’ಲೋಕಸಭೆ ಚುನಾವಣೆ ಇನ್ನೇನು ಬಂದೇಬಿಟ್ಟಿದೆ. ಭಾರತದ ಸಂಸತ್ತಲ್ಲಿ ಕರ್ನಾಟಕಾನ ಪ್ರತಿನಿಧಿಸೋ ಸಂಸದರನ್ನು ಆರಿಸಬೇಕಾದ ಸಮಯ ಇದು. ಈ ನಮ್ಮ ಸಂಸದರು ಎಂಥವರಾಗಿರಬೇಕಪ್ಪಾ ಅಂದರೆ ನಮ್ಮ ಸಮಸ್ಯೆಗಳನ್ನು ದಿಲ್ಲಿಯಲ್ಲಿ ಬಿಂಬಿಸುವ, ನಮ್ಮ ನಾಡಿನ ಪರವಾಗಿ ಲಾಬಿ ಮಾಡಬಲ್ಲವರಾಗಿರಬೇಕು. ನಮ್ಮ ಸಂಸದರ ಬೆಂಬಲ ಇಲ್ಲದೆ ಯಾವ ಸರ್ಕಾರವನ್ನೂ ಅಲ್ಲಿ ಮಾಡಕ್ ಆಗಲ್ಲಾ, ಯಾವ ಸರ್ಕಾರಾನೂ ಅಲ್ಲಿ ಕೂರಕ್ ಆಗಲ್ಲ ಅನ್ನೋ ಸನ್ನಿವೇಶ ಹುಟ್ಕೊಂಡ್ರೆ ಮಾತ್ರಾ ನಮ್ಮ ನಾಡಿಗೆ ಬೇಕಾದ ಯೋಜನೆಗಳು, ಸರಿಯಾದ ಸಂಪನ್ಮೂಲ ಹಂಚಿಕೆ, ಪರಿಹಾರ ಹಂಚಿಕೆಗಳು ಅಲ್ಲಿ ಸಿಗೋದು’ ಅಂತಾ ಈಗಾಗ್ಲೆ ಜನರಿಗೆ ಅನ್ಸಕ್ ಶುರುವಾದಂಗಿದೆ. ’ಕರ್ನಾಟಕದಿಂದ ಒಟ್ಟು ಆರಿಸಿ ಹೋಗೋದು 28 ಸಂಸದರು. ಇಷ್ಟೂ ಜನ ಒಗ್ಗಟ್ಟಾಗಿದ್ರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು, ಆದರೆ ಹಾಗಾಗಿಲ್ಲ ಅನ್ನೋದು ಒಂದು ದುರಂತ’ ಅಂತಲೂ ಇದೇ ಜನ ಅಂದ್ಕೊತಿರಬೌದು. ಇದೆಲ್ಲಕ್ಕಿಂತ ಮೀರಿದ ಇನ್ನೊಂದು ಮಾಹಿತಿ ಬಗ್ಗೆ ನಿಮ್ಮ ಗಮನ ಸೆಳೆಯೋ ಪ್ರಯತ್ನ ನಮ್ದು.
ರಾಜ್ಯಗಳ ಸಂಸದರ ಸಂಖ್ಯೆಯ ಮಹತ್ವ!
ಕಾಲ ಯಾವ್ದೇ ಇರಲಿ, ದಿಲ್ಲೀಲಿ ಪ್ರಧಾನಮಂತ್ರಿ ಪಟ್ಟಕ್ ಹತ್ತೋರು ಉತ್ತರಪ್ರದೇಶದ ಸಂಸದರೇ ಆಗಿರೋದ್ನ ನೋಡಬಹುದು. ಬೇಕಾದ್ರೆ ನೀವೇ ನೋಡಿ… ಒಬ್ಬ ನರಸಿಂಹರಾವ್, ಮತ್ತೊಬ್ಬ ದ್ಯಾವೇಗೌಡ್ರನ್ ಬಿಟ್ರೆ ಹೆಚ್ಚಿನೋರು ಅಲ್ಲಿಯವ್ರೇ. ಯಾಕಂದ್ರೆ ಅತಿಹೆಚ್ಚು ಸಂಸದರನ್ನು ದಿಲ್ಲಿಗೆ ಆರಿಸಿ ಕಳಿಸೋದೇ ಉತ್ತರಪ್ರದೇಶ. ಇಲ್ಲಿಂದ 80 ಸಂಸದರು. ಮಹಾರಾಷ್ಟ್ರದಿಂದ 48 ಸಂಸದರು, ತಮಿಳುನಾಡಿಂದ 39 ಸಂಸದರು ಬರ್ತಾರೆ. ಸುಮ್ನೆ ನೋಡುದ್ರೆ ಅತಿಹೆಚ್ಚು ಸಂಸದರನ್ನು ಹೊಂದಿರೋ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಶ್ಚಿಮಬಂಗಾಳ(42), ಆಂಧ್ರಪ್ರದೇಶ(42) ಮತ್ತು ತಮಿಳುನಾಡುಗಳೇ ಭಾರತದ ರಾಜಕಾರಣದಲ್ಲಿ ಪ್ರಭಾವಿ ರಾಜ್ಯಗಳೇನೋ ಅನ್ಸುತ್ತೆ. ಬೇಕೋ ಬೇಡ್ವೋ, ಸರಿಯೋ ತಪ್ಪೋ ಒಟ್ನಲ್ಲಿ ಒಂದು ರಾಜ್ಯದ ಒಟ್ಟು ಸಂಸದರ ಸಂಖ್ಯೆ ದಿಲ್ಲಿಯಲ್ಲಿ ಪ್ರಭಾವಶಾಲಿ. ಅದರಲ್ಲೂ ಆ ಸಂಖ್ಯೆ ಪ್ರಾದೇಶಿಕ ಪಕ್ಷದ್ದಾದ್ದರಂತೂ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಪ್ರಭಾವಶಾಲಿ ಅನ್ನುವ ಹಾಗೆ ತೋರುತ್ತದೆ. ಹೆಚ್ಚು ಸಂಸದರನ್ನು ಹೊಂದೋದು ಕೇಂದ್ರದಿಂದ ನಮ್ಮ ಪಾಲನ್ನು ಹೆಚ್ಚು ಗಿಟ್ಟಿಸಿಕೊಳ್ಳಕ್ಕೆ ಪೂರಕ ಅನ್ನೋ ಪರಿಸ್ಥಿತಿ ಇರುವಂತೆ ಇವತ್ತು ತೋರ್ತಿದೆ. ಹಾಗಾದ್ರೆ "ನಮ್ಮ ಹಕ್ಕು ನಮಗೆ ಸಿಗಬೇಕಾದ್ರೆ ನಮ್ಮ ಸಂಸದರ ಸಂಖ್ಯೇನೂ ಅಷ್ಟೊಂದಾಗಬೇಕಾ?" ಅನ್ನೋ ಪ್ರಶ್ನೆ ಕೇಳ್ತಿದೀರಾ?
ಸಂಸದರ ಸಂಖ್ಯೆ ಮತ್ತು ಜನಗಳ ಸಂಖ್ಯೆಯ ಅನುಪಾತ!
ಇಂತಿಷ್ಟು ಜನ ಮತದಾರರನ್ನು ಪ್ರತಿನಿಧಿಸೋಕ್ಕೆ ಒಬ್ಬ ಶಾಸಕರು ಇರ್ತಾರೆ, ಇಂತಿಷ್ಟು ಜನರನ್ನು ಪ್ರತಿನಿಧಿಸೋಕೆ ಒಬ್ಬ ಸಂಸದರು ಇರ್ತಾರೆ ಅನ್ನೋದೂ ಸಾಮಾನ್ಯ ತಿಳುವಳಿಕೆ. ಆದ್ರೆ ಕೆಲವು ಪ್ರದೇಶಗಳಲ್ಲಿ, ಉದಾಹರಣೆಗೆ ಅರುಣಾಚಲಪ್ರದೇಶ, ಲಕ್ಷದ್ವೀಪದಂತಹ ಪ್ರದೇಶಗಳು ಹೊಂದಿರೋದೆ ಕಮ್ಮಿ ಜನಸಂಖ್ಯೆ. ಆಗ ಇಡೀ ಭಾರತಕ್ಕೆ ಅನ್ವಯವಾಗೋ ನಿಯಮ ಅಲ್ಲಿ ಅನುಸರಿಸಕ್ ಆಗಲಿಕ್ಕಿಲ್ಲ. ಆ ಕಾರಣದಿಂದಲೇ ಲಕ್ಷದ್ವೀಪದ ಜನಸಂಖ್ಯೆ 41,000ದಷ್ಟೇ ಇದ್ದರೂ ಅಲ್ಲಿಂದ ಒಬ್ಬ ಸಂಸದರು ಪ್ರತಿನಿಧಿಯಾಗಿ ಆರಿಸಿಬರ್ತಾರೆ. ಇದೇನೋ ಸರೀನೇ. ಆದ್ರೂ ಅಂಥಾ ರಾಜ್ಯಗಳನ್ನೂ, ಕೇಂದ್ರಾಡಳಿತ ಪ್ರದೇಶಗಳನ್ನೂ ಲೆಕ್ಕದಿಂದ ಹೊರಗಿಟ್ಟು ನೋಡುದ್ರೆ ಕಾಣೋ ಅಂಕಿಅಂಶ ಕುತೂಹಲಕಾರಿಯಾಗಿದೆ. ಎಷ್ಟು ಜನಕ್ಕೆ ಒಬ್ಬ ಸಂಸದ ಅನ್ನೋ ಲೆಕ್ಕಪಟ್ಟೀಲಿ ಅತಿಹೆಚ್ಚು ಜನರನ್ನು ಪ್ರತಿನಿಧಿಸೋ ಸಂಸದರ ಪಟ್ಟಿಯಲ್ಲಿ ಕರ್ನಾಟಕವೇ ಮೊದಲನೆಯ ರಾಜ್ಯ ಅಂದ್ರೆ ಅಚ್ಚರಿ ಪಡಬೇಡಿ. ನಮ್ಮ 15,30,000 ಜನಕ್ಕೆ ಒಬ್ಬ ಸಂಸದನಿರ್ತಾನೆ. ರಾಷ್ಟ್ರೀಯ ಸರಾಸರಿ 12,75,000. ಈ ಸಂಖ್ಯೆ ತಮಿಳುನಾಡಿನಲ್ಲಿ 10,22,೦೦೦ಕ್ಕೆ ನಿಲ್ಲುತ್ತೆ. ಕೇರಳದಲ್ಲಿ ಪ್ರತಿ ಲೋಕಸಭಾ ಕ್ಷೇತ್ರದ ಸರಾಸರಿ ಮತದಾರರ ಸಂಖ್ಯೆ 10,50,000. ಅಂದ್ರೆ ನಮ್ಮಲ್ಲೂ ಕೇರಳ ಮತ್ತು ತಮಿಳುನಾಡಿನಲ್ಲಿದ್ದಂತೆ 10.0-10.5 ಲಕ್ಷಕ್ಕೊಬ್ಬ ಸಂಸದನಿದ್ದಿದ್ದರೆ ಆಗ ಕರ್ನಾಟಕದ ಒಟ್ಟು ಲೋಕಸಭಾಕ್ಷೇತ್ರಗಳ ಸಂಖ್ಯೆ ಇಂದಿನ 28ರ ಬದಲಾಗಿ 42 ಆಗ್ತಿತ್ತು ಅನ್ನೋದು ಗಣಿತದ ಲೆಕ್ಕಾಚಾರ. ಒಟ್ಟು ರಾಷ್ಟ್ರೀಯ ಸರಾಸರಿಯ ಆಧಾರದ ಮೇಲೆ ಲೆಕ್ಕ ಹಾಕುದ್ರೆ ಕರ್ನಾಟಕದಲ್ಲಿ 34 ಲೋಕಸಭಾ ಕ್ಷೇತ್ರಗಳೂ, ತಮಿಳುನಾಡಲ್ಲಿ 31 ಲೋಕಸಭಾ ಕ್ಷೇತ್ರಗಳೂ ಇರಬೇಕಿತ್ತು. ಹಾಗೇನಾದ್ರೂ ಆಗಿದ್ದಿದ್ರೆ ಏನೇನೆಲ್ಲಾ ಆಗಿರ್ತಿತ್ತು ಅನ್ನೋದು ನಿಮ್ಮ ಕಲ್ಪನೆಗೆ ಬಿಟ್ಟ ವಿಷ್ಯಾ ಗುರು!
“ಇದೆಂಗೇ ಗುರು? ಇದು ಕೇಂದ್ರದ ತಾರತಮ್ಯ ಧೋರಣೆ, ಇದರಿಂದ ಕರ್ನಾಟಕಕ್ಕೆ ಭೋ ಅನ್ಯಾಯ ಆಗ್ತಿದೆ, ನಮ್ಮ 28 ಜನರ ದನಿ 39 ಜನರ ಮುಂದೆ ಅಡಗಿ ಹೋಗ್ತಿದೆ, ಎಲ್ಲಾ ಕಡೆಯೂ ಒಂದೇ ಅನುಪಾತದ ಮಾನದಂಡದ ಮೇಲೆ ಲೋಕಸಭಾಸ್ಥಾನಗಳ ಸಂಖ್ಯೆ ಹೆಚ್ಚಿಸಬೇಕು/ ಅಥವಾ ಕಮ್ಮಿ ಮಾಡಬೇಕು” ಅಂತ ನಮ್ಮನ್ ಕೇಳ್ಬೇಡಿ ಮತ್ತೆ. ನಾವು ಕೊಡ್ತಿರೋದು ಬರೀ ಅಂಕಿಅಂಶ, ಇದರ ವಿಶ್ಲೇಷಣೆ ನಿಮಗೇ ಬಿಟ್ಟಿದ್ದು ಗುರು!!
10 ಅನಿಸಿಕೆಗಳು:
ನನ್ನಿ!
ಇದಂತೂ ತೀರಾ ಅನ್ಯಾಯ. ಕನ್ನಡಿಗರಿಗೆ!
ಇದರ ಬಗ್ಗೆ ನಾನು ಹಲವು ಬಾರಿ ಯೋಚಿಸಿದ್ದೆ. ಕರ್ನಾಟಕದ ಜನಸ೦ಖ್ಯೆ ತಮಿಳುನಾಡಿಗಿ೦ತ ಜಾಸ್ತಿ ಇದ್ದರೂ ನಮ್ಮಲ್ಲೇಕೆ ಸ೦ಸದರ ಸ೦ಖ್ಯೆ ಕಡಿಮೆ ಎ೦ದು. ಲೋಕಸಭಾ ಕ್ಷೇತ್ರ ವಿ೦ಗಡನೆ ಕಾಲದಿ೦ದಲೂ ನಮಗೆ ಅನ್ಯಾಯವಾಗುತ್ತಿತ್ತೇ? ಅಥವಾ ನಮ್ಮ ನಾಯಕರು ಆಗ ಇದನ್ನು ನೋಡಿಯೂ ಕಣ್ಣು ಮುಚ್ಚಿ ಕುಳಿತಿದ್ದರೆ? ಸುಮ್ಮನಿದ್ದವನಿಗೆ ಒ೦ದು ಗುದ್ದು ಜಾಸ್ತಿ ಅನ್ಸುತ್ತೆ!
namaskaara,
idakke naavu heege horata madabahudu ? namma janarige heege ee vishayavannu hechchagi mahatva ulladdu antha thilisoodu ? mukhyavaagi namma kannada haagu english newspapers galalli baralee beeku eee vichara.. adu aadashtu beega.. election munche..
ondu forum atava community irabeeku... adarinda naavu namma prathinidhigalannu neeravagi prashnisokke aagabeeku
ಕರ್ನಾಟಕದ ಜನಸಂಖ್ಯೆ ಕಡಿಮೆ, ೫೨,೮೫೦,೫೬೨.
ತಮಿಳು ನಾಡು ಜನಸಂಖ್ಯೆ ಜಾಸ್ತಿ, ೬೬, ೩೯೬, ೦೦.
ಆಂಧ್ರ ಪ್ರದೇಶ ಜನಸಂಖ್ಯೆ ಇನ್ನೂ ಜಾಸ್ತಿ, ೭೬, ೨೧೦, ೦೦೭.
ಹೀಗಿರುವಾಗ, ನಮ್ಮಲ್ಲಿ ಕಡಿಮೆ ಜನ ಸಂಸದರು ಇರುವುದು ಸಾಮಾನ್ಯ.
ಜನಸಂಖ್ಯೆಗೆ ತಕ್ಕಾಗಿ ಸೀಟು ಹಂಚಿಕೆಯಾಗಿಲ್ಲ ಎನ್ನುವುದು ವಿಪರ್ಯಾಸ.
oLLe shOdhane gurugaLe..idannu kEMdra sarkaaradavrige tiLisi illiya saMsadara saMkhyeyannu heccisuvudu hEge?
haage, oMdu vELEe, illiMda spardhisuva saMsadara saMkhye heccaLa aadroo, saMsadaru 'tamma saMkhye jaasti haage duDDu maaDalu avakaashavo jaasti' eMdu tiLiyade namma raajyada janara mattu bhaashea bagge saMsattinalli daniyetti ellaroo pakshabEdha badigiTTu raajyada abhivriddhi kelasagaLagaLLi toDagisikoLLabEku
vasistha.k.j avare,
hege horata maadodu anta olle prashnene keLidira,,
aadre,, horata anda takshana bidigiLibeku antaane illa,, igaa,, namma enguru idanna baredu janaranna ecchariso kelsa maadta iddanalla,, idu ondu horataane,,
avara jote seri kelsa maadodu ondu hejje aagaboudu anta nanna anisike,,
naanu america dallidini,, bengalurige banda takshana balagada jote kai jodisi kelsa maadtini
iga iro 28 sansadaru en maha karya madiddare dehaliyalli ??????
iga iddavaru sariyagi tamma kelasa madidre kendra sarakaradavarige namma mahatva gottagutte .... avaga namage jasti sansadaru beku , railu beku , ene beku andre kivi kottu keltare ??
en guru ? class nalli sumne koodo hudugange yaru keltare ?? avanu ondu dina raje bekandru avaru astondu care madolla , ade obba pratibhavanta athava swalpa keetale maado huduga matadidre keltaralva ....!!!
bari sansadaru alla , namma jana elle kelasa sikru hogi kelsa maadbeku mattu nammatana ulisbeku , namma naadu nudi bagge bereyavarige gaurava mattu asakti mattu appriciation sigo haage madbeku guru!!
M.P. gala sankye hechhu madodarinda enu prayojana aagulla.Navu noduthillave M.P.galu bari duddu maduvudaralli thodagiddareye horatu jana seve bari nepa.jaasti M.P.aadare deshakke jaasthi kharchu aste.Aaddarinda horata maadabekiddare tamilnadu,kerala etc dalli M.P.sankye kadime maadalu.Srikantiah. G.R
MP sankhye hechaagabeku ... sankhye ginta, MP gaLige Kannadada bagge kannadigarigaagi horaduve dhairya beku ..
ಎಲ್ಲರಿಗೂ ನಮಸ್ಕಾರ,
ಕೇ೦ದ್ರ ಸರ್ಕಾದದಿ೦ದ ಬೇಕಾದಷ್ಟು ಕೆಲಸ ಮಾಡಿಸಿಕೊಳ್ಳಬಹುದು. ಬೇಕಾಗಿರುವುದು ಸ೦ಖ್ಯೆಯ ಹೆಚ್ಚಳವಲ್ಲ, ಗುಣಮಟ್ಟದ ಹೆಚ್ಚಳ. ಸ೦ಸದರ ಕೆಲಸ ನಮ್ಮ ರಾಜ್ಯದ ಸಮಸ್ಯೆಗಳನ್ನು ಕೇ೦ದ್ರ ಸರ್ಕಾರದ ಗಮನಕ್ಕೆ ತ೦ದು ಬಗೆಹರಿಸುರುವುದು ಅಲ್ಲವೇ? ಆ ಕೆಲಸ ಎಷ್ಟು ಮಟ್ಟಿಗೆ ನಡಿತಾ ಇದೆ? ಯಾರೋ ಒ೦ದಿಬ್ಬರು ಸ೦ಸದರು ಕೈಲಾದಷ್ಟು ಮಾಡ್ತಾ ಇದ್ದಾರೆ. ಉಳಿದವರಿಗೆ ಪಾಪ ನಿದ್ದೆ ನಿದ್ದೆ !!! ಈ ಸಾರಿ ಮತ ಕೇಳಲು ಬ೦ದಾಗ ಅವರನ್ನು ಕೆಲವರಾದರೂ ಕೇಳಬೇಕು.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!