ಕನ್ನಡ ಕಲಿಸೋ ಹೊಸ ತಾಣ!

ಸೆಪ್ಟೆಂಬರ್ 30ರ ಮೈ ಬ್ಯಾಂಗಲೊರ್‍ನಲ್ಲಿ ಕನ್ನಡ ಕಲಿ ಇದೀಗ ಆನ್ ಲೈನ್‍ನಲ್ಲಿ ಸಿಗ್ತಿದೆ ಅಂತಾ ಒಂದು ಸುದ್ದಿ ಪ್ರಕಟವಾಗಿದೆ ಗುರು! ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ರೂಪಿಸಿದ್ದಾರಂತೆ. ಅವರ ಉದ್ದೇಶ ಹೊರನಾಡಿನಿಂದ ನಮ್ಮೂರುಗಳಿಗೆ ಬರುವ ಪರಭಾಷಿಕರಿಗೆ ಕನ್ನಡ ಜನ, ನುಡಿ ಮತ್ತು ಸಂಸ್ಕೃತಿಗಳ ಪರಿಚಯ ಮಾಡಿಕೊಡುವುದಂತೆ.

ಇಂಥವರ ಸಂತತಿ ಸಾವಿರವಾಗಲಿ...

ತಮ್ಮ ಕಾಲೇಜಿನ ಪರಭಾಷಿಕರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಿರೋ ಈ ತಂಡದೋರು ಪೋಸ್ಟರ್, ಆಡಿಯೋ ವಿಡಿಯೋಗಳನ್ನು ಬಳಸೋ ಮೂಲಕ ಕನ್ನಡ ನುಡಿಯ ಪರಿಚಯ ಮಾಡಿಸಿಕೊಡೋದ್ರ ಜೊತೆಯಲ್ಲೇ ಕನ್ನಡದ ಹಿರಿಯ ಚೇತನಗಳ ಪರಿಚಯವನ್ನು, ನಾಡಿನ ಪ್ರವಾಸಿ ತಾಣಗಳ ಪರಿಚಯ ಮಾಹಿತಿಗಳನ್ನು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಮಾಡಿಕೊಡೋ ಯೋಜನೆಗಳನ್ನು ಹೊಂದಿದಾರಂತೆ. ಕರ್ನಾಟಕಕ್ಕೆ ಬರೋ ಪರಭಾಷಿಕರಿಗೆ ಕನ್ನಡ ಕಲಿಸುವ ಈ ಯೋಜನೆ ಉಳಿದ ಕಾಲೇಜುಗಳಿಗೆ ಮಾದರಿಯಾಗಲಿ. ಈ ಯೋಜನೆಯ ಹಿಂದಿರುವ ತಂಡದ ಸ್ಪೂರ್ತಿ ನೂರ್ಮಡಿಸಲಿ, ನೂರ್ಕಾಲ ಹೀಗೆ ಇರಲಿ.. ಇಂಥವರ ಸಂತತಿ ಸಾವಿರವಾಗಲಿ ಅಂತಾ ಹಾರೈಸೋಣ ಗುರು!

5 ಅನಿಸಿಕೆಗಳು:

vijeth ಅಂತಾರೆ...

super guru,, this is very inspiring

ಸುಧಿ ಅಂತಾರೆ...

ಕಾಲೇಜಿನ ಹುಡುಗರು ಇ೦ತಾ ಒಳ್ಳೆ ಉದ್ದೇಶ ಇಟ್ಟುಕೊ೦ಡು ರೂಪಿಸಿರೋ ಕಾರ್ಯಕ್ರಮ ಬಹಳ ಸ೦ತೋಷ ತ೦ದಿದೆ. ಈ ತಾಣವನ್ನು ಎಲ್ಲರಿಗೆ ಪರಿಚಯಿಸುವ ಕೆಲಸ ಮಾಡೋಣ

Chamaraj Savadi ಅಂತಾರೆ...

ಉತ್ತಮ ಪ್ರಯತ್ನ. ನೀವು ಹೇಳಿದಂತೆ, ಇಂಥವರ ಸಂತತಿ ಸಾವಿರವಾಗಲಿ!

Anonymous ಅಂತಾರೆ...

ತುಂಬಾ ಒಳ್ಳೇದು .. ಇಂಥವರ ಸಂತತಿ ಇನ್ನೂ ಜಾಸ್ತಿ ಆಗ್ಲಿ... ಆದ್ರೆ ಒಂದು ಗಮನಿಸಿದ್ದೀರಾ, ಬೆಂಗಳೂರಿನಲ್ಲಿರೋ ಕಾಲೇಜಿನ ಸ್ಟ್ಯಾಂಪ್ ನಲ್ಲಿ ಕನ್ನಡಾನೇ ಮಾಯ, ಅದ್ರ ಬದ್ಲು ಹಿಂದಿ ಬಂದ್ಬಿಟ್ಟಿದೆ !

-ವ್ಯಾಸರಾಜ

Anonymous ಅಂತಾರೆ...

guru guru oLLe newsu.

http://kannada.webdunia.com/newsworld/news/national/0910/23/1091023094_1.htm

ನವದೆಹಲಿ: ಪ್ರಾಥಮಿಕ ಹಂತದಲ್ಲೇ ಮಾತೃಭಾಷೆ ಕಡ್ಡಾಯವಾಗಿ ಬೋಧಿಸಬೇಕೆಂಬ ಕನ್ನಡಾಭಿಮಾನಿಗಳ ಹೋರಾಟಕ್ಕೆ ಮತ್ತು ಅವರ ಆತಂಕಕ್ಕೆ ಇಲ್ಲಿ ಪುಷ್ಟಿ ದೊರೆತಿದೆ. ದೇಶದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಆಧಾರಿತ ಶಿಕ್ಷಣ ವ್ಯವಸ್ಥೆ ಹೆಚ್ಚುತ್ತಿದ್ದು, ಇದರಿಂದಾಗಿ ಮಾತೃಭಾಷೆಗಳು ವಿನಾಶದಂಚಿನಲ್ಲಿದ್ದು, .....


-sidda

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails