"ಇದು ಈ ಹಿಂದೆಯೂ ಆಗಿತ್ತು. ಮೂರನೇ ರಂಗದ ಹೆಸರಲ್ಲಿ ೧೯೮೯, ೧೯೯೬ರಲ್ಲಿ ಸರ್ಕಾರಗಳು ರಚನೆಯಾಗಿ ರಾಜಕೀಯ ಅಸ್ಥಿರತೆ ಕಾಡಿತ್ತು. ಹಾಗಾಗಿ ತೃತೀಯ ರಂಗವೆನ್ನುವುದು ಅಸಾಧ್ಯವಾದ ಕನಸು. ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ.. ಬ್ಲಾ... ಬ್ಲಾ... ಬ್ಲಾ..." ಎಂದು ರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದರಲ್ಲಿ ಮಾತು ಕೇಳಿಬರುತ್ತಿತ್ತು! ಹೌದಲ್ವಾ? ಎಷ್ಟು ಸರಿಯಾದ ಮಾತು ಎಂದು ಸಾಮಾನ್ಯರಿಗೆ ಅನ್ನಿಸುವಂತೆ ಈ ಮಾತುಗಳಿದ್ದವು. ಆದರೆ ವಾಸ್ತವವಾಗಿ ಈ ಮೂರನೇ ರಂಗ ಏಕೆ? ಇದರ ಮಹತ್ವವೇನು? ಇದರ ಭವಿಷ್ಯವೇನು? ಎಂಬುದನ್ನು ನೋಡಿದಾಗ ಇದೊಂದು ಭಾರತದ ಕೇಂದ್ರೀಕೃತ ವ್ಯವಸ್ಥೆಯೆಂಬ ಕಗ್ಗತ್ತಲಲ್ಲಿ ಇದೀಗ ತಾನೇ ಹೊತ್ತಿಕೊಂಡಿರುವ ಪುಟ್ಟಬೆಳಕಿನಂತೆ ಕಾಣುತ್ತಿದೆ ಗುರೂ!
ಹಿಂದಾದದ್ದು!
ಸ್ವಾತಂತ್ರ ಬಂದಾಗಿನಿಂದ ಭಾರತದಲ್ಲಿ ಕಾಂಗ್ರೆಸ್ ಪಕ್ಷದ್ದೇ ಕಾರುಬಾರು. ಮೊದಲ ಕಾಂಗ್ರೆಸ್ಸಲ್ಲದ ಸರ್ಕಾರ ಮೊರಾರ್ಜಿ ದೇಸಾಯಿಯವರ ಮುಂದಾಳ್ತನದ ಜನತಾಪಕ್ಷದ್ದು! ಇದೂ ತನ್ನ ಸ್ವರೂಪದಲ್ಲೇ ಭಿನ್ನ ನೆಲೆಯ ಪಕ್ಷಗಳನ್ನೊಳಗೊಂಡಿದ್ದು ಐದು ವರ್ಷ ಆಳಲಾಗಲಿಲ್ಲ! ಮುಂದೆ ಬಂದದ್ದು ನ್ಯಾಶನಲ್ ಫ್ರಂಟ್‌ನ ಸರ್ಕಾರ. ವಿ ಪಿ ಸಿಂಗ್ ಪ್ರಧಾನಿಗಳಾಗಿದ್ದ ಇದರಲ್ಲೂ ಕಾಂಗ್ರೆಸ್ ವಿರೋಧವೊಂದೇ ಬೇರೆ ಬೇರೆ ಪಕ್ಷಗಳನ್ನು ಒಗ್ಗೂಡಿಸಲು ಕಾರಣವಾಗಿದ್ದು ಎನ್ನಬಹುದು. ಅಕಾಲದಲ್ಲಿ ಕೊನೆಗೊಂಡ ಮೈತ್ರಿಯು ಕಾಂಗ್ರೆಸ್ ಬೆಂಬಲದಿಂದ ಸಮಾಜವಾದಿ ಚಂದ್ರಶೇಖರ್‌ರವರು ಅರೆಕಾಲಿಕ ಪ್ರಧಾನಿಯಾಗಲು ಕಾರಣವಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ೧೯೯೬ರಲ್ಲಿ ಅದುವರೆಗೂ ಇದ್ದ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಅಂತಾ ಇದ್ದುದ್ದು ಕಾಂಗ್ರೆಸ್, ಬಿಜೆಪಿ ಮತ್ತು ಮೂರನೇರಂಗ ಎಂದಾಯಿತು. ಹದಿಮೂರು ದಿನದ ವಾಜಪೇಯಿ ಸರ್ಕಾರ, ದೇವೇಗೌಡರ ಸರ್ಕಾರ, ಐ ಕೆ ಗುಜ್ರಾಲರ ಸರ್ಕಾರಗಳು ಅಧಿಕಾರಕ್ಕೇರಿದವು. ಮತ್ತೆ ೧೯೯೮ರಲ್ಲಿ ವಾಜಪೇಯಿಯವರ ಮುಂದಾಳ್ತನದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಮುಂದೆ ೨೦೦೪ರಿಂದ ಕಾಂಗ್ರೆಸ್ಸೇ ಆಡಳಿತ ನಡೆಸುತ್ತಾ ಬಂದಿದೆ. ವಾಜಪೇಯಿಯವರ ಬಿಜೆಪಿ ಸರ್ಕಾರ ಐದುವರ್ಷ ಪೂರೈಸಿದ ಏಕೈಕ ಕಾಂಗ್ರೆಸ್ಸೇತರ ಸರ್ಕಾರ! ಅದುವರೆವಿಗೂ ಕೂಡಾ ನಮ್ಮ ಘನ ಮಾಧ್ಯಮಗಳು ಹೇಳುತ್ತಾ ಬಂದಿದ್ದು "ಕಾಂಗ್ರೆಸ್ ಒಂದಕ್ಕೇ ಐದು ವರ್ಷದ ಸ್ಥಿರಸರ್ಕಾರ ಕೊಡಲು ಸಾಧ್ಯ" ಎಂದು. ಈಗ ಇವೇ ಮಾಧ್ಯಮಗಳು ರಾಷ್ಟ್ರೀಯ ಪಕ್ಷಗಳಿಗೆ ಮಾತ್ರಾ ಐದು ವರ್ಷದ ಸ್ಥಿರಸರ್ಕಾರ ಕೊಡಲು ಸಾಧ್ಯ ಎನ್ನುತ್ತಿವೆ. ಹಾಗಾಗಿ ಈ ಮಾತಿಗೆ ಅಂಥಾ ಮಹತ್ವ ಕೊಡುವ ಅಗತ್ಯವಿಲ್ಲ!

ಇಂದಾಗುತ್ತಿರುವುದು...
(ಕೃಪೆ: http://www.ipatrix.com/2908/indian-elections-color-palette/) |
ಏನಾದೀತು?
ಈ ಒಕ್ಕೂಟ ಗಣನೀಯ ಪ್ರಮಾಣದಲ್ಲಿ ಸಂಸದರನ್ನು ಗೆಲ್ಲಿಸಿಕೊಳ್ಳಬಲ್ಲುದಾದರೂ ತಾನೇತಾನಾಗಿ ಸರ್ಕಾರ ರಚಿಸಬಲ್ಲಷ್ಟು ಶಕ್ತವಾಗಲಾರದೇನೋ! ಹಾಗಿದ್ದರೂ ಮುಂದೆ ರಚನೆಯಾಗುವ ಸರ್ಕಾರದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳಂತೂ ಇವೆ. ಇಷ್ಟಕ್ಕೂ ಮೀರಿದ ಪವಾಡವೊಂದು ನಡೆದು ಈ ರಂಗವು ಅಧಿಕಾರಕ್ಕೇ ಬಂತೆಂದರೂ ಸ್ಥಿರಸರ್ಕಾರ ನೀಡುವುದು ಕೂಡಾ ಅನುಮಾನವೇ ಆಗಿದೆ! ಇದೆಲ್ಲಾ ವಾಸ್ತವವೇ ಆಗಿದ್ದರೂ ಕೂಡಾ ಇಂತಹ ರಂಗದ ರಚನೆಯಾಗುತ್ತಿರುವುದೇ ಒಂದು ಸಕರಾತ್ಮಕ ಬೆಳವಣಿಗೆ. ವಾಸ್ತವವಾಗಿ ನೋಡಿದರೆ ಕಾಂಗ್ರೆಸ್ಸಿನ್ನದ್ದೂ ಬಿಜೆಪಿಯದ್ದೂ ಕೂಡಾ ಬಹುಪಕ್ಷಗಳ ರಾಜಕೀಯ ರಂಗವೇ! ಒಂದು ಪಕ್ಷ ಅಧಿಕಾರಕ್ಕೇರುವ ಕಾಲ ಭಾರತದ ರಾಜಕಾರಣದಲ್ಲಿ ಮತ್ತೊಮ್ಮೆ ಬರುವ ಸಾಧ್ಯತೆಯೇ ಇಲ್ಲವೆಂಬುದು ಪರಿಣಿತರ ಅನಿಸಿಕೆ! ಇರಲಿ.. ಈ ಬಾರಿ "ಫೆಡರಲ್ ಫ್ರಂಟ್" ಯಶಸ್ವಿಯಾದರೂ ಆಗದಿದ್ದರೂ ಪ್ರಾದೇಶಿಕ ಪಕ್ಷಗಳೇ ಸೇರಿ ರಾಜಕೀಯರಂಗ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಬಹುದು ಎನ್ನುವುದನ್ನು ಸಾಧಿಸಿದಂತಾಗುತ್ತದೆ.
ನಾಳೆ ಏನಾಗಬೇಕು?
ಮುಂದಿನ ದಿನಗಳಲ್ಲಿ ಭಾರತದಲ್ಲಿ ಇಂತಹ ಪ್ರಾದೇಶಿಕ ಪಕ್ಷಗಳ ರಾಜಕೀಯ ರಂಗಗಳೇ ಹೆಚ್ಚಾಗಬೇಕು. ಸೈದ್ಧಾಂತಿಕವಾಗಿ ಎಡವೋ, ಬಲವೋ, ನಡುವೋ ಆದ ಒಂದಕ್ಕಿಂತ ಹೆಚ್ಚು ಪಕ್ಷಗಳು ರಾಜ್ಯಗಳಲ್ಲಿದ್ದರೆ ತಮ್ಮದೇ ಸೈದ್ಧಾಂತಿಕ ನೆಲೆಗಟ್ಟಿಗೆ ಸರಿಹೊಂದುವ ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಕೂಡಿಕೊಂಡು ರಾಜಕೀಯರಂಗಗಳನ್ನು ಮಾಡಿಕೊಳ್ಳಬೇಕು. ಇದು ಭಾರತ ನಿಜವಾದ ಒಪ್ಪುಕೂಟವಾಗುವುದಕ್ಕೆ ನೆರವಾಗುತ್ತದೆ. ರಾಜ್ಯಗಳಿಗೆ ದಕ್ಕಬೇಕಾದ ನಿಜವಾದ ಅಧಿಕಾರಗಳು ದಕ್ಕಲು ನೆರವಾಗುತ್ತವೆ. ಭಾರತದಲ್ಲಿನ ವೈವಿಧ್ಯತೆಗಳಿಗೆ ತಕ್ಕ ಗೌರವ, ಸಮಾನತೆಗಳು ಇಂತಹ ರಾಜಕೀಯ ವ್ಯವಸ್ಥೆಯಿಂದಾಗಿ ಸಾಧ್ಯವಾಗಬಹುದಾಗಿದೆ.

0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!