ಕರ್ನಾಟಕ ರಾಜ್ಯದ ಈ ಬಾರಿಯ ವಿಧಾನ ಸಭಾ ಚುನಾವಣಾ ಫಲಿತಾಂಶಗಳು ಹೊರಬಂದಿದೆ. ಈ ಚುನಾವಣಾ ಫಲಿತಾಂಶ ಕನ್ನಡ ಕೇಂದ್ರಿತ ರಾಜಕಾರಣಕ್ಕೆ ಸಂಬಂಧಪಟ್ಟಂತ ಹಲವಾರು ವಿಷಯಗಳಲ್ಲಿ ಒಳ್ಳೊಳ್ಳೇ ಸಂದೇಶಾನ ಕೊಡ್ತಿದೆ ಗುರು!
ನಾಡು ಒಡೀತೀವಿ ಅಂದೋರ ಕೈಗೆ ಚೊಂಬು!
ಬೆಳಗಾವಿಯ ಇತಿಹಾಸದಲ್ಲಿ ಇದುವರೆಗೂ ಕಂಡು ಕೇಳರಿಯದ ಹಾಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮಣ್ಣು ಮುಕ್ಕಿದೆ. ನಿಪ್ಪಾಣಿ, ಖಾನಾಪುರಗಳಲ್ಲಂತೂ ಇವ್ರ ಪ್ರಚಾರದಲ್ಲಿ ಮರಾಠಿ ಪ್ರತ್ಯೇಕತೇನೆ ಚುನಾವಣೆ ವಿಷಯ ಮಾಡ್ಕೊಂಡಿದ್ರು.
ಈ ಬಾರಿ ಕರ್ನಾಟಕದ ವಿಧಾನ ಸಭೆಯ ಅಧಿವೇಶನದ ಮೊದಲ ದಿನ ಎಂಇಎಸ್ ನ ಕಪ್ಪು ಬಟ್ಟೆಯ ಕೆಟ್ಟ ಘೋಷಣೆಯ ಸೋಂಕಿಲ್ಲದೆ ಆರಂಭವಾಗ್ತಿದೆ ಅನ್ನೋದು ಒಳ್ಳೇ ಬೆಳವಣಿಗೆ ಗುರು! ನಾಡು ಒಡ್ಯೋರ ಕಾಲ ಮುಗೀತು ಅನ್ನೋ ಸಂದೇಶಾನ ಇದು ಕೊಡ್ತಿದೆ ಗುರು.
ತಮ್ಮೂರಲ್ಲಿ ಸಾಲದು ಅಂತ ಇಲ್ಲಿ ಕಿಸಿಯಕ್ಕೆ ಬಂದಿದ್ದ ಅಣ್ಣಾ ಡಿಎಂಕೆ ಪಕ್ಷ ಏಳು ಕಡೆ ಸ್ಪರ್ಧಿಸಿತ್ತು. ತಮಿಳುನಾಡಿನ ಪರವಾಗಿ ನಿಲ್ತೀವಿ ಅಂತ ಮಾತಾಡಿದ್ದ ಇವರು ಏಳೂ ಕಡೆ ಸೋತು ಹೋಗಿರೋದು ಸಖತ್ ಸುದ್ದಿ ಗುರು.
ನಾಡು ನುಡಿಗೆ ಸ್ಪಂದಿಸದವರ ಕೈಗೆ ಚಿಪ್ಪು!
ಕಾವೇರಿ ಸಮಸ್ಯೆ ಕಾಲಕ್ಕೆ ರಾಜಿನಾಮೆ ನಾಟಕ ಮಾಡಿದ ಅಂಬರೀಷ್ ಕಡೆಗೆ ಶ್ರೀರಂಗಪಟ್ಟಣದಲ್ಲಿ ಹೀನಾಯವಾಗಿ ಸೋಲಬೇಕಾಯಿತು. ಕಾವೇರಿ ಅಂತಿಮ ತೀರ್ಪು ಬಂದಾಗ ಜನಪರವಾಗಿ ನಿಲ್ಲದೆ ತಮ್ಮದೇ ಲೋಕದಲ್ಲಿದ್ದವರಿಗೆ "ತಮ್ಮ ಸಮಸ್ಯೆಗಳಿಗೆ ಸ್ಪಂದಿಸದವರಿಗೆ ಅವರೆಷ್ಟೇ ದೊಡ್ಡ ಸ್ಟಾರೇ ಆಗಿದ್ರೂ ಜನ ತಿರಸ್ಕರಿಸ್ತಾರೆ" ಅಂತ ತೋರಿಸಿಕೊಟ್ಟ ಪಟ್ಣದ ಜನ ನಿಜಕ್ಕೂ ಒಳ್ಳೇ ಸಂದೇಶಾನೆ ಕೊಟ್ಟಿದಾರೆ.
ಇನ್ನು ತೆಲುಗು ಕನ್ನಡ ಸಮ್ಮೇಳನ ಅಂತ ಕರ್ನಾಟಕದ ತುಂಬ ತೆಲುಗು ಸಂಸ್ಕೃತಿ ಹರುಡ್ತಾ, ತೆಲುಗ್ರು ಕನ್ನಡದೋರು ಅಣ್ಣತಮ್ಮಂದಿರು ಅಂದಂದೆ ತೆಲುಗಲ್ಲಿ ಪ್ರಚಾರ ಭಾಷಣ ಮಾಡ್ಕೊಂಡು ಓಡಾತ್ತಿದ್ದ ಸಾಯಿಕುಮಾರ್ ಬಾಗೆಪಲ್ಲಿಯಲ್ಲಿ ಹಳ್ಳ ಹಿಡಿದಿದ್ದಾರೆ ಗುರು!
ಕನ್ನಡ ನಾಡಿನ ಹೆಮ್ಮೆಯ ಸ್ಮಾರಕಗಳಲ್ಲೊಂದಾದ ಕೆಂಪಾಂಬುಧಿ ಕೆರೆಯನ್ನು ನುಂಗಿ ನೀರು ಕುಡಿಯಕ್ಕೆ ಮುಂದಾದೋರಿಗೂ ಜನ ಮನೆ ದಾರಿ ತೋರಿಸಿದಾರೆ.
ಗೆದ್ದವರ ನಲ್ನುಡಿ!
ಬಿಜೆಪಿಯ ಯಡಿಯೂರಪ್ಪನೋರು ಇದೀಗ ಕೊಡ್ತಿರೋ ಸಂದರ್ಶನದಲ್ಲಿ ಇದು ಕನ್ನಡಿಗರಿಗೆ ಸಂದ ಜಯ, ನಾಡು ನುಡಿ ಕಾಪಾಡಕ್ಕೆ ನಾವು ಬದ್ಧರು ಅಂತೆಲ್ಲಾ ಮಾತಾಡ್ತಾ ಇರೋದು ಒಳ್ಳೆ ಬೆಳವಣಿಗೆ. ಈ ಬಾರಿಯ ಇಡೀ ಚುನಾವಣೆಯಲ್ಲಿ ಕನ್ನಡತನ ಸಾಕಷ್ಟು ಮಟ್ಟಿಗೆ ಜಾಗೃತವಾಗಿದೆ ಅನ್ನೋದಕ್ಕೆ, ಇದುವರೆಗೂ ಕನ್ನಡದ ಹೆಸರಲ್ಲಿ ಗೆದ್ದುಕೊಂಡು ಬರ್ತಿದ್ದ ಕೆಲ ಅಯೋಗ್ಯ ಕನ್ನಡಿಗರನ್ನು ಮತದಾರ ಮನೆಗೆ ಕಳಿಸಿದ್ದಾನೆ... ಅದೂ ಠೇವಣಿ ಕಳೆದು. ಜೊತೆಗೆ ಉತ್ತರಪ್ರದೇಶ ಮೂಲದ ಬೆಹನ್ ಜಿ ಮಾಯಾವತಿಯೋರ ಬಹುಜನ್ ಸಮಾಜ ಪಕ್ಷ ಮತ್ತು ಮುಲಾಯಂ ಸಿಂಗ್, ಅಮರ್ ಸಿಂಗ್ ಗಳ ಸಮಾಜವಾದಿ ಪಕ್ಷಗಳನ್ನು ಗೆಲುವಿನ ಹತ್ತಿರಕ್ಕೂ ಸುಳಿಯಲು ಬಿಡದೆ ’ಸ್ಥಳೀಯತೆಯೇ ಮತದಾನಕ್ಕೆ ಮೂಲಸರಕು’ ಅಂತ ಮತದಾರ ಸಾರಿದಾನೆ ಗುರು!
ಈ ಬಾರಿ ಕರುನಾಡಿಗ, ಇರೋ ಎರಡು ಪಕ್ಷಗಳಲ್ಲಿ ಚೂರು ಕಡಿಮೆ ಹೈಕಮಾಂಡ್ ಗುಲಾಮಗಿರಿ ಇರೋ ಭಾಜಪವನ್ನ ಗೆಲ್ಸಿದಾನೆ. ಈಗ ಗೆದ್ದಿರೋರು ಕನ್ನಡ ಕೇಂದ್ರಿತ ರಾಜಕಾರಣ ಮಾಡಿದಷ್ಟೂ, ದೆಹಲಿ ಹೈಕಮಾಂಡ್ ಗುಲಾಮರಾಗದಷ್ಟೂ ದಿನ ಜನ ಇವರ ಬೆಂಬಲಕ್ಕಿರೋ ಸಾಧ್ಯತೆಗಳು ಹೆಚ್ಚು. ಇವ್ರಾದ್ರೂ ರಾಜ್ಯಸಭೆಗೆ ವೆಂಕಯ್ಯ ಪಂಕಯ್ಯ ಅಂತ ಯಾರು ಯಾರನ್ನೋ ಆರಿಸದೆ ಕನ್ನಡದೋರನ್ನು ಆರಿಸಬೇಕು. ಕನ್ನಡ ನಾಡಿನ ಉದ್ದಿಮೆಗಳಲ್ಲಿ ಕನ್ನಡದ ಮಕ್ಕಳಿಗೆ ಕೆಲಸ ಕೊಡಸಕ್ಕೆ ಮುಂದಾಗಬೇಕು, ನಾಡಿನ ಸಂಸ್ಕೃತಿ, ನುಡಿ, ಗಡಿಗಳನ್ನು ಕಾಪಾಡಕ್ಕೆ ರಾಜಿ ಇಲ್ಲದಂತೆ ಮುಂದಾಗಬೇಕು. ಒಟ್ಟಾರೆ ಈ ಚುನಾವಣೆ ಕನ್ನಡ ಕೇಂದ್ರಿತ ರಾಜಕಾರಣಕ್ಕಿರೋ ದೊಡ್ಡ ಸಾಧ್ಯತೆಯ ಚಿಕ್ಕ ಸುಳಿವನ್ನು ಕೊಟ್ಟಿರೋದು ಇದರ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥ ಆಗುತ್ತೆ! ಏನಂತೀ ಗುರು?
17 ಅನಿಸಿಕೆಗಳು:
ಕರ್ನಾಟಕದ ಇತಿಹಾಸದಲ್ಲಿ ಈ ಫಲಿತಾಂಶ ಒಂದು ಮೈಲಿಗಲ್ಲಾಗಲಿದೆ. ಆನ್ನವಿಟ್ಟ ಮನೆಗೆ ದ್ರೋಹ ಬಗೆದ, ಗುರುಗಳಿಗೆ ಗುರುದಕ್ಷಿಣೆಯಾಗಿ ಅವರೇ ತೋರಿಸಿದ್ದ ದಂಡದ ರುಚಿ ತೋರಿಸಿದವರಿಗೆ ಒಂದು ಪಾಠ ಕಲಿಸಿದಂತಾಗಿದೆ.
ಬೆಂಗಳೂರು, ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ, ನಮ್ಮದೇ ಒಂದು ವಿಮಾನ ನಿಲ್ದಾಣಕ್ಕೆ ನಮ್ಮ ಹೆಸರನ್ನಿಡಲೂ ಹಿಂದೇಟು ಹಾಕುತ್ತಿರುವ ಈ ಕಾಲದಲ್ಲಿ, ನಮಗೆ ನಮ್ಮ ಗುರು-ಹಿರಿಯರು ಕಲಿಸಿರುವ ಮೌಲ್ಯಗಳನ್ನು ಉಳಿಸಿ-ಬೆಳಸಿಕೊಂಡು ಹೋಗುವ ಒಂದು ಸರ್ಕಾರದ ಅವಶ್ಯಕತೆಯಿತ್ತು. ಅದು ಹೊಸ ಸರ್ಕಾರದಿಂದ ಸಾಕಾರಗೊಳ್ಳಲೆಂದು ಆಶಿಸುತ್ತ, ಮತ್ತು ದೃಢ ಸರ್ಕಾರದ ರಚನೆಗೆ ದೇವರನ್ನು ಬೇಡುತ್ತ,
ondu single party bandhirodu bahala santasada visya
innu henge kelsa madthare annodu nodbeku
BJP telugarige hecchu pramukyathe needidhe annodu swapla yochisabekada vishaya
ಪರಿಸ್ಥಿತಿ ಇನ್ನು ಅಷ್ಟು ಸುಧಾರಿಸಿಲ್ಲ ಗುರು. ಇವತ್ತು ಬಿ ಜೆ ಪಿ ಯ ಅನಂತ ಕುಮಾರ್ ಸಂದರ್ಶನದಲ್ಲಿ ಹಿಂದಿಯಲ್ಲಿ ಮಾತನಾಡ್ತಾ ಇದ್ದ್ರು.
ತೆಲುಗು ನಟರ ರೀತಿ ಸ್ಟೈಲ್ ಮಾಡೊ ಶ್ರೀ ರಾಮುಲು, ತೆಲುಗರಾದ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ, ಕೆಟ್ಟಾ ಸುಬ್ರಹ್ಮಣ್ಯ ನಾಯ್ಡು ಇವರನ್ನ ಕನ್ನಡದವರು ಆರಿಸಿ ಕಳಿಸಿದ್ದಾರೆ.
ಇನ್ನ ಈ ಬಿ ಜೆ ಪಿ ಸರಕಾರದಲ್ಲಿ, ತೆಲುಗರು ಕರ್ನಾಟಕದ ಗಣಿ, ರಿಯಲ್ ಎಸ್ಟೇಟ್ ದಂಧೆಲಿ ಹಿಡಿತ ಸಾಧಿಸೋದಂತು ಗ್ಯಾರಂಟಿ.
ಕನ್ನಡಿಗರು ಕಲಿಬೇಕಾಗಿರೋದು ಇನ್ನು ತುಂಬಾ ಇದೆ ಗುರು
ತುಂಬ ಒಳ್ಳೆ ಸುದ್ದಿ. ವಾಟಾಳ್ ಅಂಬರಿಷ್ ಸಾಯಿಕುಮಾರ್ ಇಂತ ವೇಸ್ಟ್ಗಳು ಸೋತಿದ್ದು ನಿಜಕ್ಕು ಸಂತೋಷ. ನಾಡಿಗೆ ಭ ಜ ಪ ದವರು ಒಳ್ಳೆಯದು ಮಾಡಲೆಂದು ಹಾರೈಸುವ
-ಶ್ವೇತ
ಬಿಜೆಪಿಯವರ ಗುರಿಗಳೇ ಬೇರೆ.
ಈಗ ಇವರಿಂದ ಹೊಗೆನಕಲ್ಲು, ಕಾವೇರಿ ನೀರು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕನ್ನಡಿಗರ ಹೆಸರು ಈ ವಿಶಯಗಳನ್ನ ನಿಬಾಯಸಲು ತಾಕ್ಕತ್ತು ಮತ್ತು ಆಸಕ್ತಿಇದೆಯಾ?
ಬಿಜಿಪಿಯಿಂದ ಬಳ್ಳಾರಿ ಜಿಲ್ಲೆ ತೆಲುಗು ರೆಡ್ಡಿಗಳ ಪಾಲಾಗಿದೆ. ಬಳ್ಳಾರಿ ಜಿಲ್ಲೆ ಪೂರ್ತಿ ಶ್ರೀರಾಮುಲು ನೆಂಟರೇ ಗೆದ್ದಿರೋದು. ಕನ್ನಡ ಲಿಂಗಾಯತರು ಸೋತಿದ್ದಾರೆ. ಹೀಗೆ ಬೆಂಗಳೂರಲ್ಲೂ ರೆಡ್ಡಿಗಳು ಬಿಜೆಪಿ ಕಡೆಯಿಂದ ಗೆದ್ದಿರೋದು.
ಈ ಸರತಿ ನಮ್ಮ ಅಸೆಂಬ್ಲಿಯಲ್ಲಿ ತೆಲುಗು ರೆಡ್ಡಿಗಳ ದೊಡ್ಡ ಗುಂಪೇ ಇದೆ.
ಇನ್ನು ಇದೇ ಬಿಜೆಪಿ ಅಣ್ಣಾಡಿಎಂಕೆ ಜೊತೆ ಕೂಡಿಕೆ ಮಾಡಿಕೊಳ್ಳಲು ಹೋಗಿತ್ತು.
ಬೆಳಗಾವಿಯಲ್ಲಿ ಗೆದ್ದ ಕನ್ನಡ, ಬಳ್ಳಾರಿ,ಬೆಂಗಳೂರು ನಗರದಲ್ಲಿ ಸಕ್ಕತ್ತಾಗೇ ಸೋತಿದೆ.!!
ಇನ್ನು ಬಿಜೆಪಿ ಹಿಂದಿ-ಸಂಸ್ಕೃತ ಅಕೆಡಿಮಿಯ ಜೊತೆಗೆ ತೆಲುಗು ಅಕೆಡಿಮಿಗೂ ಒತ್ತು ನೀಡಿದರೆ ಯಾವ ಅಚ್ಚರಿಯಿಲ್ಲ.
let me hope your voice will remain same untill next elections..
The threat of Andhra Reddys taking control of KA politics is very real.
BJP leadership in KA should limit these reddys to bellary alone.
Mines are a property of the state and BJP govt should take necessary steps to save it for our future genaration.
Yediyurappa and Anantkumar should work in tandem for the betterment of the our state and our people.
Kannada, Karnataka and Kannadiga na yella vishyada bagge yaavude raaji maadkobaaradu. Very first challenge for yeddy is hogenakal and we have to see how yeddy will tackle Advani/Jayalalitha pressure on hogenakal issue.
bellary yalli geddiro ellaru gani dhanigala chelagalu.
atleast bengaluralli andhrada real estate don galu ibbaru sotiddare..
BTM layout na prasad reddy, Bommanahalliya kupendra reddy sotiddu olle suddine.
BJP Kannada, Karnataka vishyadalli sariyaada niluvu torisalilla andre mundina chunavaNeli avaru maNNu mukkodu guarantee.
My congrats to Yeddy and team as it is their victory rather than BJPs.
We have to see how yeddy will tackle matter pertaining to Kannada Karnataka and Kannadiga and hogenakal is a big challenge for him right now
Since LS elections r there in a year, yeddy's trouble are multi fold.
As BJP will align with jayalalitha for the next year's LS polls, and she will tight all screws in delhi to press advani to pressurise yeddy to stop opposing hogenakal project and yeddy should have balls to say no to Advani
If he says no to advani,, then no body can alter his position as the tallest leader in KA and he will become what modi has become to Gujarat.
so, High command ge jaasti tale kedaskollade,, karnataka, kannada vishyadalli swanta nirdhara tagondre,, yeddy/BJP na solasoke yaarigu aagalla inna munde..
It is a national party tha has won. They have their own agenda which may not be pro kannada always. The voters rejected oosaravallis like Ambarish and likes. At the same time they have rejectedone many parties along with BSP, SP etc. However, the BJP is now being controlled by Reddys of Mines and Land Developers. It may not be an overestimated statement tht their money will control the government. Already buying the independents are on. I do not know what is the deal. Yediyurappa has too many problems both Inhouse and of the interests of the State. Luckily the voter has releived him of external pressure from opposition parties.
Enguru ella mahitigala prakar
BJP-110
INC - 80
JDS - 28
OTHERS - 6
Ella 224 adre illi haakiro maahitiya prakara
BJP -111
INC - 78
JDS - 28
OTHERS - 6
Ella serisidre aagodu 223 maatra .. Enguru samachara.. yaavudu sari yaavudu tappu GURU
Another misconception which vested interests are are spreading in K'taka victory is that of "expansion" of North India into South. Now, what is the role of North India in BJP's victory in Gujarat and K'Taka? NIL. The victory of Gujarat and K'taka is entirely because of respective State Units and State leaders. Of course, there is a central organisation, central leadership which helps state units with resources, expertise and experience. But the victory entirely belongs of State Units and its workers/leaders. There should be no doubt about that.
Dear Shree,
The image shown is as appeared in the official web site of election commission at 3.47 PM.
I think enguru has started the article at 3:26 Pm & taken the image from the net at 3:47 PM. If you see the link, it is updated.
Am I right Enguru?
Regards
Ellarigoo namaskara, Kelavondu geleyaru e mele helida hage B.J.P ya ajenda bereye ide, maththu karnatakadaleega adu sampoornavagi telugara hiditha dalli ifocoo nija. Bere rhashikara hage telugaranna samskruthikavagiyagali, uchcharadindagali identify madodu bahala kasta. Bengaluralli yaru telugaru, yaru kannadigaru antha guruthisodu asadhyane. avaru namma jothe hege berithare andre avralli kelavaru kannada sanghatanegala padadikarigaloo agiddare. Mundina dinagallalli yadiyoorappa reddygala kaigombe yagodralli yava samshayavoo illa. Adre andhradavara paravagi ene kelasa agodiddaroo adu hidden ajenda.....namma kanniganthu kansodilla.........Bahushaha BJP sarakarada modala balipashu Lokayuktha Santhosh Hegde agabahudada sadhyathe ide. adare idu athyantha chanakshathanadinda aguththe. Yarigoo goththagada reethiyalli avara kaigalannu katti hako sadhyathe ide. Adhikarogala varga vargiyanthu telugara kaiyalle iro sadhyathe ide.
shashi
Remember these Bellary Reddy's and Sriramulu had organized 'World telugu Meet' at Bellary sometime back. Actually kannada has lost in state elections except in Belgaum :(
yes ,,, we have to be very carefull about these reddy's and telugu people .. unless u r not aggressive to send them out ,, they will stay in karnataka
Indirectly power is in reddy brothers hand.God only can save our state from these notorious people
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!