ಸೈನ್ಯ ಸೇರಲು ಮಾನದಂಡವೇನು ?

ಭಾರತ ಸೈನ್ಯಕ್ಕೆ ಸೈನಿಕರಾಗಿ/ಗುಮಾಸ್ತರಾಗಿ/ಉಗ್ರಾಣಪಾಲಕರಾಗಿ/ಆರೈಕೆ-ಸಹಾಯಕರಾಗಿ ಸೇರಲು ಹಿಂದಿ/ಇಂಗ್ಲಿಷ್ ಬೇಕಾ ? ಹೌದು, ಸೇನೆಯ ಆ ಹುದ್ದೆಗೆ ಸೇರಲು ಹಿಂದಿ/ಇಂಗ್ಲಿಷ್ ಬೇಕೇ ಬೇಕು ಅಂತ ಅನ್ನುತ್ತೆ ಡಿ.ಎನ್.ಎ ಪತ್ರಿಕೆಯ ಈ ವರದಿ. ದೇಶಾನ ರಕ್ಷಿಸೋಕೆ ದೇಶಭಕ್ತಿ, ತ್ಯಾಗ ಮನೋಭಾವನೆ, ಗಟ್ಟಿತನ, ದೇಹದಾರ್ಢ್ಯತೆ, ಕಿಚ್ಚು, ಹೋರಾಟ ಮನೋಭಾವ - ಇವುಗಳಿಗಿಂತ ಹೆಚ್ಹಾಗಿ ಹಿಂದಿ/ಇಂಗ್ಲಿಷ್ ಕಲಿತಿರಬೇಕಂತೆ. ಯಾಕಂದ್ರೆ ಮೇಲೆ ಹೇಳಿದ ಸೇನೆಯ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ನಮ್ಮ ನಾಡಿನ ಮಕ್ಕಳು ನಪಾಸಾಗಲು ಕರ್ನಾಟಕದ ಅಭ್ಯರ್ಥಿಗಳಿಗೆ ಹಿಂದಿ/ಇಂಗ್ಲಿಷ್ ಬರದೆ ಇರೋದೇ ಬಲವಾದ ಕಾರಣ ಅಂತ ಡಿ.ಎನ್.ಎ ಪತ್ರಿಕೆಯ ಆ ವರದಿಯಲ್ಲಿ ತಿಳಿಸಿದೆ ಗುರು.

ಏನ್ ಹೇಳುತ್ತೆ ವರದಿ?
ಆ ಲೇಖನದಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯ ಅಂದ್ರೆ ನಮ್ಮ ನಾಡಿನ ಅಭ್ಯರ್ಥಿಗಳು ಫೇಲಾಗುತ್ತಿರುವುದು ಸೈನ್ಯ ಸೇರಲು ಮತ್ತೊಂದು ಮಾನದಂಡವಾದ ದೈಹಿಕ ಅರ್ಹತೆ ಪರೀಕ್ಷೆಯಲ್ಲಿ ಅಲ್ವಂತೆ ಬದಲಿಗೆ ಹಿಂದಿ/ಇಂಗ್ಲಿಷ್ ಪರೀಕ್ಷೆಯಲ್ಲಂತೆ. ಈ ಭಾಷೆಗಳು ಬರೋರು ಮಾತ್ರ ಸೇನೆ ಸೇರಲು ಯೋಗ್ಯರು ಅನ್ನೋ ನಿಲುವು ಸೇನೆಯವರದ್ದಾ ಅಂತಾ ಅನುಮಾನಾ ಬರ್ತಿದೆ ಗುರು. ಮೇಲೆ ಹೇಳಿದ ಹುದ್ದೆಗಳಿಗೆ ಸೇನೆಯನ್ನು ಪ್ರತಿನಿಧಿಸೋ ಅವಕಾಶವನ್ನು ಯಾವುದೇ ಒಂದು ನಾಡಿನ ಜನರಿಗೆ ಹಿಂದಿ/ಇಂಗ್ಲಿಷ್ ಬರೋದಿಲ್ಲ ಅನ್ನುವ ಕಾರಣ ಮುಂದಿಟ್ಟು ಅವರನ್ನು ಅಂತಹ ಅವಕಾಶದಿಂದ ವಂಚಿತನ್ನಾಗಿ ಮಾಡ್ತಿದಾರೆ ಅಂತ ಅನಿಸೋಲ್ವಾ ? ಅಲ್ಲಾ, ಒಬ್ಬ ಮನುಷ್ಯನಿಗೆ ದೇಶರಕ್ಷಣೆಯೇ ಗುರಿಯಾಗಿದ್ದು ಆ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಇದ್ದೂ ಆತನಿಗೆ ಹಿಂದಿ/ಇಂಗ್ಲಿಷ್ ಬರೋದಿಲ್ಲ ಅಂತ ಆತನನ್ನು ನಿರಾಕರಿಸೋದು ಎಷ್ಟು ಸರಿ? ನಮ್ಮ ದೇಶದಲ್ಲಿ ದೇಶಸೇವೆಯನ್ನು ಮಾಡೋದು ಅಂದ್ರೆ ಸೈನ್ಯ ಸೇರೋದು ಅನ್ನೋ ಕಲ್ಪನೆ ಎಷ್ಟೋ ಜನರಲ್ಲಿ ಇದೆ. ಅಂತವರು 'ದೇಶರಕ್ಷಣೆಯು ಒಂದು ಶ್ರೇಷ್ಠ ಕೆಲಸ' ಅಂತ ಅಂದುಕೊಂಡು ದೇಶಕ್ಕಾಗಿ ಪ್ರಾಣ ಮುಡಿಪಾಗಿಡಲು ತಯಾರಿರ್ತಾರೆ. ಅಂತದ್ರಲ್ಲಿ ಭಾಷೆ ಹೆಸರಲ್ಲಿ ಅವರನ್ನು ಸೇರಿಸದೆ ಇರೋದು ಖಂಡಿತ ಸರಿಯಲ್ಲ. ಭಾರತದಂತಹ ಒಪ್ಪುಕೂಟ ವ್ಯವಸ್ಥೆಯಲ್ಲಿ, ಸೇನೆಗೆ ಆಯ್ಕೆ ಮಾಡುವ ಈ ಕ್ರಮ ಖಂಡಿತ ಸರಿ ಇಲ್ಲ ಗುರು.

ಸರಿಯಾದ ವಿಧಾನ ಏನು?
ಹಾಗಾದ್ರೆ ಸರಿಯಾದ ವಿಧಾನ ಯಾವುದು? ಇಕಾ ಇಲ್ಲಿದೆ ನೋಡು ಗುರು. ಭಾರತವು ರಾಜ್ಯಗಳ ಒಪ್ಪುಕೂಟವಾಗಿದ್ದು, ಭಾರತ ಸೇನೆಯು ದೇಶದ ಹೊರಗಿನ ಹಾಗೂ ಒಳಗಿನ ಶತ್ರುಗಳಿಂದ ಈ ಒಪ್ಪುಕೂಟವನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿದೆ. ಒಪ್ಪುಕೂಟ ವ್ಯವಸ್ಥೆಯ ಯಾವುದೇ ಕ್ಷೇತ್ರವಾದ್ರೂ ಸರಿ, ಈ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ಭಾಗಿಯಾಗಿರುವ ಎಲ್ಲ ರಾಜ್ಯದ ಜನರಿಗೂ ಆ ಕ್ಷೇತ್ರವನ್ನು ಸೇರಲು ಪ್ರತಿನಿಧಿಸಲು ಸಮಾನ ಅವಕಾಶ ಇರಬೇಕು. ಇದಕ್ಕೆ ಸೇನೆಯೂ ಹೊರತಾಗಿಲ್ಲ. ನೂರಾರು ಭಾಷೆಗಳನ್ನು ಮಾತಾಡುವ ಈ ದೇಶದಲ್ಲಿ ಹಿಂದಿ/ಇಂಗ್ಲಿಷ್ ಎಂಬ ಮಾನದಂಡವನ್ನು ಆಯ್ಕೆಯ ಹಂತದಲ್ಲೇ ಉಪಯೋಗಿಸಿ ಅಭ್ಯರ್ಥಿಗಳನ್ನು ಸೈನ್ಯಕ್ಕೆ ಸೇರದ ಹಾಗೆ ಮಾಡುವುದು ಒಪ್ಪುಕೂಟದ ಪ್ರತಿನಿಧಿಗಳಿಗೆ ಮಾಡುವ ವಂಚನೆ ಮತ್ತು ಪಕ್ಷಪಾತ.

ಪರಿಹಾರ ಏನ್ ಗುರು?
ಸೇನೆ ಸೇರಿದವರಿಗೆ ಕಷ್ಟದ್ದೇ ಆದ್ರೂ ಸರಿ ಏನೆಲ್ಲಾ ತರಬೇತಿ ನೀಡುವ ಭಾರತೀಯ ಸೇನೆ, ಪರೀಕ್ಷೆಯ ಅಭ್ಯರ್ಥಿಗಳಿಗೆ ಹಿಂದಿ/ಇಂಗ್ಲಿಷ್ ಪತ್ರಿಕೆ ಕಡ್ಡಾಯ ಮಾಡದೆ, ಉಳಿದೆಲ್ಲ ಪರೀಕ್ಷೆಗಳನ್ನು ಪಾಸು ಮಾಡಿದವರನ್ನು ಸೈನ್ಯಕ್ಕೆ ಸೇರಿಸ್ಕೊಂಡು ಯಾವ ಮಟ್ಟದ ಹಿಂದಿ/ಇಂಗ್ಲಿಷ್ ಜ್ಞಾನ ನಿರೀಕ್ಷಿಸುತ್ತಾರೋ ಅಷ್ಟು ತರಬೇತಿಯನ್ನು ಕೊಡೊ ವ್ಯವಸ್ಥೆ ತರಬೇಕು. ಅಂದರೆ ಸೈನ್ಯ ಸೇರಿದ ಮೇಲೆ, ಹಿಂದಿ/ಇಂಗ್ಲಿಷ್ ಅಥವ ಮತ್ತ್ಯಾವ ಭಾಷೆಯಾದ್ರೂ ಸರಿ ಅವಶ್ಯಕತೆಯ ಮೇರೆಗೆ ಭಾಷೆಯ ತರಬೇತಿನಾ ಕೊಡೊ ಏರ್ಪಾಡು ಮಾಡೋದು. ಇಂತಹ ಕಟ್ಟುಪಾಡು ಒಪ್ಪುಕೂಟ ವ್ಯವಸ್ಥೆಯ ಯಾವುದೇ ಹಾಗೂ ಎಲ್ಲಾ ಕ್ಷೇತ್ರದಲ್ಲೂ ಮಾಡಿದರೆ ನಿಜವಾದ ಒಪ್ಪುಕೂಟ ವ್ಯವಸ್ಥೆಯ ಕಾರ್ಯವೈಖರಿಯು ಹೇಗಿರಬೇಕೆಂದು ತೋರ್ಸಿಕೊಟ್ಟು ಒಪ್ಪುಕೂಟ ವ್ಯವಸ್ಥೆಯ ಘನತೆಯನ್ನು ಎತ್ತಿಹಿಡಿಯುತ್ತೆ. ಅಲ್ವಾ ಗುರು ?

10 ಅನಿಸಿಕೆಗಳು:

Anonymous ಅಂತಾರೆ...

super aagide guru

Surya ಅಂತಾರೆ...

This is an Awesome Article..

sudhir ಅಂತಾರೆ...

Ee lekhana dalli tumba vishya idae... Naav kannadigaru sariyage gamanisi... namage aguttiruva nuksana vannu tadeya beku...

Ee karnataka dalli kannadigaru tumba vidya vantaridare adaru kelasa villade suttaduta idare...

Nammalli sahaya maduvavaru tumba kammi..

Bere bere rajya davaranna Unemployment nodidare tumba jasti idae..

Ee ondu lekhana dalli tumba vishya belakige baruttae ... nammalli Alli Alli yalli tumba Dahika vage balistariddare adaru avaru pattanake baroke agade tumba nasta anubhaisuta idare...

Idakke navella ondu parihara madle beku...

Jai Karnataka Mate...

baDDetaddu ಅಂತಾರೆ...

ಸರೀಗೆ ಏಳಿದೀಯ ಸಿವ. ಸೈನ್ಯಕ್ಕೆ ಗಟ್ಟಿಮುಟ್ಟಾದ ಜನ ಬೇಕು. ಸೇನೆಗೆ ಸೇರೋರು ಬುದ್ಧಿವಂತ್ರು ಇರ್ಬೇಕು.ಡೌಟೇ ಇಲ್ಲ. ಆದ್ರೆ ಏನ್ ಮಾಡ್ತೀಯ ನಮ್ ದೇಸ ಭಾರತ ಈಗ ಬೆಳೀತಿರೋ ದೇಸ. ಬಡತನ ವಸಿ ಜಾಸ್ತಿನೆ ಐತೆ ಇಲ್ಲಿ ಅಂದ್ರೂತಪ್ಪಿಲ್ಲ.. 'ದೇಸಸೇವೆನ ಮಾಡ್ಬೇಕು ಅಂದುಕೊಂಡು ಎಷ್ಟೋ ಜನ ಸೈನ್ಯ ಸೇರ್ತಾರೆ' ಅನ್ನೋದು ಎಷ್ಟು ದಿಟಾನೋ 'ಬಡತನವಿದ್ದರೂ/ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆದಿದ್ದ್ರೂ, ತಕ್ಕಮಟ್ಟಿಗೆ ಶಿಕ್ಷಣ ಪಡ್ದು ಬಡತನದ ಬೇಗೆಯಿಂದ, ಮಧ್ಯಮವರ್ಗದ ಜೀವನದ ಜಂಜಾಟದಿಂದ ತಪ್ಪಿಸಿಕೊಳ್ಳಲು ಸೈನ್ಯ ಸೇರ್ತಾರೆ' ಅನ್ನೋದು ಅಷ್ಟೇ ದಿಟ (ಉತ್ತರ ಕರ್ನಾಟಕದಲ್ಲಿ ಇಂತ ಕೇಸ್ಗಳು ಸಾಕಷ್ಟು ಸಿಗ್ತಾವೆ). ಅವ್ರಿಗೇನಪ್ಪಾ, ಸೇನೆಯೂ ಒಂದು ಕೆಲಸ ಕೊಡೊ ಕ್ಷೇತ್ರ. ಅದೂ ಒಂದು ಉದ್ಯೋಗ ಅಂತ ಅವರು ಅನ್ಕೊಂಡು ಸೇನೆ ಸೇರಲು ಪ್ರಯತ್ನಿಸ್ತಾರೆ(ಅದ್ರಲ್ಲಿ ತಪ್ಪೇನೂ ಇಲ್ಲ) ಆದ್ರೆ ಅವರಲ್ಲೂ ದೇಶಭಕ್ತಿ ಇರ್ತದೆ. ಸೇನೆ ಸೇರಿದ್ರೆ ದೇಶಕ್ಕೆ ಪ್ರಾಣ ಕೊಡೊಸ್ಥಿತಿ ಬಂದೆ ಬರ್ತದೆ ಅಂತ ಅವರಿಗೂ ಗೊತ್ತಿರ್ತದೆ, ಅದಕ್ಕೂ ಅವರು ಗಟ್ಟಿಯಾಗಿರ್ತಾರೆ. ಅದಕ್ಕೆ 'ಏನ್ಗುರು' ಈಗಾಗ್ಲೇ ಹೇಳಿದಂತೆ ಆಯ್ಕೆಯ ಹಂತದಲ್ಲಿ ಹಿಂದಿ/ಇಂಗ್ಲಿಷ್/ಯಾವುದೋ ಒಂದು ಭಾಷೆ ಎಂಬ ಅಳತೆಗೋಲು 'ಅಡ್ಡಗಾಲು' ಆಗಬ್ಯಾಡದು. ಸೈನ್ಯ ಸೇರ್ಕೊಂಡ ಮ್ಯಾಕೆ ಅವರಿಗೇನು ಬೇಕೋ ಅದನ್ನ ಕಲಿಸ್ಕೊಡ್ಲಿ.

Anonymous ಅಂತಾರೆ...

sakkath article guru!!

Unknown ಅಂತಾರೆ...

ನಿಜ. 'ಸುಧೀರ್' ಮತ್ತೆ 'ಬಡ್ಡೆತದ್ದು' ಅವರು ಹೇಳಿದ ಹಾಗೆ ಈ ಲೇಖನದಲ್ಲಿ ಎಷ್ಟೊಂದು ವಿಷಯಗಳು ಅಡಕವಾಗಿವೆ. ಈ ಸಮಸ್ಯೆಗೆ ಪರಿಹಾರ ಅಂತ, ವರದಿಯಲ್ಲಿ ಬ್ರಿಗೇಡಿಯರ್ ಕುಶಾಲಪ್ಪ ಹೇಳಿರೋದನ್ನ ೨ ಅಂಶಗಳಾಗಿ ವಿಂಗಡಿಸಿ 'ಭಾಷೆಯ' ಮಗ್ಗುಲಿಂದ ಈ ಬರಹ ನೋಡೋಣ .

"1.The state government has to be serious in implementing physical education in schools
and
2. lay emphasis on languages like Hindi and English, both written and spoken," said Brig Kushalappa

ಸೈನ್ಯಕ್ಕೆ ಸೇರ್ಬೇಕಂದ್ರೆ ದೈಹಿಕವಾಗಿ ಮಾನಸಿಕವಾಗಿ ಗಟ್ಟಿಮುಟ್ಟಾಗಿರ್ಲೇಬೇಕು. ಅದಕ್ಕೆ ದೈಹಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ಶಾಲೆಗಳಲ್ಲಿ ನೀಡಲೇಬೇಕು ಅನ್ನೋ ಅವರ ಅನಿಸಿಕೆ ಸರಿಯಾಗಿಯೇ ಇದೆ.ಸೈನ್ಯಕ್ಕೆ ಸೇರದಿದ್ರೂ ಬೇಡ, ವಿಧ್ಯಾರ್ಥಿಗಳಿಗೆ ಅವರ ವಿಧ್ಯಾರ್ಥಿಗಳಾಗಿದ್ದಾಗಲೇ ಆರೋಗ್ಯದ ಮಹತ್ವ, ಆರೋಗ್ಯ ಕಾಪಾಡಿಕೊಳ್ಳೋಕೆ ವ್ಯಾಯಾಮದ ಅಗತ್ಯ ಇವೆಲ್ಲ ಗೊತ್ತಾಗುತ್ತದೆ. ಆದರಿಂದ ೧ನೆ ವಿಷಯವಾಗಿ ಯಾರದೂ ತಕರಾರಿಲ್ಲ.

ಆದ್ರೆ ಬ್ರಿಗೇಡಿಯರ್ ಹೇಳಿರೋ ೨ನೆ ವಿಷಯ ಗಮನಿಸಿ - ಶಾಲೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ಗೆ ಹೆಚ್ಚು ಒತ್ತು ಕೊಡಬೇಕಂತೆ. ಅಂದ್ರೆ ಬ್ರಿಗೇಡಿಯರ್ ಹೇಳಿರೋದನ್ನ ಆಚರಣೆಗೆ ತರಬೇಕಂದ್ರೆ ನಮ್ಮ ನಮ್ಮ ಶಾಲೆಗಳಲ್ಲಿ ೩ ಭಾಷೆ ಸೂತ್ರ ಜಾರಿಗೆ ತರ್ಲೇರ್ಬೇಕಾಗುತ್ತೆ ಅಲ್ವೇ? ಯಾರು ಎಷ್ಟೇ ಬೊಬ್ಬೆ ಹಾಕಿದ್ರು ಸಧ್ಯದ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಅಂತೂ ಬೇಕಾಗಿದೆ. ಮುಂದೆ ಇಂಗ್ಲಿಷ್ ಇಲ್ದೆ ನಮ್ ನಾಡಲ್ಲೇ ಭವ್ಯವಾದ ಜೀವನ ನಡೆಸಬಹುದು ಅಂದ್ರೆ ಅದನ್ನೂ ತೆಗೀಬಹುದು.ಆಗ ತಾಯ್ನುಡಿಯಲ್ಲೇ ಶಿಕ್ಷಣ ಸಾಕು. ಆದ್ರೆ ಶಾಲೇಲಿ ಹಿಂದಿ ಯಾಕೆ ಬೇಕು ಅರ್ಥ ಆಗ್ತಿಲ್ಲ. ಉತ್ತರಭಾರತದವರು ೨ ಭಾಷೆ(ಹಿಂದಿ-ಇಂಗ್ಲಿಷ್) ಕಲಿಯೋವಾಗ ಉಳಿದವರು ಯಾಕೆ ೩ ಭಾಷೆಗಳ(ಮಾತೃಭಾಷೆ-ಇಂಗ್ಲಿಷ್-ಹಿಂದಿ) ಹೊರೆ ಅನುಭವಿಸಬೇಕು? ಹಿಂದಿಯನ್ನು ಎಲ್ಲರ ಮೇಲೂ ಹೇರೋಕೆ ದಾರಿಗಳನ್ನು ಕೇಂದ್ರದಲ್ಲಿರೋರು ಹುಡುಕುತ್ತಿರುವಾಗ('ಹಿಂದಿ ಸಪ್ತಾಹ' ಅಂತಾನೋ ಅಥವಾ 'ಹಿಂದಿ' ರಾಷ್ಟ್ರಭಾಷೆ ಅಂತ ಸುಳ್ಳನ್ನು ನಮ್ಮ ಶಾಲೆಗಳಲ್ಲಿ ಶಿಕ್ಷಕರಿಂದ ಪದೆ ಪದೇ ಹೇಳ್ಸಿಯೋ) ಬ್ರಿಗೇಡಿಯರ ಈ ಹೇಳಿಕೆ ನೋಡಿದ್ರೆ/ಕೇಳಿದ್ರೆ, ಸೇನೆಯ ಕೆಲ್ಸಕ್ಕೆ ಸೇರೋದನ್ನೇ ಮುಂದುಮಾಡಿ ಎಲ್ರಿಗೂ ಹಿಂದಿ ಹೇರಲು ಮುಂದುವರೆದರೆ ಆಶ್ಚರ್ಯ ಇಲ್ಲ. ಯಾಕಂದ್ರೆ ಈ ದೇಶದಲ್ಲಿ ಜನರು ಸೈನ್ಯಕ್ಕೆ ಕೊಡೊ ಗೌರವ ಮರ್ಯಾದೆನೇ ಬೇರೆ. ಸೈನ್ಯದಲ್ಲಿರೋರು ಎಲ್ಲಾ ತ್ಯಾಗಕ್ಕೂ ಸಿದ್ಧ, ನಾವು ಉಸಿರಾಡ್ತಿದೀವಿ ಅಂದ್ರೆ ಅದಕ್ಕೆ ಸೇನೆಯವರೇ ಕಾರಣ ಅಂತ ತಿಳ್ದಿರೋ ಜನ ಜಾಸ್ತಿ. ಹೀಗಿರುವಾಗ ಸೇನೆಯವರ ಇಂತ ಅನಿಸಿಕೆನ ಜನರ ಮುಂದೆ ಇಟ್ರೆ 'ಏನ್ಗುರು' ತರ ಸರಿಯಾಗಿ ವಿಚಾರ ಮಾಡಿ ತಿರಸ್ಕರಿಸೋರು ಕಮ್ಮಿನೆ. ಕೇಂದ್ರದ ಬಲವಂತದ ಹಿಂದಿ ಹೇರಿಕೆಗೆ ಇಂತ ಹೇಳಿಕೆಗಳು 'ಕ್ರಿಯಾವರ್ಧಕ' ( catalyst ) ಆಗಿ ಕೆಲಸ ಮಾಡುತ್ತವೆ. ಅಲ್ಲಾ ಸಾರ್, ಇಡೀ ದೇಶ ಹಿಂದಿ ಕಲಿತರು ಸೇನೆಗೆ ಎಷ್ಟು ಜನ ಸೇರ್ತಾರೆ? ಹಿಂದಿ ಕಲ್ತೊರೆಲ್ಲ ಸೈನ್ಯ ಸೇರೋದಿಲ್ಲ. ಹಿಂದಿ ಕಲಿತರೆ ಬೇರೆ ರಾಜ್ಯಕ್ಕೆ ಹೋದ್ರೆ ಅನುಕೂಲ ಅನ್ನೋ ವಾದ ಇದೆ. ಆದ್ರೆ ಈ ವಾದ ಒಂದು ಬೆಪ್ಪುವಾದ. ಯಾಕಂದ್ರೆ ಒಂದು ರಾಜ್ಯದಿಂದ ಬೇರೆ ರಾಜ್ಯಗಳಿಗೆ ಪದೇ ಪದೇ ಹೋಗೋ ಜನರ ಪ್ರಮಾಣ(%) ಎಷ್ಟು ಅಂತ ನೋಡಿದ್ರೆ ಅದು ತುಂಬಾ ಕಮ್ಮಿನೆ. ಅಂದ್ರೆ ಇಡೀ ಭಾರತಾನ ಯಾವಾಗಲೂ ಎಲ್ಲಾ ಜನರು ಸುತ್ತೋದಿಲ್ಲ. ಹೀಗಿರುವಾಗ ಅನಗತ್ಯವಾಗಿ ಭಾಷೆನ ಯಾಕೆ ಹೇರಬೇಕು?ಅವರವರ ಇಷ್ಟದ ಹಾಗೆ ಭಾಷೆ ಕಲಿಯಬೇಕು. ಹೇರಿಕೆ ಸಲ್ಲದು.

ಮೇಲಿನ ಹೇಳಿಕೆಯನ್ನು ಬ್ರಿಗೇಡಿಯರ್ ಕುಶಾಲಪ್ಪ ಅವರೇ ನೀಡಿದ್ರೂ, ಕುಶಾಲಪ್ಪ ಅನ್ನೋ ಒಬ್ಬರು ನಮ್ಮ ರಾಜ್ಯದಿಂದ ಬ್ರಿಗೇಡಿಯರ್ ಆಗಿದಾರೆ ಅಂತ ಹೆಮ್ಮೆ ಇದೆ. ಅಕಸ್ಮಾತ್ ಮೇಲಿನ ಅನಿಸಿಕೆ ಬೇರೆರಾಜ್ಯದ ಬ್ರಿಗೇಡಿಯರ್ ಹೇಳಿದ್ರೂ, ಸೈನ್ಯದಲ್ಲಿರೋರು ದೇಶರಕ್ಷಣೆಯಂತ ದೊಡ್ಡ ಜವಬ್ದಾರಿ ಹೊತ್ತಿರೋರು ಅನ್ನೋ ಗೌರವ ಕೂಡ ಖಂಡಿತ ಇರುತ್ತೆ. ಆದ್ರೆ ಅಂತವರು ಹೇಳಿದ್ರು ಅಂದ ತಕ್ಷಣ ವಿಚಾರ ಮಾಡದೆ ಒಪ್ಪಿಕೊಳ್ಳೋದು ದಡ್ಡತನವೇ ಆಗುತ್ತದೆ.

Indian ಅಂತಾರೆ...

There is no way one can join Armed forces without knowing Hindi. What do you know about Armed forces? After the training they may be posted anywhere in India so you learn all those langauges or will you defend your country?

Anonymous ಅಂತಾರೆ...

Dear Indian,

What do you know about democracy? unity in diversity? The main article does not advocate against using a single language in Army. Knowing Hindi shall not be the pre-requisite for joining armed forces. Thats all. As you said "after training....", this training can include such a language for communicating among the army men.

Kannadiga

Guruprasad ಅಂತಾರೆ...

ನಿಮ್ಮ ಬರಹ ಅಮೋಘವಾಗಿದೆ. ಭಾಷೆ ಒಂದು ತೊಡಕಾಗಬಾರದು ಸೈನ್ಯ ಸೇರಲು.

Krishnamurthy Kashyap ಅಂತಾರೆ...

Nijavagiyu ee balagada vebsite nodi tumba kushiyaagide... baragalu, chithanegalu amUlyavagide, ee balagada vishayavaagi nanna kela mitrarige toriside, ellaru tumba mecchuge torisiddare.. niranthara samparkaviruva ashayadondige,
Danyavaadagalu
Krishnamurthy. S
Channagiri-577 213.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails