ಮರಳಿ ಬಂದಿಹ ಉಗಾದಿ, ಹೊಸ ಹರುಷ ತರಲಿ!


ಈ ಚಂದದ ಹಾಡನ್ನು ಬರ್ದಿರೋರು ಕನ್ನಡದ ಹೆಮ್ಮೆಯ ಚೇತನಗಳಲ್ಲೊಬ್ಬರಾದ, ಅಂಬಿಕಾತನಯದತ್ತ ಕಾವ್ಯನಾಮದ, ವರಕವಿ ಶ್ರೀ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಪ್ರತಿವರ್ಷದ ಯುಗಾದಿಯಂದು ಇಡೀ ಕನ್ನಡನಾಡಿನ ಜನರು ಇವರನ್ನು ತಪ್ಪದೆ ನೆನೀತಾರೆ. ಇವರ ಹೆಸರು ತಿಳಿಯದೇ ಇರೋರು ಕೂಡಾ ಅವರ ಈ ಹಾಡನ್ನು ಬಲ್ಲವರೇ ಆಗಿರ್ತಾರೆ. ಕನ್ನಡನಾಡಿನ ಹೆಮ್ಮೆಯ ಈ ’ಯುಗದ ಕವಿ’ಗೆ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದ ಸ್ಥಾನ ಒದಗಿಸಿಕೊಟ್ಟಿರೋ ಈ ಹಾಡು, 1963ರಲ್ಲಿ ಬಿಡುಗಡೆಯಾದ ಕುಲವಧು ಚಿತ್ರದ್ದು, ಸಂಗೀತ ಕೊಟ್ಟೋರು ಶ್ರೀ. ಜಿ.ಕೆ. ವೆಂಕಟೇಶ್ ಅವ್ರು, ಶ್ರೀಮತಿ ಎಸ್.ಜಾನಕಿ ಅವರ ಕಂಠಸಿರಿ ಈ ಹಾಡಿಗೆ ಜೀವತುಂಬಿದೆ...
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರಷಕೆ ಹೊಸ ಹರುಷವ ಹೊಸತು ಹೊಸತು
ತರುತಿದೆ
ಕನ್ನಡದ ಕವಿಗಳ ಇಂಥಾ ಸುಮಧುರ ಕವನಗಳನ್ನು ನಮ್ಮ ಚಿತ್ರರಂಗದೋರು ಹೆಚ್ಚುಹೆಚ್ಚು ಬಳಸುವಂತಾಗಲಿ. ಹೊಸ ವರುಷ ಎಲ್ಲರಲ್ಲೂ ಹೊಸ ಹರುಷಕೆ ಕಾರಣವಾಗಲಿ. ಏನ್ ಗುರು ಓದುಗರಿಗೆಲ್ಲಾ ಯುಗಾದಿ ಹಬ್ಬ ಒಳಿತುಮಾಡಲಿ.

3 ಅನಿಸಿಕೆಗಳು:

Anonymous ಅಂತಾರೆ...

ಅಲ್ರೀ ತೆಲುಗರು ಉಗಾದಿಯನ್ನು ’ತೆಲುಗು ಹೊಸ ವರ್ಶ’ ಅಂತ ಹಬ್ಬ ಮಾಡೋ ಹಾಗೆ.. ನಾವು ಕನ್ನಡಿಗರೂ ’ಕನ್ನಡ ಹೊಸ ವರ್ಶ’ ಎಂದಲ್ವೇ ಸಡಗರ ಪಡಬೇಕು...

ಕನ್ನಡ ಹೊಸ ವರ್ಶದ ಸವಿಹಾರಯ್ಕೆ.

ಎಲ್ಲರೂ ಚಂದಾಗಿರಿ.!

Anonymous ಅಂತಾರೆ...

ಏನ್ ಗುರು,
ಲೇಖನದಲ್ಲಿ ಯುಗಾದಿ ಅಂತ ಬರೆದು, ಹಣೆ ಪಟ್ಟಿ ಯಲ್ಲಿ ಉಗಾದಿ ಅಂತ ಇದ್ಯೆಲ್ಲ... ಯಾವ್ದು ಸರಿ ?.

ಮಾಯ್ಸ ಅವರೇ ನಿಮ್ಮ ಮಾತು ಖರೆ , ಕನ್ನಡ ಹೊಸ ವರ್ಷದ ಸಿಹಿ ಹಾರೈಕೆಗಳು ಎಲ್ಲ ಓದುಗರಿಗೂ

ಕ್ಲಾನ್ಗೊರೌಸ್

ಜಲನಯನ ಅಂತಾರೆ...

ಏನ್ ಗುರು,
ಭಾಳ ಚಂದ ಐತಲ್ಲ ಗುರು..ನಿನ್ ಇಸ್ಟೈಲು..ಯುಗಾದಿಯ ಶುಭಕೋರೋ ವಿಧ..
ಯುಗ ಯುಗಾದಿ ಕಳೆದರೂ ..ಹಾಡು ಕೇಳುತ್ತಾ ಈ ಅನ್ನಿಸಿಕೆಯನ್ನು ಟೈಪ್ ಮಾಡುತ್ತಿದ್ದೇನೆ.
ಚಿತ್ರಾನ್ನ...ಹೊಡಿನಾಗ...ಬಿನ್ ಲ್ಯಾಡನ್ನು ಗಳನ್ನು ಕೇಳಿ ಕೇಳಿ ಸಾಕಾಗಿರುವಾಗ ಈ ಮಾಧುರ್ಯ ಪ್ರಧಾನ ಗೀತೆಗಳು
ಕನ್ನಡ ಚಿತ್ರ ರಂಗದ ಸುವರ್ಣ ಯುಗದ ಆರಂಭಕ್ಕೆ ಕೊಂಡೊಯ್ತು..
ಅಭಿನಂದನೆಗಳು, ಮರಳುಗಾಡಿನ ಎಣ್ಣೆ ನಾಡಿಂದ ಯುಗಾದಿ ಶುಭಕಾಮನೆಗಳು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails