ಈ ಜಾಹೀರಾತು ರೂಪಿಸಿದ ಬೃಹಸ್ಪತಿ ಯಾರಪ್ಪಾ?


ಇದು ಇವತ್ತಿನ ಅಂದ್ರೆ ದಿನಾಂಕ ೦೪.೦೩.೨೦೧೦ರ ಕನ್ನಡಪ್ರಭದಲ್ಲಿ ಬಂದಿರೋ ಜಾಹೀರಾತು. ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್ ಅನ್ನೋ ಕೇಂದ್ರಸರ್ಕಾರಿ ಮಂತ್ರಾಲಯದೋರು ನಮ್ ಜನುಕ್ ಭೋ ಉಪಕಾರ ಮಾಡಕ್ಕೆ ಅಂತಾ ಈ ಒಂದು ಜಾಹಿರಾತನ್ನು ಹಾಕ್ಸಿದಾರೆ!
ಹಿಂದಿ ಹೇರಿಕೆಯೋ? ಸೋಮಾರಿತನಾನೋ?

ಇದುನ್ ಓದಕ್ಕೆ ಕನ್ನಡ ಓದಕ್ ಬರೋ ಎಲ್ರುಗೂ ಸಾಧ್ಯ... ಅದೇ ತಾನೆ ಒಂದು ಪತ್ರಿಕೆಯಲ್ಲಿ ಬರೆಯೋರ ಉದ್ದೇಶ! ನಾವು ಬರ್ದಿರೋದ್ನ ಎಲ್ಲಾ ಓದಬೇಕು ಅನ್ನೋದು.. ಓದಿದ್ದನ್ನು ಅರ್ಥ ಮಾಡ್ಕೋಬೇಕು ಅನ್ನೋ ಉಮ್ಮೇದಿಯಂತೂ ಇವರಿಗೆ ಇದ್ದಂಗಿಲ್ಲಾ. ಕನ್ನಡದಲ್ಲಿ ಹಾಕಬೇಕು ಅಂತಾ ಎಲ್ಲೋ ರೂಲ್ಸ್ ಇರಬೇಕು, ಅದುಕ್ಕೆ ಹೀಗೆ ಕಾಟಾಚಾರಕ್ಕೆ ಹಾಕಿದಾರೆ. ಇದುನ್ ಓದಿದ ಯಾವನೇ ಒಬ್ಬ ಕನ್ನಡಿಗ ಇದ್ನ ಪೂರ್ತಿಯಾಗಿ ಸರಿಯಾಗಿ ಅರ್ಥ ಮಾಡ್ಕೊಂಬುಟ್ರೆ... ಕನ್ನಡ ಕುಲದೈವ ಮಧುಕೇಶ್ವರನ ಮೇಲಾಣೆ. ಒಟ್ನಲ್ಲಿ ನಮ್ಮ ತೆರಿಗೆ ಹಣ ನಮ್ಮ ಉಪಯೋಗಕ್ಕೆ ಖರ್ಚಾಗಿರೋ ಲೆಕ್ಕಕ್ಕೆ ಸೇರಿಕೊಳ್ಳುತ್ತಾ ಹೇಗೆ ವೃಷಭಾವತಿ ಪಾಲಾಗ್ತಿದೆ ಅನ್ನೋದನ್ನು ನೋಡಿ ಗುರುಗಳೇ... ಏನಂದ್ರೀ? ಭವ್ಯ ಭಾರತ ದೇಸ ಇನ್ಯಾವಾಗ ಸುಧಾರಿಸುತ್ತೋ ಅಂತೀರಾ?

11 ಅನಿಸಿಕೆಗಳು:

Anonymous ಅಂತಾರೆ...

http://sripathikodi.blogspot.com/2010/02/blog-post.html

prasad ಅಂತಾರೆ...

ಹಿಂದಿ ಹೇರಿಕೆಯ ಹೊಸ ರೂಪ ಇದು. ಇಷ್ಟು ದಿವಸ ಹಿಂದಿನ ಹಿಂದಿಯಲ್ಲೇ ಪ್ರಚಾರ ಮಾಡ್ತಿದ್ರು..ಈಗ ಆಯಾ ಭಾಷೆಯಲ್ಲೇ ಹಿಂದಿನ ಬರೆದು ಪ್ರಚಾರ ಮಾಡೋ ಹುನ್ನಾರ ಅಂತ ಅನಿಸ್ತಿದೆ ಗುರು. ಹಿಂದಿಯಲ್ಲೇ ಬರೆದಿದ್ರೆ ಹಿಂದಿ ಓದೋಕೆ ಬರದೋರು ಸುಮ್ನಾಗ್ತಿದ್ರು ಏನೋ ಬರ್ದವ್ರೆ ಅಂತ. ಆದ್ರೆ ಈಗ ಹಿಂಗೆ ಆಯಾ ಬಾಸೇಲೆ ಬರ್ಸುದ್ರೆ 'ಓ ಇದು ಹಿಂದಿ ಬಾಸೆ ಕಣ್ಲ..ವಸಿ ಅರ್ಥ ಮಾಡ್ಕೊಳ್ಳುವ' ಅಂತ ಓದಿ ಆ ಬಾಸೆ ಬಗ್ಗೆ ತಿಳ್ಕೊಳ್ಳೋಕೆ ಮುಂದಾಗೊಲ್ವಾ ಗುರು.

ನಂದನ್ ಅಂತಾರೆ...

ಸರ್, ಇದರ ಹಿಂದೆ ದೊಡ್ಡ ಪಿತೂರಿ ಇದ್ದಂಗೆ ಕಾಣತ್ತೆ. ಕನ್ನಡಿಗರು ಎಚ್ಚೆತ್ತಿರೋದನ್ನ ಇವರು ಗಮನಿಸಿರಬೇಕು. ಅದಿಕ್ಕೆ ಈ ತರ ಶುರು ಮಾಡ್ಕೊಂಡಿದಾರೆ. ಬೋಲ್ ಕಂತ್ರಿಗಳು.

ಪದ್ಮ ಅಂತಾರೆ...

ಏನಾದರೂ ಮಾಡಿ ಸಮಾಜದಲ್ಲಿ ಹೆಣ್ಣುಮಕ್ಕಳೂ ಕೂಡ ಈ ರೀತಿಯ ತಪ್ಪುಗಳಿಗೆ ವಿರೋಧಿಸುವ ಹಾಗೆ ಮಾಡಬೇಕಾಗಿದೆ.

Anonymous ಅಂತಾರೆ...

ಈ ಜಾಹಿರಾತನ್ನು ವಿರೋಧಿಸಿ info@moia.nic.in ಗೆ ಮಿಂಚಿಸಿದೆ

daya ಅಂತಾರೆ...

UPA Govt ನಲ್ಲಿ ಎಲ್ರು ಕಳ್ರು. ನಮ್ಮ ಎಂ ಪಿ ಗಳು ಮೈಗಳ್ರು. ಅದ್ಕೆ ಹಿಂಗಾಗಿರದು.

Anonymous ಅಂತಾರೆ...

sonia madam ji avara karamattu

ramaswamy chitradurga ಅಂತಾರೆ...

ashte alla,,
namma kannadada hemme vi.ka dalli aagaga ee reeti hindi mishrita titles barutte..
monne pratap simha baredidda, "khan kolkar kelisikolli khan saahebre" anta.
khan kolkar andre enappa? nanagantu artha aagalilla..
idella nidhanakke hindi ge acceptance kodiso praytna ne guru.

ramaswamy, chitradurga

jobs for kannadigas ಅಂತಾರೆ...

apply for these jobs ... before they are taken away by non-kannadigas

http://naukri.im/bangalore-metro-rail-bmrcl-sarkari-naukri/archives/3482

Hemanth ಅಂತಾರೆ...

ಹೀಗೂ ಉಂಟೆ 'ಬರಹ' ತಮಾಷೆ :-(
ಕನ್ನಡವನ್ನು ಏನೆಂದು ತಿಳಿದರೋ :-o
ಹಿಂದಿ ಭಾಷೆಗೆ ತನ್ನದೇ ಆದ ಲಿಪಿ ಇಲ್ಲವೇ ....

Vivek ಅಂತಾರೆ...

Idu shuda Hindi herike

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails