ಹೊರಗ್ ಬರ್ತೀನಿ ಅನ್ನೋ ಬೆದರುಗೊಂಬೆ...
ಈ ಹೊರಗೆ ಬರ್ತೀವಿ ಅನ್ನೋ ಅಸ್ತ್ರದಿಂದ ಇವ್ರು ಅದೇನೇನ್ ಕೆಲ್ಸ ಮಾಡುಸ್ಕೊಂಡಿದಾರೆ ಅಂತ ವಸಿ ನೋಡಮಾ ಬನ್ನಿ. ಹಿಂದೆ ಭಾಜಪಾ ಅಧಿಕಾರದಲ್ಲಿದ್ದಾಗ್ಲೂ ಅದರ ಜೊತೆ ಹೊಂದಾಣಿಕೆ ಮಾಡ್ಕೊಂಡು ಅಧಿಕಾರ ಅನುಭವಿಸಿದ್ದೋರು ಈ ಡಿ.ಎಂ.ಕೆ ಜನಾ ಅಂತ ನೆನುಪ್ ಮಾಡ್ಕೊಟ್ಟು ಮುಂದ್ಕ್ ಹೇಳ್ತೀವಿ ಕೇಳಿ.ಮೊದಲು ತಮಗೆ ಬೇಕಾದ ಖಾತೆಗಳು ಸಿಗಲಿಲ್ಲ ಅಂತ ಅಧಿಕಾರ ವಹಿಸಿಕೊಳ್ದೆ ಬ್ಲಾಕ್ ಮೇಲ್ ಮಾಡುದ್ರು. ಅಧಿಕಾರಕ್ಕೆ ಬಂದ ಕೂಡಲೇ ತಮಿಳಿಗೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಶಾಸ್ತ್ರೀಯ ಸ್ಥಾನಮಾನ ಪಟ್ಟ ಕೊಡ್ಸಿಕೊಟ್ರು. ಆಟೊಮೊಬೈಲ್ ತಂತ್ರಜ್ಞಾನದ ಸಂಶೋಧನಾ ಕೇಂದ್ರವನ್ನು ತಮಿಳುನಾಡಿಗೆ ತರಲಾಯಿತು. ರೈಲ್ವೇಯ ಹಿಂದಿ ಪರವಾಗಿ ಎಲ್ಲ ರೈಲಲ್ಲಿ ಹಿಂದಿ ಇಂಗ್ಲಿಷ್ ನಾಮಫಲಕ ಮಾತ್ರಾ ಇರ್ಬೇಕು ಅನ್ನೋ ನಿಯಮದಿಂದ ವಿನಾಯ್ತಿ ಪಡ್ಕೊಂಡ್ರು. ತಮಿಳುನಾಡಿಗೆ ನೆರೆ ಪರಿಹಾರವಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡ್ತೀವಿ ಅಂತ ಕೇಂದ್ರದೋರು ಅಂದಾಗ್ಲೂ ನಮ್ಗೆ ಹೇಳ್ದೆ ಹಾಗ್ ಮಾಡುದ್ರೆ ಅಷ್ಟೇ, ಬೆಂಬಲ ವಾಪಸ್ ತೊಗೋತೀವಿ ಅಂತ ಬೆದರ್ಸುದ್ರು. ತಮಿಳುನಾಡಿನ ನೈವೇಲಿ ಲಿಗ್ನೈಟ್ ನಿಯಮಿತ ಸಂಸ್ಥೆಯಿಂದ ಶೇಕಡಾ ಹತ್ತರಷ್ಟು ಬಂಡವಾಳ ಹಿಂತೆಗೆದು ಖಾಸಗೀಕರಣ ಮಾಡ್ತೀವಿ ಅಂದ್ರೆ ರಾಜಿನಾಮೆಯ ಬೆದರಿಕೆ ಹಾಕುದ್ರು. ಇದೆಲ್ಲಾ ನೋಡಿದ ಮೇಲೂ ಕಾವೇರಿ ನದಿ ನೀರಿನ ತೀರ್ಪು, ಕರ್ನಾಟಕದ ಎಲ್ಲ ಸಮರ್ಥ ವಾದಗಳ ನಂತರವೂ ತಮಿಳುನಾಡಿನ ಪರವಾಗಿದ್ದು ಹೀಗೇನಾ ಅಂತ ಜನಾ ಮಾತಾಡ್ಕೊತಾ ಇದಾರೆ ಗುರು. ಈಗ ಅದೇ ಇಡೀ ಕಾವೇರಿ ನದೀನ ರಾಷ್ಟ್ರೀಯ ಸಂಪತ್ತು ಅಂತೀವಿ ಅಂದ್ರೂ ನಮ್ಮೋರು ಬಾಯ್ಮುಚ್ಕೊಂಡು ಇರ್ತಾರೆ.
ಇರೋದು ಮೂರು % ಸೀಟು! ಎರಡು % ಓಟು!
ಒಟ್ನಲ್ಲಿ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಬೆಂಬಲ ಕೊಟ್ಟು ತಮಗೆ ಬೇಕಾದ ಹಾಗೆ ಸರ್ಕಾರಾನ ಆಡುಸ್ಕೊಂದು ಬೇಕಾದ ಅನುಕೂಲ ಮಾಡ್ಕೋತಾ ಇದಾರೆ ಗುರು. ಇಡೀ ಸರ್ಕಾರಾನ ಸೂತ್ರದ ಗೊಂಬೆ ಥರಾ ಇಷ್ಟೆಲ್ಲಾ ಆಡ್ಸಕ್ಕೆ ಡಿ.ಎಂ.ಕೆ ಹತ್ರ ಇರೋ ಸಂಸದರ ಸಂಖ್ಯೆ ಎಷ್ಟು ಗೊತ್ತಾ? 552 ಸದಸ್ಯರ ಲೋಕಸಭೆಯಲ್ಲಿ ಡಿ.ಎಂ.ಕೆ ಹೊಂದಿರೋದು ಬರೀ ಹದಿನಾರು ಸೀಟುಗಳು. ಅಂದ್ರೆ ನೂರಕ್ಕೆ ಮೂರಕ್ಕಿಂತ ಕಡಿಮೆ. ಕಳೆದ ಚುನಾವಣೇಲಿ ಅದು ಗಳಿಸಿದ ಮತದ ಪ್ರಮಾಣ ನೂರಕ್ಕೆ ಎರಡಕ್ಕಿಂತ ಕಡಿಮೆ. ಕರ್ನಾಟಕದಿಂದ ಆಯ್ಕೆಯಾಗಿರೋ ಭಾಜಪಾ ಸದಸ್ಯರ ಸಂಖ್ಯೆನೇ ಹದಿನೇಳು. ಕಾಂಗ್ರೆಸ್ಸಿಗರ ಸಂಖ್ಯೆ ಎಂಟು. ಆದ್ರೆ ಡಿ.ಎಂ.ಕೆಯೋರ್ಗೆ ಯಾವಾಗ ಕಾಲ್ ಹಿಡುದ್ರೆ ಏನಾಗುತ್ತೆ, ಯಾವಾಗ ಕಾಲ್ ಎಳುದ್ರೆ ಏನಾಗುತ್ತೆ ಅಂತಲೂ ಗೊತ್ತಿದೆ.
ಈಗ ಹೊಗೇನಕಲ್ ಕುಡ್ಯೋ ನೀರಿನ ಯೋಜನೆಗೆ ತಡೆ ಹಾಕ್ಬಾರ್ದು, ಆದ್ರೆ ಕರ್ನಾಟಕದಲ್ಲಿ ಕಾವೇರಿ ಪಾತ್ರದ ಒಂದು ಕೆರೆ ಹೂಳನ್ನು ಎತ್ತಕ್ಕೆ ಬಿಡಬಾರ್ದು ಅನ್ನೋ ನಿಲುವನ್ನೂ ದಕ್ಕುಸ್ಕೊಂಡು ಬಿಡ್ತಾರೆ. ಕರ್ನಾಟಕದ ರಾಜಕೀಯ ಪಕ್ಷಗಳು ಇದನ್ನು ಅರ್ಥ ಮಾಡ್ಕೊಳೋದು ಯಾವಾಗ? ಕನ್ನಡಿಗರು ಇದನ್ನು ಅರ್ಥ ಮಾಡ್ಕೊಳ್ಳೋದು ಯಾವಾಗ? ಅನ್ನೋದೆ ಒಂದು ದೊಡ್ ಪ್ರಶ್ನೆ ಆಗ್ಬಿಟ್ಟಿದೆ ಗುರು.
3 ಅನಿಸಿಕೆಗಳು:
ಕೇಂದ್ರ ಸರ್ಕಾರದ್ದಾಗಲಿ, ಅರಣ್ಯ ಮತ್ತು ಪರಿಸರ ಇಲಾಖೆದಾಗಲಿ ಪರ್ಮಿಶನ್ ತಗೊಂಡಿಲ್ಲ, ಎಲ್ಲಕಿಂತ ಮೊದಲು ವಿವಾದಿತ ಜಾಗಾ ಯಾರಿಗ್ ಸೇರಬೇಕು ಅನ್ನುದ ನಿರ್ಧಾರ ಆಗಿಲ್ಲ, ಅಂತದ್ರಾಗ್ ಇಂತ ಯೋಜನೆ ಶುರು ಮಾಡು ಧೈರ್ಯ ತಮಿಳರಿಗೆ ಹೆಂಗ್ ಬಂತು ??
ನಾವು ಯಾಕ ಹೊಯ್ಕೊಂಡ್ರು ಆಗುದಿಲ್ಲ ?
ನೀವು ನೋಡಿರ್ತಿರಿ, ತಮಿಳುನಾಡಿನಾಗ್ ಡಿ.ಎಂ.ಕೆ, ಅಣ್ಣಾ ಡಿ.ಎಂ.ಕೆ ಸರದಿ ಮ್ಯಾಲೆ ತಮಿಳ್ನಾಡಿನ ಆಡಳಿತ ಮಾಡ್ತಾರ್. ಕೇಂದ್ರದಾಗ್ ಇರು ಯಾವುದಾರು ಒಂದು ಪಕ್ಷಕ್ಕೆ ಬೆಂಬಲ ಕೊಟ್ಟು ತಮಗೆ ಬೇಕಾದಂಗ ಕೆಲಸ ಮಾಡಸ್ಕೊತಾರ್. ಅದು ಕಾವೇರಿ ನೀರ ಇರಲಿ, ಹೊಗೆನ್ಕಲ್ ಜಲಪಾತ ಇರಲಿ, ಇಲ್ಲ ಇನ್ನೆನಾರು ಇರಲಿ, ನಮ್ಮ ಕರ್ನಾಟಕದ ರೈತರ ಬಾಳಿಗೆ ಬೆಂಕಿ ಹಾಕ್ಯಾರು ಸರಿ, ತಮ್ಮ ಮಂದಿಗೆ, ತಮ್ಮ ಊರಿಗೆ ಅನುಕೂಲ ಮಾಡ್ಕೊತಾರ್ ರೀ. ಅವರ ಕೈಲೆ ಆಗೋದು ನಮಗ ಯಾಕ ಹೊಯ್ಕೊಂಡ್ರು ಆಗುದಿಲ್ಲ ಅಂದ್ರ ನಮ್ಮ ರಾಜ್ಯದಾಗ್ ಕೇಂದ್ರ ಸರ್ಕಾರಕ್ಕ ಬೆಂಬಲ ಕೊಟ್ಟು ಕೆಲಸ ಮಾಡಸ್ಕೊಳ್ಳುವಂತ ಒಂದು ಪ್ರಾದೇಶಿಕ ಪಕ್ಷ ಇಲ್ಲ. ನಾವು ಹೈಕಮಾಂಡ್ ಅನ್ನು ಸೂತ್ರ ಕುಣಸದಂಗ ಕುಣಿಯು ರಾಷ್ಟ್ರೀಯ ಪಕ್ಷಗಳು ಅನ್ನೋ ಜೋಕುಮಾರ್ ಸ್ವಾಮಿಗೊಳಿಗೆ ಮತ ಹಾಕಿ, ಮನಿಗ್ ಹೋಗಿ ಮಕ್ಕೊತೆವಿ, ಆದ್ರೆ ಪಕ್ಕದ ತಮಿಳರು ತಮ್ಮದೇ ಪಕ್ಷಕ್ಕ ಮತ ಹಾಕಿ, ದಿಲ್ಲಿಗ ಕಳಸಿ ಅದೇ ರಾಷ್ಟ್ರೀಯ ಪಕ್ಷಗಳ ಕೈಯಾಗ್ ತಮಗೆ ಬೇಕಾಗಿರು ಕೆಲ್ಸಾನ ಅರಾಮ್ ಆಗಿ ಮಾಡಸ್ಕೊಂಡು ಬರ್ತಾರ್.
ಪ್ರಾದೇಶಿಕ ಪಕ್ಷ ಯಾಕ್ ಬೇಕು?
ಯಾರ ಯಾರದು ಪ್ರಾದೇಶಿಕ ಪಕ್ಷ ಅದಾವೋ, ಅವರೆಲ್ಲ ದಿಲ್ಲಿನಾಗ್ ಇರು ಸರ್ಕಾರಕ್ಕೆ ಬೆಂಬಲ ಕೊಟ್ಟು ತಮಗ ಬೇಕಾದಂಗ ಕೆಲಸ ಮಾಡ್ಕೊತಾರ್ ರೀ . ಆರ್.ಜೆ.ಡಿ ಅನ್ನು ಪ್ರಾದೇಶಿಕ ಪಕ್ಷ ಇರು ಲಾಲೂ ಪ್ರಸಾದ್ ಯಾದವ ರೈಲ್ವೆ ವಿಷಯದಾಗ್ ನಮಗ ಟೋಪಗಿ ಹಾಕಾಕ್ ಬಂದಿದ್ದೂ ಇದೇ ಧೈರ್ಯದ ಮೇಲೆ, ಕರುಣಾನಿಧಿ ನಮ್ಮ ಹೊಗೆನ್ಕಲ್ ಆಕ್ರಮಣ ಮಾಡ್ಕೊಂಡು ನಮ್ಮ ನೀರು ಕದಿಯು ಸಂಚು ಮಾಡಿದ್ದು ಇದೇ ಧೈರ್ಯದ ಮೇಲೆ, ಇನ್ನ ಮೇಲಾದ್ರು ನಮ್ಮ ಮಂದಿ ನಮ್ಮ ರಾಜ್ಯದ ಗಡಿ, ನೆಲ, ಜಲ, ಭಾಷೆ ಕಾಯುವಂತ, ನಮ್ಮ ನಾಡು-ನುಡಿ ವಿಷ್ಯದಾಗ್ ಯಾವುದೇ ರಾಜಿ ಮಾಡಿಕೊಳ್ಳದಂತ ಒಂದು ಪ್ರಾದೇಶಿಕ ಪಕ್ಷ ಕಟ್ಟುದ್ರ ಬಗ್ಗೆ ಚಿಂತನೆ ಮಾಡ್ಬೇಕ್ರಿ, ಅಂದಾಗ್ ಮಾತ್ರ ಕರ್ನಾಟಕದಾಗ್ ಕನ್ನಡಿಗನೆ ಸಾರ್ವಭೌಮ ಆಗಿ ಬದುಕಿ ಬಾಳಾಕ್ ಸಾಧ್ಯ ಆಗತೆತಿ.
Gurugale,
indina rediff nodi....
http://www.rediff.com/news/200/mar/17guest2.htm
http://www.rediff.com/news/200/mar/19guest.htm
chennagi bardidare colonel avru :)....
iga namma ivattina blog-ige barana:
shendru ee politicians...antavranna aayke madbardu...ssaa...neevu bardiro prati ondu blognallu idu eddu kanutte...aadru naavugalu sumne kaykatkondu kootkotivi...voter turn-out nodi...nanna "so_called_educated" snehitaru hogi vote madalla andre innen agutte heli...namalli attitude change agbeku sssaa...abhimaana belibeku ssaaa "nanna baashe namma jana namma naadu...." allivarge ide hanebaraha namdu :(...irli gurugale...neevu bariri...naavu odhma...nanna baashenalli ;) sundara naadu kattona banni :)
-/dg
ಏನೇ ಅನ್ನಿ...ನಾವು, ನಮ್ಮ ಸರ್ಕಾರ ಸರಿಯಾಗಿಟ್ಟುಕೊಳ್ಳದೆ ಕೇಂದ್ರದಿಂದ ಯಾವ ನೆರವು, ಬೆಂಬಲವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ...ದಿನಾಲೂ ಒಬ್ಬೊಬ್ಬ ರಾಜಕಾರಣಿ ದಂಡೆತ್ತಿ ಹೊಗೆನಕಲ್ ನಲ್ಲಿ ತಮೀಲು ನೆಲದ ಮೇಲೆ ನಿಲ್ಲುವುದಂತೆ.." ಅಪ್ಪಾ, ಕೊಂಗರೆ, ಈ ನೀರನ್ನು ನಿಮ್ಮ ಹಳ್ಳಿಗಳಲ್ಲಿ ಕುಡಿಯಬೇಡಿ...ಯಾಕಂದ್ರೆ ನಮಗೆ ಆ ನೀರು ಬೇಡ್ವೇ?" ಅನ್ನುವುದಂತೆ.ಎಂತಹ ಮೊಸಳೆ ಕಣ್ಣೀರು?.ಅಲ್ಲಿ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟು ’ಜೈ ’ಅನಿಸಿಕೊಳ್ಳುವುದಂತೆ..ಅಲ್ಲಿ ಅವರ ಪಾಡಿಗೆ ಆ ರಾಜ್ಯದವರು ತಮ್ಮ ಮತದಾರರಿಗೆ ಅಭಿವೃಧ್ಧಿ ಕಾರ್ಯಗಳನ್ನು ಮಾಡುತ್ತಾಲೇ ಇರುವುದಂತೆ..ನೋಡಿ ನೋಡಿ ಸಾಕಾಗುತ್ತಿದೆ.
ನಾವೂ ನಮ್ಮ ಸರ್ಕಾರದ ಕಡೆಯಿಂದ ನಮ್ಮ ಗಡಿನಾಡಿನ ಹಳ್ಳಿಗಳಿಗೆ ಕುಡಿಯುವ ನೀರು, ಗದೆಗಳಿಗೆ ನೀರಾವರಿ ವ್ಯವಸ್ತೆ ಗಪ್ಪನೆ ಮಾಡುವುದಪ್ಪ..ಬಿಟ್ಟ ನೇಎರನ್ನು ತಾನೆ ಅವತು ಉಪಯ್ಫೋಗಿಸುತ್ತಾರೆ..ಅಪ್ ಸ್ಟ್ರೀಂ ನಲ್ಲಿ ಹಿಡಿದು ನಮ್ಮ ಸರ್ಕಾರ ನಮ್ಮ ನೆಲದಲ್ಲಿ ಯೋಜನೆಗಳು ಮಾಡಬೆಕು..ನೀರು ಅಲ್ಲಿಗೆ ಹರಿಯಲು ಬಿಟ್ಟು ಉಪಯೋಗಿಸಬೇಡಿ ಅಂದ್ರೆ ಹೇಗೆ...ಅಲ್ಲಿನ ಲೋಕಲ್ ಜನರ ಕ್ರೋಧವೂ ಕೆರಳಿ ಜಾಗೃತವಾಗಿ ನಮ್ಮ ಪ್ರತಿಭಟನಾಕರರನ್ನು ಹೊಡೆದಟ್ಟಿದರೆ,ತೆಪ್ಪಗೆ ಬರಬೇಕಾಗುತ್ತದೆ ನೋಡಿ..ಕಟುಸತ್ಯದ ಎಚ್ಚರಿಕೆ ಇದು!
~ಚಿಕ್ಕ ಕತೆಗಾರ,
ಬನ್ನಿ ನನ್ನ ಬಿಸಿಬಿಸಿ ಶೃಂಗಾರದ ಬ್ಲಾಗಿಗೆ:
http://shrungara.blogspot.com/
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!