“ಅಣ್ಣದೀರಾ! ನಿಮ್ಮ ಭಾಷೇನಾ ನೀವು ಮನೇಲಿ ಬಳುಸ್ಕೊಳ್ಳಿ, ಬೆಳುಸ್ಕೊಳ್ಳಿ… ಆದ್ರೆ ಸರ್ಕಾರದ, ಸಮಾಜದ ಜೊತೆಗಿನ ವ್ಯವಹಾರಾನ್ನೆಲ್ಲಾ ನಮ್ ಭಾಷೇಲಿ ಮಾಡಿ. ಯಾಕಂದ್ರೆ ಭಾರತದಲ್ಲಿ ಒಗ್ಗಟ್ಟು ಹೆಚ್ಚಬೇಕು, ಭಾರತ ದೇಶದ ಎಲ್ಲಾ ಪ್ರಜೆಗಳ್ಗೂ ಅರ್ತ ಆಗೋಕೆ ನಮ್ ಭಾಷೇನೆ ಬಳುಸ್ಬೇಕು. ಇದೇ ಕಾರಣಕ್ಕೆ ನೀವು ನಮ್ ಭಾಷೇನ ಕಲೀಬೇಕು, ಇಲ್ದಿದ್ರೆ ಭಾರತದಲ್ ಇರಕ್ ನಾಲಾಯಕ್ಕು. ಇದುನ್ ಬ್ಯಾಡಾ ಅಂದ್ರೆ, ವಿರೋಧಾ ಮಾಡುದ್ರೆ, ಇದುನ್ ಕಲೀದೆ ಹೋದ್ರೆ ನೀವು ದೇಶದ್ರೋಹಿಗಳಾಗ್ತೀರಾ, ಇದುನ್ ಒಪ್ಪಿ ಕಲಿತರೆ ನಿಮಗೆ ದೇಶಪ್ರೇಮ ಇದೆ ಅಂತಾ ಅರ್ತ” ಅನ್ನೋ ಮಾತುನ್ನ ಏನಂತಾ ಕರೀತೀರಾ? ಈ ಮಾತಿಗೆ ಮರುಳಾದ್ರೆ ನಮ್ಮ ಗುಂಡೀನಾ ನಾವೇ ತೋಡ್ಕೊಂಡಂಗ್ ಆಗಲ್ವಾ ಗುರು?
ದೇಶಪ್ರೇಮ ಮತ್ತು ಹಿಂದಿ!
ನೀವು ಹಿಂದೀ ಕಲೀದಿದ್ರೆ ನಿಮಗೆ ದೇಶಪ್ರೇಮ ಇಲ್ಲಾ ಅನ್ನೋ ಮಾತಾಡೋರು ತಿಳ್ಕೊಬೇಕಾದ್ದು ಒಂದಿದೆ. ಯಾವುದೇ ವ್ಯಕ್ತಿ ತನ್ನಂತಾನೆ ಹಿಂದಿ ಕಲೀಬಾರ್ದು, ಅಸ್ಸಾಮೀಸ್ ಕಲೀಬಾರ್ದು ಅಂತನ್ನೋ ಮಾತೇ ಆಡ್ತಿಲ್ಲ. ನಮ್ಮ ಜನರನ್ನು ಕಾಪಾಡಬೇಕಾದ ಭಾರತ ಸರ್ಕಾರಾನೇ ಹಿಂದೀನ ಕಲೀದಿದ್ರೆ ನಿಮಗೆ ನೀರಿಲ್ಲ, ನೆರಳಿಲ್ಲ ಅನ್ನೋ ಧೋರಣೆ ಹೊಂದಿರೋದು ಸರಿಯಲ್ಲ ಅಂತಿದೀವಿ. ಹಿಂದೀ ಹೇರಿಕೆಯ ಇಂಥಾ ಪರಿಸ್ಥಿತಿ ಹುಟ್ಟುಹಾಕಕ್ಕೆ ನಾವೇ ಆರಿಸೋ ಸರ್ಕಾರ ಮುಂದಾಗೋದ್ರ ಅರ್ಥ ಇದು ನಮ್ಮ ಸರ್ಕಾರ ಅಲ್ಲಾ, ನಮ್ಮತನಾನ ಅಳಿಸಲು ಮುಂದಾಗಿರೋ ಸರ್ಕಾರ ಅಂತಾ ಅಲ್ವಾ? ಹಾಗೂ ನಾವೆಲ್ಲಾ ಹಿಂದೀನ ಕಲುತ್ರೆ ಮಾತ್ರಾ ದೇಶಪ್ರೇಮಿಗಳಾ? ಹಿಂದಿ ಭಾಷೆಯ ಗಂಧ ಗಾಳಿ ಇಲ್ಲದಿದ್ದ ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಶಿವಪುರದ ಸತ್ಯಾಗ್ರಹಿಗಳು, ವಿದುರಾಶ್ವತ್ಥದ ಗೋಲೀಬಾರಿನಲ್ಲಿ ಜೀವ ತೆತ್ತವರು… ಇವರೆಲ್ಲಾ ಹಾಗಾದ್ರೆ ದೇಶದ್ರೋಹಿಗಳಾ? ಅಥವಾ ಇವರೆಲ್ಲಾ ಹಿಂದೀ ಕಲಿತು ದೇಶಪ್ರೇಮ ಬರುಸ್ಕೊಂಡ್ರಾ? ಹಿಂದಿ ಕಲಿಕೆಗೂ ದೇಶಭಕ್ತಿಗೂ ತಳುಕು ಹಾಕೋದು ಅಂದ್ರೆ ಇದು ನಮ್ಮೊಳಗಿರೋ ಭಾರತದ ಬಗೆಗಿನ ಶ್ರದ್ಧೆ ನಿಷ್ಠೇನಾ ಸಾಣೆ ಹಿಡೀತೀವಿ ಅನ್ನುತ್ತ ತಮ್ಮ ಬೇಳೆ ಬೇಯುಸ್ಕೊಳಕ್ಕೆ ಹಿಂದಿ ಪ್ರದೇಶದ ಜನರು ಹೂಡಿರೋ ತಂತ್ರಾ ಅನ್ಸಲ್ವಾ ಗುರು? ಇಷ್ಟಕ್ಕೂ ಈ ಥರಾ ನಾವೆಲ್ಲಾ ಹಿಂದಿ ಕಲುತ್ರೆ ಭಾರತಕ್ಕೆ ಏನು ಲಾಭ ಅಂತಾ ನೋಡೋಣ ಬಾ ಗುರು!!
ಸಂಪರ್ಕ ಭಾಷೆ ಹಿಂದಿ ಆದ್ರೇನಾಗುತ್ತೆ ಗೊತ್ತಾ?
“ನೀವು ಕರ್ನಾಟಕದಿಂದ ಹೊರಗ್ ಬಂದು ನೋಡಿ, ಅಲ್ಲಿನ ಊರುಗಳಿಗೆ ಹೋದಾಗ ಯಾವ ಭಾಷೆ ಮಾತಾಡ್ತೀರಿ? ಎಷ್ಟೂ ಅಂತಾ ಭಾಷೆಗಳನ್ನು ಕಲೀತೀರಿ? ಅಧಿಕೃತವಾಗೇ 22 ಭಾಷೆಗಳಿವೆ, ಅವೆಲ್ಲಾ ಕಲಿಯಕ್ ಆಗುತ್ತಾ? ಅದರ ಬದಲಾಗಿ ಒಂದು ಭಾಷೆಯಾಗಿ ಹೆಚ್ಚು ಜನಕ್ ತಿಳಿದಿರೋ ಹಿಂದೀ ಬಳಸೋದು ಒಳ್ಳೇದಲ್ವಾ?” ಅಂತ ಹಿಂದಿ ಬೇಕೆನ್ನೋ ಗೆಳೆಯರು ವಾದಿಸೋದನ್ನು ನಾವೂ ನೀವೂ ಕೇಳೇ ಇರ್ತೀವಿ. ಈಗ ಒಂದು ಕಡೆಯಿಂದ ನಾವು ಹೀಗ್ ಮಾಡೋದ್ರು ಪರಿಣಾಮ ಏನಾದೀತು ಅಂತ ನೋಡೋಣ. ನಮ್ಮ ಕನ್ನಡನಾಡಿನ ಒಂದು ಊರಿಗೆ (ಉದಾಹರಣೆಗೆ ಶಿವಮೊಗ್ಗಾ ಅಂದ್ಕೊಳ್ಳಿ) ಭಾರತದ ಬೇರೆ ಬೇರೆ ಮೂಲೆಗಳಿಂದ ತಮಿಳ್ರು, ತೆಲುಗ್ರು, ಗುಜರಾತಿಗಳೂ, ಪಂಜಾಬಿಗಳೂ, ಅಸ್ಸಾಮಿಗಳೂ, ಬೆಂಗಾಲಿಗಳೂ, ಒರಿಯಾದವರೂ… ಅವ್ರೂ ಇವ್ರೂ ಎಲ್ಲಾ ಬರ್ತಾರೆ. ಇವರೆಲ್ಲಾ ಯಾಕೆ ಬರ್ತಾರೆ ಅಂದ್ರೆ ಅಲ್ಲಿಗೆ ಹೊಸ ಹೊಸ ಉದ್ದಿಮೆಗಳನ್ನು ತರೋ ಮೂಲಕ ನಮ್ಮ ಯಡ್ಯೂರಪ್ಪನೋರು ಉದ್ಯೋಗಾವಕಾಶಗಳನ್ನು ಹೆಚ್ಚಿಸಿದ್ರು ಅಂತಾನೆ ಇಟ್ಕೊಳ್ಳಿ. ಇವರೆಲ್ಲಾ ನಮ್ಮ ಘನಸರ್ಕಾರದ ಮತ್ತು ಹಿಂದೀವಾದಿಗಳ ಆಶಯದಂತೆ ಹಿಂದಿಯನ್ನು ಕಲಿತೇ ಬರ್ತಾರೆ ಅಂದುಕೊಳ್ಳೋಣ. ಈಗ ಇವರ ಜೊತೆ ವ್ಯವಹರಿಸಬೇಕಾಗಿರೋ ನಮ್ಮೂರಿನ ಆಟೊದವ್ರು, ಬಸ್ಸಿನವ್ರು, ತರಕಾರಿಯೋರು, ಮನೆಕೆಲ್ಸದೋರು, ದಿನಸಿ ಅಂಗಡಿಯೋರು, ಮಾಲ್ಗಳೋರು, ನಗರಪಾಲಿಕೆಯೋರು, ತೆರಿಗೆ ಇಲಾಖೆಯೋರು, ರಾಜ್ಯಸರ್ಕಾರದೋರು ಎಲ್ಲಾ ಹಿಂದೀಲಿ ತಾನೇ ವ್ಯವಹರಿಸಬೇಕು? ಅಷ್ಟೇ ಅಲ್ಲಾ, ನೀರಿನ ಬಿಲ್ಲಿಂದ ಹಿಡ್ದು ಜಾಹೀರಾತು ಫಲಕಗಳ ತನಕ ಎಲ್ಲಾದ್ರಲ್ಲೂ, ಇವರೆಲ್ಲಾ ಕಲಿತು ಬಂದಿರೋ ಹಿಂದೀ ತಾನೇ ಇರಬೇಕಾದ್ದು? ಪಕ್ಕದ ಗಾಜನೂರಿನ ಗಂಡು, ಓದು ತಲೆಗೆ ಹತ್ತಿಲ್ಲಾ ಅಂತಾ ಶಿವಮೊಗ್ಗಾಕ್ಕೆ ಬಂದು ಏನಾದ್ರೂ ಕೆಲಸ ಹುಡುಕ್ಕೊತೀನ್ ಅಂದ್ರೆ ಆಗುತ್ತಾ? ಆಟೋ ಓಡ್ಸೋದ್ರಿಂದ ಹಿಡ್ದು ಅಂಗಡಿ ಸೇಲ್ಸ್ಬಾಯ್ ಆಗೋಕೂ ಬರೀ ಹಿಂದೀ ಬರಲ್ಲಾ ಅನ್ನೋ ಒಂದು ಕಾರಣಕ್ಕೆ ಅವ ನಾಲಾಯಕ್ಕಾಗಲ್ವಾ? ಇಂಥಾ ಶಿವಮೊಗ್ಗದಲ್ಲಿ ಕನ್ನಡದ ಗತಿ ಏನಾಗಿರುತ್ತೆ? ಕನ್ನಡಿಗರ ಗತಿ ಏನಾಗಿರುತ್ತೆ? ಅಂತಾ ಒಸಿ ಯೋಚ್ಸು ಗುರು… ಕನ್ನಡ ಅನ್ನೋದು ಅಡುಗೆ ಮನೆ ಸೇರ್ಕೊಂಬುಡುತ್ತೆ ಅಂತೀರಾ? ಊಹೂ, ಅದೂ ಆಗಲ್ಲ. ಯಾಕಂದ್ರೆ ಅಷ್ಟು ಹೊತ್ತಿಗೆ ಮಾರ್ಕೆಟ್ನಲ್ಲಿ ಕೊಂಡು ಅಡುಗೆ ಮನೆಗೆ ನಾವು ತಂದಿಡೋದು ಸಬ್ಜಿ., ದಾಲ್, ಚಾವಲ್ ಆಗೋಗಿರುತ್ತಲ್ಲಾ? ಸೌಹಾರ್ದತೆ ಅಂತಾ ನಾವೇನಾದ್ರೂ ಹಿಂದೀನಾ ಒಪ್ಪೋದಾದ್ರೆ ನಮಗಾಗಿ ನಾವೇ ಸರಿಯಾದ ಅಳತೆಯ, ಒಳ್ಳೇ ಶ್ರೀಗಂಧದ ಸೊಗಸಾದ ಶವಪೆಟ್ಟಿಗೆ ಮಾಡ್ಕೊಂಡಂಗೆ ಅಂತಾ ಅನ್ಸಲ್ವಾ ಗುರು?
ಹಿಂದಿ ಬೇಕು ಅನ್ನೋದ್ರು ಹಿಂದಿರೋ ನಿಜಕಾರಣ
“ಕನ್ನಡದ ಮಂಕುಮುಂಡೇವಾ, ಭಾರತದ ಒಗ್ಗಟ್ಟು ಅಂದ್ರೇನು ಗೊತ್ತಾ? ಇಡೀ ಭಾರತದ ಯಾವ ಮೂಲೆಗೆ ಹೋದ್ರೂ ಹಿಂದಿಯೆನ್ನುವ ನಮ್ಮ ಭಾಷೆ ನಡೀಬೇಕು. ಹಿಂದಿ ಮಾತಾಡೋಕೆ ಬರದಿದ್ರೆ ಭಾರತೀಯ ಅಲ್ಲಾ ಅಲ್ವಾ, ಹಾಗಾಗಿ ಹಿಂದಿ ಮಾತಾಡೋರಿಗೆ ಅಂದ್ರೆ ಭಾರತೀಯರಿಗೆ ಭಾರತದ ಯಾವ ಮೂಲೇಲೂ ಕಳ್ಳೇಕಾಯಿ ತೊಗೊಳ್ಳೋಕೂ ಭಾಷಾ ಸಮಸ್ಯೆ ಆಗಬಾರದು. ನೀವು ಚೆನ್ನಾಗಿ ಹಿಂದೀನ ಕಲಿತುಕೊಳ್ಳಿ ಅಂತಾನೆ ರೈಲ್ವೇ ಡಿ ದರ್ಜೆ ಕೆಲಸಗಳ ಥರದ ಕೇಂದ್ರಸರ್ಕಾರದ ಕೆಲಸಗಳು ಬೇಕು ಅನ್ನೋದಾದ್ರೆ ಅರ್ಜೀನಾ ಹಿಂದೀಲಿ ಬರೀರಿ ಅನ್ನೋದು. ಇಲ್ಲಾಂದ್ರೆ ನೀವು ಕೆಲಸ ಮಾಡೋ ರೈಲು ನಿಲ್ದಾಣಕ್ಕೆ ಬರೋ ಭಾರತೀಯರಿಗೆ ತೊಂದರೆ ಆಗಲ್ವಾ? ಇವತ್ತು ನಿಮಗೆ ಅನ್ನ ಕೊಡಕ್ಕೆ ಇಂಗ್ಲೀಷ್ ಇದೆ ಅಂತೀರಾ? ಥೂ… ಅದು ನಮ್ಮನ್ನು ಮುನ್ನೂರು ವರ್ಷ ಗುಲಾಮರನ್ನಾಗಿಸಿದ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಕುರುಹು. ಹೋಗಿ ಹೋಗಿ ಅಷ್ಟು ದೂರದಲ್ಲಿರೋ ಇಂಗ್ಲೀಷ್ ಸೂಜಿಯಿಂದ ಯಾಕೆ ಕಣ್ಣು ಚುಚ್ಕೋತೀರಾ? ಇಗೋ ನೋಡಿ, ನಿಮ್ಮದೇ ದೇಶದ ಹೊಚ್ಚ ಹೊಸ ಚಿನ್ನದ ಸೂಜಿಯಿದೆ, ತಗೊಂಡು ಹೆಟ್ಕೊಳ್ಳಿ” ಅಂತೆಲ್ಲಾ ಹೇಳುದ್ರೆ ಜನಾ ಕೇಳ್ತಾರಾ ಗುರು? ಅದುಕ್ಕೆ ನಿಮ್ಮ ರಾಷ್ಟ್ರಪ್ರೇಮದ ಕುರುಹಾಗಿ, ಭಾರತದ ಒಗ್ಗಟ್ಟಿಗಾಗಿ, ಭಾರತೀಯರೆಲ್ಲರೂ ಒಂದೆಂದು ಸಾರಲಿಕ್ಕಾಗಿ, ಹಿಂದೀ ಎಂಬ ರಾಷ್ಟ್ರೀಯ ಮಟ್ಟದ ಉರುಫ್ ರಾಷ್ಟ್ರೀಯ ಉರುಫ್ ರಾಷ್ಟ್ರಭಾಷೇನಾ (ನೀವು ಸುಮ್ನೆ ಗೊಂದಲ ಮಾಡ್ಕೊಳ್ಳಿ ಅಂತಾ ಅಷ್ಟು ಹೆಸರು) ಒಪ್ಪಿಕೊಳ್ರೋ ಹುಚ್ಚಪ್ಪಗಳಿರಾ ಅಂತಿದಾರೆ ಅನ್ನೋದೇ ದಿಟ ಅಲ್ವಾ ಗುರು?
14 ಅನಿಸಿಕೆಗಳು:
ನಿಜ ಗುರು !
ಹಿಂದಿನ ಒತ್ತಾಯಪೂರ್ವಕ ಹೇರಬಾರದು ಅಂದ್ರೆ, "ರಾಷ್ಟ್ರ ಭಾಷೆ ಕಲೀದೆ, ಇನ್ಯಾವ ಭಾಷೆ ಕಲೀತೀಯ??" ಅಂತ ಉಗ್ದಿದ್ದ ನನ್ನ ಕನ್ನಡಿಗ ಗೆಳೆಯನೊಬ್ಬ. ಕೇಂದ್ರ ಸರಕಾರದ ಹಿಂದಿ ಹೇರಿಕೆ ಕೆಲಸ ಎಷ್ಟರ ಮಟ್ಟಿಗೆ ನಮ್ಮ ಜನರ ಮೇಲೆ ಮಂಕುಬೂದಿ ಎರಚಿದೆ ಅಂತ ಆಗ ಗಾಢವಾಗಿ ಅರ್ಥವಾಯ್ತು.
ಬೋ ಪಸಂದಾಗೈತಿ ಬರಹ,
ಅಷ್ಟೇ ಯಾಕೆ ಗುರು, ೧೮೫೭ ಗೆ ೩೦ ವರ್ಷಗಳ ಹಿಂದೇನೆ, ಅಂದರೆ ೧೮೨೭ರಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಮೊದಲನೇ ಸ್ವಾತಂತ್ರ ಸಮರ ಶುರು ಮಾಡಿದ್ದರು ಅನ್ನೋ ನಿಜಾನೆ ಇತಿಹಾಸ ಹಾಳೆಗಳಿಂದ ಮುಚ್ಚಾಕೊರೆಲ್ಲ, ಇದಕ್ಕಿಂತ ಬೇಕ ಹಿಂದಿಯರ ದೇಶ ಪ್ರೇಮ ?.
ನಿಜ ಗುರು..
ರಾಷ್ಟ್ರ ಭಾಷೆ, ಪ್ರಾಣಿ, ಪಕ್ಷಿ ಅ೦ತಾ ಎಲ್ಲ ಚಿಕ್ಕ ವಯಸ್ಸಲ್ಲೆ ನಮ್ಮ ತಲೆಗೆ ಹುಳ ಬಿಟ್ಟು. ನಮ್ಮತನನ ಮರೆತು ಬಿಡೊ ಹ೦ಗೆ ಮಾಡಿದ್ರಲ್ಲಾ..ಹಾಳಾಗ್ ಹೋಗ್ಲಿ...ತಾವು ತಿಳ್ಕೊ೦ಡಿರೋದು ಸರಿನೊ ತಪ್ಪೋ ಅ೦ತ ಪರಿಶೀಲಿಸೋ ಕೆಲಸ ಮಾಡ್ಕೊಳ್ದೆ ಇವಾಗ್ಲೂ ಶಾಲೆಲಿ ಕಲಿತದ್ದೇ ನಿಜಾ ಅ೦ತಾ ನ೦ಬ್ತಿರೋ ನಮ್ಮ ಕೆಲ ಗೆಳೆಯರ ಬಗ್ಗೆ ಅನುಕ೦ಪ ಮೂಡುತ್ತೆ. ಇದೇ ರೀತಿ ವಿಚಾರಗಳನ್ನು ಮಕ್ಕಳ ತಲೆಗೆ ತು೦ಬಿಸ್ತಾ ಹೋದ್ರೆ...ನಾಳೆ ದಿನ ನಮ್ಮ ಮಕ್ಳ ಕಾಲದಲ್ಲಿ.. ರೋಟಿ, ಪರಾಟ, ದಾಲ್, ಪಾಲಕ್ ಪನ್ನೀರ್ ನಮ್ಮ ರಾಷ್ಟ್ರದ ಆಹಾರ, ಬಿಸಿಬೇಳೆಬಾತ್, ರಾಗಿ ಮುದ್ದೆ, ದೋಸೆ, ಇಡ್ಲಿ ನಮ್ಮ ಮನೆಗಳಲ್ಲಿ ಮಾಡಿದ್ರೆ, ತಿ೦ದರೆ ರಾಷ್ಟ್ರದ ಐಕ್ಯತೆಗೆ ದಕ್ಕೆ ಅ೦ತಾರೆ. ಜಾಗ್ರತೆ!!!
kannada baage prem valleyadu, adaru hindi gyan itkolodu yenu tappalla, hotte padige antha yellaliyo ali bekagutte... avag hini bashe gottidre badakutteve... yavag kelasadd purthek hindi gottidre saaku... adre kannada matra nammalli hasiragi ooliyali...
ಪ್ರದೀಪ ಅವರೇ, ನೀವು ಕನ್ನಡ ಪ್ರೇಮದ ಬಗ್ಗೆ ಮಾತಾಡ್ತಿದೀರಿ. ಹೇಗೆ ಹಿಂದಿ ಹೇರಿಕೆ ಎಲ್ಲ ಭಾಷೆಗಳನ್ನ ಅಂದರೆ ಸಂಸ್ಕೃತಿಯನ್ನು ನುಂಗಿ ಹಾಕುತ್ತಿದೆ, ಯಾಕೆ ನಾವು ಜಾಗೃತರಾಗಬೇಕು ಅಂತ ಏನ್ಗುರು ಬರೆದಿದ್ದಾರೆ. ಇದೆ ಸಿದ್ಧಾಂತವನ್ನ ಕನ್ನಡಕ್ಕೆ ಮಾತ್ರವಲ್ಲದೇ, ಹಿಂದಿಯ ದಬ್ಬಾಳಿಕೆಗೆ ಒಳಗಾಗೋ ಎಲ್ಲ ರಾಜ್ಯಗಳ ಭಾಷೆಗೂ ಅನ್ವಯ ಆಗುವ ಹಾಗೆ ಏನ್ಗುರು ಮಂಡಿಸಿದ್ದಾರೆ ಅಂತಾ ನಿಮಗೆ ಅನ್ಸೋದಿಲ್ವಾ? ಏನ್ಗುರುಗೆ ಎಲ್ಲ ಭಾಷೆಯ ಬಗ್ಗೆ ಇರುವ ಪ್ರೇಮ/ಖಾಳಜಿ/ಗೌರವ ಈ ಲೇಖನದಲ್ಲಿ ವ್ಯಕ್ತವಾಗಿದೆ. ಅದು ನಿಮಗೆ ಕಂಡಿಲ್ಲ ಅಷ್ಟೇ.ಮೇಲಿನ ಏನ್ಗುರು ಬರಹದಲ್ಲಿ ಈ ಸಾಲುಗಳನ್ನು ನೀವು ಸರಿಯಾಗಿ ಓದಿ ನೋಡಿ. ಅರ್ಥ ಆಗುತ್ತೆ.
"ಯಾವುದೇ ವ್ಯಕ್ತಿ ತನ್ನಂತಾನೆ ಹಿಂದಿ ಕಲೀಬಾರ್ದು, ಅಸ್ಸಾಮೀಸ್ ಕಲೀಬಾರ್ದು ಅಂತನ್ನೋ ಮಾತೇ ಆಡ್ತಿಲ್ಲ. ನಮ್ಮ ಜನರನ್ನು ಕಾಪಾಡಬೇಕಾದ ಭಾರತ ಸರ್ಕಾರಾನೇ ಹಿಂದೀನ ಕಲೀದಿದ್ರೆ ನಿಮಗೆ ನೀರಿಲ್ಲ, ನೆರಳಿಲ್ಲ ಅನ್ನೋ ಧೋರಣೆ ಹೊಂದಿರೋದು ಸರಿಯಲ್ಲ ಅಂತಿದೀವಿ"
ಭಾರತ ಸರ್ಕಾರನೇ ಮುಂದು ನಿಂತು ಹಿಂದಿ ಅನ್ನೋ ಒಂದು ಪ್ರಾದೇಶಿಕ ಭಾಷೆಯನ್ನು ಎಲ್ಲ ಭಾರತೀಯರ ಮೇಲೆ ಬಲವಂತವಾಗಿ ಹೇರುವ ಕೆಲಸದ ಉಸ್ತುವಾರಿ ವಹಿಸಿದೆಯಲ್ಲ, ಅದು ತಪ್ಪು ಅಂತ ನಮ್ಮೆಲ್ಲರ ಅನಿಸಿಕೆ.ಅನಿಸಿಕೆ ಏನು ಬಂತು.ಅದು ತಪ್ಪೇ.ನೀವಾಗೇ ನೀವು ಯಾವ ಭಾಷೆನಾದ್ರು ಹೊಟ್ಟೆಪಾಡಿಗೋ ಅಥವಾ ಸುಮ್ಮನೆ ಇರಲಿ ಅಂತನೋ ಕಲೀರಿ. ಆದ್ರೆ ಸರ್ಕಾರವೇ, ಜಾಸ್ತಿ ಜನ ಮಾತಾಡ್ತಾರೆ ಅಂತಾನೋ ಅಥವಾ ಅಧಿಕಾರದಲ್ಲಿರುವರು ಹೆಚ್ಚಾಗಿ ಆ ಭಾಷೆ ಮಾತಾಡೋ ಜನಾನೋ ಅಂತಾನೋ ಎಂದು ಒಂದು ಭಾಷೆನ ಬಲವಂತವಾಗಿ ನಿಮ್ಮ ಮೇಲೆ ಹೇರಿ ಕಲಿಸೋ ಹಾಗಾಗಬಾರದು.
Nijavada vishayagazhannu thizhisikottiddheeri.Ashtakku Hindiye yeke Rashtrabhaashe aagabekendu nirdharisabeku?Ee vishayadalli Tamizharu mathra olleya kelasavannu maadidhaare!Railway nildhanagalinda hididu naama phalakagalavaregu thamma bhaasheyalle baresikondirutthaare!Adake indu avarige Hindiyinda avara bhaashege yaavude aapatthilla.Ee bagge kannadigaru kaliyabeku.Adarallu namma Kannadadavarige Hindiya vyaamoha swalpa hecche!
ಇದು ಹಿಂದಿ ಅಲ್ಲಾ ಗುರು... ಇದು ಹಂದಿ ಯಾಕಂದ್ರೆ..? ಇದು ಹಂದಿ ಜ್ವರದ() ಹಾಗೆ ಹರಡ್ತಾ ಇದೆ... ಇದನ್ನ ಈಗಲೇ ನಾಶ ಮಾಡದಿದ್ರೆ ನಮ್ಮನ್ನೆಲ್ಲ ರೋಗಗ್ರಸ್ಥ ಮಾಡುತ್ತೆ ಗುರು...
ಸ್ವಾಮೀ ಏನ್ಗುರು,
ನಿಮ್ಮ ವಾದ ಸರಣಿ ನೋಡೋವಾಗ ಅಳುವುದೋ ನಗುವುದೋ ಗೊತ್ತಾಗ್ತಿಲ್ಲ.. ನಾನು ತುಳು-ಕನ್ನಡಿಗ.. ನಮ್ಮ ಮಾತೃ ಭಾಷೆ ತುಳು.. ಓದಿರೋದು ಕನ್ನಡ.. ನಮ್ಗೆಲ್ಲ ಶಾಲೆಯಲ್ಲಿ ಹಿಂದಿ ರಾಷ್ಟ್ರ ಭಾಷೆ ಅಂತಾ ಹೇಳ್ಕೊಟ್ಟಿದ್ದಾರೆ.. ಈಗಿನ ಮಕ್ಳಿಗೂ ಹೇಳಿಕೊಡ್ತಾ ಇದ್ದಾರೆ.. ಒಂದು ವೇಳೆ ಹಿಂದಿ ರಾಷ್ಟ್ರ ಭಾಷೆ ಅಲ್ಲವಾದರೆ, ಹಿಂದೆ ಹೇಳಿದ್ದನ್ನ ಬಿಡಿ ಈಗ್ಲೂ ಹೇಳೋವಾಗ ನಮ್ಮ ಕನ್ನಡ ಸರ್ಕಾರ ಯಾಕೆ ಏನೂ ಅನ್ನೋದಿಲ್ಲ.. ನನ್ನ ಮಕ್ಕಳಿಗೆ ನಾನೇ ಸ್ವತಃ ಹೇಳಿಕೊಟ್ಟಿದ್ದೇನೆ.. ಹಿಂದಿ ರಾಷ್ಟ್ರ ಭಾಷೆ ಎಂಬುದಾಗಿ.. ಪಠ್ಯಪುಸ್ತಕದಲ್ಲಿ ಹಾಗೇ ಇರೋದು.. ಅಲ್ಲ ಅಂತ ಹೇಳಿದ್ರೆ ಸೊನ್ನೆ ಮಾರ್ಕ್ಸ್! ನಿಜವಾಗ್ಲೂ ಹಿಂದಿ ರಾಷ್ಟ್ರ ಭಾಷೆ ಅಲ್ಲಾ ಅಂತಾದ್ರೆ (ನಂಗೆ ನಿಜವಾಗ್ಲೂ ಗೊತ್ತಿಲ್ಲ)ಮೊದ್ಲು ಪಠ್ಯಪುಸ್ತಕದಲ್ಲಿ ಸರಿಪಡಿಸ್ಬೇಕು ತಾನೆ..? ಪಠ್ಯಪುಸ್ತಕ ತಯಾರಿ ಮಾಡಿದವರು ನಮ್ಮವರೇ ತಾನೆ? ಹಾಗಾದರೆ ಅವ್ರಿಗೇನೂ ಗೊತ್ತಿಲ್ಲಾಂತಾನ? ಇಂತಹ ಕೆಲವು ಬ್ಲಾಗಲ್ಲಿ ಬಿಟ್ರೆ ಮುಖ್ಯವಾಹಿನಿಯಲ್ಲಿ ಎಲ್ಲೂ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿದ್ದು ನನಗೆ ಗೊತ್ತಿಲ್ಲ. ಸಂವಿಧಾನದಲ್ಲಿ ಏನಿದೆಯೋ ಯಾರಿಗ್ಗೊತ್ತು..? ಆದ್ರೂ ಹಿಂದಿ ಕಲಿತ್ರೆ ಏನೂ ತೊಂದ್ರೆ ಇಲ್ಲ ಬಿಡಿ.. ಈಗ ನಾವು ಕನ್ನಡ ಕಲೀಲಿಲ್ವ..? ನಮ್ಗೆ ಅನಿವಾರ್ಯ ಹಾಗಾಗಿ ಕಲ್ತಿದ್ದೇವೆ.. ನಮ್ಗೆ ಹಿಂದೀನು ಅಷ್ಟೆ.. ಇಂಗ್ಲೀಷೂ ಅಷ್ಟೆ.. ನಮ್ಮ ನಮ್ಮ ಭಾಷೆ ಅಭಿವೃದ್ಧಿ ಆಗ್ಬೇಕಾದರೆ ತಳಮಟ್ಟದಲ್ಲಿ ಬಳಕೆ ಆಗ್ಬೇಕು.. ಅವ್ರವರ ಮನೆ, ಮನಗಳಲ್ಲಿ ಇರ್ಬೇಕು. ಈಗ ಪರಭಾಷೆ ಆಡೋದು ಫ್ಯಾಶನ್.. ತುಳು ಭಾಷಿಕರು ಕನ್ನಡ ಆಡೋದು.. ಕನ್ನಡದೋರು ತಮಿಳು ತೆಲುಗು ಆಡೋದು.. ಕಾಲೇಜ್ ಹುಡುಗರು ಇಂಗ್ಲಿಷ್, ಹಿಂದಿ ಆಡೋದು.. ಇದೆಲ್ಲ ಕಡಿಮೆ ಆದ್ರೆ ಅವರವರ ಭಾಷೆ ಉಳಿಯುತ್ತದೆ. ಹಿಂದಿ ಕಲಿತ ಮಾತ್ರಕ್ಕೆ ಎಲ್ಲರ ಜೊತೆ ಹಿಂದೀಲಿ ಮಾತಾಡ್ಬೇಕು ಅಂತಾ ಇಲ್ಲ.. ಹಿಂದಿ ರಾಷ್ಟ್ರ ಭಾಷೆ ಅಲ್ಲ ಅದನ್ನು ಕಲೀಬೇಕಾಗಿಲ್ಲ ಅನ್ನೋ ನಾವು ಇಂಗ್ಲೀಷ್ ಅಂತರಾಷ್ಟ್ರೀಯ ಭಾಷೆ (ಅಲ್ಲವಾದರೂ) ಅಂತ ಮುಗಿಬಿದ್ದು ಕಲಿತಿದ್ದೇವೆ ಮಕ್ಕಳಿಗೆ ಕಲಿಸ್ತಾಇದ್ದೇವೆ..! ಇದೇ ವಿಪರ್ಯಾಸ!
ಹರಿಜೋಗಿ.
ಸ್ವಾಮಿ ಹರಿಜೋಗಿ ಅವರೇ,
ಪಠ್ಯ ಪುಸ್ತಕದಲ್ಲಿದೆ ಅಂದ ಮಾತ್ರಕ್ಕೆ ಸತ್ಯ ಯಾವತ್ತು ಸುಳ್ಲಾಗೋಲ್ಲ, ಸುಳ್ಳನ್ನ ಪದೇ ಪದೇ ಹೇಳುದ್ರೆ ಅದೇ ನಿಜಾನು ಆಗೋಲ್ಲ. ನಿಮಗೆ ಸಂವಿದಾನದಲ್ಲೀನಿದೆ ಅಂತ ತಿಳ್ಕೋ ಬೇಕು ಅಂದ್ರೆ ಈ ಕೆಳಗಿನ ಮಿಂಚೆ ನೋಡಿ :
http://indiacode.nic.in/coiweb/welcome.html . ಅದ್ರಲ್ಲಿ : PART VII : OFFICIAL LANGUAGE ಸೆಕ್ಷನ್ ಓದಿ . ಪೂರ್ತಿ ಸಂವಿದಾನ ಜಾಲಾಡಿ ಎಲ್ಲಾದರು ಹಿಂದಿ ರಾಷ್ಟ್ರ ಭಾಷೆ ಅಂತ ಇದ್ಯಾ ತೋರ್ಸಿ. ಸುಮ್ನೆ ಪಠ್ಯ ಪುಸ್ತಕದಲ್ಲಿದೆ .. ಮುಂಚಿಂದಾನು ಅದೇ ಕಲ್ತಿರೋದು ಅನ್ಕೊಂಡು ಸುಳ್ಳನ್ನ ನಿಜ ಅಂತ ಒಪ್ಕೋಲ್ಳೋಕ್ಕೆ ನೀವ್ ತಯಾರಿದ್ರು ... ನಾವಿಲ್ಲ. ಸರಯಾದ ಮಾಹಿತಿ ತಿಳ್ಕೊಂಡು ಉದ್ದಾರ ಆಗೋದು ಒಳ್ಳೇದೋ ? ಅಥವಾ ಕೇವಲ ಅಂಕಿ ಗಳ್ಸೋಕ್ಕೆ ಸುಳ್ಳನ್ನ ಒಪ್ಪೋದು ಸರಿ ನೋ ?. ಅಂಕಿಗಳ ಅವಶ್ಯಕತೆ ಇಲ್ಲ ಅನ್ನೋ ಸಂದರ್ಬದಲ್ಲಾದ್ರು ನಿಮ್ಮ ಮಕ್ಕಳಿಗೆ ನಿಜ ಏನೆಂದು ತಿಳ್ಸೋದು ಒಳ್ಳೇದಲ್ವ ?.
ಇನ್ನು ಕರ್ನಾಟಕದಲ್ಲಿ ಆಡಳಿತ ಮಾಡ್ತಾ ಬಂದಿರೋರು ಬಹುತೇಕ ರಾಷ್ಟ್ರೀಯ ಪಕ್ಷಗಳೇ , ಅವು ನಿಜಾನ ಯಾಕೆ ಹೇಳ್ತವೆ ಹೇಳಿ ... ಪ್ರತಿಯೊಂದು ನಿರ್ಣಯಕ್ಕೂ ಹೈ ಕಮ್ಯಾಂಡ್ ಮುಂದೆ ಹಲ್ ಗಿನ್ಜ ನಾಮರ್ದಗಳು , ಏನ್ ತಾನೇ ಮಾಡ್ತಾರೆ ?
ಕರ್ನಾಟಕದ ಪಠ್ಯ ಪುಸ್ತಕದಲ್ಲಿರೋದೆ ನಿಜ ಅಂತ ಒಪ್ಪೋ ಬದ್ಲು ನೆರೆ ರಾಜ್ಯ ತಮಿಳುನಾಡಿನ ಪಠ್ಯ ಪುಸ್ಥಕದಲ್ಲೆನಿದೆ ಅಂತಾನು ನೋಡಬಹುದಲ್ಲ ? ... ಯಾಕೆ ತಮಿಳುನಾಡೆ ಹೇಳ್ತಾ ಇದ್ದೀನಿ ಅಂದ್ರೆ , ತಮಿಳರು ಹಿಂದಿ ಹೇರಿಕೆನಾ ಮುಂಚಿಂದಲೂ ವಿರೋದಿಸ್ತಾ ಬಂದಿದ್ದಾರೆ : http://en.wikipedia.org/wiki/Anti-Hindi_agitations_of_Tamil_Nadu . ಅವರ ಪಠ್ಯ ಪುಸ್ತಕದಲ್ಲಿ ಹಿಂದಿ ರಾಷ್ಟ್ರ ಭಾಷೆ ಅಂತ ಇಲ್ಲ ಅಂದ್ರೆ ನೀವು ಒಪ್ಪುತ್ತೀರಾ ?.
ಇಂಗ್ಲಿಷ್ ಕಲ್ತ್ರೆ ಆನ್ನನಾದ್ರೂ ಹುಟ್ಟುತ್ತೆ , ಹಿಂದಿ ಕಲ್ತ್ರೆ ಏನ್ ಸಿಗುತ್ತೆ ಹೇಳಿ ?
ತುಳು ಕನ್ನಡಿಗ, ಕೊಂಕಣಿ ಕನ್ನಡಿಗ, ಮಲಯಾಳಿ ಕನ್ನಡಿಗ, ತೆಲುಗು ಕನ್ನಡಿಗ, ತಮಿಳು ಕನ್ನಡಿಗ, ಮರಾಠಿ ಕನ್ನಡಿಗ, ಉರ್ದು ಕನ್ನಡಿಗ, ಹಿಂದಿ ಕನ್ನಡಿಗ, ಬಂಗಾಳಿ ಕನ್ನಡಿಗ .. ... ... .. ... .. .. ಇವೆಲ್ಲ ಅರ್ಥವಿಲ್ಲದ ಪದಗಳು.
Dear Mr. HarijOgi,
Please show us one text book, which says hindi is the national language of India. If you have any text book which says so, please quote.
Regards
sundar
ನಾನ್ ಹೇಳೋದು ಏನು ಅಂದ್ರೆ ಮೊದಲು ಕನ್ನಡ ಕಲೀರಿ. ಬೇರೆಯವರಿಗೆ ಅಡ್ಜಸ್ಟ್ ಆಗೋದು ಯಾಕೆ ಅದು ನಮ್ಮ ನಾಡಲ್ಲಿ. ಅವ್ರು ಇಲ್ಲಿ ಬಂದು ಇರ್ಥಿರೋದು ನಾವ್ ಇಲ್ಲೇ ಇದ್ದೋರು. ಬೇಕಾದರೆ ಹಿಂದಿನೂ ಕಲೀರಿ ಜ್ಞಾನಕ್ಕಾಗಿ. ನಮ್ಮ ರಾಜ್ಯ ಬಿಟ್ಟು ಹೋದಾಗ ಕೆಲ್ಸಕ್ಕೆ ಬರತ್ತೆ. ಆದ್ರೆ ನಮ್ಮ ನಾಡಲ್ಲಿ ಬೇರೆಯವರಿಗೆ ಅಡ್ಜಸ್ಟ್ ಆಗೊಥರ ನಾವ್ ಯಾಕೆ ಚೇಂಜ್ ಆಗ್ಬೇಕು?
--
ರಾಮಚಂದ್ರ ವೈದ್ಯ
In 1986, Indian Prime minister Rajiv Gandhi introduced the "National Education Policy".[96] This education policy provided for setting up Navodaya Schools, where the DMK claimed teaching of Hindi would be compulsory.[97] The Anna Dravida Munnetra Kazhagam (ADMK) led by M. G. Ramachandran (which had split from the DMK in 1972), was in power in Tamil Nadu and the DMK was the main opposition party. Karunanidhi announced an agitation against the opening of Navodaya Schools in Tamil Nadu. On 13 November, the Tamil Nadu Legislative Assembly unanimously passed a resolution demanding the repeal of Part XVII of the constitution and for making English the sole official language of the union.[98][99][100]
On 17 November 1986, DMK members protested against the new education policy by burning Part XVII of the Constitution.[98] 20,000 DMK members including Karunanidhi were arrested.[100] 21 persons committed suicide by self immolation.[101] Karunanidhi was sentenced to ten weeks of rigorous imprisonment. Ten DMK MLAs including K. Anbazhagan were expelled from the Legislative Assembly by the speaker P. H. Pandian.[98] Rajiv Gandhi assured Members of Parliament from Tamil Nadu that Hindi would not be imposed.[102] As part of the compromise, Navodhaya schools were not started in Tamil Nadu. Currently, Tamil Nadu is the only state in India without Navodhaya schools.
hi,
what you have written is absolutely true, first the govt of karnataka should declare that kannada will be the only official language used in karnataka, first and foremost our "Kannada abhivriddhi pradikara" adyaksharu mukya mantri chandru should know that hindi is not national language and there is no need to give special status to that, in today's newspaper i have read that, his statement, about central govt should make strict laws to impletment "tri bhasya" neeti. why the hell should we adopt this? when governement are providing land, water and electricity to MNC's why cant they make a simple rule/regulations that any company that is enjoying the benefits of karnataka should provide employement for kannadigas first, say for example as in maharastra where a company has to have atleast 80% of locals, why cant this same be implemented here. govt should ban radio stations like radio one who use the name of bengaluru and play hindi songs, not only this channel but all the radio channels thats not only just palying hindi songs, but hindi ads also
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!