ಖುಷಿ ಯಾಕೆಂದರೆ...
ಸುಜಯ್ ಬಗ್ಗೆ ಟೈಮ್ಸ್ ಆಫ಼್ ಇಂಡಿಯಾ ದಿನಪತ್ರಿಕೆಯಲ್ಲಿ 14.02.2010ರಂದು ಬಂದಿರೋ ಈ ಸುದ್ದಿ ನೋಡಿದರೆ ಖುಷಿ ಆಗದೇ ಇರುತ್ಯೇ?
ಹೌದು! ಖುಷಿ ಪಡಲು ನಾನಾ ಕಾರಣಗಳಿವೆ.
ಈ ಹುಡುಗ ಸುಜಯ್ ಒಬ್ಬ ಕನ್ನಡಿಗ.
ಇವ ನಮ್ಮ ಕುಣಿಗಲ್ ಹುಡುಗ.
ಇವನೊಬ್ಬ ರೈತನ ಮಗ.
ಇವ ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ.
ಇವ ಕಲಿತಿದ್ದು ಸರ್ಕಾರಿ ಕಾಲೇಜಿನಲ್ಲಿ...
ಇವ ಗಳಿಸಿದ್ದು ಅಖಿಲ ಭಾರತ ಮಟ್ಟದ ಸಿ.ಎ ಪರೀಕ್ಷೆಯಲ್ಲಿ ಮೊದಲ ರ್ಯಾಂಕು.
ಕನ್ನಡ ಮಾಧ್ಯಮದಲ್ಲಿಯೇ ಕಲಿತು ಯಶಸ್ವಿಯಾದ ನಾರಾಯಣಮೂರ್ತಿ, ಸಿ ಎನ್ ಆರ್ ರಾವ್, ಡಾ. ಚಂದ್ರಶೇಖರ್, ಡಾ ರಮಣರಾವ್ (ನಿಜಕ್ಕೂ ಈ ಪಟ್ಟಿ ತುಂಬಾ ದೊಡ್ಡದು... ) ಇವರುಗಳ ಸಾಲಿನಲ್ಲಿ ಈ ಯಶಸ್ವಿ ಹುಡುಗನೂ ನಿಂತಿದ್ದಾನೆ. ಇವನಿಗೆ ಒಳಿತಾಗಲಿ. ಇವನ ಈ ಸಾಧನೆ ನಮ್ಮೆಲ್ಲಾ ಕನ್ನಡ ಮಕ್ಕಳಿಗೂ, ತಾಯ್ತಂದೆಯರಿಗೂ ಸ್ಪೂರ್ತಿಯಾಗಲಿ. ಏನಂತೀ ಗುರೂ!
9 ಅನಿಸಿಕೆಗಳು:
ವಾವ್ ..ಕೆ.ಎನ್.ಸುಜಯ್ ಮುಂದೆ ದೊಡ್ಡ ಸಾಧನೆ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ ..ಕನ್ನಡ ಶಾಲೆಯಲ್ಲಿ ಓದಿ ಈ ರೀತಿಯ ಸಾಧನೆ ಮಾಡಿರುವ ರೀತಿ ನಿಜಕ್ಕೂ ಅಭಿನಂದನಾರ್ಹ
ಓದಿ ಸಂತಸ ಆಯ್ತು..ಇವರ ಬಗ್ಗೆ ವಿಜಯ ನೆಕ್ಸ್ಟ್ ಪತ್ರಿಕೆಯಲ್ಲಿ ಹೋದ ತಿಂಗಳು ಒಂದು ಬರಹ ಬಂದಿತ್ತು...
ಸುಜಯ್ ನಿಮಗೆ ನಮ್ಮ ಅಬಿನಂದನೆಗಳು , ಕನ್ನಡಿಗನ ಈ ಯಶಸ್ಸಿಗೆ ಬಹಳ ಖುಷಿಯಾಗುತ್ತೆ ... ಮು೦ದೆ ಇನ್ನು ಹಿರಿದಾದ ಸಾಧನೆ ಮಾಡಿ ...
CA ರಾಮನಾಥ್
ಸಖತ್ ಗುರು.
ದೇವರು ಅವನಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ.
ಸುಜಯ್ ಗೆ ಅಭಿನಂದನೆಗಳು
ಸುಜಯ್ ಅವರಿಗೆ ಹೃತ್ಪೂರ್ವಕ ಅಭಿನ೦ದನೆಗಳು.
kannaDadalli kaliyuvudu keelalla embudannu sujay torisikottiddaane. English bekende odidavirigoo aagaddannu saadhisiddaane.abhinandanegaLu.
All the best wishes..
congrates sujay... all the best for ur future...
first of all my congrats to Mr. Sujay
english language itself is not everything....other languages too has got its own powers...like kannada. he has made it true for those who hate to study in govt schools or colleges.
tulasisujatha99@gmail.com
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!