ಶಾಲೆಯಲ್ಲಿ ತುಳು ಕಲಿಸೋದು ಒಳ್ಳೆ ನಡೆ

ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ಭಾಷೆಯಾಗಿ ತುಳುವನ್ನು ಕಲಿಸುವ ನಿರ್ಧಾರ ಸರ್ಕಾರ ಕೈಗೊಂಡಿದೆ ಅನ್ನೋ ಸುದ್ದಿ ಮಾರ್ಚ್ 26ನೇ ತಾರೀಖಿನ ವಿ.ಕ ಪತ್ರಿಕೆಯಲ್ಲಿ ಬಂದಿದೆ. ಇದು ತುಂಬಾ ಒಳ್ಳೇ ನಿರ್ಧಾರ ಗುರು.

ಸಾವಿರಾರು ವರ್ಷಗಳಷ್ಟು ಹಳೆಯದಾದ, ಕನ್ನಡ ನಾಡಲ್ಲಿ ಕನ್ನಡದೊಡನೆ ಶತಶತಮಾನಗಳ ನಂಟು ಹೊಂದಿರುವ ಕರ್ನಾಟಕದ ಭಾಷೆಗಳಲ್ಲಿ ಒಂದಾದ ತುಳುವನ್ನು ಪ್ರಾಥಮಿಕ ಶಾಲಾ ಹಂತದಲ್ಲಿ ಪರಿಚಯಿಸುವ ಮೂಲಕ ತುಳುವನ್ನು ಉಳಿಸುವ, ಬೆಳೆಸುವ ಈ ನಡೆ ಸರಿಯಾದದ್ದು.

ತಾಯ್ನುಡಿಯಲ್ಲಿ ಶಿಕ್ಷಣ ಏಳಿಗೆಗೆ ದಾರಿ

ಯಾವುದೇ ಭಾಷಾ ಜನಾಂಗದ ಏಳಿಗೆ ಅತ್ಯುತ್ತಮವಾಗಲು ಅವರಾಡುವ ಭಾಷೆ ಕೇವಲ ಮಾತಿನ ರೂಪದಲ್ಲಷ್ಟೇ ಉಳಿಯದೇ, ಶಾಲೆಯಲ್ಲಿ ಕಲಿಕೆಯ ರೂಪ ಪಡೆದುಕೊಳ್ಳುವುದು ಒಂದು ಮುಖ್ಯ ಹಂತ. ಇವತ್ತು ತುಳುವಿಗೆ ಅಂತಹ ಸಾಧ್ಯತೆ ಸಿಗುತ್ತಿರುವುದು ತುಳುವರ ಏಳಿಗೆಯ ದೃಷ್ಟಿಯಿಂದ ಒಳ್ಳೆಯದು ಗುರು.

11 ಅನಿಸಿಕೆಗಳು:

ರಾಕೇಶ್ ಶೆಟ್ಟಿ ಅಂತಾರೆ...

ಖಂಡಿತ ಒಳ್ಳೆಯ ನಿರ್ಧಾರವಿದು.
ತುಳು ಲಿಪಿಯ ಬಳಕೆ ಪುನಃ ಆರಂಭವಾಗಲಿ,ತುಳುವಿನಲ್ಲೂ ಲಿಖಿತ ಸಾಹಿತ್ಯಗಳು ಮೂಡಿಬರಲಿ ಎಂದು ಆಶಿಸೋಣ.
ಯಾವುದೋ ರಾಜ್ಯದ ಭಾಷೆಯನ್ನ ನಮ್ಮ ಮಕ್ಕಳು ಕಲಿಯೋಬದಳು ನಮ್ಮದೇ ನಾಡಿನ 'ತುಳು' ಭಾಷೆಯನ್ನೂ ಕಲಿಯುವುದು ಒಳ್ಳೆಯದು.

ಮಾಯ್ಸ ಅಂತಾರೆ...

ತುಂಬಾ ಒಳ್ಳೇ ಸುದ್ದಿ..

ಮೊದಲ ನುಡಿಯಾಗಿ ಕನ್ನಡ ಹಾಗು ಮೂರನೇ ನುಡಿಯಾಗಿ ತುಳು ಕಲಿತು ಅಲ್ಲಿರುವ ತುಳುಗರು ಹಾಗು ಕನ್ನಡಿಗರು ಎರಡೂ ನುಡಿಯನ್ನು ಅರಿಯಬಹುದು.

ಆದರೆ ಇಲ್ಲಿ ತುಳು ಬರೆಯಲು ಯಾವ ಲಿಪಿಯನ್ನು ಬಳಸುವರು, ಹಾಗು ಯಾವ ಬಗೆಯ ತುಳುವನ್ನು ಬಳಸುವರು ಎಂಬುದರ ಬಗ್ಗೆ ಕುತೂಹಲವಿದೆ.

ತುಳು ಮಾಧ್ಯಮ ಶಾಲೆಗಳೂ ಇದೇ ಹುಮ್ಮಸ್ಸಿನಲ್ಲಿ ಪ್ರಾರಂಭವಾಗಲಿ. ಹಾಗೇ ತುಳುವಿನಲ್ಲಿ ಉನ್ನತ ಪದವಿಗಳೂ ಬರಲಿ.

ರಾಕೇಶ್ ಶೆಟ್ಟಿ ಅಂತಾರೆ...

ತುಳು ಲಿಪಿಯನ್ನೇ ಬಳಸುತ್ತಾರೆ ಅನ್ನಿಸುತ್ತೆ
http://www.yakshagana.com/

Cheluva ಅಂತಾರೆ...

ಒಳ್ಳೆ ಸುದ್ದಿ, ಆದರೆ, ತುಳು ನಾಡನ್ನ ಕಟ್ತೀವಿ ಅಂತ ಹೊರಟಿರುವ ಅವಿವೇಕಿಗಳು ಇದನ್ನ ದುರುಪಯೋಗಿಸಿಕೊಳ್ಳಬಹುದು.

ಬಾಂಬೆ ಮತ್ತು ಇನ್ನಿತರ ಊರುಗಳಲ್ಲಿ ನೆಲೆಸಿರುವ ತುಳುವರು ಹೆಮ್ಮೆಯಿಂದ ನಮ್ಮ ಕರ್ನಾಟಕದವರೆಂದು ಮಾತನಾಡಿಸಿದಾಗ ಅವರಲ್ಲಿ ಬಹಳಷ್ಟು ಮಂದಿ ಕನ್ನಡದಲ್ಲಿ ಮಾತನಾಡದೆ, ಕೊಬ್ಬಿನ ಮಾತಾಡಿದ ನೆನಪು. ಯೆಶಸ್ಸನ್ನ ಕಂಡಾಗ ಹತ್ತಿದ ಏಣಿಯನ್ನೇ ಓದಿಯುತ್ತಾರೆಂದರೆ ಇದೇನಾ?

ಕೊೞಲುಲಿ ಅಂತಾರೆ...

ತುಳುವನ್ನು ಕನ್ನಡಲಿಪಿಯಲ್ಲದೇ ಬೇರೆ ’ಗ್ರಂಥ’ಲಿಪಿ ಕಲಿಸಿದರೆ ಬಹಳಷ್ಟು ಪಜೀತಿಗಳು ಏಳುವುವು.
ನಾಳೆ ಆ ಪ್ರದೇಶದಲ್ಲಿ ಬೋರ್ಡುಗಳನ್ನು ಗ್ರಂಥಲಿಪಿಯಲ್ಲಿ ಹಾಕಿದರೆ ಅದು ಕರ‍್ನಾಟಕವೇ ಅನ್ನಿಸುವುದಿಲ್ಲ.

ತಮಿಳುನಾಡಲ್ಲಿ ಬಡಗಕನ್ನಡವನ್ನು ಕನ್ನಡಲಿಪಿಯಲ್ಲಿ ಈ ಕಾರಣಗಳಿಂದಲೇ ಬರೆಯಲು ಬಿಟ್ಟಿಲ್ಲ.

ರಾಕೇಶ್ ಶೆಟ್ಟಿ ಅಂತಾರೆ...

@ಕೊೞಲುಲಿ ಅವರೇ,
ಈಗ ಅಲ್ಲಿ ಯಾವ ಯಾವ ಭಾಷೆಯ ಬೋರ್ಡುಗಳಿವೆ ಗೊತ್ತಾ!?,
ಅಷ್ಟಕ್ಕೂ 'ತುಳು' ಲಿಪಿಯಲ್ಲಿ ಬೋರ್ಡ್ ಬರೆಸಿದರೆ ಅದು ಕರ್ನಾಟಕವೇ ಆಗಿರುತ್ತದೆ ಅನಗತ್ಯ ಆತಂಕ ಬೇಡ.
ಕನ್ನಡವನ್ನ ಹೇಗಿದ್ದರೂ ಅಲ್ಲಿ ಕಲಿತಾಗಿದೆ,ತುಳುವರ ಮಕ್ಕಳು ತುಳುವನ್ನು ತುಳು ಲಿಪಿಯಲ್ಲೇ ಕಲಿಯಬೇಕು ಅನ್ನುವುದು ನನ್ನ ಅನಿಸಿಕೆ.ofcourse ತುಳು ಲಿಪಿ ಬಳಕೆ ಇಷ್ಟು ದಿನ ನಿಂತಿತ್ತು,ಆದರೆ ಅದನ್ನ ಮುಂದುವರೆಸುವುದೇ ನಾವು ತುಳುವರು ಮಾಡಬೇಕಾದ ಕೆಲಸ.

@ಚೆಲುವ ಅವರೇ,
ನೀವು ಹೇಳಿದ ಅವಿವೇಕಿಗಳು ಎರಡು ಬದಿಯಲ್ಲೂ ಇದ್ದಾರೆ.(ಎರಡು ಅಂದರೆ ಪ್ರತ್ಯೇಕ ತುಳುನಾಡು ಬೇಕು ಅನ್ನುವ ಅವಿವೇಕಿಗಳು,ಹಾಗೆ ಇರೋ ಬರೋ ತುಳುವರನ್ನೆಲ್ಲ ಸೇರಿಸಿ ಮೂದಲಿಸುವ ಕೆಲವು ಮೂರ್ಖರು) ಈ ಇಬ್ಬರು ಅಪಾಯಕಾರಿಗಳೇ.

ಇಲ್ಲದ್ದನ್ನು ಊಹಿಸಿಕೊಂಡು ಆಗ್ಬಾರದ್ದಕ್ಕೆ ಆಹ್ವಾನ ಕೊಡುವುದು ಬೇಡ ಅಲ್ಲವೆ?

ಬಡವರವಾದಿ ಅಂತಾರೆ...

ಈ BJP ಸರಕಾರದ divisive politicsನ continuation ಇದು. ತುಳು vote bank ಗಾಗಿ ಮಾಡಿದ ಕೆಲಸವಿದೆ.

ಈಗಿರುವ govt. school ಗಳು ಸ್ತಿತಿಯನ್ನು ಉತ್ತಮಗೊಳಿಸುವುದನ್ನು ಬಿಟ್ಟು, ಹೀಗೆ ಸಂಸ್ಕೃತ, ತುಳು ಎಂದು ದುಡ್ಡು waste ಮಾಡ್ತಿದ್ದಾರೆ.

ತುಳು ಕಲಿತು ಏನ್ use?

ರಾಕೇಶ್ ಶೆಟ್ಟಿ ಅಂತಾರೆ...

@ಬಡವರವಾದಿ

ತಾವು ಕನ್ನಡ ಕಲಿತು ಏನ್ ಮಾಡಿದ್ರಿ?ಏನ್ ಮಾಡ್ತಾ ಇದ್ದಿರೋ ಅದನ್ನೇ ತುಳು ಕಲಿತವರು ಮಾಡ್ತಾರೆ.
ಮೊದಲು ಕರ್ನಾಟಕದಲ್ಲಿ ಕನ್ನಡಕ್ಕೆ ಕೊಡು ಬೆಳೆಯನ್ನೇ ಈ ನೆಲದ ಅನ್ಯ ಭಾಷೆಗಳಿಗೆ ಕೊಡುವುದನ್ನ ಕಲಿಯಿರಿ.
ವಿಷಯ ಗೊತ್ತಿಲ್ಲದೇ ಸುಮ್ಮನೆ ಯಾಕೆ vote bank ರಾಜಕಾರಣಕ್ಕೆ ತುಳುವನ್ನ ಎಳೆಯುತ್ತಿರಾ?

ಬ್ಯಾರಿ ಅಂತಾರೆ...

ನಾವು ಬ್ಯಾರಿಗಳೂ ತುಳುನಾಡಿನಲ್ಲಿ ಇದ್ದೀವಲ್ಲವೊ!

ನಮ್ಮ ಬ್ಯಾರಿ-ಭಾಷೆಯನ್ನು ಶಾಲೆಯಲ್ಲಿ ಕಲಿಸಲಿಕ್ಕೆ ಸುರು ಮಾಡಿಸಿ. ಪ್ಲೀಸ್.

http://en.wikipedia.org/wiki/Beary

Unknown ಅಂತಾರೆ...

ಇನ್ನು ಇಪ್ಪತ್ತು ವರ್ಷಗಳಲ್ಲಿ ತುಳುವಿನಂಥಾ ಸಣ್ಣ ಭೌಗೋಳಿಕ ವ್ಯಾಪ್ತಿಯಲ್ಲಿ ಬಳಕೆಯಾಗುವ ಭಾ್ಷೆಗಳು, ಇನ್ನು ನೂರು ವರ್ಷಗಳಲ್ಲಿ ಕನ್ನಡದಂಥಾ ಭಾಷೆಗಳು ಹೇಗೆ ಬದುಕಿ ಉಳಿಯುತ್ತವೆ ಅಂತ ಯೋಚನೆ ಮಾಡಿದ್ರೆ ತಲೆ ಬಿಸಿ ಆಗುತ್ತದೆ. ಸರಕಾರದ ಇಂಥಾ ಕ್ರಮಗಳಿಂದ ಖಂಡಿತಾ ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳೋದಕ್ಕೆ ಸಹಾಯ ಆಗುತ್ತದೆ. ಇದರಲ್ಲಿಯೂ ಡಿವಿಸಿವ್ ಪಾಲಿಟಿಕ್ಸ್-ಅನ್ನ ಕಂಡುಹಿಡಿಯುತ್ತಿರುವವರ ಬಗ್ಗೆ ನನಗೆ ಕನಿಕರ ಇದೆ.. ಇಲ್ಲಿಯವರೆಗಿನ ಸರಕಾರಗಳು ಏನು ಮಾಡಿಲ್ಲವೋ ಅದನ್ನ ಬಿಜೆಪಿಯವರು ಮೂರೇ ವರ್ಷಗಳಲ್ಲಿ ಮಾಡ್ತಾರೆ ಅಂತ ನಮ್ಮ ಬಡವರ ವಾದಿ ಸ್ವಲ್ಪ ಜಾಸ್ತಿಯೇ ನಿರೀಕ್ಷೆ ಇಟ್ಕೊಂಡಿರೋ ಹಾಗಿದೆ.

Deekshith Shetty ಅಂತಾರೆ...

ತುಳುನಾಡಿನಲ್ಲಿ ತುಳುವನ್ನು ಮೂರನೆಯ ಭಾಷೆಯಾಗಿ ಹಿಂದಿಯ ಜೊತೆ ಐಚ್ಚಿಕ ಭಾಷೆಯನ್ನಾಗಿ ಮಾಡಿರುವುದರಿಂದ ಏನೂ ಪ್ರಯೋಜನ ಇಲ್ಲ. ಎಲ್ಲರೂ ಹಿಂದಿ ಕಲಿಕೆ ಅಗತ್ಯ ಇರುವುದರಿಂದ ಹಿಂದಿಯನ್ನು ಆಯ್ಕೆ ಮಾಡ್ತಾರೆ. ಅದರ ಬದಲು ೧ನೇ ತರಗತಿಯಿಂದ ತುಳುವನ್ನು ಕಡ್ಡಾಯ ಮಾಡಬೇಕು. ಹಾಗೆಯೇ ತುಳು ಭಾಷೆಯನ್ನೂ ಕನ್ನಡ ಲಿಪಿಯಲ್ಲಿ ಬರೆಯುವುದಾಗಲೀ, ಓದುವುದಾಗಲೀ ತುಂಬಾ ಕಷ್ಟ.. ಹಾಗಾಗಿ ಅದನ್ನು ತುಳು ಲಿಪಿಯಲ್ಲೇ ಕಲಿಸುವ ಅಗತ್ಯ ಇದೆ. ಹಾಗೆಯೇ ತುಳುನಾಡಿನಲ್ಲಿ ಎಲ್ಲವೂ ತುಳು ಲಿಪಿಯಲ್ಲೇ ಬೋರ್ಡುಗಳನ್ನು ಬಳಸಿದರೆ ಬೇರೆ ರಾಜ್ಯಕ್ಕೆ ಬಂದಂತಾದರೆ ಏನೂ ಮಾದೊದಕ್ಕಾಗಲ್ಲ. ಯಾಕಂದರೆ ತುಳುನಾಡು ಕನ್ನಡ ನಾಡಿಗಿಂತ ತೀರಾ ವಿಭಿನ್ನ. ಹಾಗೆಯೇ ಅದಕ್ಕೆ ಪ್ರತ್ಯೇಕ ರಾಜ್ಯದ ಯೋಗ್ಯತೆಯೂ ಇದೆ. ಆದರೆ ನಾವು ಕನ್ನಡವನ್ನು ಒಪ್ಪಿಕೊಂಡಿರುವುದರಿಂದ ನಾವು ತುಳು-ಕನ್ನಡ ಎರಡನ್ನೂ ಸ್ವೀಕರಿಸಿದ್ದೇವೆ. ಆದರೆ ತುಳು ಭಾಷೆಗೆ ಕರ್ನಾಟಕ ರಾಜ್ಯದಲ್ಲಿ ಕನ್ನಡಕ್ಕೆ ಸರಿಸಮನಾಗಿ ಸ್ಥಾನಮಾನ ಸಿಗಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಇದಕ್ಕೆ ಕನ್ನಡಿಗರು ವಿರೋಧ ಮಾಡಬಾರದು. ಯಾಕೆಂದರೆ ತುಳುವರು ಕನ್ನಡ ಭಾಷೆಗೆ ನೀಡಿರುವ ಕೊಡುಗೆ ಅತ್ಯಮೂಲ್ಯವಾದುದು. ಕನ್ನಡಿಗರು ತುಳುವರ ಋಣ ತೀರಿಸಲು ಸಾದ್ಯವೇ ಇಲ್ಲ. ಹಾಗಾಗಿ ತುಳು ಭಾಷೆಯ ಬೆಳವಣಿಗೆಯ ಬಗ್ಗೆ, ಭಾಷೆಯ ಬಗ್ಗೆ ಅಪಸ್ವರ ಎತ್ತಿದರೆ ಮುಂದೆ ತುಂಬಾ ಕಷ್ಟ...!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails