ಇಡೀ ಭಾರತ ನಮ್ಮದು ಅನ್ನೋರು ಯಾರು ಗೊತ್ತಾ?


ಇತ್ತೀಚಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆಯವರು ವಲಸಿಗರ ಬಗ್ಗೆ ಆಡಿದ ಕಟುಮಾತುಗಳ ಬೆನ್ನ ಹಿಂದೇ ಉದ್ಧವ ಠಾಕ್ರೆ "ಮಹಾರಾಷ್ಟ್ರಕ್ಕೆ ವಲಸೆ ಬರೋರಿಗೆ ಪರ್ಮಿಟ್ ವ್ಯವಸ್ಥೆ ಬೇಕು" ಎಂದಿದ್ದಾರೆ. ಈ ಮಾತಿನ ಹಿನ್ನೆಲೆಯೇನಪ್ಪಾ ಅಂದರೆ ಮೊನ್ನೆ ಮುಂಬೈಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಒಬ್ಬ ಬಿಹಾರಿಯನ್ನು ಬಿಹಾರದಿಂದ ಬಂಧಿಸಿ ಒಯ್ದಿದ್ದಕ್ಕೆ ಬಿಹಾರದ ಮುಖ್ಯಮಂತ್ರಿ "ಯಾವುದೇ ಬಿಹಾರಿಯನ್ನು ಬಂಧಿಸುವ ಮುನ್ನ ಬಿಹಾರ ಸರ್ಕಾರದ ಅನುಮತಿ ಪಡೆಯಬೇಕು" ಎನ್ನುವ ಹೇಳಿಕೆ ನೀಡಿದರಂತೆ. ಈ ಮಾತೇನೋ ಸರಿಯಾಗೇ ಇದೆ. ಆದರೆ ಅದಕ್ಕೆ ಉದ್ಧವ್ ಠಾಕ್ರೆಯವರು "ಹಾಗಾದರೆ ಮಹಾರಾಷ್ಟ್ರಕ್ಕೆ ಬರುವ ಬಿಹಾರಿಗಳಿಗೆ ಪರ್ಮಿಟ್ ವ್ಯವಸ್ಥೆ ಮಾಡಿ" ಎಂದಿದ್ದಾರೆ. ಇಲ್ಲಿ ಈ ಮಾತುಗಳು ಒಂದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದು ಹುಟ್ಟಿದಂತಿದ್ದರೂ ವಾಸ್ತವವಾಗಿ ಉದ್ಧವ್ ಮಾತುಗಳಲ್ಲಿ ಹುರುಳಿದೆ.

ಭಾರತೀಯರು ಎಲ್ಲಿ ಬೇಕಾದರೂ ಹೋಗಬಹುದು ಅನ್ನೋರು!

ಇದಕ್ಕೆ ಪ್ರತಿಕ್ರಿಯೆಯಾಗಿ ಬಿಹಾರದ ರಾಜಕಾರಣಿಗಳು ಮಹಾನ್ ದೇಶಭಕ್ತರಂತೆ.. "ಇಡೀ ಭಾರತ ಒಂದು, ಸಂವಿಧಾನವೇ ಯಾರು ಎಲ್ಲಿಗೆ ಬೇಕಾದರೂ ವಲಸೆ ಹೋಗಬಹುದು ಎನ್ನುವ ಅವಕಾಶ ಕೊಟ್ಟಿದೆ, ನಾವು ಎಲ್ಲಾದರೂ ಹೋಗ್ತೀವಿ, ನಮ್ಮನ್ನು ಪ್ರಶ್ನಿಸೋರ ಮೇಲೆ ಕ್ರಮ ಕೈಗೊಳ್ಳಿ" ಎಂದುಬಿಟ್ಟರು. ಇದು, ಯಾಕೆ ಇದೇ ರಾಜ್ಯಗಳ ರಾಜಕಾರಣಿಗಳ ಬಾಯಲ್ಲಿ ಸದಾ ಉದುರುವ ಆಣಿಮುತ್ತಾಗಿದೆ ಎಂದುಕೊಳ್ಳುವಿರಾದರೆ ಈ ಪಟ್ಟಿಯನ್ನು ನೋಡಿ:


ಈಗ ಶ್ರೀಮಂತ/ ಸಂಪದ್ಭರಿತ ನಾಡುಗಳು ಯಾವುವು?
 - ಮಹಾರಾಷ್ಟ್ರ, ಕರ್ನಾಟಕಗಳು... 

ಎಲ್ಲಿ ಜನಸಂಖ್ಯೆ ದಟ್ಟವಾಗಿದೆ?
 - ಬಿಹಾರ, ಉತ್ತರ ಪ್ರದೇಶದಲ್ಲಿ

ಎಲ್ಲಿ ಕಡಿಮೆಯಿದೆ?
 - ಕರ್ನಾಟಕ, ಮಹಾರಾಷ್ಟ್ರಗಳಲ್ಲಿ...

ಜನಸಂಖ್ಯಾ ನಿಯಂತ್ರಣದ ಯೋಜನೆಯಂತೆ ಯಾರ ಟಿಎಫ್‌ಆರ್ ಹೆಚ್ಚಿದೆ?
 - ಉತ್ತರಪ್ರದೇಶ, ಬಿಹಾರ...

ಯಾರದು ಕಡಿಮೆಯಿದೆ?
- ಕರ್ನಾಟಕ ಮಹಾರಾಷ್ಟ್ರದ್ದು...

ಹೋಗಲಿ.. ೨೦೨೦ಕ್ಕೆ ಯಾರಿಗೆ ಯಾವ ಟಿಎಫ್‌ಆರ್ ಗುರಿಯಿದೆ?
 - ಮಹಾರಾಷ್ತ್ರ, ಕರ್ನಾಟಕಕ್ಕೆ ೧.೯ ಮತ್ತು ೧.೮. ಉತ್ತರಪ್ರದೇಶ, ಬಿಹಾರಕ್ಕೆ ೩.೦.

ಅಂದರೇನು ಅರ್ಥ?
 - ಉತ್ತರಪ್ರದೇಶ ಮತ್ತು ಬಿಹಾರಗಳು ಜನಸಂಖ್ಯಾ ಸ್ಫೋಟದಿಂದ ನರಳುತ್ತಿವೆ ಮತ್ತು ಆರ್ಥಿಕವಾಗಿ ಹಿಂದುಳಿದಿವೆ ಮತ್ತು ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನಸಂಖ್ಯೆ ಅಂದರೆ ಅಲ್ಲಿನ ಜನದಟ್ಟಣೆ ನಮ್ಮ ನಾಡಿನ ಮೂರುಪಟ್ಟು ಹೆಚ್ಚಾಗಿದೆ. ಇಷ್ಟಿದ್ದರೂ ಅಲ್ಲಿ ಪ್ರತಿ ದಂಪತಿಗೆ ಮೂರು ಮಕ್ಕಳು ಹುಟ್ಟಬಹುದು! ಅದೇ ಕರ್ನಾಟಕ, ಮಹಾರಾಷ್ಟ್ರಗಳು ಶ್ರೀಮಂತವಾಗಿವೆ, ಇಲ್ಲಿ ಜನದಟ್ಟಣೆ ಕಡಿಮೆಯಿದೆ... ಆದರೂ ಇಲ್ಲಿ ಪ್ರತಿ ದಂಪತಿಗೆ ೧.೮ ಮಕ್ಕಳನ್ನು ಹೆರಬೇಕೆನ್ನುವ ಯೋಜನೆ ನೀಡಲಾಗಿದೆ. ಅಂದರೆ ಇದರ ಅರ್ಥ, ಬರ್ತಾ ಬರ್ತಾ ಕನ್ನಡ ಕುಲ ಅಳಿಯಲಿ... ಉತ್ತರದ ವಲಸಿಗರಿಂದ ಕರ್ನಾಟಕ ಮಹಾರಾಷ್ಟ್ರದಂತಹ ನಾಡುಗಳು ನಳನಳಿಸಲಿ ಎಂದಲ್ಲವೇ? ಬಿಹಾರದ ರಾಜಕಾರಣಿಗಳು ಬಾಯಲ್ಲಿ ರಾಷ್ಟ್ರೀಯ ಏಕತೆಯ ಮಾತಾಡುತ್ತಿದ್ದರೂ ನಿಜವಾಗಿ ಮಾಡುತ್ತಿರುವ ಹುನ್ನಾರ ಚೆನ್ನಾಗಿ ಬೆಳೆದಿರುವ ನಾಡುಗಳಿಗೆ ತಮ್ಮ ಜನರನ್ನು ನುಗ್ಗಿಸುವಿಕೆಗೆ ಬೆಂಬಲ!

ಈಗ ಹೇಳಿ, ನಮ್ಮೂರಿಗೆ ವಲಸೆ ಬರೋರ ಮೇಲೆ ನಮಗೆ ನಿಯಂತ್ರಣ ಬೇಡವೇ? ಇಂಥಾ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕೋ ಒಂದು "ವಲಸೆ ನೀತಿ" ಭಾರತಕ್ಕೆ ಬೇಡ್ವಾ ಗುರೂ!?

18 ಅನಿಸಿಕೆಗಳು:

Anonymous ಅಂತಾರೆ...

I agree.

pratapan ಅಂತಾರೆ...

All these are unnecessary deliberations.. learn to cooperate with your fellow Indians and live as one country.. one needs to balance federal and state ambitions equally.. AFAIK Raj Takre is a rowdy, anti-social element where as Udhav is just a ordinary son of another extremist looking for some place..

pratapan ಅಂತಾರೆ...

<< ಇಂಥಾ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕೋ ಒಂದು "ವಲಸೆ ನೀತಿ" ಭಾರತಕ್ಕೆ ಬೇಡ್ವಾ << ಗುರೂ!?

Bharatakko athva Karnatakakko??.. You need to clarify if you wish Karnataka should secede from India and what feelings you have towards India as a whole ?? Dude come out of these regionalistic infighting, learn to live united as a country.. India was suffered immensely in the past because of infighting amongst locals.. for eg various invasions in history.. you guys seem to be hell bent on continuing that..

If you 'Kannada premis' had read Kavi Kuvempu's Bharata-Jananiya-Tanujaate or Vishva-manava-snadesh you wouldnt engage in this DMK, Shivsena style regionalism.. bad

Hariprasada. A ಅಂತಾರೆ...

ಬಿಹಾರಿಗಳ ಬಗ್ಗೆ ಈಗ ಅಬ್ಬರಿಸುತ್ತಿರುವವರು ಹಿಂದೆ ಮುಂಬಯಿಯಿಂದ ಕನ್ನಡಿಗರನ್ನು ಹೊಡೆದೋಡಿಸಬೇಕೆಂದು ಅಬ್ಬರಿಸಿದ್ದನ್ನು ಮರೀಬೇಡಿ.. ವಲಸೆ ನೀತಿ ಒಂದು ದೇಶದಲ್ಲಿ ಜಾರಿಗೆ ತರೋದು ಅಸಾಧ್ಯ.. ಯಾವುದೇ ಭಾಗದಲ್ಲಿ ಹೋಗಿ ಬದುಕುವ ಹಕ್ಕು ಪ್ರತಿಯೊಬ್ಬರಿಗಿದೆ ಮತ್ತು ಅದು ದೇಶ ಅಂದಮೇಲೆ ಇರಲೇ ಬೇಕು.. ಬಿಹಾರಿಗಳ ಬಗ್ಗೆ ಹಿಂದಿನ ಪೂರ್ವಾಗ್ರಹಳನ್ನು ಬಿಡಬೇಕಿದೆ. ನಿತೀಶ್ ಆಳ್ವಿಕೆಯ ಬಿಹಾರ ಲಾಲೂ ಆಡಳಿತದ ಬಿಹಾರವಾಗಿ ಉಳಿದಿಲ್ಲ ಅನ್ನೋದನ್ನು ಮರೀಬಾರದು.

Ramanna ಅಂತಾರೆ...

Ah .. idappa varase..ee vishayadalli namma kannu teresiddakke dhanyavaadagaLu.

ಗುಡುಗು ಮಿಂಚು ಅಂತಾರೆ...

ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ.

ಪ್ರಶಾಂತ ಸೊರಟೂರ ಅಂತಾರೆ...

ಇಲ್ಲಿ ಶಿವಸೇನಾದ ಹೇಳಿಕೆಯನ್ನು ಅಡಿಯಾಗಿಸಿದ್ದು ಸರಿ ಅನಿಸುತ್ತಿಲ್ಲ. ಅವರು ದಿನಕ್ಕೊಂದು ಮಾತಾಡಿ ರಾಜಕೀಯ ಮಾಡುವವರು.
ಆದರೆ ಈ ಮೇಲಿನ ಬರಹದಲ್ಲಿ ಶಿವಸೇನಾದಾಚೆಗೆ ಹೇಳಿರುವ ವಿಶಯಗಳು ಗಟ್ಟಿಯಾದ ಅಂಕಿ-ಅಂಶಗಳ ಮೇಲೆ ನಿಂತ ಸತ್ಯಗಳು.
ಇದರಲ್ಲಿ ಒಗ್ಗಟ್ಟನ್ನು ಮುರಿಯುವಂತಾದು ಏನೂ ಇಲ್ಲಾ.
ಭಾರತದಲ್ಲಿರುವ ಈಗಿರುವ ಏರ್ಪಾಟುಗಳು ಬರೀ ಉತ್ತರ ಭಾರತೀಯರ ಪರವಾಗಿಯೇ ಇವೆಯೇ ಹೊರತು ಮೇಲೆ ಕೆಲವರು ಮಾತಾಡಿದಂತೆ ಗಟ್ಟಿ ಭಾರತವನ್ನು ಕಟ್ಟುವಲ್ಲಿ ಎಲ್ಲ ರಾಜ್ಯಗಳನ್ನು ಒಳಗೊಳ್ಳುವ ವ್ಯವಸ್ಥೆಗಳಿಲ್ಲ.
ಇಡೀ ಭಾರತದ ಹೊಣೆಹೊತ್ತಿರುವ ಕೇಂದ್ರ ಸರಕಾರ ಹಿಂದಿ ಹೇರುತ್ತಿರುವುದನ್ನು ನೋಡಿದರೆ ಎಂತವರಿಗೂ ಕರ್ನಾಟಕ ಭಾರತದಲ್ಲಿ ಇಲ್ಲವೇ ಅನ್ನುವ ದಿಗಿಲು ಹುಟ್ಟುತ್ತೆ!
ಕರ್ನಾಟಕದಲ್ಲಿ ಓಡಾಡುವ ರೈಲ್ವೆ ಚೀಟಿಗಳಲ್ಲಿ ಕನ್ನಡವಿಲ್ಲ, ಅಂಚೆ, ಬ್ಯಾಂಕು, ವಿಮಾನ ನಿಲ್ದಾಣ ಹೀಗೆ ಎಲ್ಲ ಕಡೆ ನಮ್ಮದು ಭಾರತ ಎನ್ನುತ್ತಾ ಹಿಂದಿ ಹೇರಲಾಗುತ್ತಿದೆ, ಎಲ್ಲವನ್ನೂ ಹಿಂದಿ ಮಾತನಾಡುವ ಜನರಿಗೆ ಅಣಿಗೊಳಿಸಲಾಗುತ್ತಿದೆ.
ಇನ್ನೂ ಇದರ ಬಗ್ಗೆ ಎಚ್ಚರಗೊಳ್ಳದ ಕನ್ನಡಿಗರು ಮಾತ್ರ ತಮ್ಮದು ಭಾರತೀಯತೆ ಅನ್ನುವಂತ ಪೊಳ್ಳು ತಳಹದಿಯ ಮೇಲೆ ನಿಂತೇ ಮಾತನಾಡುತ್ತಿದ್ದಾರೆ. ಕನ್ನಡಬಿಟ್ಟ, ಬರೀ ಹಿಂದಿಯವರಿಗೆ ತೆರೆದಿಟ್ಟ ಭಾರತೀಯತೇ, ಅದೆಂತದು!

Anonymous ಅಂತಾರೆ...

ಹರಿಪ್ರಸಾದ್,
ಅಮೇರಿಕಾ ಒಂದು ದೇಶ. ಅಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ಹೋಗಿ ಇರಲು ಸಾಧ್ಯಾನಾ?
ಕೊಂಗ

Anonymous ಅಂತಾರೆ...

Mr. Pratapan,
Do not talk non sense. If you want, talk about TFR targets, implications of interstate migration... etc. India deleting kannada is not acceptable!
konga

Aravind M.S ಅಂತಾರೆ...

@Hariprasada. A

ನಿಮ್ಮ ಮಾತನ್ನು ಒಪ್ಪುವೆ. ಶಿವಸೇನಾ ಕೂಡಾ ಅಂಕಿ ಅಂಶಗಳ ಮೇಲೆ ಈ ಮಾತನ್ನಾಡಿದ್ರೆ ಒಪ್ಪಬಹುದಾಗಿತ್ತು. ಆದ್ರೆ ಅದು ಹಾಗೆ ಮಾಡಿಲ್ಲ ಮತ್ತು ನಮ್ಮನ್ನು (ಕನ್ನಡಿಗರನ್ನು)ಈ ತಮ್ಮ ದೂರುಗಳ ಅನುವರ್ತಿಗಳಾಗಿ ಸೇರಿಸಿಕೊಂಡಿಲ್ಲ. ಆದ್ದರಿಂದ ಅವರ ಹೇಳಿಕೆ ವೈಯಕ್ತಿಕವಾಗುತ್ತದೆ ಮತ್ತು ನಾವು ಅದರ ಮಾತುಗಳ ಫಲಾನುಭವಿಗಳೂ ಅಲ್ಲ, ಅವರ ಮಾತುಗಳಿಗೆ ಭಾಧ್ಯರೂ ಅಲ್ಲ.

ಆನಂದ್ ಅಂತಾರೆ...

ಅರವಿಂದ್ ಮತ್ತು ಹರಿಪ್ರಸಾದ ಸಾರ್,
ಶಿವಸೇನೆ ಹಿಂದೆ ಕನ್ನಡಿಗರ ವಿರುದ್ಧ ಅಬ್ಬರಿಸಿದ್ದರು ಎನ್ನುವ ಕಾರಣಕ್ಕೆ ಅವರು ಹೇಳಿದ್ದನ್ನೆಲ್ಲಾ ಒಪ್ಪಬಾರದು ಅನ್ನಲಾಗುವುದೇ? ಕಾವೇರಿ ವಿಷಯವಾಗಿ ಡಿಎಂಕೆ ನಮ್ಮ ವಿರುದ್ಧ ಹೋರಾಡುತ್ತಿದೆ, ಆದರೆ ಫೆಡರಲಿಸ್ಮ್ ಬಗ್ಗೆ ಅವರ ನಿಲುವು ತುಂಬಾ ಸರಿಯಾಗಿದೆ. ಇದನ್ನು ಒಪ್ಪದೇ ಇರಲಾಗುತ್ತಾ? ಇನ್ನು ಶಿವಸೇನೆ ಅಂಕಿಅಂಶ ಕೊಡಬೇಕಿತ್ತು ಅನ್ನೋ ಮಾತುಗಳ ಬಗ್ಗೆ ಹೇಳಬೇಕೆಂದರೆ... ಅವರು ಅಂಕಿಅಂಶ ಕೊಡದಿದ್ದರೆ ಅನಿಯಂತ್ರಿತ ವಲಸೆ ಎನ್ನುವುದು ಸಮಸ್ಯೆ ಆಗುವುದಿಲ್ಲವೇ? ಅನಿಯಂತ್ರಿತ ವಲಸೆ ಹೇಗೆ ನಾಡಿನ ಡೆಮೋಗ್ರಫಿ ಬದಲಿಸುತ್ತಿದೆ ಎನ್ನುವುದು ಇಲ್ಲಿ ಮುಖ್ಯವಾದ ಮಾತು. ಉಳಿದದ್ದೆಲ್ಲಾ ಈ ಪೋಸ್ಟಿನಲ್ಲಿ ಚರ್ಚೆಗೆ ಅಗತ್ಯವಿಲ್ಲದ್ದು! ಇವತ್ತು ಮುಂಬೈಯಲ್ಲಿ ಆಗುತ್ತಿರುವುದು ನಾಳೆ ಬೆಂಗಳೂರಲ್ಲಿ ಆಗುತ್ತದೆ ಎನ್ನುವ ಮುನ್ಸೂಚನೆಯನ್ನು ನಾವು ಕಂಡುಕೊಂಡು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಬರಹದ ಆಶಯ!

Aravind M.S ಅಂತಾರೆ...

ಆನಂದರೆ,
ಬಿಹಾರ ಮೂಲದ ಜನ ಇವತ್ತು ನಮ್ಮ ಆಲೆಮನೆಗಳಲ್ಲಿ ಉರಿ ಬೆಂಕಿಯಲ್ಲಿ ಕಬ್ಬಿನ ಬೆಲ್ಲ ತೆಗೆಯೋದು, ನಮ್ಮ ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡೋದು, ನಮ್ಮ ರಸ್ತೆ ಕಾಮಗಾರಿ ಇತ್ಯಾದಿ ಮಾಡ್ತಿದ್ದಾರೆ, ಜೀವ ಕಳ್ಕೋತಿದ್ದಾರೆ. ಇವೆಲ್ಲಾ ಮಾಡೋಕೆ ಅವರ ಬಿಟ್ಟು ಜನ ಸಿಗ್ತಿಲ್ಲ. ಏಕೆಂದರೆ ಇವು ಅಷ್ಟು ಅಪಾಯಕಾರಿ ಮೂಲೆಪಾಲಾಗಿರುವ ಕಸುಬುಗಳು. ಈ ಉಸಾಬಾರಿ ನಮ್ಮ ದಿನ ಶುರು ಮಾಡೋ, ಪೂರೈಸುವಂಥವುಗಳು. ಮತ್ತು ಇದೇನು ಶಾಶ್ವತ ಕೆಲ್ಸಗಳಲ್ಲ. ಇದಾದ ಮೇಲೆ ಅವರ ಊರಿನ ದಾರಿ ಅವರು ನೋಡಿಕೊಳ್ತಾರೆ. ಇವನ್ನೆಲ್ಲ ನಾವು ಗಮನಕ್ಕೇ ತಗೊಳಲ್ಲ. ಒಂದು ಸಾರಿ ಈ ಕೆಲಸಗಳಾಗದೆ ವಿಕೋಪಕ್ಕೆ ಹೋದಾಗ ಅದರ ಬೆಲೆ ತಿಳಿಯುವುದು ಅಲ್ಲವೆ ?

ಆನಂದ್ ಅಂತಾರೆ...
This comment has been removed by the author.
ಆನಂದ್ ಅಂತಾರೆ...

ಶ್ರೀ ಅರವಿಂದರೇ,
ಇವರು ಇಲ್ಲಿಗೆ ಬರುವ ಮೊದಲು ನಮ್ಮೂರಲ್ಲಿ ಆಲೆಮನೆ, ಶೌಚಾಲಯ, ರಸ್ತೆ ಕಾಮಗಾರಿ ಇತ್ಯಾದಿ ಕೆಲಸಗಳನ್ನೆಲ್ಲಾ ಮಾಡ್ತಾನೆ ಇರಲಿಲ್ಲವೇ? ನನ್ನ ನಿಲುವು ವಲಸೆ ಬರೋದು ಬೇಡಾ ಅಂತಾ ಅಲ್ಲಾರೀ... ಅನಿಯಂತ್ರಿತ ವಲಸೆ ಬೇಡ ಅಂತಾ! ವಲಸೆ ನೀತಿ ಬೇಕು ಅಂದ್ರೇನೆ ವಲಸೆ ಮುಂದುವರೆಯುತ್ತೆ ಅಂತಾ ಅಲ್ವಾ? ಹಾಗೆ ನಿಯಂತ್ರಿತ ವಲಸೆ ನಮ್ಮ ಹಿಡಿತದಲ್ಲಿ ನಡೆಯುವಂತಾಗಿ ಹಾಗೆ ವಲಸೆ ಬರುವವರನ್ನು ಇಂತಿಷ್ಟೇ ದಿನ ಇರಲು ಅನುಮತಿ ಕೊಡುವಂತೆಯೂ, ತುಂಬಾ ದಿನಾ ಇರಲು ಬರುವವರು ಈ ನಾಡಿನ ಸಂಸ್ಕೃತಿಯ ಪರಿಚಯ ಪಡೆದು, ನುಡಿ ಕಲಿಕೆಯ ಒಂದು ಹಂತ ದಾಟಿ ಬರುವಂತೆಯೂ ಮಾಡಬಹುದು! ಇದನ್ನು ಒರಟಾಗಿ ಉದ್ಧವ್ ಪರ್ಮಿಟ್ ಅಂದಿದ್ದಾರೆ... ಇನ್ನೂ ಕೆಲವರು ವೀಸಾ ಪದ್ದತಿ ಅಂದಿದ್ದಾರೆ... ನಾವು ಏನಾದರೂ ಕರೆದುಕೊಳ್ಳಿ... ಅನಿಯಂತ್ರಿತ ವಲಸೆ ನಿಯಂತ್ರಣ ಮಾಡುವಂತ ನೀತಿ ಬೇಕು ಅಂದಿದ್ದೇನೆ...

Unknown ಅಂತಾರೆ...

ಇಲ್ಲಿಗೆ ಬಂದವರು ಇಲ್ಲಿನ ಭಾಷೆ ಸಂಸ್ಕೃತಿಯನ್ನು ಕಲಿಯಬೇಕು ಎನ್ನುವುದು ಸರಿಯೇ. ಆದರೆ, ಅದನ್ನು ಕಾನೂನಿನ ಮುಲಕ ಮಾಡಲು ಸಾಧ್ಯವಾಗುತ್ತದೆಯೇ ಎನ್ನುವುದು ಪ್ರಶ್ನೆ. ಇಲ್ಲಿಗೆ ಬರುವವರಿಗೆ ಒಂದು ತರಬೇತಿ, ಒಂದು ಪರೀಕ್ಷೆ - ಅದಾದ ನಂತರವೇ ಅನುಮತಿ ಇವೆಲ್ಲಾ ಸಾಧ್ಯವಾಗದ ಮಾತುಗಳು. ದೇಶದೊಳಗೊಂದು ದೇಶ ಸೃಷ್ಟಿ ಮಾಡಲು ಸಾಧ್ಯವೇ? ಇಲ್ಲಿರುವ ನಾವುಗಳು ಕನ್ನಡ ಬಿಟ್ಟು ಬೇರೆ ಮಾತನಾಡುವುದಿಲ್ಲ (ಆಫೀಸಿನ ಹೊರಗೆ) ಅನ್ನುವುದನ್ನು ಪಾಲಿಸಿದರೆ ಎಲ್ಲವೂ ತಾನೇ ತಾನಾಗೇ ಸರಿಹೋಗುತ್ತದೆ. ನಮ್ಮ ಹಾಗೆ ಚೆನ್ನೈನವರು ಅಳುತ್ತಾ ಕೂರುವುದಿಲ್ಲವಲ್ಲ. ಅವರು ಅದನ್ನು ಮಾಡುತ್ತಾರೆ, ನಮ್ಮಂತೆ ಭಾಷಣ ಮಾಡುವುದಿಲ್ಲ. ಹಾಗಾಗಿ, ಚೆನ್ನೈಗೆ ಹೋದವರೆಲ್ಲಾ ಒಂದು ವರ್ಷದೊಳಗೆ ತಮಿಳು ಕಲಿಯುತ್ತಾರೆ! ಹಾಗೆ ನೋಡಿದರೆ, ಇಲ್ಲಿನ ಕೆಲವು ಜಾತಿಗಳು ಉತ್ತರ ಭಾರತದಿಂದ ಬಂದವರಂತೆ. ಅವರೆಲ್ಲ ಇಂದು ಅಪ್ಪಟ ಕನ್ನಡಿಗರಾಗಿಲ್ಲವೇ?(ನನ್ನ ಪೂರ್ವಜರೂ ಹಾಗೆಯೇ, ಉತ್ತರದಿಂದ ಬಂದವರೇ) ಇಲ್ಲಿನ ಸಂಸ್ಕೃತಿಗೆ ಅವರನ್ನೆಲ್ಲ ಅರಗಿಸಿಕೊಳ್ಳುವ ಶಕ್ತಿ ಕೊಡಬೇಕಾದವರು ನಾವು. ಶಾಲೆಗಳಲ್ಲಿ, ಮಾಲ್‌ಗಳಲ್ಲಿ, ಬೀದಿಯಲ್ಲಿ ಕನ್ನಡ ಇರುವಂತೆ ಮಾಡಬೇಕಾದವರು ನಾವು. ಅದನ್ನು ಮಾಡದಿದ್ದಲ್ಲಿ ನಮ್ಮ ಭಾಷೆ ಸಂಸ್ಕೃತಿಯನ್ನು ನಾಶ ಮಾಡಲು ಬೇರೆ ಯಾರೂ ಬರಬೇಕಾಗಿಲ್ಲ. ಇಂಗ್ಲಿಷ್‌ ಒಂದೇ ಸಾಕು ಆ ಕೆಲಸ ಮಾಡಲು. ಒಂದು ದೃಷ್ಟಿಯಲ್ಲಿ ಯೋಚಿಸಿದರೆ, ಬೇರೆಯವರಿಗಿಂತ ಇಂಗ್ಲಿಷೇ ಇಂದು ನಮ್ಮ ವೈರಿ. ಉಳಿದ ಭಾಷೆಗಳು ಅನಂತರ. ಬಿಹಾರಿಗಳ, ತಮಿಳರ ಬಗ್ಗೆ ನಮಗೆ ಇರುವ ವೀರಾವೆಶ ಇಂಗ್ಲಿಷಿನ ಬಗ್ಗೆ ಇಲ್ಲವಲ್ಲ, ಇದಕ್ಕೇನೆನ್ನೋಣ?!

ಅಷ್ಟಕ್ಕೂ, ಅಸ್ಸಾಮಿನ ಸಮಸ್ಯೆಯಿರುವುದು ಬಾಂಗ್ಲಾದಿಂದ ಅಕ್ರಮ ವಲಸಿಗರು ಬಂದು ಅಲ್ಲಿ ಮೇಲುಗೈ ಸಾಧಿಸುತ್ತಿರುವುದರ ಬಗ್ಗೆ, ನಮ್ಮ ದೇಶದ ಸುರಕ್ಷತೆಗೆ ಸವಾಲೊಡ್ಡುತ್ತಿರುವ ಬಗ್ಗೆ. ಅದು ನಿಜವಾಗಿಯೂ ಗಂಭೀರ ಸಮಸ್ಯೆ. ಅದನ್ನೂ ಇದನ್ನೂ ಹೋಲಿಸುವುದು ಸರಿಯಲ್ಲ. ಮೊದಲು ದೇಶ ಅನಂತರ ರಾಜ್ಯ, ಭಾಷೆ. ಈ ಪ್ರಜ್ಞೆ ನಮ್ಮಲ್ಲಿಲ್ಲದಿದ್ದರೆ ಕನ್ನಡಿಗರೂ, ಬಿಹಾರಿಗಳೂ, ಮರಾಠಿಗಳೆಂಬ ಭೇದವಿಲ್ಲದೇ ಎಲ್ಲರೂ ನಾಶವಾಗುವುದು ಖಂಡಿತ.

ಆನಂದ್ ಅಂತಾರೆ...

ಶ್ರೀಯುತ UNKNOWN,
ತಮಿಳುನಾಡಿನಲ್ಲಿ ಅಂತಹ ಕೆಚ್ಚು ನಮಗೆ ಕಾಣುತ್ತಿದ್ದರೆ ಅದಕ್ಕೆ ಆ ನಾಡಿನಲ್ಲಿ ನಡೆದ ಭಾಷಾ ಚಳವಳಿ/ ಐಡೆಂಟಿಟಿ ಚಳವಳಿಯೂ ಪ್ರಮುಖ ಕಾರಣ. ನಾವು ಸಹಜವಾಗಿ ಒಂದು ಸಮಾಜ ಆಡುವ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜನರನ್ನು ತಮ್ಮ ಪಾಡಿಗೆ ಬಿಟ್ಟರೆ ಪರಿಸರದ ನುಡಿಯಲ್ಲಿ ಹೊರಗಿಂದ ಬಂದವನು ಬೆರೆಯುವುದೂ ಸಹಜ. ಆದರೆ ಭಾರತದಲ್ಲಿ ಹಾಗೆ ಆಗುತ್ತಿಲ್ಲಾ.... ನಮ್ಮ ಶಾಲೆ, ಮನರಂಜನೆ ಮೊದಲಾದವುಗಳ ಮೂಲಕ ದೇಶದ ಒಗ್ಗಟ್ಟು, ರಾಷ್ಟ್ರೀಯತೆ ಎನ್ನುವ ಪೊಳ್ಳು ಮಾತುಗಳ ಮೂಲಕ ವಲ್ಸೆ ಬರುವ ಹಿಂದೀ ಭಾಷಿಕನಿಗೆ ಈ ನೆಲವನ್ನು ಹದ ಮಾಡಿ ಕೊಡಲಾಗುತ್ತಿದೆ. ಇದು ಪಕ್ಕಾ ಆರ್ಟಿಫಿಶಿಯಲ್... ಇದರ ಹಿಂದೆ ಇರುವ ಮನಸ್ಥಿತಿಯೇನೂ ಭಾರೀ ದೇಶಪ್ರೇಮವಲ್ಲ, ನಮ್ಮ ಒಳಗಿರುವ ದೇಶಪ್ರೇಮವನ್ನು ಬಂಡವಾಳ ಮಾಡಿಕೊಂಡು "ಭಾರತದ ಒಗ್ಗಟ್ಟಿಗೆ ಅಪಾಯ ಬಂದಿದೆ" ಎನ್ನುವ ಗುಮ್ಮ ತೋರಿಸುತ್ತಾ ತಮ್ಮ ಜನರನ್ನು ಇಲ್ಲಿಗೆ ನುಗ್ಗಿಸುವ ಸ್ವಾರ್ಥ!
ಕನ್ನಡಿಗರಿಗೆ ಕನ್ನಡವೊಂದೇ ನಮ್ಮ ಭಾಷೆ. ಉಳಿದದ್ದೆಲ್ಲಾ ಪರಕೀಯವೇ! ಇವತ್ತಿನ ಪರಿಸ್ಥಿತಿಯಲ್ಲಿ ಇಂಗ್ಲೀಶ್ ಕಲಿತರೆ, ಮಾತಾಡಿದರೆ ಇಂಗ್ಲೀಶಿನವನು ಬಂದು ನಮ್ಮನ್ನು ಆಳುವುದಿಲ್ಲ!! ಅದೇ ಹಿಂದೀಯನ್ನು ಒಪ್ಪಿಕೊಂಡರೆ ಮುಗಿದೇಹೋಯಿತು!! ಕನ್ನಡ ಕುಲ ಅಳಿದು ಹೋಗುತ್ತದೆ.
ಇನ್ನು ದೇಶ ಮೊದಲು, ಉಳಿದದ್ದು ಆಮೇಲೆ ಅನ್ನೋ ಮಾತು ಕೇಳಕ್ಕೆ ಚೆನ್ನಾಗಿದೆ. ಕನ್ನಡ/ ಕನ್ನಡತನ/ ಕನ್ನಡದ ಜನರ ಹಿತವನ್ನು ಬಲಿಕೊಟ್ಟು ರೂಪುಗೊಳ್ಳೋ ಯಾವ ದೇಶವೂ ನನಗೆ ಬೇಕಾಗಿಲ್ಲ!! ಭಾರತದಲ್ಲಿ ಸಮಾನತೆ ಮೂಡಲಿ ಎಂದೊಡನೇ ದೇಶದ ಒಗ್ಗಟ್ಟಿಗೆ ಬಿಕ್ಕಟ್ಟು ಬರುವುದು ಎಂದುಕೊಳ್ಳುವುದು ಸರಿಯೇ?

ಆನಂದ್ ಅಂತಾರೆ...

ಅಸ್ಸಾಮಿನ ಸಮಸ್ಯೆ ಶತ್ರುದೇಶದ ಜನರ ಒಳನುಗ್ಗುವಿಕೆಯ ಸಮಸ್ಯೆಯಾಗಿ ಕಾಣ್ತಾಯಿರೋದು ಯಾರ ಕಣ್ಣಿಗೆ? ಅಸ್ಸಾಮಿ ಜನರಿಗೆ ಅವರ ಕೆಲಸ, ನುಡಿ, ಸಂಸ್ಕೃತಿಗಳಿಗೆ ಧಕ್ಕೆ ತರೋರು ಪಶ್ಚಿಮಬಂಗಾಳದ ಬಂಗಾಳಿಗಳಾದರೂ, ಬಾಂಗ್ಲಾದೇಶದ ಬಂಗಾಳಿಗಳಾದರೂ ಒಂದೇ ಅಲ್ಲವೇ? ಮೊದಲಿಗೆ ಅಸ್ಸಾಮಿಗೆ ಬಾಂಗ್ಲಾದೇಶದಿಂದ ವಲಸೆ ಶುರುವಾಗಿದ್ದು ಆ ದೇಶ ಹುಟ್ಟಿದಾಗಲಿಂದಲೇ! ಅಸ್ಸಾಮಿಗೆ ವಲಸೆ ಬಂದವರನ್ನು ತಡೆಯುವ ಕೆಲಸ ಅಲ್ಲಿ ಆಗಬೇಕು. ಅದನ್ನು ಆ ರಾಜ್ಯದವರು ನಿಭಾಯಿಸುತ್ತಾರೆ. ಆಗದಿದ್ದರೆ ಕೇಂದ್ರದ ಸಹಾಯ ಪಡೆಯುತ್ತಾರೆ. ಅಸ್ಸಾಮಿನಲ್ಲಿ ಬಾಂಗ್ಲಾದೇಶದವರು ನುಗ್ಗುತ್ತಿದ್ದಾರೆ ಎಂದು ಕರ್ನಾಟಕಕ್ಕೆ ಅಂತರರಾಜ್ಯ ಅನಿಯಂತ್ರಣ ವಲಸೆಯನ್ನು ಬಿಟ್ಟುಕೊಳ್ಲಬೇಕು ಎನ್ನುವುದು ಹೇಗೆ ಸಮರ್ಥನೀಯ?

A Mimbari ಅಂತಾರೆ...

Again.. Low population is good for us.

We must have qualitative population increase not quantitative. Qualitative population means more and more educated and healthy Kannadigas who can participate in advanced and cutting edge commerce and science.

Please have a look at Kerala or Finland. How it developed its human resource and became one of the most homogeneous state in India.

Maharashtra's wealth is because of the Gujarati, Punjabi, Sindhi and Farsi industrialists.

http://www.rediff.com/business/slide-show/slide-show-1-the-best-of-inc-maharashtras-leading-entrepreneurs/20110927.htm

The Bollywood was/is in the hand of Sindhis for the long time. Bombay got the benefits of Hindu and Farsi immigrants merchants from today's Pakistan during partition.

And in the prosperity of Karnataka there is huge and major contributions of Konkanis, Tamils, Telugus etc.. who immigrated to our land in the past. Bhadravthi steel and Kolar gold mines were practically run by Tamil laborers.

The article has not analysed the reason behind the wealth and prosperity of Maharashtra and Karnataka.

You say that Karnataka has low population and higher prosperity. Then why is not our government developing a good 'welfare' system which can lead help millions of poor Kannadigas to get good education and health? Then where is our prosperity going to? Who is seizing it?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails