ಚಾಮಯ್ಯ ಮೇಷ್ಟ್ರು ಇನ್ನಿಲ್ಲ !
18.1.10
ಸುಮಾರು 370ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ, ಕಳೆದ ಹಲವು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ, ಸಾಮಾಜಿಕ, ಸಾಂಸಾರಿಕ ಪಾತ್ರಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನಿಂತಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಹಿರಿಯ ನಟ ರಾಮಾಚಾರಿಯ ಚಾಮಯ್ಯ ಮೇಷ್ಟ್ರು ಕೆ.ಎಸ್ ಅಶ್ವತ್ಥ್ ನಮ್ಮನ್ನೆಲ್ಲ ಅಗಲಿದ ದುಃಖದ ಸುದ್ದಿ ಬಂದಿದೆ ಗುರು ! ತಂದೆ ಅಂದರೆ ಇವರಂತೆ ಇರಬೇಕು ಅನ್ನುವ ಹಾಗೇ ತಂದೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದ ಇವರು ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಮೊನ್ನೆಯಷ್ಟೇ ವಿಷ್ಣುವರ್ಧನ್, ಗಾಯಕ ಅಶ್ವಥ್ ಅವರನ್ನು ಕಳೆದುಕೊಂಡು ಬಡವಾಗಿದ್ದ ಕನ್ನಡ ಚಿತ್ರರಂಗಕ್ಕೆ ಇದು ಬರ ಸಿಡಿಲಿನಂತೆ ಎರಗಿದೆ ಗುರು. ಅಗಲಿದ ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
4 ಅನಿಸಿಕೆಗಳು:
tumba bad news..
its end of an era.we lost a gr8 actor.
We cant only call him as "Chamaiah Meshtru" which will be an injustice to his other roles in which he has acted. He gave the justice to all the characters which he has acted.
ಟೈಟಲ್ ನಲ್ಲಿ ಏನಿದೆ ಗುರೂ? ಚಾಮಯ್ಯ ಅಂದ ತಕ್ಶಣ ಅಶ್ವಥ್ ಎಂದು ತಿಳಿಯುತ್ತದೆ.
ಮೈಸೂರಿನಲ್ಲಿದ್ದು, ಅವರನ್ನು ಅನೇಕ ಬಾರಿ ಪ್ರತ್ಯಕ್ಶವಾಗಿ ನೋಡಿದ ನಾವೇ ಧನ್ಯ ಎಂದೆನಿಸುತ್ತಿದೆ. ಏನೇ ಹೇಳಿ, ಹಿಂದಿಯಲ್ಲಿ ಪೋಷಕ ಪಾತ್ರಗಳಿಗೆ ಸಿಗುವ ಮನ್ನಣೆ ಕನ್ನಡದಲ್ಲೂ ಆಗಬೇಕು.
ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಮನೆಯವರಿಗೆ ಈ ಆಘಾತ ತಡೆಯುವ ಶಕ್ತಿ ಕೊಡಲಿ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!