ಅಯ್ಯಯ್ಯಪ್ಪ!

ಅಯ್ಯಪ್ಪ ಸ್ವಾಮಿಯ ಶಬರಿಮಲೆ ಯಾತ್ರೆ ಬದ್ಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಳ್ಳಿ ತಾಲೂಕಿನ ಬೂದಿಗೆರೆ ಹಳ್ಳಿಗರು ಮಾದಪ್ಪನ ಯಾತ್ರೆ ನಡುಸ್ತಾ ಇರೋ ಸುದ್ದಿ ಇವತ್ತಿನ ವಿ.ಕ.ದಲ್ಲಿ ಪ್ರಕಟವಾಗಿದೆ. ಇದು ಅಂಥಾ ದೊಡ್ಡ ಬೆಳವಣಿಗೆಯೇನಲ್ಲ ಅನ್ನಿಸಬಹುದು. ಆದ್ರೆ ನಿಜಕ್ಕೂ ನೋಡುದ್ರೆ ಧರ್ಮದ ಹೆಸರಲ್ಲಿ ಕನ್ನಡಿಗರ ಮೇಲೆ ಆಗ್ತಿರೋ ಭಾಷಾ/ಸಾಂಸ್ಕೃತಿಕ ದಾಳಿಗಳ ಈ ಯುಗದಲ್ಲಿ ಈ ಘಟನೆ ಸಕ್ಕತ್ ಸಂತೋಷ ನೀಡೋಂಥದ್ದು ಗುರು. ಈ ಹಲ್ಲೆಗಳು ಎಂಥವು, ಇದರ ಹೊರಮುಖ ಎಂಥದ್ದು, ಒಳಮುಖ ಎಂಥದ್ದು ಅನ್ನೋದರ ಬಗ್ಗೆ ಒಸಿ ನೋಡ್ಮ.

ಮುಂದೆ ದೇವ್ರು, ಹಿಂದೆ ಮಲಯಾಳಿಗಳ ವಲಸೆ


ಸುಮಾರು ಎಂಬತ್ತರ ದಶಕದ ಆರಂಭದಲ್ಲಿ ಕರ್ನಾಟಕಕ್ಕೆ ಪರಿಚಿತವಾದ ಶಬರಿಮಲೆ ಯಾತ್ರೆ ಮೈಸೂರು, ಬೆಂಗಳೂರುಗಳ ಸುತ್ತಮುತ್ತ ಶುರು ಆಗಿದ್ದು ಸಾಮೂಹಿಕವಾದ ಭಜನೆ, ವಿಭಿನ್ನ ಉಡುಪು, ಕಟ್ಟುನಿಟ್ಟಿನ ಆಚರಣೆಗಳು, ಎಲ್ಲರಿಂದ ಸ್ವಾಮಿ ಅಂತ ಕರೆಸಿಕೊಳ್ಳೋ ಗೌರವ, ಹರಿ ಮತ್ತು ಹರ ಸೇರಿ ಹುಟ್ಟಿದ್ದು ಅಯ್ಯಪ್ಪ ಅನ್ನೋ ಹೊಸ ಥರದ ಪುರಾಣ ಕಥೆಗಳಿಂದ ಜನರ ಗಮನ ಸೆಳೆಯಿತು. ಅದೇ ವೇಳೆಗೆ ಕನ್ನಡ ಕಣ್ಮಣಿ ಡಾ.ರಾಜ್ ಕುಮಾರ್ ಅವರು ಶಬರಿ ಮಲೈ ಯಾತ್ರೆಗೆ ಹೋಗುವ ಪರಿಪಾಠ ಆರಂಭಿಸಿದ್ದು, ಜೊತೆಗೊಂದೆರಡು ಅಯ್ಯಪ್ಪ ಭಜನೆಯ ಧ್ವನಿಸುರುಳಿ ಹೊರತಂದಿದ್ದು ಈ ಸಬರಿಮಲೈ ಯಾತ್ರೆ ಕನ್ನಡನಾಡಲ್ಲಿ ಬೇರೂರಲು ಕಾರಣವಾಯಿತು. ಇದೀಗ ಇದರ ವ್ಯಾಪ್ತಿ ಚಾಮರಾಜ ನಗರದಿಂದ ಬೀದರ ತನಕದ ಪ್ರತಿ ಊರಿಗೂ ಹರಡಿದೆ. ಎಲ್ಲ ಕಡೆಯಲ್ಲೂ ಡಿಸೆಂಬರ್-ಜನವರಿ ಬಂತೆಂದರೆ "ಸಾಮಿಯೇ ಸರಣಂ ಅಯ್ಯಪ್ಪ" ಎನ್ನುವ ಉದ್ಘೋಷ ಮೊಳಗುತ್ತದೆ.

ಆದ್ರೆ ಈ ಅಯ್ಯಪ್ಪ ಯಾತ್ರೆಯ ಹೆಸರಲ್ಲಿ ಮಲಯಾಳಿ ಸಂಸ್ಕೃತಿ ಹೇಗೆ ಕರ್ನಾಟಕಕ್ಕೆ ನುಗ್ತಿದೆ ಅಂತ ನೋಡೋಣ. ಇವತ್ತಿನ ದಿನ ಬೆಂಗಳೂರಿನ ವಸಂತನಗರದ ಅಯ್ಯಪ್ಪ ದೇಗುಲ, ಪೀಣ್ಯ ದಾಸರಹಳ್ಳಿಯ ಅಯ್ಯಪ್ಪ ದೇಗುಲಗಳು ಬರಿಯ ಭಕ್ತಿ ಕೇಂದ್ರಗಳಾಗದೆ ವಲಸೆ ಬರುವ ಮಲಯಾಳಿಗಳಿಗೆ ಮಹಾಮನೆಯಾಗಿವೆ. ಒಂದು ಅಯ್ಯಪ್ಪ ದೇವಸ್ಥಾನದ ಸುತ್ತ ನೂರಾರು ಮಲಯಾಳಿ ಕುಟುಂಬಗಳು ನೆಲೆಸಲು ಕಾರಣವಾಗಿವೆ.

ಸಾಂಸ್ಕೃತಿಕ ಮತ್ತು ಭಾಷಾ ದಾಳಿಗಳು ನಿಲ್ಲಬೇಕು


ಶಿರಡಿ ಬಾಬಾ ಆಗಲಿ, ಕರುಮಾರಿಯಮ್ಮನೇ ಆಗ್ಲಿ, ಸಬರಿಮಲೈ ಸಾಮಿ ಅಯ್ಯಪ್ಪನೇ ಆಗ್ಲಿ ಬರೀ ದೇವರಾಗಿ ಬಂದ್ರೆ ಅಡ್ಡಿಯಿಲ್ಲ. ಅವರನ್ನು ಕನ್ನಡದಲ್ಲಿ ಪೂಜಿಸೋಣ, ಕನ್ನಡದಲ್ಲಿ ಭಜಿಸೋಣ, ನಮ್ಮ ಥರಾ ಆಚರಣೆಗಳನ್ನು ನಡೆಸೋಣ. ಆದರೆ ಆಯಾ ಭಗವಂತರುಗಳ ಜೊತೆ ಆಯಾ ಭಾಷೆಗಳು, ಆಯಾ ಆಚರಣೆಗಳು, ಆಯಾ ಸಂಸ್ಕೃತಿಗಳು ನುಗ್ಗೋದು ಮಾತ್ರ ಸರಿಯಲ್ಲ ಗುರು. ಬೆಂಗಳೂರಿನ ಮಲ್ಲೇಶ್ವರ, ನರಸಿಂಹರಾಜ ಕಾಲೋನಿ ಸಾಯಿಬಾಬಾ ದೇವಸ್ಥಾನದಲ್ಲಿ ಹಿಂದೀಲಿ ಭಜನೆ ನಡ್ಯುತ್ತೆ, ಒಂದು ಕಾರ್ಯಕ್ರಮ ಅಂತ ನಡುದ್ರೆ ಹಿಂದೀ ಬ್ಯಾನರ್ ಹಾಕ್ತಾರೆ, ಮಲ್ಲೇಶ್ವರದಲ್ಲಿ ಕರುಮಾರಿಯಮ್ಮನ ಉತ್ಸವಾ ಅಂತ ತಮಿಳು ಹಾಡುಗಳನ್ನು ಹಾಕ್ಕೋಂಡು, ಸಂಪೂರ್ಣ ತಮಿಳು ವಾತಾವರಣ ಹುಟ್ ಹಾಕಿ ವಾರಗಟ್ಲೆ ಕಾರ್ಯಕ್ರಮ ಮಾಡ್ತಾರೆ.

ಅಯ್ಯಪ್ಪನ ಹೆಸರಲ್ಲಿ ತಿಂಗಳುಗಟ್ಲೆ ಕನ್ನಡಿಗರ ನಾಲಗೆಯಲ್ಲಿ "ಜಲ್ಲಿ ಕಟ್ಟು ಸಬರಿಮಲಕ್ಕು, ಕಲ್ಲುಂ ಮುಳ್ಳುಂ ಕಾಲಿಗೆ ಮೆಟ್ಟು" ಅಂತ ಪದ ಹಾಡುಸ್ತಾರೆ. ಬಡಾವಣೆಗಳಲ್ಲಿ ಆಯಾ ದೇವರ ದೇವಸ್ಥಾನ ಎಬ್ಬುಸ್ತಾರೆ, ಆಯಾ ಬಡಾವಣೆಗೆ ವಲಸೆ ಬಂದು ಮಿನಿ ಕೇರಳ, ಮಿನಿ ತಮಿಳುನಾಡು ಕಟ್ಕೋತಾರೆ. ಭಾಷಾ ಅಲ್ಪಸಂಖ್ಯಾತರು ಅಂತ ಸರ್ಕಾರಿ ಸವಲತ್ತು ಪಡೆದು ಛತ್ರ, ವಿದ್ಯಾಸಂಸ್ಥೆ ಅದೂ ಇದೂ ತೆಗೆದು ಅಲ್ಲೂ ತಮ್ಮೂರಿನ ಸಂಸ್ಕೃತಿಯನ್ನು ಕನ್ನಡದ ಮಕ್ಕಳ ತಲೆಗೆ ತುಂಬ್ತಾರೆ.

ಕನ್ನಡದ ಜನಕ್ಕೆ ಧರ್ಮಸ್ಥಳ ಮಂಜುನಾಥ, ಉಡುಪಿ ಕೃಷ್ಣ, ಎಡ್ಯೂರು ಸಿದ್ಧಲಿಂಗಪ್ಪ. ಉಳವಿ ಬಸಪ್ಪ, ಸವದತ್ತಿ ಎಲ್ಲಮ್ಮ, ಬಿಳಿಗಿರಿ ರಂಗಪ್ಪ, ಮಲೆ ಮಾದಪ್ಪಾ, ನಂಜನಗೂಡಿನ ನಂಜಪ್ಪಾ, ಮಂಚಾಲೆ ರಾಗಪ್ಪಾ... ಸಾಲ್ದಾ ಉಘೇ ಅನ್ನಕ್ಕೆ? ನಮ್ಮ ಊರು ಕಾಪಾಡಕ್ಕೆ ಅಂತಲೇ ಅಣ್ಣಮ್ಮ, ಜಲಗೇರಮ್ಮನಿಂದ ಹಿಡ್ದು ಪ್ಲೇಗಮ್ಮನ ತಂಕಾ ನೂರಾರು ಅಮ್ಮಂದಿರು ಇರೋವಾಗ ಇನ್ನೊಬ್ಬ ಕರುಮಾರಿಯಮ್ಮ ಬೇಕಾ? ಏನ್ ಗುರು?

15 ಅನಿಸಿಕೆಗಳು:

Amarnath Shivashankar ಅಂತಾರೆ...

ತುಂಬ ಸೊಗಸಾದ ಲೇಖನ ಇದು...
ಜನರಿಗೆ ದೇವರ ಮೇಲೆ ಭಕ್ತಿ, ಪ್ರೀತಿ ಇರುವುದು ಸಂತೋಷದ ವಿಷಯ..ಆದರೆ ಆ ಭಕ್ತಿ ಹುಚ್ಚಾಗಿ ಜನರ ಕಣ್ಣಿಗೆ ಪೊರೆ ಬಂದಂಗಿದೆ..
ನಾವು ಎಲ್ಲ ಧರ್ಮಗಳ ದೇವರುಗಳನ್ನು ಪೂಜಿಸಕ್ಕೆ ಸಿದ್ಧ..ಭಕ್ತಿಯಿಂದ ಪೂಜಿಸ್ತೀವಿ..
ಅದ್ರೆ ಧಾರ್ಮಿಕವಾಗಿ ಪರ ಭಾಷೆಗಳನ್ನು, ಪರ ಸಂಸ್ಕೃತಿಗಳನ್ನು ನಮ್ಮ ಮೇಲೆ ಹೇರಲು ಬಂದರೆ, ಅದನ್ನ ಸಹಿಸೋಲ್ಲ.
ಕಣ್ಮುಚ್ಚು ಕೋತಿರೋ ಕನ್ನಡಿಗರಿಗೆ ಈ ಲೇಖನ ಕಣ್ತೆರೆಸಲಿ..

Anonymous ಅಂತಾರೆ...

ಅಯ್ಯಪ್ಪ ಕೇರಳದ ಸ್ವಾಮಿ ನಿಜ. ಆದರೆ ಕೇರಳದಲ್ಲಿರುವ ಅವನ ಮಲಯಾಳಿ ಭಕ್ತರು ಬಹಳ ಕಡಿಮೆ. ಅಯ್ಯಪ್ಪನಿಗೆ ಮಲಯಾಳಿ ಭಕ್ತರಿದ್ದಾರೆಂದರೆ ಅವರೆಲ್ಲಾ ಕೇರಳ ಬಿಟ್ಟು ಇತರೆಡೆ ನೆಲೆಸಿರುವವರು. ಅಯ್ಯಪ್ಪನಿಗೆ ಇರುವ ಭಕ್ತರಲ್ಲಿ ಶೇಕಡ ೭೦ ಮಂದಿ ತಮಿಳರು. ಇತ್ತೀಚೆಗೆ ಅವರ ಸಂಖ್ಯೆ ಸಹ ಕಡಿಮೆ ಆಗುತ್ತಿದೆ. ಅವರು ತಮ್ಮದೇ ಅದ ಮತ್ತೊಂದು ದೇವರು ಓಂ ಶಕ್ತಿಯನ್ನು ಹುಟ್ಟು ಹಾಕಿದ್ದಾರೆ. ಅಲ್ಲಿಗೆ ಹೊಗಲು ತಮಿಳರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮಲಯಾಳಿಗಳು ತಮ್ಮ ಜೀವಮಾನದಲ್ಲಿ ಬೇಟಿ ನೀಡುವ ಮತ್ತು ಖಂಡಿತ ಒಮ್ಮೆ ನೋಡ ಬಯಸುವ ದೇವಸ್ಥಾನ ಕೊಲ್ಲೂರಿನಲ್ಲಿರುವ ಮೂಕಾಂಬಿಕೆಯನ್ನು.

ವಿಪರ್ಯಾಸದ ಸಂಗತಿ ಎಂದರೆ ನಮ್ಮ ಕನ್ನಡಿಗರು ಈ ಎರಡು ಕಡೆ [ ಅಯ್ಯಪ್ಪ ಮತ್ತು ಓಂಶಕ್ತಿಗಳೆಡೆ ] ಹೋಗಲು ಆಕರ್ಷಿತರಾಗುತ್ತಿದ್ದಾರೆ ಜತೆಗೆ ತಿರುಪತಿ ತಿಮ್ಮಪ್ಪ ಇದ್ದೇ ಇದ್ದಾನೆ. ಅಂತಹ ಸಂದರ್ಭದಲ್ಲಿ ನಮ್ಮದೆ ಮಲೆ ಮಾದಪ್ಪನ ದರ್ಶನ ಮಾಡುತ್ತಿರುವ ಹೊಸ ಸಂತತಿ ಹುಟ್ಟಿರುವುದು ಒಳ್ಲೆ ವಿಷಯ.

ಕನ್ನಡಿಗರೆ ಒಮ್ಮೆ ನಮ್ಮದೇ ದೇವಸ್ಥಾನಗಳಾದ ಉಡುಪಿ, ಶೃಂಗೇರಿ, ಸುಬ್ರಮಣ್ಯ, ಧರ್ಮಸ್ಥಳ, ಕೊಲ್ಲೂರು, ಹೊರನಾಡಿನ ಅನ್ನಪೂರ್ಣೇಶ್ವರಿ ಗಳಿಗೆ ಭೇಟಿ ಕೊಡಿ. ಇತರರನ್ನು ಅಲ್ಲಿಗೆ ಬೇಟಿ ನೀಡಲು ಪ್ರೇರೇಪಿಸಿ [ ಹೀಗೆ ಹೇಳುವುದು ಸರಿಯೇ? ಇತರರೆಲ್ಲಾ ಅಲ್ಲಿಗೆ ಬರಲು ಶುರು ಮಾಡಿದರೆ ಅಲ್ಲಿನ ಸೌಂದರ್ಯ, ಹವೆ, ನೆಲಕ್ಕೆ ಮಾರುಹೊಗಿ ಅಲ್ಲೇ ನೆಲೆಸಿ ಬಿಡುತ್ತಾರೆ! ಮತ್ತೊಮ್ಮೆ ನೋಡಿ ಈ ಮೂಲಕ ವಲಸೆ ಸಮಸ್ಯೆ ಅಲ್ವಾ]

ಹಾಗಾಗಿ ಕನ್ನಡಿಗರೆ ಬರಿ ನೀವು ಮಾತ್ರ ಅಲ್ಲಿಗೆ ಹೋಗುವ ಪರಿಪಾಠ ಬೆಳೆಸಿಕೊಳ್ಳಿ. ಓಂ ಶಕ್ತಿ, ಅಯ್ಯಪ್ಪ, ಮುರುಗ, ಎಡುಕೊಂಡಲರನ್ನು ಅವರವರಿಗೆ ಬಿಟ್ಟು ಬಿಡಿ..........

Anonymous ಅಂತಾರೆ...

Guru,

Time and again you have proved that Kannada is our religion. Dharamakku bhashegu yaavude nanTu haakade, kannadigaragi badukalu kannadave dharma annuva sandesha kottiddira,,

One of the finest piece Enguru has written in recent times !!

Keep writing such stuff and ignite the minds of our fellow kannadigas on all these issues.

Anonymous ಅಂತಾರೆ...

ಮಾದಪ್ಪನ ಯಾತ್ರೆ ರೀತಿಯಲ್ಲೇ , ಚಿಕ್ಕಮಗಳೂರಿನ ಬಳಿ ಇರುವ ಬಾಬಾ ಬುಡನ್ ಗಿರಿಯ ದತ್ತ ಪೀಠಕ್ಕೆ "ದತ್ತಮಾಲೆ" ಸುಮಾರು ೩ - ೪ ವರ್ಷಗಳಿಂದ ನಡೆದು ಬರುತ್ತಿದೆ .
ದತ್ತಮಾಲೆಗೆ ಸಂಘ ಪರಿವಾರದ ಮಾಲೆ ಎಂಬ ಹೆಸರು ಬಂದಿರುವುದರಿಂದ, ಹೆಚ್ಚು ಹೆಸರುವಾಸಿಯಾಗಿಲ್ಲ.

Anonymous ಅಂತಾರೆ...

nanu iro kade ondu annapoorneshwari devasthana ide, adre adu eeega omshakti devsthana aagta ide. keloru yaaru illa. en maadodu.
shivaji nagar nalli, yavdo "KOIL STREET" anta hesaru ide.. adre "DEVASTAANA RASTE" ante palikenavru hesaru ittilla..
kalasipalya hogi kalasipalyam, malleshwara hogi malleshwaram, KR Pura hogi KR Puram, Ramanagara hogi Ramnagaram agide. idu yaara influencec anta helabekagilla..
navella muchkondu nodtaaa iddivi...

Deshpande N.R. ಅಂತಾರೆ...

ಇದು ಕೇವಲ ಕನ್ನಡಿಗರ ತಮ್ಮ ಧರ್ಮ ಪರಂಪರೆಗಳ ಬಗ್ಗೆ ಇರುವ ತಾತ್ಸಾರವನ್ನು ಎತ್ತಿ ತೋರಿಸುತ್ತದೆ. ನಮ್ಮ ಶ್ರೀಮಂತ ಕನ್ನಡ ಭಕ್ತಿ ಸಾಹಿತ್ಯದಲ್ಲಿ ಏನಿಲ್ಲ. ದಾಸ ಸಾಹಿತ್ಯ, ವಚನ ಸಾಹಿತ್ಯ ಇತ್ಯಾದಿ. ಇವು ಯಾವುದೇ ಒಂದು ಧರ್ಮಕ್ಕೆ ಸಂಬಧಪಟ್ಟವಲ್ಲ. ಇದರಲ್ಲಿ ಸಮಗ್ರ ಸಾಮಾಜಿಕ, ಧಾರ್ಮಿಕ ಕಳಕಳಿ ಅಡಕವಾಗಿದೆ. ನಿಜ, ಇವು ಯಾವುದೇ ಮಾಂತ್ರಿಕ, ತಾಂತ್ರಿಕ ಪರಿಹಾರಗಳನ್ನು ಕೊಡುವುದಿಲ್ಲ. ಆದರೆ ಈ ಸಂಸಾರದ ಬವಣೆಗಳಿಂದ ದೂರ ಕೊಂಡೊಯ್ಯುತ್ತವೆ ಮನಸ್ಸಿಗೆ ಬಹಳ ಮುದವನ್ನು ಕೊಡುತ್ತವೆ. ಇದನ್ನು ಮನಗಂಡು ಎಲ್ಲ ಕನ್ನಡಿಗರು ಆ ಭಗವಂತನನ್ನು ನಮ್ಮ ಸಾಹಿತ್ಯದಲ್ಲಿ ಕಾಣುವ ಪ್ರಯತ್ನವನ್ನಾದರೂ ಮಾಡಲೇಬೇಕಾಗಿದೆ.

Unknown ಅಂತಾರೆ...

Yenu helalu padagale illa......
Nimma chintane, nadu, nudi hagu kannadigara bege iruve durada yochane bage mathanadalu 2 shabha.

NIMMAGE JAYAVAGALI.....
Jai Karnataka

ಆಂತೋನಿ ಗೊನ್ಸಾಲ್ವೆಸ್ ಅಂತಾರೆ...

"ಅತಿರೇಕದ ಜಂಗಮಯ್ಯನಿಗೆ ತಿಕವೆಲ್ಲ ರುದ್ರಾಕ್ಷಿ" ಅಂತ ಒಂದು ಗಾದೆ ಇದೆ. ಈ ಲೇಖನವಂತೂ ಆ ಗದೆಗೆ ಕನ್ನಡಿ ಹಿಡಿದಂತಿದೆ.

ಅಲ್ಲಾ ಗುರು, ಭಾರತೀಯನ ಐಡೆಂಟಿಟಿ-ಕ್ಲಸ್ಟರ್ರಿನಲ್ಲಿ ಪ್ರದೇಶ-ಭಾಷೆಗಿಂತ ಧರ್ಮ-ಧಾರ್ಮಿಕ ಸಂಪ್ರದಾಯಗಳು ಸಹಜವಾಗಿಯೇ higher-orderಇನದಾಗಿರುತ್ತದೆ. ನಮ್ಮ ಜನಗಳ ಭಕ್ತಿ-ನಂಬಿಕೆಗಳು ಅಗಾಧವಾದದ್ದು; ನಿಮ್ಮ ದೃಷ್ಹ್ಟಿಕೋನಕ್ಕಿರುವ ಭಾಷಾಧಾರಿತ ಚೌಕಟ್ಟು ಅವರಿಗಿರುವುದಿಲ್ಲ.

ನಿಮ್ಮ ತರ್ಕವನ್ನೇ extend ಮಾಡಿ ನೋಡಿ. ಕಾಶಿ ರಾಮೇಶ್ವರಗಳು ನಮ್ಮ ಜನಕ್ಕೆ ಹೊರಗಿನವೆನಿಸಬೇಕೆ? "ಮಾಲೆಕಲ್ಲು ತಿರುಪತಿಗೆ ಹೋಗು, ತಿರುಪತಿಗೆ ಹೋಗಬೇಡ" ಎಂದರೆ ಯಾರಾದರೂ ಕಿವಿಗೆ ಹಾಕಿಕೊಂಡಾರೆಯೇ?

ಅಂದ ಹಾಗೆ, ಈ ರೀತಿ ಪರರಾಜ್ಯದ ದೇಗುಲಗಳ ಮೇಲೆ ನಂಬಿಕೆಯಿಟ್ಟಿಕೊಂಡಿರುವವರು ಕನ್ನಡಿಗರೊಬ್ಬರೇ ಅಲ್ಲ. ತಿರುಪತಿಗೆ ಎಲ್ಲೆಡೆಯಿಂದಲೂ ಬರುತ್ತಾರೆ. ಆಂಧ್ರದ ಜನಗಳಿಗೆ ತಮಿಱು ನಾಡಿನ ಪುಣ್ಯಕ್ಷೇತ್ರಗಳತ್ತ ಸಾಕಷ್ಟು affinity ide. ಕೇರಳದಿಂದ ಹೇರಳವಾಗಿ ಕರ್ನಾಟಕದ ಕರಾವಳಿಯ ದೇಗುಲಗಳಿಗೆ ಬರುವವರಿದ್ದಾರೆ, ಧರ್ಮಸ್ಥಳಕ್ಕಂತೂ ಭಾರತದ ಎಲ್ಲೆಡೆಯಿಂದಲೂ ಜನ ಬರುತ್ತಾರೆ. ಮಂತ್ರಾಲಯಕ್ಕೆ ಕರ್ನಾಟಕ-ಮಹರಾಷ್ಟ್ರ-ಆಂಧ್ರಗಳೆಲ್ಲದರ ನಂಟು ಇದ್ದೇ ಇದೆ.

ಪರಸನಲ್ಲಿ ನಾನು ಸಾಕಾಷ್ಟು ಓಡಾಡಿದ್ದೇನೆ. ದಕ್ಷಿಣದಲ್ಲಿ ರಾಮೇಶ್ವರ-ಕನ್ಯಾಕುಮಾರಿಯಿಂದ ಹಿಡಿದು ಉತ್ತರದಲ್ಲಿ ೪-ಧಾಮ, ಪಶಿಮದಲ್ಲಿ ದ್ವಾರಿಕೆ, ಪೂರ್ವದಲ್ಲಿ ಕಾಮಕ್ಯದವರೆಗೂ ಹೋಗಿದ್ದೇನೆ. ಕಾಕತಾಳೀಯವಾಗಿ, ಶಬರಿಮಲೆಗೂ ಈ ವರ್ಷ ಹೋಗೋ ಪ್ಲಾನಿದೆ: ಇದಷ್ಟೂ ಮಾಡಿದ್ರೂ ನನ್ನ ಕರ್ನಾಟಕತ್ವಕ್ಕಾಗಲಿ,ಕನ್ನಡಾಭಿಮಾನಕ್ಕಾಗಲಿ, ಊರ ಅಂತರ್ಗಟ್ಟಮ್ಮನ ಮೇಲೆಯೇ ಆಗಲಿ, ಶೃಂಗೇರಿ ಶಾರದೆಯ ಮೇಲೆಯೇ ಆಗಲಿ ಭಕ್ತಿ (ಅಥವಾ ಹೋಗುವ frequency) ಏನೂ ಕಡಿಮೆಯಾಗಿಲ್ಲ.

ಕೊನೆ ಮಾತು: ಭಾರತದ ಸಾಂಸ್ಕೃತಕ / ಧಾರ್ಮಿಕ ಟ್ರೆಂಡುಗಳು ಕಾಂಕ್ರೀಟು / ಕಲ್ಲಿನಲ್ಲಿ ಸಜ್ಜಾಗಿಲ್ಲ. ಅದಕ್ಕೆ fluidity ide. ಶಬರಿಮಲೆ-ಶಿರಡಿ ಇತ್ಯಾದಿಗಳು ಜನಪ್ರಿಯತೆಯಿಂದ ಕರ್ನಾಟಕದಲ್ಲಿ ಚಾಲ್ತಿಗೆ ಬಂದಿರುವ ವಾಡಿಕೆಗಳು. ಇದರಿಂದ ನಮ್ಮ culture ಅಥವಾ identityಗೆ ಯಾವ ಕುತ್ತೂ ಇಲ್ಲ. ಇದೇ ರೀತಿ ಮುಂದೆ ಹೊಸಹೊಸದು ಬರಬಹುದು, ಹಳೆಯವು ಕೆಲವು ನಶಿಸಿ ಹೋಗಬಹುದೇನೋ (ಸ್ವಲ್ಪ ಡೌಟು);

Infact, ನಮ್ಮಿಂದ ಕೂಡ ಹೊಸ "ಟ್ರೆಂಡು"ಗಳು ಶುರುವಾಗಬಹುದು. ಅದ್ಯಾವುದೋ ಟೀವಿ ಚ್ಯಾನೆಲ್ಲಿನ ಕೃಪೆ - ಈಗ ಹಿಂದೆ ಹೆಚ್ಚು ಕೇಳೇ ಇರದ ಸ್ಥಳಗಳೆಲ್ಲ ಪ್ರಸಿದ್ಧವಾಗಿವೆ (ಚಿತ್ರದುರ್ಗದ ಬಳಿಯ ಹಾಲು ರಾಮೇಶ್ವರ, ಧರ್ಮಸ್ಥಳದ ಬಳಿಯ ಉಜಿರೆ ಇವಕ್ಕೆ ಉದಾಹರಣೆಗಳು. ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಜನ ಬರಲು ಶುರುವಾಗಿದ್ದಾರೆ).

Anonymous ಅಂತಾರೆ...

ಅಯ್ಯಾ, ತಿಕದಲ್ಲಿ ರುದ್ರಾಕ್ಷಿ ಇಟ್ಟುಕೊಂಡಿರೋ ಅತಿರೇಕದ ಜಂಗಮನಾದ ಆಂತೋನಿಯೇ,

ಬರೆದಿರೋದುನ್ನ ಸರಿಯಾಗಿ ಓದು. ಅಯ್ಯಪ್ಪ ಬರೀ ದೇವರಾಗಿ ಬಂದರೆ ಅಡ್ಡಿಯಿಲ್ಲಾ, ಆದರೆ ಜೊತೇಲಿ ಮಲಯಾಳಿಗಳುನ್ನ ವಲಸೆ ಮಾಡಬಾರದು ಅಂತಾ ಅಷ್ಟು ದಿವಿನಾಗಿ ಬರೆದಿದೆಯಲ್ಲಪ್ಪಾ! ಕನ್ನಡಿಗರ ಮೇಲೆ, ಕನ್ನಡ ನಾಡಿನ ಮೇಲಾಗುವ ದಾಳಿಗಳಲ್ಲಿ ಈ ಧಾರ್ಮಿಕ ದಾಳಿಯ ವಿಶೇಷತೆಯೇ ಇದು, ಪಾಪಾ, ನಿಮ್ಮ ಕಣ್ನಿಗೆ ಮುಂದಿರೋ ಅಯ್ಯಪ್ಪನ ವಿಗ್ರಹ ಕಾಣುತ್ಯೇ ಹೊರತು ಹಿಂದೆ ನುಗ್ತಿರೋ ನಮ್ಮ ಬದುಕು, ಉದ್ಯೋಗ, ಭಾಷೆ, ಸಂಸ್ಕೃತಿಗಳಿಗೆ ಮಾರಕವಾಗ್ತಿರೋ ಮಲಯಾಳಿ ದಂಡು ಕಾಣದಾಗಿಬಿಡುತ್ತದೆಯಲ್ಲಾ ಗುರುವರ್ಯಾ?

Jnaneshwara ಅಂತಾರೆ...

ಕನ್ನಡಿಗರಿಗೆ ಎಚ್ಚರಿಕೆಯ ಕರೆಘಂಟೆ

Anonymous ಅಂತಾರೆ...

idannu nanu saha gamanisiddene. ee reeti hosa cultures galinda kannadigaru bega prabhavitaraguttare anisutte. namma janaralli idara bagge awareness jasti adare olleyadu mainly in young adults. nanu bere rajyadalli swalpa dina idde. alli namma rajyada mathagalu, devalayagalu idduvu, like shringeri shankara matha. allina board kooda kannadadalle ittu (ofcourse along with other state language). aadare bere rajyadavaru namma rajyadalli nadesuvashtu saddu gaddala iralilla. alli aa matha hesarigashte ittu, karyakramagalella joragi nadesuttiralilla.

Anonymous ಅಂತಾರೆ...

Naanu Antony avara maatagi sahamatisuttene!! Aadaer, ananymous avaru balasida pada nOvannuntu maadide!!

baree bhAsheya AdhAradalli hodare, dEvaroo kshamisolla!! dEvarigentah bhAshe ayya??

shanks ಅಂತಾರೆ...

Well some logic here, going by the same logic some time back I had sent a mail to your brother (sister) blog about names of eatables items in our hotels and in our own houses. Like, Poliyogare, Sambar, rasam, Thair Wade, Alu Mattar etc., etc., what say about it.

Anonymous ಅಂತಾರೆ...

ಅನಾನಿಮಸ್,
ಒಂದು ನಾಡಿನ ವೈವಿಧ್ಯತೆಯನ್ನು ಅಳಿಸೋದನ್ನು ದೇವರು ಕ್ಷಮಿಸುತ್ತಾನಾ? ಆಂಥೋನಿ ಬಳಸಿದ ಭಾಷೆಗೆ ಸರಿಯಾಗೆ ಇದೆಯಲ್ಲಾ ಉತ್ತರಾ?

@ shanks,

ಕನ್ನಡನಾಡಿನ ತಿಂಡಿಗಳಿಗೆ ಕನ್ನಡದ ಹೆಸರುಗಳು, ಆಮದು ತಿಂಡಿಗಳಿಗೆ ಆಮದು ಹಸರುಗಳು - ಇದರಲ್ಲಿ ಗೊಂದಲವೇನಿದೆ? ಥೈರ್ ವಡೆಗೆ ಕನ್ನಡದಲ್ಲಿ ಮೊಸರೊಡೆ ಅಂತಾ ಇದೆಯಲ್ಲಾ? ರಸಂ- ಸಾರು, ಸಾಂಬಾರ್ - ಹುಳಿ ಕೂಡಾ ಹಾಗೇ. ಆಲೂ ಮಟರ್ ಹೊರನಾಡಿನಿಂದ ಬಂದಾಗ ಹೆಸರು ಬದಲಾಗದೆ ಬಂದರೆ ತಪ್ಪೇನಿಲ್ಲ. ಪಾನಿಪುರಿ ಅದೇ ಹೆಸರಲ್ಲಿರುವಂತೆ, ಪಿಜ್ಜಾ ಅದೇ ಹೆಸರಲ್ಲಿರುವಂತೆ...

ಸುಂದರ್

Priyank ಅಂತಾರೆ...

@Shanks,

For the question you raised, here are few enguru blogs which are on similar thoughts.
http://enguru.blogspot.com/2009/08/nammoora-jaagagala-hesaru-nammavaagali.html
http://enguru.blogspot.com/2009/03/bemgalooralli-deevatraanalli-yaavdu.html

I would suggest you go through them.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails