ಸಚಿನ್, ಠಾಕ್ರೆ ಮತ್ತು ಮಹಾ...ರಾಷ್ಟ್ರ!


(ಫೋಟೋ : ಎನ್.ಡಿ.ಟಿ.ವಿ ಕೃಪೆ)

ಮೊನ್ನೆ ಮೊನ್ನೆ ಭಾರತೀಯ ಕ್ರಿಕೆಟ್‌ನ ರನ್ ಮಾಂತ್ರಿಕ ಸಚಿನ್ ರಮೇಶ್ ತೆಂಡೂಲ್ಕರ್ ಆಡಿದ ಮಾತುಗಳ ಬಗ್ಗೆ ಮತ್ತು ಅದಕ್ಕೆ ಶಿವಸೇನೆಯ ದೊಡ್ಡೆಜಮಾನ್ರಾದ ಬಾಳಾ ಸಾಹೆಬ್ ಠಾಕ್ರೆಯವರು ನೀಡಿದ ಪ್ರತಿ ಹೇಳಿಕೆಯ ಬಗ್ಗೆ ಭಾರತದ ಎಲ್ಲಾ ಮಾಧ್ಯಮದೋರೂ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ನಲ್ಲಿ ಈ ಘಟನಾವಳಿಗಳು ಜನರಲ್ಲಿ ರಾಜ್ಯ ದೊಡ್ಡದೋ - ದೇಶ ದೊಡ್ಡದೋ, ಭಾಷೆ ದೊಡ್ಡದೋ - ರಾಷ್ಟ್ರೀಯತೆ ದೊಡ್ದದೋ ಅನ್ನೋ ಚರ್ಚೆಗೆ ಕಾರಣವಾಗಿದೆ. ನಿಸ್ಸಂದಿಗ್ಧವಾಗಿ ಎಲ್ಲಾ ಮಾಧ್ಯಮಗಳೂ ಭಾಷೆ ಮತ್ತು ಪ್ರಾದೇಶಿಕ ವಾದಾನಾ ದೇಶದ್ರೋಹದ್ದು ಅನ್ನೋ ಹಾಗೆ ಚಿತ್ರುಸ್ತಾ ಇದಾರೆ. ಪ್ರಾದೇಶಿಕ ಚಿಂತನೆ ರಾಷ್ಟ್ರದ ಒಗ್ಗಟ್ಟಿಗೆ ಹಾನಿಕಾರಕ ಅಂತಾ ಶಂಖಾ ಹೊಡ್ಕೊತಾ ಇದಾರೆ. ನಾವೇನೂ ಕಮ್ಮಿ ಇಲ್ಲ ಅನ್ನುವ ಹಾಗೆ ಕನ್ನಡನಾಡಿನ ಮಾಧ್ಯಮಗಳೂ ಇದರ ಬಗ್ಗೆ ಪುಂಖಾನುಪುಂಖವಾಗಿ ಬರೀತಿದಾರೆ. ಸಮಸ್ತ ಕನ್ನಡಿಗರ ಹೆಮ್ಮೆಯಾದ ವಿಜಯ ಕರ್ನಾಟಕದಲ್ಲಿ ಬರಹಗಾರ ಡಿ. ಅಶೋಕ್‌ರಾಮ್ ಅನ್ನೋರು ಸಚಿನ್ ಮುಂಬೈನ ಯಜಮಾನಿಕೆ ಬಗ್ಗೆ ಆಡಿದ ಮಾತನ್ನೇ ಮರೆಮಾಡಿ ’ನಾನು ಮೊದಲು ಭಾರತೀಯ ಅಂದಿದ್ದಕ್ಕೇ ಹೀಗೆ ಬಾಳಾಠಾಕ್ರೆ ಎಗರಾಡಿದಾರೆ, ಭಾಷೆಗಿಂತ ದೇಶ ದೊಡ್ದು... ಬ್ಲಾ ಬ್ಲಾ ಬ್ಲಾ’ ಅಂತೆಲ್ಲ ಬರೆದಿದ್ದಾರೆ. ಇದೇನಪ್ಪಾ ಹಿಂಗಾ... ಅಂತಾ ಏನ್‍ಗುರು ಈ ವಿಷಯದಲ್ಲಿ ಇಣುಕೌನೆ ನೋಡ್ಮಾ ಬಾ ಗುರು!

ಸಚಿನ್ ಮಾತಿನಲ್ಲಿರೋದೇನು?

ಸಚಿನ್ ಹೇಳಿರೋದ್ರ ಸಾರಾಂಶ “ನಾನೊಬ್ಬ ಮಹಾರಾಷ್ಟ್ರೀಯ ಅಂತಾ ಹೆಮ್ಮೆ ಇದೆ. ಆದರೆ ಅದಕ್ಕೆ ಮೊದಲು ನಾನು ಭಾರತೀಯ. ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು” ಅನ್ನೋದಾಗಿದೆ. ಅತ್ಯಂತ ದೇಶಭಕ್ತಿಯ ಮಾತುಗಳಿವು ಅನ್ನಿಸೋ ಹಾಗಿರೋ ಈ ಮಾತಲ್ಲಿ ಎಲ್ಲಾ ಸರಿಯೇ ಇದೆ ಅನ್ಸುತ್ತೆ. ಆದರೆ ಇದರಲ್ಲಿ ಬಾಳಾಠಾಕ್ರೆಯವರನ್ನು ಕೆರಳಿಸಿದ್ದು ‘ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು, ನಾನು ಮೊದಲು ಭಾರತೀಯ’ ಅನ್ನೋ ಮಾತುಗಳು. ಮಾಮೂಲಿ ದಿನದಲ್ಲಾಗಿದ್ರೆ ಈ ಮಾತಿಗೆ ಅಷ್ಟು ಮಹತ್ವವೇ ಇರುತ್ತಿರಲಿಲ್ಲವೇನೋ? ಯಾಕಂದ್ರೆ ಠಾಕ್ರೆ ಕೂಡಾ ಭಾರತ ಮಾತೆ, ಭಾರತ ಜನತೆ, ಭಾರತೀಯತೆ, ಜೈ ಹಿಂದ್ ಅಂತಾನೇ ಇಷ್ಟು ವರ್ಷ ಮಾತಾಡಿದ್ದಿದೆ. ಆದ್ರೆ ಈಗ ಪರಿಸ್ಥಿತಿ ಹೆಂಗೆ ಭಿನ್ನಾ ಅಂತೀರಾ? ಇತ್ತೀಚಿಗಷ್ಟೇ ಅಲ್ಲಿನ ವಲಸಿಗರು ತಾವು ಭಾರತೀಯರು, ಎಲ್ಲಿಗೆ ಬೇಕಾದ್ರೂ ಹೋಗಿ ಬಾಳುವ ಹಕ್ಕಿದೆ, ನಮ್ಮ ನಡೆ ನುಡಿ ಆಚರಣೆ ಸಂಸ್ಕೃತಿಗಳನ್ನು ನಮಗೆ ಬೇಕಾದಂತೆ ಆಚರಿಸೋ/ ತೋರಿಸಿಕೊಳ್ಳೋ ಹಕ್ಕಿದೆ ಅಂತಾ ಸಂವಿಧಾನದ ಕಡೆಗೆ ಬೊಟ್ಟು ತೋರುಸ್ತಿದಾರೆ. ವಿಷ್ಯಾ ಇಷ್ಟೇ ಅಲ್ವೇ... ಮುಂಬೈ ನಗರ ಪಾಲಿಕೆಯ ಆಳ್ವಿಕೆ ಹಿಂದೀಲಿ ಆಗಬೇಕು ಇವರ‍್ಯಾಕೆ ಕೇಳುದ್ರು? ಇವ್ರು ೩೦ ವರ್ಷದಿಂದ ಮಹಾರಾಷ್ಟ್ರದಲ್ಲೇ ಬದುಕ್ತಾ ಇದ್ರೂ ಮರಾಠಿ ಕಲಿಯಲ್ಲ ಅಂತಾ ಯಾಕಂದ್ರು? ಹಿಂದೀನಾ ರಾಷ್ಟ್ರಭಾಷೆ ಅಂತ ಯಾಕಂದ್ರು? ಈಗ ಮುಂಬೈನ ಮಿನಿ ಉತ್ತರ ಪ್ರದೇಶ ಅಂತಾ ಹ್ಯಾಗಂದ್ರು? ಹಾಗೇ ಮರಾಠಿ ಮುಖ್ಯವಾಹಿನೀಲಿ ಬೆರೆಯದೇ ಹೋದ್ರೆ, ಅದು ಮುಂಬೈ ಮತ್ತು ಮಹಾರಾಷ್ಟ್ರಗಳ ಮರಾಠಿ ಜನರ ಬದುಕಿನ ಮೇಲೆ ಏನು ಪರಿಣಾಮ ಬೀರುತ್ತೆ ಅನ್ನೋದೆಲ್ಲಾ ಇವರಿಗೆ ಗೊತ್ತಿಲ್ಲವೇನು?

ಸಚಿನ್ ಬೆಂಬಲಿಸಿ ಮಾತಾಡ್ದೋರು...

ಭಾರತ, ಮಹಾರಾಷ್ಟ್ರಾ, ಮುಂಬೈ ನಡುವೆ ಏನ್ ಸಂಬಂಧಾ ಇದೆ? ಮರಾಠಿಗೆ ಮುಂಬೈನಲ್ಲಿ ಏನ್ ಮಹತ್ವ ಇದೆ? ಅನ್ನೋದನ್ನೆಲ್ಲಾ ಯೋಚುಸ್ದೆ ಭಾರತ ಅನ್ನೋದ್ರು ಮುಂದೆ ಎಲ್ಲಾ ಗೌಣ ಅನ್ನೋ ಪ್ರಚಾರಕ್ಕೆ ಮರುಳಾಗಿರೋ ಸಾಮಾನ್ಯರು ಸಚಿನ್‍ನ ಬೆಂಬಲಿಸಿ ಮಾತಾಡ್ತಾರೆ. ಅಷ್ಟ್ಯಾಕೆ? ಯಾರಿಗೆ ಇದರಿಂದಾಗಿ ಲಾಭ ಇದೆಯೋ ಅವರೆಲ್ಲಾ ಇದನ್ನು ಬೆಂಬಲಿಸಿರೋರಲ್ಲಿ ಸೇರಿದ್ದಾರೆ. ಸಚಿನ್‌ಗಾದ್ರೂ ಬೇಕಿರೋದು ಅಖಿಲ ಭಾರತ ಮಟ್ಟದ ಬೆಂಬಲ ತಾನೇ? ಲಾಲೂ, ನಿತಿನ್, ಮುಲಾಯಂಸಿಂಗ್, ಅಮರ್‌ಸಿಂಗ್, ಮಾಯಾವತಿಯಂತಹ ಜನರಿರೋ ಪ್ರದೇಶದವರಿಗೆ ಸಚಿನ್‍ನ ಈ ಹೇಳಿಕೆಯಿಂದ ಲಾಭಾ ತಾನೇ? ಬೆಂಗಳೂರಿನಲ್ಲಿರಲಿ, ಮುಂಬೈಯಲ್ಲಿರಲಿ ಹೊರಗಿಂದ ಬಂದು ನೆಲೆಸಿರೋ ವಲಸಿಗರೆಲ್ಲಾ ಇದು ಲಾಭದಾಯಕವಾದ ಹೇಳಿಕೇನೆ. ಹಾಗಾಗಿ ಈ ಮಾತನ್ನು ಪಾಪಾ... ಹಿಂದೆ ಮುಂದೆ ನೋಡದೇ ಈ ಜನಾ ಮತ್ತವರ ಹಿಡಿತದ ಮಾಧ್ಯಮಗಳೋರೂ ಮೇಲೆ ಬಿದ್ದು ಬೆಂಬಲಿಸುತ್ತಾರೆ. ಇನ್ನು ರಾಷ್ಟ್ರೀಯ ಪಕ್ಷಗಳೋರು ಸಮರ್ಥಿಸೋದ್ರಲ್ಲಿ ಅನುಮಾನಾನೇ ಬೇಡ. ರಾಷ್ಟ್ರ ಅಂದ್ರೇನು ಅನ್ನೋದ್ರ್ ಬಗ್ಗೆ ಸರಿಯಾದ ಪರಿಕಲ್ಪನೇನೆ ಇಲ್ಲದ, ವೈವಿಧ್ಯತೆಯನ್ನು ಶಾಪವೆಂದೂ ಗೌಣವೆಂದೂ, ರಾಷ್ಟ್ರದ ಒಗ್ಗಟ್ಟಿಗೆ ವೈವಿಧ್ಯತೆಯನ್ನೇ ಅಳಿಸಿ ಹಾಕಬೇಕು ಅನ್ನೋ ಮನಸ್ಥಿತಿಯ ಜನರಿಂದ ಇನ್ನೇನು ತಾನೇ ನಿರೀಕ್ಷಿಸಬಹುದು? ಭಾಷಾವಾರು ಪ್ರದೇಶಗಳನ್ನು ಯಾಕೆ ರಚಿಸಲಾಯಿತು? ಕರ್ನಾಟಕ ಏಕೀಕರಣದ ಇತಿಹಾಸ ಏನು? ಭಾಷೆ ಅಂದರೇನು? ಸಮಾಜದಲ್ಲಿ ಅದರ ಪಾತ್ರವೇನು? ಎಂಬುದನ್ನೆಲ್ಲಾ ಅರಿಯದವರು ಬೆಂಬಲಿಸೋದು ಸಹಜ. ಭಾಷಾವಾರು ಪ್ರಾಂತ್ಯಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾತ್ರ ರಚಿಸಲಾಯಿತು ಎಂದು ಬೂಸಿ ಬಿಡುವವರು... ಸಚಿನ್ ಹೇಳಿಕೇನ ಬೆಂಬಲಿಸೋದು ಸಹಜ.

ಸಚಿನ್ ಮಾತಿನಲ್ಲಿರೋ ಟೊಳ್ಳುತನ ಏನು?

ಈಗ ಸಚಿನ್ ಹೇಳಿರೋ ಹಾಗೇ ‘ನಾನು ಮೊದಲು ಭಾರತೀಯ’ ಅನ್ನೋದ್ರ ಅರ್ಥ ಏನು? ಭಾರತದ ಹಿತಕ್ಕಾಗಿ ನಾನು ನನ್ನ ರಾಜ್ಯದ ಹಿತವನ್ನು, ನನ್ನ ಭಾಷೆಯ ಹಿತವನ್ನು ಬಿಟ್ಟುಕೊಡ್ತೀನಿ ಅಂತಾನಾ? ಯುದ್ಧದಂತಹ ಕೆಲವು ಸನ್ನಿವೇಶಗಳಲ್ಲಿ ತಾತ್ಕಾಲಿಕವಾಗಿ ಈ ರೀತಿ ಬಿಟ್ಟುಕೊಡುವುದನ್ನು ಒಪ್ಪಬಹುದು. ಸಾಮಾನ್ಯ ಸಂದರ್ಭದಲ್ಲಿ ಈ ಮಾತಿನ ಅರ್ಥವೇನು? ನನ್ನ ದೇಶದಲ್ಲಿ ಭಾಷೆ, ಪ್ರಾದೇಶಿಕತೆಯ ಆಧಾರದ ಮೇಲೆ ಒಗ್ಗಟ್ಟು ಮುರಿಯುವ ಕೆಲಸ ಮಾಡುವುದಿಲ್ಲ ಅಂತಾನಾ? ಹೌದೂ ಅನ್ನೋದಾದ್ರೆ ಸರಿ. ಇವತ್ತಿನ ದಿವಸ ಒಗ್ಗಟ್ಟು ಮುರಿಯೋ ಮಾತು ಯಾವುದು? ಎಲ್ಲಾ ಪ್ರದೇಶಗಳಿಗಿರುವ ಭಾಷಾ, ಸಾಂಸ್ಕೃತಿಕ ಅನನ್ಯತೆಗಳನ್ನು ಕಾಯ್ದುಕೊಳ್ಳಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಇಡೀ ದೇಶದಲ್ಲಿ ಯಾವುದೋ ಒಂದು ಪ್ರದೇಶದ ಭಾಷೆಯನ್ನು ಆಡಳಿತದಲ್ಲಿ ಜಾರಿಗೊಳಿಸಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಊರ ದೇವತೆ ಅಣ್ಣಮ್ಮ ದೊಡ್ಡವಳೋ? ಕನ್ನಡತಾಯಿ ರಾಜರಾಜೇಶ್ವರಿ ದೊಡ್ಡವಳೋ? ಭಾರತಮಾತೆ ದೊಡ್ಡವಳೋ? ಎಂಬ ಪ್ರಶ್ನೆಗೆ ಏನುತ್ತರ? ಭಾರತ ಮಾತೆ ದೊಡ್ಡೋಳು, ಕನ್ನಡಮ್ಮ ಅವಳ ಮಗಳು, ಅಣ್ಣಮ್ಮ ಮೊಮ್ಮಗಳು ಅನ್ನೋದು ಸರೀನಾ ಗುರು? ನಿಜವಾಗಿಯೂ ತಾಯಿ ಅಣ್ಣಮ್ಮನೆಂದರೂ, ರಾಜೇಶ್ವರಿಯೆಂದರೂ, ಭಾರತ ಮಾತೆಯೆಂದರೂ ಒಬ್ಬಳೇ ಅಲ್ಲವೇ? ಭಾಳ ದಿನದ ಮೇಲೆ ತಾಯ್ನಾಡಿಗೆ ಹಿಂತಿರುಗಿದ ದೇಶಪ್ರೇಮಿ ಇಲ್ಲಿ ಬೆಂಗಳೂರಿನ ಮಣ್ಣನ್ನು ಎತ್ತಿ ಕಣ್ಣಿಗೊತ್ತಿಕೊಂಡ್ರೆ ಅದು ಬೆಂಗಳೂರಿನ ಮಣ್ಣು ಮಾತ್ರವೇನು? ಅದು ಭಾರತದ ಮಣ್ಣಲ್ಲವೇನು? ಮುಂಬೈ ಅಂದರೆ ಭಾರತವಲ್ಲವೇನು? ನಾನು ಮಹಾರಾಷ್ಟ್ರೀಯ ಅಂದರೆ ಭಾರತೀಯ ಅಂದ ಹಾಗಲ್ಲವೇ? ಸಚಿನ್ ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋ ಮಾತಂದದ್ದು ತಪ್ಪಲ್ವಾ? ನಾನು ಮಹಾರಾಷ್ಟ್ರೀಯನೂ ಹೌದು, ಭಾರತೀಯನೂ ಹೌದು ಅನ್ನಬೇಕಾದ್ದು ಸರಿಯಲ್ವಾ? ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋದು ಕೃತಕ ಅನ್ಸಲ್ವಾ ಗುರು? ಸಚಿನ್‍ಗೆ ಭಾರತೀಯತೆ ಮತ್ತು ಮಹಾರಾಷ್ಟ್ರೀಯತೆ ಬಂದಿರೋದು ಒಟ್ಟೊಟ್ಗೆ ಅಲ್ವಾ? ಒಂದುಕ್ ಇನ್ನೊಂದು ವಿರುದ್ಧ ಅನ್ನೋ ಮನಸ್ಥಿತಿ ಸರೀನಾ? ನಿಜವಾಗಿ ನಾಡೊಡೆಯುತ್ತಿರುವವರು ಯಾರೆಂದರೆ ಅಣ್ಣಮ್ಮ, ರಾಜೇಶ್ವರಿ, ಭಾರತಾಂಬೆ ಅನ್ನೋ ಈ ಮೂವರಲ್ಲೂ ಒಬ್ಬಳನ್ನೇ ಕಾಣದೆ ಮೂವರಲ್ಲೂ ಪರಸ್ಪರ ಪೈಪೋಟಿಯ ಮೂರು ಬೇರೆ ಬೇರೆ ದೈವಗಳನ್ನು ಕಾಣುತ್ತಿರುವ ಹುಸಿ ರಾಷ್ಟ್ರೀಯವಾದಿಗಳು ಅನ್ನುಸ್ತಿಲ್ವಾ ಗುರು?

ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು!

ಮುಂಬೈ ಎಲ್ಲಾ ಭಾರತೀಯರಿಗೂ ಸೇರಿದ್ದು ಅನ್ನುವುದರ ಅರ್ಥವೇನು ? ಮುಂಬೈಗೆ ಯಾವ ಭಾರತೀಯ ಬೇಕಾದರೂ ಬರಬಹುದು, ಇರಬಹುದು, ದುಡಿಯಬಹುದು ಅನ್ನುವುದು ಮಾತ್ರವೇ ಆದರೆ ಇದು ಒಪ್ಪುವ ಮಾತೇ. ಆದರೆ ತಡೆಯಿಲ್ಲದ ವಲಸೆ, ಎಲ್ಲಾ ಕೆಲಸದಲ್ಲೂ ತಮ್ಮವರನ್ನು ತಂದು ತುಂಬುವ ಉಮ್ಮೇದಿ, ಮರಾಠಿ ಭಾಷಿಕರೆಂದರೆ ಟೀ, ಕಾಫಿ, ಡಬ್ಬಾವಾಲಾ, ರಿಕ್ಷಾವಾಲಗಳು ಎನ್ನುವಂತೆ ಮುಂಬೈನಲ್ಲಿ ಸನ್ನಿವೇಶ ಹುಟ್ಟಿಕೊಂಡಿರುವಾಗ, ರೈಲ್ವೇ ಬ್ಯಾಂಕು ಮೊದಲಾದ ಎಲ್ಲಾ ಕೆಲಸಕ್ಕೂ ನೇಮಕಾತಿ ಪರೀಕ್ಷೆಗಳು ಹಿಂದಿಯಲ್ಲಿ ನಡೆಯುತ್ತಿರುವಾಗ, ಅಂಥಾ ಪರೀಕ್ಷೆಗಳಿಗೆ ಬಿಟ್ಟಿ ರೈಲುಗಳಲ್ಲಿ ಬಿಹಾರ, ಉತ್ತರ ಪ್ರದೇಶಗಳಿಂದ ಜನರನ್ನು ಕರೆತರುತ್ತಿರುವಾಗ, ಆಡಳಿತ ಭಾಷೆಯನ್ನು ಹಿಂದಿಗೆ ಬದಲಾಯಿಸಿ ಎನ್ನುವಾಗ... ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಎನ್ನುವ ಮಾತಿಗೆ ಬೇರೆಯೇ ಅರ್ಥ ಹುಟ್ಕೊಳುತ್ತೆ. ಮುಂಬೈ ಮರಾಠಿಗರಿಗೆ ಸೇರಿದ್ದಲ್ಲಾ ಎನ್ನುವ ಹೇಳಿಕೆಗೂ ಮುಂಬೈ ಇಡೀ ಭಾರತೀಯರಿಗೆಲ್ಲಾ ಸೇರಿದ್ದು ಅನ್ನುವುದಕ್ಕೂ ಅಂಥಾ ವ್ಯತ್ಯಾಸ ಏನಿದೆ ಗುರು? ಹಿಂದೆ ಈ ಮಾತೂ ಆಗಿಹೋಗಿದೆ. ಮುಂಬೈ ಬರೀ ಮರಾಠಿಗರು ಕಟ್ಟಿದ್ದಲ್ಲಾ, ಎಲ್ಲಾ ಭಾರತೀಯರು ಇದನ್ನು ಕಟ್ಟಿದ್ದಾರೆ ಎಂದಿದ್ದರು. ಏನ್ ಗುರುಗಳೇ... ಯಾರಾದರೂ ಮುಂಬೈ ನಗರವನ್ನು ಕಟ್ಟಲೆಂದು, ಬೆಳೆಸಲೆಂದು ಮುಂಬೈಗೆ ವಲಸೆ ಹೋಗಿರ್ತಾರಾ? ಅಥ್ವಾ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಿಯ ಹೊಸಿಲು ತುಳಿದಿರ್ತಾರಾ? ಏನೋ ಉಪಕಾರ ಮಾಡಕ್ಕೆ ಮುಂಬೈಗೆ ವಲಸೆ ಬಂದು, ಊರು ಉದ್ಧಾರ ಮಾಡಿದ ಹಾಗಿರೋ ದೊಡ್ಡಸ್ತಿಕೆಯ ಬೂಟಾಟಿಕೆಯ ಮಾತುಗಳನ್ನು ಆಡೋದು ಬಿಟ್ಟು... ತಿಳಿಯಬೇಕಾದ್ದು ಒಂದೇ. ಭಾರತದ ಮೂಲೆಮೂಲೆಯಿಂದ ಹಣ, ಬದುಕು, ಹೆಸರು, ಉನ್ನತಿಯನ್ನು ಅರಸಿ ಮುಂಬೈ ಮಹಾನಗರಿಗೆ ಕಾಲಿಡುವ ವಲಸಿಗರು ತಮ್ಮತನವನ್ನು, ನಡೆನುಡಿಯನ್ನು, ಸಂಸ್ಕೃತಿಗಳನ್ನು ತಮ್ಮ ತಮ್ಮ ಮನೆಗಳಿಗೆ ಸೀಮಿತಗೊಳಿಸಿಕೊಂಡು ಮುಂಬೈನ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಹಿಂದಿ ರಾಷ್ಟ್ರಭಾಷೆ, ಭಾರತದ ಯಾವ ಮೂಲೆಯಲ್ಲಾದರೂ ಇದು ನಡೀಬೇಕು ಅನ್ನುವ ಸುಳ್ಳಿನ ಪಿತ್ಥವನ್ನು ನೆತ್ತಿಯಿಂದಿಳಿಸಿಕೊಂಡು ನೆಟ್ಟಗೆ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆತು ಬದುಕುವುದಾದರೆ... ಹೌದು... ಮುಂಬೈ ಎಲ್ಲಾ ಭಾರತೀಯರದ್ದೇ. ಯಾಕಂದ್ರೆ ಈ ಮಾತು ನಾಳೆ ಬೆಂಗಳೂರಿಗೂ ಅನ್ವಯವಾಗೋದೇ! ಏನಂತೀ ಗುರು?

16 ಅನಿಸಿಕೆಗಳು:

Anonymous ಅಂತಾರೆ...

ಇಂತಹ, ವಿಚಾರದ ಒಳಹೊಕ್ಕು ಸತ್ಯವನ್ನು ಹೊರಹಾಕುವ ಲೇಖನಗಳನ್ನು ಬರೀ ಬ್ಲಾಗ್ ಗಳಲ್ಲಿ ನಾವು ಓದಿಕೊಳ್ಳಬೇಕಾಗಿದೆ. ಇಂತಹ ಲೇಖನಗಳನ್ನು ಪತ್ರಿಕೆಗಳು ಏಕೆ ಮುದ್ರಿಸೋದಿಲ್ಲ? ಟೀವಿ ವಾಹಿನಿಗಳು ಯಾಕೆ ಇದರ ಬಗ್ಗೆ ಮಾತನಾಡೊಲ್ಲ? ಇದು ಅವರು ಪ್ರಜಾತಂತ್ರ ವ್ಯವಸ್ಥೆಗೆ ಬಗೆಯುತ್ತಿರುವ ದ್ರೋಹವಲ್ಲದೆ ಮತ್ತೇನೂ ಅಲ್ಲ.

ಬನವಾಸಿ ಬಳಗ ದಂತ ಸಂಘಟನೆಗಳು ಪ್ರತಿಯೊಂದು ರಾಜ್ಯದಲ್ಲೂ ಇರಬೇಕು. ನಮಗೆ ಮುಸುಕಿರುವ ಮಾಯದ ಪರದೆಯನ್ನು ಹರಿದು ಸತ್ಯದರ್ಶನ ಮಾಡಿಸುತ್ತಿರುವ ಏನ್ ಗುರುವಿಗೆ ಅನಂತಾನಂತ ವಂದನೆಗಳು!

-ಪ್ರಭು

ಮಧುಚಂದ್ರ ಅಂತಾರೆ...

ಸರಿಯಾಗಿ ಹೇಳಿದ್ರಿ ಗುರು..
ಭಾರತ ಒಂದು ಒಕ್ಕೂಟ ಅಂತ ಜನಕ್ಕೆ ಮರೆತು ಹೋದ ಹಾಗಿದೆ ...

Anonymous ಅಂತಾರೆ...

obba vyakti, naanu kannadiganendare, athava marathiganendare avanu taanu bharateeya endu hELida haageyE.. Yaakendare avoo bhaarateeya bhaashegaLe allavE.. praadEshika bhaashegaLe bErE raashTra bhasheyE(?) bere endu bimbisuttiruvudu maadhyamagaLa moorKHatana.. mattu idakkinta deshadrohada maatu innondilla..

-Guru

Anonymous ಅಂತಾರೆ...

ಗುರು, ಈ ಲೇಖನದ ಒಂದೊಂದು ವಾಕ್ಯನೂ ಓದುತ್ತಾ ಇದ್ರೆ ಹಾಗೆ ವಿಜಲ್ ಹೊಡಿಯೋಣ ಅಂತ ಅನ್ನಿಸ್ತ ಇತ್ತು. ಏನ್ ಮಾಡ್ಲಿ ಆಫೀಸ್ನಲ್ಲಿ ಇದೀನಿ.
ನನ್ನ ಮನಸ್ಸಿಗೆ ನಾಟಿದ ವಾಕ್ಯಗಳು ----> ಮುಂಬೈ ಅಂದರೆ ಭಾರತವಲ್ಲವೇನು? ನಾನು ಮಹಾರಾಷ್ಟ್ರೀಯ ಅಂದರೆ ಭಾರತೀಯ ಅಂದ ಹಾಗಲ್ಲವೇ?
ಯಾರಾದರೂ ಮುಂಬೈ ನಗರವನ್ನು ಕಟ್ಟಲೆಂದು, ಬೆಳೆಸಲೆಂದು ಮುಂಬೈಗೆ ವಲಸೆ ಹೋಗಿರ್ತಾರಾ? ಅಥ್ವಾ ಹೊಟ್ಟೆಪಾಡಿಗಾಗಿ...

--ಸಿದ್ದ

Phadke ಅಂತಾರೆ...

ಸಚಿನ್ ನಮ್ ದೇಶದ ಮಹಾನ್ ಕ್ರಿಕೆಟ್ ಆಟಗಾರ.ಆತನ ಬಗ್ಗೆ ನಮಗೆ ತು೦ಬಾ ಗೌರವವಿದೆ. ಆದರೆ ಆತ ನಮಗೆ ತಿಳಿದ೦ತೆ ರಾಜಕಾರಣಿ ಅಲ್ಲ . ಆತನಿ೦ದ ಮು೦ಬೈ ಬಗೆಗಿನ ಹೇಳಿಕೆ ಪ್ರಸಕ್ತ ವಾತಾವರಣಕ್ಕೆ ಖ೦ಡಿತ ತಕ್ಕುದಲ್ಲ

ಪಲ್ಲವಿ ಮುರಳಿಧರ ಅಂತಾರೆ...

ಗುರು,
ಇತ್ತಿಚೆಗೆ ಚಿಂತೆ ಮಾಡ್ತಾನೇ ಇದೀನಿ. ಸ್ವಾತಂತ್ರ್ಯಕ್ಕಿಂತ ಮುಂಚೆ ಕನ್ನಡ ಮಾತಾಡಿಕೊಂಡೇ, ಕನ್ನಡಿಗರೇ ೯೫% ಇದ್ದ ಕರ್ನಾಟಕ, ಭಾರತದ ಭಾಗವಾಗಿರಲಿಲ್ಲವೇ? ಈಗ ಹಿಂದಿ ಕಲಿತು ಇನ್ನೊಮ್ಮೆ ಭಾರತೀಯ ಅನ್ನಿಸಿಕೊಳ್ಳಬೇಕೇ?
ಈ ಮಾಧ್ಯಮದವರಿಗೆಲ್ಲ ಏನಾಗಿದೆ? ಕನ್ನಡ-ಕರ್ನಾಟಕ ಅಂತ ಮಾತನಾಡುವುದೇ ದೇಶ ದ್ರೋಹ ಅನ್ನುವಂತೆ ನೋಡುವುದು ನಿಜಕ್ಕೂ ಬೇಕಾ? ನಮ್ಮ ನಮ್ಮ ನಾಡಲ್ಲಿ, ನಮ್ಮ ನುಡಿಯಲ್ಲಿ ಕಲಿಕೆ, ನಮ್ಮ ನಾಡಲ್ಲಿ ಒಳ್ಳೆಯ ದುಡಿಮೆ, ನಮ್ಮ ಆಚಾರ-ವಿಚಾರ ಪಾಲಿಸೋ ಅಧಿಕಾರ ಇಟ್ಟುಕೊಂಡು ಪ್ರತಿಯೊಬ್ಬರು ತಮ್ಮ ತಮ್ಮ ನಾಡು ಉದ್ಧಾರ ಮಾಡಿಕೊಂಡ್ರೆ, ಭಾರತ ಉದ್ಧಾರ ಆಗದೇ ಏನು ಪಾಕಿಸ್ತಾನ ಉದ್ಧಾರ ಆಗುತ್ತಾ? ಕನ್ನಡಿಗ ಅಂದ ತಕ್ಷಣ ಭಾರತೀಯನು ಆಗುತ್ತಾನೆ ಅನ್ನುವ ಸಾಮಾನ್ಯ ಪ್ರಜ್ನೆ ಇಲ್ಲದ ಜನರೇ ಇವತ್ತು ಎಲ್ಲದಕ್ಕೂ ಒವರ್ ರಿಯಾಕ್ಟ್ ಮಾಡುತ್ತಾ ಇರೋದು.

ಇವತ್ತಿನ ಬರಹ ಏನ್ ಗುರುವಿನ ೨ ವರ್ಷದ ಅದರ ಇತಿಹಾಸದಲ್ಲೇ ದಿ ಬೆಸ್ಟ್ ಅನ್ನುವುದು ನನ್ನ ಅನಿಸಿಕೆ. ಅಭಿನಂದನೆಗಳು, ಹಾಗೆಯೇ ಆದಷ್ಟು ಬೇಗ ಎಲ್ಲ ಭಾಷೆ, ಎಲ್ಲ ಭಾಷಿಕರನ್ನು ಸಮಾನವಾಗಿ ಕಾಣೋ ವ್ಯವಸ್ಥೆ ಬರಲಿ ಎಂದು ಹಾರೈಸುವೆ.

Kannada Nationalist ಅಂತಾರೆ...

ಒಳ್ಳೇ ಬರಹ..

ನನಗಂತೂ ಇದು ವೆರೆಗೂ ಈ ಭಾರತೀಯತೆ( ಒಂದು ಕಲ್ಚರ‍್ ಆಗಿ) ಅಂದ್ರೇನು ಅಂತ ತಿಳೀತಾನೇ ಇಲ್ಲ. ಅದಕ್ಕೆ ನಾನು ಬರೀ ಕನ್ನಡಿಗ ಮಾತ್ರ ಅಂತ ಹೇಳಿಕೊಳ್ಳಬಲ್ಲೆ. ನಾನು ಇಂಡಿಯ ಅನ್ನೋ ಒಂದು ಭೂಭಾಗದಲ್ಲಿ ಹುಟ್ಟಿರುವುದರಿಂದ ನಾನು ಒಬ್ಬ ಭಾರತೀಯ/ಇಂಡಿಯನ್. ಇದು ನಾನೊಬ್ಬ ಏಷಿನ್ ಹೇಗೋ ಹಾಗೇ. ನನಗೆ ಭಾರತ/ಇಂಡಿಯ ಅನ್ನೋದೊಂದು ಸಾಂಸ್ಕೃತಿಕ ಗುರುತು ಎಂದು ಅನ್ನಿಸಿಲ್ಲ..

ನಾನು ಕನ್ನಡಿಗ ಅಂದ ಮೇಲೇನೇನೇ ನಾನು ಭಾರತೀಯ ಆಗೋದು. ಒಬ್ಬ ಕನ್ನಡಿಗ, ತಮಿಳ, ತೆಲುಗ, ಮರಾಟಿ, ಬೆಂಗಾಲಿ.. .. ಹಿಂಗೆ ಒಂದು ಇಂಡಿಯದ ನುಡಿಗೆ ಸೇರದೇ , ಅದು ಹೇಗೇ ಬರೀ ಭಾರತೀಯ ಆಗಬಲ್ಲ?

ನನಗಂತೂ ನಾನು ಭಾರತೀಯನೋ ಅಲ್ವೋ ಗೊತ್ತಿಲ್ಲ.. ಆದರೆ ನಾನು ಒಬ್ಬ ಕನ್ನಡಿಗನಂತೂ ದಿಟ. ಯಾಕೆಂದರೆ ನನ್ನ ತಂದೆ-ತಾಯಿ ಜನಾಂಗೀಯವಾಗಿ ಕನ್ನಡಿಗರು ಹಾಗು ನನ್ನ ತಾಯ್ನುಡಿ ಕನ್ನಡ.

ಹರೀಷ್ ಹರಿಥಾಸ್, ಮು೦ಬೈ ಅಂತಾರೆ...

ಕನ್ನಡಿಗರು ರಾಷ್ಟ್ರೀಯತೆ ಮತ್ತು ಕನ್ನಡ-ಕನ್ನಡಿಗ-ಕರ್ನಾಟಕದ ಸಾರ್ವಭೌಮತ್ವದ ಬಗ್ಗೆ ಹೆಚ್ಚೆಚ್ಚು ಚರ್ಚೆಗಳನ್ನು ನಡೆಸಬೇಕು. ಹಿ೦ದಿಯನ್ನು ಒಪ್ಪದಿರುವ ಮರಾಠಿ/ಕನ್ನಡಿಗನನ್ನು ನೀನೊಬ್ಬ ರಾಷ್ಟ್ರದ್ರೋಹಿ, MNS ಬೆ೦ಬಲಿಗ, ರಾಜ್ ಠಾಕ್ರೆ ಗುಲಾಮ, ಟೆರರಿಸ್ಟ್ ಎ೦ದೆಲ್ಲಾ ಕರೆಯುವ ಈ ಕಾಲದಲ್ಲಿ ಕನ್ನಡಿಗನು ಹೆದರಿ ತನ್ನ ಮೊದಲ ಗುರುತು ಭಾರತೀಯನಾಗಿರುವುದು, ಹೆಚ್ಚು ಹೆಚ್ಚು ಹಿ೦ದಿಯನ್ನು ಮೈಗೂಡಿಸಿಕೊಳ್ಳುವುದು ಎ೦ದುಕೊ೦ಡಿದ್ದಾನೆ.

ಈ ವಿಷಯಗಳ ಬಗ್ಗೆ ಆಳವಾಗಿ ಚಿ೦ತನೆ ನಡೆಸಿ ನಿಮ್ಮ ಬ್ಲಾಗ್ ಗಳನ್ನು ಬರೆಯುತ್ತಿರುವುದು, ಹೆಚ್ಚೆಚ್ಚು ಕನ್ನಡಿಗರನ್ನು ಚರ್ಚೆಮಾಡಲು, ಅವರು ಬೇರೆ ಕನ್ನಡಿಗರಲ್ಲಿ ಚರ್ಚೆ ಮಾಡಲು ಮತ್ತು ಎಲ್ಲಕ್ಕಿ೦ತ ಮುಖ್ಯವಾಗಿ ತಮ್ಮೊಳಗೆಯೇ ಚಿ೦ತನೆ ನಡೆಸಲು ಪ್ರೇರೇಪಿಸುತ್ತಿರುವ ಏಕೈಕ ಏನ್ ಗುರು ಬ್ಲಾಗ್ ಬರಹಗಾರರಿಗೆ ನನ್ನ ತು೦ಬು ಹೃದಯದ ಧನ್ಯವಾದಗಳು.

Unknown ಅಂತಾರೆ...

ಸಚಿನ್ ಜಗತ್ತು ಕಂಡ ಒಬ್ಬ ಮಹಾನ್ ಕ್ರಿಕೆಟ್ ಆಟಗಾರ, ಇದರಲ್ಲಿ ಎರಡು ಮಾತಿಲ್ಲ. ಸಚಿನ್ ಕ್ರಿಕೆಟ್ ಬಗ್ಗೆ ಮಾತನಾಡಿದಾಗ, ಆ ಮಾತಿಗೆ ಮಹತ್ವವಿರುತ್ತದೆ. ಆದರೆ ಇದೆ ಸಚಿನ್ ರಾಜಕೀಯ, ಮುಂಬೈ, ಭಾರತ, ರಾಷ್ಟ್ರೀಯತೆ ಇದರ ಬಗ್ಗೆ ಮಾತನಾಡಿದಾಗ ಅಷ್ಟೇ ಮಹತ್ವ ಕೊಡಬೇಕಾಗದ ಅಗತ್ಯವಿಲ್ಲ. ಒಬ್ಬ ಫೇಮಸ್ ವ್ಯಕ್ತಿ ಹೇಳಿದ ಎಂಬ ಪೂರ್ವಾಗ್ರಹಕ್ಕೆ ಒಳಗಾಗಿರುವ ಮಾಧ್ಯಮಗಳು, ಅವನ ಹೇಳಿಕೆ ಸರಿಯೇ ಎಂದು ಯೋಚಿಸುವುದನ್ನ ಬಿಟ್ಟು, 'ಒಬ್ಬ ಫೇಮಸ್ ವ್ಯಕ್ತಿ ಹೇಳಿದ ಅದಕ್ಕೇ ಸರಿ' ಎಂಬ ನಿಲುವಿಗೆ ಬಂದಿವೆ. ಇದು ಮಾಧ್ಯಮಗಳ ಕುಸಿದಿರುವ ಚಿಂತನೆಯ ಮಟ್ಟವನ್ನ ತೋರಿಸುತ್ತದೆ.

ಸಚಿನ್ ಹೇಳಿಕೆಯನ್ನು ಯಾವುದೇ ಪೂರ್ವಗ್ರಹವಿಲ್ಲದೆ ತಾತ್ವಿಕ, ತರ್ಕದ ನೆಲೆಗಟ್ಟಿನಲ್ಲಿ ಚಿಂತನೆಗೆ ಒಳಪಡಿಸಿ, ತನ್ನ ಅಭಿಪ್ರಾಯವನ್ನು ಪ್ರಕಟಿಸಿರುವ ಏನ್ ಗುರು ಎಂದಿನಂತೆ ತನ್ನ ಪ್ರಬುದ್ಧತೆಯನ್ನು ಪ್ರದರ್ಶಿಸಿದೆ.
ಇಂಥ ಒಳ್ಳೆಯ ಲೇಖನವನ್ನು ಪ್ರಕಟಿಸಿದ್ದಕ್ಕೆ ಏನ್ ಗುರುವಿಗೆ ನನ್ನ ವಂದನೆಗಳು!!

Vijay Karla ಅಂತಾರೆ...

ಮುಂಬೈಯಲ್ಲಿ ಆಗಿರುವ ಹಿಂದಿ ಭಾಷಿಕರ ಬೆಳವಣಿಗೆ ಮತ್ತು ಬೆಂಗಳೂರಿನಲ್ಲಿ ಆಗಿರುವ ಪರ ಭಾಷೀಯರ ಬೆಳವಣಿಗೆಗೆ ಹೆಚ್ಚೇನೂ ಅಂತರ ಇಲ್ಲ. ನಾಳೆ ಇವರೇ ಬೆಂಗಳೂರಿನ ಆಡಳಿತ ಭಾಷೆ ತಮಿಳು ಅಥವಾ ತೆಲುಗಿನಲ್ಲಿ ಆಗಬೇಕು ಅಂತ ಕೂಗಿದ್ರೆ ಅಚ್ಚರಿ ಪಡಬೇಕಾಗಿಲ್ಲ!

gangadhara ಅಂತಾರೆ...

Oppuvataha vichaaragalu guru.. Melina pratiyondu vaakyavannu samartisutthene..

Praveen ಅಂತಾರೆ...

ಕೆಲವು ಸಾರಿ ಒಬ್ಬ ವ್ಯಕ್ತಿಯ ಮೇಲಿನ ಭಾವನೆ ಮೇಲೆ ಆತನ ಹೇಳಿಕೆನ ಹಿಂದೂ ಮುಂದು ನೋಡದೇ ಯೋಚನೆ ಮಾಡದೆನೆ ಒಪ್ಪಿಕೊತೀವಿ.ಇಲ್ಲಿ ನನಗೆ ಆಗಿದ್ದು ಅದೇ. ಠಾಕ್ರೆ ಅಂದ್ರೆ ನಮ್ ದೇಶದ ಮಹಾ ಭಯೋದ್ಪಾದಕ ಅನ್ನೋ ಭಾವನೆ ಇಂದನೋ ಅಥವಾ ಸಚಿನ್ ತೆಂಡುಲ್ಕರ್ ಅನ್ನೋ ಮಹಾನ್ ಕ್ರಿಕೆಟಿಗ ಅಂತನೋ ಈ ವಿಷಯವನ್ನ ಈ ರೀತಿ ಯೋಚನೆ ಮಾಡಿರ್ಲಿಲ್ಲ.. ನೀವ್ ಹೇಳಿದ್ದು ಖಂಡಿತವಾಗಿವು ಸಮರ್ಥನೀಯ. ಆದರೆ ಸಚಿನ್ ಹೇಳಿಕೆಯ ದೃಷ್ಟಿಕೋನಕ್ಕೂ, ಠಾಕ್ರೆ ಹೇಳಿಕೆಯ ದೃಷ್ಟಿಕೋನಕ್ಕೂ ಹಾಗೂ ಈ ಲೇಖನದ ದೃಷ್ಟಿಕೋನಕ್ಕೂ ವ್ಯತ್ಯಾಸ ಇದೆ ಅನ್ಸತ್ತೆ ನನಗೆ. ನನ್ನ ಅನಿಸಿಕೆ ಪ್ರಕಾರವಾಗಿ ಸಚಿನ್ ಗೊತ್ತಿದ್ದೂ ಗೊತ್ತಿದ್ದೂ ಮರಾಠಿ ಹಾಗೂ ಭಾರತ ಅನ್ನೋ ಏಕತೇನ ಮುರಿಯೋ ಆಲೋಚನೆ ಇಂದ ಆ ಹೇಳಿಕೆ ಕೊಟ್ಟಿರೋದಿಲ್ಲ ಅನಿಸತ್ತೆ.

Anonymous ಅಂತಾರೆ...

guru ..... nimma melina lekhana nanu tumba latagi oodide..chennagide,[ kshamsi nanna abipraya ee lekhanada bagge alla... prakatisa bekagilla]
nanna samasye adalla, ee deshadalli "VANDE MATARAM" helalu kelavarige ishtavilla,kelavarige tappu,rajakeeya, kelavarige avara dharma virodi antare. nimmantavaru adannu samartisuteeri.......hagagi nanagondu anumana nimma melina
"OORA DEVATE ANNAMMA?, KANNADA THAYI- RAJARAJESHWARI?/BHUVANESHWARI?,mattu BHARATAMBE" evarannella aa vargadavaru opputareye..... athava baruva dinagalalli avarannu oolayisalu ee padagalannu kaibidabekada paristiti barabahudu
mudondu dina naveke eepadagalannu balasabeku? edu namma matha-samarsyakke dakke agabahudu... allde bahutheka sanskrita padagale..mattastu karanagalu -sigabahudu....ottinalli yavdavudo karanagalind navu bahalashtannu kalakodideve,kaledukollalu siddariddeve,ADARE AVRELLA SERI EE NELAKKE ADYAVUDO..."----STHAN" EMBA HESARIDUVA VAREGE =?????

ಮಾಯ್ಸ ಅಂತಾರೆ...

ಇಂಗ್ಲಿಶ್ ಅಕ್ಕರಗಳಲ್ಲಿ ಕನ್ನಡ ಬರೆದು ಅದಕ್ಕೆ ಸರಿಯಾಗಿ comma, period ಗಳನ್ನು ಸರಿಯಾಗಿ ಹಾಕದೇ ಬರೆದರೆ ಕನ್ನಡವನ್ನು ಓದೋದು ಸಂಕಟ.

ಬರೆದಾಗ ತುಸು ಬರಹವನ್ನು ಓರಣಿಸಿದರೆ ಓದಲು ನೆರವು.

"ವಂದೇ ಮಾತರಂ .. ಬಾರತಾಂಬೆ"...

ವಂದೇ ಮಾತರಂ ಇಂಡಿಯದ ನಾಡಹಾಡಲ್ಲ. ಅದನ್ನು ಎಲ್ಲರೂ ಹಾಡಲೇ ಬೇಕೆಂದು ನಮ್ಮ ’ನಾಡಕಟ್ಟಳೆ/ಸಂವಿಧಾನ’ ಹೇಳಲ್ಲ. ಅದುವೇ ನಮ್ಮ ಇಂಡಿಯ ಒಕ್ಕೂಟವು ಮಂದಿಗಿಯ್ಯುವ ನಡೆ-ನಂಬಿಕೆಗಳ ಬಿಡುತೆ/ಸ್ವಾತಂತ್ರ‍್ಯ.

ಈಗಿನ ’ಜನಗಣಮನ ಅಧಿನಾಯಕ’ ಒಂದು ದೇವರ ಕುರಿತು ಇರುವುದು ಎಂಬ ಮಾತೊನ್ನೊಡ್ಡಿ ದೇವರನ್ನು ಹಲ-ನಂಬದವರು ಆ ಹಾಡನ್ನು ಹಾಡಲೊಪ್ಪರು.

ಇನ್ನೂ ’ಕನ್ನಡಾಂಬೆ’ ಇವೆಲ್ಲ ನಮ್ಮ ಸೆಕ್ಯುಲರ‍್ ನಾಡಿಗೆ ಒಗ್ಗದ ನಡವಳಿಕೆಗಳು. ಆದರೂ ನಮ್ಮ ಕಡಮೆ ಎಣಿಕೆಯಲ್ಲಿರುವ ಮಂದಿ ಅದಕ್ಕೆ ಹೆಚ್ಚು ಎದುರು ಬರದೇ ಇರುವುದು ಅವರ ದೊಡ್ಡತನ.

ದೇವರು ಒಂದು ರೂಪದಲ್ಲಿದೆ ಎಂಬ ಒಂದು ಬಗೆಯ ನಂಬಿಕೆಯನ್ನು ’ನಾಡತನ/ರಾಷ್ಟ್ರೀಯತೆ’ಯ ಹೆಸರಲ್ಲಿ ಬೇರೆಯವರ ಮೇಲೆ ಹೇರುವ ಸಂಚಿಗೆ ಬಗೆಬಗೆ ದೊಡ್ಡಮಾತುಗಳು, ಕೆರಳುಹೇಳಿಕೆಗಳು.!

Anonymous ಅಂತಾರೆ...

maysa avare...
nimma abhipraya nanadu-kondateye-ide,
******* innu "kannadambe namma secular nadige oggada nadavalikegalu"******** bhesh ee maatu-galannadi neevu nijavada jathyateetha-vadi endu torisideeri ...
jatyateetate andare ellavannu gauravisuvudu,
mattu avaravarige palisalu swatantrya ishte......
adare, baratada mattige, obba kadime enikeya vyakti, tanna darmavannu athyanta kattunitta palisu-vavanadaru, avanu adara prabhala pracharaka-nadaru, avanu obba secular annuvastu aadarisal-padutane, mattu vedikeyllu stana padeyutane
obba dodda enikeya vyakti, tanna darmada bagge swalpa asakti torisidaroo, aata komuvadi agutane
ade dodda enikeya vyakti, tanna dharma, tanna nambike, tanna paddati,ext... nindisidare,halidare, vimarshisidare aaga matra avanu jatyateeta-vadi enisikollu-tane.!!!!!

maaysa ಅಂತಾರೆ...

ಇಂಗ್ಲಿಶ್ ಅಕ್ಕರಗಳಲ್ಲಿ ಕನ್ನಡ ಬರೆದು ಅದಕ್ಕೆ ಸರಿಯಾಗಿ comma, period ಗಳನ್ನು ಸರಿಯಾಗಿ ಹಾಕದೇ ಬರೆದರೆ ಕನ್ನಡವನ್ನು ಓದೋದು ಸಂಕಟ.

ಬರೆದಾಗ ತುಸು ಬರಹವನ್ನು ಓರಣಿಸಿದರೆ ಓದಲು ನೆರವು.

"
maysa avare...
nimma abhipraya nanadu-kondateye-ide,
******* innu "kannadambe namma secular nadige oggada nadavalikegalu"******** bhesh ee maatu-galannadi neevu nijavada jathyateetha-vadi endu torisideeri ..."

Personal attack. Sorry. Not appreciated and hence no reply.

No English typing facility here. Sorry!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails