ಕನ್ನಡ ಚಿತ್ರರಂಗ ಮತ್ತು ಸ್ಪರ್ಧೆ!


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮ ಮೀರಿ ರಾವಣ್ ಅನ್ನೋ ಹಿಂದಿ ಚಿತ್ರವನ್ನು ಕರ್ನಾಟಕದಾದ್ಯಂತ ಪ್ರದರ್ಶಿಸಲು ಮುಂದಾದ ಬಿಗ್ ಪಿಕ್ಚರ್ಸ್ ಅವರ ಕ್ರಮವನ್ನು ವಾಣಿಜ್ಯ ಮಂಡಳಿ ವಿರೋಧುಸ್ತು. ಮಂಡಳಿ ವಿರುದ್ಧ ಬಿಗ್ ಸಂಸ್ಥೆ ಕೋರ್ಟಿಗ್ ಹೋಯ್ತು. ಕೋರ್ಟು ಈ ಪ್ರಕರಣಾನಾ ಮಾರಕಟ್ಟೆಯಲ್ಲಿ ನ್ಯಾಯಯುತವಾದ ಸ್ಪರ್ಧೆಗೆ ಅನುವು ಮಾಡಿಕೊಡಲು ಇರುವ ಕಾಂಪಿಟೇಶನ್ ಕಮಿಶನ್ ಆಫ್ ಇಂಡಿಯಾ(ಸಿ.ಸಿ.ಐ) ಅನ್ನೋ ಸಂಸ್ಥೆಗೆ ವಹಿಸಿತ್ತು. ಸಿ.ಸಿ.ಐನವರು ಬಿಗ್ ಪಿಕ್ಚರ್ಸ್ ಪರವಾಗಿ ತೀರ್ಪು ಕೊಟ್ಟು, ಅವರು ಕರ್ನಾಟಕದಲ್ಲಿ ಎಷ್ಟು ಪ್ರತಿಗಳನ್ನು ಬೇಕಾದರೂ ಹಾಕಬಹುದು ಎಂಬ ತೀರ್ಪು ಕೊಟ್ಟಿದ್ದಾರೆ ಅನ್ನುತ್ತೆ ಜೂನ್ 22ನೇ ತಾರೀಖಿನ ಡಿ.ಎನ್.ಎ ಪತ್ರಿಕೆಯ ಒಂದು ವರದಿ. ಇದನ್ನು ನೋಡಿದ ಮೇಲೆ ನ್ಯಾಯಯುತವಾದ ಸ್ಪರ್ಧೆ ಅಂದ್ರೆ ಏನು ಅನ್ನೋ ಬಗ್ಗೆನೇ ಪ್ರಶ್ನೆಗಳು ಹುಟ್ತಾ ಇವೆ ಗುರು!

ಇವರು ಹೇಳಿದ್ದೇನು?

ಪತ್ರಿಕೆ ವರದಿ ಹೇಳೊದು ಹೀಗಿದೆ:
According to the CCI's order, the KFCC need not interfere with the screening of the film and it was entirely up to Big Pictures to release it in as many theatres as needed as it is an independent body and therefore has the right to do so.
ಏನಿದರ ಅರ್ಥ? ಬಿಗ್ ಸಂಸ್ಥೆಯವರು ಎಷ್ಟು ಚಿತ್ರಮಂದಿರದಲ್ಲಿ ಬೇಕಾದ್ರೂ ರಾವಣ್ ಬಿಡುಗಡೆ ಮಾಡಬಹುದು. ಅದುನ್ನ ಕೆ.ಎಫ್.ಸಿ.ಸಿ ಪ್ರಶ್ನಿಸೋ ಹಾಗಿಲ್ಲ ಅಂತಾ ತಾನೆ?. ಸ್ಪರ್ಧಾ ಆಯೋಗವು ಸಿನಿಮಾ ಅನ್ನೋದನ್ನು ಬರೀ ಒಂದು ಉದ್ದಿಮೆಯಾಗಿ, ಒಂದು ಉತ್ಪನ್ನವಾಗಿ ನೋಡಿ ಈ ರೀತಿಯ ಅನಿಸಿಕೆ ವ್ಯಕ್ತಪಡಿಸಿರಬಹುದು. ಆದರೆ ಮನರಂಜನಾ ಕ್ಷೇತ್ರ ಅನ್ನೋದು ಬರೀ ಮಾರುಕಟ್ಟೆಯ ಲಾಭನಷ್ಟಗಳ ಆಡುಂಬಲ ಮಾತ್ರಾ ಅಲ್ಲಾ. ಒಂದು ನಾಡಿನ ಅನನ್ಯತೆ, ನುಡಿ, ಸಂಸ್ಕೃತಿಗಳ ಮೇಲೆ ಈ ಕ್ಷೇತ್ರ ಬೀರೋ ಪ್ರಭಾವಾ ಮಹತ್ವದ್ದು. ಒಟ್ಟಲ್ಲಿ ಆಯೋಗದ ಈ ತೀರ್ಪು, ನಮ್ಮ ನಾಡಿನ ಸ್ಥಳೀಯವಾದ ಉದ್ದಿಮೆಯೊಂದು ಸಾಯೋಕೇ ಕಾರಣವಾದೀತು ಅನ್ನೋದನ್ನು ಗಮನಕ್ಕೆ ತೊಗೊಂಡು ಕೊಟ್ಟಹಾಗಿಲ್ಲ. ಹಿಂದಿ, ತೆಲುಗು, ತಮಿಳು ಚಿತ್ರಗಳಿಗೆ ಕರ್ನಾಟಕ ಅನ್ನುವುದು ಮೂಲ ಮಾರುಕಟ್ಟೆಯಲ್ಲ, ಆದರೆ ಕನ್ನಡ ಚಿತ್ರಗಳಿಗೆ ಅದೇ ಪ್ರಾಥಮಿಕ ಮತ್ತು ಸದ್ಯದ ಏಕೈಕ ಮಾರುಕಟ್ಟೆ. ಇರೋ 600 ಚಿತ್ರಮಂದಿರಗಳಲ್ಲಿ ಒಂದೊಂದು ಪರಭಾಷಾ ಚಿತ್ರಕ್ಕೇ ನೂರಾರು ಚಿತ್ರಮಂದಿರಗಳನ್ನು ಕೊಟ್ಟರೆ ಕನ್ನಡ ಚಿತ್ರಗಳೇನು ಮಾಡಬೇಕು ಅನ್ನೋದನ್ನೆಲ್ಲಾ ಆಯೋಗ ಗಮನಿಸಿದಂತಿಲ್ಲ.

ಅವರು ಬೆಳೆಯೋದು, ನಾವು ಅಳಿಯೋದೇ ನ್ಯಾಯವಾದ ಸ್ಪರ್ಧೆನಾ?

ಪ್ರತಿಯೊಂದು ದೇಶವೂ, ಪ್ರದೇಶವೂ ತನ್ನ ಮಾರುಕಟ್ಟೆಯನ್ನು ಸ್ಪರ್ಧೆಯಿಂದ ಕಾಪಾಡಿಕೊಳ್ಳುವ ಕ್ರಮವನ್ನು ಸದಾ ಕೈಗೊಂಡಿರುತ್ತೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಮುಕ್ತ ಮಾರುಕಟ್ಟೆಯನ್ನು ಒಪ್ಪಿರುವ ಜಗತ್ತಿನ ಎಲ್ಲ ದೇಶಗಳಲ್ಲೂ ಕೂಡಾ ತಮ್ಮ ಮಾರುಕಟ್ಟೆ, ತಮ್ಮ ಹಿತ ಕಾಯ್ದುಕೊಳ್ಳಲು ತನ್ನದೇ ನೀತಿ ನಿಯಮಗಳು ಇರುತ್ತವೆ. "ಮಾರುಕಟ್ಟೆಯೇ ಎಲ್ಲವನ್ನೂ ನಿರ್ಧರಿಸುತ್ತೆ, ಅಲ್ಲಿ ಯಾವುದೇ ರೀತಿಯ ಅಡೆತಡೆಗಳಿರಬಾರದು" ಅನ್ನೋದೊಂದೇ ದಿಟವಾಗುವುದಾದರೆ ಯಾಕೆ ಭಾರತ ಸರ್ಕಾರ, ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರತಿಯೊಂದು ವಸ್ತುವಿನ ಮೇಲೂ ಆಮದು ಸುಂಕ ಹಾಕುತ್ತೆ? ಅದೂ ಎಲೆಕ್ಟ್ರಾನಿಕ್, ಕಾರು ಮುಂದಾದವುಗಳ ಮೇಲೆ ಯದ್ವಾತದ್ವಾ ಸುಂಕ ಯಾಕೆ ಹಾಕುತ್ತೆ? ಇಲ್ಲಿರುವ ಉದ್ಯಮದ ಹಿತ ಕಾಯುವ ಸಲುವಾಗಿ ತಾನೇ? ಹಾಗೆಯೇ ಕರ್ನಾಟಕದಲ್ಲಿ ಕನ್ನಡ ಚಿತ್ರೋದ್ಯಮದ ರಕ್ಷಣೆಗಾಗಿ ನಾವು ನಿಯಮ ಮಾಡಿಕೊಂಡಿರುವುದರಲ್ಲಿ ತಪ್ಪೇನಿದೆ? ನಮ್ಮ ನಾಡಿನ ಉದ್ಯಮದ ರಕ್ಷಣೆಗೆ ಇರುವ ನಿಯಮಾನ ಮುರಿಯಲು ನಿಂತಿರುವ ಸಂಸ್ಥೆಗೆ "ನ್ಯಾಯವಾದ ಸ್ಪರ್ಧೆ"ಯ ಹೆಸರಿನಲ್ಲಿ ‘ನೀ ಮಾಡಿದ್ದು ಸರಿ’ ಅಂತನ್ನೋದು ಸರಿಯೇ? ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಓಡ್ತಾ ಇರೋ ಚಿತ್ರಮಂದಿರಗಳಿಂದ ಆ ಚಿತ್ರಗಳನ್ನು ಕಿತ್ತೆಸೆದು ಹಿಂದಿ ಚಿತ್ರಗಳಿಗೆ ಕೊಡುವುದು ನ್ಯಾಯವಾದ ಸ್ಪರ್ಧೆನಾ? ಹಾಗೇ ಅವರು ಬೆಳೆದು, ನಾವು ಅಳಿಯೋದೇ ನ್ಯಾಯಯುತವಾದ ಸ್ಪರ್ಧೆನಾ?

ನಮ್ಮ ಉದ್ಯಮ ಉಳಿಸಿಕೊಳ್ಳುವುದು ನಮ್ಮ ಹಕ್ಕು

ಜಗತ್ತಿನಾದ್ಯಂತ ಯಾವುದೇ ಭಾಷಾ ಜನಾಂಗಕ್ಕೆ ತನ್ನ ಮಾರುಕಟ್ಟೆ, ತನ್ನತನವನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕಿದೆ. ಯುನೆಸ್ಕೊ ಪಟ್ಟಿ ಮಾಡಿರುವ ಭಾಷಾ ಹಕ್ಕುಗಳಲ್ಲಿಯೂ ಇದನ್ನು ಎತ್ತಿ ಹಿಡಿಯಲಾಗಿದೆ. ಆರ್ಟಿಕಲ್ 45 ಹೇಳುತ್ತೆ:
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life).

ಇದರಂತೆ ಕರ್ನಾಟಕದ ಜನತೆಗೆ ಕನ್ನಡ ಹಾಗೂ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಎಲ್ಲ ಅಧಿಕಾರವನ್ನು ಮಾನ್ಯಮಾಡಬೇಕಲ್ವಾ? ಈ ಹಕ್ಕು ಕನ್ನಡಿಗರಿಗೆ ಇರಬೇಕಲ್ವಾ? ಯಾವುದು ಏನೇ ಹೇಳಲಿ, ನಮ್ಮ ನಾಡಿನ ಜನರು ಈ ಎಲ್ಲಾ ಬೆಳವಣಿಗೆಗಳನ್ನು ಅರ್ಥಮಾಡ್ಕೊಂಡು ಪರಭಾಷಾ ಮನರಂಜನೆಯ ವ್ಯಾಮೋಹದಿಂದ ಹೊರಬರಬೇಕಾಗಿದೆ. ಇಂಥಾ ಜಾಗೃತಿಯನ್ನು ಮೂಡಿಸೋ ಹೊಣೆ ನಮ್ಮ ಕನ್ನಡ ಚಲನಚಿತ್ರರಂಗಕ್ಕಿದೆ ಅಲ್ವಾ ಗುರೂ!

21 ಅನಿಸಿಕೆಗಳು:

Anonymous ಅಂತಾರೆ...

Good read, Feel sad on Kannada Film industry.

Raghavendra ಅಂತಾರೆ...

aadre guru idakke kannadigaru kaarana annisolva? namalli iro eshto jana inta cinema nodthaare.. avre inta cinemagalanna nodilla andre avru ishtondu cinema mandiragalige heg thaane bidugade maadoke saadya?

ಮಹೇಶ. ರುದ್ರಗೌಡರ ಅಂತಾರೆ...

ಈ ಸಂದರ್ಭದಲ್ಲಿ ವ್ಯಕ್ತವಾದ ಒಂದು ಅಭಿಪ್ರಾಯ ನೋಡಿ....

Mukesh Bhatt, Bollywood’s leading producer, welcomed the CCI order. “At the outset I am against restrictions or dictatorship. However, the all-powerful Hindi, Tamil and Telugu film industries should not crush small players like the Kannada film industry. What I sincerely feel is that the Film Federation of India should bring in all film associations and thrash out all issues together with an open mind, so that all can coexist.”

ನಮ್ಮ ಚಿತ್ರರಂಗ big player ಅಂಥ ಕರಸ್ಕೊಳ್ಳೊವರೆಗೂ ಅಥವಾ ಚಿತ್ರ ಮಂಡಳಿ powerful ಆಗೋವರೆಗೂ, ಇವರ ದಬ್ಬಾಳಿಕೆ ನಿಲ್ಲೋದಿಲ್ಲ ಗುರು.....

seena ಅಂತಾರೆ...

ನಮಸ್ಕಾರ,
ಒಳ್ಳೆಯ ಕನ್ನಡ ಚಿತ್ರಗಳನ್ನು ನೋಡುವ ಆಸೆ ಎಷ್ಟು ಇದೆ ಅಂತಿರ ಆದರೆ ಒಳ್ಳೆಯ ಚಿತ್ರಗಳು ಬರುವುದು ಬಹಳ ಅಪರೂಪ. ಸಿಕ್ಕಾಪಟ್ಟೆ ಹೈಪ್ ಕೊಟ್ಟು ಬಿಟ್ಟ ಕೆಲವು ಚಿತ್ರಗಳನ್ನು ನೋಡಲು ಹೋದರೆ ಅವು ಬಹಳ ಕೆಟ್ಟದಾಗಿರುತ್ತವೆ.
ಒಂದು ತಮಾಷೆಯೆಂದರೆ, ಟಿವಿಯಲ್ಲಿ ಹೊಸದಾಗಿ ಸಿನಿಮ ತೆಗೆದವರ ಇಂಟರ್ವ್ಯೂ ಬರುತ್ತಲ್ಲ ಅದರಲ್ಲಿ ನಿಮ್ಮ ಸಿನಿಮಾದಲ್ಲಿ ಏನು ಮಾಡಿದ್ದೀರಾ ಏನು ಹೊಸದಿದೆ ಎಂದು ಕೇಳಿದರೆ ಅವರು ಕೊಡುವ ಉತ್ತರ ಕೇಳಿ ನಗು ಬರುತ್ತದೆ.
ನಾವು ಯಾವುದೊ ಹೊಸ ಕ್ಯಾಮೆರಾ ಅಥವಾ ಲೆನ್ಸ್ ಹೆಸರು ಹೇಳಿ ಅದನ್ನು ಮೊದಲು ಉಪಯೋಗಿಸಿದ್ದಿವಿ ಕನ್ನಡದಲ್ಲಿ, ೬ ಹಾಡಿದೆ ಅದರಲ್ಲಿ ೩ ರನ್ನು ಫುಲ್ ಫಾರಿನ್ ನಲ್ಲಿ ಚಿತ್ರಿಸಿದ್ದಿವಿ. ಈ ಚಿತ್ರದಲ್ಲಿ ಒಳ್ಳೊಳ್ಳೆ ಫೈಟ್ ಇದಾವೆ. ರೌಡಿಸಂ ಸ್ಟೋರಿ, ಅದರಲ್ಲಿ ಲವ್ ಕೂಡ ಮಿಕ್ಸ್ ಆಗಿದೆ. ೧೦ ಸಿನಿಮ ಬಂದರೆ ಅದರಲ್ಲಿ ೬ ಸಿನಿಮಾಗಳಲ ಇದೆ ಉತ್ತರ. ಯಾರು ಹೋಗ್ತಾರೆ ಕನ್ನಡ ಸಿನಿಮ ನೋಡೋಕ್ಕೆ ನೀವೇ ಹೇಳಿ.
ಆ ರೌಡಿಸಂ ಸಿನಿಮಾಗಳನ್ನು ಮೊದಲು ಬ್ಯಾನ್ ಮಾಡಬೇಕು. ಆವಾಗ ಸರಿ ಹೋಗಬಹುದು.

pra ಅಂತಾರೆ...

modalu Kannada chitra rangadavarige buddi barabeku....remake dubbing sudugadu anno koLache bittu...tannatanvannu beLasidare bere bhasheya chitragalu Kannada neladalli uLiyolla.
Chitrarangadavare.. maadi mattomme babruvahana,muttinahara,beLadingal bale,mungaru maLe,minchin oota,bhakta kumbara dantaha chitragaLanna....Aag nodi kannadigara bembalavannu...adu bittu heege attare nimage neevu samadhana padisikollabeku..

Pagan ಅಂತಾರೆ...

ಹಿಂದಿ ರಾವಣ್ ಪಿಕ್ಚರ್ ನ ಕರ್ನಾಟಕ ದ ಹಾಗೆ ತಮಿಳು ನಾಡಿನಲ್ಲೂ / ಆಂಧ್ರ ದಲ್ಲೂ ಎಲ್ಲ
ಕಡೆ ರಿಲೀಸ್ ಮಾಡಿದಾರ?

What I want to ask is whether Hindi Ravan has been released
by BIG in TN and AP in as much theaters as they desired without any objections and restrictions?

If yes, then we should ask ourselves, why there were no attempts in TA / AP to restrict the movie release? If KA film industry does not come up with quality movies, it will soon meet the fate of Gujarati movie industry.

Just look at most of the movies - all puke worthy. Good movies win no matter what. Case in point Mungaaru Male. Yograj Bhat once said that it is very difficult to impress Kannada audience for Kannda literature is very rich! Expectations are high. They read books instead of watching bad movies.

How can you force audience to watch craps like Punda just to save the industry?

KFCC - Before banning Hindi movie releases, they should first ban their officials who frequently distributes non Kannada movies in the state.

I agree that competition is severe for Kannada movies. But that is just one of the many problems faced by it. It is not like once all non Kannada movie releases are restricted, Kannada movie industry starts coming out with "Kaviratna Kalidasa" or "Ranganayaki".

ವಸಂತ ಅಂತಾರೆ...

Telugu, Tamil,Hindi industries make more than 100 movies an year and the success rate there is also 3-5%. Those successful and hyped movies come to Karnataka and not all 100+ movies. Even in KFI, the success rate is 3-5%. So, obviously the theory of "all telugu,tamil,hindi movies are good and all kannada movies are crap" is rubbish.

For Telugu,tamil,hindi, Karnataka is not core market and hence they offer better deal to lure the exhibitors to screen their movies in Karnataka's theaters and that's also one of the reasons why Hubli-Dharwad-Belgavi are getting hit with Telugu movies now-a-days. No one understands one bit of telugu over there.

KFI should lift the ban on dubbing to save the language atleast.

ಡಬ್ ಮಾಡಕ್ ಅವಕಾಶ ಸಿಕ್ತಿದ್ ಹಾಗೇ ಇಲ್ಲಿಗೆ ಸುನಾಮಿ ಹಾಗೆ ಅನೇಕ ಕೆಟ್ಟ ಕೊಳಕು, ಥಳಕು ಬಳುಕು, ಒಳ್ಳೇ ಸಿನಿಮಾಗಳು ನುಗ್ಗಬಹುದು. ಅದ್ಯಾವ್ದು ನಮ್ಮ ನೆಲದ ಸೊಗಡಿನ, ನಮ್ಮ ಆಚರಣೆ, ನಂಬಿಕೆಗಳನ್ನು ತೋರುಸ್ದಿದ್ರೆ ಹೆಚ್ಚು ಕಾಲ ಉಳಿಯಲಾರವು. ಹಾಗೆ ನಮ್ಮತನಾನ ಬೇರೆ ಸಂಸ್ಕೃತಿಯ ಚಿತ್ರಗಳು ತೋರ್ಸೋದು ಅಸಾಧ್ಯಾನೆ ಅನ್ನಿ. ಇನ್ನೊಂದು ಹತ್ತಿಪ್ಪತ್ತು ವರ್ಷ ಕರ್ನಾಟಕದಲ್ಲಿ ಬರೀ ಕನ್ನಡದ ಚಿತ್ರಗಳೇ ಓಡೋದಾದ್ರೆ, ಆಮೇಲೆ ಅದ್ಯಾವ ಭಾಷೆಯ ಸಿನಿಮಾನೇ ಆಗಿದ್ರೂ ನಮಗೆ ಕನ್ನಡದಲ್ಲಿ ಇಲ್ದಿದ್ರೆ ನೋಡಕ್ ಆಗಲ್ಲಾ ಅನ್ನೋ ಸ್ಥಿತಿ ಹುಟ್ಟೋದು ಖಂಡಿತಾ. ಹಾಗಾದಲ್ಲಿ ಕನ್ನಡದ ಕಲಾವಿದರಿಗೆ, ಚಿತ್ರರಂಗಕ್ಕೆ ಬಲ ಬಂದ ಹಾಗಾಗುತ್ತೆ. ಇವತ್ತು ಡಬ್ಬಿಂಗಿಗೆ ಒಪ್ಪೋದ್ರಿಂದ ಕನ್ನಡ ಚಿತ್ರರಂಗ ಬೆಳ್ಯುತ್ತೆ ಅಂತಾ ಮನವರಿಕೆ ಮಾಡಿಕೊಡಬೇಕಾಗಿದೆ.

ವಸಂತ ಅಂತಾರೆ...

FYI, There are many interesting films coming up this year. Yograj bhat's "Pancharangi", " Soori's Jockey", Shashank's "Krishnana love story", Uppi's "Sooper", Jaggesh's "Lift Kodla", Guruprasad's 2D animation movie " BombeyaaTavayya", Nagashekar's "Sanju weds geetha", E krishnappa's " matte mungaru" and many more. Let's watch good Kannada movies in theaters and just leave the judgement of what is bad or what is good for the people to decide.

ವಸಂತ ಅಂತಾರೆ...

Every language has it's own share of bad movies. Only 3-5% of movies do well in every language and Kannada is no exception. Please watch and appreciate good movies in Kannada. Nobody is asking anyone to watch a bad kannada movie just for the sake of abhimana. There are many talented folks entering kannada cinema and slowly KFI will return to it's glory days. We just need to be there to support it. I am really tired of hearing how good are other language movies and how bad are kannada movies. In reality, Kannada filmdom is just as good as any other filmdom.

ವಸಂತ ಅಂತಾರೆ...

Kannadigas must get out of this inferiority complex of associating anything nonkannada as cool and anything related to kannada as crap.

ನಿಜವಾದ ಅಂತಾರೆ...

@seena
ಮೊದಲಿಗೆ ನೀವು ಹೇಳುವ ಮಾತು ನನಗೂ ಕೆಲವೊಮ್ಮೆ ಅನಿಸುತ್ತೆ. ಅದೇನೋಂದ್ರೆ ಕನ್ನಡ ಚಲನ-ಚಿತ್ರಗಳಲ್ಲಿ ರೌಡಿಸಮ್ ಪಾತ್ರ ಜಾಸ್ತಿ ಕಾಣುತ್ತೆ ಅಂತ. ಆದ್ರೆ ಇದರ ಹಿನ್ನೆಲೆಯನ್ನೇ ಕೆದುಕಿ ನೋಡಿದ್ರೆ ಒಂದು ವಿಚಿತ್ರ ಗೊತ್ತಾಗತ್ತೆ. ಈ ಕೆಲವು ವರ್ಷಗಳ ಹಿಂದೆ ಹಿಂದಿ ಚಲನ-ಚಿತ್ರಗಳಲ್ಲೂ ಇವೆಲ್ಲಾ ಸಕ್ಕತ್ ಇತ್ತು - ಹೊಡೆದಾಟ, ಗುದ್ದಾಟ, ಮಚ್ಚು-ಲಾಂಗು, ಗನ್ನು-ರೈಫಲ್, ಒಂದೇ ತಾಯಿಯ ಮಕ್ಕಳ ಮಧ್ಯ ಯುದ್ಧ ಇತ್ಯಾದಿ - ಇದಕ್ಕೆ ಒಂದು ಒಳ್ಳೆಯ ಉದಾ:"ಕರಣ್-ಅರ್ಜುನ್, ಮೊಹರಾ, ಅಗ್ನಿಪಥ್, ಇತ್ಯಾದಿ" ಅಂತಹ ರಕ್ತವೇ ಮೇಕಪ್ ಆಗಿದ್ದ ಚಲನ-ಚಿತ್ರ. ಇದನ್ನೆಲ್ಲಾ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ, ಮೆಚ್ಚಿಕಂಡಾಗ ಏನಾಯ್ತು - ಇಲ್ಲಿಯ ಚಿತ್ರ ನಿರ್ಮಾಪಕರಲ್ಲಿ ಜನರಿಗೆ ಏನು ಇಷ್ಟವಾಗುತ್ತೆ ಅಂತ ಸಂದೇಶ ಹೋಯಿತು. ತನ್ನತನವನ್ನು ಕಂಡು ಹಿಡಿದುಕೊಳ್ಳಲು ಸಮಯವೇ ಸಿಗದ ಕೆಲ ಕನ್ನಡ ಚತ್ರರಂಗ ನಿರ್ಮಾಪಕರು ಈ ರೀತಿ ಹಿಂದಿ ಚಿತ್ರಗಳ ದಾಳಿಗೆ ಸೋತುಹೋಗಿ, ಕನ್ನಡಿಗ ಚಿತ್ರ-ನೋಡುಗರನ್ನು ತನ್ನ ಕಡೆ ಸೆಳೆಯಲು ಈ ರೀತಿಯ ರೌಡಿಸಮ್ ಚಿತ್ರಗಳ್ನ ಮಾಡೊಕ್ಕೆ ಶುರು ಹಚ್ಕೋತು. ಇದರ ಸ್ವಲ್ಪೇ ವರ್ಷಗಳ ಹಿಂದೆ ಕನ್ನಡ ಚಿತ್ರಗಳು ಹೇಗಿದ್ವು ಅಂತ ನೋಡಿದರೆ ಈಗ ಹೇಳಿದ್ದು ಸರಿ ಅಂತ ನಿಮ್ಗೂ ಅನ್ಸತ್ತೆ. ಅದೇ ಈಗ ಹಿಂದಿ ಚಿತ್ರಗಳ್ನ ನೋಡಿ - ಬರೀ ಯುವಕರನ್ನ ಉಪಯೋಗವಿಲ್ಲದ ಹಾಗೆ ಮಾಡುವುದು, ಫಾರಿನ್ ಮೋಹ ಹೆಚ್ಚಿಸುವುದು, ಇಹ ನಾಡನ್ನು ಬಿಟ್ಟು ಪರನಾಡನ್ನೇ ಮೆಚ್ಚಿಕೊಳ್ಳೋ ಹಾಗೆ ಮಾಡೋದು, ಯಾವುದೋ ಒಂದೋ-ಎರಡೋ ಹಿರೋಯಿನ್ ಉಟ್ಟ/ಬಿಚ್ಚಿದ ಹಾಗೇ ತಮ್ಮ ಹೆಂಡಿರೂ ಬಟ್ಟೆ ಉಡಲಿ/ಬಿಚ್ಚಲಿ ಎಂದು ಹಂಬಲಿಸುವ ಹಾಗೆ ನಮ್ಮ ಯುವಕ/ಯುವತಿಯರ ಮೇಲೆ ಪ್ರಭಾವ ಭೀರೋದು - ಇದೇ ಮಾಡುತ್ತಿವೆ. ನಾಳೆ ಕನ್ನಡ ಚಿತ್ರಗಳೂ ಇವನ್ನ ಅನುಕರಿಸುವುದರಲ್ಲಿ ಸಂಶಯವಿಲ್ಲ. ಆಗಲೇ ಶುರುವಾಗಿದೆ.

ಪರಿಸ್ಥಿತಿ ಹೀಗಿರುವಾಗ, ನಮ್ಮಲ್ಲಿ ಕಲ ಯುವಕರು ನೋಡುತ್ತಿರುವ ಹಿಂದಿ ಚಿತ್ರಗಳನ್ನು ನಮ್ಮ ಚಿತ್ರರಂಗ ಅನುಕರಿಸುತ್ತಿದ್ದಾಗ ಕನ್ನಡ ಚಿತ್ರ ನಿರ್ಮಾಪಕರು ಒಳ್ಳೆಯ ಚಿತ್ರ ಮಾಡಲಿ ಆಗ ಬಂದು ನೋಡ್ತೀನಿ, ಅಲ್ಲಿಯವರೆಗೂ ಹಿಂದಿ ಚಿತ್ರವನ್ನೇ ನೋಡ್ತಿರ್ತೀನಿ ಅಂತ ಹೇಳೋದು ಎಷ್ಟು ತೊಳ್ಳು ಮಾತು ಅನ್ಸಲ್ವ? ಸಧ್ಯದ ಪರಿಸ್ಥಿತಿಯಲ್ಲಿ ಕೆಲವು ಕನ್ನಡ ಚಿತ್ರಗಳು ಅತ್ಯುತ್ತಮ ಗುಣಮಟ್ಟದ್ದು ಬರುತ್ತಿವೆ, ಅವುಗಳಲ್ಲಿ ತಂತ್ರಜ್ಞಾನ ಬಳಕೆಯಾಗ್ತಿದೆ ಇತ್ಯಾದಿ. ಅದೇ ಮಿಕ್ಕ ಕೆಟ್ಟ ಚಿತ್ರಗಳು ಯಾವುದನ್ನೋ ಅನುಕರಿಸ್ತಿವೆ. ಅದು ನಿಲ್ಲಬೇಕೇಂದರೆ ಮೊದಲು ನಾವು ಬೇರೆ ಭಾಷೆಯ ಚಿತ್ರಗಳನ್ನು ನೋಡುವುದು ನಿಲ್ಲಿಸಬೇಕು (ಸಧ್ಯಕ್ಕೆ). ಹಾಗಂತ ಎಲ್ಲಾ ಕನ್ನಡ ಚಿತ್ರಗಳನ್ನೂ ಕಣ್ಣು ಮುಚ್ಚಿಯಾದರೂ ನೋಡ್ಬೇಕು ಅನ್ನೋದೇನಲ್ಲ ನನ್ನ ಮತ. ಒಂದು ಹಿಂದಿ ಚಿತ್ರ ನೋಡದೇ ಹೋದರೆ ಆಕಾಶವೇನು ತಲೆಯ ಮೇಲೆ ಬಿದ್ದೋಗಲ್ಲ, ಅದೇ ಕನ್ನಡ ಚಿತ್ರವೊಂದು ನೋಡುವ ಹಾಗಿಲ್ಲದಿದ್ದರೆ ಅದು ಕನ್ನಡಿಗರ (ನಿಮ್ಮ-ನಮ್ಮ) ಸೋಲು ಎಂದೇ ಭಾವಿಸಬಹುದು.

ಮುಂದೆ ನೀವೇ ಯೋಚನೆ ಮಾಡಿ. ಬೇಕೆಂದರೆ ಇಲ್ಲೇ ಚರ್ಚೆ ಮಾಡೋಣ.

Amarnath Shivashankar ಅಂತಾರೆ...

People inside the industry should be more committed to get these sorts of rules applied across karnataka.
According to UNESCO, the state government can take necessary action to safeguard our Film Industry.
I read in the newspaper today that KFCC president has withdrawn the case put against Big Cinemas and he is unwilling to give the reason for withdrawal.
What ever the reason be, its a wrong decision.
As pakkadamane huDga said, every film industry produces only 5-8% of quality movies.
Its absolutely foolish to point fingers at kannada Film Industry and say that we lack quality.
In kannada, a movie is made for 2-3 crores and the returns would be 4-5 crores which is almost 100%.
In Telugu and Tamil Film Industries, no movie can be made less than 8-10 crores and many films bomb without even recovering the money.
Tell me which is a better business model.
Recently, there was an article which says that Reliance has lost nearly 100 crores by distrubing Kites and Raavan. Here is the link:- http://ibnlive.in.com/news/big-loss-of-rs-100-cr-with-raavan-and-kites/124953-8-66.html?from=tn
On the positive side for KFI, we have Aaptarakshaka which made over 35 crores, Mungaaru Male and Milana which made over 30 crores, JOGI which made over 35 crores and many more.
Lets stop complaining about the quality of kannada movies and start supporting all noble attempts.

Vijendra ( ವಿಜೇಂದ್ರ ರಾವ್ ) ಅಂತಾರೆ...

So we must not compare Kannada films with other language films. Fine. Lets not compare success rates also. If they have 5-8% success rates, we must aim for 25%.
ಇವಾಗ ಸದ್ಯ ಎಲ್ರೂ ಕೃಷ್ಣನ್ ಲವ್ ಸ್ಟೋರಿ ನೋಡಿ...

Unknown ಅಂತಾರೆ...

ಕನ್ನಡ ಚಿತ್ರರಂಗಕ್ಕೀಗ ಪರಭಾಷಾ ಚಿತ್ರದ ಹಾವಳಿಯಿಂದ ಸಂಕಟ ಕಾಲ ಬಂದಿದೆ. ಕರ್ನಾಟಕದಲ್ಲಿದ್ದುಕೊಂಡೆ ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ಸೆಡ್ಡು ಹೊಡೆಯುತ್ತಿರುವ ಶಕ್ತಿಗಳಿಗೆ ತಕ್ಕ ಶಾಸ್ತಿ ಮಾಡ ಬೇಕಿದೆ. ಪರಭಾಷಾ ಚಿತ್ರಗಳು ಕರ್ನಾಟಕ ಪ್ರವೇಶಿಸೋದನ್ನ ನಿಷೇಧಿಸಬೇಕು. ಈ ಬಗ್ಗೆ ಹೊಸದೊಂದು ಕಠಿಣ ಕಾನೂನು ರಚಿಸಬೇಕು. ಪರಭಾಷಾ ಚಿತ್ರಗಳಿಗೆ ಸಾಧ್ಯವಾದಷ್ಟು ಹೆಚ್ಚಿನ(ಭರಿಸಲಾರದಷ್ಟು) ತೆರಿಗೆ ವಿಧಿಸಬೇಕು.ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಬೇಕು.

ಕನ್ನಡ ಚಿತ್ರ ಮಾಡುವಾಗ ನಿರ್ದೇಶಕ/ನಿರ್ಮಾಪಕ ಈ ಕೆಳಗಿನ ಅಂಶ ಗಮನ ಇಟ್ಟುಕೊಂಡು ಚಿತ್ರ ತೆಗೆದರೆ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿರುತ್ತದೆ:

೧) ಕುಟುಂಬ ಸಮೇತರಾಗಿ ಕೂತು ನೋಡೋ ಚಿತ್ರಗಳು ಬರಬೇಕು
೨) Remake ಚಿತ್ರಗಳನ್ನ ಸಂಪೂರ್ಣ ಕೈಬಿಡಬೇಕು
೩) ಕನ್ನಡ ಚಿತ್ರಗಳು ಕರ್ನಾಟಕದ ಕನ್ನಡಿಗರು ಮಾತ್ರವಲ್ಲ ಹೈದರಾಬಾದ್, ಮುಂಬೈ, ಕಾಸರಗೋಡು, ಹೊಸೂರು, ಸೊಲ್ಲಾಪುರ , ಅನಂತಪುರ, ಬ್ರಿಟನ್, ಯು ಎಸ್ ಎ, ಆಸ್ಟ್ರೇಲಿಯಾ, ಸಿಂಗಪೂರ್ ಕನ್ನಡಿಗರು ಸಹ ನೋಡುತ್ತಾರೆ ಅನ್ನೋ ವಿಷಯ ಗಮನದಲ್ಲಿಟ್ಟು ಚಿತ್ರೀಕರಿಸಿದರೆ ಒಳ್ಳೆಯದು.
೪) Overaction ಗಳು ಇರಬಾರದು
೫) ಹಾಸ್ಯ ವಿಭಾಗದಲ್ಲಿ ವಿಪರೀತ ಬೆಳವಣಿಗೆ ಆಗಬೇಕಿದೆ (ಕೆಲವೊಂದು ಚಿತ್ರಗಳು ಹಾಸ್ಯದಿಂದಲೇ ಒಳ್ಳೆ ಹೆಸರು, ಲಾಭ ಗಳಿಸಿದೆ)
೬) ಹಳೆ ತಲೆಗಳು ನಾಯಕರಾಗೋದು ಬಿಟ್ಟು ಹೊಸ ಮುಖಗಳಿಗೆ ದಾರಿ ಮಾಡಿಕೊಡಬೇಕು
೭) ಮುಂಚೆ ಪ್ರಸಿದ್ದ ಲೇಖಕ-ಕವಿಗಳ(ಉದಾ: ತ್ರಿವೇಣಿ, ತೇಜಸ್ವಿ) ಕಥೆ-ಕಾದಂಬರಿಗಳು ಚಿತ್ರಗಳಾಗಿ, ಕವನಗಳು ಹಾಡುಗಳಾಗಿ ಮೂಡಿ ಬರುತ್ತಿದ್ದವು. ಅಂತಹ ಅದೆಷ್ಟೋ ಕಥೆ ಕಾದಂಬರಿಗಳನ್ನು ಈಗಲೂ ಬಳಸಿಕೊಂಡು ಚಿತ್ರ ಮಾಡಿದರೆ ಯಶಸ್ಸುಖಂಡಿತ
೮) ಎಸ್. ಜಾನಕಿ, ಪಿ. ಸುಶೀಲ ಅಂತಹ ಅಪ್ರತಿಮ ಗಾಯಕಿಯರು ಕನ್ನಡಕ್ಕಾಗಿ ತಮ್ಮ ಕಂಠ ಕೊಟ್ಟಿದ್ದಾರೆ. ಅಂತಹವರನ್ನು ಗುರುತಿಸಿ ಸನ್ಮಾನ ಮಾಡಬೇಕು(ಕರ್ನಾಟಕ ಸರ್ಕಾರ ಈವರೆಗೂ ಇವರನ್ನು ಗುರುತಿಸಿ ಸನ್ಮಾನ ಮಾಡದಿರುವುದು ವಿಪರ್ಯಾಸ)

Prashant ಅಂತಾರೆ...

ಕನ್ನಡ ಚಿತ್ರರಂಗಕ್ಕೊಂದು ವಿನಂತಿ: ದಯವಿಟ್ಟು, "Remake" ಮಾಡೋದನ್ನ ಸಂಪೂರ್ಣವಾಗಿ ಕೈಬಿಡ್ರಿ. ಕನ್ನಡಿಗರು ಹೊಸತಾಗಿರೋದನ್ನ ಮಾತ್ರ ಸ್ವಿಕರಿಸ್ತಾರ್ರಿ, ಉದಾಹರಣೆಗೆ: ಮುಂಗಾರು ಮಳೆ ಮುಂತಾದವು.

Please, give us a reason to cheer about Kannada films, by being Original in making movies!

Anonymous ಅಂತಾರೆ...

Kannadiga population is dwindling in Bangalore. I'm not sure about the reasons. If you happen to visit prime areas of Bangalore like Koramangala, BTM, Marathalli, whitefield areas.. notice the number of Kannadigas there. You hardly hear Kannada in these areas. You'll find mostly telugu,tamil,hindi and malayalam. This is big threat. We are jeopardising our own existence for the sake of others. So, I sincerly request all Kannadigas to bring your folks to Bangalore and settle down. Do not hesitate to push aside non-Kannadigas to make yourself comfortable.

seena ಅಂತಾರೆ...

@nijavaada
neevu heluttiruvudaralli nambike illa. hindi chitrarangadalli bandiruva aa sinimagala hesarugalanne naanu kelilla nodiyu illa. aa sinimagalu bandu aagale sumaaru 20 varshagalamelayitu.
hindi haagu english annu kannada mattitara chitrarangagalu anusarisutte nija aadare ade samayadalli anusarisutte 15-20 varshagalaada nantara alla.
hinde annavra sinimagalanne nodi. amerikadalli hippi kaala ittalla aaga hindiyalli hippi haadugalu adara bagge chitragalu banduvu, ade samayadalli annavra sinimagalalli nimage hippi related hadugalu kanutve. 15-20 varshya yaru kayolla copy hodiyokke.

ee rowdism sinimagalige kaarana bere eno irabeku. maaduvavaru rowdigala thara jana irabahudu. (naanu ondu sinimakke modala dina hogidde yaaro gottiruvavaru natane madiddarinda) allige banda producers ella rowdigala thara iddaru.
illandare sinima madalu yaava talent illa. olle sinima maduva nirdeshakaru screenplay bareyuvavaru illa. rowdism aadare easy alwa rowdism + love anta haaki tegeyodu. talent korate eddu kanutte namma chitrarangadalli.
adella bidi modalige hindi chitrarangakke yake compare madtira. namma chitrarangada bagge namage toruva anisikeyannu vyaktapadisuvaga bereyavara bagge compare maduvudu beda.

Prashant JS ಅಂತಾರೆ...

Kannada chitrarangdavare Bereyavarannu anukarisabedi. "namma"tanvannu "nimma" chitragaLalli aLavadisikolli.
namma suttamuttaline estondu nija patrgaLu chitrarangakke barbekagide..... maadi pragatipar raitana kuritu chitrava, maadi kannada ekikarana kuritu chuitravannu,HeLi Hannu maruvavan jeevan katheyanu...aydukolli olleye Prema geeteya katheyannu...
enu madidru adru adaralli hosatanvirali.... jagattinalliye hesaru madabahudantha kalavidaru nammalli iddare.avarinda kale hora haakuva kelasa madi (nanna anisikeyalli ananthnag,sudeep muntad nayak natara purti kshmati chtrarange baLasikondilla...)

ನಿಜವಾದ ಅಂತಾರೆ...

@ seena
ನಕಲು ಆಗುವ ವೇಗ ನೀವು ಹೇಳುವ ಹಾಗೆ ಅಷ್ಟು ಕಡಿಮೆಯೇನಿಲ್ಲ, ಹೌದು. ಆದರೆ ಅದು ಇವತ್ತಿನ ಪರಿಸ್ಥಿತಿ. ನಾನು ಕೊಟ್ಟ ಉದಾಹರಣೆಯ ಚಿತ್ರಗಳನ್ನು ಇವತ್ತು ನಕಲಿಸ್ತಿದಾರೆ ಅಂತ ನಾನೇನ್ ಹೇಳ್ಲಿಲ್ಲ! ಅವುಗಳು ಹೊರಬಂದಾಗ ನಕಲು ಮಾಡುವ ವೇಗ ಇಷ್ಟೇನಿರ್ಲಿಲ್ಲ. ಈಗ ಎಲ್ಲೆಡೆ ಒಮ್ಮೆಲೆ ಬಿಡುಗಡೆಯಾಗೋದು, ತಂತ್ರಜ್ಞಾನ ಬಳಕೆ, ಜನರ ಪ್ರವಾಸಗಳು ಇವೆಲ್ಲಾ ಹೆಚ್ಚಿರೋದ್ರಿಂದ ಚಿತ್ರಗಳ ನಕಲೂ ಕೂಡ ಬೇಗ ಆಗುತ್ತಿದೆ.

ಈ ಸನ್ನಿವೇಶದಲ್ಲಿ ಹೊಸತನ್ನು ತರುವ ಸಾಮರ್ಥ್ಯ ಕಳೆದುಕೊಂಡಿರೋರೆಂದರೆ ಕನ್ನಡ ಚಿತ್ರದೋರೇ, ಹಾಗಾಗಿ ಈ ನಕಲು ಮಾಡುವ ಪ್ರಕ್ರಿಯೆ ರೌಡಸಂ ಚಿತ್ರಗಳಿಗೇನು ಭಿನ್ನವಲ್ಲ. ಹಾಗಂತ ನೀವು ಹೇಳುವ ಹಾಗೆ ಚಿತ್ರ ತೆಗೆಯುವವರಲ್ಲಿ ರೌಡಿಗಳು ಇಲ್ಲವೆಂದು ನಾನು ಹೇಳುತ್ತಿಲ್ಲ! ಅದು ನಿಜವೇ ಇರಬೋದು, ಆದರೆ ಅದು ಇಲ್ಲಿನ ಚರ್ಚೆಗೆ ಪ್ರಸ್ತುತವಲ್ಲ, ಮತ್ತು ಅವರುಗಳು ಆ ದಾರಿ ಹಿಡಿದಿದ್ದಾರೆ ಎನ್ನುವುದರಲ್ಲೂ cultural influence ಆಗೇ ಇದೆ. ನಮ್ಮ ಹಿಂದಿನ ಚಿತ್ರಗಳಲ್ಲಿ ವಿಲನ್- ಗಳ ಪಾತ್ರ ಹೇಗಿದ್ವು ಅಂತ ನೋಡಿದ್ರೆ ಇವತ್ತು ಈ ಪರಿಸ್ಥಿತಿ ಎಲ್ಲಿಂದ, ಏಕೆ, ಹೇಗೆ ಮೂಡಿ ಬಂತು ಅಂತ ಲೆಕ್ಕಿಸಬಹುದು.

ಹೋಲಿಕೆ ಒಳ್ಳೇದು ಅಲ್ದೇ ಇರ್ಬೋದು. ಆದರೆ ಹೋಲಿಕೆ ಮಾಡದೇ ಅಳೆಯುವುದು ಕೆಲವೊಮ್ಮೆ ಕಷ್ಟವೂ ಹೌದು. ಹೋಲಿಕೆಯೇ ತೊಂದರೆ ಅಲ್ಲ. ಮೇಲಾಗಿ ಇಲ್ಲಿ ಚರ್ಚೆ ಪೈಪೋಟಿಯ ಬಗ್ಗೆ! ಹೋಲಿಕೆ ಇರದೇ ಇನ್ನೇನಿರತ್ತೆ. ಕನ್ನಡ ಚಿತ್ರಗಳಲ್ಲಿ ಶಾರುಕ್-ಖಾನ್, ಅಮಿತಾಭ್ ನ ಹೆಸರುಗಳು ಬಂದಿರುವುದು ಎಷ್ಟು ನೋಡಿರ್ತೀರ. ಅಲ್ವ? ಎಷ್ಟು ಹಿಂದಿ ಚಿತ್ರಗಳಲ್ಲಿ ರಾಜ್-ಕುಮಾರ್, ಪುನೀತ್ ಇತ್ಯಾದಿ ಹೆಸರುಗಳು ಕೇಳಿ ಬಂದಿವೆ? ಈ ಸ್ವಾಭಿಮಾನವಿಲ್ಲದ ನಿಲುವುಗಳು ನಿಲ್ಲಬೇಡವೇ? ನಮ್ಮಲ್ಲಿ ಗುಣಮಟ್ಟವಿದ್ದರೂ ಹಿಂದಿಯೇ benchmark ಅನ್ನುವ ನಿಲುವು ಹೋಗಲಾಡಿಸಬೇಡ್ವೇ?

seena ಅಂತಾರೆ...

@nijavada
nanna anisike prakara kannadadalli Om mattu A chitragalu banda nantara ee reetiya chitragalu baruvudu prarambhavagiruvudu. bere bhasheya cinemagala influence swalpa irutte nija. hindi cinema ellara doddanna annuvudannu allagaleyalagolla aadare namma bhasheya cinemagalu namma janara direct reflection hagagi adara influence jasti.

nammalle ondu superhit chitra bandaga adarinda influence agi copy nadeyodu jasti. enthenta ollolle manemandiyella kulitu noduvanta chitragalannu maduttidda shivanna kooda Om nantara ade reeti chitra madokke shuru madiddu nija. jogi, mylari etc.

hageye mungaru male superhit ada mele, ade reeti maleya background nalli eshtondu chitragalu banduvu. sonu nigam shreya goshal kannada industry yalli khayam agi haduvudakke shuru madidru (sonu ee hinde hadiddu kannadalli ondo erado ashte). jayanti kaykini sahitya compulsory agoytu. hageye coorg family based agale 2-3 cinema bandagide (nanu noodiddu male barali manju irali, just math mathalli) heege. andare olleya cinema maduvudakke ashtu idea illa. yaro obbaru kashta pattu ondu olle style torisikottu adu hit adre adanne ellaru hididukondubiduvudu. idakke heliddu nanu talent korate eddu kanuttide anta. (offensive agi tegedukollabedi)

hindella nodi sunil kumar desai avarella iddaga eshtu ollelle chitragalu baruttittu. beladingala bale, nammura mandara hoove, nishkarsha, sparsha. Also nagabharana amazing movies janumada jodi, chigurida kanasu, nagamandala, chinnari mutta, kallarali hovagi (flop adru nangishta aytidu). Heege olleya nirdeshakaru beku nannada cinemakke. olleya kathe bareyuva ability irbeku. cinemas are much more than just entertainment.

Jagadeesh ಅಂತಾರೆ...

enguru nalli aguttiruva charchegaLu "Karnatka film chambers"navaru odali.... E knodiyannu KaLisabekendiddene... dayvittu film chambers email id iddre tiLisi....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails