ರೈಲು ಮಂತ್ರಿಗಳಿಂದ ‘ರೈಲ್ವೇಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ’ ಅನ್ನೋ ರೈಲು!

ಮೊನ್ನೆ ಮೊನ್ನೆಯಷ್ಟೇ ರೈಲ್ವೇ ರಾಜ್ಯ ಸಚಿವರಾಗಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಶ್ರೀ ಮುನಿಯಪ್ಪನವರು ರಾಜ್ಯಕ್ಕೆ ಮುಂದಿನ ರೈಲು ಬಜೆಟ್ಟಲ್ಲಿ ಒಳ್ಳೊಳ್ಳೇ ಕೊಡುಗೆ ಕೊಡಲಾಗುವುದು ಅನ್ನೋ ಭರವಸೆ ನೀಡಿದಾರೆ ಅನ್ನೋ ಸುದ್ದಿ 01.06.2009ರ ವಿಜಯ ಕರ್ನಾಟಕದ 5ನೇ ಪುಟದಲ್ಲಿ ಪ್ರಕಟವಾಗಿದೆ. ಭಾಳಾ ಸಂತೋಷ. ಆದ್ರೆ ಹಾಗನ್ನೋದ್ರು ಜೊತೇಲೆ, ಇದುವರೆಗೂ ಕರ್ನಾಟಕಕ್ಕೆ ರೈಲ್ವೇಯಲ್ಲಿ ಯಾವ ತೆರನಾದ ಅನ್ಯಾಯವೂ ಆಗಿಲ್ಲಾ ಅಂತ ಅಂದಿರೋದು ನೋಡುದ್ರೆ, ಇವರು ಕೊಟ್ಟಿರೋ ಹೊಸ ಭರವಸೆ ಬಗ್ಗೇನೂ ಅನುಮಾನ ಹುಟ್ಟುತ್ತೆ ಗುರೂ!

ಮಂತ್ರಿಗಳು ‘ಆಯಾ ಪ್ರದೇಶದ ಜನಸಂಖ್ಯೆ ಮತ್ತು ಇತರೆ (ಇತರೆ ಅಂದ್ರೆ ಯಾವ್ಯಾವ್ದು ಅಂತ ಮಂತ್ರಿಗಳು ಹೇಳಿಲ್ಲಾರೀ...) ಅಂಶಗಳ ಅನುಪಾತದ ಆಧಾರದ ಮೇಲೆ ರೈಲ್ವೇ ಯೋಜನೆಗಳನ್ನು ಮಂಜೂರು ಮಾಡಲಾಗುತ್ತೆ, ಆ ಲೆಕ್ಕದಲ್ಲಿ ರೈಲ್ವೇ ಯೋಜನೆಗಳ ವಿಷ್ಯದಲ್ಲಿ ಕನ್ನಡನಾಡಿಗೆ ಯಾವುದೇ ಅನ್ಯಾಯ ಆಗೇ ಇಲ್ಲ’ ಅಂತ ಹೇಳೋ ಮೂಲಕ ಮುಂದಿನ 5 ವರ್ಷದ ಅವಧಿಯಲ್ಲಿ ಅವರ ಆಳ್ವಿಕೆಯಲ್ಲಿ ಕರ್ನಾಟಕಕ್ಕೆ ರೈಲ್ವೇ ವಿಷ್ಯದಲ್ಲಿ ಎಷ್ಟು ನ್ಯಾಯ ಸಿಗಬಹುದು ಅನ್ನೋದರ ಸುಳಿವು ಕೊಟ್ಟಿದ್ದಾರೆ ಗುರು!


ಮಂತ್ರಿಗಳೇ ಇದೆಲ್ಲಾ ಏನು?


ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ ಅಂತ ಕನ್ನಡಿಗರೆಲ್ಲ ಮೂಗಿನ ಮೇಲೆ ಬೆರಳಿಡೋ ತರಹ ಮಾಡಿರೋ ಮಾನ್ಯ ಸಚಿವರು ಒಸಿ ಈ ಕಡೆ ಗಮನ ಹರಿಸಿದ್ರೆ ನಾಡಿಗೆ ಒಳ್ಳೇದು ಗುರು! ಜನಸಂಖ್ಯೆ ದೃಷ್ಟಿಯಿಂದ ನೋಡುದ್ರೆ ತಮಿಳುನಾಡು ನಮಗಿಂತಾ (ಕರ್ನಾಟಕ : 5.28 ಕೋಟಿ, ತಮಿಳುನಾಡು : 6.24 ಕೋಟಿ, ಜಾರ್ಖಂಡ್ : 2.69 ಕೋಟಿ) 18% ಜಾಸ್ತಿ ಜನಸಂಖ್ಯೆ ಹೊಂದಿದ್ದಾಗ್ಯೂ ಯೋಜನೆಗಳ ವಿಷಯದಲ್ಲಿ ನಮಗಿಂತಾ ಮೂರುಪಟ್ಟು - ನಾಲ್ಕುಪಟ್ಟು ಹೆಚ್ಚು ಪಡ್ಕೊಂಡಿರೋದು ಯಾವ ಅನುಪಾತದ ಆಧಾರದ ಮೇಲೆ ಮಂತ್ರಿಗಳೇ? ಅಂತಾ ಕರ್ನಾಟಕದ ಜನ ಕೇಳಿದ್ದು ಅವ್ರ್ ಕಿವಿಗೆ ಬಿದ್ದಂಗಿಲ್ಲ...
- ಕರ್ನಾಟಕದ ಒಟ್ಟು ರೈಲು ಮಾರ್ಗಗಳ ಉದ್ದ : 2974 ಕಿಮೀ. ಅದೇ ನಮ್ಮ ನಾಡಿನ 2/3ರಷ್ಟಿರೋ ತಮಿಳುನಾಡಲ್ಲಿ 4188 ಕಿಮೀ, ನಮ್ಮ ಅರ್ಧದಷ್ಟಿರೋ ಬಿಹಾರದಲ್ಲಿ 3441 ಕಿಮೀ ಇರೋದು ಯಾವ ಅನುಪಾತದಲ್ಲಿ?
- ಕರ್ನಾಟಕದಲ್ಲಿ ಬರೀ 104 ಕಿಮೀ ರೈಲುಮಾರ್ಗ ವಿದ್ಯುತ್ ಮಾರ್ಗವಾಗಿದೆ. ಅಂದ್ರೆ ಶೇಕಡಾ 3 ರಷ್ಟು ಮಾತ್ರಾ. ಅದೇ ತಮಿಳುನಾಡಲ್ಲಿ ಶೇಕಡಾ 23, ಜಾರ್ಖಂಡಿನಲ್ಲಿ ಶೇಕಡಾ 97.. ಒಟ್ಟು ಭಾರತದ 16,000 ಕಿಮೀ ಉದ್ದವಿರೋ ವಿದ್ಯುತ್ ಮಾರ್ಗದಲ್ಲಿ ಕರ್ನಾಟಕದ ಪಾಲು ಬರೀ 0.65% ಮಾತ್ರಾ ಯಾಕೆ?
- ಕರ್ನಾಟಕದಲ್ಲಿ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಎಷ್ಟು ರೈಲುಗಳಿವೆ?
- ಕೊಡಗಲ್ಲಿ ಇನ್ನೂ ರೈಲು ಹಳಿ ಯಾಕಿಲ್ಲ?
- ಬೆಂಗಳೂರು ಮೈಸೂರು ನಡುವೆ ಜೋಡಿ ಮಾರ್ಗ ಯಾವಾಗ? ಅದೇನು ಲಾಭದಾಯಕವಾದ ಮಾರ್ಗವಲ್ಲವೇ?
- ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಜೀವ ತುಂಬಬಲ್ಲ ಶಕ್ತಿ ಇರೋ, ಹೆಚ್ಚು ಕಮ್ಮಿ ನೂರು ವರ್ಷದಿಂದ ಅನುಷ್ಠಾನಕ್ಕೆ ಕಾಯ್ತಿರೋ ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಯಾಕೆ ಇನ್ನೂ ನೂರು ವರ್ಷದಲ್ಲಿ ಒಂದಿಂಚು ಮುಂದೆ ಹೋಗಿಲ್ಲ?
- ಯಾಕೆ ರಾಜ್ಯದ ಬಂದರು ನಗರಿ ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಭರ್ತಿ 11 ವರ್ಷಗಳೇ ಬೇಕಾಯ್ತು? ಇವತ್ತಿಗೂ ಮಂಗಳೂರು-ಬೆಂಗಳೂರಿನ ನಡುವೆ ಕೇವಲ ಒಂದೇ ಒಂದು ರೈಲಿನ ಸಂಪರ್ಕವಿದೆ, ಇಷ್ಟು ಸಾಕೇ?
- ರಾಜ್ಯಕ್ಕೆ ಕಳೆದ ಒಂದೆರಡು ದಶಕಗಳಲ್ಲಿ ಕೊಡಮಾಡಲಾಗಿರೋರೈಲುಗಳಲ್ಲಿ ಹೆಚ್ಚಿನವು ಹೊರರಾಜ್ಯಗಳಿಗೆ ಹೋಗಿ ಬರೋ ಅಂಥವೇ, ಯಾಕೆ? ರಾಜ್ಯಕ್ಕೆ ಇನ್ನಷ್ಟು ವಲಸೆ ಮಾಡಿಸೋದು ಇದರ ಹಿಂದಿನ ಉದ್ದೇಶವೇ?
- ಹೊಸ ರೈಲ್ವೇ ವಲಯಗಳನ್ನು ಮಾಡಿದ ಉದ್ದೇಶವೇ ಆ ವಲಯದ ಸ್ಥಳೀಯರಿಗೆ ರೈಲ್ವೇ ಉದ್ಯೋಗದಲ್ಲಿ ಹೆಚ್ಚಿನ ಪಾಲು ಸಿಕ್ಕಲಿ, ಆ ಭಾಗದ ಜನರ ಆದಾಯ ಹೆಚ್ಚಲಿ ಅನ್ನೋ ಕಾರಣಕ್ಕೆ, ಆದ್ರೆ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೇ ವಲಯದಲ್ಲಿ ಯಾಕೆ ಇದ್ಯಾವುದೂ ಆಗಿಲ್ಲ? ಯಾಕೆ ಡಿ - ದರ್ಜೆ ಹುದ್ದೇಗೂ ಬಿಹಾರಿಂದ ಜನನ್ನ ಕರೆತರಲಾಯಿತು?


ಅಷ್ಟ್ಯಾಕೆ? ಇವತ್ತಿಗೂ ಬೆಂಗಳೂರಿನಿಂದ ಬಾಗಲಕೋಟೆಯಂತಹ ಊರಿಗೆ ಹೋಗಲು 15-19 ಗಂಟೆಗಳ ಕಾಲ ರೈಲುಪ್ರಯಾಣ ಮಾಡುವ ಪರಿಸ್ಥಿತಿ ಇದೆ. ಬಸ್ಸಿನಲ್ಲಿ ಕೇವಲ 8-9 ಗಂಟೆಗಳಲ್ಲಿ ಸಾಗಿಸುವ ಈ ಹಾದಿ ರೈಲಿನಲ್ಲಿ ಇಷ್ಟು ತಡ ಆಗಲು ಕಾರಣವೇ ಈ ರೈಲುಗಳು ಅಂಧ್ರದಲ್ಲೆಲ್ಲಾ ಸುತ್ತಾಡಿ ಕರ್ನಾಟಕಕ್ಕೆ ಬರೋದ್ರಿಂದ. ಕರ್ನಾಟಕದಲ್ಲಿ ಸರಿಯಾದ ರೈಲ್ವೇ ಸಂಪರ್ಕಜಾಲ ಇಲ್ಲದೇ ಇರೋದೇ ಇದಕ್ಕೆಲ್ಲ ಕಾರಣವಲ್ಲವೇ? ನಾವೆಲ್ಲಾ ಇದುವರೆಗೂ ಆಗಿರೋದು ಅನ್ಯಾಯಾನೆ ಅಂದ್ಕೊಂಡಿದ್ವಿ. ಆದ್ರೂ ಮಾನ್ಯ ಮಂತ್ರಿಗಳು ಅನ್ಯಾಯಾನೇ ಆಗಿಲ್ಲಾ ಅಂತ ಹೇಳುದ್ಮೇಲೆ ಸುಮ್ನೆ ನಾವೂ ನೀವು ಬಾಯ್ಮುಚ್ಕೋಂಡು ಒಪ್ಕೋಬೇಕಪ್ಪಾ... ಅಲ್ವಾ ಗುರು!

6 ಅನಿಸಿಕೆಗಳು:

Devaraju ಅಂತಾರೆ...

ನಮ್ಮ ಹಿಂದಿನ ಸಂಸದರು ಒಂಚೂರು ಒಗ್ಗಟ್ಟಿನಿಂದ ಬಡ್ಜೆಟ್ ಮಂಡಿಸುವಾಗ ಆಗಬಹುದಾದ ಅನ್ಯಾಯ ತಡೆಯಬಹುದಗಿತ್ತು ಆದರೆ, ಅದರ ಬಗ್ಗೆ ಯಾರು ತಲೆ ಕೆಡಿಸ್ಕೊಂಡಿರಲಿಲ್ಲ. ಹೀಗಾಗಿ ನಮ್ಮ ರಾಜ್ಯಕ್ಕೆ ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದವು ಎಂದರೆ ಸಂಶಯವಿಲ್ಲ...
ಇನ್ನಾದರು ನಮ್ಮ ಮುನಿಯಪ್ಪನವರು ಬಾಕಿ ಇರುವ ರೈಲ್ವೆ ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತಾರೆಂಬ ನಂಬಿಕೆ ಇದೆ...ಮುಂದಿನ ನಮ್ಮ ಮಮತಾಜಿ ರೈಲ್ವೆ ಬಡ್ಜೆಟ್ ಮಂಡಿಸುವಾಗ ನಮ್ಮ ಸಂಸದರು ಯಾವ ರೀತಿಯಲ್ಲಿ ಪ್ರತಿಭಟಿಸುತ್ತಾರೆ ಎಂದು ಕಾದು ನೋಡೋಣ..

ಇಂತಿ,
ದೇವರಾಜು

Datta ಅಂತಾರೆ...

bahaLa oLLe lekhana! ee aMshagaLanna railway mantrigaLige muttisuvudu hege?

innondu aMsha enandre bengaloorininda mumbaige hoguva railugaLu andhrada mele hogatve, adyako nanaggottilla.

Anonymous ಅಂತಾರೆ...

ಈ ಮನುಷ್ಯನಿಗೆ ಕನ್ನಡದಲ್ಲಿ ಆಣೆ ಮಾಡೋಕ್ಕೆ ಕೀಳರಿಮೆ. ಇವರಿಂದ ಏನು ತಾನೆ ನಿರೀಕ್ಷೆ ಮಾಡಬಹುದು.
ಕನ್ನಡ ದ್ರೋಹಿ . ತಿಂದ ಮನೆಗೆ ಎರಡು ಬಗೆಯೋರು. ಕೋಲಾರದ ಜನಕ್ಕೆ ಬುದ್ಧಿ ಇಲ್ಲ. ಕನ್ನಡಿಗರಿಗೆ ಬುದ್ಧಿ ಇಲ್ಲ ಅಷ್ಟೆ

- ತಿಮ್ಮಣ್ಣ

Unknown ಅಂತಾರೆ...

Previously when he was road minister he sanctioned 19.5 k crores to tamilnadu while just 3.5 k crores to karnataka

Nandisha ಅಂತಾರೆ...

ಇದನ್ನ direct ಆಗಿ ಮುನಿಯಪ್ಪ ಅವರಿಗೆ ಕಲಿಸಿದರೆ ತುಂಬ ಒಳ್ಳೇದು ಅನಿಸುತೆ. ಏನಂತಿರ?
- ನಂದೀಶ

Anonymous ಅಂತಾರೆ...

navu eege idre enu agala guru.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails