"ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡಮಿ" ಅನ್ನೋ ಹೆಸರಿನ ಸಂಸ್ಥೆಯೊಂದು ಕಳೆದ ಹತ್ತು ವರ್ಷಗಳಿಂದ ಭಾರತೀಯ ಚಲನಚಿತ್ರೋತ್ಸವ ಅನ್ನೋ ಹೆಸರಲ್ಲಿ ಹಿಂದಿ ಚಿತ್ರಗಳ ಪ್ರದರ್ಶನವನ್ನು ಬೇರೆ ಬೇರೆ ದೇಶಗಳಲ್ಲಿ ನಡುಸ್ಕೊಂಡು ಬರ್ತಿದೆ. ಈ ಬಾರಿ ಇದು ಚೈನಾ ದೇಶದಲ್ಲಿ ಮಕಾಓ ಅನ್ನೋ ಊರಲ್ಲಿ ನಡೀತು. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಭಾರತೀಯ ನಟ/ ನಟಿ ಹೆಸರಿನ ಪ್ರಶಸ್ತಿಗಳನ್ನೂ ಕೊಟ್ಟಿದಾರೆ.
ಭಾರತ ಅಂದ್ರೆ ಬರೀ ಹಿಂದಿ ಅನ್ನೋ ಪ್ರಚಾರ ಒಂದು ಹುನ್ನಾರವೇ!
ಈ ಸಂಸ್ಥೆಯೋರು ಜಗತ್ತಿಗೆ ಸಾರಕ್ಕೆ ಹೊರಟಿರೋದಾದ್ರೂ ಏನಪ್ಪಾ ಅಂದ್ರೆ ಭಾರತೀಯ ಚಿತ್ರಗಳು ಅಂದ್ರೆ ಹಿಂದಿ ಚಿತ್ರಗಳು ಅಂತಾನೆ. ಈ ಮೂಲಕ ಭಾರತ ಅಂದ್ರೆ ಹಿಂದಿ ಅಂತ. ಹಾಗಾದ್ರೆ ಹಿಂದಿಯವರಲ್ಲದ ಉಳಿದ ಬಹುಸಂಖ್ಯಾತ ಜನಸಂಖ್ಯೆಯ ಜನರು ಭಾರತೀಯರಲ್ವಾ? ನಾವಾಡೋ ನುಡಿ ಭಾರತೀಯವಲ್ವಾ? ನಮ್ಮ ಚಿತ್ರರಂಗ ಭಾರತೀಯ ಚಿತ್ರರಂಗವಲ್ವಾ? ಇದು ಅನ್ಯಾಯ ಅಂತ ದಕ್ಷಿಣ ಭಾರತ ಚಲನ ಚಿತ್ರ ಮಂಡಳಿಯೋರಿಗೇನು ಅನ್ನುಸ್ತಿಲ್ವಾ? ಹೋಗಲೀ ಕನ್ನಡಚಿತ್ರರಂಗವನ್ನು ಪ್ರತಿನಿಧಿಸೋ "ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ" ಜನ ಏನು ಮಾಡ್ತಿದಾರೆ? ಇಂಥಾ ಸುಳ್ಳುನ್ನ ಜಗತ್ತಿನ ತುಂಬಾ ಹಬ್ಬುಸ್ತಿರೋ ಈ ಸಂಸ್ಥೆ ಒಟ್ನಲ್ಲಿ ಸಾರುತ್ತಿರೋದು ಹಿಂದೀ ನುಡಿಯಾಡದೇ ಇರೋರು ಭಾರತದಲ್ಲಿ ಲೆಕ್ಕಕ್ಕಿಲ್ಲಾ ಅನ್ನೋದನ್ನೇ ಅಲ್ವಾ ಗುರು!
ಬರೀ ಬಾಲಿವುಡ್ ಚಿತ್ರಗಳ ಮಾರುಕಟ್ಟೆ ಕಟ್ಟೋಕೆ ಮುಂದಾಗಿರೋ ಈ ಸಂಸ್ಥೆಗೆ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಅಂತ ಹೆಸರಿಟ್ಟುಕೊಳ್ಳೋಕೆ ಅದೆಂಗೆ ಈ ದೇಶದ ವ್ಯವಸ್ಥೆ ಸಾಧ್ಯ ಮಾಡ್ಕೊಡ್ತು? ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅನ್ನೋ ಬದಲು ಹಿಂದೀ ಫಿಲ್ಮ್ ಅಕಾಡಮಿ ಅಂತಾ ಹೆಸರಿಟ್ಟುಕೊಂಡು ಇವ್ರು ಏನಾರಾ ಮಾಡ್ಕೊಳ್ಳಿ. ಅದು ಬಿಟ್ಟು ಹೀಗೆ ಇದು ಹಿಂದಿ ಭಾಷಿಕರಲ್ಲದ ಎಲ್ಲಾ ಭಾರತೀಯ ಜನಾಂಗಗಳನ್ನು ಕಡೆಗಣಿಸೋ ತಂತ್ರ ಮಾಡೋದು ಮಾತ್ರಾ ಭಾರತದಲ್ಲಿ ಹಿಂದಿಯವರಲ್ಲದ ನಾವೆಲ್ಲಾ ನಿಜವಾಗ್ಲೂ ಎರಡನೇ ದರ್ಜೆಯ ಪ್ರಜೆಗಳಾಗಿದೀವಾ ಅಂತಾ ಶಂಕೆ ಹುಟ್ ಹಾಕ್ತಿಲ್ವಾ ಗುರು?
2 ಅನಿಸಿಕೆಗಳು:
ಇವರು ಮಾಡುತ್ತಿರುವ ಕುರುಡು ಕೆಲಸದ ಬಗ್ಗೆ ಇವರಿಗೆ ತಿಳಿ ಹೇಳಬಹುದು.
IIFA ಸಂಸ್ಥೆಯನ್ನು ಇಲ್ಲಿ ಸಂಪರ್ಕಿಸಬಹುದು: iifa@iifa.com
ಇವರ ಕಣ್ಣಿಗೆ ದೇಶದಲ್ಲೆ ಕೇವಲ ಹಿಂದಿ ಚಿತ್ರಗಳೇ ಕಂಡರೂ, ದೇಶದೆಲ್ಲೆಡೆ ನೂರಾರು ಭಾಷೆಗಳ ಚಿತ್ರಗಳು ತಯ್ಯಾರಾಗುತ್ತಿವೆ. ಅದರ ಬಗ್ಗೆ ಕುರುಡರಾಗಿರುವ ಇವರನ್ನು ಕಣ್ತೆರೆದು ನೋಡಲು, ಅಥವಾ ಬಾಗಿಲು ಮುಚ್ಚಿಕೊಳ್ಳಲು ಹೇಳಬಹುದು. ಇವರು ಇಂತಹ ಕೆಲಸ ಮಾಡಿ ಅಂತ ಯಾರೂ ಕೇಳಿಕೊಂಡಿಲ್ಲ. ಇವರು ಕೆಲಸ ಮಾಡುವುದಾದರೆ ಭಾರತದೊಳಗಿನ ಚಿತ್ರೋದ್ಯಮದ ನಿಜ ನೋಟ ಭೀರಲಿ, ಇಲ್ಲವೇ ಇವರು ಕೊಡುತ್ತಿರುವುದು ಭಾರತದ ಚಿತ್ರೋದ್ಯಮಗಳಲ್ಲಿ ಒಂದಾದ ಹಿಂದಿ ಚಿತ್ರೋದ್ಯಮದ ಬಗ್ಗೆ ಅಂತ ಬಹಿರಂಗವಾಗಿ ಹೇಳಲಿ.
ಭಾರತೀಯ ಚಿತ್ರರಂಗ ಅಂದ್ರೆ "ಹಿಂದಿ"ಯೊಂದೆ ಅಂತಾ ಸುಳ್ಳು ಪ್ರಚಾರ ಮಾಡ್ತಾ ಇದಾರೆ.
ಕನ್ನಡ ಚಿತ್ರಗಳು ಹಿಂದಿ ಚಿತ್ರಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲಾ ಅಂತಾ ಅವರು ಅರಿಯಬೇಕಾಗಿದೆ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!