ರಾಷ್ಟ್ರರಾಜಕಾರಣ, ಪ್ರಾದೇಶಿಕ ಪಕ್ಷ & RSSನ ಆತಂಕ!


ಭಾರತದ ಅತಿದೊಡ್ಡ ಸಾಮಾಜಿಕ ಸಂಘಟನೆಗಳಲ್ಲೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇದರ ಮುಖಂಡರಲ್ಲಿ ಒಬ್ಬರಾದ ಶ್ರೀ ಸುರೇಶ್ ಜೋಷಿಯವರು ಸಂಘದ ಕೇಂದ್ರಸ್ಥಾನವಾದ ನಾಗ್ಪುರದಲ್ಲಿ ಕುಳಿತು ಒಂದು ಹೇಳಿಕೆ ನೀಡಿ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣ ಪ್ರವೇಶ ಮಾಡುವ ಬಗ್ಗೆ ಆತಂಕ' ತೋರಿಸಿದ್ದಾರೆ ಎನ್ನುವ ಸುದ್ದಿ ಮಾರ್ಚ್ ೧೯ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ. ಈ ಸುದ್ದಿ ನಿಜವೇ ಆಗಿದ್ದರೆ ಸಂಘ ಸಿದ್ಧಾಂತವು ಭಾರತದ ಸ್ವರೂಪದ ಬಗ್ಗೆ ಹೊಂದಿರುವ ತಿಳುವಳಿಕೆ ಸರಿಯಾಗಿಲ್ಲವೇನೋ ಎನ್ನುವ ಅನುಮಾನ ಹುಟ್ಟಿಸುತ್ತದೆ. ರಾಷ್ಟ್ರ ರಾಜಕಾರಣಕ್ಕೆ ಪ್ರಾದೇಶಿಕ ಪಕ್ಷಗಳು ಬಂದರೆ ಆತಂಕ ಪಟ್ಟುಕೊಳ್ಳುವ ಮನಸ್ಥಿತಿಯ ಬಗ್ಗೆ ಅಚ್ಚರಿಯಾಗುತ್ತದೆ. ಇರಲಿ, ಚುನಾವಣಾ ಆಯೋಗದ ಲೆಕ್ಕದಲ್ಲಿ  ಭಾರತದಲ್ಲಿ ಇವತ್ತು ಇರುವ ರಾಷ್ಟ್ರೀಯಪಕ್ಷಗಳೆಂದರೆ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಾರ್ಟಿ, ಬಹುಜನ್ ಸಮಾಜ್ ಪಾರ್ಟಿ, ಸಿಪಿಎಂ, ಸಿಪಿಐ ಮತ್ತು ಎನ್.ಸಿ.ಪಿಗಳು. ಆದರೆ ದೇಶ ಆಳಿದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಾತ್ರಾ ಎರಡೇ..

ಕೇಂದ್ರಸರ್ಕಾರ ಎನ್ನುವುದು ಮೇಲಿನದ್ದು ಮತ್ತು ರಾಜ್ಯಸರ್ಕಾರಗಳು ಕೆಳಗಿನದ್ದು, ಕೇಂದ್ರಸರ್ಕಾರ ರೂಪಿಸೋ ನಿಯಮಾನಾ, ತೆಗೆದುಕೊಳ್ಳೋ ನಿರ್ಣಯಾನ ಕೆಳಗಿರೋ ರಾಜ್ಯಗಳು ಸಾಮಂತರಂತೆ ಒಪ್ಪಿಕೋಬೇಕು ಅನ್ನೋ ಮನಸ್ಥಿತಿ ಸುರೇಶ್ ಜೋಷಿಯವರ ಮಾತುಗಳ ಆಳದಲ್ಲಿ ಇರುವಂತೆ ತೋರುತ್ತಿದೆ. ವಾಸ್ತವವಾಗಿ ರಾಜ್ಯಗಳ ಪ್ರತಿನಿಧಿಗಳಿಗಾಗೆ ರಾಜ್ಯಸಭೆ ಇದೆ.  ಸಂಸತ್ತಿನ ಯಾವುದೇ ನಿಯಮ, ಬಿಲ್ಲು, ಕಾಯ್ದೆ, ಕಾನೂನು ಈ ರಾಜ್ಯಸಭೆಯಲ್ಲೂ ಒಪ್ಪಿತವಾಗಬೇಕು. ಅಂದರೆ ರಾಜ್ಯಗಳು ಒಗ್ಗೂಡಿ ಕಟ್ಟಿಕೊಂಡಿರುವ ವ್ಯವಸ್ಥೆ ಭಾರತದ್ದು! ಅಧಿಕಾರ ಮೇಲಿನವರು ಕೆಳಗಿನವರಿಗೆ ಕೊಡಲ್ಪಟ್ಟಿಲ್ಲ ಮತ್ತು ಅದು ರಾಜ್ಯಗಳು ಕೇಂದ್ರಕ್ಕೆ ಬಿಟ್ಟುಕೊಟ್ಟದ್ದಾಗಿರಬೇಕೆನ್ನುವುದು ಸರಿಯಾದ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಪ್ರಾದೇಶಿಕ ಪಕ್ಷಗಳು    ರಾಷ್ಟ್ರ ರಾಜಕಾರಣಕ್ಕೆ ಬರುವುದು/ ಬಂದಿರುವುದು ಪ್ರಜಾಪ್ರಭುತ್ವದ ನಿಜ ಅರ್ಥವೆನಿಸುತ್ತದೆ.

ರಾಷ್ಟ್ರರಾಜಕಾರಣದ ಅರ್ಹತೆ!

ಆದರೂ ಒಮ್ಮೆ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣಕ್ಕೆ ಬರುವುದು ಆತಂಕಕಾರಿ' ಎನ್ನುವ ಈ ನಿಲುವಿನ ದನಿ ನಿಜಕ್ಕೂ ಸರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ನೋಡಬೇಕಾಗಿದೆ. ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಭಾರತದ ಸಂಸತ್ತಿನಲ್ಲಿ ಯಾವುದಾದರೂ ನಿರ್ಣಯ ತೆಗೆದುಕೊಳ್ಳುವುದಿದ್ದಲ್ಲಿ, ಅಲ್ಲಿನ ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ದನಿ ಇರಬೇಡವೇ? ಹಾಗೇ ಈಶಾನ್ಯ ರಾಜ್ಯಗಳ ಜನರ ದನಿಯನ್ನು ಸಂಸತ್ತಿನಲ್ಲಿ ಸಮರ್ಥವಾಗಿ/ ಪರಿಣಾಮಕಾರಿಯಾಗಿ ತೆರೆದಿಡಲು ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಸಮರ್ಥವಲ್ಲವೇ? ರಾಷ್ಟ್ರ ರಾಜಕಾರಣವೆಂದರೆ 'ದೆಹಲಿ ಗದ್ದುಗೆ' ಎಂದುಕೊಳ್ಳುವುದಾದರೆ, 'ಭಾರತದ ಸಂಸತ್ತು' ಎಂದುಕೊಳ್ಳುವುದಾದರೆ, ಅದಕ್ಕೆ 'ಇಡೀ ಭಾರತಕ್ಕೆ ಅನ್ವಯವಾಗುವಂತೆ ನೀತಿಗಳನ್ನು ರೂಪಿಸುವ ಹೊಣೆಗಾರಿಕೆಯಿದೆ' ಎನ್ನುವುದನ್ನು ಒಪ್ಪುವುದಾದರೆ... ಇಂಥಾ ಸಂಸತ್ತಿನಲ್ಲಿ ಎಲ್ಲಾ ಭಾರತೀಯರನ್ನು ಪ್ರತಿನಿಧಿಸೋ ಪಕ್ಷಗಳಿಗೆ ಇರಬೇಕಾದ ಮೂಲ ಕಾಳಜಿ ಯಾವುದಾಗಿರಬೇಕು? ತನ್ನ ಜನರು, ತನ್ನ ರಾಜ್ಯದ ಜನರ ಹಿತ ಉಳಿಸಿಕೊಳ್ಳುವ ಬದ್ಧತೆಯೂ? ರಾಜ್ಯಗಳೆಲ್ಲಾ ಕಡಿಮೆ ಪ್ರಾಮುಖ್ಯತೆ ಹೊಂದಿವೆ, ರಾಷ್ಟ್ರೀಯ ಹಿತದ ಬಗ್ಗೆ ಮಾತ್ರಾ ಸಂಸತ್ತಿನಲ್ಲಿ ಪ್ರಾಮುಖ್ಯತೆ ಇರಬೇಕು ಎನ್ನುವಿಕೆಯೋ? ರಾಜ್ಯಗಳ ಹಿತವನ್ನು ಕೇಂದ್ರವಾಗಿಸಿಕೊಂಡು ಇಡೀ ದೇಶಕ್ಕೆ ರೀತಿ ರೂಪಿಸಲು ಮುಂದಾಗುವಿಕೆಯೋ? ಇಂತಹ ಒಂದು ಬದ್ಧತೆ ರಾಷ್ಟ್ರೀಯಪಕ್ಷಗಳಿಗೆ ಇದೆಯೋ ಇಲ್ಲವೋ? ನಿಜಕ್ಕೂ ರಾಷ್ಟ್ರ ರಾಜಕಾರಣದ ಅರ್ಹತೆ ಯಾರಿಗಿದೆ? ಎನ್ನುವಂಥಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಇಂಥಾ ಉತ್ತರ ಕಂಡುಕೊಳ್ಳಬೇಕೆಂದರೆ ಇದುವರೆಗೂ ಪ್ರಾದೇಶಿಕ ಪಕ್ಷಗಳಾಗಲೀ, ರಾಷ್ಟ್ರೀಯ ಪಕ್ಷಗಳಾಗಲೀ ಹೇಗೆ ನಡೆದುಕೊಂಡಿವೆ ಎನ್ನುವುದನ್ನು ನೋಡಿದರೆ ತಕ್ಕಮಟ್ಟಿಗೆ ಅರ್ಥವಾಗುತ್ತದೆ. 

ಕಣ್ಣೆದುರಿನ ದಿಟಗಳು!

ಆಗಲೇ ಹೇಳಿದಂತೆ ಇಂದಿನ ಭಾರತದಲ್ಲಿ ಇದುವರೆಗೂ ಆಳಿದ ದೊಡ್ಡ ರಾಷ್ಟ್ರೀಯ ಪಕ್ಷಗಳೆಂದರೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳೇ. ಅರವತ್ನಾಲ್ಕು ವರ್ಷಗಳ ಸ್ವತಂತ್ರ ಭಾರತದಲ್ಲಿ ಈ ದೇಶವು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಗಳಿಗೆ ಎದುರಾದ ಸವಾಲುಗಳನ್ನು ಇವು ಹೇಗೆ ನಿಭಾಯಿಸಿವೆ  ಎನ್ನುವುದನ್ನು ನೋಡಿದರೆ ರಾಷ್ಟ್ರೀಯ ಪಕ್ಷಗಳಿಂದ ಈ ಸವಾಲುಗಳು ಎದುರಿಸಲ್ಪಟ್ಟ ಬಗೆ ನಿರಾಸೆ ಹುಟ್ಟಿಸುವಂತಿದೆ. ಹೋಗಲೀ ರಾಜ್ಯಗಳ ಸಮಸ್ಯೆಗಳಿಗೆ ಇವು ಸ್ಪಂದಿಸಿರುವ ಬಗೆ ನೋಡಿದರೆ ಇನ್ನೂ ಬಗೆಹರಿಯದ ಅಂತರರಾಜ್ಯ ನದಿನೀರು ಹಂಚಿಕೆ, ಅಂತರರಾಜ್ಯ ಗಡಿ ಸಮಸ್ಯೆಗಳೇ ಮೊದಲಾದ ಇನ್ನೂ ಜೀವಂತವಿರುವ ಸಮಸ್ಯೆಗಳೇ ಉತ್ತರ ಹೇಳುತ್ತವೆ... ಈ ಮಾತುಗಳನ್ನು ಅರಿಯಲು ಸ್ವಲ್ಪ ಸಾವಧಾನದಿಂದ ಇತಿಹಾಸದ ಪುಟ ತಿರುಗಿಸಿ, ಸುದ್ದಿಹಾಳೆಗಳನ್ನು ತಿರುವಿದರೆ ಸಾಕು... ತಿಳಿಯುತ್ತದೆ. ಹಾಗೇ ಈ ದೇಶದ ಪ್ರಾದೇಶಿಕ ಪಕ್ಷಗಳು ನಡೆದುಕೊಂಡಿರುವ ಬಗೆಯನ್ನೂ ನೋಡಿದರೆ ತಮಿಳುನಾಡಿಗೆ ಅಲ್ಲಿನ ಡಿಎಂಕೆ - ಅಣ್ಣಾ ಡಿಎಂಕೆಗಳು, ಆಂಧ್ರದಲ್ಲಿ ತೆಲುಗುದೇಶಂ, ಒರಿಸ್ಸಾದಲ್ಲಿ ಬಿಜು ಜನತಾದಳ ಮೊದಲಾದ ಪಕ್ಷಗಳು ಅವುಗಳ ರಾಜ್ಯಗಳಿಗೆ ಮಾಡಿರುವ ಒಳಿತುಗಳನ್ನು ನೋಡಿದರೆ ಅರ್ಥವಾಗುತ್ತದೆ. ಇನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯಿಂದಲೇ ರೈಲ್ವೆ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಬರೆಯಬಹುದು ಎಂದಾಗಿರುವುದು... ರೈಲ್ವೆ ಲಾಭದತ್ತ ಕಾಲಿಟ್ಟಿದ್ದೆ ರಾಷ್ಟ್ರೀಯ ಜನತಾದಳವೆನ್ನುವ ಬಿಹಾರದ ಪ್ರಾದೇಶಿಕ ಪಕ್ಷದ ನಾಯಕರಾದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಅಲ್ಲವೇ? ಭಾರತದ ಅತ್ಯುತ್ತಮ ರಕ್ಷಣಾ ಸಚಿವರು ಎನ್ನಿಸಿದ್ದ ಜಾರ್ಜ್ ಫರ್ನಾಂಡಿಸ್ ಕೂಡಾ ಸಮತಾಪಕ್ಷದವರಾಗಿದ್ದಾರೆ ಎನ್ನುವುದನ್ನು ಮರೆಯಲಾಗುವುದೇ?

ಬಹುಭಾಷಾ ಬಹುಸಂಸ್ಕೃತಿಗಳ ರಾಜ್ಯಗಳಿಂದಾದ ಭಾರತದಂತಹ ದೇಶದ ವೈವಿಧ್ಯತೆಗಳನ್ನು, ಪ್ರಾದೇಶಿಕ ಆಶೋತ್ತರಗಳನ್ನು ಅರ್ಥ ಮಾಡಿಕೊಂಡರೆ ಈ ವೈವಿಧ್ಯತೆಗಳನ್ನು ನಿಜಕ್ಕೂ ಪ್ರತಿನಿಧಿಸುವ, ಈ ಪ್ರದೇಶಗಳ ಹಿತಕ್ಕಾಗಿ ತುಡಿಯುವ ಪ್ರಾದೇಶಿಕ ಪಕ್ಷಗಳಿಂದಲೇ ಸರಿಯಾದ ವ್ಯವಸ್ಥೆಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಮನವರಿಕೆಯಾಗುತ್ತದೆ. ಮಹಾರಾಷ್ಟ್ರದ ಹಿತಕ್ಕಾಗಿ ಕಟಿಬದ್ಧವಾದ ಅಲ್ಲಿನ ಪ್ರಾದೇಶಿಕ ಪಕ್ಷ ಮತ್ತು ಕನ್ನಡಿಗರ ಹಿತಕ್ಕಾಗಿ ಬಡಿದಾಡುವ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದಾಗಲೇ ಸರಿಯಾದ ರಾಷ್ಟ್ರೀಯ ಜಲನೀತಿಯಂತಹ ಎಲ್ಲರೂ ಒಪ್ಪಬಹುದಾದ ಪರಿಹಾರ ಸೂತ್ರ ರೂಪಿಸಲು ಸಾಧ್ಯವಾಗಬಹುದಾಗಿದೆ. ಇಷ್ಟು ವರ್ಷ ಈ ಸಮಸ್ಯೆಗಳಿಂದ ಪಲಾಯನ ಮಾಡಿ ಚಾಪೆಯಡಿ ಹಾಕಿಕೊಂಡು ಕೂತ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳ ಸಮಸ್ಯೆಗಳಾಗಲೀ, ರಾಷ್ಟ್ರೀಯ ಸಮಸ್ಯೆಗಳಾಗಲೀ ಪರಿಹಾರ ಕಾಣುವುದು ಅಸಾಧ್ಯವೇ ಅನ್ನಿಸುತ್ತದೆ. ಲಕ್ಷಾಂತರ ಭಾರತೀಯರು ಸಂಘ  ಹೇಳಿದ್ದನ್ನು ವೇದವಾಕ್ಯವೆಂದು ಪರಿಗಣಿಸಿ, ಮಾರ್ಗದರ್ಶನ ಪಡೆದುಕೊಳ್ಳುತ್ತಿರುವಾಗ... ಸಂಘದೋರು ಇಂಥಾ ನಿಲುವುಗಳ ಬಗ್ಗೆ ಮತ್ತೊಮ್ಮೆ ಚಿಂತನೆ ಮಾಡೋದು ಒಳ್ಳೇದು! ಆಲ್ವಾ ಗುರೂ?

11 ಅನಿಸಿಕೆಗಳು:

ಅಜಯ ಅಂತಾರೆ...

ನಾನು ಮೊದಲು ಆರೆಸ್ಸೆಸ್ಸನ್ನು ಇಷ್ಟಪಡ್ತಿದ್ದೆ. ಆದರೆ ಈ ’ರಾಷ್ಟ್ರೀಯತೆ’ ವಿಷಯದಲ್ಲಿ ಇವರು ಆಡೋದು ಇಷ್ಟವಾಗ್ತಾ ಇಲ್ಲ. ಇವರಿಗೆ ಭಾರತದ ಪ್ರಾದೇಶಿಕ ಭಾಷೆ, ಸಂಸ್ಕೃತಿ ಬಗ್ಗೆ , ವಿವಿಧತೆಯಲ್ಲಿ ಏಕತೆ ಬಗ್ಗೆ ಮೂಲಭೂತ ತಿಳುವಳಿಕೆಯ ಕೊರತೆ ಇದೆ.

Vallish Kumar S ಅಂತಾರೆ...

ನಾವು, ಹಿಂದಿ ಅಲ್ಲದ್ದನ್ನು ಪ್ರಾದೇಶಿಕ ಭಾಷೆ ಅಂತ ಕರೆಯೋದು ಬಿಡಬೇಕು.. ಇಲ್ದೆ ಹೋದ್ರೆ ಹಿಂದಿಯನ್ನ ಪರೋಕ್ಷವಾಗಿ ರಾಷ್ಟ್ರ ಭಾಷೆ ಅಂದ ಹಾಗೆ ಆಗುತ್ತೆ.

Anonymous ಅಂತಾರೆ...

ಯಾಕೊ ಗುರುಗಳಿಗೆ ಈ ವಿಷಯ ಕಣ್ಣಿಗೆ ಬಿದ್ದ ಹಾಗೆ ಕಾಣಿಸ್ತಿಲ್ಲ. "ಕನ್ನಡ ಬಾವುಟ ಹಾರಿಸುವುದು ಕಡ್ಡಾಯ" http://kannada.oneindia.in/news/2012/03/21/karnataka-hoisting-kannada-flag-on-november-1-compulsory-aid0038.html

Priyank ಅಂತಾರೆ...

ಮಾನ್ಯ ಕೃಷ್ಣ ರಾಜ್ ಅವ್ರೆ,
"ನಾಡಹಬ್ಬದ ದಿನ ಕನ್ನಡ ಬಾವುಟ ಹಾರಿಸುವಿಕೆ ಕಡ್ಡಾಯ ಮಾಡಿರುವುದರಿಂದ, ಆರ್.ಎಸ್.ಎಸ್ ಪ್ರಾದೇಶಿಕ ಪಕ್ಷಗಳ ಬಗ್ಗೆ ಹೇಳಿರುವ ಈ ಮಾತುಗಳು ಸರಿ" ಎಂಬುದೇ ನಿಮ್ಮ ಮಾತಿನ ಅರ್ಥ?

maaysa ಅಂತಾರೆ...

"ನಾಡಹಬ್ಬದ ದಿನ ಕನ್ನಡ ಬಾವುಟ ಹಾರಿಸುವಿಕೆ ಕಡ್ಡಾಯ ಮಾಡಿರುವುದರಿಂದ"

Actually, the constitution of India does not allows this. This move is going to fail if one goes to a court against this. And I know someone is gonna do that.

maaysa ಅಂತಾರೆ...

http://prajavani.net/include/story.php?news=73170&section=5&menuid=10
ಇನ್ನು ಮುಂದೆ ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಬಾವುಟ ಹಾರಿಸುವಂತಿಲ್ಲ.
ಇದು ಕಾನೂನು. ಈ ಕುರಿತು ಸರ್ಕಾರ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.

ಆನಂದ್ ಅಂತಾರೆ...

ಮಾಯ್ಸಾ,
ಇದು ಮಾಧ್ಯಮಗಳ ಪ್ರವೋಕಿಂಗ್ ಸುದ್ದಿ. ವಾಸ್ತವವಾಗಿ ಸಾರ್ವಜನಿಕರು ಕನ್ನಡ ಬಾವುಟ ಹಾರಿಸಲು ವಿರೋಧ/ ನಿಶೇಧ ಇಲ್ಲ. ಇರುವುದು ಮೊನ್ನೆ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದರ ಜೊತೆಯಲ್ಲಿ ಕನ್ನಡ ಬಾವುಟ ಹಾರಿಸುವುದರ ಬಗ್ಗೆ! ಇನ್ನು ಮುಂದೆ ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಬಾವುಟ ಹಾರಿಸುವಂತಿಲ್ಲಾ ಎನ್ನುವುದರ ಅರ್ಥ ಇಷ್ಟೇ!! ಧ್ವಜಸಂಹಿತೆಯಲ್ಲಿ ಭಾರತದಲ್ಲಿ ಇಂದು ರಾಷ್ಟ್ರಧ್ವಜದ ಸಮಕ್ಕೆ ಬೇರಾವ ಬಾವುಟವನ್ನೂ ಹಾರಿಸುವಂತಿಲ್ಲ ಎಂದಿದೆ... ಅಂದರೆ ಈಗ ಕನ್ನಡ ಬಾವುಟಕ್ಕೆ ಕೇಂದ್ರಸರ್ಕಾರ ಮಾನ್ಯತೆ ನೀಡಿದರೆ ಅದನ್ನು ಭಾರತದ ಬಾವುಟಕ್ಕಿಂತ ಕಡಿಮೆ ಎತ್ತರದಲ್ಲಿ ಹಾರಿಸಲು ಅನುಮತಿ ಸಿಗಬಹುದೇನೋ! ಇದು ನಮ್ಮ ಒಕ್ಕೂಟದ ಇಂದಿನ ಸ್ಥಿತಿ-ಗತಿ.

ಆನಂದ್ ಅಂತಾರೆ...

ಮಾಯ್ಸಾ,
ಇದು ಮಾಧ್ಯಮಗಳ ಪ್ರವೋಕಿಂಗ್ ಸುದ್ದಿ. ವಾಸ್ತವವಾಗಿ ಸಾರ್ವಜನಿಕರು ಕನ್ನಡ ಬಾವುಟ ಹಾರಿಸಲು ವಿರೋಧ/ ನಿಶೇಧ ಇಲ್ಲ. ಇರುವುದು ಮೊನ್ನೆ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದರ ಜೊತೆಯಲ್ಲಿ ಕನ್ನಡ ಬಾವುಟ ಹಾರಿಸುವುದರ ಬಗ್ಗೆ! ಇನ್ನು ಮುಂದೆ ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಬಾವುಟ ಹಾರಿಸುವಂತಿಲ್ಲಾ ಎನ್ನುವುದರ ಅರ್ಥ ಇಷ್ಟೇ!! ಧ್ವಜಸಂಹಿತೆಯಲ್ಲಿ ಭಾರತದಲ್ಲಿ ಇಂದು ರಾಷ್ಟ್ರಧ್ವಜದ ಸಮಕ್ಕೆ ಬೇರಾವ ಬಾವುಟವನ್ನೂ ಹಾರಿಸುವಂತಿಲ್ಲ ಎಂದಿದೆ... ಅಂದರೆ ಈಗ ಕನ್ನಡ ಬಾವುಟಕ್ಕೆ ಕೇಂದ್ರಸರ್ಕಾರ ಮಾನ್ಯತೆ ನೀಡಿದರೆ ಅದನ್ನು ಭಾರತದ ಬಾವುಟಕ್ಕಿಂತ ಕಡಿಮೆ ಎತ್ತರದಲ್ಲಿ ಹಾರಿಸಲು ಅನುಮತಿ ಸಿಗಬಹುದೇನೋ! ಇದು ನಮ್ಮ ಒಕ್ಕೂಟದ ಇಂದಿನ ಸ್ಥಿತಿ-ಗತಿ.

maaysa ಅಂತಾರೆ...

"ಅಂದರೆ ಈಗ ಕನ್ನಡ ಬಾವುಟಕ್ಕೆ ಕೇಂದ್ರಸರ್ಕಾರ ಮಾನ್ಯತೆ ನೀಡಿದರೆ ಅದನ್ನು ಭಾರತದ ಬಾವುಟಕ್ಕಿಂತ ಕಡಿಮೆ ಎತ್ತರದಲ್ಲಿ ಹಾರಿಸಲು ಅನುಮತಿ ಸಿಗಬಹುದೇನೋ!"

Sorry to type in English. This'd require a change in the constitution, I think.

India is not like Austria. https://en.wikipedia.org/wiki/States_of_Austria

The Indian constitution describes "India, that is Bharat, shall be a Union of States." not a federation of states.

"Union" means a group of states or nations united into one political body.
Where as
"Federation" means a federated body formed by a number of nations, states, societies, unions, etc., each retaining control of its own internal affairs.

Hence the states of India don't retain the control of their internal affairs. They are always commanded by the central.

India is not federation and it will never be.!

I think or assume(wrongly?), Enguru projects India as a federation which is wrong.

I think Enguru wishes India to be a federation which is far from reality or becoming reality.

"ಇದು ಮಾಧ್ಯಮಗಳ ಪ್ರವೋಕಿಂಗ್ ಸುದ್ದಿ. ವಾಸ್ತವವಾಗಿ ಸಾರ್ವಜನಿಕರು ಕನ್ನಡ ಬಾವುಟ ಹಾರಿಸಲು ವಿರೋಧ/ ನಿಶೇಧ ಇಲ್ಲ. "
Well! one must check the 'sedition' laws. If someone tries to portray a part of India as a separate entity, it might be a problem. Having flag to Karnataka might be interpreted as seditious. That's because we all citizens of India under one flag, the Indian national flag ( as per the constitution ).

Hence any 'state' flag won't/can't have any recognition from either the center or any state ever! It is totally unconstitutional.

ಬನವಾಸಿ ಬಳಗ ಅಂತಾರೆ...

ಮಾಯ್ಸಾ ಅವರೇ,
ಭಾರತದ ಇಂದಿನ ಸ್ವರೂಪದ ಬಗ್ಗೆ, ಭಾರತದ ಇಂದಿನ ಸಂವಿಧಾನ ಇರುವ ಬಗ್ಗೆ, ಅದರೊಳಗಿರುವ ರಾಜ್ಯಗಳ ಸ್ಥಾನಮಾನಗಳ ಬಗ್ಗೆಯೂ ಅರಿವಿದೆ. ಇಂದು ಭಾರತ ಒಕ್ಕೂಟ(Union)ವಾಗಿದೆ ಮತ್ತು ಇದು ಒಪ್ಪುಕೂಟ(Federation)ವಾಗಲಿ ಎನ್ನುವ ಆಶಯ "ಏನ್‌ಗುರು"ವಿನದ್ದಾಗಿದೆ.

maaysa ಅಂತಾರೆ...

"ಭಾರತದ ಇಂದಿನ ಸ್ವರೂಪದ ಬಗ್ಗೆ, ಭಾರತದ ಇಂದಿನ ಸಂವಿಧಾನ ಇರುವ ಬಗ್ಗೆ, ಅದರೊಳಗಿರುವ ರಾಜ್ಯಗಳ ಸ್ಥಾನಮಾನಗಳ ಬಗ್ಗೆಯೂ ಅರಿವಿದೆ. ಇಂದು ಭಾರತ ಒಕ್ಕೂಟ(Union)ವಾಗಿದೆ ಮತ್ತು ಇದು ಒಪ್ಪುಕೂಟ(Federation)ವಾಗಲಿ ಎನ್ನುವ ಆಶಯ "ಏನ್‌ಗುರು"ವಿನದ್ದಾಗಿದೆ."

ಒಳ್ಳೆಯ ಗುರಿ. 

ಆದರೆ, ಈಗಿರುವ ಭಾರತೀಯ ಸಂವಿಧಾನವು ಆ ಬಗೆಯ 'ವಿಕೇಂದ್ರೀಕರಣ'ಕ್ಕೆ ಅನುವು ಇಯ್ಯುವುದಿಲ್ಲ ಎಂದಷ್ಟೇ. ಆ ಸಲುವಾಗೆ ಕರ್ನಾಟಕದ 'ರಾಜ್ಯ ಧ್ವಜ'ಕ್ಕೆ ನಮ್ಮ ದೇಶದಲ್ಲಿ ಸರಕಾರೀ ಅನುಮೋದನೆಯ ಅವಕಾಶವಿಲ್ಲ.

ಕನ್ನಡ ಬಾವುಟ ಒಂದು 'informal' ಚಿಹ್ನೆ  ಆಗಿರಲಷ್ಟೇ ಸಾಧ್ಯ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails