"ಕಲಿಕೆ" ರಾಜ್ಯದ ಪಟ್ಟೀಗೆ ಬರಬೇಕು!

"ಕನ್ನಡ ನುಡಿಯ ಬಗ್ಗೆ, ನಾಡಿನ ಬಗ್ಗೆ ಕೀಳರಿಮೆ ಹುಟ್ಟುಹಾಕ್ತಿರೋ ಪಠ್ಯಪುಸ್ತಕಗಳನ್ನು ನಮ್ಮ ಮಕ್ಕಳಿಗೆ ಮೇಲೆಬಿದ್ದು ಕಲುಸ್ತಿರೋ ಕನ್ನಡಿಗ ಪೋಷಕರೇ, ನೀವು ಅಮೃತ ಅಂತ ಕುಡುಸ್ತಿರೋ ಈ ಕೇಂದ್ರೀಯ ಪಠ್ಯಕ್ರಮದ ಕಲಿಕೆ ನಿಮ್ಮದೆಲ್ಲಾ ಕೀಳು ಅನ್ನೋ ವಿಷಾನ ನಿಮ್ಮ ಮಕ್ಕಳಲ್ಲಿ ಚೂರುಚೂರಾಗೇ ತುಂಬ್ತಾ ಇರೋದು ಇನ್ನೂ ನಿಮ್ಮ ಕಣ್ಣಿಗೆ ಕಾಣ್ತಿಲ್ವಾ?" ಅಂತ ಸುತ್ತಿಬಳ್ಸಿ ಕೇಳ್ತಾ ಇದೆ ನಿನ್ನೆಯ (09.03.2009) ವಿಜಯಕರ್ನಾಟಕದ ಐದನೇ ಪುಟದಲ್ಲಿ ಪ್ರಕಟವಾಗಿರೋ ಒಂದು ವರದಿ.

ಕರ್ನಾಟಕ ಸರ್ಕಾರದ ಹೊಣೆಗಾರಿಕೆ ಏನೂ ಇಲ್ವಾ?

ಕೇಂದ್ರೀಯ ಪಠ್ಯಕ್ರಮದ ಅನೇಕ ಶಾಲೆಗಳಲ್ಲಿ ಕಲಿಸಲು ಬಳಸೋ ಪಠ್ಯಪುಸ್ತಕಗಳ ಹೂರಣದ ಬಗ್ಗೆ ರಾಜ್ಯಸರ್ಕಾರಕ್ಕೆ ಯಾವ ರೀತಿಯ ಹಿಡಿತವೂ ಇಲ್ಲದಂತಿದೆ. ಕಲಿಕೆ ಪರಿಣಾಮಕಾರಿಯಾಗಿರೋಕೆ ಆಯಾ ಪ್ರದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಬಳ್ಸಿ ಕಲ್ಸೋದು ಸರಿಯಾದ ವಿಧಾನವಾಗಿದೆ. ಅಂಥದ್ರಲ್ಲಿ ನಾವು ಇರೋ ಪರಿಸರದ ಬಗ್ಗೆ ಅರೆಬರೆ, ತಪ್ಪುತಪ್ಪು ಮಾಹಿತಿ ಇರೋ ಅಂಥಾ ಪುಸ್ತಕಗಳನ್ನು ಕಲಿಕೆಗೆ ಬಳ್ಸುದ್ರೆ ನಮ್ಮ ಮಕ್ಕಳ ಮನ್ಸು ಏನಾಗಬೇಡಾ ಗುರು? ನಮ್ಮ ನಾಡು, ನುಡಿ ಬಗ್ಗೆ ಕೀಳರಿಮೆಗೆ ಕಾರಣವಾಗೋವಂಥಾ ಪಾಠ ಕಲಿತ ಮಕ್ಕಳು ಈ ನಾಡಿನ ಸಂಪತ್ತು ಹೇಗಾದಾರು? ’ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಅನ್ನೋ ಮಾತಿಗೆ ಏನರ್ಥವಿರುತ್ತೆ? ಇಂಥಾ ಆಗುಹೋಗುಗಳ ಬಗ್ಗೆ ರಾಜ್ಯಸರ್ಕಾರಕ್ಕೆ ಹಿಡಿತ ಇರಬೇಕು ಅನ್ನೋದು ಸರಿಯಲ್ವಾ? ಹೀಗೆ ನಾಡಿನ ಮಕ್ಕಳಿಗೆ ಏನು ಕಲಿಸಲಾಗುತ್ತಿದೆ ಅನ್ನುವುದರ ಬಗ್ಗೆ ಕಾಳಜೀನೆ ಇಲ್ಲದೆ ನಮ್ಮ ಸರ್ಕಾರ ಕಣ್ಣುಮುಚ್ಚಿ ಸುಮ್ಮನೆ ಕೂರಕ್ಕಾಗುತ್ತಾ ಗುರು?

ಕರ್ನಾಟಕದಲ್ಲಿ ಕನ್ನಡ ಕಲ್ಸಿ ಅಂತಾ ಕೇಳ್ಕೊಂಡ ಶಿಕ್ಷಣ ಸಚಿವರು!

ಕೇಂದ್ರೀಯ ಪಠ್ಯಕ್ರಮದ ಶಾಲೆಗಳ ಮೇಲೆ, ಅವು ಕಲಿಸೋ ಪಠ್ಯದ ಮೇಲೆ ರಾಜ್ಯಸರ್ಕಾರಕ್ಕೆ ಯಾವ ರೀತಿ ಹಿಡಿತ ಇದೆ ಅಂತ ನೋಡುದ್ರೆ ನಿರಾಸೆಯಾಗುತ್ತೆ! ಇದಕ್ಕೆ ಸಾಕ್ಷಿಯಾಗುವಂತೆ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯೋರು ಸಿ.ಬಿ.ಎಸ್.ಇ, ಐ.ಸಿ.ಎಸ್.ಈಗಳಲ್ಲಿ ಕನ್ನಡಾನ ಕಲ್ಸಕ್ ಅವಕಾಶ ಮಾಡ್ಕೊಡಿ ಅಂತ ಕೇಳಿಕೊಂಡ ಸುದ್ದಿ ಸ್ವಲ್ಪ ದಿನದ ಹಿಂದೆ ಇದೇ ಪತ್ರಿಕೆಗಳಲ್ಲಿ ಬಂದಿತ್ತು. ಕರ್ನಾಟಕದ ಶಾಲೆಗಳಲ್ಲಿ ಏನು ಕಲಿಸಬೇಕು ಅಂತ ನಿರ್ಧರಿಸೋ ಹಕ್ಕು ಕರ್ನಾಟಕ ರಾಜ್ಯ ಸರ್ಕಾರಕ್ಕೇ ಇಲ್ಲಾ ಅಂದ್ರೆ ಹೇಗೆ? ಈ ಶಾಲೆಗಳಲ್ಲಿ ಕಲ್ಯೋ ಮಕ್ಕಳು ನಮ್ಮ ನಾಡಿನ ಮಕ್ಕಳು ಅನ್ನೋ ಒಂದು ಕಾಳಜಿ ಸಾಕಲ್ವಾ, ಕರ್ನಾಟಕ ರಾಜ್ಯ ಸರ್ಕಾರ ಈ ವಿಷ್ಯದಲ್ಲಿ ಒಂದು ಜವಾಬ್ದಾರಿಯುತ ನಿಲುವು ತೊಗಳ್ಳಕ್ಕೆ? ಕೇಂದ್ರಾನ ಒತ್ತಾಯಿಸಕ್ಕೆ? ಕಲಿಕೆ ಅನ್ನೋದು ರಾಜ್ಯಗಳ ಆಡಳಿತ ಪಟ್ಟಿಯಲ್ಲಿರಬೇಕು, ಇದನ್ನು ಮೊದಲು ಮಾಡಿ ಅಂತ ನಮ್ಮ ಸರ್ಕಾರದೋರು ಕೇಂದ್ರಾನ ಯಾಕೆ ಒತ್ತಾಯ ಮಾಡಬಾರದು ಗುರು? ಆಯಾ ರಾಜ್ಯಗಳಲ್ಲಿ ಇರೋ ಎಲ್ಲಾ ಶಾಲೆಗಳಲ್ಲಿ ಏನು ಕಲುಸ್ತಾರೆ ಅನ್ನೋದನ್ನು ತಿಳ್ಕೊಳೋ ಹಕ್ಕು, ಏನು ಕಲಿಸಬೇಕು ಅಂತಾ ಕಟ್ಟುಪಾಡು ಮಾಡೋ ಹಕ್ಕು ಆಯಾ ರಾಜ್ಯಸರ್ಕಾರಗಳ ಕೈಲೇ ಇರಬೇಕು ಅನ್ನೋದು ಸರಿಯಾದದ್ದಲ್ವಾ ಗುರು?

7 ಅನಿಸಿಕೆಗಳು:

Anonymous ಅಂತಾರೆ...

Kannadada bagge gourava baruvantaha pustaka galu hora bara beku.

Priyank ಅಂತಾರೆ...

ಇದೆಂತಾ ವ್ಯವಸ್ಥೆ ಗುರು !!
ಜನರಿಗೆ ಜ್ಞ್ಯಾನ ಕೊಡ್ತಿದಾರ ಅಥವಾ ಬೇಕಾಬಿಟ್ಟಿ ಮನಸ್ಸಿಗೆ ಅನ್ಸಿದ್ದನ್ನ ಪಠ್ಯ ಮಾಡ್ತಿದಾರ?
ಸುಳ್ಳಿನ ಪ್ರಚಾರ ಮಾಡುವ ಜಗತ್ತಿನ ಏಕೈಕ ಪಠ್ಯಪುಸ್ತಕ ಇವರದ್ದು ಅನ್ಸುತ್ತೆ.

Anonymous ಅಂತಾರೆ...

oLLeya lEkhana gurugaLe..

ivelladakke kaaraNa ishTe..paTyapustakagaLige vishayavannu aMtimagoLisuvavaru yaaroo nammavralla.
(parabhaashikaru aMta otti hELabEkilla )..parabhaashikaraada takshaa avaru heege manasige baMda haage bEre raajya,bhaashe,raajyada jana aMta vicaaradalli tappu tappu baredu avahELana maaDo haagilla..adoo cikkaa makkaLalli heege raajya/bhaashe/janagaLa vicaaragaLalli eMthaa tappu grahikeyannu bittuttaare allavE ?

adakke kEMdreeya paTyakramada shaalegale irabahudu..aadare kalisO vishayagaLa mEle aayaa raajyagaLa paTyakrama nirdharisuva samitiya hiDita irabEku...illa aMdre alli kaliyO makkaLalli avara naaDina bagge keeLarime bELedu naaDina bagge mamatE kaaLaji bELeyade asaDDe mane maaDutte..

Anonymous ಅಂತಾರೆ...

kelasakke ante bere bere ooragalige aliyo poshakaru yen maadabeku?.
Onda varsha onda ooralli, innonda varsha bere raajjyadalli.

Anonymous ಅಂತಾರೆ...

Anonymous ಅವರೇ..,
ಊರೂರು ಅಲೆಯೋರು ಹಿಂದಿಯನ್ನು ಮಾತ್ರ ಯಾಕೆ ಒಪ್ಕೋತಾರೆ ?...ಇದೊಂದೆ ಕಾರಣ ಇಟ್ಕೊಂಡು ತಾವು ಅನ್ನ ನೀರು ಪಡಿಯೋ ನಾಡಿನ ನುಡಿಗಳನ್ನ ಯಾಕೆ ಕಲಿಬಾರ್ದು.. ?. ಹಿಂದಿ ಹೇರಿಕೆ ಮಾಡಲು ಇದೊಂದು ನೆಪ ಅಷ್ಟೇ.. ಹಿಂದಿಯೊಂದೇ ಭಾರತದ ಭಾಷೆನ ?. ಕನ್ನಡ, ತಮಿಳು,ತೆಲುಗು, ಒಡಿಯಾ, ಬೆಂಗಾಲಿ ... ಎಲ್ಲವೂ ಭಾರತದ ಭಾಷೆಗಳೇ ತಾನೆ ?... ಬೇರೆ ದೇಶಗಳ ಜರ್ಮನ್, ಫ್ರೆಂಚ್ .. ಇತ್ಯಾದಿ ಕಲಿಯುವ ಮಕ್ಕಳು ತಾವು ವಾಸವಾಗಿರೋ ನಾಡಿನ ನುಡಿ ಕಲಿಯೋದು ಕಷ್ಟವ.. ?. ಇವೆಲ್ಲ ಇತರೆ ಭಾಷೆಗಳನ್ನ ತುಳಿಯೋ ತಂತ್ರ ಹಿಂದಿಯರದು...

ಕ್ಲಾನ್ಗೊರೌಸ್

Anonymous ಅಂತಾರೆ...

Kannada is a mix of Tamil & Telugu anta bardiro ICSC text book viruddha raajyadyanta prathibatane shuru agide. Illi nodi DNA newspaper varadi

Page-2 DNA - Dt:15-MAR-09
http://epaper.dnaindia.com/dnabangalore/epapermain.aspx?queryed=20&username=&useremailid=&parenteditioncode=9&eddate=3%2f15%2f2009

Anonymous ಅಂತಾರೆ...

anonymous avare,

nimma prashnege uttara sigabEkaMdre nanna prashengaLige uttarisi..nimage gottaagutte uttara..

eega karnaaTakada udaaharaNe tegedukoLLONa..adannE bhaaratada ellaa raajyagaLigu anvayisi.

1. karnaaTakada oTTu janasaMkhye eshTu ?

eega 6 kOTi

2. oMdu ooriniMda innoMdu oorige prati varsha ODaaDo janasaMkhye eshTu ?

adu khaMdita saavirada lekkadalli irutte..bEDa laksha aMta iTkoLLi...

kEvala laksha janarigOskara ade raajyadalli uLiyuva 5-6 kOTi jana, heege ee lEkhanadalli bareda haage dOdhapoorita kEmdra paThyakramada horeyannu anubhavisabEkE..

uttarisi

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails