ಯು.ಪಿ.ಎಸ್.ಸಿ : ಇಲ್ಲಿ ಕನ್ನಡಿಗರು ಮುನ್ನುಗ್ಗಬೇಕು!!


ಕರ್ನಾಟಕದಿಂದ ಭಾರತ ಸರ್ಕಾರದ ನಾಗರೀಕ ಸೇವಾ ಹುದ್ದೆಗಳಾದ ಐ.ಎ.ಎಸ್ಸು, ಐ.ಆರ್.ಎಸ್ಸು, ಐ.ಪಿ.ಎಸ್ಸುಗಳಿಗೆ ಈ ಬಾರಿ 12 ಜನರು ಆಯ್ಕೆಯಾಗಿರೋ ಸುದ್ದಿ 2009ರ ಮೇ ತಿಂಗಳ 5ನೇ ತಾರೀಕಿನ ದಿನಪತ್ರಿಕೆಗಳಲ್ಲಿ ವರದಿಯಾಗಿದೆ ಗುರು! ವ್ಹಾವ್!! ಎಂಥಾ ಒಳ್ಳೇ ಸುದ್ದಿ ಅಂತಾ ಖುಷಿ ಆದ್ರೂ ಜೊತೇಲೇ ನಮ್ಮವರ ಒಟ್ಟು ಸಂಖ್ಯೆ ಕಂಡಾಗ ಆತಂಕಾನೂ ಆಗುತ್ತೆ. ಆಡಳಿತ ಕ್ಷೇತ್ರದ ಇಂಥಾ ಪ್ರಭಾವಶಾಲಿ ಹುದ್ದೆಗಳಲ್ಲಿ ನಮ್ಮವರ ಸಂಖ್ಯೆ ಇನ್ನಷ್ಟು ಹೆಚ್ಚಬೇಕು! ಮತ್ತಷ್ಟು ಹೆಚ್ಚಬೇಕು.
ನಾಗರೀಕ ಸೇವಾ ಹುದ್ದೆಗಳಲ್ಲಿ ಕನ್ನಡಿಗರು ಇರಬೇಕು!!

ನಿಜವಾಗಿ ನಾಡಿನ ರೀತಿ ನೀತಿ ನಿಯಮಾವಳಿಗಳನ್ನು ಇಂದು ರೂಪಿಸಿ, ನಿರ್ದೇಶಿಸೋದ್ರಲ್ಲಿ ಈ ಅಧಿಕಾರಿಗಳದ್ದೇ ದೊಡ್ಡಪಾತ್ರ. ನಮ್ಮ ನಾಡಿಗೆ ಸಂಬಂಧಿಸಿದ ಹಾಗೆ ಯಾವ್ದೇ ಪಾಲಿಸಿ ಮಾಡುದ್ರೂ ಅದರ ಹಿಂದೆ ಈ ಅಧಿಕಾರಿಗಳಿದ್ದೇ ಇರ್ತಾರೆ. ಇಂಥಾ ಮಹತ್ವದ ಹುದ್ದೆಗಳಲ್ಲಿ ಕರ್ನಾಟಕದಿಂದ ಈ ಬಾರಿ ಆಯ್ಕೆಯಾಗಿರೋದು ಬರೀ 12 ಜನ ಅನ್ನೋದು ಭಾಳಾ ಆತಂಕ ಹುಟ್ಸತ್ತೆ ಗುರು! ಈ ಬಾರಿ ಇಡೀ ಭಾರತದ ಎಲ್ಲೆಡೆಯಿಂದ ಸೇರಿ ಒಟ್ಟು 791 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಕನ್ನಡಿಗರ ಸಂಖ್ಯೆ 12. ಅಂದರೆ ಬರೀ 1.51% ಮಾತ್ರ. ಸುಮ್ಮನೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕರ್ನಾಟಕದ ಜನಸಂಖ್ಯೆ ಎಷ್ಟಪ್ಪಾ ಅಂತ ನೋಡುದ್ರೆ ಸಾಕು ಈ ಪ್ರಮಾಣ ಎಷ್ಟು ಕಮ್ಮಿ ಅಂತ ಕಾಣುತ್ತೆ. ಇಂದಿಗೆ 117 ಕೋಟಿ ಸಂಖ್ಯೆಯಲ್ಲಿ ಕರ್ನಾಟಕದೋರು ಸುಮಾರು 5.3 ಕೋಟಿ ಅಂದ್ರೆ ಅಂದಾಜು 4.5%. ಈ ಲೆಕ್ಕದಲ್ಲಿ ನೋಡುದ್ರೆ ಕಡಿಮೆ ಅಂದ್ರೆ 35 ಜನರಾದ್ರೂ ಆಯ್ಕೆಯಾಗಬೇಕಿತ್ತು.
ಹೌದೂ! ನಮ್ಮ ಕನ್ನಡದ ಯುವಕ/ ಯುವತಿಯರು ಅತಿ ಹೆಚ್ಚಿನ ಸಂಖ್ಯೇಲಿ ಈ ನಾಗರೀಕ ಸೇವಾ ಪರೀಕ್ಷೆಗಳನ್ನು ತೊಗೋಬೇಕು. ಹೆಚ್ಚೆಚ್ಚು ಜನ ಈ ಸೇವೆಗೆ ಆಯ್ಕೆಯಾಗಬೇಕು. ಇದು ನಾಳಿನ ಕನ್ನಡನಾಡಿಗೆ ಒಳ್ಳೇದು ಗುರು!

3 ಅನಿಸಿಕೆಗಳು:

ಪಲ್ಲವಿ ಮುರಳಿಧರ ಅಂತಾರೆ...

ಇವತ್ತು ಕನ್ನಡ ಆಡಳಿತ ಭಾಷೆ ಆಗಿಲ್ಲ ಅಂದ್ರೆ ಅದಕ್ಕೆ ನೇರ ಕಾರಣ ಬೇರೆ ರಾಜ್ಯದ ಐ.ಎ.ಎಸ್ ಅಧಿಕಾರಿಗಳು. ಹೆಚ್ಚೆಚ್ಚು ಕನ್ನಡಿಗರು ಐ.ಎ.ಎಸ್ ಹುದ್ದೆಗಳಿಗೆ ಬಂದು ನಮ್ಮ ರಾಜ್ಯದ ಇಲಾಖೆಗಳಿಗೆ ಸೇರಿದಾಗ ಮಾತ್ರ ಇದೆನ್ನಲ್ಲ ಬದಲಾಯಿಸಲು ಸಾಧ್ಯ.

ಬರಿ ಇಂಜಿನಿಯರಿಂಗ್, ಮೆಡಿಕಲ್ ಅನ್ನೊ ಕನ್ನಡದ ಪಾಲಕರು ಈ ಹುಚ್ಚು ಬಿಟ್ಟು ಐ.ಎ.ಎಸ್ / ಐ.ಪಿ.ಎಸ್ ತರಹದ ಹುದ್ದೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಯಾವ ಸವಲತ್ತು ಇಲ್ಲದ ಬಿಹಾರ ರಾಜ್ಯ ಇಷ್ಟೆಲ್ಲಾ ಐ.ಎ.ಎಸ್ / ಐ.ಪಿ.ಎಸ್ ಅಧಿಕಾರಿಗಳನ್ನು ಹುಟ್ಟಿಸುತ್ತಿರುವಾಗ ಎಲ್ಲ ಸೌಕರ್ಯ ಇರುವ ಕರುನಾಡು ನಿಜಕ್ಕೂ ದೊಡ್ಡ ಮಟ್ಟದಲ್ಲಿ ಐ.ಎ.ಎಸ್ / ಐ.ಪಿ.ಎಸ್ ಅಧಿಕಾರಿಗಳನ್ನು ಸೃಷ್ಟಿಸುವಂತಾಗಬೇಕು..

Anonymous ಅಂತಾರೆ...

ಮೊಟ್ಟ ಮೊದಲನೆದಾಗಿ ಈ IAS ಅನ್ನ scrap ಮಾಡಬೇಕು. ಯಾವುದೋ ದೇಶದವರನ್ನ ತಗೊಳ್ಳೋದು ಅವರಿಗೆ ಕನ್ನಡ ಕಲೀರಿ ಅಂತ ಹಿಂಸೆ ಮಾಡೋದು, ಇವೆಲ್ಲಾ ಯಾಕೆ? ಅವರವರ ರಾಜ್ಯಕ್ಕೆ ಬೇಕಾದೊರನ್ನ ಅದೇ ರಾಜ್ಯದವರೇ ತಗೋತಾರೆ, ಒಕ್ಕೂಟದ ಸರ್ಕಾರ ಯಾಕೆ ಮೂಗು ತೂರಿಸ್ಕೊಂಡು ಬರಬೇಕು. IAS ban ಮಾಡಿ. ಕನ್ನಡ ಕರ್ನಾಟಕ ಉಳಿಸಿ.

manasakeelambi ಅಂತಾರೆ...

ಐ.ಎ.ಎಸ್. ಅನ್ನು ಬ್ಯಾನ್ ಮಾಡಬೇಕೆನ್ನುವ ಅನಾಮಿಕರ ವಾದ ಒಂದು ರೀತಿಯಲ್ಲಿ ಸರಿಯಾದದ್ದೇ. ಆಯಾಯ ರಾಜ್ಯಗಳಿಗೆ ಬೇಕಾದ ಅಧಿಕಾರಿಗಳನ್ನು ಅವರ್‍ಏ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಆದರೆ, ಅದು ಪ್ರಾಮಾಣಿಕ ಆಯ್ಕೆಯಾಗಿರಬೇಕು.ಹಾಗಾದಾಗ, ನಾಡಿನ ನಿಜವಾದ ಏಳಿಗೆ ಸಾಧ್ಯವಾಗಬಹುದು. ಏಕೆಂದರೆ, ಪರನಾಡಿನ ಅಧಿಕಾರಿಗಳಿಗೆ ನಾಡಿನ ಆತ್ಮ ತಿಳಿದಿರುವುದಿಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails