ಇವತ್ತು ಬೆಂಗಳೂರೆಂಬ ಬೆಂಗಳೂರು ಎಷ್ಟೊಂದು ದೊಡ್ಡದಾಗಿದೆಯಲ್ವಾ? ಈ ಬೆಂಗಳೂರಲ್ಲಿ ದೀವಟ್ರಾನಹಳ್ಳಿ ಯಾವ್ದು ಗೊತ್ತಾ ಅಂದ್ರೆ ಹೇಗಪ್ಪಾ ಅಂತಾ ತಲೆ ಕೆರಕೋತಾ ಇದೀರಾ ಗುರು? ಇರಲಿ, ಈ ಹಳ್ಳಿಗೆ ಆ ಹೆಸರು ಹ್ಯಾಗ್ ಬಂತೋ ಮೊದಲು ಹೇಳ್ತೀವಿ ಕೇಳಿ.
ಸ್ವಾಮಿಭಕ್ತಿಗೆ ಒಲಿದ ಒಡೆಯರು!
ಹಿಂದೆ ಅಂದ್ರೆ ಮೈಸೂರನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವ್ರು ಆಳ್ತಿದ್ದ ಕಾಲದಲ್ಲಿ, ಮಹಾರಾಜರು ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ರಂತೆ. ಹೀಗೆ ಮಹಾಸ್ವಾಮಿಗಳು ಬರ್ತಾರೆ ಅಂದಾಗ ಬೆಂಗಳೂರಿನ ಹೊರವಲಯದ ಒಂದು ಪ್ರದೇಶದ ಮೂಲಕಾನೆ ಹಾದು ಬರಬೇಕಿತ್ತಂತೆ. ಹಾಗೆ ಅವ್ರು ಬರೋವಾಗ ಪ್ರತೀಸಾರ್ತಿನೂ ರಾಮ ಅನ್ನೋ ಒಬ್ಬ ಹಳ್ಳಿಗ ಗೌರವದಿಂದ ’ದೀವಟಿಗೆ’ ಸಲಾಮು ಮಾಡ್ತಿದ್ನಂತೆ. ಹೀಗೆ ಪ್ರತೀಸಾರಿ ವಿನಯದಿಂದ ಶ್ರದ್ಧೆಯಿಂದ ಮಹಾರಾಜರಿಗೆ ’ದೀವಟಿಗೆ ಸಲಾಮು’ ಸಲ್ಲಿಸುತ್ತಿದ್ದ ಅವನಿಗೆ ಅಲ್ಲೇ ಹತ್ತಿರದಲ್ಲಿ ಮನೆ ಕಟ್ಕೊಳಕ್ ಅವಕಾಶ ಮಾಡಿಕೊಟ್ರಂತೆ. ರಾಮ ಗುಡಿಸಲು ಕಟ್ಕೊಂಡ. ಅವನ ಗುಡುಸ್ಲು ಸುತ್ತಾ ಮನೆಗಳಾಗಿ ಆ ಬಡಾವಣೆ ’ದೀವಟಿಗೆ ರಾಮನಹಳ್ಳಿ’ ಆಯ್ತಂತೆ. ಮುಂದೆ ಅದು ದೀವಟ್ರಾಮನ ಹಳ್ಳಿ ಆಗಿ ಆಮೇಲಿಂದ ದೀವಟ್ರಾನ ಹಳ್ಳಿ ಆಯ್ತಂತೆ. ಇವತ್ತಿಗೂ ಆ ಬಡಾವಣೆಯಲ್ಲಿರೋ ಹಿರಿಯರ ಬಾಯಲ್ಲದು ’ದಿವಟ್ರಾನಹಳ್ಳೀ’ನೆ. ಯಾವುದಪ್ಪಾ ಈ ಏರಿಯಾ? ಯಾವುದೇ ಶಾಸನ, ತಾಮ್ರಪತ್ರ ಅಥವಾ ಇತರೆ ದಾಖಲೆಗಳಲ್ಲಿ ದೀವಟಿಗೆ ರಾಮನಿಗೆ ರಾಜರು ನಿವೇಶನ ನೀಡಿದ ದಾಖಲೆ ಇರದಿದ್ದರೂ ಆ ಪ್ರದೇಶ ಆ ಹೆಸರು, ಹೆಸರಿನ ದಂತಕತೆ ಇತಿಹಾಸವನ್ನು ಉಳಿಸಿಕೊಂಡು ಬಂತು. ಆದರೆ ಇವತ್ತಿನ ದಿನ ಆ ಜಾಗಾನಾ ದೀವಟ್ರಾನಳ್ಳಿ ಅಂತನ್ನಲ್ಲಾ... ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರೋ ಬಿ.ಎಚ್.ಇ.ಎಲ್ ಸಮೀಪದ ದೀಪಾಂಜಲಿ ನಗರವೇ ಈ ದೀವಟ್ರಾನಳ್ಳಿ.
( ಈ ಮಾಹಿತಿ ಡಾ. ಎಂ.ಚಿದಾನಂದಮೂರ್ತಿಗಳ "ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ" ಎಂಬ ಹೊತ್ತಿಗೆಯಲ್ಲಿದೆ)
ಹೆಸರುಗಳ ಬದಲಾವಣೆ ಇತಿಹಾಸಕ್ಕೆ ಅಪಚಾರ?
ಪ್ರತಿ ಪ್ರದೇಶಕ್ಕೂ ಅದು ದಾಖಲಾಗಿರಲಿ ಇಲ್ಲದಿರಲಿ ಅದಕ್ಕೊಂದು ಇತಿಹಾಸವಿರುತ್ತದೆ, ಸೊಗಡಿರುತ್ತದೆ. ದೀವಟ್ರಾಮನಳ್ಳಿ ದೀಪಾಂಜಲಿನಗರವಾಗೋದೂ, ಸೂಳೆಕೆರೆ ಶಾಂತಿಸಾಗರವಾಗೋದೂ, ಮೇಟಗಳ್ಳಿ ಮಥುರಾನಗರವಾಗೋದೂ, ಬ್ಯಾಡರಹಳ್ಳಿ ಬೃಂದಾವನನಗರವಾಗೋದೂ, ಚಿಕ್ಕಬಳ್ಳಾಪುರ ವಿಶ್ವೇಶ್ವರಯ್ಯ ಜಿಲ್ಲೆ ಆಗೋದೂ, ಕೋತಿಬಂಡೆ ಮಾರುತಿ ಮಂದಿರವಾಗೋದೂ, ಆನೆಪಾಳ್ಯ ಗಜೇಂದ್ರನಗರವಾಗೋದೂ ನಮ್ಮ ಇತಿಹಾಸಕ್ಕೆ ನಾವೆಸಗೋ ಅಪಚಾರ ಅಲ್ವಾ ಗುರು?

11 ಅನಿಸಿಕೆಗಳು:
ಎಶ್ಟ ಸರತಿ ಇದನ್ನೇ ಬರೀತೀರಿ..
ಅದಕ್ಕೆ ಏನು ಮಾಡೋಣ ಹೇಳಿರಿ! ಸರಕಾರ ಕನ್ನಡದ ಉತ್ಕೃಷ್ಟತಾ ಸಂಸ್ಥೆ ತಗೀತಿದೆ.. ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಕೋಟಿಕೋಟಿ ಸುರೀತಿದೆ..
ಏನ್ ಮಾಡಣ! ನಮ್ ಕರ್ಮ
ಎಲ್ಲಾ ಸರಿ ಸಾಮೆರ.. ಆದ್ರೆ ಚಿದಾನಂದ ಮೂರ್ತಿಯವರ ಕೃತಿ - "ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ" ಯಾ ಹೆಸರಿನಲ್ಲಿ ಎಷ್ಟು ಕನ್ನಡ ಸಿಗ್ತದೆ, ನೀವೇ ಹೇಳ್ರಲಾ..
ಮಾಯ್ಸಣ್ಣಾ,
ಗುರುಗಳು ಎಶ್ಟ ಸರತಿ ಬರಿತರಿ ಅನ್ನೋದು ಮುಖ್ಯ ಅಲ್ಲ, ಮೊದಲು ಅದರ ಬಗ್ಗೆ ತಿಳಕಂಡು, ಬೇರೆಯವರಿಗೂ ತಿಳಿಸಣ್ಣಾ... ಸಾಧ್ಯ ಆದರಿ ಏನು ಮಾಡಣ ಅಂತ ಚರ್ಚೆ ಮಾಡೋದು ಬಿಟ್ಟು, ಯಾಕೆ ಅದನ್ನೆ ಬರಿತಿರಿ ಅಂತ ಟೀಕೆ ಮಾಡಬ್ಯಾಡ. ನಿನ್ನೊಬ್ಬನಿಗೆ ಗೊತ್ತಿದ್ರೆ ಲೋಕಕ್ಕೆಲ್ಲಾ ಗೊತ್ತೈತೆ ಅನ್ಕಾಬೇಡ.
ನಮ್ಮ ಬಡಾವಣೆಲಿ ಇಂತ ಹೆಸರು ಬದಲಾವಣೆ ಆಗಿದೆ ಅಂತ ಗೊತ್ತಾದ್ರೆ, ನಮ್ಮ ಏರಿಯಾ ರಾಜಕೀಯ ಮುಖಂಡ್ರನಾಗಲೀ, ಕ.ರ.ವೇ ಮುಖಂಡ್ರನಾಗಲೀ ಹಿಡಿದು ಅದನ್ನ ತಿರಗ ಮುಂಚಿನ ಹೆಸರಿಗೆ ಬದಲಾಯಿಸೋದಕ್ಕೆ ಪ್ರಯತ್ನ ಮಾಡಬಹುದಲ್ವ?
ಪ್ರಕಾಶಣ್ಣೋ...
ನಾನ್ ಬರೀಬ್ಯಾಡಿ ಎಂದು ಬುದ್ಯೋರ್ಗೆ ಯೋಳಲಿಲ್ಲ. ಅವರು ಬರಿಯೋದ್ ನಂಗೆ ಸ್ಯಾನೇ ಮೆಚ್ಗೆ.
ನಾನ್ ಬೇಜಾರ್ ಅಂಗೆ ಯೋಳ್ಕೊಂಡಿದ್ದು.
ನಮ್ ಮಂಡ್ಯದಾಗೂ ಇಂಗೇ ಮಾಡವ್ರೆ... ’ಕ್ಯಾತನಗೆರೆನ’ ’ಚಾಮುಂಡೇಶ್ವರಿ ನಗರ’ ಅಂತಲೋ, ಗುತ್ತಲ್ನ ಸ್ವರ್ಣಸಂದ್ರ ಅಂತಲೋ, ಹೊಸಳ್ಳಿನ ಗಾಂದಿನಗರ ಅಂತ್ಲೋ, ಕಾಳಮುದ್ದೇನದೊಡ್ಡಿ ’ಬಾರತಿ ನಗರ’, ಬೀಮಣ್ಣನ ತೋಟ ’ಅಶೋಕ ನಗರ’ ಅಂತ್ಲೋ, ತೂಬಿನಕೆರೆ ’ವೇದಿಕ್ ನಗರ’ ಅಂತಲೋ....
ಏನ್ ಮಾಡಣ. ವೋಗಿ ಏಳಿದ್ರೆ ಚಾಮುಂಡಿ ಅಮ್ಮ ಯೆಸರು ವೋಗಲೋ ಅಂತಾರೆ, ಇಲ್ಲ ಅಳ್ಳಿಗಮಾರ ಅಂತ ಓಡಿಸ್ತಾರೆ. ಸುಮ್ಕೆ ಒದಿಸ್ಕೊಂಡ್ ಬರ್ಬೇಕು.
ನಮ್ ಕನ್ನಡದ್ ಯೆಸರು ಸೇರಕ್ಕಿಲ್ಲ ಸರಕಾರ್ದೋರಿಗೆ. ಏನ್ಮಾಡಣ ಯೋಳಿ. ಮಾಡಕ್ ಬೇರೆ ಕೇಮಿಲ್ವ ಅಂತ ಉಗಿತಾರಾಸೆಯ.
-ಮಾಯ್ಸ!
arre maruti mandir nahi pata anda yavono. He was talking about Kothi Bande. Now people are ashamed to call it as Kothi Bande. Ellirodu neenu andre "Kothi bande pakkadalle irodu namma mane" annodakke hudugirge nachike agatte.. adakke avru maruti mandir ke paas antare.
Bheema nagara anda nanna colleauge. Nimge yavdu anta gottaitha ?
Adu namma Jeevan Bheema nagara - Bala bheema ille bandu 2 varsha vaasa vagidnante.
Alla siva - adu Jeeva Vime palya/nagara agabekittu. haage agalilla.
ಜೀವನ ಬೀಮ ನಗರ ’ತಿಪ್ಪಸಂದ್ರ’ದ ಮೇಲೇ ನಿಂತಿರೋದಲ್ವ!
Sadya kannada namadheyagalna idtha iddaralla, angla hesarugalu kanditha beda
ಹೂ ಕಣ್ರನ್ನ, ಇಷ್ಟ ದಿಸ ರಾರಾಜಿಸ್ತಿದ್ದ "ಹೆಬ್ಬಾಗಿಲು" ಕೂಡ "ಮಹಾ ದ್ವಾರ" ಗಳಾಗಿಬಿತ್ತವೆ !!!
ಮುಂಬರುವ ದಿವಸಗಳಲ್ಲಿ:
*) ನಂದಿ ಬೆಟ್ಟ - ನಂದಿ ಪರ್ವತ
*) ಗಾಳಿ ಆಂಜನೇಯ - ಪವನ ಹನುಮಾನ್
*) ದೊಡ್ದಾನ್ಜನೆಯ - ಬೃಹತ್ ಹನುಮಾನ್
*) ದೊಡ್ಡ ಆಲದ ಮರ - ಬೃಹತ್ ಕ್ಷೀರ ವೃಕ್ಷ
ಮೊನ್ನೆ ತಾನೇ ಒಂದ್ ಮದುವೆ ಕರೆಯೋಲೆ ಮೇಲೆ ನೋಡಿದ್ ನೆನಪು - "ವಿವಾಹ ಮಹೋತ್ಸವ ಆಗಮನ ಪತ್ರಿಕೆ" !!
ನಮ್ ಎಲ್ಲಾ ಹೆಸರುಗಳು ಸಂಸ್ಕೃತಮಯ ಆದ್ಮ್ಯಾಕ್ ಕೂಡ ಊಟಿಯಲ್ಲಿರೋ "ದೊಡ್ಡ ಬೆಟ್ಟ", "ಬೃಹತ್ ಪರ್ವತ" ವಾಗೋಲ್ಲ ಅನ್ನೋ ದಿಟವಾದ ನಂಬಿಕೆ ಐತೆ ಕಣ್ರನ್ನ. ಯಾಕೆ ಅಂದರೆ ತಮಿಳರು ಕನ್ನಡಿಗರ ಥರ ಬೇರೆ ನುಡಿಗೆ ಮಣೆ ಹಾಕೋಲ್ಲ.. ಅದರಲ್ಲೂ ಸಂಸ್ಕೃತ ಅಂದರೆ ಅವರು ಎಚ್ಚೆತ್ಕೊತಾರೆ.
ಬರ್ಲಾ... ಒಹ್ ಸಾರಿ... ಅಹಂ ಗಚ್ಚಾಮಿ...
aanepaalya--gajendranagara
gowripaalya--goripaalya (alli thumba muslimariddaare antha)
Mundina dinagaLalli
maarathhaLLi maraathanagara aaguththe.
Moodalayyanagiri moodlagiri aaythu. samskrutha andre baayi bido jana adanna chandradrona parvatha antha kareethaare.
Namage thuLu maathaado janagala kecchirabEku. Ale esrugaLna estu oppavaagi madikkandavare nodi.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!