ಬಂಡವಾಳ ಹೂಡಿಕೆ: ನಮ್ಮ ಜನಕ್ಕೆ ಕೆಲಸಾನೂ ಕೊಡಬೇಕು !

ಆರ್ಸೆಲರ್ , ಪೋಸ್ಕೋ, ಲಫಾರ್ಜ್ ಸೇರಿದಂತೆ ಹಲವು ದೊಡ್ಡ ದೊಡ್ಡ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿದ್ದು, ಸುಮಾರು ರೂ.1,38,000 ಕೋಟಿಯಷ್ಟು ಬಂಡವಾಳ ಹೂಡಲು ಮುಂದಾಗಿದ್ದಾರೆ ಮತ್ತು ಇದು 92,000ಕ್ಕೂ ಹೆಚ್ಚು ಕೆಲಸ ಹುಟ್ಟು ಹಾಕಲಿದೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ! ಇದು ರಾಜ್ಯದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ನೋಡಿದರೆ ಒಂದೊಳ್ಳೆ ಬೆಳವಣಿಗೆಯಾಗಿ ಕಾಣ್ತಿದೆ. ಈ ಸದವಕಾಶದ ಲಾಭ ನಮ್ಮ ನಾಡಿಗೆ ಸಂಪೂರ್ಣವಾಗಿ ಸಿಗಬೇಕಾದರೆ ಸರ್ಕಾರ ಈಗಿಂದಲೇ ಎಚ್ಚರಿಕೆಯಿಂದ ಕೆಲ್ಸ ಮಾಡ್ಬೇಕು. ಸರ್ಕಾರ ಎಚ್ಚರ ತಪ್ಪದ ಹಾಗೆ ಜನ ಎಚ್ಚರ ವಹಿಸಬೇಕು ಗುರೂ! ಇದು ಈ ಯೋಜನೆಯ ಸಂಪೂರ್ಣ ಲಾಭ ನಮ್ಮ ನಾಡಿಗೇ ಸಿಗೋಕ್ಕೆ ಭಾಳಾ ಅಗತ್ಯವಾಗಿದೆ.

ಏನೇನ್ ಆಗ್ತಿದೆ ?
ಈ ಯೋಜನೆಗಳಿಂದ ಸಿಮೆಂಟ್, ಕಬ್ಬಿಣ ಮತ್ತು ಅದಿರು ಮುಂತಾದ ವಿವಿಧ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಉದ್ಯೋಗದ ಅವಕಾಶಗಳು ಸೃಷ್ಟಿ ಆಗುವುದರ ಜೊತೆಗೆ, ಪೂರಕ ವಲಯಗಳಾದ ಬಿಡಿ ಭಾಗಗಳ ತಯಾರಿಕೆ, ಮೂಲ ಉತ್ಪನ್ನಗಳ ಪೂರೈಕೆ, ಹೊಸ ಸಂಶೋಧನಾ ಘಟಕಗಳು, ಹೀಗೆಯೇ ಹತ್ತಾರು ಕ್ಷೇತ್ರಗಳಲ್ಲಿ ಹೊಸ ಹೊಸ ಕೆಲಸಗಳು ಹುಟ್ಟಿಕೊಳ್ಳಲಿವೆ.

ಇತ್ತ ಗಮನವಿರಲಿ !
ಸರ್ಕಾರ ಈ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳೊ ಸಂದರ್ಭದಲ್ಲೇ ಕೆಳಗಿನ ಕೆಲವು ಮುಖ್ಯ ವಿಷಯಗಳ ಬಗ್ಗೆ ಗಮನ ಹರಿಸಬೇಕು ಗುರು.
  • ಯೋಜನೆಗಳಿಂದ ಹುಟ್ಟುತ್ತಿರುವ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಹೇಗೆ ಕೊಡಿಸುವುದು ?
  • ಈ ಹೂಡಿಕೆಯಿಂದ ಯಾವ ಯಾವ ತರಹದ ಕೆಲಸಗಳು ಸೃಷ್ಟಿ ಆಗುತ್ತೆ? ಆ ಕೆಲಸಗಳಿಗೆಲ್ಲ ಬೇಕಾದ ನೈಪುಣ್ಯತೆ ಈ ಭಾಗದ ಕನ್ನಡಿಗರಲ್ಲಿದೆಯಾ? ಇಲ್ಲದೇ ಹೋದಲ್ಲಿ, ಅದನ್ನು ಹುಟ್ಟು ಹಾಕುವತ್ತ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು?
  • ನಮ್ಮ ನೆಲ, ಜಲ ಸೇರಿದಂತೆ ಎಷ್ಟು ಸಂಪನ್ಮೂಲದ ಬಳಕೆಯಾಗುತ್ತೆ? ಆ ಬಳಕೆಗೆ ತಕ್ಕ ಲಾಭ ನಾಡಿಗೆ ಆಗಲಿದೆಯೇ?
  • ಯೋಜನೆಗಳಿಗೆ ರೈತರಿಂದ ಪಡೆಯುತ್ತಿರುವ ಭೂಮಿ ಎಂತಹದ್ದು? ರೈತರಿಂದ ಫಲವತ್ತಾದ ಕೃಷಿ ಭೂಮಿ ಪಡೆಯುವುದು ಅನಿವಾರ್ಯ ಅನ್ನುವಂತಹ ಸಂದರ್ಭದಲ್ಲಿ, ರೈತರಿಗೆ ಸರಿಯಾದ ಪುನರ್ವಸತಿ ಸೌಲಭ್ಯ ಸಿಗುವಂತೆ ಮಾಡುವುದಕ್ಕೆ ಏನು ಮಾಡಬೇಕು? ಅದಕ್ಕೂ ಮೀರಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಗಳಲ್ಲಿ ಒಬ್ಬ ಭಾಗಿದಾರ ಅನ್ನುವಂತೆ ತೊಡಗಿಸಿಕೊಳ್ಳುವುದು ಹೇಗೆ?
  • ಬಂಡವಾಳ ಹೂಡುತ್ತಿರುವ ಕಂಪನಿಗಳು ಶಾಲೆ, ಆಸ್ಪತ್ರೆ ನಿರ್ಮಾಣದಂತಹ ಕೆಲಸದ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ತೋರಿಸುವಂತೆ ಅವರ ಮನ ಒಲಿಸುವುದು ಹೇಗೆ?
ಬಂಡವಾಳ ತರೋದಷ್ಟೇ ತನ್ನ ಕೆಲಸ ಎಂದು ವರ್ತಿಸದೇ, ಸರ್ಕಾರ ಮೇಲಿನ ಎಲ್ಲ ಅಂಶಗಳ ಬಗ್ಗೆ ಸರಿಯಾದ ಗಮನ ಕೊಡಬೇಕು ಗುರು.

ಕೊನೆಹನಿ:
ಕಳೆದ ವರ್ಷ, ಧಾರವಾಡದಲ್ಲಿ ಟಾಟಾ ಸಂಸ್ಥೆಯ ಬಂಡವಾಳ ಹೂಡಿಕೆ ಕೈ ತಪ್ಪಲು, ಯೋಜನೆಗೆ ಅನುಮತಿ ನೀಡುವಲ್ಲಿ ಸರ್ಕಾರ ತೆಗೆದುಕೊಂಡ ಆಮೆವೇಗದ ನಿರ್ಧಾರಗಳು ಸಾಕಷ್ಟು ಮಟ್ಟಿಗೆ ಕಾರಣವಾಗಿದ್ದವು. ಕೊನೆ ಪಕ್ಷ ಈ ಬಾರಿ ಸರ್ಕಾರ, ಈ ಯೋಜನೆಗೆ ಪಾಲುದಾರರಾದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಬೇಗ ಈ ಯೋಜನೆಗಳನ್ನು ಜಾರಿಗೆ ತಂದು, ಆ ಭಾಗದ ಕನ್ನಡಿಗರ ಬಾಳು ಹಸನಾಗುವಂತೆ ಮಾಡಲಿ ಎಂದು ಹಾರೈಸೋಣ. ಏನಂತೀಯಾ ಗುರು?

6 ಅನಿಸಿಕೆಗಳು:

govinda ಅಂತಾರೆ...

super guru,,
idara bagge baritiya anta kaayta idde.,

kannada sanghatanegalu, media, local sangha samsthe ellaru idara bagge gamana kottu,, kelasadalli ella namage sigo haage maadbeku,,

kannadavaru yaaradru udyoga maahiti kendra teredu,, kannadigara resumes kottu illi chennagi duddu maadkobeku..

Priyank ಅಂತಾರೆ...

ಒರಿಸ್ಸಾ, ಮಹಾರಾಷ್ಟ್ರ ರಾಜ್ಯಗಳು ನೆಲದ ಮಕ್ಕಳಿಗೆ ೮೦% ಉದ್ಯೋಗವಕಾಶ ನೀಡಿರುವಾಗ, ನಮ್ಮ ಸರ್ಕಾರ ಯಾಕೆ ಈ ರೀತಿಯ ಕಾನೂನು ತಂದು, ಹೊಸ ಕೆಲಸಗಳಲ್ಲಿ ಹೆಚ್ಚಿನವು ನೆಲದ ಮಕ್ಕಳಿಗೇ ದೊರೆಯುವಂತೆ ಮಾಡಬಾರದು?

Ravi ಅಂತಾರೆ...

ನಿಮಗೆ ದೇವೇಗೌಡರು ಇದನ್ನ ಮಾಡಾಕ್ ಬಿಡ್ತಾರೆ ಅನಸತ್ತ್. ?

baktavar ಅಂತಾರೆ...

ಈ ಮಹತ್ತರವಾದ ಯೋಜನೆ ನಮ್ಮ ಎಲ್ಲಾ ಕನ್ನಡಿಗರ ಬಾಳನ್ನು ಹಸನು ಮಾಡಲಿ ಎಂದು ನಾವೆಲ್ಲರೂ ಹಾರೈಸಬೇಕು ಗುರು...ನೀನು ಹೇಳಿದ ಮಾತುಗಳು ಅಪ್ಪಟ ಸತ್ಯ ಗುರು, ಈ ಯೋಜನೆ ನಮ್ಮ ನಾಡಿನ ಅಭಿವೃದ್ದಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಬಹುದೇನೋ, ಆದರೆ, ನೀನು ಹೇಳಿದ ವಿಷಯಗಳತ್ತ ಕೂಡ ಸರಕಾರ ಯೋಚಿಸಬೇಕು.. ನಮ್ಮ ಕರ್ನಾಟಕದಲ್ಲಿ ಹಿಂದಿನ ಸರಕಾರಗಳು ಬಹಳಷ್ಟು ಬಂಡವಾಳ ತರುವ ಯೋಜನೆಗಳನ್ನು ನೀಡಿದ್ದಾರೆ, ಆದರೆ, ಕೂಲಂಕುಶವಾಗಿ ನೋಡಿದಾಗ ಸರಕಾರ ಕೆಲವು ವಿಷಯಗಳತ್ತ ಗಮನ ಹರಿಸಿಲ್ಲ ಎಂದು ಅನಿಸುತ್ತದೆ...ಅದು " ೭೦ ಎಕರೆ ಹೊಲ ಇದ್ದರೂ, ಒಪ್ಪತ್ತು ಹೂತ್ತಿನ ಊಟಕ್ಕೆ ಪರದಾಡು ಪರಿಸ್ತಿತಿ ಆಗಬಾರದು", ಇದನ್ನು ಬಹಳಷ್ಟು ಸಾರಿ ಅನುಭವಿಸಿವಿದ್ದೇವೆ ಅನ್ಕೋತೀನಿ... ಈಗಲಾದರೂ ಸರಕಾರ ನೀನು ಹೇಳಿದ ವಿಷಯಗಳತ್ತ ಗಂಭಿರವಾಗಿ ಯೋಚಿಸಬೇಕು, .. ನೀನು ಮೇಲೆ ಹೇಳಿದ ವಿಷಯಗಳನ್ನು ಸರಕಾರಕ್ಕೆ ಹೇಗೆ ಮನವರಿಕೆ ಮಾಡಿಸೋದು ಗುರು..?
--
ನಿಮ್ಮ ಪ್ರೀತಿಯ
ಬಾಬಾ

Anonymous ಅಂತಾರೆ...

even government makes any rules ,companies know how to get through it.Prsently i am working in largest steel plant in india which is located in bellary. Nearly 40% employees belongs to karnataka.This company is having its unit in Maharashtra also.It recruits employees in the name of unit which is located in maharashtra but they are working in karnataka unit.
So in records 2000 employees among which 80% kannadigs but in real there are more than 5000 employees. All these employees are submitting theree IT returns to Maharashtra.

Anonymous ಅಂತಾರೆ...

super guru.....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails