕಿಂದ ದೂರ ಮಾಡ್ತಿದಾರೆ ಅನ್ನೋಕೆ ’ ಏನ್ ಗುರು’ ತೋರ್ಸಿರೋ ರೈಲ್ವೇ ಕೋಚು, ಗ್ಯಾಸ್ ಸಿಲಿಂಡರ್ ಉದಾಹರಣೆ ಸಾಕಲ್ವಾ? ಹಿಂದಿನಾ ಒಪ್ಪೋದ್ರಿಂದ ಹಿಂದಿಯನ್ನು ತಾಯ್ನುಡಿಯಾಗಿ ಹೊಂದಿರೋರಿಗೆ ಉಳಿದ ಎಲ್ಲ ಭಾಷಾ ಜನಾಂಗಕ್ಕಿಲ್ಲದ ಸವಲತ್ತು, ಅನುಕೂಲ ಕೊಟ್ಟಂಗೆ ಆಗುತ್ತೆ. ನೂರು ಮೀಟರ್ ಓಟದ ಸ್ಪರ್ಧೆಲಿ ಎಂಬತ್ತು ಮೀಟರ್ ಮುಂದೆ ನಿಲ್ಲಿಸಿದ ಹಾಗಾಗುತ್ತೆ ಅವ್ರುನ್ನ. ಅಷ್ಟಕ್ಕೂ ಹಿಂದಿಯಿಂದ ಕನ್ನಡಿಗರಿಗೆ ಏನು ತಾನೆ ಲಾಭ? ಹಿಂದಿ ಒಪ್ಪೋದ್ರಿಂದ ಹಿಂದಿಯವರಿಗೆ ಇಲ್ಲಿ ಬರಲು, ಇರಲು ಅನುಕೂಲ ಅನ್ನೋ ಲಾಭ ಅಷ್ಟೆ.
ನಮ್ಮ ನಾಡಿನ ವ್ಯವಸ್ಥೆ ಇರೋದು, ಇರಬೇಕಾದ್ದು ನಮ್ಮ ಜನರಿಗಾಗಿ... ವಲಸಿಗರಿಗಾಗಿಯಾಗಲೀ, ಪ್ರವಾಸಿಗಳಿಗಾಗಲೀ ಅಲ್ಲ ಅಲ್ವಾ? ಯಾವಾಗ ನಮ್ಮ ಜನರಿಗೆ ಅರ್ಥವಾಗದಿದ್ರೂ, ಅವರಿಗೆ ಅನಾನುಕೂಲ ಆದ್ರೂ ಪರ್ವಾಗಿಲ್ಲಾ... ಪರಭಾಷಿಕರಿಗೆ ಅರ್ಥ ಆಗಬೇಕು ಅಂತ ವ್ಯವಸ್ಥೆ ಕಟ್ಟಕ್ ಮುಂದಾಗ್ತೀವೋ ಆಗ ನೀವು ಎತ್ತಿರೋ ಪ್ರಶ್ನೆಗಳು (ಬೇರೆಯವರ ಅನುಕೂಲಕ್ಕಾಗಿ ಹಿಂದಿ ಕಲೀಬೇಕು...ಥರದ) ಹುಟ್ತವೆ. ನೀವು ತಮಿಳು ನಾಡಿಗೆ ಹೋಗಿ, ಅಸ್ಸಾಮಿಗೆ ಹೋಗಿ, ಆಂಧ್ರಕ್ಕೆ ಹೋಗಿ ಹಿಂದೀಲಿ ಮಾತಾಡ್ತೀನಿ, ಅವ್ರೂ ಹಿಂದೀಲಿ ಉತ್ರ ಕೊಡ್ಲಿ ಅಂದುಕೊಂಡ್ರೆ ಅದಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿರಲ್ಲಾ ಕಣ್ರೀ...

ಪ್ರೀತಿಯಿಂದ
ತಿಮ್ಮಯ್ಯ

Anonymous ಅಂತಾರೆ...

bhaaLa oLLe charche. timmayyanOre... illi tanka naanoo desha andre ondu common bhashe beku ankondidde. But, by doing so we are killing our own identity anta tumba chennaagi helidri.. now I understand "kannaDa is the nationallanguage" for karnataka.
thnk you

sundar

Anonymous ಅಂತಾರೆ...

eno svami, namage nimma vaada astu vappige agta illa.
nanagantu nanu hindi kalitaddu tumba help aagide.
Mumbaige hosadagi bandiddine. illi bere janara hatra vyvaharisoke vanchuru kastane agtilla. adre nanna friend hindi baraddarinda tumbane kasta paDabekaytu anta heltidlu.
mattu hindiyalli baro estella valle valle filmgaLa ella dialogues nangage artha agutte. adarinda iDi kathe matthu director helta iro dristinu artha agatte. ade nanna friendge E avakasha illa.
( hindi 'sahitya' artha agolla)
-hindina ellaru kalitare(!) deshada yavude mule hodaru allina samanya janara jote bereyuva avakasha agutte.
-nanage ille marathi bus boardu, route numberru, angaDi hesru noDidamele namma benagaluru estu chennagide annistu. alli artha agakke atleast vandu english byline adru irutte. metro andare ella bhasheyavaru iruttare anta artha alva?
-ade tamilnaDu, andhrakke hogi, allina janakke avara bhashe bittu bere bhashe gottillade irodarinda navu samanya vyvahara maDalu estu kasta paDabeku.
-kannada ulibeku andre navella kannadadalli eduyubbisi matadoda first kalitu kollabeku. aste.
-hindiyammaninda namma kannadammana hangella solisoke agalla. adre bengalurinalli matra kannadamma english madam hatra sotu hogide.

ಆನಂದ್ ಅಂತಾರೆ...

ಪ್ರಿಯ ನೀಲಾಂಜನ ಅವ್ರೇ,

ಮುಂಬೈ ಪರಿಸ್ಥಿತಿ... ಅಲ್ಲಿನ ಬಸ್ಸು, ಬೋರ್ಡುಗಳಲ್ಲಿ ಮರಾಠಿ ಇರೋ ಸುದ್ದಿ ಓದಿ ಭಾಳಾ ಖುಷಿಯಾಯ್ತು.
ನೀವು ಹಿಂದಿ ಕಲಿತದ್ದು ಭಾಳಾ ಒಳ್ಳೇದಾಯ್ತು ಅಂದೀದೀರಾ... ಸಂತೋಷ, ಆ ಮೂಲಕ ತಾವೇನೋ ದಡ ಸೇರ್ದೆ ಅಂದುಕೊಂಡ್ರಿ... ಉಳಿದಿರೋ ಕನ್ನಡ ನಾಡಿನ ೫ ಚಿಲ್ರೆ ಕೋಟಿ ಜನರು ಏನು ಮಾಡಬೇಕು ಅಂತೀರಾ? ಹಿಂದೆ ಬ್ರಿಟೀಷರು ನಮ್ಮುನ್ ಆಳ್ತಿದ್ದಾಗ ’ಅಬ್ಬಾ, ನಾನು ಇಂಗ್ಲಿಷ್ ಕಲ್ತೆ, ತುಂಬಾ ಅನುಕೂಲ ಆಯ್ತು’ ಅಂದೋರಿಗೂ ನಿಮ್ಮ ಮಾತಿಗೂ ಅಂಥಾ ವ್ಯತ್ಯಾಸ ಕಾಣ್ತಿಲ್ಲ ಬಿಡಿ. ಸುಮ್ನೆ ಅವ್ರುನ್ನೇ ಮುಂದುವರ್ಯಕ್ ಬಿಟ್ಟಿದ್ರೆ ಕನ್ನಡದೋರು ಇನ್ನೊಂಚೂರು ಉದ್ಧಾರ ಆಗ್ತಿದ್ರು. ಹೇಗೂ ಈಗ ಇಂಗ್ಲಿಷು ಎಲ್ಲಾ ಶಾಲೇಲೂ ಕಲ್ಸೇ ಕಲುಸ್ತಾರಲ್ಲ!!!
ಬೆಂಗಳೂರು ವಾಸಿ ಅಂದ್ರಲ್ಲಾ ನಿಮಗೇನು, ಮುಂಬೈನಲ್ಲಿರೋ ಮರಾಠಿ ಜನರೆಲ್ಲಾ ತಮ್ಮಂಥ ವಲಸಿಗರಿಗೆ ಅನುಕೂಲ ಮಾಡಿಕೊಡಕ್ಕೇ ಅಂತ ಹಿಂದಿ/ ಇಂಗ್ಲಿಷ್ ಕಲೀಬೇಕೇನು? ಸ್ವಾಮಿಗಳೇ, ಒಂದು ಪ್ರದೇಶದ/ ಊರಿನ ವ್ಯವಸ್ಥೆ ಇರಬೇಕಾದ್ದು ವಲಸಿಗರಿಗಾಗಿ ಅಲ್ಲ ಅನ್ನೋದನ್ನು ಅರ್ಥ ಮಾಡ್ಕೊಳ್ಳಿ.
ನಿಜಾ, ಇವತ್ತಿನ ದಿನ ಅರವತ್ತು ವರ್ಷಗಳ ಅಧಿಕಾರ ದುರುಪಯೋಗದ ಕಾರಣದಿಂದ ಹಿಂದಿ ಅನೇಕ ಪ್ರದೇಶಗಳ ಭಾಷೆ, ಜೀವನ, ಸಂಸ್ಕೃತಿನ ನುಂಗಿ ನೀರು ಕುಡಿದಿದೆ. ಅದರಲ್ಲಿ ಮುಂಬೈ ಕೂಡಾ ಒಂದು, ಅದಕ್ಕೇ ನಿಮಗೆ ಅಲ್ಲಿ ಹಿಂದಿ ನಡ್ಯುತ್ತೆ ಅನ್ಸುತ್ತೆ. ಆದ್ರೆ ಹೀಗಾಗ್ತಾ ಆಗ್ತಾ ಅದು ಹ್ಯಾಗೆ ಮರಾಠಿ ಅಸ್ತಿತ್ವಾನ ಗೌಣ ಮಾಡಿದೆ ಅರ್ಥ ಮಾಡ್ಕೊಳ್ಳಿ. ಪ್ರಶ್ನೆ ಹೀಗೆ ಹಿಂದೀನ ದೇಶದ ತುಂಬ ನಡುಸ್ಬೇಕು, ಭಾರತದೋರೆಲ್ಲಾ ಹಿಂದಿ ಕಲೀಬೇಕು ಅನ್ನೋದು ಸರೀನಾ ಅನ್ನೋದು ಮಾತ್ರಾ.
ತಾವಂದಂತೆ ಕನ್ನಡಿಗರು ಕನ್ನಡ ಮಾತಾಡುದ್ರೆ ಸಾಕು ಅಂದ್ರಿ, ಯಾರ ಹತ್ರ ಮಾತಾಡ್ಬೇಕು? ಯಾವಾಗ ನಿಮ್ಮ ಭಾಷೆ ಮಾರುಕಟ್ಟೆ, ಆಡಳಿತ, ಬದುಕು, ಉದ್ಯೋಗಗಳಿಗೆ ನಾಲಾಯಕ್ಕಾಗುತ್ತೋ ಅವತ್ತು ಅದು ಸಾಯುತ್ತೆ ಅಲ್ವಾ? ನಮ್ಮ ನಾಡಿನಲ್ಲಿ ನಮ್ಮ ತಾಯ್ನುಡಿಗೆ ಇರಬೇಕಾದ ಈ ಸ್ಥಾನಗಳನ್ನು ಆಕ್ರಮಿಸಲು ಹಿಂದಿ ಮುಂದಾಗ್ತಿದೆ ಅನ್ನೋದೇ ಹಿಂದಿ ಹೇರಿಕೆಯನ್ನು ವಿರೋಧಿಸಲು ಕಾರಣ.
ಹಿಂದಿಯಮ್ಮ ಕನ್ನಡಮ್ಮ ಅಂತಾ ಸೆಂಟಿ-ಮೆಂಟಲ್ ಮಾತಾಡುದ್ರಿ. ನಿಮ್ಮಂತೆ ಉಪಮಾನ, ಉಪಮೇಯಗಳ ಬೆನ್ನುಹತ್ತಿ ಹೇಳೋದೇ ಆದ್ರೆ " ನೀವು ಯಶೋದೆ ಎನ್ನುವ ಕನ್ನಡಮ್ಮನನ್ನೂ, ಪೂತನಿ ಎನ್ನುವ ಹಿಂದಿಯಮ್ಮನ ಸೋಗಿನ ರಕ್ಕಸಿಯನ್ನೂ ಒಂದೇ ಅಂದುಕೊಂಡು "ಮೊಲೆ ಉಣಿಸುವ ಅಮ್ಮ" ಎಂದೇ ಗೌರವದಿಂದ ಕಾಣ್ತಾ ಇದೀರಾ, ದಯವಿಟ್ಟು ಪೂತನಿಯ ಮೊಲೆಯ ವಿಷವನ್ನು ಗುರುತಿಸಿ ಅನ್ನೋದಷ್ಟೇ ನನ್ನ ಮನವಿ.

ಪ್ರೀತಿಯಿಂದ

ತಿಮ್ಮಯ್ಯ

Anonymous ಅಂತಾರೆ...

"ತಾವೇನೋ ದಡ ಸೇರ್ದೆ .."
ಹಾಗಂತ ನಾನೆಲ್ಲಿ ಹೇಳಿದೆ ?
"ಉಳಿದಿರೋ ಕನ್ನಡ ನಾಡಿನ ೫ ಚಿಲ್ರೆ ಕೋಟಿ ಜನರು"
ಈಗ ನಾನು ಕನ್ನಡಿಗ ಅಲ್ವಾ? ಅದ್ಯಾಕೋ ??
"ನಿಮ್ಮ(???) ಭಾಷೆ ಮಾರುಕಟ್ಟೆ, ಆಡಳಿತ, ಬದುಕು, ಉದ್ಯೋಗಗಳಿಗೆ ನಾಲಾಯಕ್ಕಾಗುತ್ತೋ ಅವತ್ತು ಅದು ಸಾಯುತ್ತೆ "
ಒಂದು ಭಾಷೆ ಸಾಯೋಕೆ ಇದೆ ಕಾರಣಾನಾ ??
"ಯಶೋದೆ ಎನ್ನುವ ಕನ್ನಡಮ್ಮನನ್ನೂ"
ಕೃಷ್ಣನ ಸಾಕು ತಾಯಿ !!

ಆನಂದ್ ಅಂತಾರೆ...

ನೀಲಾಂಜಲಾ ಅವ್ರೇ,

"ತಾವೇನೋ ದಡ ಸೇರ್ದೆ ..." ಅಂತ ನೀವಂದ್ರಿ ಅಂತ ನಾನೆಲ್ಲಂದೆ?
"ಹಿಂದಿ ಕಲ್ತಿದ್ದು ಭಾಳಾ ಒಳ್ಳೇದಾಯ್ತು, ನಂಗಂತೂ ಅರ್ಥ ಆಗುತ್ತೆ ಕಥೆ, ಡೈಲಾಗ್, ಇನ್ನೊಬ್ರುಗೆ ಆಗಲ್ಲ..." ಅಂತ ಬರ್ದಿದ್ರಲ್ಲಾ ಅದುಕ್ಕೆ ಹಾಗ್ ಅಂದುಕೊಂಡ್ರಿ ಅಂದೆ.
ಉಳಿದಿರೋ ಐದು ಚಿಲ್ರೆ ಕೋಟಿ ಕನ್ನಡಿಗರು.... ತಪ್ಪಾಗಿ ಅರ್ಥ ಮಾಡ್ಕೊಂಡಿದೀರಾ ನೀವು. ಉಳಿದಿರೋ ಅನ್ಬೇಕಾದ್ರೆ ನಿಮ್ಮನ್ನು ಬಿಟ್ಟು ಉಳಿದಿರೋ ಅಂತ, I mean ನೀವೂ ಕನ್ನಡಿಗರು, ನಿಮ್ಮನ್ನು ಬಿಟ್ಟು ಉಳಿದ ಕನ್ನಡಿಗರು ಅನ್ನೋ ಉದ್ದೇಶ ಅದರದ್ದು ಸ್ವಾಮಿ.
ಭಾಷೆ ಸಾಯೋಕೆ ಇದಷ್ಟೆ ಕಾರಣ ಆಗ್ಬೇಕಾಗಿಲ್ಲ. ಆದರೆ ಯಾವಾಗ ಇದಕ್ಕೆ ನಾಲಾಯಕ್ಕಾಗುತ್ತೋ ಆವತ್ತು ಸಾಯುತ್ತೆ ಅಂದೆ. ಇದರರ್ಥವೂ ಅಷ್ಟೆ, ಯಾವತ್ತು ಸಮಾಜದ ಚಟುವಟಿಕೆಗಳಿಗೆ ಭಾಷೆ ನಾಲಾಯಕ್ಕಾಗುತ್ತೋ ಅವತ್ತು ಸಾಯುತ್ತೆ ಅಂತ... ಈ ಅರ್ಥದಲ್ಲಿ ಸಮಾಜ ಬಳಸದ ಭಾಷೆ ’ಹೌದು’ ಸಾಯುತ್ತೆ.
ಯಶೋದೆ ಕೃಷ್ಣನ ಸಾಕು ತಾಯಿ ಅನ್ನೋದಕ್ಕಿಂತ ಹಾಲು ಉಣಿಸಿದ ಅಮ್ಮ. ಈ ಉದಾಹರಣೆಯಲ್ಲಿ ಹಾಲುಣಿಸೋದ್ರ ಬಗ್ಗೆ ಗಮನಕೊಡಿ... ಅಷ್ಟಕ್ಕೂ ಸಾಕು ತಾಯಿ ಆದ್ರೇನಾಯ್ತೀಗ?
ನಿಜವಾಗ್ಲೂ ನಾವು ಮಾತಾಡ್ತಿರೋದು "ಹಿಂದಿ ಹೇರಿಕೆ ಆಗ್ತಿರೋದು ಸರೀನಾ? ಅದ್ರಿಂದ ನಮಗೆ ಆಗ್ತಿರೋ ನಷ್ಟ ಎಂಥದ್ದು? ಹ್ಯಾಗೆ ನಾಡುನ್ನ ಇದರಿಂದ ಕಾಪಾಡಿಕೊಳ್ಳೋದು? ದೇಶಕ್ಕೆ ಒಂದು ಕಾಮನ್ ಭಾಷೆಯಾಗಿ ಹಿಂದಿಯ ಅಗತ್ಯ ಇದೆಯಾ? ಇತ್ಯಾದಿ ಬಗ್ಗೆ.... ಉಳಿದ ಉಪ್ಪಿನಕಾಯಿ ಚೂರು ಖಾರ ಆಯ್ತು, ಉಪ್ಪಾಯ್ತು ಅಂತ ದೂರಬೇಡ್ರಿ... ನಿಮ್ಮ ಕನ್ನಡತನಾನ ಪ್ರಶ್ನೆ ಮಾಡೊ, ಅಪಮಾನ ಮಾಡೊ ಉದ್ದೇಶ ನಂಗಿಲ್ಲ.

ನಮಸ್ಕಾರ

ತಿಮ್ಮಯ್ಯ

clangorous ಅಂತಾರೆ...

timmayya avare adbudthavaada baravanige

neelanjana avare,

nimage ondu sanna prashne ?, mumbai nalli neevu hindiya badalu marathi kalthidre allina moola vasigarige innu santoshavaaguttittalva ?, timayya avaru heldange obba kannadiga kammi andru 3-4 bhashe galanna thildirthane, ade reethi hindiyavaru avaru valase hogida kade alliya bhaashe kaliyuvudu nyaya allave ?. yelli hodru yellaru avara bhaashe yalli mathad beku annodu tappu, pravasigaragi hodare allina guidegaLu nalkaru bhaashe kaltha irthare. be a roman in rome annodu sumne helorilla alvaa ?, neevu mumbai nalli idda mele hindigintha marathi kalithu upyogisuvudu ollayadallava ?

Anonymous ಅಂತಾರೆ...

ತಿಮ್ಮಯ್ಯ ಅವ್ರೇ,
ಮೊನ್ನೆ ಮಂಗಳೂರಿಗೆ ಹೋದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಅಲ್ಲಿನ ತೋಟದ ಕೆಲಸಗಾರರಿಗೆ ಕನ್ನಡವೇ ಬರುವುದಿಲ್ಲ. ಬರಿ ತುಳು. ಈಚೀಚಿನವರು ಕನ್ನಡ ಅರ್ಥ ಮಡಿಕೊ.ನ್ಡು ಅಲ್ಪ ಸ್ವಲ್ಪ ಮಾತಡುತ್ತಾರೆ. ಈ ತುಳು ಜನರು ಕರ್ನಾಟಕದಲ್ಲಿ ಇರುವದರಿಂದ ಇವರನ್ನೆಲ್ಲಾ ಕನ್ನಡಿಗರು(!) ಅನ್ನಬೇಕಾ? ಅಲ್ಲಾ ಪರಭಾಷಿಕರಾ ? ಅದೇ ರೀತಿ ಕನ್ನಡ ಬಾರದ ಮರಾಠಿಗಾರು, ಕೊನ್ಕಣಿಗರು, ಕೊಡವರು, ಉರ್ಧುವಿನವರು........ ಇವರಲ್ಲಿ ಹೆಚ್ಚಿನವರಿಗೆ ಹೇಗೆ ಕನ್ನಡ ಕಲಿಸಿ ಕರ್ನಾಟಕದವರನ್ನಾಗಿ ಮಾಡುತ್ತೇವೆಯೋ ಅದೇ ರೀತಿ ದೇಶದ ಎಲ್ಲ ಜನರಿಗೆ ಹಿಂದಿ ಕಳಿಸಿ ಅವರನ್ನು ಒಗ್ಗೂಡಿಸುವ ಪ್ರಯತ್ನ ತಪ್ಪೇ ?
ಮುಂಬೈ example, ಏಕೆಂದರೆ ಇಲ್ಲಿ ನನಗೆ ಹಿಂದಿ ಬರುವ ಮತ್ತೊಬ್ಬ ಮರಾಠಿ ಮಹಿಳೆ ಬೇಗ ಆಪ್ತಳಾಗಿ ಒಂದೇ ಅನ್ನುವ ಭಾವನೆ ಹುಟ್ಟಿಸುತ್ತಾಳೆ. ಅದೇ ರೀತಿ ಹಿಂದಿ ಬಾರದ ತಮಿಳು ಆಂಟಿ ನನಗೆಂದೂ ದೂರವೇ. ಅವರು ಬೇರೆಯವರು ಅನ್ನಿಸಿ ಬಿಡ್ತಾರೆ. ಮತ್ತು ಈ ಭಾಷಾ ವೈವಿದ್ಯತೆಯಲ್ಲೂ ಹಿಂದಿ ಕೊಡುವ ಆಪ್ತತೆ, ಏಕತೆಗೆ ಅವಕ್ಕಾಗಿದ್ದೇನೆ. ಇಲ್ಲಿ ವಲಸೆ ಬರುವವರಿಗಾಗಿ ಹಿಂದಿ ಬೇಕು ಅನ್ನುತ್ತಿಲ್ಲ. ಬೇರೆ ಬೇರೆ ರಾಜ್ಯದವರನ್ನು ಬೇಸೆಯಲು ಒಂದು ಕಾಮಾನ್ ಭಾಷೆ ಬೇಕು ಅಂತ.
ಮತ್ತು ಕೆಲವು ಸಮಸ್ಯೆ,,
-ಕನ್ನಡ ಮತ್ತು ಇಂಗ್ಲಿಷ್ ಸಾಕು ಅಂತೀರಾ, ಇಂಗ್ಲಿಷ್ ಯಾಕೆ ಬೇಕು ಸ್ವಾಮಿ ? ಹಿಂದಿ ಯಾಕೆ ಬೇಡ ?
-ಹಾಗೆಯೇ ಒಂದೊಂದು ಊರಿಗೆ ಒಂದೊಂದು ಬೋರ್ಡು ಹಾಕೊಣವೇ? ಅಂದ್ರೆ ಅಲ್ಲಿನ ಜನಕ್ಕೆ ಸ್ಥಳೀಯರಿಗೆ ಅರ್ಥ ಅಗಬೇಕು ಅಂತಾ ಒನ್ದೂರಲ್ಲಿ ತುಳು, ಇನ್ನೊಂದುರಲ್ಲಿ ಕೊನ್ಕಣಿ..ಹೀಗೆ
-"ಬೆಂಗಾಲಿಗಳು,ಗುಜರಾಥಿಗಳು, ಸಿಂಧಿಗಳು, ರಾಜಾಸ್ಥಾನಿಗಳು, ಪಂಜಾಬಿಗಳು, ಅಸ್ಸಾಮಿಗಳು, ಕಾಶ್ಮೀರಿಗಳು, ಮರಾಠಿಗಳು,... " ಇವರೆಲ್ಲರಿಗೂ ಅರ್ಥ ಆಗಿ ನಿಮ್ಮ ಜೊತೆ ಬರಬೇಕು ಅಂದರೆ ಅವರ ಜೊತೆ ನೀವು ಹಿಂದಿಲೇ ಮಾತಾಡಬೇಕಾದಿತು, ಇಲ್ಲಾ ಪ್ರತಿಯೊಬ್ಬರಿಗೂ ಒಂದೊಂದು ಸಲ ಅವರವರ ಭಾಷೆಯಲ್ಲಿ ರೀಪಿಟ್ ಮಾಡಬೇಕಾದೀತು. ಈಲಾ ಇಂಗ್ಲಿಷ್ ಮೊರೆ ಹೋಗಬೇಕು.
-ಪ್ರಧಾನಿಗಳು, ಜನಪ್ರತಿನಿಧಿಗಳು.......... ದೇಶದ ಜನರ ಜೊತೆ ವ್ಯವಹರಿಸುವುದಕ್ಕೆ ಎಷ್ಟೆಲ್ಲಾ ಭಾಷೆ ಕಲಿಯಬೇಕಾದೀತು! ಈಲಾ ಇಂಗ್ಲಿಷ್ ಮೊರೆ ಹೋಗಬೇಕು.
-ನಾವು ವೈವಿಧ್ಯತೆಯಲ್ಲಿ ಏಕತೆ ಸಾಧಿಸಬೇಕಾಗಿದೆ, ಒಂದು ಕಾಮಾನ್ ಭಾಷೆ ಅಗತ್ಯವಿದೆ. ಅದು ಕನ್ನಡ ಆದರೂ ನನಗೆ ಚಿಂತೆಯಿಲ್ಲ
-ನನ್ನ ಕೇಳಿದರೆ ಕನ್ನಡ ಜೊತೆ ಹಿಂದಿ, ತಮಿಳು, ತೆಲುಗು ಎಷ್ಟು ಅಗುತ್ತೋ ಅಷ್ಟು ಭಾಷೆ ಕಲೀರಿ ಅನ್ನುತ್ತೇನೆ. ಈ ಕಲಿಯುವುದರ ಜೊತೆ ನಾವು ಬೆಳೆಯುತ್ತೇವೆ.
-innu ide, saaku :)

Anonymous ಅಂತಾರೆ...

clangorous,
-nanu hindi kalitaddu schoolnalli. mumbai banda mele alla.
-"yelli hodru yellaru avara bhaashe yalli mathad beku annodu tappu,"
antira horatu vandu common bhasheyaagi hindina vappikoLLalla !
-nanellu nanu marathi kaliyolla anta heLillavalla. yava mannu namage anna koDutto adannu gauravisabEku annoLu nanu. haganta huTTida maNNina bagge asaDDe salladu.
-mumbai example kottiddu yaake anta innondaralli vivarisiddene.

ಆನಂದ್ ಅಂತಾರೆ...

ನೀಲಾಂಜಲಾ ಅವ್ರೇ,

ಮಂಗಳೂರಲ್ಲಿ ತುಳುವರನ್ನು ಕಂಡು ಅಚ್ಚರಿ ಪಡೋದನ್ನು ನೋಡಿದ್ರೆ ನಗೆ ಬರ್ತಿದೆ. ಮಂಗಳೂರಿನವರು ತುಳು ಮಾತಾಡಿದರೆ ತಪ್ಪೇನು? ನಮ್ಮ ನಾಡಿನ ಭಾಷೆಗಳು ಅಂದ ಮೇಲೆ ತುಳುವೂ, ಕೊಡವವೂ ನಮ್ಮವೇ. ಅವು ಕನ್ನಡವಲ್ಲದಿದ್ದರೆ ಏನಂತೆ? ಅವೂ ನಮ್ಮವೇ.. ಹಾಗಾಗಿ ಅವು ಪರಭಾಷೆಗಳಾಗೋದಿಲ್ಲ ಮಾರಾಯ್ರೆ. ಕನ್ನಡ ನಾಡೊಳಗಿರೋ ವೈವಿಧ್ಯತೇನ ಅಳಿಸೋ ಹಕ್ಕು ಕನ್ನಡದವರಿಗೂ ಇಲ್ಲಾ. ಕೊಡವ ನಾಡಿನಲ್ಲಿ, ತುಳುನಾಡಿನಲ್ಲಿ ಆಯಾ ಭಾಷೆಗಳೇ ಸಾರ್ವಭೌಮ ಭಾಷೆಗಳು. ಕನ್ನಡಕ್ಕೆ ಅವುಗಳನ್ನು ನುಂಗೋ ಅಧಿಕಾರ ಇಲ್ಲಾ. ಅವ್ರನ್ನೆಲ್ಲಾ ಕನ್ನಡಿಗರನ್ನಾಗಿ ಮಾಡ್ತೀವಿ ಅನ್ನೋ ಹುಂಬತನಾ ಇಡೀ ದೇಶಕ್ಕೆ ಹಿಂದಿ ಕಲುಸ್ತೀವಿ ಅನ್ನೋ ಹುಂಬತನಾ ಎರಡೂ ಒಂದೇ ಮತ್ತು ಎರಡೂ ತಪ್ಪೇ.
ವಲಸಿಗರಿಗಾಗಿ ಒಂದು ನಾಡಿನವರು ಹಿಂದಿ ಕಲಿಯೋ ಅಗತ್ಯ ಇಲ್ಲ ಅಂತ ಕಡೆಗೂ ಒಪ್ಪಿದ್ದಕ್ಕೆ ಧನ್ಯವಾದ. ವಲಸಿಗರು ತಮ್ಮ ಸಹ ವಲಸಿಗರ ಜೊತೆ ಬೆರೆಯೋಕ್ಕೆ ಹಿಂದಿ ಬೇಕು ಅಂತ ಹೊಸ ವಾದ ಹೂಡಿದ್ದೀರಾ ಈಗ. ಯಾಕೆ ಬೇಕು ಅನ್ನೋದು? ನನ್ನ ಪ್ರಶ್ನೆ. ಪಾಪಾ ನೀವು ಹಿಂದಿ ಆಂಟಿ ಹತ್ತಿರ ಅಂತಿದೀರ. ತಮಿಳು ಆಂಟಿ ದೂರಾ ಅಂತೀರಾ. ನಿಮಗೆ ತಮಿಳು ಬಂದಿದ್ರೆ ತಮಿಳು ಆಂಟಿ ಆಗ್ತಿದ್ರು, ಹಿಂದಿ ಬರದೆ ಇದ್ದಿದ್ರೆ ಹಿಂದಿ ಆಂಟಿ ದೂರಾ ಆಗ್ತಿದ್ರು ಅಲ್ವಾ?
ಬೇರೆ ಬೇರೆ ರಾಜ್ಯದೋರ್ನ ಬೆಸೆಯೋಕೆ ಒಂದು ಕಾಮನ್ ಭಾಷೆ ಬೇಕು ಅಂತೀರಾ. ಅದು ಜಪಾನೀಸ್ ಯಾಕಾಗಿರಬಾರ್ದು? ಹ ಹ್ಹ ಹ್ಹಾ!!!
ಇಂಗ್ಲಿಷ್ ಮತ್ತು ಕನ್ನಡ ಯಾಕೆ ಅನ್ನೋ ಪ್ರಶ್ನೆಗೆ ಹಿಂದೆಯೂ ನಾನು ಬರ್ದಿದೀನಿ. ಕನ್ನಡ ನಮ್ಮ ನುಡಿ ಅಂತ ಬೇಕು. ಇಂಗ್ಲಿಷ್ ಬೇರೆ ದೇಶದ್ದು, ಹಿಂದಿ ನಮ್ಮ ದೇಶದ್ದು ಅಂತೀರೇನೊ? ನಿಜಕ್ಕೂ ನಮಗೆ ಎರಡೂ ಒಂದೇ.ಇಂಗ್ಲಿಷ್ ಒಪ್ಪೋದ್ರಿಂದ ಇವತ್ತಿನ ದಿನ ಲಾಭ ಹೆಚ್ಚು, ನಷ್ಟ ಕಡಿಮೆ. ಅದಕ್ಕೇ ಇಂಗ್ಲಿಷನ್ನು ಒಪ್ಪೋದು ಒಳ್ಳೇದು. ಅಣ್ಣದೊರೈ ಅನ್ನೋ ತಮಿಳು ನಾಯಕ್ರು ಸಂಸತ್ತಿನಲ್ಲಿ ಹೇಳಿದ್ದ ಒಂದು ಉದಾಹರಣೇ ಹೇಳ್ತೀನಿ ಕೇಳಿ. ಹಿಂದಿನಾ ದೇಶದ ಸಂಪರ್ಕ ಭಾಷೆಯಾಗಿ ಕಲೀಬೇಕು ಅಂದಿದ್ದಕ್ಕೆ ಅವ್ರು ’ದೊಡ್ಡ ಬೆಕ್ಕಿಗೆ ದೊಡ್ಡ ಕಿಂಡಿ, ಚಿಕ್ಕ ಬೆಕ್ಕಿಗೆ ಚಿಕ್ಕ ಕಿಂಡಿ ಬೇಕಾ? ದೊಡ್ಡ ಕಿಂಡೀಲೆ ದೊಡ್ಡ ಮತ್ತು ಚಿಕ್ಕ ಬೆಕ್ಕುಗಳೆರಡೂ ಹಿಡ್ಸಲ್ವಾ?’ ಅಂದಿದ್ರು. ಅರ್ಥಾ ಆಯ್ತಾ? ಹೊರ ದೇಶಕ್ಕೆ ಬೇಕು ಅಂತಾ ಇಂಗ್ಲಿಷ್, ಹೊರರಾಜ್ಯದೋರಿಗೆ ಅಂತ ಹಿಂದಿ ಯಾಕೆ ಬೇಕ್ರಿ? ಇವತ್ತು ಇಂಗ್ಲಿಷ್ ಒಪ್ಪಿದರೆ ಇಂಗ್ಲಿಷಿನವರ ಗುಲಾಮರಾಗೋ ಸಾಧ್ಯತೆ ಇಲ್ಲ. ಆದ್ರೆ ಹಿಂದಿ ಒಪ್ಪ್ಪುದ್ರೆ ಗೋವಿಂದಾ. ಯಾಕಂದ್ರೆ ಹಿಂದಿಯೋರಿಗಿಂತ ಚೆನ್ನಾಗಿ ಕೆಲಸಗಳಿಗಾಗಿರೋ ಲಿಖಿತ ಹಿಂದಿ ಪರೀಕ್ಷೇಲಿ ಬರೆಯಕ್ಕೆ ಕನ್ನಡದೋರಿಗೆ ಯಾವತ್ತಿಗೂ ಆಗಲ್ಲವಲ್ರಿ.ಹಾಗಾಗಿ ನಮ್ಮ ಉದ್ಯೋಗವೆಲ್ಲಾ ಹಿಂದಿಯೋರ ಪಾಲಾಗುತ್ತೆ. ಅದಕ್ಕೆ ಸಾಕ್ಷಿಯಾಗಿ ನೈಋತ್ಯ ರೈಲ್ವೇ ಉದ್ಯೋಗದ ಘಟನಾವಳಿಗಳು ಸಾಕ್ಷಿಯಾಗಿ ಫಳಫಳಿಸ್ತಿವೆ ಅಲ್ವೇನ್ರಿ? ಇವತ್ತು ಇಂಗ್ಲಿಷನ್ನು ಎಲ್ಲಾ ಭಾಷಿಕ ಮಕ್ಕಳೂ ಕಲೀತಾನೇ ಇದಾರಲ್ಲಾ? ಮತ್ಯಾಕೆ ವಿಶೇಷವಾಗಿ ಹಿಂದಿ? ಹೋಗಲಿ ಹಿಂದಿ ಪ್ರದೇಶದ ಮಕ್ಕಳು ಮೂರನೇ ಭಾಷೆಯಾಗಿ ಕನ್ನಡಾನೋ, ತಮಿಳನ್ನೋ, ತೆಲುಗನ್ನೋ ಕಲೀತಾರಾ? ಮತ್ತೆ ಭಾರತದಲ್ಲಿರೋ ತಪ್ಪಿಗೆ ನಮ್ಮ ಮಕ್ಕಳಿಗೆ ಯಾಕೆ ಮೂರು ಮೂರು ಭಾಷೆ ಕಲೀಬೇಕನ್ನೋ ಒತ್ತಾಯದ ಹೊರೆ? ಹಿಂದಿ ದಬ್ಬಾಳಿಕೆ ತಡ್ಯಕ್ಕೆ ಬರೋರ ಜೊತೆ ಅವರ ಭಾಷೇಲೋ, ಇಂಗ್ಲಿಷಲ್ಲೋ ವ್ಯವಹರಿಸೋಣ ಬಿಡ್ರಿ. ನಮ್ಮ್ ಜೊತೆ ಬರೋರ ಜೊತೆ ಸಂಪರ್ಕ ಮಾಡಕ್ಕೆ ಅವರ ಭಾಷೆ, ನಮ್ಮ ಭಾಷೆ ಅಥವಾ ಇಂಗ್ಲಿಷು ಯಾವ್ದಾದ್ರೂ ಓಕೆ.
ಹಿಂದಿ ಕಲೀಬಾರ್ದು ಅಂತ ಹೇಳ್ತಿಲ್ಲಾರೀ. ಹಿಂದಿ ನಾಡಿಗೆ ಕೆಲಸಕ್ಕೆ ಹೋಗೋರು, ಹಿಂದಿ ನಾಡಲ್ಲಿ ಬದುಕಕ್ಕೆ ಹೋಗೋರು ಹಿಂದಿ ಕಲೀಲೆ ಬೇಕು. ಇಲ್ದಿದ್ರೆ ಅಲ್ಲಿನ ಅನನ್ಯತೇನ ನಾವು ಹಾಳು ಮಾಡಿದ ಪಾಪ ಬರುತ್ತೆ ಅಷ್ಟೆ. ಭಾಷೆ ಕಲ್ಯೋದ್ರ ವಿರುದ್ಧ ನಾನು ಮಾತಾಡ್ತಾ ಇದೀನಿ, ಅಥವಾ ಏನ್ ಗುರು ಮಾತಾಡ್ತಾ ಇದಾರೆ ಅಂತ ತಪ್ಪು ತಿಳೀಬೇಡ್ರಿ. ನಾವು ಹೇಳ್ತಿರೋದು ಹೇರಿಕೆ ಮಾಡಬೇಡಿ ಅಂತ. ಹಿಂದಿ ಹೇರಿಕೆ ಹ್ಯಾಗ್ ಹ್ಯಾಗೆ ಆಗ್ತಾ ಇದೆ, ನಮ್ಮ ಜನರ ಕೆಲಸದ ಅವಕಾಶಗಳು ಹೇಗೆ ಕೈ ಜಾರುತ್ತಾ ಇದೆ? ಕನ್ನಡದೋರಿಗೆ ಕನ್ನಡ ನಾಡಲ್ಲೇ ಕೆಲಸ ಸಿಗಬೇಕಂದ್ರೆ ಹೇಗೆ ಹಿಂದಿ ಕಲಿಬೇಕಾದ್ದ ಅನಿವಾರ್ಯತೆ ಹುಟ್ಟುತ್ತಿದೆ ಅನ್ನೋದನ್ನು ಅರ್ಥ ಮಾಡ್ಕೊಂಡ್ರೆ ಹಿಂದಿ ಹೇರಿಕೆಗೆ ವಿರೋಧ ಯಾಕೆ ಅಂತ ಅರಿವಾಗುತ್ತೆ.ಅಲ್ವಾ?
ನಮಸ್ಕಾರ

ತಿಮ್ಮಯ್ಯ

ಆನಂದ್ ಅಂತಾರೆ...

ನೀಲಾಂಜಲಾ ಅವ್ರೇ,

ತುಳುವರು, ಕೊಡವರು ಇತ್ಯಾದಿ ಈ ಮಣ್ಣಿನ ನುಡಿಯನ್ನು ತಾಯ್ನುಡಿಯಾಗಿ ಹೊಂದಿರುವವರು ಕನ್ನಡವನ್ನು ಹೇರಲು ಒಪ್ಪಿಗೆ ಕೊಟ್ಟಿದ್ದಾರೆ ಅಂದುಕೊಂಡರೆ ಅದು ನಮ್ಮ ಮೂರ್ಖತನ. ಅವರು ನಮ್ಮೊಟ್ಟಿಗೆ ಇರುವುದು ಅವರ ಏಳಿಗೆ ಇಲ್ಲಿರುವುದರಿಂದ ಸಾಧ್ಯವಾಗುತ್ತೆದೆ ಅನ್ನುವ ಕಾರಣದಿಂದ. ಅದು ಬಿಟ್ಟು ಕನ್ನಡವನ್ನು ಅವರ ಮೇಲೆ ಹೇರಲು ಹೊರಟರೆ ಅದೂ ತಪ್ಪೇ!

ತಿಮ್ಮಯ್ಯ

ಆನಂದ್ ಅಂತಾರೆ...

ನೀಲಾಂಜಲಾ ಅವ್ರೇ,

ತುಳುವರು, ಕೊಡವರು ಇತ್ಯಾದಿ ಈ ಮಣ್ಣಿನ ನುಡಿಯನ್ನು ತಾಯ್ನುಡಿಯಾಗಿ ಹೊಂದಿರುವವರು ಕನ್ನಡವನ್ನು ಹೇರಲು ಒಪ್ಪಿಗೆ ಕೊಟ್ಟಿದ್ದಾರೆ ಅಂದುಕೊಂಡರೆ ಅದು ನಮ್ಮ ಮೂರ್ಖತನ. ಅವರು ನಮ್ಮೊಟ್ಟಿಗೆ ಇರುವುದು ಅವರ ಏಳಿಗೆ ಇಲ್ಲಿರುವುದರಿಂದ ಸಾಧ್ಯವಾಗುತ್ತೆದೆ ಅನ್ನುವ ಕಾರಣದಿಂದ. ಅದು ಬಿಟ್ಟು ಕನ್ನಡವನ್ನು ಅವರ ಮೇಲೆ ಹೇರಲು ಹೊರಟರೆ ಅದೂ ತಪ್ಪೇ!

ತಿಮ್ಮಯ್ಯ

clangorous ಅಂತಾರೆ...

neelanjana avare,

timmayya avru heLida haage common bhashe beku annuvudadre aa bhaashe english yaakagabardu ?, bahuteka yella vishayagaLanna english nalli kaliyuva naavu adunne common bhashe madodralli anakoolagaLe hecchu . hindi yannu kevala innondu bhaashikara jothe samparkakke upyogisa beku annodu hindige anuchitha melugai kotta haage thaane ?, english na common bhaashe madikondare adu bharatada yaava bhaashe gu anuchita melugai kotta haage iruvudilla, yella janangadavarigu onde sthana kottantaguttade bahuteka yellaru adunna vopputtare. maraTi naadinalli hindi apekshisuvudu maraTigara mele hindi heridanteye. yaavude bhaashe kaliyuvudu tappalla, adu hindi janagakku anvayussuttade allava ?, avarige maatra anvayisolla annodu taratamyavaguttade. english namage jeevanopaya kalpisittide, maatru bhaashe namage yochana shakthi vruddisuttade, madyadalli hindi yenu kodittide ? kelavu kendra sarkara huddegaLannu bittu ?, alliyu modalu hindiyavarige aaDyate.

innu mangaLurina vishayakke bandare alli hindi cinemagaLige sigo pramukyathe kannadakilla , alli yellaru hange antha heLuttilla bahuteka indina peeLigeyavaru hindige maaru hogiddare. illina savalattugalanna paDeyuva avaru illiya cinemagaLanne hiyaLisuvudu yaava nyaya neeve heLi. hindi cinemagaLu antha adbuthavenalla bahutheka english cinemagaLanna kaddi madiruva cinemagaLe. kannada cinemagaLannu hogoLuvudu beda hindi cinema mohadalli tegaLuvudu uppu tinda manege yeradu bagedanthe annodu tiLidu kondare saaku.

mangaLuru moolada nayakiraada aishwarya rai, deepika paDukone thaavu kannadigaru, karnatakadavaru yendu heLikollalla mangalorean annuttare, deepika tanna modala chitra kannadavadaru hindiya om shanthi om tanna modalane chitra yendu heLi kollutta tanna keeLarime meradiddaLe. haagantha avaLa hindi matanadodu keLidare yestu naatakiya annodu yeddi kaNuttade. namma naDinadde aada kannada beda parakeeya vaadaru hindiye hecchu, intaha meer sadikarige nanna dhikkara

Anonymous ಅಂತಾರೆ...

ನೀಲಾಂಜಲಾ ಅವ್ರೇ,

ನೀವು ಹೇಳೋ ಹಾಗೆ ನೋಡಿದ್ರೆ ತುಳು, ಕೊಂಕಣಿ ಮತ್ತು ಕೊಡವ ಇವರ್ಯಾರು ಕನ್ನಡದವರು ಅಲ್ಲ ಅನ್ನೋಹಾಗೆ ಇದೆ.

ನಿಮಗಿದು ಗೊತ್ತಿಲ್ಲ ಅನ್ಸುತ್ತೆ, ಕರ್ನಾಟಕವೇ ಹೆಮ್ಮೆಪಡೊ ವ್ಯಕ್ತಿ, ವೀರ ಕನ್ನಡಿಗ ಅಂದ್ರೆ ತಪ್ಪಾಗಲ್ಲ, ಅಂತಹ ವ್ಯಕ್ತಿ "ಕರ್ನಲ್ ವಸಂತ್" ಯಾಕಂದ್ರೆ ಭಾರತದಲ್ಲೇ ಸರ್ವಶ್ರೇಷ್ಠ ಪ್ರಶಸ್ತಿಗಳು ಅಂದ್ರೆ "ಭಾರತ ರತ್ನ ಮತ್ತು ಪರಮ ವೀರ ಚಕ್ರ" ಇಂತಹ ಪರಮ ವೀರ ಚಕ್ರ ಪಡೆದ ಏಕಮಾತ್ರ ಕನ್ನಡಿಗ "ಈ ಕರ್ನಲ್ ವಸಂತ್"ರವರು. ಇವರು ಮೂಲತಃ ಕೊಡಗಿನವರು, ಆದರೆ ಅವರು ಗುರುತಿಸಿಕೊಂಡಿದ್ದು ಮಾತ್ರ ಕನ್ನಡಿಗ ಎಂದು.....

ಈ ವಿಷಯ ನೆನಪಲ್ಲಿ ಇರಲಿ,
ತುಳು, ಕೊಡವ ಮತ್ತು ಕೊಂಕಣಿ - ಇವು ಕನ್ನಡದ ಲಿಪಿಯನ್ನು ಬಳಸುವ ಕನ್ನಡದ ಇನ್ನಿತರ ಭಾಷೆಗಳು....(ಅಂದರೆ ಕನ್ನಡದ ಉಪ ಭಾಷೆಗಳು).....

ಇಲ್ಲಿ ಪ್ರಶ್ನೆ ಇರೋದು ಮಂಗಳೂರಿಗರಿಗೆ ಕನ್ನಡ ಬರುತ್ತೋ ಬರಲ್ವೋ ಅನೋದಲ್ಲ...... ಕನ್ನಡದ ಮೇಲೆ ಆಗುತ್ತಿರುವ ಹಿಂದಿ ಹೇರಿಕೆಯನ್ನು ತಡೆಗಟ್ಟುವ ಕ್ರಮ ಹೇಗೆ ಅಂತ.

Anonymous ಅಂತಾರೆ...

Anonymous: ನನ್ನ ತಪ್ಪಿಗೆ ಕ್ಷಮೆ ಇರಲಿ ಅದು ಅಭ್ಯಾಸ ಬಲ ಇಂತಹ ತಪ್ಪು ಇನ್ನೊಮ್ಮೆ ಕಂಡಿತ ನನ್ನಿಂದ ಆಗೋಲ್ಲ.... ಮತ್ತು ಇನ್ನಿತರರಿಗೆ ಇದನ್ನೇ ಹೇಳುತ್ತೇನೆ.

ThE InfiniT ಅಂತಾರೆ...

ದಕ್ಷಿಣ ಭಾರತದ ದ್ರಾವಿಡ ಭಾಷೆಗಳು ನಾಲ್ಕು ಕನ್ನಡ ತಮಿಳು ತೆಲುಗು ಮಲಯಾಳಂ
ಆದರೆ ಭಾರತದ ಬಹುತೇಕ ಭಾಷೆಗಳ ತಾಯಿ ದೇವನಾಗರಿ (ಸಂಸ್ಕೃತ )
ಆದರೂ ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುವ ಭಾಷೆ ಹಿಂದಿ
ಅತಿಹೆಚ್ಚು ಸಮೂಹ ಮಾಧ್ಯಮಗಳು TV ಮತ್ತು ಸಂಗೀತ ವಾಹಿನಿಗಳು ಹಿಂದಿಯಲ್ಲಿವೆ.
ಉತ್ತರ ಭಾರತದ ಬಹುತೇಕ ಭಾಷೆಗಳಲಿ ಹಿಂದಿಯ ಪ್ರಭಾವ ಹೆಚ್ಚಿದೆ,
ಅಂದಿನಿಂದ ಇಂದಿನವರೆಗೂ ಸಾಮನ್ಯ ವಾಗಿ ಎಲ್ಲರಿಗೂ ಹಿಂದಿ ಭಾಷೆಯ ಸ್ವಲ್ಪ ಮಟ್ಟಿನದಾದರೂ
ಪರಿಚಯ ಇದೇ, ನಮ್ಮ ಆಡು ಭಾಷೆಯಲ್ಲೂ ಅದು ಸೇರಿ ಹೋಗಿದೆ ,
ಈ ಎಲ್ಲಾ ಕಾರಣಗಳಿಂದ ಬಹುಷಃ ನಮ್ಮ ಭಾರತ ಸರ್ಕಾರ ಹಿಂದಿಯನ್ನು ಆಡಳಿತ ಭಾಷೆ(ರಾಷ್ಟ್ರ
ಭಾಷೆ ) ಯಾಗಿ ಜಾರಿ ಮಾಡಿರ ಬಹುದು.

ಅದೇನೇ ಇದ್ದರು ನಮ್ಮ ಜನ ನಮ್ಮತನ ಬಿಟ್ಟು ಮಾರು(ಮಾರಿ ) -ಹೋಗುತ್ತಿರುವುದು ಶೋಚನೀಯ
ಬೆಂಗಳೂರಿನ ಪ್ರಸಿದ್ದ ಸಂಗೀತ ವಾಹಿನಿ ಕನ್ನಡ ಬಾವುಟ ಹಾರಿಸಿ ಮೇಲೆಬಂದು ಈಗ
ಇತ್ತೇಚೆಗೆ ಹಿಂದಿಯನ್ನು ಓಲೈಸಲು ಶುರುಮಾಡಿದೆ ಹಿಂದಿನಿಂದ ಇರಿಯುವವರ ಈ ಮೋಸಕ್ಕೆ
ನಾವೆಲ್ಲರೂ ತಲೆ ಆಡಿಸುತ್ತೇವೆ ಆನಂದಿಸುತ್ತೇವೆ ,
ಕರ್ನಾಟಕದಲ್ಲಿ ಬೇರೆಯ ಭಾಷೆಯನ್ನು ಬಂಡವಾಳ ಮಾಡಿ ಲಾಭಮಾಡಿ ಕೊಳ್ಳುವ ವ್ಯವಹಾರ
ರೂಡಿಸಿಕೊನ್ದವರನು ಏನೆನ್ನಬೇಕು ?
ಶೋಕಿಗಾಗಿ ,ಭಾಷೆ ತಿಳಿದರೂ ತಿಳಿಯದಂತೆ ನಟಿಸೋ ನಟ ಭಯಂಕರರಿಗೆ ಯಾವ ಪ್ರಶಸ್ತಿ ಕೊಡಬೇಕೋ
..
ಬೇರೆಯದನ್ನು ಕೊಳ್ಳುವ ನಮದನ್ನು ಕೊಲ್ಲುವ ನಮ್ಮ ಮೂರ್ಖ ತನಕ್ಕೆ ಏನೆನ್ನಬೇಕೋ ....
ಅಣ್ಣ-ತಮ್ಮ ,
ಕೆಳುತಿದ್ದಾನೆ ಮಂಕು ತಿಮ್ಮ

Vallish Kumar S ಅಂತಾರೆ...

ಕರ್ನಾಟಕದ ಕನ್ನಡಿಗರೇ ಆದ ಜನ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಕಲಿಸಿಲ್ಲ. ಇಂಥ ಉದಾಹರಣೆ ನಮ್ಮ ಮನೆಯಲ್ಲೇ ಇದೆ.

ನಾನು ಇವರೊಂದಿಗೆ ವಾದ ಮಾಡಿದಾಗ ಇವರು ಹೇಳಿದ್ದು ಹೀಗೆ:

"ನಾಳೆ ನನ್ನ ಮಗ ಎಲ್ಲಿ ಕೆಲಸ ಮಾಡ್ತಾನೋ ಗೊತ್ತಿಲ್ಲ. ಅಕಸ್ಮಾತ್ ಬೇರೆ ಕಡೆ ಹೋಗಿ ಕೆಲ್ಸ ಮಾಡ್ಬೇಕಾದ್ರೆ ಅವನಿಗೆ ಭಾಷೆಯ ಸಮಸ್ಯೆ ಆಗಬಾರದು. ಅದಕ್ಕೆ ಈಗ್ಲೆ ಹಿಂದಿ ಕಲಿಬೇಕು. ಮೂರನೇ ಭಾಷೆ ಕನ್ನಡ ಆದ್ರೂ ಸಾಕು. ಅಕಸ್ಮಾತ್ ಓದದೇ ಹೋದ್ರೂ ಕನ್ನಡ ಮನೇಲಿ ಕಲಿಸಬಹುದು. ಆದರೆ ಬೇರೆ ಭಾಷೆ ಶಾಲೇಲಿ ಕಲೀಲಿ."

ಈ ಮಹಾತಾಯಿ ಬೇರೆ ಯಾರೂ ಅಲ್ಲ, ನನ್ನ ಅಕ್ಕ. ಅವಳೊಂದಿಗೆ ವಿಶ್ವಾಸ ಕೆಟ್ಟರೂ ಪರವಾಗಿಲ್ಲ ಅಂತ ಹೋರಾಡಿದೆ. ಏನೂ ಪ್ರಯೋಜನ ಆಗಲಿಲ್ಲ.

ಇನ್ನೊಂದು ಉದಾಹರಣೆ ಹೇಳ್ತೀನಿ:

ನಮ್ಮ ಮಾವನ ಮಗ ಕನ್ನಡವೇ ಓದಿಲ್ಲ. ಕೇಂದ್ರೀಯ ವಿದ್ಯಾಲಯದಲ್ಲಿ ಇಂಗ್ಲಿಶ್, ಹಿಂದಿ, ಸಂಸ್ಕೃತ ಓದಿದವನು. ಈಗ ಸ್ವ-ಇಚ್ಛೆಯಿಂದ ಕನ್ನಡ ಕಲಿಯುತ್ತಿದ್ದಾನೆ... ಸಂತೋಷ ಪಡಬೇಕೋ, ದು:ಖ ಪಡಬೇಕೋ ಗೊತ್ತಾಗ್ತಿಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails