ಹಿಂದಿ ಹೇರಿಕೆಯಿಂದ ಹೆಚ್ಚೋದು ಬಾಂಧವ್ಯ ಅಲ್ಲ, ಅಸಮಾನತೆ

ಇವ್ರೊಬ್ರು ಬಾಕಿಯಾಗಿದ್ರು ಹಿಂದಿ ಹೇರಿಕೆಗೆ ಹಾಡಹಗಲಲ್ಲೇ ಪ್ರೋತ್ಸಾಹ ಕೊಡಕ್ಕೆ! ಕರ್ನಾಟಕದಲ್ಲಿ ಹಿಂದಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ರಾಜ್ಯ ಸರ್ಕಾರ ಅದಕ್ಕೆ ದುಡ್ಡು ಕೊಡುತ್ತೆ ಅಂತ ರಾಜ್ಯಪಾಲ ಶ್ರೀ ರಾಮೇಶ್ವರ ಠಾಕೂರ್ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹೇಳಿರೋದು ಇವತ್ತಿನ ವಿ.ಕ.ದಲ್ಲಿ ವರದಿಯಾಗಿದೆ.

ಹಿಂದಿಗೆ ಕೊಂಬಿದೆ ಅನ್ನೋದಾದರೆ ಕನ್ನಡಕ್ಕೆ ಚಿನ್ನದ ಕೊಂಬಿದೆ!


ಭಾರತದಲ್ಲಿ ಹಿಂದಿ ಭಾಷೆಯೊಂದರ ಪ್ರಸಾರಕ್ಕಾಗಿ ಮಾತ್ರ ಅಕಾಡಮಿ ಯಾಕೆ ಪ್ರಾರಂಭಿಸಬೇಕು? ಕನ್ನಡ, ತೆಲುಗು, ತಮಿಳು, ಮಲಯಾಳಂ ಅಕಾಡಮಿಗಳನ್ನು ಮದ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ, ಬಂಗಾಲ, ಅಸ್ಸಾಮದಲ್ಲಿ ಏಕೆ ತೆರೆಯಕೂಡದು? ಕೇವಲ ಹಿಂದಿಗೆ ಮಾತ್ರ ಪ್ರಾಧಾನ್ಯ ನೀಡೋದು ಎಷ್ಟು ಸಮಂಜಸ? ಹಿಂದಿಯೇತರ ರಾಜ್ಯಗಳು ಹಿಂದಿ ಪ್ರಸಾರ ಮಾಡಕ್ಕೆ ಅಕಾಡಮಿ ಸ್ಥಾಪಿಸಲು ಯಾಕೆ ಒಪ್ಪಿಕೋಬೇಕು? ಹಿಂದಿಯೇತರ ರಾಜ್ಯ ಸರ್ಕಾರಗಳ ಬೊಕ್ಕಸದಿಂದ ಹಣ-ಜಾಗ-ಸಮಯವನ್ನು ಯಾಕೆ ನೀಡಬೇಕು? ಹಿಂದಿ ಭಾಷಿಕರಿಗರಿಗೆ ಇಲ್ಲದ ತ್ರಿಭಾಷಾ ಸೂತ್ರ ಇತರರಿಗೆ ಮಾತ್ರ ಯಾಕೆ? ಹಿಂದೀಗೇನು ಕೊಂಬಿದೆಯಾ? ಭಾಷೆಯ ಇತಿಹಾಸ-ಸೊಗಡು-ಹರವು-ಸಾಹಿತ್ಯ-ಸಾಮರ್ಥ್ಯಗಳೇ ಕೊಂಬು ಅನ್ನೋದಾದ್ರೆ ಕನ್ನಡಕ್ಕಿರೋದು ಬೆಲೆಬಾಳೋ ಚಿನ್ನದ ಕೊಂಬು, ಹಿಂದೀಗಿರೋದು ಮೂರುಕಾಸಿನ ತಗಡಿನ ಕೊಂಬು! ಹೀಗಿರುವಾಗ ಹಿಂದಿ ಹೇರಿಕೆ ಒಪ್ಪಿಕೊಳ್ಳಕ್ಕೆ ಕನ್ನಡಿಗ ಏನು ಕಿವಿಮೇಲೆ ಹೂ ಮಡೀಕೊಂಡಿಲ್ಲ ಗುರು!

ಹಿಂದಿ ಗೊತ್ತಿದ್ದರೇ ದೇಶಪ್ರೇಮ ಅನ್ನೋದು ಸುಳ್ಳು

ಠಾಕೂರ್ ಅವರು "ಇಡೀ ಭಾರತದಲ್ಲಿ ಹಿಂದಿಯನ್ನು ಬಳಸಿದರೆ ಜನರ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ಸಾಧ್ಯ" ಅನ್ಕೊಂಡಿರೋದು ಆಧಾರವಿಲ್ಲದ ಬೊಗಳೆ. ಬಾಯಲ್ಲಿ "ವಿವಿಧತೆಯಲ್ಲಿ ಏಕತೆ" ಅಂತ ಹೇಳಿಕೊಂಡು ಕೈಯಲ್ಲಿ ಹಿಂದಿ-ಹೇರಿಕೆ ಮಾಡೋರು ಹೇಳಿಕೊಟ್ಟಿದ್ದನ್ನೇ ಉರು ಹೊಡೆದು ಹೇಳಿದಹಾಗಿದೆ ಇವರ ಮಾತು! ಯಾವನಿಗೆ ಬೇಕಾಗಿದೆ ಹೊಸದೊಂದು ಉಪಯೋಗವಿಲ್ಲದ ಭಾಷೆಯ ಕಲಿಕೆ? ಕನ್ನಡಕ್ಕೆ ಒಂದು ಚೂರೂ ಸಂಬಂಧವಿಲ್ಲದ ಹೊಸದೊಂದು ಭಾಷೆ ಕಲಿಯಬೇಕು, ಕಲಿತರೆ ಮಾತ್ರ ನಿಜವಾದ ದೇಶಪ್ರೇಮಿಯಾಗುವುದು ಅಂತೇನಾದರೂ ಹೇಳಿದರೆ "ಹೋಗ್ರೀ ಸ್ವಾಮಿ! ನಿಮ್ಮ ದೇಶಪ್ರೇಮ ನೀವೇ ಇಟ್ಟುಕೊಂಡು ಉಪ್ಪಿನಕಾಯಿ ಹಾಕ್ಕೊಳಿ! ನನ್ನ ಜೀವನ ನಡೆದುಕೊಂಡು ಹೋದರೆ ಸಾಕಾಗಿದೆ" ಎಂದಾನು!

ಹಿಂದಿ ಹೇರಿಕೆ ಅಸಮಾನತೆಯನ್ನು ಮೆತ್ತಗೆ ಒಪ್ಪಿಕೊಳ್ಳೋಹಾಗೆ ಮಾಡುವ ಕೆಲಸ
ಭಾರತ ಬಹುಭಾಷಾ ರಾಜ್ಯಗಳ ಒಕ್ಕೂಟ. ಹೆಚ್ಚು-ಕಡಿಮೆ ಭಾರತದ ಎಲ್ಲಾ ಭಾಷೆಗಳೂ ಹಿಂದಿಗಿಂತ ವೈಭವಯುತವಾದ, ಶಕ್ತಿ ಸಂಪನ್ನವಾದ, ಧಾರಣಶಕ್ತಿಯುಳ್ಳ, ಸರ್ವ ಸಾಮರ್ಥ್ಯವನ್ನು ಹೊಂದಿರುವ ಇತಿಹಾಸವುಳ್ಳವುಗಳಾಗಿವೆ, ವರ್ತಮಾನಗಳನ್ನುಳವುಗಳಾಗಿವೆ, ಭವಿಷ್ಯಗಳನ್ನುಳ್ಳವುಗಳಾಗಬೇಕಿವೆ. ಕನ್ನಡನಾಡಿನಲ್ಲಿ ಹಿಂದಿಯ ಅವಶ್ಯಕತೆ ಯಾವನಿಗೂ ಇಲ್ಲ ಅನ್ನೋ ಸಾಮಾನ್ಯಜ್ಞಾನವಾದರೂ ನಮ್ಮನ್ನ ಆಳೋರಿಗೆ ಬೇಡವಾ ಗುರು? ಕಣ್ಣು ಬಿಟ್ಟು ನೋಡಿದರೆ ಇದು ಕಾಣಿಸದೆ ಇಲ್ಲ. ಕಣ್ಣು ಬಿಡದೆ ಹಿಂದಿ ಹೇರಿಕೆ ಮೂಲಕ ಅಸಮಾನತೆಯೇ ಸರಿ ಅನ್ನೋದನ್ನ ನಮಗೆ ಒಪ್ಪಿಸೋದಕ್ಕೆ ಹೊರಟಿರೋದು ಸರಿಯಲ್ಲ ಗುರು! ಇದರಿಂದ ಹಿಂದಿ ತಾಯ್ನುಡಿಯೋರು ಯಾವತ್ತೂ ಹಿಂದಿಯೇತರ ತಾಯ್ನುಡಿಯೋರಿಗಿಂತ ಹೆಚ್ಚು ಸೌಲತ್ತುಗಳ್ನ ಪಡ್ಕೋತಾರೆ, ಹೆಚ್ಚು ಹೆಚ್ಚು ಸಂಬಳ ಪಡ್ಕೋತಾರೆ, ಹೆಚ್ಚು ಹೆಚ್ಚು ಹುದ್ದೆಗಳಿಗೆ ತುಂಬ್ಕೋತಾರೆ...ನಿಧಾನಕ್ಕೆ ಹೆಚ್ಚು ಹೆಚ್ಚು ಮಕ್ಕಳ್ನ ಹೆರ್ತಾರೆ...

ವಿವಿಧತೆ ಅಳಿಸಿಹಾಕಕ್ಕೆ ಹೋದರೆ ಏಕತೇನೂ ಹೋದೀತು!

ತಮಿಳುನಾಡು, ದೇಶದ ಆಗ್ನೇಯ ರಾಜ್ಯಗಳ ಬಹುತೇಕ ಭಾಗಗಳು, ಕೇರಳ, ಆಂಧ್ರ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಬಂಗಾಳದ ಒಳಪ್ರದೇಶಗಳಲ್ಲಿ ನಾವು ವ್ಯವಹರಿಸಬೇಕೆಂದರೆ ಅಲ್ಲಿಯ ಭಾಷೆಗಳಲ್ಲಿ ವ್ಯವಹರಿಸೋದೇ ಸರಿ ಅಂತ ಮನಗಾಣಬೇಕಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ, ಅಸ್ಸಾಮ ಹೀಗೆ ಪ್ರಾಂತೀಯ ವೈಶಿಷ್ಟ್ಯವನ್ನುಳಿಸ್ಕೊಂಡ ಒಟ್ಟು ಶಕ್ತಿಯೇ ಭಾರತದ ಭಾವೈಕ್ಯತೆಗೆ ಕಾರಣ. ಈ ಎಲ್ಲವನ್ನು ಮನ್ನಿಸಿ, ಉಳಿಸಿ, ಬೆಳಸಿಕೊಂಡು ಮುನ್ನಡೆಯುವುದೇ ಭಾರತದಂತಹ ಹಲವು ಪ್ರಾಂತ್ಯಗಳ-ಹಲವು ಸಂಸ್ಕೃತಿಗಳ, ಹಲವು ರಾಜ್ಯಗಳ ಒಕ್ಕೂಟದ ಒಗ್ಗಟ್ಟಿಗೆ ಕ್ಷೇಮ. ವಿವಿಧತೆ ಅಳಿಸಿಹಾಕೋ ಪ್ರಯತ್ನಗಳೆಲ್ಲ ಏಕತೆ ಅಳಿಸಿಹಾಕೋ ಪ್ರಯತ್ನಗಳೇ. ಹಿಂದಿ ಹೇರಿಕೆ ಮೂಲಕ ಕೃತಕವಾಗಿ ಏಕತೆ ತರಕ್ಕೆ ಹೊರಡೋ ಮೂರ್ಖತನ ಕೈಬಿಡೋದೇ ನಮ್ಮ ಒಕ್ಕೂಟ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೇದು ಗುರು!

8 ಅನಿಸಿಕೆಗಳು:

Anonymous ಅಂತಾರೆ...

ಹೌದು ಗುರು, ನಮಗೆಲ್ಲಾ ಸಣ್ಣವರಿದ್ದಾಗ ಹಿಂದಿ ಕಲೀರಿ ಹಿಂದಿ ಕಲೀರಿ ಅಂತ ಹೇಗೆ ತಲೆಗೆ ತುಂಬಿದ್ರು ಅಂದ್ರೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮತ್ತು ಬೆಂಗಳೂರು ಮಹಿಳಾ ಹಿಂದಿ ಪ್ರಚಾರ ಕೇಂದ್ರದ ವತಿಯಿಂದ ನಮ್ಮ ಊರಿನಲ್ಲಿ ನಡೆಯುತ್ತಿದ್ದ ಹಿಂದಿ ಕ್ಲಾಸುಗಳು ತುಂಬಿ ತುಳುಕುತ್ತಿದ್ವು. ಇವತ್ತೂ ಹೆಚ್ಚು ಕಮ್ಮಿ ಅದೇ ಪರಿಸ್ಥಿತಿ ಇರ್ಬೋದು. ಆದರೆ ಅದರಲ್ಲಿ ಕಲಿತು ಗುಡ್ಡೆ ಹಾಕಿದ ಸರ್ಟಿಫೀಕೇಟುಗಳ ರಾಶಿಯೇ ಇದೆ ಮನೆಲ್ಲಿ ಧೂಳು ಹಿಡಿಯುತ್ತಾ. ಸುಮ್ಮನೇ ಉಪಯೋಗವಿಲ್ಲದ್ದನ್ನು ಮಕ್ಕಳ ಮೇಲೆ ಹೇರಿ ಅವರ ಅಮೂಲ್ಯ ಸಮಯವನ್ನೂ ಹಾಳು ಮಾಡಿ ಅವರನ್ನು ಎಡಬಿಡಂಗಿಗಳಾಗಿ ಮಾಡಿಹಾಕ್ತಾರೆ ಇವ್ರು. ಅದರ ಬದಲು ಮಕ್ಕಳಿಗೆ ಕನ್ನಡವನ್ನು ಮತ್ತು ಅಗತ್ಯಕ್ಕೆ ತಕ್ಕಷ್ಟು ಇಂಗ್ಲೀಷನ್ನು ಸರಿಯಾಗಿ ಕಲಿಯಲು ಪ್ರೋತ್ಸಾಹ ಕೊಡಬೇಕು.
ಇದುವರೆಗೂ ಸಾಮಾನ್ಯ ಜನರಿಗೆ ಹಿಂದಿಯಿಂದ ಆಗಿರುವ ಉಪಯೋಗವೇನೇನೂ ಇಲ್ಲ. ಅದು ನಮಗೆ ಬೇಕಾಗೂ ಇಲ್ಲ. ದೇಶಪ್ರೇಮ ಬೆಳೆಸುವಲ್ಲಾಗಲೀ, ಜ್ಞಾನ ಹೆಚ್ಚಿಸುವುದರಲ್ಲಾಗಲೀ ಹಿಂದಿಯು ಕನ್ನಡಕ್ಕಿಂತ ಹೆಚ್ಚಿನದೇನನ್ನೂ ಹೊಂದಿಲ್ಲ. ಹಿಂದಿ ರಾಜ್ಯಗಳಲ್ಲಿ ಬೇಕಿದ್ದರೆ ಎಷ್ಟುಬೇಕಾದರೂ ಹಿಂದಿ ಕಲಿಸಲಿ. ಆದರೆ ನಮ್ಮ ರಾಜ್ಯದಲ್ಲಿ ಕನ್ನಡವನ್ನೇ ಬಲಿಕೊಟ್ಟು ಹಿಂದಿ ಹೇರುತ್ತಿರುವುದು ಖಂಡನಾರ್ಹ.

Anonymous ಅಂತಾರೆ...

idu yavdu guru hosa thale bisi,yaarige bekagitthu hindi saahithya acadamy?kannadigarenu namge hindi saahithya acaday beku antha ee raajya paalanna kelidraa??astakku karnatkadalli estu janakke hindi baruthhe??eno Hindi subject nalli fail agabaardu anno kaaranakke adannu odalu,bareyalu kalethidvi,adre ivathhu hindi saahithya acadamey open maadthananthe,ivana appa na mane gantaa kannadigara duddu...
Hindi acadamey annu maadodu hogli,adakke basement kooda haakalu bidodu bedaa guru....
Haage bekadre innondu kannada saahithya parishath barali,yavanige beku hindi academy

Anonymous ಅಂತಾರೆ...

Nimma manegala surakshita vaathavaranadinda idannu bareyuvudu bahala sulabha. Naanu aaru varshagalinda bada makkalige Hindi kalisutha iddene. Nimage aasharyavaagabahudu, aadare hindi gottiruva hudugaru samsthegalalli (hotels, malls ithyadi) hechhu vetana padeyuthare. English gothiruvavaru innu hechhu. Bari kannadadinda ivara uddhara saadhyavilla. Hotte thumba oota maadi bereyavara bagge teekisuvudu bahala sulabha. Private firms (IT bittu) nalli Uttara Karnatakadavaru yashasvi padediruvudu bhagashaha avara hindi gottiruvudakke. Bari English baruvavarannu ella samsthegallali parakeeyaragi kanalaguthade. Hindiya gnanadinda ee deshada ella bhaagagaligu prayaanisidene. English ninda idu saadhyavaguthralilla. Hindiya kaluvikeyinda bahala upagogavide. Aadare onde raajyadalli koothu, ide namma oota, ide namma bhaashe ennuvavarige idu artha maadisuvudu bahala kashta.

Anonymous ಅಂತಾರೆ...

preetham avre, ee enguru & Co, bareyuttiruvudara uddesha nimaginnoo arthavaagiddantilla. Nivu heLida haage eega Hindi gottiddare elliyoo salluvaru emba paristhiti ide..

aadare idu badalaagabeku..

indu naavu innondu bhaasheya gulaamaraagiruvudu nija. haagendu innu mundeyoo haageye irabeke??

hindi aaLuva bhaashe, kannaDa aaLisikoLLuva bhaasheye? ee paristhiti namage beDa. Karnatakadalli kannaDa gottidre ella kaDe kelasa siguvantaagabeku, hechchu sambaLa siguvantaagabEku. adE enguruvina kanasu, ade kannaDigarellara kanasu.

Rohith B R ಅಂತಾರೆ...

hindi academy yaake anta kELtIra? adakke avashyakathe huTTstirOrE nammallirO paristhiti..

illide nODi geLeyare, ivattina sanjeya samaachaara nODi.. namma rAjyadalli BJP avarU kUDa Enu kammi illa! raajyadalli BJP avara sammelana naDediddu adralli BJPya "mElina" adhikArigaLaada yashwant sinha intahavarellaa bandu hindi yalli bhaashaNa bhigidu hOgidAre.

idannellaa namma kannaDadOrE aagirO BJP kaaryakartaru kivi mEle hUvu iTkoMDu kELiskoMDidAre!!
ivarige namma muMdina chunAvaNeyalli vote kODbEkA geLeyare?! iMtahavaru namma sarkAra rachane maaDidre EnAgbOdu yOchane mADidre sustaagOgatte!!

Rohith B R ಅಂತಾರೆ...

ಪ್ರೀತಮ್ ಅವ್ರೆ ಹಿಂದಿ ನಿಮಗೆ ಗೊತ್ತಿತ್ತು, ಆದ್ರಿಂದ ದೇಶವೆಲ್ಲಾ ಓಡಾಡಕ್ಕಾಯ್ತು ಅನ್ನೋ ಕಾರಣದಿಂದ ಐದೂವರೆ ಕೋಟಿ ಕನ್ನಡಿಗರೂ ಹಿಂದಿ ಕಲೀಬೇಕು ಅಂತೀರ?! ಅಥವಾ ಹೊರಗಿನಿಂದ ಬಂದಿರೋ ಒಂದಿಷ್ಟು ಜನರಿಗೆ ಹಿಂದಿಯಲ್ಲಿ "ಸೇವೆ" ಮಾಡಲು "ಹುಟ್ಟಿರೋ" ಹೊಸ ಬಗೆಯ ಆಳುಗಿರಿಯೇ ನಮ್ಮ ರಾಜ್ಯದ ಜನರ ಭವಿಷ್ಯ ಅಂತೀರಾ??!
ನಿಮಗೆ ಹಿಂದಿ ಗೊತ್ತಿದ್ರೆ ಅದನ್ನ ಹೇಳಿಕೊಡೋದ್ರಿಂದ ದುಡ್ಡು ಮಾಡ್ತಿದೀರ ಸರಿ, ಆದ್ರೆ ಅದೊಂದೇ ನಿಮ್ಮ ಜೀವನಕ್ಕೆ ದಾರಿ ಅಂತ ನೀವು ತಿಳ್ಕೊಂಡಿದ್ರೆ ಕರ್ನಾಟಕದಲ್ಲಿ ಮುಂದೆ ಹಿಂದಿಯ ಏನೂ ಉಪ್ಯೋಗವಿಲ್ಲ ಕನ್ನಡವೇ ಸರಿ-ಸಾಕು-ಸೂಕ್ತ ಅನ್ನೋ ನಿಲುವು ಭದ್ರವಾದಾಗ ನೀವು ಹೊಸ ಕೆಲಸ ಹುಡ್ಕೋದು ನಿಶ್ಚಯ ಆಗತ್ತೆ..

Amarnath Shivashankar ಅಂತಾರೆ...

kannaDigara mEle mattomme "Hindi herike"
karnaTakadalli kannaDigara duDDinalli "Hindi saahitya academy" nirmisuvudu yaava nyaaya swaamy?
hora raajyagaLa/paradesi raajyapaalarannu tandu karnaTakada raajyapaalarannagi kooDisidare intaha keDukugaLe aaguvudu.
namma ghana raajakaaraNigaLu ee vishayada bagge mouna taaLirivudu naachikegeeDaada saMgati..
igaagale saahitigaLa valayadinda ee "hindi saahitya academy" viruddha pratibhaTaneya koogu keLi baruttide..
karnaaTakada baliShTavaada kannaDa para saMghaTaneyaada T.A.Narayana Gowdara netrutvada karnaaTaka rakshaNaa vEdike saahitigaLa jote kai joDIsi pratibhaTisidalli hindi hEruva duShTa shaktigaLu karnaaTakakke kEdu bageyuvudannu taDeyabahudu...
karnaaTakadalli kannaDigaNe saarvabhouma
karnaaTakadalli kannaDavE saarvabhouma

Kishore ಅಂತಾರೆ...

ವಿವಿಧತೆ ಅಳಿಸಿ ಹಾಕೋ ಪ್ರಯತ್ನ ಅಲ್ಲ ಸ್ವಾಮಿ. ವಿವಿಧತೆ ಅಳಿಸಿ ಹಾಕ್ತಾ ಇದಾರೆ. ಹಿಂದಿ ನ ಒಪ್ಪಿಕೊಂಡು, ಮೊದಲು ಬೆಂಗಳೂರನ್ನು ಮುಂಬೈ ಮಾಡ್ತಾರೆ, ನಂತರ ಪೂರ್ತಿ ಕರ್ನಾಟಕ ದಲ್ಲಿ ಹಿಂದಿ ಹೇರಿ ಹೇರಿ... ನಮ್ಮ ಕೆಲಸಗಳೆಲ್ಲ ಕಿತ್ಕೋತಾರೆ. ತಮ್ಮ ರಾಜ್ಯ ಉದ್ಹಾರ ಮಾಡ್ದೆ ಕರ್ನಾಟಕಕ್ಕೆ ವಲಸೆ ಬಂದು ನಮ್ಮದೇ ರಕ್ತ ಹೀರಿ ಕುಡಿತಾರೆ.

ಮಕ್ಕಳಿಗೆ ಕನ್ನಡ ಬಿಟ್ಟು.. ಪ್ರಥಮ್, ಮಧ್ಯಮ್ ಈ ತರ ಹಿಂದಿ ಶಿಕ್ಷಣ ನೀಡಿ ನಮ್ಮ ನುಡಿಯನ್ನು ಕೊಂದು ಹಾಕ್ತಾರೆ. ಹಿಂದಿ ಪ್ರಚಾರ ಮಾಡಿಸುವ ಮನಸ್ಥಿತಿಗಳು ಹೇಗಿರಬೇಕು. ಇದು ಒಂದು ತರಹದ ಆಕ್ರಮಣ ಅಲ್ವ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails