ಹೊತ್ತಿಗೆ ರೂಪದಲ್ಲಿ "ಏನ್ ಗುರು"2007ರಲ್ಲಿ ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಅಂಕಣಮಾಲೇನಾ ಶುರು ಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ನಿಮ್ಮಿಂದ ಸಿಕ್ಕಿದೆ. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ನಿಮ್ಮ ಸಹಕಾರ ಮತ್ತು ಅಭಿಮಾನದಿಂದ ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ. ಆದ್ರೆ ನಾವು ಮುಟ್ಟಬೇಕಾದ ಜನರ ಸಂಖ್ಯೆ ಇನ್ನೂ ಬಹಳವಿದೆ. ಅವರಲ್ಲಿ ಬಹಳ ಮಂದಿಯನ್ನು ಅಂತರ್ಜಾಲದಿಂದ ಇಂದು ಮುಟ್ಟವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಹೊತ್ತಿಗೆಯ ಮೂಲಕ ಮುಟ್ಟಲು ಆಗುತ್ತದೆ. ಆ ಕಾರಣದಿಂದ ಇದೀಗ ಹೊತ್ತಿಗೆಯ ರೂಪದಲ್ಲಿ ಏನ್ ಗುರುವನ್ನು ಹೊರತರಲಾಗುತ್ತಿದೆ. ಶುರುವಾದಾಗಿನಿಂದ 2008ರ ಕೊನೆಯವರೆಗಿನ ಬರಹಗಳನ್ನು ಆಯ್ದು ಹೆಕ್ಕಿ, ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಇನ್ನೆರಡು ವಾರದಲ್ಲಿ ನಿಮ್ಮ ಕೈಸೇರಲಿದೆ.


ಈ ಹೊತ್ತಿಗೆಯನ್ನು ಅಚ್ಚು ಹಾಕಿಸಲು ಅಗತ್ಯವಿರುವ ನೆರವು ನೀಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಬನವಾಸಿ ಬಳಗ ನೆನೆಯುತ್ತದೆ. ಈ ಹೊತ್ತಿಗೆಯು ನಿಮ್ಮ ಆತ್ಮೀಯರಿಗೆ ನೀವು ನೀಡಲಿರುವ ಅತ್ಯುತ್ತಮ ಉಡುಗೊರೆಯಾಗಲಿದೆ. ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿರಿ. ಹೊತ್ತಿಗೆ ಕೊಳ್ಳಬಯಸುವವರು ಮುಂದಾಗಿ ನಮಗೆ ಮಾಹಿತಿ ಬರೆಯಿರಿ.

13 ಅನಿಸಿಕೆಗಳು:

Chetan ಅಂತಾರೆ...

ಗುರುಗಳೇ,
ಹೊತ್ತಿಗೆಯ ಮುಖಪುತಾನೆ ಇಷ್ಟು ಚೆನ್ನಾಗಿ ಇರ್ಬೇಕಾದ್ರೆ ಇನ್ನು ಅದರಲ್ಲಿರೋ ತಿರುಳು ಹೇಗಿರಬೇಡ..... ನಾನಂತೂ ಪಸ್ತಕಕ್ಕೆ ಕಾಯಿತ್ತಿದ್ದೇನೆ. ಅಂತರ್ಜಾಲದಲ್ಲಿ ಇಲ್ಲದೆ ಇರೋ ನನ್ನ ಗೆಳೆಯರಿಗೆ ಈ ಹೊತ್ತಿಗೆಯನ್ನ ಖಂಡಿತವಾಗಿ ಮುಟ್ಟಿಸುತ್ತೇನೆ.

Priyank ಅಂತಾರೆ...

ಏನ್ ಗುರು ಎತ್ತರೆತ್ತರಕ್ಕೆ ಬೆಳಿತಿರೋದು ನೋಡಿ ಖುಷಿ ಆಯ್ತು.
ಹೊತ್ತಿಗೆ-ಗೆ ಜಯ ಸಿಕ್ಕಲಿ.

ದಂಡಪಿಂಡ ಅಂತಾರೆ...

ಏನ್ ಗುರು ಮತ್ತು ಬನವಾಸಿ ಬಳಗದವರಿಂದ ಮತ್ತೊಂದು ಒಳ್ಳೆ ಕೆಲಸ. ಬಹಳಷ್ಟು ಮಂದಿಗೆ ಅಂತರಜಾಲದ ಸೋನ್ಕಿರುವುದಿಲ್ಲ ಅಂತವರಿಗೆ ಇದನ್ನು ಉಡುಗೊರೆ ರೂಪದಲ್ಲಿ ಕೊಡುವುದಕ್ಕೂ ಬಹಳ ಸೂಕ್ತ. ಹೇಗೆ ಮತ್ತು ಎಲ್ಲಿ ಲಭ್ಯವೆಂದು ಹೇಳಿದರೆ ನಾನು ಒಂದು ಪ್ರತಿ ಕೊಳ್ಳ ಬಯಸುವೆ.

Sushrutha Dodderi ಅಂತಾರೆ...

Ow.. idu khushi suddi.. shubhashaya..

ದಿನೇಶ್ ಕುಮಾರ್ ಎಸ್.ಸಿ. ಅಂತಾರೆ...

ಅಭಿನಂದನೆಗಳು ಮತ್ತು ಶುಭಾಶಯಗಳು.
ಪುಸ್ತಕ ಬಿಡುಗಡೆ ಕಾರ್ಯಕ್ರಮವೂ ಜೋರಾಗಿ ನಡೆಯಲಿ.
ನಿಮ್ಮ ಈ ಕ್ರಿಯಾಶೀಲ ಚಟುವಟಿಕೆಗಳು ಕನ್ನಡ ಸಂಸ್ಕೃತಿಯ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು.
ಸದಾ ನಿಮ್ಮೊಂದಿಗಿರುವ
-ದಿನೇಶ್ ಕುಮಾರ್ ಎಸ್.ಸಿ.

Deepak Patil ಅಂತಾರೆ...

tumba santosha :)

ಶ್ವೇತ ಅಂತಾರೆ...

ಶುಭಾಶಯಗಳು, ತುಂಬ ಸಂತೋಶವಾಯಿತು ಸುದ್ದಿಯನ್ನು ಕೇಳಿ. ಮುಖಪುಟ, ಶೀರ್ಶಿಕೆ ಎಲ್ಲ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಚಟುವಟಿಕೆಗಳು ಹೀಗೆಯೇ ಮುಂದುವರಿಯಲೆಂದು ಅಶಿಸುವ

-ಶ್ವೇತ

Anonymous ಅಂತಾರೆ...

Banavasi Balagad moolak aada kannada charchegalu, kannada nadin uddagalakku, E pustakad mukhantar haradali.

Banavasi BaLagad kannadad Aashayakke ShubhashayagaLu.


Prashant JS

ಉಉನಾಶೆ ಅಂತಾರೆ...

ತುಂಬಾ ಒಳ್ಳೆಯ ಕೆಲಸ. ಈ ಪುಸ್ತಕ ನಾಗರಿಕರಿಗೆ ಎಲ್ಲ ಅಂಗಡಿಗಳಲ್ಲಿ ಮತ್ತು ಲೈಬ್ರರಿಗಳಲ್ಲಿ ಸಿಗುವಂತೆ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ.
ಪ್ರತಿಗಳನ್ನು ಪಡೆಯುವುದು ಹೇಗೆ ಎಂಬ ವಿವರಗಳನ್ನು ತಿಳಿಸಿ.
ಹಾಗೆಯೇ ಪಿಡಿಎಫ್ ಪ್ರತಿಯನ್ನೂ ಪ್ರಕಟಿಸಿ.

Daya ಅಂತಾರೆ...

It is a good news that we are in a printed format. We can surely reach beyond the internet people and to the root of our State.

ವೀ ಚಂ ರುದ್ರಮೂರ್ತಿ ಅಂತಾರೆ...

"Nannathana","Nennedina" matthu "Nannajana". Ee hesaree bahala sogasaagiruvaaga, adara lagade innestu chenda iddethu..!

ಜಿ.ಎಸ್.ಬಿ. ಅಗ್ನಿಹೋತ್ರಿ ಅಂತಾರೆ...

ಶುಭಾಶಯಗಳು

Anonymous ಅಂತಾರೆ...

Shubhashayagalu....
Jai Karnataka

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails