ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರು ಅವರು ಕನ್ನಡಕ್ಕಾಗಿ ಮಿಡಿಯುತ್ತಾ ಭಾಳಾ ಸಂಕಟದಿಂದ ಮಾತಾಡಿದ್ದಾರೆ ಅಂತ 26.03.2009ರ ವಿಜಯಕರ್ನಾಟಕದ ಹತ್ತನೇ ಪುಟದಲ್ಲಿ ಬಂದಿರೋ ಒಂದು ವರದಿ ಹೇಳ್ತಿದೆ. ಇವರ ಕಾಳಜಿ ಏನೋ ತುಂಬಾ ಪ್ರಾಮಾಣಿಕವಾದದ್ದೇ ಆಗಿರಬಹುದು ಅನ್ನೋ ಬಗ್ಗೆ ನಮ್ಮ ಚಕಾರ ಇಲ್ಲ. ಆದ್ರೆ ಇವರು ಮಾತಿನ ಭರದಲ್ಲಿ ನಂಬಿರೋ ಒಂದೆರಡು ಭ್ರಮೆಗಳ ಬಗ್ಗೆ ಎಚ್ಚರಿಸಬೇಕಾಗಿದೆ ಗುರು!
ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು?
ಚಂದ್ರು ಅವ್ರು ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ 32% ಇದೆ ಅಂತಾ ಮಾತಿನ ಭರದಲಿ ಹೇಳಿಬಿಟ್ಟಿದ್ದಾರೆ. ಚಂದ್ರು ಅವ್ರೇ, ಇದಕ್ಕೆ ತಮ್ಮಲ್ಲಿ ಏನಾದ್ರೂ ಆಧಾರ ಇದೆಯೇ? ಮಾಧ್ಯಮಗಳಲ್ಲಿ ಪದೇಪದೇ ಪ್ರಕಟವಾಗೋ ಈ ಸುಳ್ಳನ್ನೇ ತಾವೂ ನಂಬಿರೋ ಹಾಗೆ ಕಾಣುತ್ತಲ್ಲಾ ಸ್ವಾಮಿ? ಬೆಂಗಳೂರಿನ ಪ್ರತಿಶತ ಎಷ್ಟು ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಡ್ಯಲ್ಲಾ ಹೇಳಿ. ನಿಮ್ಮ ಸುತ್ತಮುತ್ತ ಎಷ್ಟು ಪ್ರತಿಶತ ಕನ್ನಡೇತರರು ಇದ್ದಾರೆ? ಬೆಂಗಳೂರಿನ ಎಷ್ಟು ಬಡಾವಣೆಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು? ಬೆಂಗಳೂರಿನ ಎಷ್ಟು ಜನಪ್ರತಿನಿಧಿಗಳು ಕನ್ನಡದವರಲ್ಲಾ? ಬೆಂಗಳೂರಿನ ಎಷ್ಟು ಜನರು ಇಲ್ಲೇ ತಲೆಮಾರುಗಳಿಂದ ನೆಲೆಸಿದ್ದೂ ತಮ್ಮ ತಾಯ್ನುಡಿಯನ್ನು ಉರ್ದು, ತೆಲುಗು, ತಮಿಳು, ತುಳು, ಕೊಡವ, ಕೊಂಕಣಿ, ರಾಜಾಸ್ಥಾನಿ, ಗುಜರಾತಿ ಅಂತಾ ಜನಗಣತಿಯಲ್ಲಿ ಬರೆಸಿರುತ್ತಾರೆ ಎಂಬ ಅಂದಾಜಿದೆಯೇ? ಬೆಂಗಳೂರಿನ ಎಫ್.ಎಂ ವಾಹಿನಿಗಳು ಇಲ್ಲಿ ವ್ಯಾಪಾರದಲ್ಲಿ ಯಶಸ್ಸು ಬೇಕೆಂದ್ರೆ ಕನ್ನಡದಿಂದಲೇ ಅಂತಾ ಸಾರುತ್ತಿದೆ ಅಂತ ನಿಮಗೆ ಅನ್ನಿಸುತ್ತಿಲ್ಲವೇ? ಕನ್ನಡಿಗರ ಸಂಖ್ಯೆ ಕಡಿಮೆ ಅಂದ್ರೂ 70% ಇದ್ದೇ ಇದೆ ಅನ್ನೋದು ನಿಮ್ಮ ಅನುಭವಕ್ಕೆ ಬಂದಿಲ್ಲವೇ? ನೀವೇ ಕೆಲ ಸ್ವಹಿತಾಸಕ್ತಿಗಳು ಹುಟ್ಟುಹಾಕಿರೋ ’ಬೆಂಗಳೂರಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು’ ಅನ್ನೋ ಸುಳ್ಳನ್ನು ನಂಬುದ್ರೆ ಹೇಗೆ ಸ್ವಾಮಿ? ಆ ಅಂಕಿಅಂಶವನ್ನು ನಿಜಕ್ಕೂ ಛಾಲೆಂಜ್ ಮಾಡಬೇಕಾದ ತಾವೇ ಸೋತು ದಿಕ್ಕೆಟ್ಟವರಂತೆ ಮಾತಾಡುದ್ರೆ ಹೇಗೆ ಸ್ವಾಮಿ? ಹೋದಲ್ಲಿ ಬಂದಲ್ಲೆಲ್ಲಾ ನೀವು ಹೇಳಬೇಕು, ಕನ್ನಡಿಗರ ಸಂಖ್ಯೆ 70%ಕ್ಕಿಂತಾ ಹೆಚ್ಚಿದೆ. ತಲತಲಾಂತರದಿಂದ ಇಲ್ಲಿ ನೆಲಿಸಿರೋ-ಕನ್ನಡವನ್ನು ಒಪ್ಪಿಕೊಂಡಿರೋ-ಪರಭಾಷಿಕರೆಲ್ಲಾ ಕನ್ನಡಿಗರೇ ಅಂತ!!
ಭಾಷಾಸೂತ್ರದ ಗೊಂದಲ ಬಿಟ್ಟುಬಿಡಿ!
ಮತ್ತೊಂದೆಡೆ ತಮ್ಮ ಮಾತಿನ ನಡುವೆ ಚಂದ್ರು ಅವ್ರು 52 ತಾಲೂಕುಗಳಲ್ಲಿ ದ್ವಿಭಾಷಾ ಸೂತ್ರವಿದೆ, ಅಲ್ಲೆಲ್ಲಾ ತ್ರಿಭಾಷಾ ಸೂತ್ರ ಬರಬೇಕು ಅಂದಿದಾರೆ. ಚಂದ್ರು ಅವ್ರೇ, ಯಾವ ಎರಡು ಭಾಷೆಗಳು ಇವೆ? ಯಾವ ಮೂರು ಇರಬೇಕು ಅಂತೀದೀರಾ? ಅಂತಾ ಆ ವರದಿಯಲ್ಲಿ ಸ್ಪಷ್ಟವಾಗಿಲ್ಲದಿದ್ರೂ ಕನ್ನಡ, ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳೇ ಆ ಮೂರುನುಡಿಗಳು ತಾನೇ? ನಿಮಗ್ಯಾಕೆ ಸ್ವಾಮಿ, ಹಿಂದಿಯನ್ನು ಕನ್ನಡನಾಡಿನ ಆಡಳಿತ ಭಾಷೆಯಾಗಿ ಸ್ಥಾಪಿಸೋ ಬುದ್ಧಿ? ನಮ್ಮ ಜನರ ಬದುಕನ್ನೇ ಕಿತ್ಕೋಳಕ್ ಮುಂದಾಗಿರೋ ಅನಿಯಂತ್ರಿತ ವಲಸೆ, ಹಿಂದಿ ಕಡ್ಡಾಯ ಮಾಡಿರೋ ಬ್ಯಾಂಕ್ ಕೆಲಸಗಳು, ರೇಲ್ವೇ ನೇಮಕಾತಿಗಳು ಹುಟ್ಟುಹಾಕಿರೋ ಸಮಸ್ಯೆಗಳನ್ನು ಕಂಡಮೇಲೂ ನಿಮಗೆ ತ್ರಿಭಾಷಾ ಸೂತ್ರದ ಬಗ್ಗೆ ಭರವಸೆ ಉಳಿದಿದೆಯೇ? ಕನ್ನಡಿಗರ ಅನುಕೂಲಕ್ಕಾಗಿ ಕನ್ನಡವೂ, ಪಾಪಾ ಅಂತ ಉಳಿದವರ ಅನುಕೂಲಕ್ಕಾಗಿ ಇಂಗ್ಲೀಷೂ ಇದ್ರೆ ಸಾಲದಾ ಸ್ವಾಮಿ? ’ತಾವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರೋ? ಹಿಂದಿ ಪ್ರಚಾರ ಸಭಾದವರೋ?’ ಅಂತಾ ಜನ ಮಾತಾಡ್ಕೊಳ್ಳೋ ಹಾಗೆ ನಡ್ಕೋಬೇಡಿ. "ನೋಡುದ್ರಾ ಗುರುಗಳೇ? ಹ್ಯಾಗೇ ನಮ್ಮ ನಾಡನ್ನಾಳೋ ಜನರ ಮಾತುಗಳಲ್ಲೇ ನಾಡಿನ ಬಗ್ಗೆ, ನುಡಿಯ ಬಗ್ಗೆ ಸುಳ್ಳರಿಮೆ ತುಂಬಿ ತುಳುಕಾಡ್ತಿದೆ" ಅಂತಾ ಜನಾ ಮಾತಾಡೋ ಹಾಗೆ ಮಾಡ್ಕೋಬೇಡಿ. ನೀವೇನಂತೀರಾ ಗುರು?
3 ಅನಿಸಿಕೆಗಳು:
Guru mukya mantri (chandru) hindi helikotu central nali jaga huduktidare anisute, avare irodela BJP prema aste, Kannada bashe agli athava kannada jana agli beda
Heegadre henge guru nam kannada uddara aagoduu...inthavarindaane nam janarige tappu maahiti hogoduu.. ond kelsa maadii,, e same letter na mukhyamantri chandru odo haage,, avra manege kalisii.....illa andre nange address kodi naanu swalpa masala haaki kalistini...
ene aadru avaru heliro vishayadalli ondu satyavaada amsha ide. Teluginavaru, Tamilinavaru, Malayaaligalu janaru kelidare taavu Kannadigaru endu helikolluttare. aadre swalpa hottu avara jote iddare avara nijavaada banna bayalaagutte. Ene aadaru avaru horaginavare. Aadre avaralli kelavu janaru maatra Kannadigariginta hecchu Kannada prema ide. Aadare avaru bahala kadime jana. Omme bengalurinalli janaganati maada beku..Aaga satya hora baruttade. Alliya varege Mu. Chandru avara helike athava ee tannaraha baredavara helikeyanna badiyalli ittiruvudu olledu.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!