ಕನ್ನಡ ನುಡಿಯನ್ನು ವೈಜ್ಞಾನಿಕವಾಗಿ, ಅದರದೇ ನೆಲೆಯಲ್ಲಿ ಅಧ್ಯಯನ ಮಾಡುತ್ತಿರುವ ಕೆಲವೇ ನುಡಿಯರಿಗರಲ್ಲಿ ಮುಂಚೂಣಿಯಲ್ಲಿರುವವರು ಡಾ. ಡಿ ಎನ್ ಶಂಕರ್ ಭಟ್. ಈ ಹಿಂದೆ ಇವರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎನ್ನುವ ಹೊತ್ತಗೆಯಲ್ಲಿ ಇದುವರೆಗೂ ನಮಗೆ ಕಲಿಸಲಾಗುತ್ತಿದ್ದ ವ್ಯಾಕರಣದ ಮೂಲನೆಲೆ ಕನ್ನಡದ್ದೇ ಅಲ್ಲ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿದ್ದರು ಮತ್ತು ಕನ್ನಡಕ್ಕೆ ಅದರದೇ ನೆಲೆಯಲ್ಲಿ ವ್ಯಾಕರಣವನ್ನು ಬರೆಯಬೇಕಾದ ಅಗತ್ಯವನ್ನು ತಿಳಿಸಿಕೊಟ್ಟಿದ್ದರು. ಇದೀಗ ಕನ್ನಡದ್ದೇ ನೆಲೆಯ ಕನ್ನಡದ ವ್ಯಾಕರಣದ ಹೊತ್ತಗೆಯನ್ನು ಬರೆಯಲು ಮುಂದಾಗಿದ್ದಾರೆ. ಅದರ ಮೊದಲ ಭಾಗ ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಈ ಹೊತ್ತಗೆಯ ಮೊದಲಲ್ಲಿ ಶಂಕರ ಭಟ್ ಅವರು ಹೀಗಂದಿದ್ದಾರೆ :
ಈ ಹೊತ್ತಗೆಯಲ್ಲೇನಿದೆ?
ಸೊಲ್ಲರಿಮೆಯ ಈ ಹೊತ್ತಗೆಯಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಹೇಗೆ ಉಂಟು ಮಾಡಲಾಗುತ್ತದೆ ಎಂಬುದನ್ನು ವಿವರಿಸಿದ್ದೇನೆ.ಅರಿಮೆಯ (ವಿಜ್ನಾನದ) ಬರಹಗಳಲ್ಲಿ ಹೊಸ ಪದಗಳನ್ನು ಹುಟ್ಟುಹಾಕಬೇಕೆಂದಿರುವವರು ಸಂಸ್ಕ್ರುತದ ಮೊರೆ ಹೋಗುವ ಬದಲು, ಕನ್ನಡದಲ್ಲೇನೇ ತಮಗೆ ಬೇಕಾಗಿರುವ
ಪದಗಳನ್ನು ಉಂಟುಮಾಡಲು ಇದು ತಿಳಿವನ್ನೀಯಬಲ್ಲದು.
ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರೈಕೆ.
ಅರಿಮೆಯ ಬರಹಕ್ಕೆ ಬೇಕಾಗಿ ಬರುವ ಪದಗಳನ್ನೆಲ್ಲ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ ಮತ್ತು ಅಂತಹ ಪದಗಳನ್ನು ಬಳಸುವುದರಿಂದ ತೊಂದರೆಯೇನೂ ಆಗುವುದಿಲ್ಲ ಎಂಬುದನ್ನು ತೋರಿಸಿಕೊಡುವುದೂ ಈ ಹೊತ್ತಗೆಯ ಒಂದು ಗುರಿಯಾಗಿದೆ.
ಇದು ಬರಿಯ ಮೊದಲ ಕಂತು!
ಕನ್ನಡ ಬರಹದ ಸೊಲ್ಲರಿಮೆಯ ಮೊದಲ ಕಂತು ಮಾತ್ರವೇ ಈ ಹೊತ್ತಗೆಯಲ್ಲಿ ಅಚ್ಚಾಗಿದೆ. ಇದರಲ್ಲಿ ಪ್ರಮುಖವಾಗಿ ಸೊಲ್ಲರಿಮೆಯ ಅಗತ್ಯ, ಸ್ವರೂಪಗಳ ಮುನ್ನೋಟ, ಹೆಸರುಪದಗಳ ಕುರಿತ ಭಾಗಗಳಿವೆ. ಶ್ರೀಯುತ ಶಂಕರ್ ಭಟ್ ಅವರು ಮುಂದಿನ ಕಂತುಗಳ ರಚನೆಯಲ್ಲಿ ತೊಡಗಿದ್ದಾರೆ. ಸದ್ಯದಲ್ಲೇ ಎರಡನೇ ಭಾಗವೂ ಸಿದ್ಧವಾಗಲಿದೆ. ಹೆಗ್ಗೋಡಿನ ಬಾಶಾ ಪ್ರಕಾಶನದವರು ಹೊರತಂದಿರುವ ಈ ಹೊತ್ತಗೆಯನ್ನು ಮಂಗಳೂರಿನ ಅತ್ರಿ ಬುಕ್ ಸೆಂಟರ್ ಅವರು ಹಂಚಿಕೆ/ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ನವಕರ್ನಾಟಕ, ಟೋಟಲ್ ಕನ್ನಡ.ಕಾಂ ಮಳಿಗೆಗಳೂ ಸೇರಿದಂತೆ ಹೆಸರಾಂತ ಹೊತ್ತಗೆಯಂಗಡಿಗಳಲ್ಲಿ ಸಿಗುತ್ತಿದೆ. ಕನ್ನಡದ ಸೊಲ್ಲರಿಮೆಯನ್ನು ಅರಿಯಬೇಕೆಂದವರಿಗೆ ಇದೊಂದು ಒಳ್ಳೆಯ ಹೊತ್ತಗೆ. ನೀವೂ ಕೊಂಡು ಓದಿ, ನಿಮ್ಮವರಿಗೂ ತಿಳಿಸಿ.
9 ಅನಿಸಿಕೆಗಳು:
Shubhavaagali..
ಒಳ್ಳೆಯ ಕೆಲಸ!..
ಇಂಥ ಪುಸ್ತಕಗಳು ನಿಜಕ್ಕೂ ಖುಷಿ ಹುಟ್ಟಿಸುತ್ತವೆ. ಏಕೆಂದರೆ, ಕನ್ನಡಪ್ರೀತಿ ಹೊಂದಿರುವವರಿಂದ ಮಾತ್ರ ಇಂಥ ಪ್ರಯೋಗಗಳು ಸಾಧ್ಯ. ಭಟ್ಟರ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿ.
ಒಂದೆರಡು ಸಂದೇಹಗಳು: ಮುಖಪುಟದಲ್ಲಿ ‘ಬಟ್’ ಎಂದು ಅಚ್ಚಾಗಿದೆ. ಅದು ಭಟ್ ಎಂದಿರಬೇಕಿತ್ತಾ?
ಅದೇ ರೀತಿ ’ಬಾಶಾಪ್ರಕಾಶನ’ದ ನಡುವೆ ಒಂದು ಸ್ಪೇಸ್ ಇರಬೇಕಿತ್ತು ಅನಿಸುತ್ತದೆ. ವ್ಯಾಕರಣ ಪುಸ್ತಕವಾದ್ದರಿಂದ, ಇಂಥ ದೋಷಗಳು ಇರಬಾರದಾಗಿತ್ತು.
- ಚಾಮರಾಜ ಸವಡಿ
http://chamarajsavadi.blogspot.com
ಚಾಮರಾಜರೆ, ಮಹಾಪ್ರಾಣವನ್ನು ಬೇಕಂತಲೇ ಕಯ್ ಬಿಟ್ಟಿರೋದು.
ಇವರ 'ಕನ್ನಡ ಬರಹವನ್ನು ಸರಿಪಡಿಸೋಣ' ಎಂಬ ಹೊತ್ತಗೆಯನ್ನು ಓದಿ, ತಿಳಿಯುತ್ತೆ.
ಚಾಮರಾಜ್,
ಇಲ್ಲ, ಅದು ಸರಿಯಾಗಿಯೆ ಇದೆ! ಶಂಕರ ಬಟ್ಟರು ಮಹಾಪ್ರಾಣ ಬಳಸುವುದಿಲ್ಲ. ಅವರ ಹೇಳುವ ಪ್ರಕಾರ ಕನ್ನಡಕ್ಕೆ ಮಹಾಪ್ರಾಣದ ಅಗತ್ಯವೆ ಇಲ್ಲ!
ಶಂಕರ್,
I pustakaana elle online koMDokobahudu?
ISBN iddre koDri.
ಈ ಹೊತ್ತಗೆಯಲ್ಲಿ ಬರುವ ಸೊಲ್ಲರಿಮೆಯ ಪದಗಳನ್ನು ದಯವಿಟ್ಟು ಬರಹ ’ನಿಘಂಟಿಗೆ’ ಸೇರಿಸಲು ನೆರವಾಗಿರಿ.
ನನ್ನಿ.
idu tumba saMtOshada vishaya. naavu saMskrutada vyakaraNavannU kannaDaddE vyakaraNa aMta Odiddu saaku, sadhya namma makkaLigaadaru namma nijavaada kannaDadde vyakaraNa kaliyalu anukUlavaagide, idakkagi baTarige namma krutagnategaLu.
Sri Shankar Bhat anthavaru Kannadakke indu tumba agathya.
Kannadavanna Kannadadindale Katta beku vinaha indu bahalashtu kade aguttiruv Sanskritad taLahadiya mele alla annuva Sriyutara Niluvu sariyadaddu.
Bhat avaralli ondu vinanthi Vattakshara mattu mahapraNagaL bagge avarigiru egeen vicharagaLannu matte swa vimarshe madikollabeku yekendare Kannada egeeruv Lipiya Shakthi jagattina yavude Lipige iralikke sadhyavilla addarinda BaravaNigeyalli Egeeruva Kannadavanne ittukondu achacha kannadada BaLakey roodhri jaarige barabeku embudu nanna ansiike.
Inthaha Olleya/sookta pustaka baradidakke abhinandanegaLu.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!