ಇವತ್ತಿನ ವಿ.ಕ ನೋಡಿ ಬಾಳ ಅಂದ್ರ ಬಾಳ್ ಖುಷಿ ಆತ್ ನೋಡು ಗುರು! ಅಗದಿ ಹೋಳಗಿ-ತುಪ್ಪ ಉಂಡಷ್ಟ ಖುಷಿ ಆತು. ಆಡಳಿತದಲ್ಲಿ ಕನ್ನಡ ಅನುಷ್ಟಾನ ಅಂತ ಬರೇ ಬಾಯಿ ಮಾತಿನಾಗ ಕೇಳಕೊಂತ್ ಇದ್ದ ಕನ್ನಡಿಗರಿಗೆ ಒಂದ ಸಿಹಿ ಸುದ್ದಿ ಬಂದೇತಿ ಗುರು! ಅದೇನಪಾ ಅಂದ್ರ ಬಿ.ಎಮ್.ಟಿ.ಸಿಯ ಕೆಂಪೇಗೌಡ ನಿಲ್ದಾಣ ಈಗ ಸಂಪೂರ್ಣ ಕನ್ನಡಮಯ ಆಗೇತಂತ.
ಕನ್ನಡ ಅನುಷ್ಟಾನ ಅನ್ನೂದು ದೊಡ್ಡ ತ್ರಾಸಿನ ಮಾತಲ್ಲ!
ಕರ್ನಾಟಕ ರಾಜ್ಯ ಹುಟ್ಟಿ ೫೦ ವರ್ಷದ ಮ್ಯಾಲ್ ಆದ್ರೂ ಇನ್ನು ತಂಕ, ಆಡಳಿತದಲ್ಲಿ ಕನ್ನಡ ಅನುಷ್ಟಾನ ಅನ್ನುದು ಬರೇ ಕಡತದಾಗ ಅಷ್ಟೇ ಐತಿ. ಕನ್ನಡ ಅನುಷ್ಟಾನ ಮಾಡುದು ಖರೇನು ಅಷ್ಟ ತ್ರಾಸ್ ಐತಾ ಅಂತ ಕನ್ನಡಿಗರಿಗೆ ಅನ್ಸಾಕ್ ಶುರು ಆಗಿತ್ತು. "ಆಡಳಿತದಲ್ಲಿ ಕನ್ನಡ ಅನುಷ್ಟಾನ ಅಂದ್ರ ಭಾಳ ತ್ರಾಸಿನ ಕೆಲ್ಸ ಏನಲ್ಲಾ, ಅದಕ್ಕೆ ಬೇಕಾಗಿರುದು, ಬರೇ ಮಾಡಬೇಕು ಅನ್ನು ಮನಸ್ಸು, ಛಲ" ಅನ್ನುದನ್ನ ಬಿ.ಎಮ್.ಟಿ.ಸಿ ತನ್ನ ಈ ಹೆಜ್ಜಿ ಮೂಲಕ ತೋರಸೆತಿ ಗುರು. ಎಲ್ಲ ಖರೇ, ಬಿ.ಎಮ್.ಟಿ.ಸಿ ದವರು ಅಂತಾದೇನ್ ಮಾಡ್ಯಾರ್ ಅಂತ ಸ್ವಲ್ಪ ನೋಡುಣ ಬರ್ರಿ:
ನಿಲ್ದಾಣದಿಂದ ಹೊರಡು ಬಸಗೋಳ್ ನಾಮ ಫಲಕದಿಂದ ಹಿಡಿದು ಎಲ್ಲ ಕಡತಗಳ ವಿಲೇವಾರಿವರಿಗೆ ಎಲ್ಲ ಕನ್ನಡದಾಗ್ ಮಾಡ್ಯಾರ್ ಅಂತ್ರಿ.
ತಮ್ಮ ಎಲ್ಲ ಸಿಬ್ಬಂದಿ, ಚಾಲಕರು-ನಿರ್ವಾಹಕರಿಗೆ ಮಂದಿ ಕೂಡಾ ಕನ್ನಡದಾಗೇ ವ್ಯವಹರಿಸಾಕ್ ಸೂಚನೆ ನೀಡ್ಯಾರ್ ಅಂತ್ರಿ.
ಬ್ಯಾರೆ ಇಲಾಖೆಯಿಂದ ಅಂಗ್ರೇಜಿಯಾಗ ಪತ್ರ ಬಂದ್ರ ಅದನ್ನ ನಯವಾಗಿ ತಿರಸ್ಕರಿಸಿ, ಕನ್ನಡದಲ್ಲೇ ಪತ್ರ ವ್ಯವಹಾರ ಮಾಡುವಂತೆ ಸೂಚನೆ ನೀಡ್ಯಾರ್ ಅಂತ್ರಿ.
ಮೆಜೆಸ್ಟಿಕ್ಕಾಗಿನ ಬಸ್ ನಿಲ್ದಾಣದಾಗ್ ಮಾಹಿತಿ ಕೇಳಕೊಂಡ ಬರು ಮಂದಿಗೆ "ದಯಮಾಡಿ ಕನ್ನಡದಾಗೇ ಮಾತಾಡ್ರೀ" ಅಂತ ನಾಜೂಕಾಗಿ ಹೇಳಿ ನಮ್ಮ ಭಾಷಿ ಬಗ್ಗೆ ಪ್ರೀತಿ, ಅಭಿಮಾನ ಮೂಡು ಹಂಗಾ ವ್ಯವಹಾರ ಮಾಡಾಕ್ ಹೇಳ್ಯಾರ್ ಅಂತ್ರಿ.
ಬೆಂಗಳೂರಿನ ಕದಾ
ಮೆಜೆಸ್ಟಿಕ್ ಅನ್ನುದು ನಮ್ಮ ಬೆಂಗಳೂರಿನ ಕದಾ ಇದ್ದಂಗ ಐತ್ರಿ. ಈ ಊರಿಗೆ ಬಂದ ನೆಲೆಸು ಯಾರಿಗೆ ಆದ್ರೂ ಕನ್ನಡದ ಬಗ್ಗ ಜಾಗ್ರುತಿ ಮೂಡಿಸಾಕ್, ಇಲ್ಲಿನ ಭಾಷೆ, ಇಲ್ಲಿನ ಜನ ಜೀವನದ ಬಗ್ಗೆ ತಿಳಿ ಹೇಳಾಕ್ ಅಲ್ಲಿನ ಬಸ್ ನಿಲ್ದಾಣನೇ ಒಂದ ಮುಖ್ಯ ಸ್ಥಳ ಆಗೆತಿ. ಇಲ್ಲಿ ಬ್ಯಾರೆ ಭಾಷೆ ಮಂದಿಗೂ " ಇದು ಕರ್ನಾಟಕ, ಇಲ್ಲಿ ಕನ್ನಡದಾಗ್ ವ್ಯವಹಾರ ಮಾಡಬೇಕು, ಕನ್ನಡ ಬರಂಗಿಲ್ಲ ಅಂದ್ರ ಕನ್ನಡ ಕಲಿ ಬೇಕು ಇಲ್ಲ ಅಂದ್ರ ಜೀವನ ಮಾಡುದ ತ್ರಾಸ್ ಆಗತೇತಿ" ಅನ್ನು ಸಂದೇಶ ಕೊಡಾಕ ಬರೋಬರಿ ಜಗಾ ಇದು. ಬಿ.ಎಮ್.ಟಿ.ಸಿ ಇಟ್ಟಿರು ಈ ಹೆಜ್ಜಿ ಬಾಳ ಅಂದ್ರ ಬಾಳ ಚಲೊ ಐತಿ. ನಾವೆಲ್ಲ ಕೂಡಿ ಅವರಿಗೆ ನಮ್ಮ ಅಭಿನಂದನೆ ಹೇಳಬೇಕ್ರಿ. ಹಿಂಗೆ ಒಂದೊಂದೆ ಇಲಾಖೆಗೋಳು ಕನ್ನಡ ಅನುಷ್ಟಾನಕ್ಕ್ ಗಮನಾ ಕೊಟ್ರ ಕನ್ನಡ ಆಡಳಿತ ಭಾಷೆಯಾಗಿ ಅನುಷ್ಟಾನ ಆಗುದನ್ನ ತಡಿಯಾಕ್ ಯಾ ಮಗನ ಕೈಯಾಗು ಆಗುದಿಲ್ಲ, ಏನಂತೀರ್ರೀ ಗುರುಗಳಾ?
10 ಅನಿಸಿಕೆಗಳು:
Bhaala khare helidriyappa, sharanri ! Innu khare handra - namaga madras naaga aagidri. I used to go to Madras by train, it was painful to talk to auto walla to reacha destination. I started flying to madras, went by pre-paid taxi, even then I was dropped in middle of road with my luggage in heavy rain just because I didn't give the taxiwalla 50 more to take to the location (was already written in pre-paid receipt). Went to Bombay, same experience. Went to Paris, asked the taxi to take me to "Arch of Victory", he could n't understand, my daughter had to say arch de traimph to reach location ! Went to Vietnam, had to use sign language to even to go to toilet ! Went to Singapore, asked for rice and rasam, he gave me non-veg rasam (FIRST TIME IN MY LIFE I REALIZED THAT THERE IS KOLI RASAM), I should have asked for saiva rasam it seems, where....in Singapore ! Why the .... shouldn't we make everyone speak in Karnataka, if not go back wher eyou came from ! I know there are lot of intellectuals reading this saying this is narrow mind, yes we've narrow minds...the same is not applicable to kongas/french :)
ಎಲ್ಲ ಕಡಿ ಕನ್ನಡ ಮಾಡೂದು ಅಂದ್ರ, ಇಂಗ್ಲೇಶ್ ಪದಗಳನ್ನ ಕನ್ಡ ಲಿಪಿಯಾಗ ಬರೆಯೂದು ಅಂತೇನು. ಏನೂ ಇಲ್ಲದಾಗ ಇಷ್ಡಾದ್ರೂ ಆತಪ, ಅಂತ ಖುಷಿ ಪಟ್ಗೋಳೊದಲ್ಲ, ಆಗುವಾಗ ಅದು ಸರಿ ರೂಪದಾಗ ಆದ್ರೇನೆ ಛಂದ ಅಲ್ಲೇನು ? ನಗರ ಸಾರಿಗೆಯಾಗ, ಮಹಾನಗರಪಾಲಿಕೆಯಾಗ ಈಗ ಕನ್ನಡ ಅನುಷ್ಠಾನ ಅಂದ್ರೆ ಇಂಗ್ಲೀಶ್ನಾಗ ಯೋಚನಾ ಮಾಡಿ, ಕನ್ನಡದಾಗ ಇಳಸೋದು ಆಗಿಯದ. ಕನ್ನಡದಲ್ಲೇ ಯೋಚನೆಮಾಡೋದು ಶುರುಆಗಬೇಕಾಗಿಯದ. ಮೊದ್ಲು ಈ ಅಧಿಕಾರಿಗಳಿಗೆ ಸರಿಗನ್ನಡ ಕಲಿಸಬೇಕಾಗದ ಅನ್ನಿಸ್ತದ ನೋಡ್ರಿ. mysore road deviation road ಅನ್ನೋದನ್ನ ಕನ್ನಡ ಲಿಪಿಯಾಗ ಬರೆದರೆ ಕನ್ನಡ ಆಡಳಿತಕ್ಕ ಬಂದ್ಹಾಂಗ ಆತೇನು ?
srikanth avare,
english padagaLanne kannada dalli baredre adu kannada khandita agalla,,
BMTC yavaru aa ritiyalli kannada anusTana maadtaanu illa,,
kelavondu english padagaLannu kannada kke bhashantarisuvudu aabhasa aagutte,,
olle praythnakke ondishtu bembala kododu mukhya.. aagabekaagiro kelsa innu idey annodu nija..
enguru,, olle story helidakke dhanywada
ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ ಅಂದ ಹಾಗೆ, ಬೆಂಗಳೂರಿಗೆ ಬಂದವರು ಮೆಜೆಸ್ಟಿಕ್ಕಿಗೆ ಬರದೆ ಇರುತ್ತಾರೆಯೆ?
ಇಂತಹ ಜಾಗದಲ್ಲಿ ಕನ್ನಡ ಅನುಷ್ಟಾನ ಮಾಡಿದ್ದನ್ನು ಕೇಳಿ ಖುಶಿಯಾಯಿತು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಂದಿ ಇದನ್ನು ನೋಡಿ ಕಲಿಯ ಬೇಕು
Snehitare
Istu dina naanu ooduthaa idde idu ondu olle suddi... naanu namma naadinalli iradirabahudu aadare namma naadina abhiruddi suddi keli bahala santhosha aaithu.. Bangalore saarige nildanadavaru maadidda ee hegge bahala santhosha thandittu... yellaru idde reethi nadtithaare andukollaona, jai karnataka maathe
ಮಹಾರವರೆ,
ನ್ಯಾರೋ ಮೈ೦ಡ್ ಖ೦ಡಿತ ಅಲ್ಲ.. ಜನರ ಪ್ರತಿಕ್ರಿಯೆ ಹೇಗೆ ಬದಲಾಗುತ್ತದೆ ಅಲ್ವಾ ಸಾರ್? ೩೦೦ ಕಿ.ಮೀ. ಆಕಡೆ ತಮಿಳು ಮಾತಾಡಿದರೆ ಅಲ್ಲಿ ಅವರದು ನ್ಯಾರೋ ಮೈ೦ಡ್ ಅಲ್ಲವ೦ತೆ.
ಬಿ.ಎಮ್.ಟಿ.ಸಿ ಬಸ್ ಗಳಲ್ಲಿ ಬ೦ದಿರುವ ನೂತನ ಚೀಟಿ ಯ೦ತ್ರವು ಇ೦ಗ್ಲೀಷಿನಲ್ಲಿ ಮಾತ್ರ ಚೀಟಿ ಕೊಡುತ್ತದೆ... ಆ ಯ೦ತ್ರಕ್ಕೂ ಕನ್ನಡದ ಹುಚ್ಚು ಹಿಡಿಸಬೇಕಿದೆ! ಬಿ.ಎಮ್.ಟಿ.ಸಿಯವರನ್ನು ಒಮ್ಮೆ ವಿಚಾರಿಸಬೇಕು.
ಸ೦ಪದದಲ್ಲಿ ಇದೇ ವಿಷಯವನ್ನು ಸ೦ಗನಗೌಡರು ಬರೆದಿರುವುದನ್ನು ನೋಡಿ...
July 2, 2008
ಕನ್ನಡ ಅಂಕಿಗಳು ಮಾಡಿದ ಪಾಪವೇನು?
http://sampada.net/blog/%E0%B2%B8%E0%B2%82%E0%B2%97%E0%B2%A8%E0%B2%97%E0%B3%8C%E0%B2%A1/02/07/2008/9666
ನೋಡ್ ಗುರು ನಮ್ ರಾಜ್ಯದಲ್ಲಿ ಕನ್ನಡದ ಕಂಪು ಎಲ್ಲಾ ಕಡಿ ಬೀರಬೇಕಂದ್ರೆ.... ಮೊದಲು ಕನ್ನಡ ತಂತ್ರಾಂಶದಲ್ಲಿ ಆಗಿರೋ ದೋಷಗಳನ್ನ ಸರಿಮಾಡಬೇಕು.... ನಮ್ಮ ಶಿಕ್ಷಣದಲ್ಲಿ ಕನ್ನಡದ ಬಳಕೆ ಸರಿಯಾಗಿ ಆಗಬೇಕು (ಉದಾ: ಅಂಗ್ಲಾ ಲಿಪಿ ಕನ್ನಡದ ಉಚ್ಛಾರಣೆ ಒಂದು... ಎರಡು...) ನಮ್ಮ ಆಡಳಿತ ಬಾಷೆ ಕನ್ನಡ ಆಗಬೇಕು.
Konegu nodri 50 Varsha hidithu nama Rajadhani Bus Nildhanadhalli English Hesarannu Kannada Lipiyalli hAkalu.... Yeno Hasidha hottege thangala ganji huidhang aihu nodi....
Jai Karnataka
Hora rajyadinda barorige edu kasta agabahudu,addrinda avara ankulakku yeenadru krma togobeeku alvaaa...........
@Praveen,
ಕರ್ನಾಟಕದ ಇತರೆ ಊರುಗಳಿಂದ ಬಾರೋ ಜನರಿಗೆ ಅನುಕೂಲ ಆಗುವಂತಹ ವ್ಯವಸ್ಥೆ ಮೊದಲು ಬರಲಿ.
ಕನ್ನಡಿಗರಿಗೆ ಎಲ್ಲೆಡೆ ಕನ್ನಡದಲ್ಲೇ ವ್ಯವಹರಿಸಕ್ಕೆ ಆಗುವಂತಹ ವ್ಯವಸ್ಥೆ ಬರಲಿ.
ಜರ್ಮನ್ ಭಾಷಿಕನೊಬ್ಬ ಜರ್ಮನಿಯಲ್ಲಿ ಎಲ್ಲೇ ಹೋದರೂ, ಜರ್ಮನ್ ಭಾಷೆಯಲ್ಲಿ ವ್ಯವಹರಿಸಬಲ್ಲಂತ ವ್ಯವಸ್ಥೆ ಇರುವ ಹಾಗೇ, ಕರ್ನಾಟಕದಲ್ಲೂ ಕನ್ನಡ ಭಾಷೆಯಲ್ಲಿ ವ್ಯವಹರಿಸಬಲ್ಲಂತ ವ್ಯವಸ್ಥೆ ಬೇಕು.
ಆಗ, ಹೊರರಾಜ್ಯದಿಂದ ಬರುವ ಜನರಿಗೆ ಅನುಕೂಲ ಆಗುವಂತೆ ಏನು ಮಾಡಬಹುದು ಎಂಬ ಬಗ್ಗೆಯೂ ಯೋಚಿಸಬಹುದು.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!