ಸಿಹಿಸುದ್ದಿ: ಕನ್ನಡ ಪತ್ರಿಕೆಗಳಿಗೆ ಓದುಗರ ಹೆಚ್ಚಳ!

(ಫೋಟೋ ಕೃಪೆ: ವಿಜಯವಾಣಿ ದಿನಪತ್ರಿಕೆ)
ಆಡಿಟ್ ಬ್ಯೂರೋ ಆಫ಼್ ಸರ್ಕ್ಯುಲೇಶನ್ ಎನ್ನುವ ಒಂದು ಸಂಸ್ಥೆ ಆರು ತಿಂಗಳಿಗೊಮ್ಮೆ ಭಾರತದಲ್ಲಿ ಯಾವ್ಯಾವ ಭಾಷಾ ಪತ್ರಿಕೆಗಳು ಎಷ್ಟೆಷ್ಟು ಪ್ರಸಾರ ಹೊಂದಿವೆ ಎನ್ನುವುದನ್ನು ಸಮೀಕ್ಷೆ ಮಾಡುತ್ತದೆ. ೨೦೧೨ನೇ ವರ್ಷದ ಸಮೀಕ್ಷೆಗಳಲ್ಲಿ ಕೆಲವು ಅಂಕಿಅಂಶಗಳು ಹೊರಬಿದ್ದಿವೆ. ಮೇಲಿನ ಪತ್ರಿಕಾ ವರದಿಯು ವಿವರಗಳನ್ನು ಹೇಳುತ್ತಿದೆ.

ವರದಿ ತೋರುವ ಕೆಲ ದಿಟಗಳು

ಈ ಪಟ್ಟಿಯಲ್ಲಿ ಕನ್ನಡಕ್ಕೆ ಎಂಟನೇ ಸ್ಥಾನವಿದೆ. ಕನ್ನಡವು ಕಳೆದ ಆರು ತಿಂಗಳಲ್ಲಿ ನೂರಕ್ಕೆ ೧೬ರಷ್ಟು ಹೆಚ್ಚಳವನ್ನು ಕಂಡಿದೆ. ನಮಗಿಂತಾ ಕಡಿಮೆ ಜನಸಂಖ್ಯೆಯ ಕೇರಳದಲ್ಲಿ ಪತ್ರಿಕೆಗಳ ಪ್ರಸಾರ ಹೆಚ್ಚೇ ಇದೆ. ಆರುತಿಂಗಳಲ್ಲಿ ಪ್ರಸಾರ ಸಂಖ್ಯೆಯಲ್ಲಿ ಕುಸಿತ ಕಂಡಿರುವ ಭಾಷೆಗಳ ಸಾಲಿನಲ್ಲಿ ಹಿಂದೀ, ಇಂಗ್ಲೀಶ್, ಮರಾಟಿ, ಬೆಂಗಾಲಿ ಮತು ತೆಲುಗುಗಳಿದ್ದರೆ... ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯವು ಮಾತ್ರಾ ಹೆಚ್ಚಳ ಕಂಡಿವೆ. ಕನ್ನಡಕ್ಕಿಂತ ಹೆಚ್ಚು ಪ್ರಸಾರ ಹೊಂದಿರುವ ಭಾಷೆಗಳ ಪಟ್ಟಿಯಲ್ಲಿ ನಮಗಿಂತಾ ಹೆಚ್ಚು ಅಥವಾ ನಮ್ಮಷ್ಟೇ ಜನಸಂಖ್ಯೆಯನ್ನು ಹೊಂದಿರುವ ರಾಜಾಸ್ಥಾನಿ, ಗುಜರಾತಿ ಭಾಷೆಗಳ ಪತ್ರಿಕೆಗಳ ಹೆಸರಿಲ್ಲದಿರುವುದು ಗಮನಾರ್ಹ. ಹಿಂದೀಯನ್ನು ಒಪ್ಪಿಕೊಂಡು ತಲೆಮೇಲಿರಿಸಿಕೊಂಡಿರುವ ಕಾರಣದಿಂದಲೇ ಹೀಗಾಗಿರಬಹುದೇ ಎನ್ನುವ ಸಂದೇಹವನ್ನು ಇದು ಮೂಡಿಸುತ್ತಿದೆ.

ಕನ್ನಡಿಗರು ಹೆಚ್ಚುಚ್ಚು ದಿನಪತ್ರಿಕೆಗಳನ್ನು ಕೊಂಡು ಓದುವಂತಾಗಲಿ. ಹೀಗಾಗಬೇಕಾದರೆ ನಮ್ಮ ಪತ್ರಿಕೆಗಳಲ್ಲೂ ಕೂಡಾ ನಾನಾ ವಿಷಯ ವೈವಿಧ್ಯತೆಗಳು ಹೆಚ್ಚಬೇಕಾಗಿದೆ. ಇಂದಿಗೂ ನಮ್ಮ ನಾಡಿನಲ್ಲಿ ಆರ್ಥಿಕ ವಿಷಯಗಳಿಗೆ ಸಂಬಂಧಪಟ್ಟ ದೊಡ್ಡ ದಿನಪತ್ರಿಕೆಗಳಿಲ್ಲ. ಹೋಗಲಿ, ನಮ್ಮ ಇರುವ ದಿನಪತ್ರಿಕೆಗಳಲ್ಲಿಯೇ ಈ ಬಗ್ಗೆ ಗಂಭೀರವಾದ ಬರಹಗಳಿರುವುದು ಕಡಿಮೆ! ಕನ್ನಡ ದಿನಪತ್ರಿಕೆಗಳೆಂದರೆ ಸುದ್ದಿ, ಸಿದ್ಧಾಂತ, ಸಿನಿಮಾ ಮತ್ತು ಸಾಹಿತ್ಯಗಳಂತಹ ನಲ್ಬರಹಗಳನ್ನು ಮಾತ್ರಾ ನೀಡಲು ಸೀಮಿತವಾಗದೆ ಹೊಸಹೊಸ ವಿಷಯಗಳನ್ನು ಕೊಡುವತ್ತ ಗಮನಹರಿಸಿದರೆ.... ಜೊತೆಗೇ ಪತ್ರಿಕೆಗಳನ್ನು, ಆದಷ್ಟೂ ಜನರಿಗೆ ಹತ್ತಿರವಾದ ನುಡಿಯಲ್ಲಿ ತರುವಂತಾದರೆ ಈ ಪ್ರಸಾರ ಸಂಖ್ಯೆ ಮತ್ತಷ್ಟು ಹೆಚ್ಚುವುದು ಸಾಧ್ಯ! ಹಾಗಾಗಲೆಂಬುದು ನಮ್ಮ ಆಶಯ!!

5 ಅನಿಸಿಕೆಗಳು:

Anonymous ಅಂತಾರೆ...

I'm surprised not to see Bengali in the list. I'm sure its readership will be much higher than Kannada's. Because I remember one of its newspaper (Anand Bazar Patrika?) always appears in top 10 language dailies. May be the publisher didn't consider Bengali as an important language here or she/he has considered only Hindi, English and the neighbouring states' languages only while publishing the report. Btw, if you've the complete list, please publish it.

ಬನವಾಸಿ ಬಳಗ ಅಂತಾರೆ...

ನೀವು ಹೇಳಿದ್ದು ಸರಿಯಿದೆ. ಬೆಂಗಾಲಿ ೨೭ ಲಕ್ಷದಷ್ಟು ಪ್ರಸಾರ ಹೊಂದಿದೆ. ಈ ಸಂಖ್ಯೆ ಮೊದಲರ್ಧ ವರ್ಷದಲ್ಲಿ ೨೮ ಲಕ್ಷದಷ್ಟಿತ್ತು!ಸರಿ ಮಾಡಿದ್ದೇನೆ. ಧನ್ಯವಾದಗಳು

ಆನಂದ್

Anonymous ಅಂತಾರೆ...

ತಮಿಳಿನ ಹಾಗು ತೆಲುಗಿನ ಪತ್ರಿಕೆ / ಸುದ್ದಿಗಳು ಇಂಟರ್ನೆಟ್ನಲ್ಲಿ ಆರಾಮಾಗಿ ಕನ್ನಡದವಕ್ಕಿಂತ ಸಿಕ್ತಾವೆ.

ಈ ಲೆಕ್ಕಾಚಾರದಲ್ಲಿ ಇಂಟರ್ನೆಟ್ಟಲ್ಲಿ ಸುದ್ದಿ ಓದೋರು ಇದ್ದಾರ?

ಇನ್ನು ೧೦ ವರ್ಷಗಳು ಸಂದರೆ ಪೇಪರ್ ಪತ್ರಿಕೆಗಳು ಎಷ್ಟೋ ದೇಶಗಳಲ್ಲಿ ಕಣ್ಮರೆಯಾಗ್ತಾವೆ. !

Unknown ಅಂತಾರೆ...

ಇಲ್ಲಿ ಗಮನಿಸಬೇಕಾದ ವಿಷಯ ಇನ್ನೊಂದಿದೆ:
ನಮ್ಮ ರಾಜ್ಯದಲ್ಲಿ ಅನ್ಯ ಭಾಷೆ ದಿನಪತ್ರಿಕೆ / ವಾರಪತ್ರಿಕೆಗಳು ಲಭ್ಯವಿರುವಷ್ಟು ಕನ್ನಡ ಪತ್ರಿಕೆಗಳು ಅನ್ಯ ರಾಜ್ಯಗಳಲ್ಲಿ ಲಭ್ಯವಿರುವುದಿಲ್ಲ. ಬೇರೆ ರಾಜ್ಯಗಳಲ್ಲಿ ಕನ್ನಡ ಅಪತ್ರಿಕೆಗಳು ಲಭ್ಯವಿದ್ದರೆ, ಕನ್ನಡ ಪತ್ರಿಕೆಗಳ ಪ್ರಸಾರ ಮತ್ತಷ್ಟು ಹೆಚ್ಚುತ್ತದೆ.

Anonymous ಅಂತಾರೆ...

ಹೌದು ಹೊರರಾಜ್ಯಗಳಲ್ಲಿ ಕನ್ನಡ ಪತ್ರಿಕೆಗಳು ಲಭ್ಯವಿಲ್ಲದಿರುವುದು ಒಂದು ಕಾರಣವೆ. ಹಾಗೆ ಕೆಲವು ಪತ್ರಿಕೆಗಳು ಹೆಚ್ಚು ಪ್ರಸಾರವಾಗೋದು ಅದರಲ್ಲಿನ ಗಾಸಿಪ್ ಗಳಿಗಾಗಿ ಉ.ದಾ ಡೆಕ್ಕನ್ ಕ್ರಾನಿಕಲ್!!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails