ಗ್ರಾಹಕನ ಈ ಹಕ್ಕು ಅತಿಮುಖ್ಯ...

ಕರ್ನಾಟಕದಲ್ಲಿನ ಗ್ರಾಹಕರಲ್ಲಿ ತಮ್ಮ ಸಾಮಾನ್ಯ ಹಕ್ಕುಗಳ ಅರಿವು ಹೆಚ್ಚುತ್ತಿದೆ ಎಂದು ಹೇಳುತ್ತಾ ಇಲ್ಲಿ ಇತ್ತೀಚೆಗೆ ರಾಷ್ಟ್ರೀಯ ಗ್ರಾಹಕ ಹಕ್ಕು ದಿನಾಚರಣೆ ಹೆಸರಿನ ಕಾರ್ಯಕ್ರಮವೊಂದು ನಡೀತು. ಮಾರುಕಟ್ಟೆಗೆ ಹೋಗುವ ಗ್ರಾಹಕನಿಗೆ ತನ್ನ ಹಕ್ಕುಗಳ ಅರಿವು ಇರುವುದು ಬಹಳ ಮುಖ್ಯವಾಗುತ್ತೆ. ಅದೂ ಇವತ್ತಿನ ಉದಾರೀಕರಣ ಮತ್ತು ಜಾಗತೀಕರಣದ ಪ್ರಭಾವವಿರುವ ನಮ್ಮ ಮಾರುಕಟ್ಟೆಯಲ್ಲಂತೂ ಗ್ರಾಹಕನ ಜಾಗೃತಿ ಅತಿ ಮುಖ್ಯವಾಗೋಗಿದೆ. ಹೀಗಾಗಿ ಕನ್ನಡಿಗರ ಮಧ್ಯೆ ಗ್ರಾಹಕರ ಸಾಮಾನ್ಯ ಹಕ್ಕುಗಳ ಅರಿವು ಹೆಚ್ಚಿರುವುದು ನಮಗೆ ಸಂತಸ ಕೊಡುವಂತದ್ದು. ಆದರೆ ಕರ್ನಾಟಕದಲ್ಲಿ ಗ್ರಾಹಕರ ಅನುಭವಗಳನ್ನ ಮೆಲಕು ಹಾಕುತ್ತಾ ಈ ಜಾಗೃತಿಯಲ್ಲಿ ಏನೋ ಕೊರತೆ ಇರುವುದು ಕಾಣತ್ತೆ ಗುರು. ಏನದು ಬನ್ನಿ ನೋಡಣ.
ಅಂದು - ಗುಣಮಟ್ಟ, ಪ್ರಮಾಣ, ಬೆಲೆ ಮಾತ್ರಾ : ಇಂದು - ಮಾಹಿತಿ, ಭಾಷೆ ಕೂಡಾ
ಮಾರುಕಟ್ಟೆಯಲ್ಲಿ ಕೊಂಡ ಸಾಮಾನಿನ ಬೆಲೆ, ತೂಕ, ಗುಣಮಟ್ಟ ಇವೇ ಕೆಲವು ವಿಚಾರಗಳಲ್ಲಿ ಇದುವರೆಗೂ ಗ್ರಾಹಕ ತನ್ನ ಹಕ್ಕುಗಳನ್ನು ಚಲಾಯಿಸಿ ಸಮಸ್ಯೆ ಬಗೆಹರಿಸ್ಕೋಬಹುದಿತ್ತು. ಆದರೆ ಇಂದಿನ ಜಾಗತೀಕರಣಗೊಂಡ ಮತ್ತು ಉದಾರೀಕರಣಗೊಂಡ ಮಾರುಕಟ್ಟೆಯ ಲಕ್ಷಣಗಳೇ ಬೇರೆ. ಇಲ್ಲಿ ವಸ್ತುಗಳೊಡನೆ ಮಾಹಿತಿ, ಸೇವೆ, ಸೌಕರ್ಯ ಎಲ್ಲವೂ ಬಿಕರಿಗಿದೆ. ಇಂದು ನಾವು ಇವುಗಳೆಲ್ಲದರ ಗ್ರಾಹಕರಾಗ್ತಿದ್ದೇವೆ. ಈ ಹೊಸ ಪರಿಸ್ಥಿತಿಯಲ್ಲಿ ಗ್ರಾಹಕನ ಹಕ್ಕುಗಳಿಗೆ ಹೊಸದೊಂದು ಆಯಾಮ ಹುಟ್ಟಿಕೊಂಡಿದೆ. ಅದೇನಂದ್ರೆ "ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಥವಾ ಸೇವೆಯು ಗ್ರಾಹಕನಿಗೆ ಸರಿಯಾದ್ದೋ ಅಲ್ವೋ, ಉತ್ತಮವಾದ್ದೋ ಇಲ್ವೋ, ಅವನಿಗೆ ಯಾವುದೇ ಹಾನಿಯುಂಟು ಮಾಡುತ್ತೋ ಇಲ್ವೋ..." ಇವೇ ಮುಂತಾದ ವಿಷಯಗಳ ಬಗ್ಗೆ ಗ್ರಾಹಕನಿಗೆ ಮಾಹಿತಿ ಕೊಡಲಾಗಿದೆಯೇ ಅನ್ನೋದು. ಹಾಗೆ ಕೊಡೋ ಮಾಹಿತಿ ಗ್ರಾಹಕನಿಗೆ ಅರ್ಥ ಆಗ್ದೇ ಇದ್ರೆ ಅಂಥಾ ಮಾಹಿತಿ ಕೊಟ್ಟೂ ಕೊಡದಹಾಗಲ್ವೇ? ಇದೆಲ್ಲದರ ಅರ್ಥ ಏನಪ್ಪ ಅಂದ್ರೆ ಗ್ರಾಹಕನಿಗೆ ಅವನ ನುಡಿಯಲ್ಲಿ ಈ ಮಾಹಿತಿ ಸೇವೆಯನ್ನು ಕೊಡಬೇಕು ಅನ್ನೋದು. ಏಕೆಂದರೆ ತನ್ನ ಭಾಷೆಯಲ್ಲಿರುವ ಮಾಹಿತಿಯೇ ಯಾವುದೇ ಗ್ರಾಹಕನಿಗೆ ಸರಿಯಾಗಿ ತಿಳಿಯುವುದು, ಚೆನ್ನಾಗಿ ಅರ್ಥವಾಗುವುದು. ಜರ್ಮನಿಯಲ್ಲಿ ಗ್ರಾಹಕರಿಗೆ ಸೇವೆ, ಮಾಹಿತಿ ಎಲ್ಲವೂ ಜರ್ಮನ್ ನುಡಿಯಲ್ಲಿ ಹೇಗೋ, ಇಸ್ರೇಲಿನಲ್ಲಿ ಹೀಬ್ರೂ ನುಡಿಯಲ್ಲಿ ಹೇಗೋ ಹಾಗೇ ಕರ್ನಾಟಕದಲ್ಲಿ ಗ್ರಾಹಕ ಸೇವೆ ಕನ್ನಡದಲ್ಲಿ ಸಿಕ್ಕೋದೆ ಸರಿಯಾದ್ದು. ಇಂಗ್ಲಿಷಿನಲ್ಲೋ, ತಮಿಳಲ್ಲೋ, ಹಿಂದಿಯಲ್ಲೋ ಅಲ್ಲ! ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕನ ಭಾಷೆಯ ಪ್ರಯೋಗದ ವಿಚಾರ ಅವನ ಹಿತ ಕಾಪಾಡಲು ಅತಿ ಮುಖ್ಯ ಆಯಾಮವೆಂದು ಹೇಳಬಹುದು.
ಗ್ರಾಹಕ ಹಕ್ಕುಗಳಲ್ಲಿ ಭಾಷಾ ಆಯಾಮ!
ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ಸಿಗಬೇಕಾದ ವಸ್ತುವೋ, ಸೇವೆಯೋ ಅವನಿಗೆ ಸರಿಯಾಗಿ ಸಿಗದೇ ಇರೋದ್ರಿಂದ ತೊಂದರೆ ಉಂಟಾಗಬಹುದು. ಇಂತದ್ದೇ ತೊಂದರೆ ಅಂತ ನಿಖರವಾಗಿ ನಮ್ಮ ಗ್ರಾಹಕ-ಕಾನೂನು ಹೇಳದಿದ್ದರೂ ಸಾಮಾನ್ಯವಾಗಿ ತೊಂದರೆಗಳಾದಾಗೆಲ್ಲಾ ಗ್ರಾಹಕರಿಗೆ ಅವರ ಹಕ್ಕುಗಳ ಪ್ರಕಾರ ನ್ಯಾಯ ಸಿಕ್ಕೇ ಇದೆ. ಆ ಕಾನೂನಿನ ಈ ಒಂದು ಭಾಗವನ್ನ ಸೂಕ್ಷ್ಮವಾಗಿ ನೋಡಿದರೆ ಈ ಮಾತು ಅರ್ಥವಾದೀತು:
Section 2(1)(g) of the Act provides that, "deficiency" means any fault, imperfection, shortcoming or inadequacy in the quality, nature and manner of performance which is required to be maintained by or under any law for the time being in force or has been undertaken to be performed by a person in pursuance of a contract or otherwise in relation to any service.
From this definition it can be said that
(i) "Deficiency" means any fault, imperfection, shortcoming or inadequacy in the quality, nature and manner of performance ...

ಹಾಗೆಯೇ, ಮಾರಾಟಕ್ಕಿರುವ ಸಾಮಾನೊಂದರ ಮೇಲೆ ಗ್ರಾಹಕನಿಗೆ ಅರ್ಥವಾಗದಂತೆ (ಅಂದರೆ ಅವನದಲ್ಲದ ಭಾಷೆಯಲ್ಲಿ) ಮಾಹಿತಿಯಿದ್ದಲ್ಲಿ ಅದು ಕೂಡಾ ಗ್ರಾಹಕನಿಗೆ ದೊರಕಿಸೋ ಅಸಮರ್ಪಕ ಸೇವೆಯೆನ್ನಿಸುತ್ತದೆಯಲ್ವಾ ಗುರು?

ಗ್ರಾಹಕರಾಗಿ ನಾವು ಮಾಡಬೇಕಾದ್ದು?

ಕನ್ನಡ ನಾಡಿನಲ್ಲಿ ಗ್ರಾಹಕರಿಗೆ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಕನ್ನಡದಲ್ಲಿ ಗ್ರಾಹಕ-ಸೇವೆಗೆ ಒತ್ತಾಯಿಸಬೇಕಾದ್ದು ನಮ್ಮ ಕರ್ತವ್ಯ. ಜನರಲ್ಲಿ ಈ ವಿಚಾರದ ಬಗ್ಗೆ ಅರಿವು ಮೂಡಿಸಲು ಮುಂದಾಗೋಣ. ಹೊಸ ವರ್ಷದ ಹೊಸ್ತಿಲಿನಲಿ ನಿಂತು ಇನ್ನು ಮುಂದೆ ಇಂತಹ ಅನ್ಯಾಯಗಳನ್ನು ಆಗಬಿಡುವುದಿಲ್ಲ ಮತ್ತು ಅವುಗಳ ವಿರುದ್ಧ ಒಗ್ಗಟ್ಟಿನಿಂದ ದನಿಗೂಡಿಸಿ ಕನ್ನಡದಲ್ಲಿ ಗ್ರಾಹಕ ಸೇವೆಗೆ ಒತ್ತಾಯ ಮಾಡೋಣ, ಗ್ರಾಹಕ ನ್ಯಾಯಾಲಯಗಳಿಗೆ ದೂರು ಸಲ್ಲಿಸಲೂ ಆ ಮೂಲಕ ನಮ್ಮ ಹಕ್ಕನ್ನು ದಕ್ಕಿಸಿಕೊಳ್ಳಲೂ, ಕನ್ನಡದಲ್ಲಿ ಸೇವೆ ನಿರಾಕರಿಸುವವರಿಗೆ ತಕ್ಕ ಪಾಟವನ್ನು ಕಲಿಸಲೂ ಮುಂದಾಗೋಣ ಬಾ ಗುರು!

2 ಅನಿಸಿಕೆಗಳು:

Kishore ಅಂತಾರೆ...

ಗ್ರಾಹಕ ನ್ಯಾಯಾಲಯಗಳ ಬಗ್ಗೆ, ಕನ್ನಡಿಗನ ಹಕ್ಕುಗಳ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಆಗಬೇಕು. RBI - Ombudsman ವರೆಗೂ ಹೋಗಿ ಹೋರಾಟ ಮಾಡುವುದು ಹೇಗೆ೦ಬ ಮಾಹಿತಿ ಕನ್ನಡಿಗನಿಗೆ ತಿಳಿದಿರಬೇಕು. ಇದರ ಬಗ್ಗೆ ಪ್ರಚಾರ ಪತ್ರಿಕೆಗಳಿ೦ದ ಹಿಡಿದು ಟಿ.ವಿ. ಮಾಧ್ಯಮದಲ್ಲೂ ಚರ್ಚೆ ಆಗಬೇಕು. ಯಾವ ರೀತಿ ಹೋರಾಡಿದರೆ ಮಾತ್ರ ಕನ್ನಡಿಗನ ಹಿತ ಕಾಯ್ದುಕೊಳ್ಳಲು ಸಾಧ್ಯ ಎ೦ಬುದರ ಬಗ್ಗೆ ಚರ್ಚೆಗಳು ಆಗಬೇಕು.

ಈ ರೀತಿ ಮಾಹಿತಿಗಳನ್ನು ಕಲೆ ಹಾಕಿದ ನ೦ತರ ಗ್ರಾಹಕನಾದವನಿಗೆ ಹೋರಾಟ ಮಾಡಲು ಧೈರ್ಯ ಬರುತ್ತದೆ. ಇ೦ದಿನ ದಿನ ಕನ್ನಡದಲ್ಲಿ ಸೇವೆ ಕೇಳಿದರೆ ಅಪರಾಧ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವ ಬ್ಯಾ೦ಕ್ ಅಧಿಕಾರಿಗಳ ವಿರುದ್ಧ ಕ್ರಮತೊಗೊಬೇಕು ಎ೦ದರೆ, ಕನ್ನಡಿಗನಿಗೆ ತನ್ನ ಹಕ್ಕು ಏನೆ೦ಬುದರ ಪರಿಚಯ ಇರಬೇಕು.

Anonymous ಅಂತಾರೆ...

ಒಳ್ಳೆ ಬೆಳವಣಿಗೆ... ದುರಂತ ಅಂದ್ರೆ ಕರ್ನಾಟಕ ಸರ್ಕಾರದ್ದೇ ಆದ ಈ ವೆಬ್ಸೈಟ್ ನೋಡಿ :
http://www.mysoresandal.co.in/ , ನಾನಾ ದೇಶದ ಭಾಷೆಗಳಲ್ಲಿರೋ ಮಾಹಿತಿ ಯಾಕೋ ಕನ್ನಡದಲ್ಲೇ ಇಲ್ಲ , ಇನ್ನು ಕೆಲವು ಎಫ್ ಎಂ ತಾಣಗಳಲ್ಲಿ ಮೈಸೂರ್ ರೋಜ್ ನ ಜಾಹಿರಾತುಗಳು ಕೇವಲ ಹಿಂದಿ ಹಾಗು ಇಂಗ್ಲಿಷ್ ನಲ್ಲಿ ಮೂಡಿ ಬರ್ತಾ ಇದೆ... ಇಂತಹ ದೀಪದಡಿ ಕತ್ತಲನ್ನ ಹೋಗಲಾಡಿಸುವವರು ಯಾರು ?

ಕ್ಲಾನ್ಗೊರೌಸ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails