ಬೆಂಗಳೂರಿನ ಎಸ್ ಎಫ್.ಎಮ್ ಅನ್ನೋ ಖಾಸಗಿ ಎಫ್.ಎಂ ಈಗ ರೆಡ್ ಎಫ್.ಎಮ್ ಅಂತ ಬದಲಾಗಿ ಸಕತ್ ಕನ್ನಡ ಹಾಡು ಹಾಕೋ ವಾಹಿನಿಯಾಗಿದೆಯಂತೆ. ಬೆಂಗಳೂರಿನ ರೇಡಿಯೊ ಮಾರುಕಟ್ಟೆಲಿ ದೊಡ್ಡ ಪಾಲು ( 10% ಗೂ ಹೆಚ್ಚು ) ಪಡಿಬೇಕು, ಆ ಮೂಲಕ ಹೆಚ್ಚು ಜಾಹೀರಾತಿನ ಆದಾಯ ಗಳಿಸಬೇಕು ಅಂದರೆ ಅದಕ್ಕಿರುವ ದಾರಿ ಕನ್ನಡ ಒಂದೇ ಅನ್ನೋದು ರೇಡಿಯೊ ಸಿಟಿ, ರೇಡಿಯೊ ಮಿರ್ಚಿ, ಫಿವರ್ ನಂತರ ಲೇಟ್ ಆದ್ರೂ ಲೇಟೆಸ್ಟ್ ಆಗಿ ರೆಡ್ ಎಫ್.ಎಮ್‍ಗೆ ಅರಿವಾದಂಗಿದೆ.
ಗಮನಿಸಿ ನೋಡಿದರೆ ಮೇಲಿರುವ ಎಲ್ಲ ಸ್ಟೇಶನ್‍ಗಳು ಕನ್ನಡ ಹಾಡು ಹಾಕುವ ಸ್ಟೇಶನ್ ಗಳು ಮತ್ತು ಅವರೆಲ್ಲರ ಮಾರುಕಟ್ಟೆ ಪಾಲು ಗಣನೀಯವಾಗಿದೆ (10%ಕ್ಕಿಂತ ಹೆಚ್ಚು). ಇದರ ಅರ್ಥ ಏನಪ್ಪಾ ಅಂದ್ರೆ ರೇಡಿಯೋ ಮಾರುಕಟ್ಟೆಲಿ ಹೆಚ್ಚಿನ ಪಾಲು, ಹೆಚ್ಚಿನ ಆದಾಯ ಗಳಿಸಬೇಕು, ಹಾಗೆ ಮಾರುಕಟ್ಟೆಯಲ್ಲಿ ಅಗ್ರ ಆಟಗಾರ ಅನ್ನಿಸ್ಕೋಬೇಕು ಅನ್ನೋ ಎಲ್ಲ ವಾಹಿನಿಗಳಿಗೆ ಇರುವ ಒಂದೇ ಹಾದಿ ಅಂದ್ರೆ ಕನ್ನಡ ಅಪ್ಪಿಕೊಳ್ಳುವುದು ! ಇದನ್ನು ಅರಿತೇ ರೆಡ್ ಎಫ್.ಎಮ್ ಹೀಗೆ ಕನ್ನಡಕ್ಕೆ ಬದಲಾಗಿದ್ದು ಅನ್ಸಲ್ವಾ ಗುರು?
ಬೆಂಗಳೂರಿನಲ್ಲಿ ಕನ್ನಡ ಹಾಡು, ಮಾತಿಗಿರುವ ವ್ಯಾಪಕ ಬೇಡಿಕೆ
ಇಲ್ಲೊಂದು ಕುತೂಹಲಕರ ಮಾಹಿತಿ ಕಡೆ ವಸಿ ಕಣ್ಣ ಹಾಯ್ಸೋಣ ಬನ್ನಿ. ಕಳೆದ ವರ್ಷದ ಇದೇ ಸಮಯದ ಆಸುಪಾಸಿನಲ್ಲಿ ಫೀವರ್ ಮತ್ತು ರೇಡಿಯೋ ಸಿಟಿಗಳಿಗಿದ್ದ ಮಾರುಕಟ್ಟೆ ಪಾಲಿಗೂ, ಸಧ್ಯದ ಸ್ಥಿತಿಗೂ ಇರೋ ದೊಡ್ಡ ವ್ಯತ್ಯಾಸ ಸ್ವಲ್ಪ ನೋಡು ಗುರು.
ಆಧಾರ:
ಆಗಸ್ಟ್ 2008 :http://www.exchange4media.com/e4m/Radio/radionews.asp?section_id=7&news_id=31998&tag=26911
ಅಕ್ಟೋಬರ್ 2009: http://www.exchange4media.com/rame4m/blr_39_2009.asp
ಕನ್ನಡ ಅಪ್ಪಿಕೊಳ್ಳೋ ಮುಂಚೆ ಇದ್ದ ಪಾಲಿಗೂ, ನಂತರದ ಪಾಲಿಗೂ ಕಾಣೋ ವ್ಯತ್ಯಾಸ ಏನ್ ಹೇಳುತ್ತೆ? ಕನ್ನಡ ಅಪ್ಕೊಂಡ್ ನಂತರಾನೆ ಈ ವಾಹಿನಿಗಳು ಹೀಗೆ ಹೆಚ್ಚು ಹೆಚ್ಚು ಜನರನ್ನ ತಲುಪಲು ಶುರು ಆಗಿದ್ದು ಸ್ಪಷ್ಟವಾಗಿ ಕಾಣ್ಸತ್ತಲ್ವಾ? ಇದು ಕೊಡ್ತಿರೋ ಸಂದೇಶ ತುಂಬ ಸ್ಪಷ್ಟವಾಗಿದೆ. ಕನ್ನಡ = ದೊಡ್ಡ ಮಾರುಕಟ್ಟೆ ಪಾಲು, ದೊಡ್ಡ ದುಡ್ಡು. ಕನ್ನಡ ಕೈ ಬಿಡೋದು = ಮುಲೆಗುಂಪಾಗೋದು. ಬೆಂಗಳೂರಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅನ್ನೋದ್ರಲ್ಲಿ ಇನ್ನು ಏನಾದ್ರೂ ಸಂದೇಹ ಇದೆಯಾ ಗುರು ?
9 ಅನಿಸಿಕೆಗಳು:
Kannada is Cool and Kannada is hot.. Both are proved with the mighty success of kannada radio stations.
when are kannada fm channels coming to belgaum
ಒಳ್ಳೆಯ ಸುದ್ದಿ .. ಕನ್ನಡ ಬಿಟ್ರೆ ಬೇರೆ ನಡಿಯಲ್ಲಾ ಅಂತ ಮತ್ತೆ ಸಾಬೀತಾಯ್ತು ...
೯೪.೩ ಅವ್ರಿಗೂ ಸ್ವಲ್ಪ ಬುದ್ದಿ ಬರುತ್ತೆ ಅಂದ್ಕೋತೀನಿ !!
ವಿಜಯಶಂಕರ್ ಮೇಟಿಕುರ್ಕೆ
ಸ್ವಾಮಿ ನಿಮ್ಮ ತರ್ಕ ಎಲ್ಲ ಸರಿ. ಈಚೀಚೆಗೆ ಕನ್ನಡ ಚಲನಚಿತ್ರ ಹಾಡು ಗಳನ್ನು ಮಾತ್ರ ಹಾಕುತ್ತಿದ್ದಾರೆ ಎಂದರೆ ನಿಮ್ಮ ಅನಿಸಿಕೆ ತಪ್ಪು. ಶನಿವಾರ ಮತ್ತೆ ಭಾನುವಾರ ಎಂದಿನಂತೆ ನಮಗೆ ಹಿಂದಿ ಪಾಠ ಪ್ರಾರಂಭ. ಅಷ್ಟೆ ಅಲ್ಲ. ಒಂದು ಹಾಡಿಗು ಇನ್ನೊಂದು ಹಾಡಿಗು ಮಧ್ಯೆ ಬರುವ ಜಾಹಿರಾತುಗಳು ಎಲ್ಲ ಹಿಂದಿಯಲ್ಲಿ. ಕನ್ನಡ ಹಾಡು ಕೇಳುವ ನಮಗೆ ಹಿಂದಿ ಜಾಹಿರಾತು ಯಾಕೆ ತುರುಕುತ್ತಿದ್ದಾರೆ. ಎಫ಼್ ಎಂ ರೈನ್ಬೋ ಕನ್ನಡ ಕಾಮನ ಬಿಲ್ಲು ಅಂತ ಹೆಸರು ಆದರೆ ಅದು ಕನ್ನಡದ ಕಾಮನ ಬಿಲ್ಲು ಅಲ್ಲ ಹಿಂದಿ ಕಾಮನ ಬಿಲ್ಲು. ಮೂಗಿಗೆ ತುಪ್ಪ ಸವರುವ ಕಾಮನ ಬಿಲ್ಲು. ಜಾಹಿರಾತು ಬಂದಾಗಲೆಲ್ಲ ವಾಹಿನಿಗಳನ್ನು ಬದಲಾಯಿಸಿ ಕೇಳಲು ಪ್ರಾರಂಭಿಸಿದ್ದೇನೆ.ಯಾರಾದರು ಪ್ರಶ್ನಿಸಿದರೆ ದೇಶಪ್ರೇಮದ ಭಾಷಣ, ಇವರೊಬ್ಬರೇ ದೇಶಭಕ್ತರೆಂಬಂತೆ. ಯಾರಾದರು ತಂತ್ರಜ್ಞರು ಜಾಹಿರಾತು ಬಂದಾಗ (ಹಿಂದಿ) ತಾನೇ ವಾಹಿನಿ ಬದಲಾಯಿಸುವ ರೇಡಿಯೊ ಕಂಡುಹಿಡಿದಾರೆಂದು ಕಾಯುತ್ತಿದ್ದೇನೆ.
ನಾನು ಕೂಡ ರೇಡಿಯೋ ಜಾಕಿ ಅದಕ್ಕೆ ಹೇಳ್ತಿದೀನಿ , ಒಂದು ಜಾಹಿರಾತಿಗೆ ಭಾಷೆ ಆಯಿಕೆ ಬಹಳ ಮುಖ್ಯ .
೧) ಜಾಹಿರಾತು ಯಾವ ವರ್ಗವನ್ನು ಆಧಾರವಗಿಸ್ಕೊಂಡಿದೆ ಎಂಬುದು ಗಮನಿಸಬೇಕು ಅಂದರೆ ಪಟ್ಟಣದವರಿಗ?ಹಳ್ಳಿಯವರಿಗ?ಹಣವಂತರಿಗ?ಮಧ್ಯಮ ವರ್ಗದ ಜನರಿಗ ಎಂಬ ಅಂಶ ಗಮನಿಸಬೇಕು
೨)ಬೆಂಗಳೂರಿನಂಥ ಮಹಾ ನಗರ ದಲ್ಲಿ ಕೊಳ್ಳುಬಾಕ ತನ ಪದ್ದತಿ ಹೆಚ್ಚಾಗಿರುವ ಸಂದರ್ಬದಲ್ಲಿ , ಅಲ್ಲಿ ನೆಲೆಸಿರುವ ವಿವಿಧ ವರ್ಗದ, ರಾಜ್ಯದ,ದೇಶದ ಜನರ ಆಧಾರದ ಮೇಲೆ ಜಾಹಿರಾತು ನೀಡಳಾಗುತದೆ
೩)ರಾಷ್ಟೀಯ ಭಾಷೆ ಹಿಂದಿ ಎಂಬುದನ್ನ ಮರಿಬೇಡಿ, ಮಾತ್ರು ಭಾಷೆ ಜೊತೆಗೆ ರಾಷ್ಟೀಯ ಭಾಷೆ ಕೂಡ ನಾವೆಲ್ಲರೂ ಕಲಿಯಲೇಬೇಕು,ಜೊತೆ ಜಾಹಿರಾತಿಗೆ ಬರುವಂಥಹ ಜಾಹಿರಾತುದಾರರು ರಾಷ್ಟೀಯ ಮತ್ತದವರಗಿದ್ದಾಗ ನಾವು ಎಲ್ಲ ಭಾಷೆಯವರ ಕಡೆಗೂ ಗಮನ ಹರಿಸುವುದು ನಮ್ಮ ಜಾಹಿರಾತಿನ ಪರಿಪಾಟ .
೪)ಕನ್ನಡ ದ ಹಾಡುಗಳ ಜೊತೆಗೆ ಹಿಂದಿ ಹಾಡುಗಳನ್ನು ಕೂಡ ಕೇಳುವವರು ಬಹಳ ಮಂದಿ ಇದ್ದಾರೆ . ಒಳ್ಳೇದನ್ನ ಎಲ್ಲಿದ್ದರು ಸ್ವೀಕರಿಸುವ ಮನೋಭಾವ ನಮ್ಮ ಅರಿವಿನ ವಿಸ್ಥರಾವನ್ನು ಹೆಚಿಸುತದೆ.
ನಾನು ಕೂಡ ರೇಡಿಯೋ ಜಾಕಿ ಅದಕ್ಕೆ ಹೇಳ್ತಿದೀನಿ , ಒಂದು ಜಾಹಿರಾತಿಗೆ ಭಾಷೆ ಆಯಿಕೆ ಬಹಳ ಮುಖ್ಯ .
೧) ಜಾಹಿರಾತು ಯಾವ ವರ್ಗವನ್ನು ಆಧಾರವಗಿಸ್ಕೊಂಡಿದೆ ಎಂಬುದು ಗಮನಿಸಬೇಕು ಅಂದರೆ ಪಟ್ಟಣದವರಿಗ?ಹಳ್ಳಿಯವರಿಗ?ಹಣವಂತರಿಗ?ಮಧ್ಯಮ ವರ್ಗದ ಜನರಿಗ ಎಂಬ ಅಂಶ ಗಮನಿಸಬೇಕು
೨)ಬೆಂಗಳೂರಿನಂಥ ಮಹಾ ನಗರ ದಲ್ಲಿ ಕೊಳ್ಳುಬಾಕ ತನ ಪದ್ದತಿ ಹೆಚ್ಚಾಗಿರುವ ಸಂದರ್ಬದಲ್ಲಿ , ಅಲ್ಲಿ ನೆಲೆಸಿರುವ ವಿವಿಧ ವರ್ಗದ, ರಾಜ್ಯದ,ದೇಶದ ಜನರ ಆಧಾರದ ಮೇಲೆ ಜಾಹಿರಾತು ನೀಡಳಾಗುತದೆ
೩)ರಾಷ್ಟೀಯ ಭಾಷೆ ಹಿಂದಿ ಎಂಬುದನ್ನ ಮರಿಬೇಡಿ, ಮಾತ್ರು ಭಾಷೆ ಜೊತೆಗೆ ರಾಷ್ಟೀಯ ಭಾಷೆ ಕೂಡ ನಾವೆಲ್ಲರೂ ಕಲಿಯಲೇಬೇಕು,ಜೊತೆ ಜಾಹಿರಾತಿಗೆ ಬರುವಂಥಹ ಜಾಹಿರಾತುದಾರರು ರಾಷ್ಟೀಯ ಮತ್ತದವರಗಿದ್ದಾಗ ನಾವು ಎಲ್ಲ ಭಾಷೆಯವರ ಕಡೆಗೂ ಗಮನ ಹರಿಸುವುದು ನಮ್ಮ ಜಾಹಿರಾತಿನ ಪರಿಪಾಟ .
೪)ಕನ್ನಡ ದ ಹಾಡುಗಳ ಜೊತೆಗೆ ಹಿಂದಿ ಹಾಡುಗಳನ್ನು ಕೂಡ ಕೇಳುವವರು ಬಹಳ ಮಂದಿ ಇದ್ದಾರೆ . ಒಳ್ಳೇದನ್ನ ಎಲ್ಲಿದ್ದರು ಸ್ವೀಕರಿಸುವ ಮನೋಭಾವ ನಮ್ಮ ಅರಿವಿನ ವಿಸ್ಥರಾವನ್ನು ಹೆಚಿಸುತದೆ.
ಚೈತ್ರಾ ಮ್ಯಾಡಮ್,
- ಕನ್ನಡ ಎಫ್.ಎಂ ಕೇಳುಗರಲ್ಲಿ ಎಷ್ಟು ಜನ ಪರಭಾಷಿಕರು?
- ಕನ್ನಡವನ್ನಷ್ಟೇ ಗೊತ್ತಿರೋರು ಈ ಜಾಹಿರಾತು ಕೊಡೋರಿಗೆ ಬೇಕಾಗಿಲ್ವಾ?
- ಒಂದು ನಾಡಿನ ವ್ಯವಸ್ಥೆಯನ್ನು ಅಲ್ಲಿನ ಜನಕ್ಕಾಗಿ ಕಟ್ಟಬೇಕೇ ಹೊರತು ಹೊರಗಿನಿಂದ ಬಂದಿರುವ ವಲಸಿಗರಿಗಾಗಿ ಅಲ್ಲ.
- ಬೆಂಗಳೂರಿನಲ್ಲಿರೊ ಪರಭಾಷಿಕರಲ್ಲಿ ಮೊದಲ ಸ್ಥಾನ ತೆಲುಗರದ್ದು. ನಂತರದ್ದು ತಮಿಳರದ್ದು. ಹಾಗಾದ್ರೆ ನೀವು ತೆಲುಗು ತಮಿಳಲ್ಲಿ ಜಾಹೀರಾತು ಹಾಕ್ತೀರಾ?
- ನೂರಕ್ಕೆ ಎಪ್ಪತ್ತು ಇರೋ ಕನ್ನಡಿಗರನ್ನು ಉದ್ದೇಶಿಸಿ ಜಾಹೀರಾತು ಹಾಕ್ತೀರೋ? ಉಳಿದ ೩೦ರಷ್ಟನ್ನೋ?
- ನಮಸ್ಕಾರ ಮ್ಯಾಡಮ್, ಇದ್ಯಾವುದು ರಾಷ್ಟ್ರೀಯ ಭಾಷೆ ಅನ್ನೋ ಹೊಸಾ ಹೆಸರು? ಕನ್ನಡಿಗರು ಕನ್ನಡನಾಡಲ್ಲಿ ಬದುಕಕ್ಕೆ ಈ ಭಾಷೇನಾ ಯಾಕೆ ಕಲೀಬೇಕು? ರಾಷ್ಟ್ರಭಾಷೆ, ರಾಷ್ಟ್ರೀಯ ಭಾಷೆಗೂ ಏನು ವ್ಯತ್ಯಾಸ? ಇಂಥಾ ಸುಳ್ಳನ್ನು ಅರವತ್ತು ವರ್ಷದಿಂದ ನಮ್ಮ ತಲೆಗೆ ತುಂಬಿ ತುಂಬಿನೇ ಇವತ್ತಿನ ದಿವಸ ನೀವು ಹಿಂದೀ ಪರ, ಹಿಂದೀ ಜಾಹೀರಾತಿನ ಪರ ನಿಲ್ಲುತ್ತಿರೋದು ಅಲ್ವಾ?
- ಕರ್ನಾಟಕದಲ್ಲಿ ಕನ್ನಡ, ಪಂಜಾಬಿನಲ್ಲಿ ಪಂಜಾಬಿ, ತಮಿಳುನಾಡಿನಲ್ಲಿ ತಮಿಳು ಜನಜೀವನದ ಹಾಸುಹೊಕ್ಕಾದ ನುಡಿಯಾಗಬೇಕು, ಸಾರ್ವಭೌಮ ಭಾಷೆ ಆಗಬೇಕು ಅನ್ನೋದು ಸರಿಯಲ್ವಾ?
- ಇಂಥಾ ಸಾರ್ವಭೌಮತ್ವಕ್ಕೆ ಈ ಪರಭಾಷಾ ಜಾಹೀರಾತುಗಳು ಮಾರಕ ಅಲ್ವಾ?
ಹಿಂದೀ ನಮ್ಮ ಬದುಕನ್ನು ಕಸಿದುಕೊಳ್ಳುತಿರೋದ್ರ ಬಗ್ಗೆ ಹೆಚ್ಚು ಹೆಚ್ಚು ತಿಳಿಯಲು "ಏನ್‍ಗುರು ಕಾಫಿ ಆಯ್ತಾ?" ಬ್ಲಾಗನ್ನು ಓದಿ, ಅರ್ಥ ಮಾಡಿಕೊಳ್ಳಿ. ಕೊನೆಯದಾಗಿ ವಿಷಾ ಸಿಹಿ ಇರುತ್ತೆ ಅಂತಾ ಕುಡಿಯಕ್ ಆಗುತ್ತಾ? ಹಿಂದೀನಾ ಎಲ್ಲರೂ ಕಲಿಯಬೇಕು ಅನ್ನೋದು ಪ್ರಾಕ್ಟಿಕಲ್ಲಿ ಅಸಾಧ್ಯ ಅಂತಾ ಅರ್ಥ ಮಾಡ್ಕೊಳ್ಳಿ. ಯಾರು ಕಲುಸ್ತಾರೆ? ಯಾಕೆ ಕಲೀಬೇಕು? ಅನ್ನೋದನ್ನೆಲ್ಲಾ ಯೋಚಿಸಿ. ನಿಮ್ಮ ಈಗಿನ ಅಭಿಪ್ರಾಯ ಬದಲಾದೀತು.
ವಂದನೆಗಳು
ತಿಮ್ಮಯ್ಯ
ಚೈತ್ರಾ ಅವರೇ,
ಏನ್ ಗುರು ಬ್ಲಾಗಿನಲ್ಲಿ ಹಿಂದಿ ರಾಷ್ಟ್ರ ಭಾಷೆ ಅಲ್ಲ, ಅದನ್ನು ಒಪ್ಪಿಕೊಳ್ಳುವುದರಿಂದ ಆಗುವ ತೊಂದರೆ ಏನು ಅನ್ನುವುದರ ಬಗ್ಗೆ ಬೇಕಾದಷ್ಟು ಅಂಕಣಗಳಿವೆ.
ಇಲ್ಲಿ ಒಮ್ಮೆ ಕಣ್ಣು ಹಾಯಿಸಿ
http://enguru.blogspot.com/search/label/%E0%B2%B9%E0%B2%BF%E0%B2%82%E0%B2%A6%E0%B2%BF%20%E0%B2%B9%E0%B3%87%E0%B2%B0%E0%B2%BF%E0%B2%95%E0%B3%86
ಹೀಗೆ ಒಂದೆರಡು ತಿಂಗಳ ಹಿಂದಿನ ಮಾತು,
ಕನ್ನಿಂಗ್ಯಾಂ ರಸ್ತೆಯ ಸಿಗ್ಮಾ ಮಾಲ್ನಲ್ಲಿ ಕರೋಕೆ ಹಾಡಿನ ಸ್ಪರ್ಧೆಯಿತ್ತು.ನಾನು ಆ ಕಡೆ ಹೋದವನೇ ಒಂದು ಹಾಡು ಹಾಡೋಣ ಅಂತ ಅವರ ಹಾಡಿನ ಲಿಸ್ಟ್ ತೆಗೆದು ನೋಡಿದೆ.ಅದರಲ್ಲಿ ಕನ್ನಡವನ್ನ ಬಿಟ್ಟು ಹಿಂದಿ,ತಮಿಳು,ತೆಲುಗು,ಪಂಜಾಬಿ,ಇಂಗ್ಲಿಷ್ ಎಲ್ಲ ಇತ್ತು.ನಾನು ಕಾರ್ಯಕ್ರಮ ನಡೆಸಿಕೊದುತಿದ್ದವನ ಬಳಿ hogi ಕೇಳ್ದೆ
'ಏನ್ ಗುರು ಕನ್ನಡ ಹಾಡಿಲ್ವಾ?'
ಅವನು ಗಾಬರಿ ಬಿದ್ದವನಂತೆ 'ಸಾರಿ,ಸರ್ ನಮ್ಮ ಬಾಸ್ ಕೊಟ್ಟ c.d ಯಲ್ಲಿ ಕನ್ನಡ ಹಾಡುಗಳಿರಲಿಲ್ಲ'
"ಒಹ್! ಹೌದಾ, ಎಲ್ಲಿ ನಿಮ್ಮ ಬಾಸ್ ತೋರ್ಸಿ ನಾನ್ ಕೇಳ್ತೀನಿ, ಯಾಕ್ ಕನ್ನಡ ಇಲ್ಲ ಅಂತ'
ಅವನು ಮತ್ತೆ ಗಾಬರಿಯಾಗಿ, 'ಅಯ್ಯೋ ಬೇಡ ಬಿಡಿ ಸರ್,ಸಾರಿ.ಬೇಕಿದ್ರೆ ನಾನು ನಿಮ್ಮ ಜೊತೆ ಸೇರಿ ಹಾಡ್ತೀನಿ ಬನ್ನಿ ಕನ್ನಡ ಹಾಡು ಹಾಡೋಣ'
'ಹೇಯ್,ತೆಗಿರಿ ನಿಮ್ಮ ಜೊತೆ ನನಗೆಂತ ಹಾಡು, ಇರೋದು ನಮ್ಮೂರಲ್ಲಿ,ತಿನ್ನೋದು ನಮ್ಮ ಅಣ್ಣ, ಭಾಷೆ ಮಾತ್ರ ಬೇಡ್ವಾ?, ತಪ್ಪು ರೀ ಬೇಗದ ಬದಲಾದರೆ ನಿಮಗೆ ಒಳ್ಳೆಯದು" ಅಂತೇಳಿ ಬಂದಿದ್ದೆ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!