ಫಿವರ್ ಎಫ್ಎಂನಲ್ಲೀಗ ಬೊಂಬಾಟ್ ಕನ್ನಡ ಹಾಡುಗಳು!

ಬೆಂಗಳೂರಿನ ಫಿವರ್ ಅನ್ನೋ ಹೆಸರಿನ ಎಫ್.ಎಂ ಚಾನಲ್ಲಿನಲ್ಲೀಗ ಬದಲಾವಣೆಯ ಹೊಸ ತಂಗಾಳಿ ಬೀಸಿ ಬರ್ತಿದೆ ಗುರು. ಇತ್ತೀಚಿಗೆ ಕೆಲವು ದಿನಗಳಿಂದ ಇವ್ರು ಬೊಂಬಾಟ್ ಕನ್ನಡ ಹಾಡುಗಳು ಅನ್ನಕ್ ಶುರು ಹಚ್ಕೊಂಡಿದಾರೆ. 104 ಮೆಗಾಹರ್ಟ್ಸ್ ತರಂಗಾಂತರದಲ್ಲಿ ಪ್ರಸಾರ ಆಗ್ತಿರೋ ಈ ವಾಹಿನಿಯೋರು ಮೊದಲಿಗೆ ಹೆಚ್ಚೆಚ್ಚು ಇಂಗ್ಲಿಷ್ ಹಾಡುಗಳ್ನ ಹಾಕ್ತಿದ್ರು. ಆಮೇಲೆ ಹಿಂದಿ ಇಂಗ್ಲಿಷ್ ಅಂತ ಬದಲಾದ್ರು. ಇದೀಗ ಬೊಂಬಾಟ್ ಕನ್ನಡ ಹಾಡುಗಳು ಅಂತ ಸಾಕಷ್ಟು ಕನ್ನಡ ಹಾಡುಗಳ್ನ ಹಾಕಕ್ಕೆ ಶುರುಮಾಡಿದಾರೆ ಗುರು.

ಬೆಂಗಳೂರಿನಲ್ಲಿ ಮಾರುಕಟ್ಟೆ ಗೆಲ್ಲೋ ದಾರಿ!

ಇವತ್ತಿನ ದಿನ ಬೆಂಗಳೂರಿನಲ್ಲಿ ಮಾರುಕಟ್ಟೆ ಮೇಲೆ ಹಿಡಿತಕ್ಕೆ ಅಂತ ಬೇರೆ ಬೇರೆ ಎಫ್.ಎಂ ವಾಹಿನಿಯೋರು ಭರ್ಜರಿ ಪೈಪೋಟಿ ನಡುಸ್ತಾ ಇದಾರೆ ಗುರು. ಸಹಜವಾಗಿ ಇರೋ ಕನ್ನಡ ಮಾರುಕಟ್ಟೆಯನ್ನು ಹೆಚ್ಚಿನವ್ರು ಮೊದಲು ಮೊದಲು ಉಡಾಫೆ ಮಾಡಿ ವಲಸಿಗ್ರನ್ನು ಮೆಚ್ಸೋ ಯತ್ನಕ್ಕೆ ಕೈ ಹಾಕಿದ್ದೂ, ಆಮೇಲೆ ಈ ಸಹಜ ಮಾರುಕಟ್ಟೇನ ಗುರುತ್ಸಿ ಬದಲಾದದ್ದು ನಾವು ನೋಡ್ತಾನೆ ಇದೀವಿ. ರೇಡಿಯೋ ಮಿರ್ಚಿ ಆ ಸಾಲಲ್ಲಿ ಮೊದಲ್ನೇದು. ಇದ್ರಲ್ಲಿ ಕನ್ನಡ ಹಾಡುಗಳು ಶುರುವಾಗಿದ್ದೆ ಆಗಿದ್ದು ಮಾರುಕಟ್ಟೇಲಿ ಮೊದಲ ಸ್ಥಾನಕ್ಕೆ ಜಿಗೀತು. ಇದರ ಯಶಸ್ಸಿನ ಬೆನ್ನ ಹಿಂದೇನೆ ಇತ್ತೀಚಿಗೆ ರೇಡಿಯೋ ಸಿಟಿ ಸಿಕ್ಕಾಪಟ್ಟೆ ಕನ್ನಡ ಹಾಡುಗಳು ಅನ್ನಕ್ ಶುರು ಹಂಚ್ಕೊಂತು. ಇದೀಗ ಬದಲಾವಣೆಯ ಸರದಿ ರೇಡಿಯೋ ’ಎಫ್.ಎಂ 104 - ಫಿವರ್’ದು. ಈ ಬದಲಾವಣೆಗಳು "ಬೆಂಗಳೂರಿನಲ್ಲಿ ಕನ್ನಡ ಇಲ್ಲ, ಇದು ಬಹುಭಾಷಾ ನಗರ, ಇದು ಕನ್ನಡಿಗರದ್ದಲ್ಲ, ಬೆಂಗಳೂರೇ ಬೇರೆ, ಕರ್ನಾಟಕವೇ ಬೇರೆ" ಅಂತೆಲ್ಲಾ ವಟಗುಟ್ಟುತಿರೋರ ಬಾಯಿಗೆ ಬೀಗ ಹಾಕೋದ್ರಲ್ಲಿ ಅನುಮಾನವೇ ಇಲ್ಲ! ಏನಂತೀ ಗುರು?

13 ಅನಿಸಿಕೆಗಳು:

Anonymous ಅಂತಾರೆ...

ಬೆಂಗಳೂರಿನಾಗ್ ವ್ಯಾಪಾರ ವ್ಯವಹಾರ ಮಾಡಿ ಉದ್ಧಾರ ಆಗಬೇಕು ಅಂದ್ರ ಅದಕ್ಕೆ ಇರು ಒಂದೇ ಹಾದಿ ಅಂದ್ರ ಕನ್ನಡ ಅಂತ ಎಲ್ಲಾರಕಿಂತ ಮೊದಲು ಅರ್ಥ ಮಾಡ್ಕೊಂದೊರು ರೇಡಿಯೋ ಮಿರ್ಚಿದವರು ರೀ. ಅವರನ್ನ ನೋಡಿ ಬ್ಯಾರೆ ಎಲ್ಲ ಸ್ಟೇಷನ್ ದವರು ಬುದ್ಧಿ ಕಲ್ತಾರ್ ರೀ. ದಿನಾಲು ಪ್ರತಿಯೊಬ್ಬ ಕನ್ನಡಿಗನ ಜೀವನದ ಒಂದು ಭಾಗ ಆಗಿರು ಬಗ್ಗೆ ನಮಗೆ ಹೆಮ್ಮೆ ಆಗತೆತಿ ಅಂತ ರೇಡಿಯೋ ಮಿರ್ಚಿಯವರು ಹೇಳಕೊಂಡಾರ್ ರೀ. (http://www.indiantelevision.com/release/y2k8/may/mayrel36.php) ಬೆಂಗಳೂರಿನಾಗ್ ಕನ್ನಡ ಭಾಷೆ ಎಷ್ಟು ಮುಖ್ಯ ಅನ್ನುದು ಅವರ ಮಾತಲ್ಲೇ ವ್ಯಕ್ತವಾಗತೇತಿ ರೀ.

Anonymous ಅಂತಾರೆ...

ಪಾಪ, ಹಿಂದಿ ಜ್ವರ ಹತ್ತಿ ಸೊರಗಿದ್ರು !
ಫಿವರ್ ಎಫ್.ಎಂ ಅಂತ ಚಾಲು ಮಾಡಿ ಹಿಂದಿ ಜ್ವರ ಹತ್ತಿದವ್ರ ಹಂಗ ಹಿಂದಿ ಹಾಡು, ಹಿಂದಿ ಕಾರ್ಯಕ್ರಮ ಮಾಡ್ಕೊಂಡು ಹತ್ ಹತ್ರ ೧ ವರ್ಷ ಲಬೊ ಲಬೊ ಅಂತ ಬಾಯಿ ಬಡಕೊಂಡರೂ ಈ ಫಿವರ್ ಎಫ್.ಎಂ ಕಡೆ ಯಾವ ಮಗಾನು ತಿರಗಿ ನೋಡಲಿಲ್ಲ. ಯುವ ಜನರು ಕುಣಿದಾಡು ಹಾಡ ಹಾಕ್ತೆನಿ ಅಂತ ಬಂದ ಇವರು ಬೆಂಗಳೂರನಾಗ್ ಏನಿದ್ರು ಹಿಂದಿ ನಡಿಯುದ, ಇಲ್ಲಿ ಯಾವ ನನ್ ಮಗಾ ಕನ್ನಡ ಕೇಳತಾನ್ ಅಂತ ಮೊದಲು ಸೊಕ್ಕು ಮಾಡಿದ್ರು. ಅತ್ಲಾ ಕಡೆ ರೇಡಿಯೋ ಮಿರ್ಚಿ, ರೇಡಿಯೋ ಸಿಟಿ , ಬಿಗ್ ಎಫ್.ಎಂ, ಎಸ್ ಎಫ್.ಎಂ ಎಲ್ಲಾರೂ ಕನ್ನಡ ಹಾಡು, ಕನ್ನಡ ಕಾರ್ಯಕ್ರಮ ಮಾಡಿ ರೊಕ್ಕ ಮಾಡುದ ನೋಡಿದ ಮೇಲೆ ಬುದ್ಧಿ ಕಲ್ತಾರ್ ರೀ.

Prashanth Urala. G ಅಂತಾರೆ...

Fever 104 nalli kannada hadu hecchagi keli bartha idru, avara belagina karyakrama "Back to school" nalli kannadadalli keloprashnege uttara kodo kannadigaru mathra thamma english vyamoha bittu kododilla. RJ Rajesh nadsikodo e karyakramadalli kannadadallE prashne kelidru, adara spardhigalu hecchagi english nalle uttara kottu thamma bhasheyanne maritha idaralla... idakke enu helbeku guruuu ???

Anonymous ಅಂತಾರೆ...

nanu kelta ideeni guru .. nijakku olleya munsoochane ..

jai KARNATAKA MAATHE

Anonymous ಅಂತಾರೆ...
This comment has been removed by a blog administrator.
Prashanth P ಅಂತಾರೆ...

The anonymous above is junk person. Let us not waste time in responding to him.

Jaasti Swanta mattu swalpa dub maDida haaDugaLu.... oTTInalli kannada.....

isn't it wonderful !!

Anonymous ಅಂತಾರೆ...

Anonymous, you don't have the guts to give your name. I can only pity you for your thinking that all Kannada songs are copy of your trashy Tamil, Telugu songs. Your stupidity that stations were forced to play Kannada songs deserves neglect. The stations are far more wiser that you are, they know how to survive here.

Priyank ಅಂತಾರೆ...

Ha hah..
FM stations were forced ante.
ha hah.
When customers have options, they go for the best one. Thats what happened here.

"namige force maaDtidaare" anta yaavudaadroo FM station avaru nimage phone maaDi kashTa heLkondra ?

sadaa ಅಂತಾರೆ...

i dont think all songs is being copied by old tamil or telugu but 10%
songs copied

Anonymous ಅಂತಾರೆ...

very good move from fever fm. I have written about this when radio city started playing kannada songs. http://yourharsha.com/2008/02/05/why-bangalores-radio-fms-should-play-kannada-songs/

Golden Giri ಅಂತಾರೆ...

nice songs i wish you best of luck keep rocking

Prashanth Urala. G ಅಂತಾರೆ...

ಫೀವರ್ ೧೦೪ ಎಫ್ ಎಂ.... ಈಗ ಬೋಂಬಾಟ್ ಕನ್ನಡ ಅಷ್ಟೇ ಅನ್ನೋ ಸಾಲನ್ನ ಮತ್ತೆ ಮತ್ತೆ ಹೇಳ್ತಾ ಇದೆ.... ಮೊದಲು ಇಂಗ್ಲೀಷ್ ಮತ್ತೆ ಹಿಂದಿ ಹಾಕಿ, ನಂತರ ಅದನ್ನ ಹಿಂದಿ ಮತ್ತೆ ಕನ್ನಡ ಮಾಡಿ ಈಗ ನಮ್ಮ ನಾಡಿನ ಸೊಗಡು, ಕನ್ನಡಭಾಷೆಹಾಡುಗಳನ್ನ ಮಾತ್ರ ಹಾಕ್ತಾ ಇದಾರೆ.... ಇದು ಸಂತಸದ ವಿಷಯ....

ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ
~~~~~~~~~~~~~~~~~~~
ಕನ್ನಡವೇ ತಾಯ್ನಾಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ.
~~~~~~~~~~~~~~~~~~~

Anonymous ಅಂತಾರೆ...

ಹೌದು, ನಾನು ಸಹ ಇದನ್ನ ಗಮನಿಸಿದೆ.. ತುಂಬಾ ಸಂತೋಷ ಆಯ್ತು

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails