ಹೊಗೇನಕಲ್ಲು ಪ್ರದೇಶದಲ್ಲಿ ತಮಿಳುನಾಡು ಕುಡಿಯುವ ನೀರಿನ ಯೋಜನೆಯೊಂದನ್ನು ಕೈಗೊಳ್ಳಲು 2008ರಲ್ಲೇ ಶಂಕುಸ್ಥಾಪನೆಯನ್ನು ನಡೆಸಿತ್ತು. ಇದು ನದಿ ನೀರು ಹಂಚಿಕೆ ಸಮಸ್ಯೆಯಲ್ಲ, ನಮ್ಮ ನಾಡಿನ ಗಡಿ ಒತ್ತುವರಿ ಸಮಸ್ಯೆ. ಆವತ್ತಿನಿಂದ ಈ ಬಗ್ಗೆ ಕರ್ನಾಟಕ ಸರ್ಕಾರ ಏನೇನು ಕ್ರಮ ತೆಗೆದುಕೊಂಡಿದೆ? ಅಂತಾ ನೋಡಿದರೆ ಸಮಸ್ಯೆಯ ಕಂಬಳಿ ಎಲ್ಲಿತ್ತೋ ಅಲ್ಲೇ ಇದೆ. ತಮಿಳುನಾಡು ಮಾತ್ರಾ ನೀವು ಏನಾರಾ ಬೊಗುಳ್ಕೊಳ್ಳಿ ನಾವು ಮಾತ್ರಾ ಕಾಮಗಾರಿ ಮಾಡ್ತಾ ಇರ್ತೀವಿ ಎನ್ನುವಂತೆ ಕೆಲಸ ಶುರು ಮಾಡಿದೆ. ಕರ್ನಾಟಕ ಸರ್ಕಾರ ಮಾತ್ರಾ ಈ ಬಗ್ಗೆ ಪರಿಣಾಮಕಾರಿಯಾಗಿ ಕ್ರಮ ತೊಗೊಳ್ತಿಲ್ಲ. ಬಹುಶಃ ಪೆರಿಯಣ್ಣನ ಮಾತು ಮೀರಿ ಭಾರತೀಯ ಸಂಸ್ಕೃತಿಯನ್ನು ಹಾಳುಮಾಡಬಾರದೆಂದೋ, ಯಾವುದೇ ಕ್ರಮ ತೆಗೆದುಕೊಂಡರೆ ಸೌಹಾರ್ದತೆ ಹಾಳಾದೀತು ಎಂದೋ ಚಿನ್ನತಂಬಿ ಸುಮ್ಮನಿರಬಹುದು... ಹೀಗೇ ಇದ್ದರೆ ಮುಂದೊಂದು ದಿನ ಇದೇ ಚಿನ್ನತಂಬಿ ಹೊಗೇನಕಲ್ ಕುಡಿಯುವ ನೀರು ಯೋಜನೆಯನ್ನು (ತಮಿಳು)ನಾಡಿಗೆ ಅರ್ಪಿಸಿ ಉದ್ಘಾಟನೆ ಮಾಡಿಬಂದರೂ ಬರಬಹುದು ಎಂಬುದು ಜನರಾಡುತ್ತಿರೋ ಮಾತು. 2008ರಲ್ಲಿ ಏನ್‌ಗುರುವಿನಲ್ಲಿ ಬರೆದಿದ್ದ ಹೊಗೇನಕಲ್ಲಿಗೆ ಹೊಗೆ ಈ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಸ್ತುತ. ಓದಿ - ಸಂಪಾದಕ
ಹೊಗೇನಕಲ್ಲಿಗೇ ಹೊಗೆ!
ಕನ್ನಡಿಗರೇ... ಲಗೂ ತಯಾರಾಗ್ರೀಪಾ! ನಮ್ಮ ಹೊಗೆನಕಲ್ ನಡುಗಡ್ಡೆಗೆ ಎಳ್ಳು ನೀರು ಬಿಟ್ಟು ಪೂಜೆ ಮಾಡಿ ಹೊಗಿ ಹಾಕಾಕ. ಮೊನ್ನಿ ಮೊನ್ನಿ ವಿಜಯ ಕರ್ನಾಟಕದ ವರದಿ ಪ್ರಕಾರ ತಮಿಳನಾಡಿನ ಸರ್ಕಾರ ಕಾವೇರಿ ನದಿಯಿಂದ ಕುಡಿಯು ನೀರು ಮತ್ತು ವಿದ್ಯುತ್ ಸ್ಥಾವರ ಯೋಜನೆಗೆ ಶಿಲಾನ್ಯಾಸ ಮಾಡೇತಿ. ಇನ್ನೂ ನಾವು ಕೈ ಕಟಕೊಂಡು ಕುಂತ್ರ ಪೂರ್ತಿ ಹೊಗೆನಕಲ್ ತಮಿಳುನಾಡಿನ ಪಾಲಾಗೊದನ್ನ ತಪ್ಪಸಾಕ್ ಸಾಧ್ಯನೇ ಇಲ್ಲ.
ಹೊಗೆನಕಲ್ ನಮ್ಮದು
ಮೊನ್ನಿ ವಿ.ಕ ಹೇಳುದನ್ನ ಸ್ವಲ್ಪ ನೋಡ್ರಿ:
ಕಾನೂನು ಪಂಡಿತರು ಹೇಳು ಪ್ರಕಾರ ಹೊಗೆನಕಲ್ ಪೂರ್ತಿ ಕರ್ನಾಟಕಕ್ಕೆ ಸೇರಿದ್ದು, ಹಿಂದಿನ ಮದ್ರಾಸ್ ಸರ್ಕಾರ ಮಾಡಿದ್ದ ನಕ್ಷೆದಾಗೂ ( ಟ್ರೋಪ ಶೀಟ್) ಇದು ಸ್ಪಷ್ಟ ಐತಿ. ಆದ್ರ ತಮಿಳ್ನಾಡಿನ ಸರ್ಕಾರ ತನ್ನ ಕಡಿ ಇರೂ ನಕ್ಷೆ ತೋರ್ಸಾಕ್ ಬಿಲಕುಲ್ ತಯಾರಿಲ್ಲ!
ಹೊಗೆನಕಲ್ಲಿನ ಸ್ಥಳೀಯರ ಹೆಸರು ಕರ್ನಾಟಕದ ಮತದಾರರ ಪಟ್ಟಿನಾಗ್ ಐತ್ರಿ.
ಹೊಗೆನಕಲ್ನಾಗ್ ಏನರಾ ಎಪರಾ ತಪರಾ ನಡೀತಂದ್ರು, ಅದು ದಾಖಲಾಗುದು ನಮ್ಮ ಮಲೆ ಮಹದೇಶ್ವರ್ ಪೊಲೀಸ್ ಠಾಣೆದಾಗರೀ.
ಅಲ್ಲಿ ಮಂದಿ ಕೈಯ್ಯಾಗಿರೂದು ನಮ್ಮ ಕರ್ನಾಟಕ ಸರ್ಕಾರ ಕೊಟ್ಟಿರು ಪಡಿತರ ಚೀಟಿ ರೀ.
ಅಷ್ಟ ಅಲ್ರಿ, ಗಡಿ ವಿವಾದ ಸಂಬಂಧ ಅರ್ಮುಗಂ ಅನ್ನೋರು ಹಾಕಿದ್ದ ಕೇಸನ್ನ " ನಮ್ಮ ವ್ಯಾಪ್ತಿಗೆ ಬರುದಿಲ್ಲ" ಅಂತ ತಮಿಳುನಾಡಿನ ನ್ಯಾಯಾಲಯ ಕರ್ನಾಟಕಕ್ಕ ವರ್ಗ ಮಾಡೇತ್ರಿ.
ಮ್ಯಾಲಿನ ಸಾಕ್ಷಿಗಳು ಏನ್ ಹೇಳತೇತಿ ಅಂದ್ರ ಹೊಗೆನಕಲ್, ನಮಗ ಸೇರಿರೂ ಜಗಾರೀ. ಅಂತದ್ರಾಗ್ ತಮಿಳುನಾಡು ನಮ್ಮ ರಾಜ್ಯದಾಗ ಸರ್ಕಾರ ಇಲ್ಲದ ಹೊತ್ತು ನೋಡಿ ಹೊಂಚು ಹಾಕಿ ಚಲೋತಂಗ ನಮಗ ಟೋಪಗಿ ಹಾಕಾಕ್ ನಿಂತೆತಿ ನೋಡ್ರಿ. ಈ ಪರಿ ಮರಾಮೋಸದ ಪ್ಲಾನ್ ಸಣ್ಣದಿಲ್ರಿ... 1956ರಾಗ ರಾಜ್ಯ ವಿಂಗಡಣೆ ಆದಾಗ್ ನಮಗ ಮೋಸ ಆಗಿ ಹೊಗೆನಕಲ್ ನ ಒಂದು ಭಾಗ ತಮಿಳುನಾಡಿಗ ಸೇರ್ಕೊಂಡ್ತು. ಈಗ ನೋಡಿದ್ರ ಪ್ರವಾಸೋದ್ಯಮ ಅಭಿವೃದ್ಧಿ ಮಾಡ್ತೇನಿ, ರಸ್ತಿ ಮಾಡ್ತೆನಿ, ಅದು ಇದು ಅನ್ಕೊಂತ ನಮ್ಮ ಪಾಲಿನ ನೆಲಾನು ಅಕ್ರಮವಾಗಿ ಆಕ್ರಮಿಸಿಕೊಂಡಾರ್ ರೀ.
ಏನ್ ಕಿಸಿಯಾಕ್ ಆಗತೆತಿ ಕಿಸಿರಿ ಅಂತ ಸೊಕ್ ಮಾಡ್ಯಾರ
ಈಗ ಕಾವೇರಿ ರಗಳಿ ನ್ಯಾಯಲಯದಾಗ್ ಇರಬೇಕಾರ ಯಾರ ಪರ್ಮಿಷನ್ನು ತಗೊಳ್ಳದೆ ಅಣಿಕಟ್ಟು ಕಟ್ಟಾಕ್ ನಿಂತಿರುದು ದೊಡ್ಡ ಮೋಸ. ಇದೆ ತಮಿಳುನಾಡು ನಮ್ಮ ಮಲೆ ಮಹದೇಶ್ವರ ಬೆಟ್ಟಕ್ಕ ಬರು ಭಕ್ತರಿಗೆ ನಮ್ಮ ಪಾಲಿನ ನೀರಿನಾಗ್ ಕುಡಿಯು ನೀರು ವ್ಯವಸ್ಥೆ ಮಾಡಾಕ್ ಒಂದ ಸಣ್ಣ ಯೋಜನೆ ಹಾಕಿದ್ರ ಲಬ ಲಬ ಬಾಯಿ ಬಡ್ಕೊಂಡು ಅದಕ್ಕ ಕಲ್ಲ ಹಾಕ್ತ್ರಿ. ಈಗ ನೋಡಿದ್ರ ಈ ಯೋಜನೆಗೆ ತಮಿಳನಾಡು ಬಳಸಕೊಳ್ಳು ನೀರೆಷ್ಟು? ಅದು ಆ ರಾಜ್ಯಕ್ಕೆ ನಿಗದಿ ಮಾಡಿರು ನೀರಿನ ಪಾಲನಾಗ್ ಐತೊ ಇಲ್ಲೊ ? ಅರಣ್ಯ ಪ್ರದೇಶದಾಗ್ ಆಣೆಕಟ್ಟು ಕಟ್ಟುದ್ರಿಂದ ನಮ್ಮ ರಾಜ್ಯದ ವನ್ಯ ಜೀವಿಗಳಿಗೆ ಏನ್ ಅಪಾಯ ಆಗತೆತಿ ? ಅಂತಾರ ಕರ್ನಾಟಕದ ಕೂಡಾ ಚರ್ಚಿ ಮಾಡಾರೇನ? ಉಹೂ.. ಒಂದೂ ಇಲ್ಲ. ಕಣ್ ಮುಚಗೊಂಡು ಯೋಜನಾ ಚಾಲೂ ಮಾಡ್ಯಾರ್ ರೀ. ’ನಾವು ಏನಾರ್ ಮಾಡ್ತೆವಿ, ನಿಮ್ಮ ಕೈಯಾಗ್ ಏನ್ ಕಿಸಿಯಾಕ್ ಆಗತೆತಿ? ಕಿಸಿರಿ ನೋಡೇ ಬಿಡ್ತೆವಿ’ ಅನ್ನೋರ ಹಾಗೆ ಸವಾಲ್ ಮಾಡೊ ಹಂಗ ನಡ್ಕೊಂಡಾರ್ರೀ. ಕೇಂದ್ರ ಸರ್ಕಾರನೆ ಅವರ ಕೈಯಾಗ್ ಇರಬೇಕಾದ್ರ ಅವರಿಗೆ ಯಾವ ಭಯ?
ತಮಿಳರು ಭಾರತಿಯರೇ, ತಮಿಳುನಾಡು ಭಾರತವೇ
ತಮಿಳರು ಭಾರತಿಯರೇ, ತುಸಾ ನಮ್ಮ ಪಾಲಿನ ಕಾವೇರಿ ನೀರು ಅವರು ತಗೊಂಡ್ರ ಏನ್ ತಪ್ಪು? ಅವರು ಉದ್ಧಾರ ಆದ್ರ ಏನ್ ಸಮಸ್ಯೆ ಅನ್ನು ಮಂದಿಗೆ ಕಮ್ಮಿ ಇಲ್ಲ. ಅವರು ಉದ್ಧಾರ ಆಗ್ಲಿ, ನಾವು ಖುಷಿ ಪಡೋಣು, ಆದ್ರ ನಮ್ಮ ನೆಲ, ಜಲ ಕಬಳಿಸಿ, ನಮ್ಮ ಮಂದಿ ಬಾಳಿಗೆ ಬೆಂಕಿ ಹಾಕಿ ಅವರು ಉದ್ಧಾರ ಆಗ್ಲಿ ಅಂದ್ರ ಸುಮ್ಮ ಗಪ್ ಕುಂಡರಾಕ ನಮಗೇನ್ ಹುಚ್ಚ ನಾಯಿ ಕಡದಿಲ್ಲ. ಎರಡೂ ಮಂದಿ ಭಾರತಿಯರೇ, ಏನಿದು ಕನ್ನಡ ತಮಿಳು ಅಂತ ಬೇಧ-ಭಾವ ಅನ್ನು ಮಂದಿ ತಮ್ಮ ಮನ್ಯಾಗಿನ ಒಂದು ಕೋಣೆ ತಮಿಳನಿಗೋ ಬಿಹಾರಿಗೋ ಬಿಟ್ಟು ಕೊಡು ಅಂದ್ರ ಕೊಡತಾರೆನ್? ಅಷ್ಟ್ಯಾಕ ಪಕ್ಕದ ಮನಿಯಾತಂಗ ಕೊಡ್ತಾರೇನೂ? ಇದಕ್ಕೆ ಕೊನೆ ಹೆಂಗ್? ಭಾರತ ಅನ್ನೋದು ಭಾಷಾವಾರು ರಾಜ್ಯಗಳ ಒಕ್ಕೂಟ, ಅಲ್ಲಿನ ಎಲ್ಲ ಜನಕ್ಕೂ, ಎಲ್ಲ ವಿಷಯಗಳಲ್ಲೂ ಸಮಾನ ಹಕ್ಕಿರಬೇಕು, ಈ ರೀತಿ ಹಿಂದಿಯವರಿಗೆ, ತಮಿಳರಿಗೆ ಒಂದು ನ್ಯಾಯ , ಬ್ಯಾರೆ ಮಂದಿಗೆ ಒಂದು ನ್ಯಾಯ ಅಂದ್ರೆ ಆಗುದಿಲ್ರಿ. ನಮ್ಮ ಪಾಲಿನ ರೊಟ್ಟಿ ಕಿತ್ಕೊಂಡು, ನಮ್ಮನ್ನ ಉಪವಾಸ ಕೆಡವಿ, ನಮ್ಮ ಮುಂದ ಕುಂತು, ಎಣಗಾಯಿ ಪಲ್ಲ್ಯ ಹಚ್ಚಕೊಂಡ ತಿಂದು " ಬಾಳ್ ಚಲೋ ಇತ್ತು ಕನ್ನಡಿಗ, ಖರೇನು ನೀನು ಭಾರತೀಯ ಅಂತ ಸಾಬೀತು ಮಾಡಿದಿ" ಅಂತ ಸರ್ಟಿಫಿಕೇಟ್ ತಗೊಳ್ಳಾಕ್ ನಾವೇನು ಹುಚ್ಚರಲ್ರಿ. ಇಂಥ ಅನ್ಯಾಯಗಳನ್ನ ಖಂಡ ತುಂಡ ವಿರೋಧ ಮಾಡಿ, ನಮ್ಮ ನೆಲ ಜಲ ರಕ್ಷಸ್ಕೊಬೇಕು ಅಂದ್ರ ನಮಗ ಅರ್ಜೆಂಟ್ ಆಗಿ ಬೇಕಾಗಿರೋದು ನಮ್ಮ ನಾಡು ನುಡಿ ಬಗ್ಗ ಕಾಳಜಿ, ಬದ್ಧತೆ ಇರುವಂತ ಪ್ರಾದೇಶಿಕ ಚಿಂತನಾ ರೀ. ನೀವೇನ್ ಅಂತಿರಿ ಗುರುಗಳೇ?