ನಿನ್ನೆ ಸಾಯಂಕಾಲಾ ಕಿಟಾರ್ ಅಂತ ಮನೆ ಒಳ್ಗಿಂದ ಕಿರ್ಚಿದ್ ಸದ್ದು ಕೇಳಿ ನಮ್ ಎಂಕ ಒಳಿಕ್ ಓಡಿ "ಯಾಕ್ಲಾ ಅಪ್ಪಯ್ಯಾ? ಏನಾಯ್ತು?" ಅಂದಿದ್ಕೆ ಹಣ್ಣು ಹಣ್ಣು ಮುದ್ಕ, ಎಂಕನ ಅಪ್ಪ, ಟೀ.ವಿ ಕಡೆ ಕೈ ತೋರುಸ್ತವ್ರೆ. ಅದ್ರೊಳ್ಗೆ ದಿಲ್ಲೀನಾಗೆ ಸಂಸದರೆಲ್ಲಾ ಪ್ರಮಾಣವಚನ ತೊಗೋತಾ ಇದ್ದ ನೋಟ ಕಾಣ್ತಾ ಇದೆ. "ಯಾಕ್ಲಾ ಅಪ್ಪಯ್ಯಾ ಅಂಗ್ ಕಿರುಚ್ದೆ?" ಅಂತ ನಮ್ ಎಂಕ ಅಂದಿದ್ಕೆ ಎಂಕನ ಅಪ್ಪಾ ಅಂತಾರೇ.. "ಯಂಕಾ, ಇವತ್ತು ಸೂರ್ಯ ಯಾಕಡೆ ಮುಳುಗವ್ನೆ ಒಸಿ ನೋಡ್ಲಾ? ನಾನೂ ಗಾಂಧಿತಾತನ್ ಕಾಲ್ದಿಂದ ವೋಟ್ ಹಾಕ್ಕೊಂಡ್ ಬತ್ತಾನೆ ಇವ್ನಿ. ಇವತ್ತಿನ್ ಗಂಟಾ ಇಂಥಾದ್ ನೋಡಿರ್ಲಿಲ್ಲ ಕಣಪ್ಪಾ, ನಂಗೂನೂವೆ ವಯಸ್ಸು ಎಪ್ಪತ್ತೈದು ಆಯ್ತು. ಇಲ್ಲಿಗಂಟಾ ಚುನಾವಣೆಯಾಗ್ ಗೆದ್ದೋರೆಲ್ಲಾ ಇಂಗ್ಲಿಸಲ್ಲೋ, ಇಂದೀನಲ್ಲೋ ಪ್ರಮಾಣವಚನ ತಕ್ಕಳದು ನೋಡಿವ್ನಿ, ಇದೇ ಪಸ್ಟು ಕರ್ನಾಟಕದೋರೆಲ್ಲಾ ಕನ್ನಡದಲ್ಲೇ ತೊಗೋತಾ ಅವ್ರೆ ಕಣ್ಲಾ! ಇವತ್ತೇ ಮೊದ್ಲು ಇವು ಏನ್ ಯೋಳ್ತವೇ ಅಂತ ನಂಗೂನೂವೆ ತಿಳ್ದಿದ್ದು" ಅನ್ನದಾ?
ರಾಜಕಾರಣದಲ್ಲಿ ಎಚ್ಚೆತ್ತ ಕನ್ನಡಪ್ರಜ್ಞೆ!
ನೋಡುದ್ಯಾ ಗುರು! ಇವತ್ತು ನೇಸರಾ ಪಡುವಣದಾಗ್ ಹುಟ್ಕಂಡ್ ಮೂಡಣದಲ್ ಮುಳುಗವ್ನಾ ಅಂತಾ? ಔದು, ಇವತ್ತು ದಿಲ್ಲಿನಾಗೆ ನಮ್ ಸಂಸದ್ರು ಕನ್ನಡದಾಗೆ ಪ್ರಮಾಣ ಮಾಡಿದ್ದು ಇಡೀ ಕನ್ನಡನಾಡು ಎದೆಯುಬ್ಸೋ ಅಂಗ್ ಮಾಡಿದ್ದು ದಿಟಾ ಗುರು! ಸ್ವಸಂತ್ರ ಬಂದ್ ಅರವತ್ ವರ್ಸಾದ ಮ್ಯಾಗೆ ಇಂತಾ ಬದಲಾವಣೆ ಕಾಣ್ತಾ ಐತೆ. ಇಂಗಾಗಕ್ಕೆ ಕಾರಣಾನೇ ನಮ್ ಕನ್ನಡದೋರಲ್ಲಿ ಆಗಿರೋ ಕನ್ನಡತನದ ಜಾಗೃತಿ. 2004ರಿಂದ ಇಲ್ಲಿಗಂಟಾ ನಡ್ದಿರೋ ಬೇಜಾನ್ ಓರಾಟಗಳಿಂದ ಇವತ್ತು ಚುನಾವಣೇಲಿ ಕನ್ನಡನಾಡಿನ್ ಇತ ಕಾಪಾಡೋದು, ದಿಲ್ಲಿಯಿಂದ ನಮ್ ಊರುಗಳಿಗೆ ದಕ್ಕುಸ್ಕೋಬೇಕಿರೋದನ್ನೆಲ್ಲಾ ದಕ್ಕುಸ್ಕೊಳ್ಳೋದು... ಇಂಗೆ ಜನರು ನಮ್ಮ ಸಂಸದರಿಂದ ಕನ್ನಡಕ್ಕೆ ಬದ್ದತೇನಾ ನಿರೀಕ್ಸೆ ಮಾಡಿದ್ ಸುಳ್ಳಲ್ಲಾ! ಮೊನ್ನೆ ಮೊನ್ನೆ ಕರ್ನಾಟಕ ರಕ್ಷಣಾ ವೇದಿಕೆಯೋರು, ಕನ್ನಡ ಅಭಿವೃದ್ಧಿ ಪ್ರಾದಿಕಾರದೋರು ಗೆದ್ದಿರೋ ಎಲ್ರೂಗೂ ಕನ್ನಡಾದಲ್ಲೇ ಪ್ರಮಾಣವಚನ ತಕ್ಕಳಕ್ಕೆ ಕೇಳ್ಕಂಡಿದ್ರು. ಈಗ ಅಂಗೇ ಆಗಿದ್ ನೋಡಿ ಆಲ್ ಕುಡ್ದಂಗಾಯ್ತು! ಬಿಜೇಪಿಯೋರಂತೂ ಇಂಗ್ ಕನ್ನಡದಲ್ಲೇ ಪ್ರಮಾಣ ಮಾಡಿ ಅಂತಾ ತಮ್ ಎಂಪಿಗೋಳ್ಗೆ ಆದೇಸಾನೇ ಕೊಟ್ಟಿದ್ರಂತೆ. ನೋಡ್ದಾ ಗುರು! ಇಂದೀವಾದಿ ಬಿಜೇಪೀನೂ ಇವತ್ ಕನ್ನಡಿಗರ ಮನಮೆಚ್ಸಕ್ಕೆ ಮುಂದಾಗಿರೋದು ಕನ್ನಡದೋರಲ್ಲಿ ಉಟ್ಕಂಡಿರೋ ರಾಜಕೀಯ ಪ್ರಜ್ಞೆಯಿಂದಾನೆ ಅನ್ನದು ಅದಿನಾರಾಣೆ ಸತ್ಯಾ! ನಾವೂನೂವೆ ಇಷ್ಟುಕ್ಕೇ ಕುಸಿ ಪಟ್ಕೊಂಡ್ ಸುಮ್ಕಾಗೋದ್ ಬ್ಯಾಡಾ! ನಾಡಿನ ಇತ ಕಾಯೋ ಇಸ್ಯದಲ್ಲಿ ಸಂಸದ್ರು ಮ್ಯಾಲೆ ಸದಾ ಒತ್ತಡ ಆಕ್ತಿರೋಣಾ. ಸರಿಯಿದ್ದಾಗ ಸಭಾಸ್ ಅನ್ನಮಾ, ಇಲ್ದಿದ್ದಾಗ್ ಬಯ್ಯಮಾ... ಅಲ್ವಾ ಗುರು!
5 ಅನಿಸಿಕೆಗಳು:
sakath suddi guru!
welcome back yenka,,
i missed u..
tumba chennagi bandide ivattina baraha
ಕ ರ ವೇ ಅವರನ್ನು ಇದಕ್ಕೆ ಅಭಿನಂದಿಸಬೇಕು..ಮೊಯಿಲಿ ಮುನಿಯಪ್ಪ ಅವರಿಗೆ ಏನಾಗಿತ್ತೋ ದೇವರಿಗೆ ಗೊತ್ತು..ಇನ್ನೂ ಕೀಳರಿಮೆ ಇಂದ ಹೊರಗೆ ಬಂದಿಲ್ಲ ಅನ್ಸುತ್ತೆ..೨೮ ಜನರಲ್ಲಿ ೨೬ ಜನ ಕನ್ನಡದಲ್ಲಿ ಪ್ರಮಾಣ ವಚನ ತೊಗೊಂಡಿದ್ದು ಭಾರಿ ಸಂತೋಷದ ವಿಚಾರ..ನಮ್ಮ ಜನರಲ್ಲಿ ಕನ್ನಡತನ ಜಾಗೃತವಾಗುತ್ತಿದೆ ಅಂತ ನಿಧಾನವಾಗಿ ಗೊತ್ತಾಗ್ತಿದೆ ಈ ರಾಜಕಾರಣಿಗಳಿಗೆ..ಅದಕ್ಕೆ ಇವೆಲ್ಲ..ಪ್ರಮಾಣ ವಚನ ಏನೋ ಸ್ವೀಕರಿಸಿದರು..ನಮ್ಮ ನಾಡು ನುಡಿ ಜನರ ವಿಷಯದಲ್ಲಿ ಯಾವುದೇ ರಾಜಿ ಮಾಡ್ಕೊಳ್ಳದೆ ಒಳ್ಳೆ ಕೆಲಸ ಮಾಡ್ಲಿ..
Good Job ka.ra.ve and kannadiga MPs
ಕನ್ನಡದಲ್ಲಿ ಪ್ರಮಾಣ ವಚನ ತಗೊಂಡಿರೋದು ಒಳ್ಳೆ ಸುದ್ದಿನೆ..
ಮುಂದಿನ ಐದು ವರ್ಷದಲ್ಲಿ ನಮ್ಮ ರಾಜ್ಯಕ್ಕೆ ಒಳ್ಳೆ ಭವಿಷ್ಯ ಇದೆ ಅಂದ್ಕೋತೀನಿ ಕಣ್ರೀ..
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!