ಸಿಕ್ಕಾಪಟ್ಟೆ ಮಜಾ,, ಸ್ವಲ್ಪ ಫೀಲಿಂಗ್ಸ್ ಅಂತ ಹೇಳ್ತಾ ಈ ಬೇಸಿಗೆ ರಜೆ ಟೈಮ್ ಅಲ್ಲಿ ಜೋಶ್ ಅನ್ನೋ ಸಿನೆಮಾ ಬಂದಿದೆ ಗುರು. ಇದ್ರಲ್ಲಿ ಹೆಚ್ಚಾಗಿ ಕನ್ನಡದ ಕಲಾವಿದರು, ತಂತ್ರಜ್ಞರನ್ನೇ ಬಳಸಿಕೊಂಡಿದಾರಂತೆ. ಹದಿಹರೆಯದ ಹುಡುಗರ ತಮಾಷೆ, ತಲ್ಲಣಗಳ ಸುತ್ತ ಸ್ವಂತ ಕಥೆ ಹೆಣದು ಮಾಡಿರೋ ಈ ಸಿನೆಮಾ ಈಗ ಸಕತ್ ಸುದ್ದೀಲಿದೆ! ಪತ್ರಿಕೆಗಳಲ್ಲಿ ಇದರ ಬಗ್ಗೆ ಒಳ್ಳೇ ಮೆಚ್ಚುಗೆಯ ಮಾತುಗಳು ಕಂಡುಬರ್ತಾ ಇವೆ.
ಹತ್ತಾರು ವರ್ಷಗಳ ಹಿಂದೆ ಬಂದಂತಹ ಪ್ರೇಮಲೋಕ, ಚೈತ್ರದ ಪ್ರೇಮಾಂಜಲಿ, ನೆನಪಿರಲಿ, ಮುಂಗಾರುಮಳೆ... ಮುಂತಾದ ಚಿತ್ರಗಳೆಲ್ಲಾ ತಾವು ಮಾತ್ರಾ ಯಶಸ್ಸು ಗಳಿಸದೆ, ಇಡೀ ಕನ್ನಡ ಚಿತ್ರರಂಗಕ್ಕೊಂದು ಹೊಸ ತಿರುವು ಮತ್ತು ಚೈತನ್ಯವನ್ನು ತಂದುಕೊಟ್ಟವು. ಇದಕ್ಕೆ ಮೂಲಕಾರಣವೇ ಇವುಗಳಲ್ಲಿನ ಹೊಸತನ. ಕನ್ನಡ ಚಿತ್ರರಂಗ ನಿಜವಾಗ್ಲೂ ಬೆಳೀಬೇಕೂ ಅಂದ್ರೆ ಇಂತಹ ಹೊಸತನದ ರಂಗು ಆಗಾಗ, ಮತ್ತೆಮತ್ತೆ ಹೊಮ್ಮುತ್ತಲೇ ಇರಬೇಕು. ಕಥೆ, ಸಂಗೀತ, ಕಲಾವಿದರ ಆಯ್ಕೆ, ತಾಂತ್ರಿಕತೆ, ಹೀಗೆ ಚಿತ್ರ ನಿರ್ಮಾಣದ ಎಲ್ಲ ಹಂತದಲ್ಲೂ ಹೊಸ ಹೊಸ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ಕೊಡೊ ಪ್ರಯತ್ನಗಳು ನಡೆಯಬೇಕು. ಅಂತಹ ಎಲ್ಲ ಪ್ರಯತ್ನಗಳಿಗೆ ನಮ್ಮ ಜನರು ಉತ್ತೇಜನ ಕೊಡಬೇಕು. ಇಂತಹದೊಂದು ಪ್ರಯತ್ನವನ್ನು ಜೋಶ್ ಮೂಲಕ ಮಾಡಿರೋ ಶಿವಮಣಿ ಮತ್ತವರ ತಂಡಕ್ಕೆ ಅಭಿನಂದನೆ ಹೇಳೋಣ ಹಾಗೂ ಇನ್ನಷ್ಟು ಇಂತಹ ಪ್ರಯತ್ನಗಳು ನಮ್ಮ ಚಿತ್ರರಂಗದಲ್ಲಿ ನಡೆಯಲಿ ಅಂತ ಹಾರೈಸೋಣ. ಏನಂತೀ ಗುರು?

6 ಅನಿಸಿಕೆಗಳು:
ಚಿತ್ರ ನೋಡೋಕೆ ಕೆಲವು ಕಾರಣಗಳು:
* ಚಿತ್ರದ ಪಾತ್ರಗಳಿಗಾಗಿ ಕಲಾವಿದರನ್ನು ಹುಡುಕಲು ನಿರ್ದೇಶಕ ಶಿವಮಣಿ ಸಾಕಷ್ಟು ಶ್ರಮ ಪಟ್ಟಿದ್ದಾರಂತೆ. ಸುಮಾರು 12,000 ಕನ್ನಡದ ಹುಡುಗರ ಸಂದರ್ಶನದ ನಂತರ ಜೋಶ್ ಚಿತ್ರಕ್ಕೆ 6 ಜನ ಚಿಗುರು ಪ್ರತಿಭೆಗಳ ಆಯ್ಕೆ ಮಾಡಿದ್ದಂತೆ.
* ಕರ್ನಾಟಕದ ಅನೇಕ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವುದು.
* ಕನ್ನಡದ ಹೊಸ ಪ್ರತಿಭೆ ವರ್ಧನ್ ಅವರ ಸಂಗೀತ. ಬೆಂಗಳೂರಿನ ಎಫ್.ಎಮ್ ಗಳಲ್ಲಿ ಜೋಶ್ ಚಿತ್ರದ ಹಾಡುಗಳು ಜೋರಾಗೇ ಕೇಳಸ್ತಾ ಇದೆ.
* ಒಳ್ಳೆ ಗುಣಮಟ್ಟ ಕೊಡೋ ಸೂಪರ್ 35 ಕ್ಯಾಮರಾ ಬಳಸಿ ಚಿತ್ರದ ಚಿತ್ರೀಕರಣ ಮಾಡಿರುವುದು.
* ಎಲ್ಲಕ್ಕಿಂತ ಮುಖ್ಯವಾಗಿ, ಕುಟುಂಬದ ಎಲ್ಲರೂ ಕೂಡಿ ಕೂತು ನೋಡೋವಂತ ಒಂದೊಳ್ಳೆ ಸ್ವಂತ ಕಥೆ.
ಏನೇ ಹೇಳು ಗುರು, ಎಂತಹ ಹೊಸತನವಿದ್ರು ಒಂದು ಮಾತ್ರ ನಮ್ಮ ಕನ್ನಡಿಗರು ಬಿಟ್ಟಿಲ್ಲ : ಹಿಂದಿಯ ಅಡಿಆಳುತನ. ಈ ಚಿತ್ರದ ಪೋಸ್ಟರ್ಗಳಲ್ಲಿ "ಕರ್ನಾಟಕದಲೆಲ್ಲ ಜೋಶ್ ಚಿತ್ರ ಜೈ ಹೊ" ಅನ್ನೋದನ್ನು ನೋಡಿ ಬೇಜಾರ್ ಆಯಿತು. ಇನ್ನು ಚಿತ್ರದ ಹೆಸರೇ ಹಿಂದಿ/ಉರ್ದುನಲ್ಲಿದೆ. ಒಂದು ನವಿರಾದ ಕನ್ನಡದ ಹೆಸರು ಸಿಗಲಿಲ್ವಾ... ?. ಯಾವಾಗ ಕನ್ನಡಿಗರಲ್ಲಿ ಸ್ವಾಭಿಮಾನ ಬರುತ್ತೋ ಅನ್ನೋದೇ ದೊಡ್ಡ ಜಿಜ್ಞಾಸೆ.
ಇಂತಿ
ಕ್ಲಾನ್ಗೊರೌಸ್
ಕ್ಲಾನ್ಗೊರೌಸ್ ಅವರೆ,
ನಿಮ್ಮ ಅಭಿಪ್ರಾಯ ಖಂಡಿತಾ ನಿಜ. ಆದ್ರೆ ಆ ಕೊರತೆಯನ್ನ ಪಕ್ಕಕ್ಕಿರಿಸಿ ಚಿತ್ರ ನೋಡೋಣ.
ಒಂದು ಒಳ್ಳೆಯ ಕನ್ನಡ ಚಿತ್ರವನ್ನ ಸದಭಿರುಚಿಯ ಪ್ರಯತ್ನವನ್ನ ಪ್ರೋತ್ಸಾಹಿಸೋಣ.
ಗು. ಹರೀಶ
ತಿಳಿಸಿದ್ದಕ್ಕೆ ಧನ್ಯವಾದ ಸರ್, ಖಂಡಿತ ನೋಡ್ತೀನಿ
ಚಿತ್ರ ಚೆನ್ನಾಗಿದೆ ಗುರೂ, ಒ೦ದು ಹಾಡಿಗೆ ರಮಣೀಯ ಮಡಿಕೇರಿಯಲ್ಲಿ, ಅಬ್ಬಿ ಜಲಪಾತ ಹಾಗು ಕೆಲವು ಸು೦ದರ ಚಾರಣ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ, ತು೦ಬಾ ಚೆನ್ನಾಗಿದೆ. ಹಾಗೆ ಪೋಷಕ ಪಾತ್ರಗಳಿಗೆ ನಮ್ಮ ದಾರವಾಹಿ ನಟರು ಜೀವ ತು೦ಬಿದ್ದಾರೆ. ವರ್ಧನ್ ಸ೦ಗೀತದಲ್ಲಿ ಅವರ ಶ್ರಮ ಎದ್ದು ಕಾಣುತ್ತದೆ, ತು೦ಬಾ ಚೆನ್ನಾಗಿದೆ. ಯವ್ವನದ ಹೊಸ್ತಿಲಲ್ಲಿ ಇರುವ ಹುಡುಗ್ರು/ಹುಡ್ಗಿರು ಮತ್ತು ಎಲ್ಲ ತ೦ದೆ, ತಾಯಿ/ಪೋಷಕರಿಗೆ ಈ ಚಿತ್ರ ಒಳ್ಳೆ ಸ೦ದೇಶ ಕೊಡುತ್ತೆ ’ ಜೀವನ ಮೊದಲು ಲವ್ ಆಮೇಲೆ’ ಅ೦ತಾ!
ಸುನೀತಾ/ಹರೀಶ ಅವರೇ,
ನೀವು ಹೇಳೋದು ನಿಜ.. ಒಂದು ಒಳ್ಳೆ ಚಿತ್ರ ನ ಪ್ರೋತ್ಸಾಹಿಸಬೇಕು... ಆದರೆ ಯಾವುದೇ ಚಿತ್ರ/ಹಾಡು ಗಳಲ್ಲಿ.. ನಮ್ಮತನ ಬಿಟ್ಟು ಬೇರೆ ಭಾಷೆಗಳಿಗೆ ಮಣೆ ಹಾಕೊರ್ನ ಖಂಡಿಸಬೇಕು ಅನ್ನೋದು ಒಬ್ಬೊಬ್ಬ ಕನ್ನಡಿಗನು ಮಾಡಬೇಕಾದ ಕರ್ತವ್ಯ ಅಲ್ಲವೇ.. ? ಇತರೆ ಭಾಷೆಗಳ ಚಿತ್ರ/ಹಾಡುಗಳಲ್ಲಿ ಎಷ್ಟು ಕನ್ನಡ ಉಪಯೋಗ್ಸ್ತಾರೆ ನೀವೇ ಹೇಳಿ ?. ಬಿರುಗಾಳಿ ಅನ್ನೋ ಚಿತ್ರದಲ್ಲಿ... ಒಂದು ಹಾಡಲ್ಲಿ ಹಿಂದಿ ಚಿತ್ರಗಳ ಪೋಸ್ಟರ್ ಗಳನ್ನ ಹಿಂಬದಿಯಲ್ಲಿ ಉಪ್ಯೋಗ್ಸಿದ್ದಾರೆ... ಯಾಕೆ ಕನ್ನಡ ಸಿನೆಮಾಗಳ ಪೋಸ್ಟರ್ಗಳನ್ನ ಉಪಯೋಗ್ಸಕ್ಕೆ ಅವಮಾನ ನ.. ?. ಇನ್ನು ಎಸ್ಟೋ ಹಾಡುಗಳಲ್ಲಿ ಹಿಂದಿ/ಇತರ ಭಾಷೆಗಳ ಪದಗಳನ್ನ ಉಪ್ಯೋಗ್ಸ್ತಾರೆ..?. ಯಾಕೆ ಪೂರ್ತಿ ಕನ್ನಡ ದಲ್ಲಿ ಹಾಡುಗಳನ್ನ ಬರ್ಯೋದು ಕಷ್ಟ ನ ?. ಕನ್ನಡಿಗರಿಗೆ ಕನ್ನಡ ಮೊದಲಾಗಬೇಕು.. ಆದರೆ ಯಾಕೋ ಕನ್ನಡಿಗರು ಮಾತ್ರ ವಿಶ್ವ ಮಾನವತ್ವ ತೋರ್ಸ್ತಾರೆ....
ಇಂತಿ
ಕ್ಲಾನ್ಗೊರೌಸ್
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!