ಮರಾಠಿ ಮಾಣುಸ್ ಮನಸ್ಸಾಗ ಮನಸೇ ಐತ್ರೀಪಾ!!

ಮೊನ್ನಿ ಮೂರು ರಾಜ್ಯದಾಗ್ ಆದ ವಿಧಾನಸಭಾ ಚುನಾವಣಿಗಳೊಳಗಾ, ಮಹಾರಾಷ್ಟ್ರದಾಗಿನ ಚುನಾವಣಿ ಭಾಳ್ ಕುತೂಹಲ ಹುಟ್ ಹಾಕಿದ್ದಂತೂ ಖರೇ ರೀ ಯಪ್ಪಾ! ಮಂದೀ ಎಲ್ಲಾ "ಅಲ್ಲಾ, ಈ ಮಕ್ಳು ಈ ಪರಿ ಮರಾಟಿಗ್ರು, ಮರಾಟಿಗ್ರೂ ಅಂತ್ ಹೊಯ್ಕೊಳಾಕ್ ಹತ್ಯಾರಲ್ಲಾ, ಮಹಾರಾಷ್ಟ್ರದಾಗಿನ್ ಮಂದಿ ಇದುಕ್ ಮಣಿ ಹಾಕ್ಕ್ಯಾರೋ? ಇಲ್ಲೋ?" ಅನ್ನೂ ಮಾತ್‍ನ ಮಹಾರಾಷ್ಟ್ರ ನವನಿರ್ಮಾಣ ಸೇನಾ ಬಗ್ಗಿ ಆಡಾಕ್ ಹತ್ತಿತ್ರೀಪಾ. ಚುನಾವಣೀ ಆತು. ರಾಜ್‍ಠಾಕ್ರೆ ಮುಂದಾಳ್ತನದ ಎಂ.ಎನ್.ಎಸ್ ಒಟ್ಟು ಹದಿಮೂರು ಕಡಿ ಗೆಲುವು ಕಾಣ್ತು. ಅಲ್ರೀಪಾ... ಇರೂ ಇನ್ನೂರೆಂಬತ್ತೆಂಟರಾಗಾ ಹದಿಮೂರಂದ್ರಾ ಯಾ ಮೂಲಿಗಾತು ಅನ್ನಾಕ್ ಹತ್ತೀರೇನೂ? ಬರ್ರಲಾ... ಎಂ.ಎನ್.ಎಸ್ ಏನ್ ಮಾಡೈತಿ ಅನ್ನೂದ್ ನೋಡೋಣು...

ಚುನಾವಣಾ ವಿಷ್ಯಾ ಆತು ಮ-ಮ-ಮ!!

ಹಿಂದಾ ಅಲ್ಲೀ ಚುನಾವಣ್ಯಾಗಾ ಮರಾಠಿ-ಮರಾಠಿಗ-ಮಹಾರಾಷ್ಟ್ರ ಅನ್ನೂ ಮಾತು ಇಲ್ಲೀಮಟಾ ಶಿವಸೇನಾ ಪಾರ್ಟಿ ಪ್ರಣಾಳಿಕಿಯೊಳಗಾ ಇರ್ತಿತ್ರೀಪಾ... ಆದ್ರಾ ನಡಬರಕಾ ಶಿವಸೇನಾ ತನ್ನ ಗಮನಾನ ಬ್ಯಾರೀ ಕಡೀಗ್ ಹರ್ಸಾಕ್ ಹತ್ತೈತಿ ಅಂತಾ ಮಂದಿಗಾ ಅನ್ಸಾಕ್ ಚಾಲೂ ಆತ್ರೀಪಾ. ಅಷ್ಟರಾಗ ಇಂವಾ, ರಾಜ್ ಠಾಕ್ರೆ ಇತ್ತೀಚಿನ್ ದಿನಗಳಾಗ ಮರಾಠಿ ಮಂದಿ ಬದುಕು, ಕೆಲ್ಸಾ ಅಂತಾ ಜೋರ‍್ಜೋರಲೇ ಮಾತಾಡಕ್ ಹತ್ತಿದ್ದೇ ತಡಾ... ಎಲ್ಲಾ ಪಾರ್ಟಿ ಮಂದಿ ತಮ್ ಪ್ರಣಾಳಿಕಿ ಒಳಗಾ ಈ ಮಾತ್ ಆಡಾಬೇಕಾತ್ರೀ ಗುರುಗಳಾ.... ನೀವಾ ನೋಡ್ರಲಾ... ಭಾರತೀಯ ಜನತಾ ಪಕ್ಷ, ಶಿವಸೇನಾ ಕೂಡಾ ಬಿಡುಗಡಿ ಮಾಡಿದ್ದ ಪ್ರಣಾಳಿಕೆಯೊಳಗಾ "ಅನಿಯಂತ್ರಿತ ವಲಸಿ ತಡ್ಯಾಕ್ ಮುಂದಾಗ್ತೀವೀ" ಅಂದಾರ! ಈ ಮಂದಿ ಅಂತಾರಾ... "ಮಾರಾಷ್ಟ್ರಾದಾಗಿನ ೮೦% ಕೆಲಸ ಮರಾಠಿ ಮಂದೀಗಾ ಮೀಸಲು ಮಾಡ್ತೇವಾ" ಅಂತಾ.
A museum will be set up in Mumbai depicting the 'Samyukta Maharashtra' movement and a permanent mechanism would be created to stop the inflow of illegal migrants, Thackeray said.

Stating that 80 per cent of the skilled and unskilled jobs will be provided to locals, it vowed to encourage the sons-of-the soil to take up self-employment

ಫಲಿತಾಂಶ ಹೀಂಗದಾ!

ಇನ್ನು ಒಟ್ಟು ಫಲಿತಾಂಶಾ ಕಂಡಾಗ ತನ್ನ ಮೊದಲನೇ ಚುನಾವಣಿಯಾಗಾ ಎಂ.ಎನ್.ಎಸ್ ಹದಿಮೂರು ಸ್ಥಾನಾ ಗಳಸೈತಿ ಅದೂ ಯಾರ್ ಕೂಡಾ ಹೊಂದಾಣಿಕೆ ಮಾಡ್ಕೊಳ್ದೆ ಅನ್ನೋದು ದೊಡ್ ಮಾತೇ ಬಿಡ್ರೀಪಾ. ಮಹಾರಾಷ್ಟ್ರದೊಳಗಾ ಮುಂದಿನ ದಿನಗಳಾಗ ಎಂ.ಎನ್.ಎಸ್ ಒಂದು ದೊಡ್ಡ ಶಕ್ತಿಯಾಗ್ತೈತಿ ಅನ್ನೋ ಸೂಚನಿ ಕೊಟ್ಟಿರೋದಂತೂ ಖರೆ ಐತಿ. ಒಟ್ಟಾರೆ ಮರಾಠಿ ಮಾಣುಸ್ ಮನಸ್ಸಾಗ ಮ.ನ.ಸೇ ಐತ್ರೀಪಾ. ಅದ್ಕಿಂತ ದೊಡ್ ಮಾತಂದ್ರಾ ಮರಾಠಿ-ಮಹಾರಾಷ್ಟ್ರ-ಮರಾಠಿಗ ಅನ್ನೂದಂತೂ ರಾಜಕಾರಣದ ನಡುಮನಿ ಒಳಗ್ ದೊಡ್ಡಾಟ ಆಡೂದಂತೂ ಖರೀ ಐತ್ರಪಾ! ಏನಂತೀರ್ರೀ ಗುರುಗಳಾ?

5 ಅನಿಸಿಕೆಗಳು:

Amarnath Shivashankar ಅಂತಾರೆ...

ಕರ್ನಾಟಕದಲ್ಲಿ ಈಗಾಗಲೇ ಬಲಿಷ್ಟವಾದ ಕರ್ನಾಟಕ ರಕ್ಷಣಾ ವೇದಿಕೆ ಇದೆ. ಕರವೇ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು.ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕರವೇಯಂತಹ ನಿಷ್ತಾವಂತ ಸಂಘಟನೆಯ ಅವಶ್ಯಕಥೆ ಬಹಳ ಇದೆ. ನಮ್ಮ ನಾಡಿನಲ್ಲಿರೋ ರಾಜಕೀಯ ಪಕ್ಷಗಳಿಗೆ ಕಿಂಚಿತ್ತಾದರು ಕನ್ನಡ ಪರವಾದ ಸಿದ್ಧಂತವಿಲ್ಲ.
Its now or never. KRV should jump into mainstream politics.
Starting from Local corporation elections to Assembly elections to Loksabha elections.
KRV has got the potential. I am sure they can do justice to K-K-K if they come to power.

ನಾರಯಣ ಗೌಡರೇ, ದಯವಿಟ್ಟು ನಮ್ಮ ಆಸಯನ್ನು ಈಡೇರಿಸಿ

Anonymous ಅಂತಾರೆ...

ಇದು ಮಹಾರಾಷ್ಟ್ರದಲ್ಲಿ ಸಾಧ್ಯ ಅಂದರೆ ಕರ್ನಾಟಕದಲ್ಲೂ ಸಾಧ್ಯ ಅಂತ ಹೇಳಕ್ಕೆ ಆಗಲ್ಲ. ನಮ್ಮ ನಿಮ್ಮಂತಹವರು ಕ.ರ.ವೇ. ರಾಜಕೀಯಕ್ಕೆ ಇಳಿಯಬೇಕು ಅಂತ ಆಶಿಸಿದರೆ, ಅದೇ ಸಮಯದಲ್ಲಿ, ಬಹಳಷ್ಟು ಜನ, ಕ.ರ.ವೇ. ಒಂದು ರೌಡಿಗಳ ಗುಂಪು ಅಂತ ತಿಳಿದಿದ್ದಾರೆ. ಕನ್ನಡಿಗರು ಮೊದಲು ಕೀಳರಿಮೆ ಬಿಟ್ಟು ಸತ್ಯಾಂಶ ಏನು ಎಂಬುದನ್ನು ತಿಳಿಯಬೇಕು.

--ಸಿದ್ದ

ಸಾಗರದಾಚೆಯ ಇಂಚರ ಅಂತಾರೆ...

houdrappa, nimma maatu khari aiti,

Aravind M.S ಅಂತಾರೆ...

ಗುರುಗಳೇ,

ನಮ್ಮಲ್ಲಿ ಕನ್ನಡ ಎಂಬ ಒಮ್ಮತ ಬರಲು ಇನ್ನೂ ಕಾಲ ಬರಬೇಕು. ಇಂದಿಗೂ ನಮ್ಮ ಪರಭಾಷೀ ಕನ್ನಡಿಗರಿಗೆ (ಕೊಂಕಣಿ, ತುಳುವ, ಇತ್ಯಾದಿ) ಕನ್ನಡ ಭಾಷಾಭಿಮಾನ ಇರುವುದು ಅಷ್ಟಕ್ಕಷ್ಟೆ.

ಆ ಅಭಿಮಾನವಿಲ್ಲದಾಗ ನಮ್ದು ನಮ್ಗೆ, ನಿಮ್ದು ನಿಮ್ಗೆ ಅಂತಲೇ ಅನ್ನುವರು ಇವರು. ಇದಕ್ಕೆ ಆಕ್ಷೇಪಣೆಯಂತೆ ಇರುವವರೂ ಇಲ್ಲವೆಂದಿಲ್ಲ.

- ಅರವಿಂದ

Unknown ಅಂತಾರೆ...

howdhu...namma kannadadada mandi yavaga jaathi dharmagala bhoothavannu bittu horage barthaaroo..avaagle uddara aagodhu...

namage Congress, BJP, JDS yaavduhu bedaa...namage nammade aada ondhu kannada paksha beku....
Kannadada swantha channelgale illadiruvaga (kasturi ondannu bittu) swantha kannada paksha saadhyave...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails