ನಮ್ಮೂರಾಗಿನ ಚುನಾವಣಾ ಬಿಸಿ ಇನ್ನೂ ಆರಿಲ್ಲ. ಈಗ ಗೆದ್ದೋರು ಯಾಕ್ ಗೆದ್ರು, ಸೋತೋರು ಯಾಕ್ ಸೋತ್ರು ಅನ್ನೋ ವಿಶ್ಲೇಷಣೆಗಳು ಮಸ್ತಾಗಿ ನಡೀತಾನೆ ಇದೆ ಗುರು. ಒಂದು ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷ ಗೆದ್ದು ಅಧಿಕಾರ ಹಿಡೀತಾ ಇದ್ರೆ ಇನ್ನೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸು ಎರಡನೇ ಸ್ಥಾನದಲ್ಲಿದೆ. ಮೂರನೆಯದಾದ ಜನತಾದಳ (ಜಾ) ಸೋತು ಸುಣ್ಣವಾಗಿ ಮೂರನೇ ಜಾಗದಲ್ಲಿದೆ. ಶೇಖರ್ ಗುಪ್ತಾ ಅನ್ನೋರು ಬರ್ದಿರೋ ಒಂದು ವಿಶ್ಲೇಷಣೆ ಪ್ರಕಾರ ಸ್ಥಳೀಯ ಅಜೆಂಡಾನೆ ಈ ಚುನಾವಣೆಯ ಟ್ರಂಪ್ ಕಾರ್ಡ್. ಜೊತೆಗೆ ಮುಂದಿನ ದಿನಗಳಲ್ಲಿ ಇದೇ ಪ್ರಾಮುಖ್ಯತೆ ಪಡೆಯೋ ಎಲ್ಲ ಸೂಚನೆಗಳೂ ಇವೆ ಗುರು.
ಭಾಜಪ ಬದಲಿಸಿದ ರಾಗ!
ಮೊದಲಿಗೆ ನಾಯಕನ ಆಯ್ಕೆ ಹೈಕಮಾಂಡ್ ಅಪ್ಪಣೇ ಹಾಗೆ ನಡ್ಯುತ್ತೆ ಅನ್ನದೆ ಯಡಿಯೂರಪ್ಪನವರನ್ನು ಮುಂದು ಮಾಡಿದ್ರು. ತಮ್ಮ ಮೂಲ ರಾಗವಾದ ಹಿಂದುತ್ವ, ಬಾಬಾಬುಡನ್ ಗಿರಿ ಬಗ್ಗೆ ಉಸಿರೆತ್ತದೆ ಹೊಗೆನಕಲ್ ಅಂದ್ರು, ಕನ್ನಡ ನಾಡಿನ ಏಳಿಗೆ ಅಭಿವೃದ್ಧಿ ಅಂತ ಮಾತಾಡುದ್ರು. ನರೇಂದ್ರ ಮೋದಿ ಥರದ ನಾಯಕ್ರುನ್ನ ಕರ್ಕೊಂಡು ಬಂದು ನಮ್ಮದು ಗುಜರಾತ್ ಮಾದರಿ ಅಂದರು. ಗುಜರಾತಿನಲ್ಲಿ ಯಾವ "ಗುಜರಾತಿ ಅಸ್ಮಿತಾ" ರಾಷ್ಟ್ರೀಯತೆಯ ಮಂತ್ರಕ್ಕಿಂತ, ಹಿಂದುತ್ವದ ಮಂತ್ರಕ್ಕಿಂತ ಹೆಚ್ಚಿನ ಕೆಲಸ ಮಾಡಿತ್ತೋ ಅದೇ ಕೆಲಸಾನ ಇಲ್ಲೂ ಪ್ರಾದೇಶಿಕತೆ ಬಗ್ಗೆ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತಾಡಿ ಮಾಡೊ ಪ್ರಯತ್ನ ಮಾಡುದ್ರು. ಯಾವ ಭಾಜಪ ರಾಜ್ಯಗಳ ನಡುವೆ ಗಡಿ ಬೇಡ, ಭಾಷಾವಾರು ಪ್ರಾಂತ್ಯ ಬೇಡ, ಅದೇನಿದ್ರೂ ಆಡಳಿತಕ್ಕೆ ಅನುಕೂಲ ಆಗೋ ಹಾಗೆ ಭಾರತಾನ ಉದ್ದುದ್ದ ಅಡ್ಡಡ್ಡ ಗೆರೆ ಎಳ್ದು ವಿಭಾಗ ಮಾಡಬೇಕು ಅಂತ ನಂಬುತ್ತೋ ಅದೇ ಬಿಜೆಪಿ... ಕನ್ನಡದ ಗಡಿಯಲ್ಲಿ ಕನ್ನಡ ವಾತಾವರಣ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ, ಡಾ.ರಾಜ್ ಸ್ಮಾರಕದ ಬಗ್ಗೆಯೆಲ್ಲಾ ತನ್ನ ಭರವಸೆ ಕೊಟ್ರು. ಒಟ್ಟಿನಲ್ಲಿ ಬೇಕೋ ಬೇಡವೋ ಸ್ಥಳೀಯತೆಯನ್ನು ಕಡೆಗಣಿಸೋ ರಾಷ್ಟ್ರೀಯತೆಗೆ ಗೆಲುವಿಲ್ಲ ಅಂತ ಅವ್ರೂ ಅರ್ಥ ಮಾಡ್ಕೊಂಡ ಹಾಗೆ ಕಾಣ್ತಿದೆ ಗುರು!
ತಮಾಷೆ ಅಂದ್ರೆ, ಎಲ್.ಕೆ.ಅಡ್ವಾಣಿಯೋರು ಕರ್ನಾಟಕದಲ್ಲಿ ತಾವು ಪ್ರಾದೇಶಿಕತೆಯ ತಂತ್ರವೇನೂ ಬಳಸಿಲ್ಲ ಅನ್ನೋದ್ರು ಮೂಲಕ ತಾವು ಮಾಡಿದ್ದು ಅದನ್ನೇ ಅಂದಿದಾರೆ. ಒಂದು ಅರ್ಥದಲ್ಲಿ ಪ್ರಾದೇಶಿಕತೆಗೆ ಮಹತ್ವ ನೀಡೋದೆ ರಾಷ್ಟ್ರೀಯತೆ ಅಂತ ಸಂದೇಶ ಕೊಡ್ತಿದಾರೆ ಗುರು!
ಪ್ರಾದೇಶಿಕ ಪಕ್ಷ!
ಕನ್ನಡನಾಡಿನಲ್ಲಿ ಸರಿಯಾದ ನಿಜವಾದ ಪ್ರಾದೇಶಿಕ ಪಕ್ಷ ಇನ್ನೂ ಹುಟ್ಟಿಲ್ಲದಿರೋ ಈ ಸಂದರ್ಭದಲ್ಲಿ ಖಾಲಿ ಇರೋ ಆ ಜಾಗಾನಾ ತುಂಬಕ್ಕೆ ಮುಂದಾಗಿದ್ದು ಜೆಡಿಎಸ್. ಆದ್ರೆ ಈ ಬಗ್ಗೆ ಅವರ ನಿಲುವು ಘೋಷಣೆ ಆಗಿದ್ದು ಹೆಂಗಾದ್ರೂ ಸೀಟು ಗೆಲ್ಲಬೇಕು ಅನ್ನೋ ತಂತ್ರವಾಗಿ ಕಿರುಲೋರ ಥರ ಕೇಳುಸ್ತಿತ್ತೇ ಹೊರತು ಬಲಿಷ್ಠವಾದ ಕನ್ನಡ ಸಿದ್ಧಾಂತವಾಗಿ ಕಾಣುಸ್ಲಿಲ್ಲ. ಕಾಂಗ್ರೆಸ್ಸು ನಮ್ಮ ನಾಯಕರ ಆಯ್ಕೆ ಗೆದ್ದಮೇಲೆ ಮಾಡ್ತೀವಿ, ಹೈಕಮಾಂಡ್ ಅನುಮೋದನೆ ಮಾಡುತ್ತೆ, ಅವ್ರು ಹೇಳಿದ ಹಾಗೆ ಮಾಡ್ತೀವಿ ಅಂತಂದು ಜನರಿಂದ ದೂರಾದ್ರು. ಇದಕ್ಕೆ ಪೂರಕವಾಗಿ ಕನ್ನಡದೋರ ಮುಂದೆ ದಿಗ್ವಿಜಯ ಸಿಂಗ್ ಥರದೋರುನ್ನ ಕರ್ಕೊಂಡು ಬಂದು ನಿಲ್ಸುದ್ರು. ಒಂದುಕಡೆ ಮೋದಿ ಥರದೋರು ಪ್ರಾದೇಶಿಕ ಏಳಿಗೆ ಅನ್ನೋ ಮಾತಾಡ್ತಿದ್ರೆ ಇವ್ರು ದಿಲ್ಲಿ ಗುಲಾಮಗಿರಿನ ಮೆರಸಕ್ ಬಂದೋರ ಹಾಗೆ ಕಂಡ್ರು. ಭಯೋತ್ಪಾದನೆ ಬಗ್ಗೆ ದನಿ ಎತ್ತಿದಾಗ್ಲೂ ಅವ್ರು ಹೆಚ್ಚು ಮಾತಾಡಿದ್ದು ಕಲಘಟಗಿ, ಹುಬ್ಳಿ ಬಗ್ಗೇನೆ. ಒಟ್ನಲ್ಲಿ ಬಿಜೆಪಿಯೋರು ಒಂದು ಪ್ರಾದೇಶಿಕ ಪಕ್ಷದ ಹಾಗೇ ಈ ಚುನಾವಣೆ ಎದುರಿಸಿ ಗೆದ್ರು.
ಇರಲಿ, ಗೆದ್ದಿದ್ ಆಯ್ತು. ಸರ್ಕಾರವೂ ಬರುತ್ತೆ. ಕನ್ನಡದೋರು ಮಾತ್ರಾ ಬಿಜಿಪಿ ಬಾಲ ಬಿಚ್ಚಿ ಹಿಂದಿ ರಾಷ್ಟ್ರಭಾಷೆ ಅನ್ನೋಕೆ, ಹಿಂದಿಗೆ ಉತ್ತೇಜನ ಕೊಡಕ್ಕೆ, ಪೊಳ್ಳು ರಾಷ್ಟ್ರೀಯತೆ ಮಂತ್ರ ಹಾಡಿ ಭಾರತವೆಲ್ಲಾ ಒಂದೇ, ಇಲ್ಲಿಗೆ ವಲಸಿಗ್ರು ಬಂದು ತುಂಬ್ಕೊಳ್ಳಲಿ, ರೈಲ್ವೇ ಕೆಲ್ಸ ಬಿಹಾರಿಗೆ ಸಿಕ್ರೂ ಪರ್ವಾಗಿಲ್ಲ, ಕಾವೇರಿ ತಮಿಳುನಾಡಿಗೆ ಹೋದ್ರೂ ಪರ್ವಾಗಿಲ್ಲ, ಬೆಳಗಾವಿ ಎಲ್ಲಿದ್ರೂ ಒಂದೇ, ಕರ್ನಾಟಕದ ಬಿಜೆಪಿ ತೆಲುಗ್ರು ಕೈಲಿದ್ರೂ, ಇಲ್ಲಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡುಗಳು ಹೋದ್ರೂ ಪರ್ವಾಗಿಲ್ಲ ಅಂತ ಅನ್ನದ ಹಾಗೆ ಎಚ್ಚರಿಕೆ ವಹಿಸಬೇಕು. ಏನಂತೀ ಗುರು?
3 ಅನಿಸಿಕೆಗಳು:
uttama lekhana..praadeshika tantra onde work out agodu...saamaanya manushyanige yava siddhantavu beDa, yava poLLu kathegaLu beDa..avarige bekirovudu subhadra jeevana..nemmadiya baduku..uttama moola bhoota soukaryagaLu..idannellaa yaar koDtaaro, avare uttama raajakaraNigaLu ashte..
karnatakada BJP yalli telugara praabalya jasti ide..avaru baala bicchade iro haage kannadigaru noDkobeku..telgu bhaashana, Hindi herike, maraThi uttejana enadru koDodu kanDre, munde BJP anno hesru karnatakadalli keLisbaardu..aa reeti paaTa kaliso shakti kannada matadaararigide
Lekhana chennagidhe. Idakke poorakavaagiruva mattondu lekhanavannu www.rediff.com nalli naanu odide. Adara link illide http://www.rediff.com/news/2008/may/30flip.htm
Idralli pradeshika nayakarannu kadeganisidhaga ada udahranegalannu kottidhdhare.
Idarinda thiliyutte, Pradeshika janara maryade, Pradeshika nayakra maryade, avara bhashe ivugalannu kaapaadabeku endu.
nivu haelodu nija aadru...
otnalli yavde sarkara bandru, ie mannigaagi janrigagi dudiyalae beku, ashte avra mantra aag beku...
bellary reddy dudd kotta antagli moDi modi madida antagli pille neva yettidre ashte, ivrigu mattu kumarsamy gu vyatasane illa.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!