ಕನ್ನಡ ಚಿತ್ರದಲ್ಲಿ ದುಡ್ಡಿಲ್ಲ ಅನ್ನೋ ಮಲ್ಟಿಪ್ಲೆಕ್ಸಗಳು

ಕನ್ನಡ ಚಿತ್ರಗಳ ಪ್ರದರ್ಶನದಿಂದ ದುಡ್ಡು ಹುಟ್ಟಲ್ಲ ಆದ್ದರಿಂದ ಮಲ್ಟಿಪ್ಲೆಕ್ಸ್ ಮಾಲೀಕರು ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಸಿದ್ದರಿಲ್ಲ ಅನ್ನೋ ಒಂದು ಸುದ್ದಿ ಇತ್ತೀಚಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿತ್ತು. ಜಗತ್ತಿನ ಮಲ್ಟಿಪ್ಲೆಕ್ಸ್ ಗಳ ಇತಿಹಾಸದಲ್ಲೇ ಚಿತ್ರವೊಂದು ಮಲ್ಟಿಪ್ಲೆಕ್ಸ್ ನಲ್ಲಿ ಒಂದು ವರ್ಷ ಪೂರ್ತಿ ಓಡಿದ ದಾಖಲೆ ಕೇವಲ ಕನ್ನಡ ಚಿತ್ರಕ್ಕೆ ಇದ್ರೂ ಈ ರೀತಿಯ ಹೇಳಿಕೆ ನೀಡೋ ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ ಮಾಲೀಕರ ಧೋರಣೆ ಕನ್ನಡದ ಮಾರುಕಟ್ಟೆ ಬಗ್ಗೆ ಅವರಿಗಿರೋ ತಪ್ಪು ಕಲ್ಪನೆ ತೋರಸಲ್ವಾ ಗುರು?ಇವರು ಹೇಳೊದೇ ನೋಡಿ

ಡೆಕ್ಕನ್ ಹೆರಾಲ್ಡ್ ನಲ್ಲಿ ಬಂದ ವರದಿಯಲ್ಲಿ ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್ ಮಾಲೀಕರ ಹೇಳಿಕೆಯನ್ನೇ ಗಮನಿಸಿ. ಒಬ್ಬರು ಹೇಳ್ತಾರೆ
The crowd comes here mainly for Hindi films. So screening Kannada movies won’t bring us that much of revenue.
ಇವರ ಮಾತಿನ ಅರ್ಥ ಕನ್ನಡಿಗರು ಕನ್ನಡ ಸಿನೆಮಾಗಳನ್ನು ಮಲ್ಟಿಪ್ಲೆಕ್ಸ್ ನಲ್ಲಿ ನೋಡಲ್ಲಾ ಅಂತೇನಾದ್ರೂ ಶಪಥ ಮಾಡಿದಾರಂತಾ ಗುರು? ಅಥವಾ ಕನ್ನಡಿಗರ ಬಳಿ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನೆಮಾ ನೋಡೋಷ್ಟು ಕಾಸು ಇಲ್ಲ ಅನ್ನೋದಾ ? ಕನ್ನಡ ಸಿನೆಮಾಗಳ ಪ್ರದರ್ಶನದಿಂದ ದುಡ್ಡು ಹುಟ್ಟಲ್ಲ ಅನ್ನೋದು ನಿಜ ಆದ್ರೆ ಮುಂಗಾರು ಮಳೆ, ಮಿಲನದಂತಹ ಕನ್ನಡ ಸಿನೆಮಾಗಳು ಅದೇಗೆ ಮಲ್ಟಿಪ್ಲೆಕ್ಸ್ ಗಳಲ್ಲೇ ಭರ್ತಿ ಒಂದು ವರ್ಷದ ಪ್ರದರ್ಶನ ಕಂಡಿದ್ದು ? ಜೋಗಿ, ಅಮೃತಧಾರೆ, ಆ ದಿನಗಳು, ಗಾಳಿಪಟ ಇನ್ನೂ ಮುಂತಾದ ಸಿನೆಮಾಗಳು 100ಕ್ಕೂ ಹೆಚ್ಚಿನ ದಿನದ ಪ್ರದರ್ಶನ ಕಂಡಿದ್ದು? ಕನ್ನಡ ಚಿತ್ರಗಳಿಂದ ಲಾಭ ಆಗದೇ, ಇವರಿಗೆಲ್ಲ ಕನ್ನಡದ ಮೇಲೆ ಅಭಿಮಾನ ಉಕ್ಕುಕ್ಕಿ ಹರಿದು ಇವರೆಲ್ಲ ಈ ಚಿತ್ರಗಳನ್ನು ತಿಂಗಳುಗಟ್ಟಲೇ ಪ್ರದರ್ಶನ ಮಾಡಿದ್ರು ಅಂತೇನಾದ್ರೂ ಅನ್ಸುತ್ತಾ ಗುರು?

ಇನ್ನೊಬ್ರು ಅಂತಾರೆ:
We did think of screening old Rajkumar movies, but then again we were not too sure how the response will be.
ಕನ್ನಡ ಸಿನೆಮಾ ಪ್ರದರ್ಶನಾನೇ ಮಾಡದೇ ಪ್ರತಿಕ್ರಿಯೆ ಚೆನ್ನಾಗಿರಲ್ಲ ಅಂತಾ ಹೆಂಗೆ ಊಹಿಸಿಕೊಂಡ್ರು ಗುರು? ಸಿನೆಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೊಡೊದು ಸಿನೆಮಾ ನೋಡೋ ಪ್ರೇಕ್ಷಕರ ಕೈಯಲ್ಲಿ ತಾನೇ ಇರೋದು?

ಮಾರುಕಟ್ಟೆ ಗೆಲ್ಲೋಕೆ ಒಳ್ಳೆಯ ಪ್ರಚಾರ ತಂತ್ರ ಬೇಕು
ಇದೇ ವರದೀಲಿ ಹೆಚ್ಚಿನ ಕನ್ನಡ ನಿರ್ಮಾಪಕರಿಗೆ ತಮ್ಮ ಚಿತ್ರ ಪ್ರದರ್ಶಿಸಲು ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳು ಸಿಕ್ತಾ ಇಲ್ಲ ಅನ್ನೋದನ್ನು ವಿವರಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ಯಾವತ್ತು ಸಿದ್ಧವಾಗಿ ಸಿಗೋ ಈ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳು ಕನ್ನಡ ಚಿತ್ರ ನಿರ್ಮಾಪಕರಿಗೆ ಮಾತ್ರ ಸಿಕ್ಕಲ್ಲ ಅನ್ನೋದು ಎಂತಾ ವಿಚಿತ್ರಾ ಅಲ್ವಾ ಗುರು? ಒಳ್ಳೆಯ ಅದೆಷ್ಟೋ ಕನ್ನಡ ಸಿನೆಮಾಗಳು ಮಾರುಕಟ್ಟೆಯಲ್ಲಿ ಗಲ್ಲಾಪೆಟ್ಟಿಗೆ ಸೂರೆ ಹೋಡಿತಾ ಇದ್ರು ಈ ಮಲ್ಟಿಪ್ಲೆಕ್ಸ್ ಗಳಲ್ಲಿ ಆ ಸಿನೆಮಾಗಳು ಯಾಕೆ ಪ್ರದರ್ಶನವಾಗಲ್ಲ? ಕೆಲವು ಮಲ್ಟಿಪ್ಲೆಕ್ಸ್ ಗಳು ತಮಿಳು, ಹಿಂದಿ, ಇಂಗ್ಲಿಷ್ ಚಿತ್ರಗಳಿಗೆ ವಿಶೇಷ ಪ್ರಿಮಿಯರ್ ಪ್ರದರ್ಶನವಿಟ್ಟುಕೊಳ್ಳುತ್ತೆ, ತಮಿಳು ಸಂಗೀತ ಕಲಾವಿದರನ್ನು ಕರೆಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತೆ, ಆದ್ರೆ ನಮ್ಮ ರಾಜ್ಯದ ಯಾವುದೇ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಮಾಡಿದ್ದು ನೀವೆಂದಾದರೂ ನೋಡಿದಿರಾ? ಈ ರೀತಿಯ ಪ್ರಚಾರ ತಂತ್ರ ಬಳಸಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಮುಂದಾದ್ರೆ ಒಳ್ಳೆಯ ಕನ್ನಡ ಚಿತ್ರಗಳು ಅದ್ಯಾಕೆ ಓಡಲ್ಲ ಗುರು ?

ಒಳ್ಳೆ ಕನ್ನಡ ಸಿನೆಮಾಕ್ಕೆ ಅವಕಾಶ ಕೊಟ್ಟು, ಒಳ್ಳೆ ರೀತಿಲಿ ಪ್ರಚಾರ ಮಾಡಿದ್ರೆ ಕನ್ನಡ ಸಿನೆಮಾಗಳಿಂದ ಇನ್ನಷ್ಟು ದುಡ್ಡು ಮಾಡಬಹುದು ಅನ್ನೋದನ್ನ ಎಷ್ಟು ಬೇಗ ಇವರುಗಳು ಅರ್ಥ ಮಾಡ್ಕೋತಾರೋ ಅಷ್ಟು ಅವರಿಗೆ ಒಳ್ಳೇದು. ಹಾಗೇ, ಇವರ ಇವತ್ತಿನ ಧೋರಣೆಯನ್ನು ಪ್ರಶ್ನಿಸಬೇಕಾದವರು ಮತ್ತು ಪ್ರಶ್ನಿಸಬಹುದಾದವರು ಕನ್ನಡದ ಗ್ರಾಹಕರು ಮಾತ್ರ. ಗ್ರಾಹಕರಾಗಿ ನಾವೆಲ್ಲ ಈ ಚಿತ್ರಮಂದಿರಗಳ ಕನ್ನಡ ಚಿತ್ರ ವಿರೋಧಿ ಧೋರಣೆ ಪ್ರಶ್ನಿಸಿ, ಕನ್ನಡ ಚಿತ್ರಗಳ ಹೆಚ್ಚೆಚ್ಚು ಪ್ರದರ್ಶನಕ್ಕೆ ಆಗ್ರಹಿಸೋಣ. ಹಾಗೇ, ಒಳ್ಳೆಯ ಕನ್ನಡ ಚಿತ್ರಗಳು ಅಲ್ಲಿ ಬಂದಾಗ ನೋಡಿ ಪ್ರೋತ್ಸಾಹಿಸೋಣ. ಏನಂತೀಯಾ ಗುರು?

8 ಅನಿಸಿಕೆಗಳು:

ಸುಮ್ಸುಮ್ಕೆ ಅಂತಾರೆ...

ಅದೇ ಪೇಪರ್ ನಲ್ಲಿ ಹೀಗೂ ಹೇಳಿದಾರೆ:
While many single theatre owners were hesitant and chose not to comment, only Kapur went on record to say, “I have no problems with the language of the movie that is being screened, we are here for business and as long as we get the assured box-office success there shouldn’t be a problem.”

ಇದು ಸರಿಯಾದ ವ್ಯಾಪಾರಿಯ ನಿಲುವು ಅಂತ ನಾವು ಕಾಣಬೇಕು. ಆದರೆ ಜವಾಬ್ದಾರಿಯುತ ಗ್ರಾಹಕರಾದ ನಾವೆಲ್ಲಾ ಇಂತಹ ವ್ಯಾಪಾರಿಗೆ ನಮ್ಮ ಗ್ರಾಹಕ-ಶಕ್ತಿಯನ್ನು ಬೆಂಗಳೂರಲ್ಲಿ ಕನ್ನಡ ಚಿತ್ರಗಳಿಗೇ ಹೆಚ್ಚು ಬೇಡಿಕೆ ಅಂತ ತೋರಿಸಿಕೊಡಬೇಕು.

ಜೊತೆಗೆ ಹಿಂದಿ-ತಮಿಳು-ತೆಲುಗು ಚಿತ್ರಗಳನ್ನೇನು ಈ ಚಿತ್ರಮಂದಿರದವರು ನೋಡಿ, ಪರೀಕ್ಷಿಸಿ ಪ್ರದರ್ಶನ ಮಾಡೊಲ್ಲ. ಆ ಭಾಷೆಯ ಚಿತ್ರ ಹೇಗೇ ಇರಲಿ, ಜನ ಬರ್ತಾರೆ ಅನ್ನುವ (ಹಿಂದಿನ ಅನುಭವದ) ಅನಿಸಿಕೆ. ಈ ರೀತಿಯ ಅಭಿಪ್ರಾಯ ಕನ್ನಡಿಗರ ಬಗ್ಗೆಯೂ ಮೂಡಬೇಕು. ಹಾಗೆ ನೋಡಿದರೆ ಕನ್ನಡದ ಚಿತ್ರಗಳಿಗೆ ಹೆಚ್ಚು ಪರದೆಗಳು ಸಿಗದೇ ಹೋದರಿಂದ ಒಂದಿಷ್ಟು ಪರದೆಗಳ ಮೇಲೆ ನೂರಾರು ದಿನ ಓಡುವ ಪರಿಸ್ಥಿತಿ ಇದೆಯೇನೋ. ಅದೇ ಬೆಂಗಳೂರಿನಲ್ಲೆಲ್ಲಾ ಕಡೆ ಅದೇ ಚಿತ್ರ ಪ್ರಸಾರವಾದರೆ ಎಲ್ಲೆಡೆ ಸೇರಿ ಒಂದು ತಿಂಗಳಲ್ಲಿ ಅಷ್ಟೂ ಜನ ನೋಡಬಹುದು. ಕಷ್ಟ ಪಡದೆ ನೋಡಬಹುದು. ಚಿತ್ರಮಂದಿರವೊಂದರಲ್ಲಿ ಹೆಚ್ಚು ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ದಾರಿಯೂ ಆಗುತ್ತೆ.

ಆದ್ದರಿಂದ ಎಲ್ಲಾ ಪರದೆಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಒತ್ತಾಯ ಮಾಡುವುದು ಕನ್ನಡಿಗ ಗ್ರಾಹಕರಾದ ನಮ್ಮ ಜವಾಬ್ದಾರಿ.

naganayan ಅಂತಾರೆ...

naanu nodidagininda innovative multiplex.. alli yava kannada cinema pradarshisilla.............. adakke marthahalli alli iruva kongaru haagu mallugale kaarana.........
nammallina janakke download maadi english films nodtare horatu yaaru duddu kottu namma cinema nododilla............


this fragile mentality has not only shaken our thoughts but also our roots..... the day when we realise this and act accordingly then only we kannadigas can find ourselves comfortable in Bengaluru or else its same old inferior complexity abt our films......

ರಮೇಸ ಅಂತಾರೆ...

ಗುರು,

ನೀನ್ ಯೋಳ್ತಿರೋದ್ ದಿಟ. ಒಂದ್ ವರ್ಸ ಓಡಿದ್ ಮುಂಗಾರು ಮಳೆ, ಮಿಲನ ಚಿತ್ರ, ಹಿಂದಿ ದಂತ? ಎಲ್ಲ ಬರಿ ಹಿಂದಿ ಚಿತ್ರಗಳಿಂದ್ಲೆ ಹಣ ಬತ್ತ ಇರೋದು, ಕನ್ನಡ ಚಿತ್ರಗಳಿಂದ ಬಿಡ್ಗಾಸು ಬತ್ತ ಇಲ್ಲ ಅಂತ ಬುರುಡೆ ಒಡಿತವೆ ಬಡ್ಡೆತ್ತವು. ಪ್ಯಾಪರ್ನಾಗ್ ಯೋಳಿರೊದು ಇನ್ನೊಂದ್ ಇಸ್ಯ ಓದ್ ದೆ "Economic times" ನಲ್ಲಿ. ಅಲ್ಲಿ ಯೋಳೋದೆ ಬ್ಯರೆ ಅಂತಿನಿ. ಕಳೆದ ಆರ್ ತಿಂಗ್ಳಲ್ಲಿ ಒಂದು ಹಿಂದಿ ಚಿತ್ರಾನು ಓಡೇ ಇಲ್ವಂತೆ. ಎಲ್ಲ ತೋಪಾಗವಂತೆ. "Deccan Herald" ನಲ್ಲಿ ಸ್ರೀನಿವಾಸ ಯೋಳಿರೋದು ಪೂರ್ವಾಗ್ರಹ ಪೀಡಿತ ಹೇಳಿಕೆ ಅಂತ ಈ ಕೊಂಡಿಲಿ http://epaper.timesofindia.com/Daily/skins/ETNEW/navigator.asp?Daily=ETBG&showST=true&login=default 26ನೇ ತಾರೀಕಿನ್ ಪ್ಯಪರ್ ನ 4 ನೇ ಪುಟ ನೋಡಿದ್ರೆ ಗೊತ್ತಾಯ್ತದೆ.

ಇಂತಿ
ರಮೇಸ

ಕಿಶೋರ್! ಅಂತಾರೆ...

"ಫನ್ ಸಿನೆಮಾಸ್" ಎಂಬ ಮಲ್ಟಿಪ್ಲೆಕ್ಸ್ ನಲ್ಲಿ ಬೇರೆ ಭಾಷೆಯ ಚಿತ್ರಗಳು ಜಾಸ್ತಿ ಪ್ರದರ್ಶನ-ಗೊಳ್ಳವುದರ ಬಗ್ಗೆ. ಹೊಸ ಹೊಸ ಕನ್ನಡ ಚಿತ್ರಗಳನ್ನು ಇವರು ಏಕೆ ಪ್ರದರ್ಶನ ಆಗ್ತಿಲ್ಲ ಅನ್ನೋದ್ರ ಬಗ್ಗೆ ಸ೦ಪದದಲ್ಲೂ ಚರ್ಚೆ ನಡೆಯುತ್ತಿದೆ...
ಮುಂದೆ ಓದಿ:
http://sampada.net/blog/priyankks/24/05/2009/20643

Harsha ಅಂತಾರೆ...

ರಮೇಸ ಹೇಳ್ತಿರೋದು ನಿಜ. ಈ ಬಿಗಿ ವಾತಾವರಣದಲ್ಲಿ ಯಾವ ಭಾಷೆ ಸಿನೆಮಾನು ಸರಿಯಾಗಿ ವೋಡ್ತ ಇಲ್ಲ. ಇನ್ನು ಈ ಮಲ್ಟಿಪ್ಲೆಕ್ಸ್ ನೋರು ಯಾಕೆ ಕನ್ನಡ ಸಿನಿಮಾಕ್ಕೆ ಹೇಳ್ತಾ ಇದಾರೆ ಅರ್ಥ ಆಗ್ತಾ ಇಲ್ಲ. ಎಮ್ಮೆಗೆ ಜ್ವರ ಬಂದ್ರೆ ಕೋಣಕ್ಕೆ ಬರೆ ಹಾಕೋದು ಅಂದ್ರೆ ಇದೇನಾ?

Anonymous ಅಂತಾರೆ...

ಜನರು ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಹೊಸತನವನ್ನು ಕಾಣುತ್ತಿದಾರೆ ಮತ್ತು ಪರಬಾಷೆಯ ಚಿತ್ರಗಳಿಗಿಂತ ಉತ್ತಮವಾಗಿದೆ ಎಂಬುದು ಸ್ಪಷ್ಟವಾಗಿದೆ. ಉದ್ಯಮಿಗಳಿಗೆ ಬೇಕಾಗಿರುವುದು ತಮ್ಮ ಬಂಡವಾಳಕ್ಕೆ ತಕ್ಕ ಲಾಭ, ಜನರು ತಮ್ಮ ದೈನಂದಿನ ಕೆಲಸದಿಂದ ಬಿಡುವಾದಾಗ ಮನೋರಂಜನೆಯನ್ನು ಬಯಸಿ ಬರುತ್ತಾರೆ. ಅತ್ಯುತಮ ಸವಲತ್ತುಗಲಿರುವಂತಹ ಇನಾಕ್ಸ್, ಫೋರಮ್ ಗಳಂತಹ ಚಿತ್ರಮಂದಿರಗಳಿಗೆ ಕನ್ನಡ ಪ್ರೇಕ್ಷಕನೇ ಹೆಚ್ಹು ಆದರು ಉದ್ಯಮಿಗಳಿಗೆ ಪರಬಾಷೆಯನ್ನು ಹೆಚ್ಹು ಪ್ರೋತ್ಸಾಹಿಸುವ ಉದ್ದೆಶವಿರುವುದರಿಂದ ಹೀಗೆ ಕನ್ನಡದ ಬಗ್ಗೆ ಕೀಳಾಗಿ ಹೇಳುತ್ತಾರೆ. ಇದರ ಪ್ರತಿಫಲವಾಗಿ ಇನ್ಮುಂದೆ ಇತರೆ ಬಾಷೆಯ ಸಿನಿಮಾಗಳನ್ನು ಕೇಳುವವರಿಲ್ಲದೆ ಅವರ ಬಂಡವಾಳಕ್ಕೆ ಲಭಾವಿಲ್ಲವಾದಾಗ ಅವರಿಗೆ ಬುದ್ದಿಬರುತ್ತದೆ.
ಹರ್ಷ

ಪುಟ್ಟ PUTTA ಅಂತಾರೆ...

ಹಿಂದಿ ಚಿತ್ರ ಓದುವವರನ್ನೇ ಬೋಳಿಸಲಿ ಬಿಡಿ. 150-200 ರೂ ಕೊಟ್ಟು ನೋಡುವುದು ದಡ್ಡತನ.

ಲಲ್ಲೆ (Lalle) ಅಂತಾರೆ...

೩ ವರ್ಷಕ್ಕೊಂದು ಮಿಲನ ,ಮುಂಗಾರುಮಳೆ ಬಂದ್ರೆ ಸಾಕಾಗುತ್ತ ಗುರು ಇವ್ರಿಗೆ? ನಮ್ಮ ಸಿನಿಮಾದವ್ರಿಗೆ ಒಳ್ಳೆ ಬುದ್ದಿ ಬಂದು ನಮ್ಮ ಸಾಹಿತ್ಯ ಓದೊಹಂಗೆ ಆಗಿ ಒಳ್ಳೊಳ್ಳೆ ಸಿನಿಮಾ ಬರೊ ಹಂಗೆ ಯೆನಾರ ಮಾಡ್ಬೇಕು ಅಲ್ವಾ ಗುರು?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails