ಬೆಂಗಳೂರಿನ ನಗರ ಪಾಲಿಕೆಗೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿವೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮತದಾರರಲ್ಲಿ ಈ ಚುನಾವಣೆಯ ಪ್ರಾಶಸ್ತ್ಯ ಮತ್ತು ಅದರಲ್ಲಿ ಮತದಾರರ ಮುಖ್ಯ ಪಾತ್ರದ ಬಗ್ಗೆ ಜನ್ರಲ್ಲಿ ಜಾಗೃತಿ ಮೂಡಿಸಲು ಇತ್ತೀಚೆಗೆ ಒಂದು ಕಾರ್ಯಕ್ರಮ ಜರುಗಿತು. ಮತದಾನ ಬಹಳ ಮುಖ್ಯ ವಿಚಾರ, ಅದರಲ್ಲಿ ಜನರ ಪಾತ್ರ ಅತಿ ಮುಖ್ಯ, ಇದನ್ನು ಜನರಿಗೆ ತಿಳಿ ಹೇಳಬೇಕು, ಎಲ್ಲಾ ಸರಿ. ಆದರೆ ಬೆಂಗಳೂರಿನ ಮತದಾರರಿಗೆ ಜಾಗೃತಿಯ ವಿಷಯ ಹಿಂದಿಯಲ್ಲಿ "ಜಾಗ್ತೇ ರಹೋ" ಎಂದು ಹಿಂದಿ ಭಾಷೇಲಿ ಹೇಳಿದರೆ ಕೆಲ್ಸ ಆಗತ್ತಾ ಗುರು?
ಈ ಚುನಾವಣೆ ಬೆಂಗಳೂರಿನ ಪಾಲಿಕೆಗೇ ತಾನೆ?
ಅಲ್ಲಾ, ಈ ಚುನಾವಣೆ ಬೆಂಗಳೂರಿನ ಮಹಾನಗರ ಪಾಲಿಕೆಗೋ, ಅಥವಾ ಭೂಪಾಲ ನಗರಕ್ಕೋ? ಇದರ ಆಯೋಜಕರು ಈ ಪ್ರಶ್ನೆಗೆ ಉತ್ತರ ಕಂಡುಕೊಂಡ ಬಳಿಕ ಕಾರ್ಯಕ್ರಮ ನಡೆಸಿದ್ದರೆ ಚೆನ್ನಾಗಿರ್ತಿತ್ತು. ಚುನಾವಣೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು, ತಮ್ಮ ಮತ ಹಾಕಬೇಕು, ಚುನಾವಣೆಯನ್ನು ಯಶಸ್ವಿಗೊಳಿಸಬೇಕು, ಸರಿಯಾದ ನಗರಸಭಾ ಸದಸ್ಯರನ್ನು ಆಯ್ಕೆ ಮಾಡಬೇಕು, ಸರಿ. ಆದರೆ ಈ ಎಲ್ಲಾ ಸಂದೇಶಗಳನ್ನು ಒಂದೆರಡು ಪದಗಳಲ್ಲಿ ಜನರಿಗೆ ಹೇಳಲು ಹೊರಟು, ಬೆಂಗಳೂರಿನ ಈ ಚುನಾವಣೆಗೆ ಏನೇನೂ ಸಂಬಂಧವಿರದ ಹಿಂದಿ ಭಾಷೆಯನ್ನು ಬಳಸಿದರೆ ಹೇಗೆ?! ಇಲ್ಲಿ ಮತದಾರರಿಗೆ "ಎದ್ದೇಳು ಮತದಾರ" ಎಂದು ಹೇಳಿದರೆ ಕಾರ್ಯಕ್ರಮ ನಡೆಸಲು ಅಸಾಧ್ಯವಾಗುತ್ತಿತ್ತೇ? ಬೆಂಗಳೂರಿನ ಜನರಿಗೆ ಸಂದೇಶ ರವಾನಿಸಲು ಯಾವ ಭಾಷೆ ಸರಿಯಾದ್ದು ಎಂದೇ ಅರಿಯದ ಇವರು ಚುನಾವಣೆಯಂತ ಮುಖ್ಯ ಸಂದೇಶ ಕೊಡಲಾದೀತೇ?
ಆದೀತು.. ಇನ್ನೂ ಕಾಲ ಮಿಂಚಿಲ್ಲ. ಚುನಾವಣೆಗೆ ಮುನ್ನ ಇರುವ ಸಮಯದಲ್ಲಿ ಈ ಕಾರ್ಯಕ್ರಮದ ಹೆಸರು, ಅದರೊಳಗೆ ಹೇಳಬೇಕೆಂದಿರುವ ಸಂದೇಶಗಳನ್ನೆಲ್ಲಾ ಬೆಂಗಳೂರಿನ ಜನರಿಗೆ ಅರ್ಥವಾಗುವಂತೆ ಲಕ್ಷಣವಾಗಿ ಕನ್ನಡದಲ್ಲಿ ಹೇಳಿ ಜನರನ್ನು ತಲುಪಬಹುದು, ಸಂದೇಶವನ್ನು ಸರಿಯಾಗಿ ತಲುಪಿಸಬಹುದು. ಆಗ ನೋಡಿ, ನಿಜಕ್ಕೂ ಚುನಾವಣೆಯೆಂದರೆ ನಿದ್ದೆ ಮಾಡುವವರೂ ಎದ್ದು ಬಂದು ಮತ ಹಾಕ್ಯಾರು!
5 ಅನಿಸಿಕೆಗಳು:
ee nan makkala email id ge email baredu buddi helbeku guru
ಇದಕ್ಕೆಲ್ಲ ಒಂದೇ ಪರಿಹಾರ ಗುರು,
ಕ. ರ. ವೇ ನಾರಾಯಣ ಗೌಡರ ಬಣ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾಗಿ ಸ್ಪರ್ಧಿಸ್ತಿವಿ ಅಂತ ಘೋಷಿಸಿದ್ದಾರೆ, ಆದರೆ ಕನ್ನಡಿಗರು ಈ ಪಕ್ಷಕ್ಕೆ ಮತ ಹಾಕ್ತಾರ ಕಾದು ನೋಡ್ಬೇಕು.
sariyaagi heliddiya siva. ivarige adyaake ee rogano nanage tilitilla. ee karyakrama udgatisida vyakti kooda 'Kannadiga'. adyaranna puslaisakke ee thara kelasa madtaaro?? itara kelasa maaDodu yaarige muTTatte guruve?
ಮೊದಲು ಈ ಜನಾಗ್ರಹ ಸಂಸ್ಥೆಯಲ್ಲಿರುವ ಜನರನ್ನು ಎಬ್ಬರಿಸಬೇಕು “ಎದ್ದೇಳು ಜನಾಗ್ರಹ”
neevu helodu sari, naanu antarjaalada moolaka "Jaagrutaraagi Matadaarare" kaaryakramadalli bhaagiyaagideene.Aadare namma bhasheyalli karyakramada patti kottare namage hecchina reetiyalli upayogavagalide.Illadiddare, avarinda namgenagbeku. Mata chalavane nav madtivi. Aa kaaryakarmadinda kannadigarellaru horahogona
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!