ಕರ್ನಾಟಕದ ಸರ್ಕಾರಿ ಅಂತರ್ಜಾಲದ ತಾಣಗಳಿಗೆ ಅದ್ಯಾಕೋ ಕನ್ನಡ ಕಂಡ್ರೆ ಅಲರ್ಜಿ ಅನ್ಸುತ್ತೆ ಗುರು ! ಬೇರೆ ಎಲ್ಲ ಹಾಗಿರಲಿ, ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಅಂತರ್ಜಾಲ ತಾಣ ನೋಡಿ ಬಿಟ್ರೆ, ಈ ನಾಡಿನ ಸರ್ಕಾರಕ್ಕೆ ಕನ್ನಡ ಅಂದ್ರೆ ಅದೆಂಥಾ ಮರ್ಯಾದೆ ಇದೆ, ಕನ್ನಡ ವಿಶ್ವವಿದ್ಯಾಲಯಕ್ಕೆ ಕನ್ನಡ ಅಂದ್ರೆ ಅದೆಷ್ಟು ಕಾಳಜಿ ಇದೆ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ ಗುರು.
ಈ ತಾಣದ ಕನ್ನಡ ಲಿಂಕು ಸತ್ತಿದೆ!
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವೆಬ್ ಸೈಟ್ ನ ಡಿಫಾಲ್ಟ್ ಭಾಷೆ ಕನ್ನಡ ಅಂತಾ ಏನಾದ್ರೂ ನಾವು ಅಂದು ಕೊಂಡಿದ್ರೆ ನಮಗಿಂತ ಪೆದ್ರು ನಮ್ಮ ನಾಡಲ್ಲಿ ಇಲ್ಲ ಗುರು. ಹೌದು, ಹಂಪಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣದ ಡಿ-ಫಾಲ್ಟ್ ಭಾಷೆ ಇಂಗ್ಲೀಷ್. ಕಾಟಾಚಾರಕ್ಕೆ ಅನ್ನೊ ಹಾಗೆ ಕನ್ನಡದ ಆವೃತ್ತಿ ಅಂತ ಒಂದು ವಿಭಾಗ ಮಾಡಿದ್ದಾರೆ, ಅಲ್ಲಿನ ಯಾವುದಾದ್ರು ಲಿಂಕ್ ಅಲ್ಲಿ ನಿಮಗೆ ಏನಾದ್ರೂ ಮಾಹಿತಿ ಕನ್ನಡದಲ್ಲಿ ಸಿಕ್ರೆ ನಿಮಗೆ ಹಂಪಿ ವಿ.ವಿಯ ಗೌರವ ಡಾಕ್ಟರೇಟ್ ಖಂಡಿತಾ ಕೊಡಬೌದು ಗುರು!
ಗರ್ಭ ಗುಡಿಲೇ ದೇವರಿಲ್ಲ !
ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೇ ನೆಲೆಸಿರುವ, ಕನ್ನಡಿಗರ ಹೆಮ್ಮೆಯ ಇತಿಹಾಸ ಸಾರುವ, ಕರ್ನಾಟಕ ಸಾಮ್ರಾಜ್ಯದ ಮೂಲ ಸ್ಥಾನ ಎನಿಸಿರುವ ಹಂಪಿಯಲ್ಲಿ ನೆಲೆಗೊಂಡಿರುವ ಈ ವಿಶ್ವವಿದ್ಯಾಲಯದ ಅಂತರ್ಜಾಲ ತಾಣದಲ್ಲಿ ಕನ್ನಡದ ಸ್ಥಿತಿ ನೋಡಿದಾಗ "ಊರ ತುಂಬ ಅಲಂಕಾರ ಇರೋ ದೇವಸ್ಥಾನದ ಗರ್ಭಗುಡಿಲಿ ದೇವರೇ ಇಲ್ಲ" ಅನ್ನುವ ಗಾದೆ ಮಾತು ನೆನಪಾಗುತ್ತೆ ಗುರು. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆ ಮಾಡುವುದಾಗಿ ದಿನವೂ ಜಪ ಮಾಡೋ ಸರ್ಕಾರದ ಮೂಗಿನ ತುದಿಯಲ್ಲೇ ಇಂತದೊಂದು ದೊಡ್ಡ ಅಸಹ್ಯ ನಡೀತಿದ್ರೂ ಸಂಬಂಧ ಪಟ್ಟೋರು ನಿದ್ದೆಲಿದ್ದಾರೆ ಅನ್ಸುತ್ತೆ ಗುರು!
10 ಅನಿಸಿಕೆಗಳು:
ಒ೦ದು ಮಾದರಿ ವಿ.ವಿ. ನಮ್ಮದು ಎ೦ದು ಹೇಳಿಕೊಳ್ಳಲು ಎಳ್ಳಷ್ಟೂ ಆಸ್ಪದ ನೀಡದಿರುವುದು ಶೋಚನೀಯವಾದ ಸ೦ಗತಿ.
ಹ೦ಪಿಯು ಕನ್ನಡದ ಇನ್ನೊ೦ದು ಹೆಸರು ಎ೦ದು ಹೆಮ್ಮೆಯಿ೦ದ ಬೀಗಬೇಕಿದ್ದ ಕನ್ನಡಿಗರು ಈ ಅ೦ತರ್ಜಾಲತಾಣವನ್ನು ನೋಡಿದಮೇಲೆ ಉದ್ರಿಕ್ತರಾಗುವುದು ಖ೦ಡಿತ. ತಮ್ಮ ಗುರಿಗಳಿಗೆ ತದ್ವಿರುದ್ದವಾಗಿ ಸಾಗುತ್ತಿರುವ ಹ೦ಪಿ ವಿ.ವಿ ದ ಉಪ ಕುಲಪತಿಗಳವರ ಮಾತುಗಳನ್ನು ಇಲ್ಲಿ ನೋಡಿ:
http://www.kannadauniversity.org/vcmessage.html
ಯಾಕೆ ಗುರುಗಳೇ... “ಕನ್ನಡ ವಿಭಾಗ”ದಲ್ಲಿ “ಇಂಗ್ಲಿಷ್ ಆವೃತ್ತಿ” ಅನ್ನೋ ಲಿಂಕ್ ವರ್ಕ್ ಆಗ್ತಾ ಇದೆಯಲ್ಲಾ... :)
ಈ ಲೇಖನ ಓದಿದ್ ಮೇಲೆ ನಂಗನಿಸಿದ್ದು “ಹರ ಕೊಲ್ಲಲ್ ಪರ ಕಾಯ್ವನೆ?” ಅನ್ನೋ ಮಾತು.
-ಶೀನ್ಯಾ
thumbaa besarada sangathi, maadidduno maharaya... estigella naave kaarana. Rajakaranigalu kandithaa kannadavannu aadalitha bhaasheyaagi 100% jaarimaadalaararu. Bengalurinda 28, gadipradeshagala ondu 30 talukugalandi arisibaruva raajakaaranigalu annya bhaashigarannu ediri haakikollalaalaru, ekendare avaru swarthigalu. Naavo oggattu elladavaru. Sayuttiruvudu unnathavaada, thaarkikavaagi thumbaa meleruma namma matrubhaashe..
ಮೊದಲಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವೆಬ್ ಸೈಟ್ ಮಾಡಿರೋದು ಯಾರಿಗಾಗಿ ಅನ್ನೋದನ್ನ ವಸಿ ನೋಡೊಣ. ಕನ್ನಡ ಸಾಹಿತ್ಯ, ಕಲೆ, ಸಂಗೀತ, ಶಿಲ್ಪಕಲೆಯ ಅಧ್ಯಯನಕ್ಕಾಗಿ ಕನ್ನಡಕ್ಕಾಗೇ ಒಂದು ವಿಶ್ವವಿದ್ಯಾಲಯ ಪ್ರಾರಂಭಿಸಬೇಕು ಅನ್ನುವ ಬೇಡಿಕೆಗೆ ಮಣಿದ ನಮ್ಮ ಸರ್ಕಾರ ೧೯೯೧ ರಲ್ಲಿ, ಕನ್ನಡ, ಕರ್ನಾಟಕದ ಇತಿಹಾಸದಲ್ಲಿ ಅತಿ ಮಹತ್ವದ ಸ್ಥಾನ ಪಡೆದಿರುವ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿತು. ಹಾಗೆ ಶುರುವಾದ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ, ಕಲೆ, ಸಂಗೀತ ಕಲಿತಿನಿ ಅಂತ ಯಾರ ಬರ್ತಾರೆ ಗುರು ?? ಇ ನಾಡಿನ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಕಲಿಬೇಕು ಅನ್ನೊ ಕನ್ನಡಿಗರೋ? ಇಲ್ಲ, ಇದ್ಯಾವುದಕ್ಕೂ ಸಂಬಂಧವಿರದ ಕನ್ನಡೇತರರೋ? ಹಾಗಿದ್ದಲ್ಲಿ, ಯಾರಿಗಾಗಿ ಇ ವೆಬ್ ಸೈಟ್ ಇಂಗ್ಲೀಷಿನಲ್ಲಿದೆ? ಯಾಕಾಗಿ ಇ ನಾಡಿನ ರಾಜ್ಯ ಭಾಷೆಯಲ್ಲಿ ಇಲ್ಲ? ಹಾಗೂ ಒಂದು ಪಕ್ಷ ಅಮೇರಿಕದಿಂದ್ಲೋ, ಯುರೋಪಿಂದ್ಲೋ, ಇಲ್ಲ ನಮ್ಮ ದೇಶದ ಬೇರೆ ರಾಜ್ಯದಿಂದ ಕನ್ನಡ ಸಾಹಿತ್ಯ, ಕಲೆ ಅಧ್ಯಯನ ಮಾಡೋಕೆ ಬರೋರು ಇದ್ದು, ಅವರಿಗಾಗಿ ಇಂಗ್ಲೀಷ್ ಅಲ್ಲಿ ಮಾಡಿದಿನಿ ಅಂದ್ರೆ, ಸರಿ, ಹಾಗೆ ಬರೊ ೪-೫% ಜನಕ್ಕಾಗಿ ಇಷ್ಟೆಲ್ಲ ಕಷ್ಟ ಪಡೋರು, ಅಲ್ಲಿ ಕಲಿಯೋಕೆ ಬರೋ ೯೫% ಜನ ಕನ್ನಡಿಗರಿಗಾಗಿ ಮೊದಲು ಕನ್ನಡದಲ್ಲಿ, ಇ ತಾಣ ಮಾಡಬೇಕಾದ್ದು ನ್ಯಾಯ ತಾನೇ ಗುರು ?
website, by default kannadadalli iddu english version oduvavarige ondu option kodabeku.. kanndave illade hodre .. idoLLe nagepaataligeedaguva sanhathi.. alli kelsa madovrige, aadaLita nadasovrige ishtu "COMMON SENSE" ilvalla? ivrella "HELU" tintarenu?
"ಬೇಲಿನೆ ಎದ್ದು ಹೊಲ ಮೇಯ್ದಂತೆ" ಅನ್ನೋ ಗಾದೆ "ಹಂಪಿ ಕನ್ನಡ ವಿಶ್ವವಿದ್ಯಾಲಯ"ದ ವಿಷಯದಲ್ಲಿ ನಿಜ ಆಗೋಯ್ತು ಗುರು......ಇಲ್ಲಿ ಸಣ್ಣ ಬದಲಾವಣೆ ಅಂದ್ರೆ.....
ಬೆಂಗಳೂರು ವಿ.ವಿ - ಬ್ರಷ್ಟಾಚಾರ ಅನ್ನೋದು ತಾಂಡವ ಆಡುತ್ತಿದೆ.
ಹಂಪಿ ಕನ್ನಡ ವಿ.ವಿ - ಕನ್ನಡದ ಕೊಲೆ ಅನ್ನೋದು ರಾಜ-ರೋಷದಿಂದ ಮೆರೆಯುತ್ತಿದೆ....
ಇದಕ್ಕಿಂತ ವಿಪರ್ಯಾಸ ಬೇಕಾ ಗುರು :( ಛೆ !
idakintha dodda viparyaasa berondilla guru. kannadavannu yetthi hidibekadavre heege madudre hege. kannadigarige english/hindi yemba bhootha bidovaregu kannada uddara agolla. ivaagale hinge... innu mundina peeLige kalitha iro vidanagaLannu gamanisidare kannadada sthithi yen aga bahudu yendu oohisikollodeee aathankavannuntu madutte guru
ivattu hindigaru bartare.. nale, america davaru illi kelasakkagi bartare... aaga nodbeku maja.. avru kannada mataadtini andru bidDe english nalle matadi avara hattira shabhash anta aniskondu saythare nam jana... ade bahiranga shuddi. Siva...
hampi hospet ballary kade hodre bari telagu mattu hindi matado jana sigtarare ... hotel ella avarade ... kannadalli matadidre hindi matadi , international hotel anta helo jana iddare alli .
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!