ಕನ್ನಡ ಚಲನಚಿತ್ರ ಅಕಾಡೆಮಿ & ಬಳಗದಿಂದ ಸಮೀಕ್ಷೆ!

ಇಂತಹ ಹುಡುಕಾಟದಲ್ಲಿ ನಮಗೆ ಸಿಕ್ಕಿದ್ದು, ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷರಾದ ಶ್ರೀ ಟಿ. ಎಸ್. ನಾಗಾಭರಣರವರು. ಬನವಾಸಿ ಬಳಗದ ನಮ್ಮನ್ನು ಬಹಳ ಆದರದಿಂದ ಕಂಡು E&Y ಮತ್ತು FICCI ನೀಡಿದ ವರದಿಯನ್ನು ಗಂಭೀರವಾಗಿ ಓದಿ, ಇಡೀ ಕನ್ನಡ ಚಿತ್ರೋದ್ಯಮದ ಗಮನವನ್ನು ಇತ್ತ ಸೆಳೆಯಲು ಇವರು ಮುಂದಾದರು. ಕನ್ನಡ ಚಿತ್ರರಂಗದ ಮುಂಚೂಣಿ ಸಂಸ್ಥೆಯಾದ ವಾಣಿಜ್ಯ ಮಂಡಲಿಯೂ ಸೇರಿದಂತೆ ಪ್ರದರ್ಶಕ, ವಿತರಕ, ನಿರ್ಮಾಪಕ, ನಿರ್ದೇಶಕರನ್ನು ಇದರತ್ತ ಸೆಳೆದು ಇಡೀ E&Y ಮತ್ತು FICCI ಹೊರತಂದಿದ್ದ ವರದಿಗೆ ಗಂಭೀರವಾಗಿ ಉತ್ತರಿಸುವ ಉದ್ದೇಶವನ್ನು ಅಕಾಡಮಿಯ ಪರವಾಗಿ ಅವರು ವ್ಯಕ್ತಪಡಿಸಿದಾಗ ಚಿತ್ರರಂಗದ ಗಣ್ಯರೆದುರು ಸದರಿ ವರದಿಯನ್ನಿಡಲು ಯೋಜಿಸಿದೆವು.

ಚಲನಚಿತ್ರರಂಗದ ಗಣ್ಯರ ಪ್ರತಿಕ್ರಿಯೆ!

ಇದಾದ ಮೇಲೊಂದು ದಿನ ಅಕಾಡಮಿಯ ಆಶ್ರಯದಲ್ಲಿ E&Y ಮತ್ತು FICCI ನೀಡಿದ ವರದಿಯನ್ನು ಚಿತ್ರರಂಗದ ಗಣ್ಯರೊಂದಿಗೆ ಹಂಚಿಕೊಳ್ಳಲು ಒಂದು ಸಭೆಯನ್ನು ನಡೆಸಲಾಯಿತು. ಆ ಸಭೆಯಲ್ಲಿ ಅನೇಕ ಹಿರಿಯ ನಿರ್ಮಾಪಕರು, ವಿತರಕರು, ಪ್ರದರ್ಶಕರು, ನಿರ್ದೇಶಕರು, ಆಡಿಯೋ ಸಂಸ್ಥೆಯವರು ಸೇರಿದಂತೆ ಹಲವರು ಭಾಗವಹಿಸಿದ್ದರು. E&Y ವರದಿಯನ್ನು ಆ ಸಭೆ ಒಕ್ಕೊರಲಿನಿಂದ ಖಂಡಿಸಿತು. E&Y ವರದಿಯಲ್ಲಿನ ಮಾಹಿತಿ ತಪ್ಪಾಗಿದೆ. ನಿಜವಾಗಿಯೂ ಕನ್ನಡ ಚಿತ್ರರಂಗದ ವಹಿವಾಟು ಏಳೆಂಟು ಪಟ್ಟು ಹೆಚ್ಚೇ ಇದೆ ಅನ್ನುವ ಅಭಿಪ್ರಾಯ ಮೂಡಿಬಂದಿತು. ಆ ಸಭೆಯಲ್ಲೇ ಚಲನಚಿತ್ರ ಅಕಾಡಮಿಯ ವತಿಯಿಂದ ಸಮೀಕ್ಷೆಯೊಂದನ್ನು ನಡೆಸಿ E&Y ಮತ್ತು FICCI ನೀಡಿದ ವರದಿಗೆ ಪರ್ಯಾಯವಾದ ವರದಿಯೊಂದನ್ನು ತಯಾರಿಸಲು ನಿಶ್ಚಯಿಸಲಾಯಿತು. ಈ ಸಮೀಕ್ಷೆಯನ್ನು ಬನವಾಸಿ ಬಳಗ ಮತ್ತು ಕರ್ನಾಟಕ ಚಲನಚಿತ್ರ ಅಕಾಡಮಿಗಳು ಹೀಗೆ ಜಂಟಿಯಾಗಿ ಕೈಗೆತ್ತಿಕೊಂಡವು. "ಅಕಾಡಮಿಯು E&Y ಮತ್ತು FICCI ಗೆ ಒಂದು ಪತ್ರವನ್ನು ಕೂಡಾ ಬರೆದಿದ್ದು, ಪ್ರಕಟಿತ ವರದಿಯಲ್ಲಿನ ಕನ್ನಡ ಚಿತ್ರರಂಗದ ಬಗೆಗಿನ ಮಾಹಿತಿ ಅಪೂರ್ಣವಾಗಿದೆ ಮತ್ತು ತಪ್ಪಾಗಿಯೂ ಇದೆಯೆಂದೂ, ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಅಕಾಡಮಿಯೇ ಸರಿಯದ ವರದಿಯನ್ನು ಕಳಿಸಿಕೊಡುವುದಾಗಿ ತಿಳಿಸಲಾಗಿದೆ"ಯೆಂದೂ ನಾಗಾಭರಣರು ನಮಗೆ ತಿಳಿಸುವ ಮೂಲಕ ಸಮಯದ ಗಡುವನ್ನು ತೀರ್ಮಾನಿಸಿ ಸಮೀಕ್ಷೆಯನ್ನು ಆರಂಭಿಸಲಾಯಿತು.

ಸಮೀಕ್ಷೆಯ ಪರಿ ಮತ್ತು ಪರಾಮರ್ಶೆ

ಬನವಾಸಿ ಬಳಗದ ಹದಿನೈದು ಜನರ ತಂಡವೊಂದು ಸುಮಾರು ಏಳು ತಿಂಗಳ ಶ್ರಮದ ನಂತರ ಈ ಸಮೀಕ್ಷೆಯನ್ನು ಪೂರ್ಣಗೊಳಿಸಿ ಇಡೀ ವರದಿಯನ್ನು ತಯಾರಿಸಿತು. ಸಮೀಕ್ಷೆಯ ಅಂಗವಾಗಿ ಅಕಾಡಮಿ ಪಟ್ಟಿ ಮಾಡಿದ ಉದ್ಯಮದ ಗಣ್ಯರುಗಳನ್ನು ಭೇಟಿ ಮಾಡಲಾಯಿತು. ಪ್ರತ್ಯೇಕವಾದ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡು, ಸಂದರ್ಶನಗಳನ್ನು ನಡೆಸಿ ಮಾಹಿತಿಗಳನ್ನು ಕಲೆಹಾಕಲಾಯಿತು. ಹೀಗೆ ಮಾಹಿತಿಗಳನ್ನು ಕಲೆಹಾಕಿ ಸಿದ್ಧಪಡಿಸಿ ಹೊರತಂದ ವರದಿಯೇ “ಕನ್ನಡ ಚಿತ್ರರಂಗ : ಒಂದು ಸಮೀಕ್ಷೆ”.

(ಮುಂದುವರೆಯುವುದು...)

2 ಅನಿಸಿಕೆಗಳು:

Gangadhara ಅಂತಾರೆ...

banavaasi balagada kaarya nijavaagalu mecchatakkaddu.

prasadh ಅಂತಾರೆ...

ನೀವು E&Y ಹಾಗು FCCI ವರದಿಗಳಿಗೆ pointers ಹಾಕ್ಬೇಕಿತ್ತು. ಮೊದಲನೆ ಸರ್ತಿ ಈ ಬ್ಲಾಗು ಓದುತ್ತಿರುವವರಿಗೆ ಇದು ಎಲ್ಲಿಂದ ಶುರು ಆಗಿರೋದು ಅಂತಾನೆ ತಿಳಿಯಲ್ಲ! ಏನೀ ವರದಿ? ಯಾಕಿಷ್ಟು ಚರ್ಚೆ ಅನ್ನುವುದು ಅರ್ಥವಾಗುವುದಿಲ್ಲ.. ಹಾಗಾಗಿ ಅವರಿಗೆ ವಿಷಯಗ್ರಹಿಸುವುದು ಸಹ ಕಷ್ಟವಾಗುವುದರಲ್ಲಿ ಸಂಶಯವಿಲ್ಲ.

ತುಂಬಾ ಉತ್ತಮವಾದ ಕೆಲಸ ಮಾಡುತಿದ್ದೀರಾ..

ಧನ್ಯವಾದ
ಪ್ರಸಾದ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails