ಕನ್ನಡ ಚಿತ್ರರಂಗ - ಆಟಕ್ಕುಂಟು ಲೆಕ್ಕಕ್ಕಿಲ್ಲ ?

ಪ್ರಖ್ಯಾತ ಸಂಸ್ಥೆ E&Y ಮತ್ತು FICCI ಜೊತೆಗೂಡಿ ಮಾಡಿದ ಸಮೀಕ್ಷೆಯೊಂದರ ವರದಿಯಂತೆ 2008ರಲ್ಲಿ ಇಡೀ ದೇಶದ ಚಿತ್ರೋದ್ಯಮದ ಆದಾಯದಲ್ಲಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಚಿತ್ರೋದ್ಯಮದ ಪಾಲು 75% ರಷ್ಟು ಅಂದ್ರೆ ಸುಮಾರು 1730 ಕೋಟಿಯಷ್ಟಿದೆಯಂತೆ, ಆದರೆ ಅದರಲ್ಲಿ ಕನ್ನಡ ಚಿತ್ರರಂಗದ ಪಾಲು ಬರೀ 2% ಅಂದ್ರೆ ಕೇವಲ ರೂ 34 ಕೋಟಿ ಇದೆ ಅಂತ ವರದಿ ಮಾಡಿದೆ. ವರ್ಷಕ್ಕೆ ನೂರಕ್ಕೂ ಹೆಚ್ಚು ಚಿತ್ರ ನಿರ್ಮಿಸುವ ಕನ್ನಡ ಚಿತ್ರರಂಗದ ಆದಾಯದ ಬಗ್ಗೆ ಇವರು ಕೊಟ್ಟಿರೋ ಅಂಕಿ ಅಂಶ ತಪ್ಪು ತಪ್ಪಾಗಿದೆ ಅನ್ಸಲ್ವಾ ಗುರು ?

ಏನ್ ಹೇಳುತ್ತೆ ವರದಿ?
ಈ ವರದಿ ಪ್ರಕಾರ, ದಕ್ಷಿಣ ಭಾರತದ ಚಿತ್ರರಂಗದ ಒಟ್ಟು 1730 ಕೋಟಿ ಆದಾಯದಲ್ಲಿ ತಮಿಳು-ತೆಲುಗಿನ ಪಾಲು ತಲಾ 45% ( ಅಂದರೆ 770 ಕೋಟಿ), ಮಲಯಾಳಂ ಸುಮಾರು 8%( ಅಂದರೆ ಸುಮಾರು 140 ಕೋಟಿ) ಹಾಗೂ ಕನ್ನಡ ಚಿತ್ರೋದ್ಯಮದ ಪಾಲು ಕೇವಲ 2% ( ಅಂದರೆ ಕೇವಲ 34 ಕೋಟಿ !! ) ಇದ್ದು, ಕನ್ನಡ ಚಿತ್ರೋದ್ಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತ ಒಂದು ಉದ್ಯಮ, ಇದಕ್ಕೊಂದು ಅಸ್ತಿತ್ವವೇ ಇಲ್ಲವೆಂಬಂತೆ ಬಿಂಬಿಸಿದೆ ಗುರು.

ಕನ್ನಡ ಚಿತ್ರೋದ್ಯಮ - 2008ರ ಆದಾಯವೇನು?

ಕನ್ನಡ ಚಿತ್ರರಂಗದ ಆದಾಯ ನಿಜಕ್ಕೂ ಇಷ್ಟು ಕಮ್ಮಿ ಇದೆಯಾ ಅನ್ನೋ ಪ್ರಶ್ನೆನಾ ಇಟ್ಕೊಂಡು ಕನ್ನಡ ಚಿತ್ರರಂಗದ ಹಲವು ಗಣ್ಯರನ್ನು ಏನ್ ಗುರು ಮಾತನಾಡಿಸಿತು. ಅವರಿಂದ ಪಡೆದ ಮಾಹಿತಿಯ ಜೊತೆ ಅಂತರ್ಜಾಲದಿಂದ ಪಡೆದ ಒಂದಿಷ್ಟು ಮಾಹಿತಿಯೊಂದಿಗೆ 2008ರಲ್ಲಿ ಕನ್ನಡ ಚಿತ್ರರಂಗದ ಅಂದಾಜು ಹೂಡಿಕೆ ಮತ್ತು ಆದಾಯ ನಿಜಕ್ಕೂ ಎಷ್ಟಿರಬಹುದು ಅಂತ ಲೆಕ್ಕ ಹಾಕಿದ್ರೆ ಏನ್ ಗುರುಗೆ ಕಂಡಿದ್ದು ಇಷ್ಟು (ಇದು ಏನ್ ಗುರುಗೆ ಸಿಕ್ಕ ಅಂಕಿ ಅಂಶ, ಮಾಹಿತಿ ಆಧಾರದ ಮೇಲೆ ಮಾಡಿರುವ ವಿಶ್ಲೇಷಣೆ):



ಮೇಲಿನ ಅಂದಾಜು ವಿಶ್ಲೇಷಣೆಯಿಂದ ಕನ್ನಡ ಚಿತ್ರರಂಗದ ಆದಾಯ ಖಂಡಿತವಾಗಿಯೂ E&Y ಹೇಳಿರುವುದಕ್ಕಿಂತ 7-8 ಪಟ್ಟು ಹೆಚ್ಚಿದೆ ಅಂತ ಅನ್ಸಲ್ವಾ ಗುರು?

ಇಂತಹ ವರದಿಗಳಿಂದ ಆಗೋ ತೊಂದರೆಗಳೇನು?
ಈಗ ಇಂತಹ ವರದಿಗಳಿಂದ ಆಗೋ ತೊಂದರೆಗಳೇನು ಅಂತ ನೋಡೋಣ ಗುರು. ಇವತ್ತು ಮನರಂಜನೆ ಮತ್ತು ಮಾಧ್ಯಮ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಭಾರತದ ಬೇರೆ ಬೇರೆ ಭಾಷೆಗಳ ಚಿತ್ರರಂಗದಲ್ಲಿ ಬಂಡವಾಳ ಹೂಡಲು ಬರುತ್ತಿದ್ದಾರೆ. ಹಾಗೇ ಬರುವವರು, ಆ ಉದ್ಯಮದ ಬಗ್ಗೆ, ಅದರ ಆದಾಯದ ಬಗ್ಗೆ, ಅಲ್ಲಿ ಮಾಡಿಕೊಳ್ಳಬಹುದಾದ ಲಾಭದ ಬಗ್ಗೆ ತಿಳಿಯಲು ಬಳಸುವುದು ಇಂತಹ ವರದಿಗಳನ್ನೇ. ಈಗ, ನೀವು ಹೇಳಿ, E&Y ಪ್ರಕಾರ ವರ್ಷಕ್ಕೆ ಜುಜುಬಿ 34 ಕೋಟಿ ಆದಾಯ ಇರೋ ಕನ್ನಡ ಚಿತ್ರರಂಗಕ್ಕೆ ಎಂದಾದರೂ ಈ ಸಂಸ್ಥೆಗಳು ಹಣ ಹೂಡಲು ಬಂದಾರೆಯೇ? ಹಾಗೇ, ಇಂತಹ ವೃತ್ತಿಪರ ಕಂಪನಿಗಳು ಬರದೇ, ಇಲ್ಲಿನ ವೃತ್ತಿಪರ ಕಲಾವಿದರಿಗೆ, ತಂತ್ರಜ್ಞರಿಗೆ, ಏನಾದರೂ ಹೊಸತನ್ನು ನೀಡಬೇಕು ಎಂದು ಹಂಬಲಿಸುವವರಿಗೆ ಎಂದಿಗಾದರೂ ಅವಕಾಶ ಸಿಕ್ಕಿತಾ? ಹಾಗೊಂದು ಅವಕಾಶ ಸಿಗದೇ, ಕನ್ನಡ ಚಿತ್ರರಂಗದಲ್ಲಿ ಹೊಸತನ ತುಂಬುವ ಪ್ರಯತ್ನ ಎಂದಿಗಾದರೂ ನಡೆದೀತಾ? ಇಂತಹ ತಪ್ಪು ಮಾಹಿತಿಯುಳ್ಳ ವರದಿಗಳು ನಮ್ಮ ಚಿತ್ರರಂಗಕ್ಕೆ ಬಂಡವಾಳ ಹೂಡುವವರನ್ನು ಹಿಂಜರಿಯುವಂತೆ ಮಾಡುವುದಷ್ಟೇ ಅಲ್ಲದೇ, ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂದು ಬರುವ ಕಲಾವಿದರನ್ನು ಕೂಡಾ ಪಲಾಯನಗೈಯುವಂತೆ ಮಾಡುತ್ತೆ ಅನ್ಸಲ್ವಾ ಗುರು?

ಇದಕ್ಕೇನು ಪರಿಹಾರ?
KFCC ಈಗಲೂ ನಿದ್ದೆ ಮಾಡುವುದನ್ನು ಬಿಟ್ಟು, ಇಂತಹದೊಂದು ವರದಿ, ಅದರಲ್ಲಿನ ಲೋಪ ದೋಷಗಳ ಬಗ್ಗೆ ಮಾತನಾಡಬೇಕು. ಅಲ್ಲದೇ, ಜಿಡ್ಡುಗಟ್ಟಿರುವ ವ್ಯವಸ್ಥೆಯಲ್ಲಿ ಹೊಸ ಚೈತನ್ಯ ತುಂಬೋ ಕೆಲಸ ಮಾಡಬೇಕು. ಚಿತ್ರರಂಗ ಬೆಳವಣಿಗೆಗೆ ನಿಜಕ್ಕೂ ಬೇಕಿರೋದು ಏನು? ಮಾರುಕಟ್ಟೆ ಕಟ್ಟಿಕೊಳ್ಳೋ ತಂತ್ರಗಾರಿಕೆ ಹೇಗಿರಬೇಕು? ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸೋದು ಹೇಗೆ? ಕಾರ್ಮಿಕರ ಬದುಕಿಗೆ ಭದ್ರತೆ ಕಲ್ಪಿಸೋದು ಹೇಗೆ? ತಾಂತ್ರಿಕವಾಗಿ ಚಿತ್ರರಂಗವನ್ನು ಮುಂದೆ ತರಲು ಸಂಸ್ಥೆಗಳನ್ನು ಕಟ್ಟುವುದು ಹೇಗೆ? ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಿಸೋದು ಹೇಗೆ? ಒಟ್ಟಾರೆ ಈಗಿರೋ 250 ಕೋಟಿ ಯಿಂದ 750 ಕೋಟಿ ಆದಾಯ ಗಳಿಸೋವತ್ತ ಹೋಗೊದು ಹೇಗೆ ಅನ್ನೋ ಬಗ್ಗೆ ಚಿಂತನೆ ನಡೆಸಬೇಕು. ಹಾಗೇ, ಸರಿಯಾದ ಕಾರ್ಯ ಯೋಜನೆ ಹಾಕಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಏನಂತೀಯಾ ಗುರು?

16 ಅನಿಸಿಕೆಗಳು:

Me, Myself & I ಅಂತಾರೆ...

ಹು ಅಂತೀನಿ ಗುರು.

ಒಳ್ಳೇ ನಾಯಕತ್ವ ಗುಣಗಳಿರೊವ್ರು ಸಿಗ್ಬೇಕು...ಅಂತ ಚಾಣಾಕ್ಷರು ಯಾರಿದ್ದಾರೆ ನಮ್ಮಲ್ಲಿ?

ಕಿಶೋರ್ ಅಂತಾರೆ...

ನಿಜ ಗುರು.. ಇದನ್ನು ನೋಡಿದರೆ, ಕನ್ನಡ ಚಿತ್ರರ೦ಗದ ವಿರುದ್ಧ ದೊಡ್ಡ ಕುತ೦ತ್ರವೇ ನಡೆಯುತ್ತಿದೆ ಅನಿಸುತ್ತಿದೆ. ಈ ರೀತಿ ಕನ್ನಡ ಚಿತ್ರರ೦ಗದ ಆದಾಯದ ತಪ್ಪು ವರದಿಯನ್ನು ನೀಡುವುದರಿ೦ದ ಯಾರಿಗೆ ಲಾಭ? ಈ ತಪ್ಪು ವರದಿಯನ್ನಿಟ್ಟುಕೊ೦ಡು ಕನ್ನಡಿಗರ ದನಿಯನ್ನಡಿಗಿಸುವ ಕೆಲಸ ನಡೆಯುತ್ತಿರೋ ಹಾಗಿದೆ. ತಮಿಳು, ತೆಲುಗು ಚಿತ್ರಗಳ ಹಾವಳಿ ಹೆಚ್ಚಿಸಲು ಯಾರದೋ ಕೈವಾಡವಿದ್ದ೦ತಿದೆ.

ಅದೇನೇ ಇರಲಿ, ಈಗ ಕನ್ನಡಿಗರೆಲ್ಲಾ ಒಗ್ಗಟ್ಟಿನಿ೦ದ E&Y ರವರನ್ನು ಈ ವರದಿಯ ಬಗ್ಗೆ ಸರಿಯಾಗಿ ವಿಚಾರಿಸಬೇಕು. ಅಷ್ಟೇ ಅಲ್ಲದೆ ಮಲಗಿರುವ KFCC ಅನ್ನು ಎಬ್ಬಿಸಿ ಇವರ ಜವಾಬ್ದಾರಿಯ ಅರಿವನ್ನು ಮೂಡಿಸಬೇಕು.

ವಿಜೇತ್ ಹರಿಹರ ಅಂತಾರೆ...

ಗುರು,
ಕೆ.ಮಂಜು, ರಾಮು, ರಾಕ್ ಲೈನ್ ತರಹದ ನಿರ್ಮಾಪಕರು ವರ್ಷಗಳಿಂದ ಕನ್ನಡ ಸಿನೆಮಾ ಮಾಡ್ತಾನೆ ಇದ್ದಾರೆ. ಕನ್ನಡ ಚಿತ್ರದಿಂದ ವರ್ಷಕ್ಕೆ 34 ಕೋಟಿನೂ ಹುಟ್ಟಲ್ಲ ಅಂದ್ರೆ ಇವರೆಲ್ಲ ಏನು ಕನ್ನಡದ ಮೇಲಿನ ಅಭಿಮಾನದಿಂದ ಬರಿ ಸಾಲ ಮಾಡ್ಕೊಂಡು ಸಿನೆಮಾ ಮಾಡ್ತಾ ಇದ್ದಾರಾ? ಖಂಡಿತ ಇಲ್ಲ. ಕನ್ನಡ ಚಿತ್ರರಂಗ 300 ಕೋಟಿ ಇನ್ ವೆಸ್ಟ್ ಮಾಡಿ 250-300 ಕೋಟಿ ಹಣ ಮಾಡ್ತಾ ಇದೆ. ಅದಿಲ್ಲ ಅಂದ್ರೆ ಕಳೆದ 15 ವರ್ಷದಲ್ಲಿ ಪ್ರತಿ ವರ್ಷವೂ ಹಿಟ್ ಆಗಿರೋ ಚಿತ್ರಗಳ % ಬರೀ 10 ಮಾತ್ರ ಇರೋದು, ಆದ್ರೂ ಹೇಗೆ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳು ಪ್ರತಿ ವರ್ಷ ಬಿಡುಗಡೆ ಆಗುತ್ತೆ?
ನೀವು ಹೇಳೊ ಹಾಗೆ ಕನ್ನಡ ಚಿತ್ರೋದ್ಯಮ ನಿಜಕ್ಕೂ 700 ಕೋಟಿ ಆದ್ರೂ ಇರಬೇಕಿತ್ತು.. ಅಷ್ಟಿಲ್ಲ ಅನ್ನೋದು ನಿಜ. ಆದ್ರೆ ಅದು 34 ಕೋಟಿ ಖಂಡಿತ ಅಲ್ಲ.

Anonymous ಅಂತಾರೆ...

kfcc email id idre kodu guru. Tal ondondu mail kalisi nodona

Raghu ಅಂತಾರೆ...

enguru maadiruva vimarshe sakkattagide

hamsanandi ಅಂತಾರೆ...

ಒಳ್ಳೇ ಕೆಲಸ ಮಾಡಿದೀರ. ಅವತ್ತು ಈ ಅಂಕೆಗಳನ್ನ ನೋಡ್ದಾಗಲೇ ಏನೋ ವಿಚಿತ್ರವಾಗಿದೆ ಅನ್ಸಿತ್ತು.

umesh desai ಅಂತಾರೆ...

ಗುರು ಮಾಹಿತಿ ಛಲೊ ಅದ ನಮ್ಮ ಆಜೂಬಾಜೂನವರದೇ ಈ ಕಿತಾಪತಿ ವರದಿ ನೀಡಿದ ಅಂಕಿ ಅಂಶ ಸರಿ ಇಲ್ಲ

Raghavendra Bengaluru ಅಂತಾರೆ...

Yaaro Kannada chitra rangada bagge tappu abhipraya taroke madiro kutantra, antavara viruddha krama tegedukollabeku,,, Raghavendra

ಅಜೇಯ ಅಂತಾರೆ...

http://www1.lite.epaper.timesofindia.com/mobile.aspx?article=yes&pageid=8&edlabel=TOIBG&mydateHid=31-12-2009&pubname=&edname=&articleid=Ar00800&format=&publabel=TOI&max=true

ಇಲ್ಲಿನ headlines ನೋಡಿ...ತಮಿಳು ಮೂರನೆ ಸ್ಥಾನದಲ್ಲಿದ್ದರೂ ಅದನ್ನ ಬಿಟ್ಟು ಬೇರೆ ಭಾಷೆಗಳನ್ನ ಹೇಗೆ ಎತ್ತಿ ತೋರಿಸ್ತಿದ್ದಾರೆ

HARSHA RAMESH ಅಂತಾರೆ...

yeno asadde kannada andre yellargu. nan maklu na hidkond hodibeku.

HARSHA RAMESH ಅಂತಾರೆ...

kannada andre yeno asadde nan maklu ge. navu yeste adjust madkolakke nodiddru bere avru kannada na tuliyakke nodtirtare. bangalore alli haramagi bus alli tamil and telgu songs na mobile alli hakond keltare joragi. yaru kelavru illa. hakid takshana bulde mele nak haki arsu andre avaga gottagutte.

bsadithyacool ಅಂತಾರೆ...

ayyo idakkella yaru tale kedskothare..innu next 6 months nodi..jackie, pancharangi, super, jogayya, maduve mane, kool, munthada chitragalu kannada chitrarangada nijavada "level" torsathe.. \m/

Girish ಅಂತಾರೆ...

EDARALLI ENO TAPPIDE KANNADA CALANACITRA VANIJYAMANDDALIYA SADASYARU NIDRE MAADDUTIDDARA MODALI INTA VISAYAGALANU SARIPADISIKOLLI MATTE ANKI AMSHAVANU SRIYAAGI BIDUGADE MADISI

Sihiyada ಅಂತಾರೆ...

ಈ ಸಂಸ್ಥೆಯವರು ಕೇವಲ ಬೆಂಗಳೂರಿನಲ್ಲಿ ಬಿಡುಗಡೆಯಾಗುವ ಕನ್ನಡ ಚಿತ್ರಗಳ ಸಂಖ್ಯೆ ನೋಡಿ ಈ ವರದಿ ಕೊಟ್ಟಿರಬಹುದು ಎನಿಸುತ್ತದೆ. ಕೇವಲ ಬೆಂಗಳೂರು ಇಡಿ ಕರ್ನಾಟಕವನ್ನು ಪ್ರತಿಬಿಂಬಿಸುವುದಿಲ್ಲ. ಬೆಂಗಳೂರಿನಲ್ಲಿ ಬಿದಿಗದೆಯಗುವ ಅನೇಕ ಪರಭಾಷಾ ಸಿನಿಮಾಗಳು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬಿಡುಗಡೆಯಾಗುವುದಿಲ್ಲ. ಅಲ್ಲೆಲ್ಲ ಕನ್ನಡ ಚಿತ್ರಗಳು ಸಕತ್ತಾಗಿ ಓಡುತ್ತವೆ.

ಸಾರ್, ರಿಮೇಕ್ ಚಿತ್ರಗಳನ್ನ ದಯವಿಟ್ಟು ಕಡಿಮೆ ಮಾಡಿ ಒಳ್ಳೆಯ ಚಿತ್ರಗಳನ್ನು ಮಾಡುವುದಕ್ಕೆ ನೀವು ಗಣ್ಯರಿಗೆ ಹೇಳಲಿಲ್ಲವ? ಹೇಳಿದ್ರೆ ಒಳ್ಳೆಯದಿತ್ತು. ನಿಮ್ಮ ಕೆಲಸ ಚೆನ್ನಾಗಿ ನಡೆಯಲಿ.

ಅಂದ ಹಾಗೆ ಚಿತ್ರರಂಗದ ವಿಷಯ ಇಲ್ಲಿ ಪ್ರಕಟಿಸಿದಾಗ ಬರುವ ಕಾಮೆಂಟ್ ಗಳ ಸಂಖ್ಯೆ ಗಮನಿಸಿದ್ದಿರ? ಬೇರೆ ಲೇಖನಗಳ ಕಾಮೆಂಟ್ ಗಿಂತ ೩ ಪಟ್ಟು ಜಾಸ್ತಿ ಇವೆ. :-)

nijavada abhimani ಅಂತಾರೆ...

ಈ ರೀತಿಯ ಅಸಡ್ಡೆ ಮತ್ತು ಕನ್ನಡವನ್ನು ನಿರ್ಲಕ್ಷ ಮಾಡುವ ಬೇರೆಯವರ ಬುದ್ದಿ ಕನ್ನಡ ಚಿತ್ರರಂಗದ ನಿರಭಿಮಾನಿ ಕಲಾವಿದರಿಂದಲೂ ಇರಬಹುದು ಅಲ್ಲವೇ?
ತಮಿಳಿನಲ್ಲಿ ಒಂದು ಅವಕಾಶಕ್ಕೊಸ್ಕರ ಏನು ಮಾಡುವುದಕ್ಕೂ ತಯಾರಿರುತ್ತಾರೆ. ಅಲ್ಲಿ ಇಲ್ಲಿ ತಮಿಳಿನಲ್ಲಿ ಮಾತನಾಡಿಕೊಂಡು ಬಿದ್ದಿರುತ್ತಾರೆ. ಅವರಿಗೋಸ್ಕರ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಅದನ್ನೇ ಅಫಿಶಿಯಲ್ ಮಾಡಿಕೊಳ್ಳುತ್ತಾರೆ. ಸುಮನ್ ರಂಗನಾಥ್ ಬಗ್ಗೆ ನಿಮ್ಮ ಕರ್ನಾಟಿಕ್ ಬ್ಲಾಗಿನಲ್ಲೇ ಬರೆದಿದ್ದಿರಲ್ಲ.

ಅದೇ ರೀತಿ ರಮ್ಯ ಮೇಡಂ ನೋಡಿ, ಅಮಿತಾಬ್ ಅಭಿಷೇಕ್ ಅಂತ ಒದ್ದಾಡುತ್ತಿರುತ್ತಾಳೆ. ಇವನೇನು ಇವಳ ಗಂಡನ? ಅಮೃತ ಧರೆಯಲ್ಲಷ್ಟೇ ಅಲ್ಲ ಜಸ್ಟ್ ಮಾತ್ ಮಾತಲ್ಲಿ ಅಭಿಷೇಕ್ ಬಚನ್ ಬಗ್ಗೆ ತುಂಬಾ ಸೀನ್ ಗಳಿವೆ. ಮೊನ್ನೆ ರಿಡಿಫ್ ನಲ್ಲಿ ಒಂದು ಲೇಖನ ಬಂದಿದೆ ಇವಳು ಅಮಿತಾಬ್ ನನ್ನು ಊಟಿಯಲ್ಲಿ ಮೀಟ್ ಮಾಡಿದ್ದಾರ ಬಗ್ಗೆ.

ಹಿಂದೆಲ್ಲ ಕನ್ನಡ ಸಿನಿಮಾದಲ್ಲಿ ಕನ್ನಡ ಹೆರೋಗಳನ್ನೇ ಮೆಚ್ಚುವ ಹುಡುಗಿಯರ ಸೀನ್ ಗಲಿರುತ್ತಿದ್ದುವು. ನೀನು ನಕ್ಕರೆ ಹಾಲು ಸಕ್ಕರೆಯಲ್ಲಿ ವಿನಯ ಪ್ರಸಾದ್ ಅಂಬಿಯ ಹುಚ್ಚಿನಿಂದ ಮನೆಯನ್ನೇ ಬಿಟ್ಟು ಅಂಬಿ ಮನೆಯ ಹತ್ತಿರ ಮನೆ ಮಾಡುವ ದೃಶ್ಯವನ್ನು ಹೇಗೆ ಮರೆಯಲು ಸಾಧ್ಯ. ಈಗಿನ ಬದಲಾವಣೆಯನ್ನು ಗಮನಿಸಿ.

ಎಷ್ಟು ಹಿಂದಿ ಸಿನಿಮಾಗಳಲ್ಲಿ ಕನ್ನಡದ ರಾಜ್ಕುಮಾರ್, ಅಂಬಿ, ವಿಷ್ಣು ಇವರ ಬಗ್ಗೆ ತೋರಿಸುತ್ತಾರೆ? (ಸೊನ್ನೆ)
ಅಂದ ಮೇಲೆ ಇವರು ಯಾಕೆ ಗೂಬೆ ಕೆಲಸ ಮಾಡಬೇಕು?

ಅದೇ ರೀತಿ ರಮೇಶ್ ಸಿನಿಮಾಗಳಲ್ಲಿ ಅ ಆರ್ ರಹಮಾನ್ ಹಾಡುಗಳನ್ನು ಹಾಕುವುದು. ರಹಮಾನ್ ಹಾಡು ಇದ್ದುಬಿಟ್ಟರೆ ಜನರಿಗೆ ಬೇರೆ ಬೇಡ ಎನ್ನುವ ಮಾತುಗಳು ಹೀಗೆ. ನಮ್ಮ ಮನೋಮೂರ್ತಿ ಯಾ ಸಂಗೀತಕ್ಕೆ ಪರರಾಜ್ಯದ ಜನರು ಮನಸೋತು ಅವುಗಳನ್ನು ಕೇಳುತ್ತಿದ್ದಾರೆ. ನನ್ನ ಆಫಿಸಿನಲ್ಲಿ ನನ್ನ ಹತ್ತಿರ ಮನೋಮುರ್ತಿಯ ಸಂಗೀತ ಇರುವ ಹಾಡುಗಳು mattitara ಒಳ್ಳೆಯ ಹಾಡುಗಳನ್ನು kaapi maadisikondu keluttaare. matte ನಮ್ಮ rameshappanige ರಹಮಾನ್ ಹಾಡುಗಳು beka? ಕನ್ನಡ chitrarangadavare ಈ ರೀತಿಯ nirabhimaani kelasagalannu maadidaaga adannu nodida janarigu abhimaana kadimeyaaguvudillave?

Gangadhara ಅಂತಾರೆ...

sariyaagi helidiri abhimaanigale.. oppuvantha maathu.. yaarnaadru keli nimgishtavaada hero yaaru antha.. Amitabh, Ameer ge hogthaare nam hero, heroine galu.. Ivara kannige namme Rajanna, Ambi, Vishnu kaanode illa???

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails