ಕರ್ನಾಟಕ ಮುಕ್ತ ವಿ.ವಿ.ಯ ಕನ್ನಡ ಕಲ್ಸೋ ಒಳ್ಳೇ ಕೆಲ್ಸ!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದೋರು ರಾಜ್ಯದಲ್ಲಿ ಉರ್ದು ಬೋಧನೆ ಮಾಡೋ ಶಾಲೆಗಳಲ್ಲಿ ಕನ್ನಡ ಕಲ್ಸೋಕೆ ಒಂದು ಯೋಜನೇನಾ ಜಾರಿಗೊಳಿಸಲು ಮುಂದಾಗಿದೆ ಗುರು! ಇಂಥಾ ಒಂದು ಒಳ್ಳೇ ಸುದ್ದಿ 25.02.2009ರ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ. ಕ.ಮು.ವಿ.ವಿಯ ಈ ನಡೆ ಕನ್ನಡ ನಾಡಿನಲ್ಲಿರೋ ಉಳಿಕೆ ಭಾಷೆಯೋರ್ನ ನಾಡಿನ ಮುಖ್ಯವಾಹಿನೀಗೆ ತರೋ ದಿಕ್ಕಲ್ಲಿ ಒಂದು ದೊಡ್ಡ ದಾಪುಗಾಲಿನ ಕ್ರಮವಾಗಿದೆ.
ಸರ್ಕಾರದ ಜೊತೆ ಸಾರ್ವಜನಿಕರೂ ಮುಂದಾಗಬೇಕಿದೆ!

ನಾಡಿನ ಪರಭಾಷಿಕರಿಗೆ ಕನ್ನಡ ಕಲ್ಸೋ ಮೂಲಕ ನಾಡಿನ ಮುಖ್ಯವಾಹಿನಿಗೆ ಭಾಷಿಕವಾಗಿ ಮಾತ್ರಾ ತರಲು ಸಾಧ್ಯಾ ಅನ್ನೋ ಹಾಗಿಲ್ಲ. ನಮ್ಮ ನಾಡು ನುಡಿ ಜನ ಜೀವನಗಳ ಜೊತೆ ಅಕ್ಕರೆಯ ಒಡನಾಟ ಮತ್ತು ತಮಗೆ ಸೇರಿದ್ದೆಂಬ ಭಾವನೆ ಕೂಡಾ ಇದರಿಂದ ಜಾಗೃತವಾಗಲಿ ಅನ್ನೋದು ಕಾರ್ಯಕ್ರಮ ರೂಪಿಸಿರೋರ ಆಶಯವಾಗಿದೆ. ಕನ್ನಡ ಕಲಿಸೋ ಈ ಕಾರ್ಯಕ್ರಮಾ ರಾಜ್ಯದ ಎಲ್ಲಾ ಮೆಡಿಕೆಲ್, ಇಂಜಿನಿಯರಿಂಗ್ ಕಾಲೇಜುಗಳು, ವೃತ್ತಿ ಶಿಕ್ಷಣ ಕೇಂದ್ರಗಳು, ಖಾಸಗಿ ಸಂಸ್ಥೆಗಳಿಗೂ ಹಬ್ಬಬೇಕಾಗಿದೆ. ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಯಾಗಲಿ, ಇದನ್ನು ಉರ್ದು ಭಾಷಿಕರಿಗೆ ಮಾತ್ರವಲ್ಲದೆ ಇತರೆ ಭಾಷಿಕರಿಗೂ ತಲುಪಿಸೋ ವ್ಯವಸ್ಥೆಯಾಗಲಿ. ಯಾವುದೇ ವಿಶ್ವವಿದ್ಯಾಲಯ ಅಥವಾ ಸರ್ಕಾರಗಳು ಮಾಡಲಿಕ್ಕೆ ಮುಂದಾಗೋ ಕೆಲಸಾ ಯಶಸ್ವಿಯಾಗಬೇಕಂದ್ರೆ ನಾಡಿನ ಜನರೂ ಇದರಲ್ಲಿ ತೊಡಗಿಕೋಬೇಕು. ಪರಭಾಷಿಕರ ಜೊತೆ ವ್ಯವಹರಿಸೋವಾಗ ನಾವೂ ಕನ್ನಡದಲ್ಲೇ ವ್ಯವಹರಿಸೋಣ.. ಗುರು!

6 ಅನಿಸಿಕೆಗಳು:

Priyank ಅಂತಾರೆ...

ಉರ್ದು ಶಾಲೆಗಳಲ್ಲಿ ಕನ್ನಡ ಮೊದಲಿಂದನೂ ಕಲುಸ್ತಿದಾರಲ್ವಾ ಗುರು?
ಇದೇನಿದು ಹೊಸದಾಗಿ ಮತ್ತೆ ಶುರು ಮಾಡಿರದು?

Anonymous ಅಂತಾರೆ...

kannada dalli Quraan odakke sigatta. Telugu Tamil matte bere ella bhashe nalloo Quraan ide.

Anonymous ಅಂತಾರೆ...

ಇರ್ಫಾನ್ ಅವರೆ,
ಕನ್ನಡದಲ್ಲಿ ಖುರಾನ್ ಬರಿಬೇಕಾದವರು ಕರ್ನಾಟಕದಲ್ಲಿ ಇರುವ ಮುಸಲ್ಮಾನರು ತಾನೇ..? ... ತೆಲುಗು ತಮಿಳಿಗೆ ಕೊಡುವ ಪ್ರಾಮುಖ್ಯತೆ, ಇಲ್ಲಿಯ ಮುಸಲ್ಮಾನರು ಕನ್ನಡಕ್ಕೆ ಯಾಕೆ ಕೊಡ್ತಿಲ್ಲ ?... ಎಲ್ಲೊ ಓದಿದ ಜ್ಞಾಪಕ ಖುರಾನ್ನನ್ನು ಮೂಲ ಅರೇಬಿಕ್ನಿಂದ ಅನುವಾದ ಮಾಡೋವಾಗ ಯಾವ ರೀತಿಯು ವ್ಯತ್ಯಾಸ ಬರಬಾರದು ಅಂತ ... ಈಗ ಹೇಳಿ ಖುರಾನ್ನನ್ನು ಕನ್ನಡಕ್ಕೆ ಅನುವಾದ ಮಾಡೋದು ಮುಸಲ್ಮಾನರ ಕರ್ತವ್ಯ ತಾನೇ.. ?

ಕ್ಲಾನಗೊರೌಸ್

Hussain ಅಂತಾರೆ...

Urdu shaale galalli yavagindlo kannada bodane ide mattu innondu dodda samasye andre kannada kaliso shiksharavru Urdu shaale galalli illa :(

kannada muslimaru kannda kalitiv andru saukarya galilla , naane muslim makklige kannada kalsidini adu kuda bengluralli.

innu kannadalli Quran labhyavide, vishaya tilidene bariodu tappu ankotini, nimmage pustakagalu nijvaglu bekaiddre demand maadidre taane sigodu :)

Anonymous ಅಂತಾರೆ...

ಉರ್ದು ನುಡಿಯೋರಿಗೆ ಕನ್ನಡ ಕಲಿಯಕ್ಕೆ ಅನುವು ಮಾಡ್ತಾ ಇರೋದು ತುಂಬಾ ಒಳ್ಳೇದು.
ಕನ್ನಡ ನಾಡಲ್ಲಿ ಕನ್ನಡದೋರು ಬಿಟ್ರೇ ಎರಡನೇ ದೊಡ್ಡ ಗುಂಪು ಉರ್ದಿಗರದೇ!...

ಕನ್ನಡದಲ್ಲಿ ಕುರಾನ್ ಏನು, ಇನ್ನೂ ಹಲವು ರಿಲಿಜನ್ಗಳ ಹೊತ್ತಗೆಗಳಿಲ್ಲ. ಕನ್ನಡದಲ್ಲಿ ಬಯ್ಬಲ್ ಬರೆದೋರು ಕ್ರಿಸ್ತರೇ. ಕಿಟ್ಟೆಲ್ ಮುಂತಾದವರು ಕನ್ನಡವನ್ನು ಸಕ್ಕತ್ ಚನ್ನಾಗಿ ಓದಿಕೊಂಡು, ಬಯ್ಬಲ್ ಬರೆದರು. ಹಾಗೇ ಬೇರೆ ರಿಲಿಜನ್ ಮಂದಿ ಕೂಡ ಮಾಡಬೇಕು, ಅದಕ್ಕೆ ನೆರವು ಕೊಡಕ್ಕೆ ನಾನು ಅಣಿ/ರೆಡಿ. ಕುರಾನ್ ಕನ್ನಡಕ್ಕೆ ತರಲು ನನಗೆ ತುಂಬಾ ಇಂಟರೆಸ್ಟಿದೆ. ಆದರೆ ನನಗೆ ಅರಬ್ಬಿ ಬರಲ್ಲ.

ಕುರಾನ್ ಮುಂತಾದ ಇಸ್ಲಾಮಿನ ಹೊತ್ತಗೆಗಳನ್ನು ಕನ್ನಡಕ್ಕೆ ತರಲು ನನ್ನ ನೆರವು ಬೇಕಾದರೆ ನನ್ನ ಬ್ಲಾಗಲ್ಲಿ ನಿಮ್ಮ ಮಿಂಚೆಗುರುತು/ಈಮಯ್ಲ್ ಅಯ್ಡಿ ಜತೆಗೆ ಒಂದು ಕಮೆಂಟು ಹಾಕಿರಿ. ನನಗೂ ಕುರಾನ್ ತಿಳಿದಂಗೆ ಆಗತ್ತೆ. :)

ನನಗೂ ಚನ್ನಾದ ಸುಲಬ ಕನ್ನಡದಲ್ಲಿರೋ ಕುರಾನ್ ಸಿಕ್ಕರೆ, ಅದು ಬೇಕು. ಒಂದು ಸರತಿ ಆ ರಿಲಿಜನ್ ಬಗ್ಗೆಯೂ ತಿಳಿಯಬಹುದು.

ಇನ್ನೊಂದು ಮಾತು ಬಡಗಣ ಕರ್ನಾಟಕದಲ್ಲಿ ನಮಾಜು ಕನ್ನಡದಲ್ಲೇ ಮಾಡ್ತಾರಂತೆ. ಬರೀ ತೆಂಕಣ ಕರ್ನಾಟಕದಲ್ಲಿ ನಮಾಜು ಅರಬ್ಬಿ/ಉರ್ದು ನುಡಿಯಲ್ಲಿ ಮಾಡೋದಂತೆ... ಹೌದ?

ಶಿಶುನಾಳ ಶರೀಪ ಸಿನಿಮದಲ್ಲಿ ’ಸವಾಲ್ ಒಂದು ನಿನ್ನ ಮ್ಯಾಲ’ ಎಂಬು ಇಸ್ಲಾಂ ಹಾಡಿದೆ. ಅದು ಜನಪದ/ಹಳ್ಳಿಹಾಡಿನ ಹಾಗಿದೆ. ಸಕ್ಕತ್ ಅಲ್ವ!

Anonymous ಅಂತಾರೆ...

naanu chennainalliddene. eilli muslimaru tamil maataaduttaare. anaksharastarige urdu barolla. adu bhaashaabhimaana.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails