ಚಿನ್ನದಂಥಾ ಖಜಾನಾ!

ಬೆಂಗಳೂರಿನ ಜಯನಗರದಲ್ಲಿ ಖಜಾನಾ ಅನ್ನೋ ಹಿಂದಿ ಹೆಸರಿನ ಒಂದು ಚಿನ್ನದ ಅಂಗಡಿ ಇದೆ. ಈ ಅಂಗಡಿ ಹೆಸರು ಕೇಳಿ ಇಲ್ಲೂ ಕನ್ನಡ ಮೂಲೆಗುಂಪಾಗಿರುತ್ತೆ ಅಂತಾ ಆ ಅಂಗಡಿ ಮುಂದೆ ಓಡಾಡೋವಾಗೆಲ್ಲಾ ಭಾಳ ಅನ್ನುಸ್ತಿತ್ತು, ಜೊತೆಗೆ ಈ ಅಂಗಡಿ ಬಗ್ಗೆ ಒಂಥರಾ ಅಲರ್ಜಿ ಶುರುವಾಗ್ಬಿಟ್ಟಿತ್ತು ಗುರು! ನಮ್ಮೂರಲ್ಲಿ ಬಂದು ತಮ್ಮ ಭಾಷೇಲಿ ಹೆಸರಿಟ್ಟುಕೊಳ್ಳೋ ಕಳಾಮಂದಿರ, ಮನ್ ಪಸಂದ್, ಅಡ್ಯಾರ್..ಇಂಥಾ ಅಂಗಡಿಗಳ್ನ ಕಂಡಾಗೆಲ್ಲಾ ಇವ್ರುಗೆ ತಾವಿರೋದು ಕನ್ನಡ ನಾಡಲ್ಲಿ ಅನ್ನೋದು ಅರಿವಿದ್ಯೋ ಇಲ್ವೋ ಅನ್ನಿಸೋದೂ, ಇಂಥವ್ರು ತಮ್ಮ ಅಂಗಡಿ ಮುಂಗಟ್ಟುಗಳಿಗೆ ಕನ್ನಡದ ಹೆಸರಾದ್ರೂ ಇಡಲಿ ಅನ್ಸೋದೂ, ಹಾಗೆ ಇಲ್ದಿದ್ರೆ ಉರುಕೊಳ್ಳೋದು ಕನ್ನಡದೋರ ಪಾಲಿಗೆ ಮಾಮೂಲಾಗಿಬಿಟ್ಟಿದೆ ಗುರು!

ಖಜಾನಾದಲ್ಲಿ ಕನ್ನಡದ ಖಜಾನೆ!

ಮೊನ್ನೆ ಇದೇ ಖಜಾನಾದ ಒಳಗಡೆ ಹೋಗೋ ಅವಕಾಶ ಒದಗಿ ಬಂದಿತ್ತು ಗುರು! ಒಳಗ್ ಹೋಗ್ತಿದ್ದ ಹಾಗೆ ಸ್ವಾಗತ ಸಿಕ್ಕಿದ್ದು ಕನ್ನಡದಲ್ಲಿ. ಒಳಗಡೆ ಹೋಗಿ ವ್ಯಾಪಾರ ಮುಗ್ಸಿ ಹೊರಗ್ ಹೊರಟಾಗ "ಸ್ವಾಮಿ, ಈ ಫೀಡ್ ಬ್ಯಾಕ್ ಫಾರಂ ತುಂಬಿಸಿಕೊಡಿ" ಅಂತ ಅಂದ್ರು. ಆ ನಮೂನೆ ಕನ್ನಡದಲ್ಲಿ ಇರೋದು ನೋಡಿ ಹಾಲು ಕುಡಿದಂಗೆ ಆಯ್ತು. ಕನ್ನಡ ಬರದೇ ಇರೋರಿಗೆ ಅದರ ಹಿಂಬದಿಯಲ್ಲಿ ಇಂಗ್ಲಿಷ್ ಭಾಷೆಯಲ್ಲೂ ನಮೂನೆ ಇತ್ತು. ಅಂಗಡಿಯೋರು ಕೊಟ್ಟ ಬಿಲ್ಲಲ್ಲಿ ಅಲ್ಲಿನ ಒಬ್ಬ ಸಿಬ್ಬಂದಿ ’ಶಿವು’ ಅಂತ ಕನ್ನಡದಲ್ಲಿ ಸಹಿ ಮಾಡಿದ್ದನ್ನೂ ಕಂಡಾಗ ಇನ್ಮೇಲೆ ಚಿನ್ನ ಅಂತ ತೊಗೊಂಡ್ರೆ ಈ ಅಂಗಡೀಲೆ ತೊಗೋಬೇಕು ಅನ್ಸಿದ್ದು ಸುಳ್ಳಲ್ಲ ಗುರು.
ಅಂಗಡಿ ಮಾಲೀಕರಿಗೆ ಮೆಚ್ಚುಗೆ ಹೇಳಿ ಹೊರಗ್ ಬಂದಾಗ "ಅದ್ಯಾಕೆ ನಮ್ಮೂರಿನ ಎಲ್ಲ ಅಂಗಡಿ, ಮುಂಗಟ್ಟು, ಮಳಿಗೆಗಳು ಇವ್ರುನ್ ನೋಡಿ ಪಾಠ ಕಲೀಬಾರದು? ಕನ್ನಡನಾಡಲ್ಲಿ ಕನ್ನಡದಲ್ಲೇ ಸೇವೆ ಕೊಡೋದು ಸರಿಯಾದದ್ದು, ಕನ್ನಡಾ ಬರದೇ ಇರೋರಿಗೆ ಇಂಗ್ಲಿಷ್ ಸಾಕು ಅಂದ್ಕೋಬಾರ್ದು" ಅನ್ನುಸ್ತಿತ್ತು ಗುರು!

5 ಅನಿಸಿಕೆಗಳು:

Anonymous ಅಂತಾರೆ...

Guru, yarigadru ee article bardora address gotta :

http://www.ibnlive.com/news/karnataka-may-not-be-best-for-nano--red-carpet/73871-3.html

Pls. send the addess of ABHIRRRRRRR and another Kumar, as I want to see them in hospital for two months !

Anonymous ಅಂತಾರೆ...

ಇನ್ಮುಂದೆ ನಾವು ಚಿನ್ನ ಕರಿದಿಸಬೇಕಾದರೆ ಇವರ ಅಂಗಡಿಯಲ್ಲೇ ಗುರು.......ಅಲ್ಲದೆ ಇತರರಿಗೂ ಇವರ ಅಂಗಡಿಯೇ ನನ್ನ ಸಲಹೆ.

ಎಲ್ಲರು ಇವರಂತೆ ಯೋಚಿಸಿದರೆ........ ಕರುನಾಡಲ್ಲಿ "ಸರ್ವಂ ಕನ್ನಡ ಮಯಂ"

ಶ್ವೇತ ಅಂತಾರೆ...

ಬಂಗಾರದ ಅಂಗಡಿಯವರು ಸಾಮಾನ್ಯವಾಗಿ ಕನ್ನಡದಲ್ಲೇ ಮಾತಡುವುದು ಬರೆಸಿಕೊಳ್ಳುವುದು ಎಲ್ಲ. ಯಾಕಂದ್ರೆ ಅವರಿಗೆ ಗೊತ್ತು ಬಂಗಾರ ಖರೀದು ಮಾಡುವುದು ಸಾಮಾನ್ಯವಾಗಿ ಲೋಕಲ್ ಜನ ಅಂತ. ಹೊರಗಿನವರನ್ನು ಕೆಲಸಕ್ಕೆ ಇಟ್ಟುಕೊಂಡರು ಅವರಿಗೆ ಕನ್ನಡ ಬರುತ್ತ ಇಲ್ವ ಅಂತ ನೋಡೆ ಇಟ್ಟುಕೊಳ್ಳುತ್ತಾರೆ. ಫೀಡ್ ಬ್ಯಾಕ್ ಫಾರಂ ಸಂಪೂರ್ಣ ಕನ್ನಡದಲ್ಲೇ ಇರುವುದು ನೋಡಿ ತುಂಬಾ ಸಂತೋಶ ಅಯ್ತು. ನೀವು ಅಂಗಡಿಯ ಾಲೀಕರಿಗೆ ಮೆಚ್ಚುಗೆ ಹೇಳಿದ್ದು ಕೂಡ ಒಳ್ಳೆಯದೆ.
ಎಲ್ಲಾದರು ಕೆಟ್ಟದ್ದು ನೋಡಿದಾಗ ಬೈದು ಬರೋದಷ್ಟೆ ಅಲ್ಲ, ಒಳ್ಳೆಯದು ನೋಡಿದಾಗ ಮೆಚ್ಚುಗೆ ಹೇಳೋದು ಅಷ್ಟೆ ಮುಖ್ಯ.
ಅಂದ ಹಾಗೆ ಜಯನಗರದಲ್ಲಿರುವ ಕನಿಶ್ಕ ಅಥವ ತನಿಶ್ಕ ಬಂಗಾರದಂಗಡಿಯಲ್ಲಿ ಅಷ್ಟು ಒಳ್ಳೆ ಕನ್ನಡ ವಾತಾವರಣ ಇಲ್ಲ. ಅಲ್ಲಿ ಕನ್ನಡ ಮಾತಾಡಿದರೆ ಸರಿಯಾಗಿ ರೆಸ್ಪಾಂಡ್ ಕೂಡ ಮಾಡಿರಲಿಲ್ಲ ಹಿಂದೆ ಒಮ್ಮೆ.

Anonymous ಅಂತಾರೆ...

ಕನಿಶ್ಕ ಅಥವ ತನಿಶ್ಕಗಳಲ್ಲಿ ಇನ್ನಮೇಲೆ ಖರೀದಿ ಮಾಡುವುದು ಬೇಡ. ಮಾಡಿದರೂ ಕನ್ನಡದಲ್ಲಿ ವ್ಯವಹಾರ ಮಾಡುತ್ತೇನೆ.

ಶಿಲ್ಪಾ ಅಂತಾರೆ...

ರೇಡಿಯೋದಲ್ಲಿ ಇವರ ಕನ್ನಡ ಜಾಹಿರಾತು ಕೆಳೀನೆ ಚಿನ್ನ ತಗೊಳೋದಿದ್ದರೆ ಇಲ್ಲಿಗೇ ಹೋಗಬೇಕು ಅಂತ ಯೋಚನೆ ಮಾಡುತ್ತಿದ್ದೆ, ಈಗ ಖಚಿತ ಆಯಿತು! :)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails