ಭಾರತದ ಒಪ್ಪುಕೂಟ ಮತ್ತು ಸ್ವಾತಂತ್ರ್ಯ!!

ಇವತ್ತು ಭಾರತ ದೇಶದ 64ನೇ ಸ್ವಾತಂತ್ರ್ಯ ದಿನಾಚರಣೆ. ಎಲ್ಲೆಡೆ ಮೂರ್ಬಣ್ಣದ ಬಾವುಟ ಮುಗಿಲೆತ್ತರಕ್ಕೆ ಹಾರಾಡುತ್ತಿದೆ. ಕೆಂಪುಕೋಟೆಯ ಮೇಲಿಂದ, ಮಾಣಿಕ್ ಶಾ ಬಯಲಿಂದ ದೇಶಪ್ರೇಮದ ಕರೆ, ಜೈ ಹಿಂದ್ ಎಂಬ ಕೂಗು ಮುಗಿಲು ಮುಟ್ಟುತ್ತಿವೆ. ಆದ್ರೆ ಇದೇ ಸಮಯದಲ್ಲಿ ಕೇಂದ್ರಸರ್ಕಾರವು ರಾಜ್ಯಗಳ ಆರ್ಥಿಕ ಸ್ವತಂತ್ರವನ್ನು ಮೊಟಕು ಮಾಡಕ್ಕೆ ಹುನ್ನಾರ ನಡೆಸಿ ಸ್ವಾತಂತ್ರ್ಯ ಅನ್ನೋದನ್ನೇ ವಿಡಂಬನೆ ಮಾಡಕ್ಕೆ ಮುಂದಾಗಿದೆ ಗುರೂ! ವಿಷಯ ಏನೂಂದ್ರೆ ಕಳೆದ ವಾರ "ಸರಕು ಮತ್ತು ಸೇವಾ ತೆರಿಗೆ" ಗೆ ಸಂಬಂಧಿಸಿದ್ದ ಒಂದು ತಿದ್ದುಪಡಿಯನ್ನು ಸಂವಿಧಾನಕ್ಕೆ ಮಾಡಲು ಕೇಂದ್ರಸರ್ಕಾರ ಮುಂದಾಗಿದೆ. ಈ ತಿದ್ದುಪಡಿಯಲ್ಲಿ ಕೇಂದ್ರದ ಅರ್ಥಸಚಿವರಿಗೆ ರಾಜ್ಯಗಳ ಸಮಿತಿಯ ನಿಲುವನ್ನು, ಅದಕ್ಕೆ ಬಹುಮತ ಇದ್ದಾಗಲೂ, ತಿರಸ್ಕರಿಸೋ... ವಿಟೋ ಹಕ್ಕನ್ನು ಕೊಡಮಾಡಲಾಗಿದೆ. ಸದ್ಯಕ್ಕೆ ಇದನ್ನು ರಾಜ್ಯಗಳು ತಿರಸ್ಕರಿಸಿವೆ ಅನ್ನೋ ಸುದ್ದಿಯೇನೋ ಬಂದಿದೆ.

ಒಪ್ಪುಕೂಟವೆಂದರೆ ಅಧಿಕಾರ ವಿಕೇಂದ್ರೀಕರಣ!

ಭಾರತದ ಸ್ವರೂಪ ಒಪ್ಪುಕೂಟದ್ದು. ಈ ಸ್ವರೂಪ ಯಾರೋ ಕೊಟ್ಟುಹೋದ ಕೊಡುಗೆ ಅಲ್ಲಾ. ಬೇರೆ ಬೇರೆ ನುಡಿ, ಪ್ರದೇಶ, ವಾತಾವರಣ, ಸಂಸ್ಕೃತಿ, ಆಚರಣೆ, ನಂಬಿಕೆಗಳ ಜನಾಂಗಗಳಿರೋ ಭಾರತಕ್ಕೆ ಇದು ಅನಿವಾರ್ಯವಾದ ಸ್ವರೂಪ ಇದು. ಹಾಗಾಗಿ ಇಲ್ಲಿ ಒಪ್ಪುಕೂಟದ ಅಡಿಪಾಯವೇ ಸಮಾನ ಗೌರವ ಮತ್ತು ಆರ್ಥಿಕ ಸ್ವಾಯತ್ತತೆ. ಹೆಚ್ಚು ಹೆಚ್ಚು ಅಧಿಕಾರ ವಿಕೇಂದ್ರೀಕರಣ. ಕೇಂದ್ರಸರ್ಕಾರ ಹೆಚ್ಚು ಹೆಚ್ಚು ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಬದಲಿಗೆ ಇರೋ ಅಧಿಕಾರವನ್ನು ಕಿತ್ತುಕೊಳ್ಳುವ ಈ ಮನಸ್ಥಿತಿ ಒಪ್ಪುಕೂಟದ ಕಲ್ಪನೆಗೆ ವಿರುದ್ಧವಾಗಿದೆ. ಈಗಾಗಲೇ ಇರುವ ಅಧಿಕಾರಗಳನ್ನು ಮತ್ತಷ್ಟು ಬಲಪಡಿಸೋ ಬದಲು ಹೀಗೆ ರಾಜ್ಯಗಳನ್ನು ಬಲಹೀನಗೊಳಿಸೋದು ಮುಂದೆ ಸಾಗೋ ಪ್ರಗತಿ ರಥಾನ ಹಿಂದೆ ಹಿಂದೆ ಓಡಿಸೋ ಹಾಗಿದೆ...

4 ಅನಿಸಿಕೆಗಳು:

ಒಪ್ಪುಕೂಟವಲ್ಲ ಅಂತಾರೆ...

ಇಂಡಿಯ ಒಂದು Federation ಅಲ್ಲ.

India ie. Bharat is a Union of States. It is a Sovereign Socialist Democratic Republic with a parliamentary system of government. The Republic is governed in terms of the Constitution of India which was adopted by the Constituent Assembly on 26th November 1949 and came into force on 26th January 1950.

The Constitution provides for a Parliamentary form of government which is federal in structure with certain unitary features. The constitutional head of the Executive of the Union is the President. As per Article 79 of the Constitution of India, the council of the Parliament of the Union consists of the President and two Houses to be known as the Council of States (Rajya Sabha) and the House of the People (Lok Sabha). Article 74(1) of the Constitution provides that there shall be a Council of Ministers with a Prime Minister as its head to aid and advise the President, who shall exercise his functions in accordance to the advice. The real executive power is thus vested in the Council of Ministers with the Prime Minister as its head.

The Council of Ministers is collectively responsible to the House of the People (Lok Sabha). Every State has a Legislative Assembly. Certain States have an upper House called State Legislative Council. Governor is the Head of a State. There shall be a Governor for each State and the executive power of the State shall be vested in him. The council of Ministers with the Chief Minister as its head advises the Governor in the discharge of the executive functions. The Council of the Ministers of a state is collectively responsible to the Legislative Assembly of the State.


ನೋಡಿ. ಇದಕ್ಕೆ constitution ಚೇಂಜ್ ಮಾಡಲೇಬೇಕು.

Anonymous ಅಂತಾರೆ...

India has federal structure where power is shared between states and the central. Unfortunately India has assymetric fedaralism.
We should strive to bring true symmetric fedaralism in India.
I think that is what enguru stands for and intend to tell in these aticles.
http://en.wikipedia.org/wiki/Federalism

- Anil

Anonymous ಅಂತಾರೆ...

Please see this also.

India is not United states of India is correct. But they chose a model to have federal system.

http://indiacode.nic.in/coiweb/introd.htm

In reality India is a pseudo federal nation, which need to become federal.

- Anil

ಒಪ್ಪುಕೂಟವಲ್ಲ ಅಂತಾರೆ...

ಆದರೆ, Federation ಆಗಲು ನಮ್ಮ ಜನ ರೆಡಿ ಇದ್ದಾರ? ಇವೊತ್ತು ಕರ‍್ನಾಟಕದಲ್ಲಿ ಇರೋ politicianಗಳನ್ನು ಗಮನಿಸಿದರೆ, full federation ಆದರೆ ಇವರ ಮೇಲೆ controlಲೇ ಇರಲ್ಲವಲ್ಲ.

ಇನ್ನು federation ಆದರೆ ಕನ್ನಡ language ಬಳೆಯ್ತದೆ ಅಂತ ಹೆಂಗೆ ಗ್ಯಾರೆಂಟಿ? ಕನ್ನಡದಲ್ಲಿ ಇಂಜಿನಿಯರಿಂಗು, ಮೆಡಿಸಿನ್ ಮುಂತಾದ subject ಕಲಿಸಲಾಗಲೀ, ಕರ‍್ನಾಟಕದಲ್ಲಿ ಕನ್ನಡವನ್ನೇ ಬಳಸಿಕೊಂಡು ಹೋಗಕ್ಕಾಗಲಿ, ಈಗಿರುವ system ಅಡ್ಡಿ ಇದ್ದ ಹಾಗಿಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails