ಭಾರತ - ಒಂದು ಅಲೆಮಾರಿಗಳ ದೇಶವಾ?

ಭಾರತ ದೇಶಕ್ಕೆ ಆಡಳಿತ ಭಾಷೆ ಯಾವುದಪ್ಪ ಇರಬೇಕು ಅನ್ನೋ ಪ್ರಶ್ನೆಗೆ ಕೆಲವು ಅಲ್ಪಮತಿಗಳು ಕೊಡೊ ಉತ್ತರ ಹಿಂದಿ ಎಂದು. ದೇಶಕ್ಕೆ ಒಂದು ಭಾಷೆ ಅಂತ ಇಲ್ಲದೇ ಹೋದ್ರೆ, ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗೊರಿಗೆ ಎಷ್ಟು ಅನಾನುಕೂಲ ಆಗಲ್ವಾ ಅಂತ ಪ್ರಶ್ನೆ ಮಾಡೋರು ಇದ್ದಾರೆ. ಹಾಗಿದ್ರೆ, ನಿಜಕ್ಕೂ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆ ಪ್ರಮಾಣದಲ್ಲಿ ವಲಸೆ ಆಗ್ತಿದ್ಯಾ? ವಲಸಿಗರಿಗಾಗಿ ವ್ಯವಸ್ಥೆ ಕಟ್ಟಬೇಕು ಅನ್ನೋದು ಸರಿ ಅನ್ನೋರಿಗೆ ಉತ್ತರವಾಗಿ ಕರ್ನಾಟಿಕ್ ಬ್ಲಾಗಿನಲ್ಲಿ ಬಾ.ರಾ. ಕಿರಣ ಅವರು ಬರೆದಿರೋ ಅಂಕಣದ ಕನ್ನಡ ಸಾರಾಂಶ ಇಲ್ಲಿದೆ ಗುರು.
- ಸಂಪಾದಕ, ಏನ್ ಗುರು

ದೊಡ್ಡ ದೊಡ್ಡ ಊರುಗಳಲ್ಲಿರೋ, ಅದರಲ್ಲೂ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕಲ್ಕತ್ತಾದಂತಹ ಊರುಗಳಲ್ಲಿ ಬೇರೆ ಬೇರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರಲ್ಲಿ, ಇಂಗ್ಲಿಷ್ ಮಾಧ್ಯಮಗಳಲ್ಲಿ ಕೆಲಸ ಮಾಡೋರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅದೇನಪ್ಪ ಅಂದ್ರೆ ಭಾರತ ಅನ್ನೋದು ಒಂದು ಅಲೆಮಾರಿಗಳ ದೇಶ, ಇಲ್ಲಿರೋ ಜನಕ್ಕೆ ಒಂದು ಊರಿಂದ ಇನ್ನೊಂದ್ ಊರಿಗೆ, ಒಂದು ರಾಜ್ಯದಿಂದ ಇನ್ನೊಂದ್ ರಾಜ್ಯಕ್ಕೆ ವಲಸೆ ಹೋಗೊದು ಬಿಟ್ರೆ ಬೇರೆ ಕೆಲ್ಸಾನೇ ಇಲ್ಲ ಅನ್ನೋದು.

ಇವರ ತಲೇಲಿರೋ ಇಂತಹ ತಪ್ಪು ಕಲ್ಪನೆಯಿಂದ ಇವರ ತಲೇಲಿ ಹುಟ್ಟಿರೋ ಭಾರತದಲ್ಲಿ ಕನ್ನಡ, ಮರಾಠಿ, ತಮಿಳು, ಬೆಂಗಾಳಿಯಂತಹ ನುಡಿಗಳಿಗೆ ಯಾವ ಬೆಲೆಯೂ ಇಲ್ಲ, ನೆಲೆಯೂ ಇಲ್ಲ. ಇವರ ಕಲ್ಪನೆಯ ಈ ಅಲೆಮಾರಿಗಳ ದೇಶದಲ್ಲಿ ಹಿಂದಿಗೆ ಮಾತ್ರ ಈ ದೇಶಾನಾ ಬೆಸೆಯೋ ಶಕ್ತಿ ಇರೋದು. ಇವರ ಕಲ್ಪನೆಯ ಭಾರತದಲ್ಲಿ ಅಲ್ಲಿನ ಕಲಿಕೆ, ಆಡಳಿತ, ಉದ್ಯೋಗವಕಾಶಗಳಿರೊದೇ ವಲಸಿಗರ ಅನುಕೂಲಕ್ಕಾಗಿ (ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕ ವಲಸಿಗರಿಗಾಗಿ). ಇವರ ಕಲ್ಪನೆಯ ಭಾರತದಲ್ಲಿ ಹಿಂದಿ ಭಾಷಿಕರ ಮುಂದೆ ಸ್ಥಳೀಯರ ಭಾರತೀಯತೆ ಸಪ್ಪೆ ಸಪ್ಪೆ.

ಹಾಗಿದ್ರೆ ಬನ್ನಿ 2001ರ ಜನಗಣತಿ ಪ್ರಕಾರ ಭಾರತದಲ್ಲಿ ಕಂಡು ಬಂದಿರುವ ವಲಸೆ ಅಂಕಿಅಂಶ ನೋಡೊಣ. ಅರಗಿಸಿಕೊಳ್ಳೊಕೆ ಕಷ್ಟ ಅನ್ನಿಸೋ ಸತ್ಯ ಏನು ಅನ್ನೋದನ್ನ ಸ್ವಲ್ಪ ನೋಡೊಣ.

2001ರ ಜನಗಣತಿಯ ಆಧಾರ ಇಟ್ಕೊಂಡು ಕೆಲವು ಲೆಕ್ಕಾಚಾರ ಹಾಕಿ, ತಾನು ಹುಟ್ಟಿರೋ ಊರು, ಜಿಲ್ಲೆ ಇಲ್ಲಾ ರಾಜ್ಯದಲ್ಲೇ ಉಳಿದುಕೊಂಡಿರೋ ಭಾರತಿಯರ ಸಂಖ್ಯೆ ಏನಿರಬಹುದು ಅಂತಾ ನೋಡಿದ್ರೆ ಕಾಣಿಸೋದು ಇಂತಿದೆ.(ಪ್ರತಿ ಸಾವಿರ ಭಾರತೀಯರಿಗೆ ಎಂದು ಅಂದಾಜಿಸಿಲಾಗಿದೆ):

ಇದರಂತೆ, ಜನಗಣತಿ ತಂಡ ಮಾತನಾಡಿಸಿದ ಪ್ರತಿ ಸಾವಿರ ಜನರಲ್ಲಿ 953 ಜನ ಗಣತಿ ನಡೆದ ಆ ರಾಜ್ಯದಲ್ಲೇ ಹುಟ್ಟಿರೋದು. ಅವರು ಬೇರೊಂದು ರಾಜ್ಯದಿಂದ ವಲಸೆ ಬಂದಿರೋರಲ್ಲ. ಹಾಗೆಯೇ, ಜನಗಣತಿ ತಂಡ ಮಾತನಾಡಿಸಿದ ಪ್ರತಿ 1000 ಜನರಲ್ಲಿ 878 ಜನ ಗಣತಿ ನಡೆದ ಅದೇ ಜಿಲ್ಲೆಯಲ್ಲೇ ಹುಟ್ಟಿರೋದು. ಕೊನೆಯಲ್ಲಿ, ಪ್ರತಿ 1000 ಜನರಲ್ಲಿ ಸುಮಾರು 701 ಜನ ಗಣತಿ ನಡೆದ ಹಳ್ಳಿಯಲ್ಲೇ ಹುಟ್ಟಿರೋದು ! ಇವರು ತಮ್ಮ ಜಿಲ್ಲೆಯಲ್ಲೇ ಇನ್ನೊಂದು ಜಾಗಕ್ಕೆ ವಲಸೆ ಹೋಗಿಲ್ಲ !

ಈ ಮೇಲಿನ ಅಂಕಿಅಂಶ ಭಾರತ ಅನ್ನೋದು ಅಲೆಮಾರಿಗಳ ದೇಶವಲ್ಲ ಅನ್ನೋದನ್ನ ಒತ್ತಿ ಹೇಳುತ್ತೆ. ನೆಲೆಸಿಗನನ್ನು ಕಡೆಗಣಿಸಿ, ವಲಸಿಗನಿಗಾಗಿ ಒಂದು ನಾಡಿನ ಕಲಿಕೆ, ಆಡಳಿತ, ಉದ್ಯೋಗವಕಾಶ ಕಟ್ಟಬೇಕು ಅನ್ನೋದು ತಪ್ಪು ನಿರ್ಧಾರ ಅಂತ ಒತ್ತಿ ಹೇಳುತ್ತೆ. ಅಷ್ಟೇ ಅಲ್ಲ, ಭಾರತ ಸರ್ಕಾರವೂ ಸೇರಿದಂತೆ ಹಲವರಲ್ಲಿರೋ, ಹಿಂದಿ ಬಿಟ್ಟು ಬೇರಾವ ಭಾಷೆಯೂ ಭಾರತವನ್ನು ಪ್ರತಿನಿಧಿಸಲ್ಲ ಅನ್ನೋ ನಂಬಿಕೆ ಎಷ್ಟು ಪೊಳ್ಳು ಅನ್ನೋದನ್ನು ಎತ್ತಿ ತೋರಿಸುತ್ತೆ.

ಇನ್ನೊಂಚೂರು ಇದರ ಆಳಕ್ಕೆ ಇಳಿದು, ಭಾರತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಿಜಕ್ಕೂ ವಲಸೆ ಹೋಗೊ ಜನರಿಗೂ, ತಮ್ಮ ಹುಟ್ಟು ರಾಜ್ಯದಲ್ಲೇ ನೆಲೆಸೋ ಸ್ಥಳೀಯರ ಸಂಖ್ಯೆಗೂ ಹೋಲಿಕೆ ಮಾಡಿದ್ರೆ ಕಾಣಿಸೋದು ಇಂತಿದೆ. (ನೆನಪಿರಲಿ, ಇಲ್ಲಿ ವಲಸಿಗ ಅಂದ್ರೆ ಒಂದು ಭಾಷೆ ಮಾತಾಡೋ ರಾಜ್ಯದ ಗಡಿ ದಾಟಿ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗೋನು. ಹಾಗೇ, ಸ್ಥಳೀಯ ಅಂದ್ರೆ ಗಣತಿ ಮಾಡ್ತೀರೋ ರಾಜ್ಯದಲ್ಲೇ ಹುಟ್ಟಿದವನು)

ಮೇಲೆ ಯಾವ ಅಂಕಿಅಂಶ ಹೆಚ್ಚು ಅನ್ನೋದನ್ನ ಬಾಲವಾಡಿಲೀ ಓದ್ತಿರೋ ಒಬ್ಬ ಪುಟ್ಟ ಹುಡುಗಾ ಕೂಡಾ ಹೇಳಬಲ್ಲ. ಇದನ್ನ ನೋಡಿದ ಮೇಲೆ, ದಿಲ್ಲಿ ದೊರೆಗಳು ಯಾರನ್ನ ಗಮನದಲ್ಲಿಟ್ಟುಕೊಂಡು ತಮ್ಮ ನೀತಿ-ನಿಯಮ ರೂಪಿಸಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳೊದು ನಿಜಕ್ಕೂ ಅಂತಾ ಕಷ್ಟ ಏನಲ್ಲ. ಆದ್ರೆ ಏನ್ ಮಾಡೋದು, ದಿಲ್ಲಿ ದೊರೆಗಳಿಗಿರೋ ಯೋಚನೆಗಳೇ ಬೇರೆ ಅನ್ಸುತ್ತೆ. ದಿಲ್ಲಿದೊರೆಗಳನ್ನ, ಹಾಗೇ ದೊಡ್ಡ ಊರುಗಳಲ್ಲಿರೋ ನಮ್ಮ ಕೆಲವು ಗೆಳೆಯರನ್ನ ಇನ್ನೊಮ್ಮೆ ಬಾಲವಾಡಿಗೋ, ಅಂಗನವಾಡಿಗೋ ಸೇರಸಿದ್ರೆ ಇನ್ನೊಂದ್ ಸ್ವಲ್ಪ ತಿಳುವಳಿಕೆ ಬರಬಹುದೆನೋ

1 ಅನಿಸಿಕೆ:

Anonymous ಅಂತಾರೆ...

ಸರಿಯಾಗಿ ಹೇಳಿದ್ಯ ಗುರೂ... ನಮ್ಮ ದೇಶದಲ್ಲಿರುವ ವಲಸಿಗರ ಅಂಕಿ-ಅಂಶಗಳನ್ನು ಕೊಟ್ಟು, ಒಂದು ದೇಶದ, ಒಂದು ರಾಜ್ಯದ ಆಡಳಿತ ವ್ಯವಸ್ಥೆ ವಲಸಿಗರಿಗಾಗಿರಬೇಕೋ ಅಥವಾ ಸ್ಥಳೀಯರಿಗಾಗಿರಬೇಕೋ ಎಂಬ ಸರಿಯಾದ ಚಿಂತನೆ ನಮ್ಮ ಜನರಲ್ಲಿ ಮೂಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನನ್ನಿ.

ಹಾಗೆಯೇ, ಸ್ಥಳೀಯರಿಗೆ ವ್ಯವಸ್ಥೆ ಕಟ್ಟುವುದರಿಂದಲೇ ನಮ್ಮ ರಾಜ್ಯಗಳು, ಅಲ್ಲಿನ ಸ್ಥಳೀಯರು, ಅವರ ಸಂಸ್ಕೃತಿ, ವೈವಿಧ್ಯತೆ, ಆ ಮೂಲಕ ನಮ್ಮ ದೇಶದ ಐಕ್ಯತೆ - ಎಲ್ಲವನ್ನೂ ಕಾಪಾಡಲು ಸಾಧ್ಯ ಎಂಬ ಸಂದೇಶ ಅತಿ ಸರಳವಾಗಿ ಮೂಡಿ ಬಂದಿದೆ. ಹಿಂದೆಯೂ ನಿಮ್ಮ ಅನೇಕ ಅಂಕಣಗಳಲ್ಲೂ ಈ ಸಂದೇಶವಿತ್ತು.

-ಪ್ರಜೆ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails