![]() |
| (ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್ ಇ ಪೇಪರ್) |
ಅನಿಯಂತ್ರಿತ ವಲಸೆ ಮತ್ತು ಕಾನೂನು ಅವ್ಯವಸ್ಥೆ!
ಇಡೀ ಭಾರತ ನಮ್ಮದು ಅನ್ನೋರು ಯಾರು ಗೊತ್ತಾ?
ಭಾರತೀಯರು ಎಲ್ಲಿ ಬೇಕಾದರೂ ಹೋಗಬಹುದು ಅನ್ನೋರು!
- ಉತ್ತರಪ್ರದೇಶ ಮತ್ತು ಬಿಹಾರಗಳು ಜನಸಂಖ್ಯಾ ಸ್ಫೋಟದಿಂದ ನರಳುತ್ತಿವೆ ಮತ್ತು ಆರ್ಥಿಕವಾಗಿ ಹಿಂದುಳಿದಿವೆ ಮತ್ತು ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನಸಂಖ್ಯೆ ಅಂದರೆ ಅಲ್ಲಿನ ಜನದಟ್ಟಣೆ ನಮ್ಮ ನಾಡಿನ ಮೂರುಪಟ್ಟು ಹೆಚ್ಚಾಗಿದೆ. ಇಷ್ಟಿದ್ದರೂ ಅಲ್ಲಿ ಪ್ರತಿ ದಂಪತಿಗೆ ಮೂರು ಮಕ್ಕಳು ಹುಟ್ಟಬಹುದು! ಅದೇ ಕರ್ನಾಟಕ, ಮಹಾರಾಷ್ಟ್ರಗಳು ಶ್ರೀಮಂತವಾಗಿವೆ, ಇಲ್ಲಿ ಜನದಟ್ಟಣೆ ಕಡಿಮೆಯಿದೆ... ಆದರೂ ಇಲ್ಲಿ ಪ್ರತಿ ದಂಪತಿಗೆ ೧.೮ ಮಕ್ಕಳನ್ನು ಹೆರಬೇಕೆನ್ನುವ ಯೋಜನೆ ನೀಡಲಾಗಿದೆ. ಅಂದರೆ ಇದರ ಅರ್ಥ, ಬರ್ತಾ ಬರ್ತಾ ಕನ್ನಡ ಕುಲ ಅಳಿಯಲಿ... ಉತ್ತರದ ವಲಸಿಗರಿಂದ ಕರ್ನಾಟಕ ಮಹಾರಾಷ್ಟ್ರದಂತಹ ನಾಡುಗಳು ನಳನಳಿಸಲಿ ಎಂದಲ್ಲವೇ? ಬಿಹಾರದ ರಾಜಕಾರಣಿಗಳು ಬಾಯಲ್ಲಿ ರಾಷ್ಟ್ರೀಯ ಏಕತೆಯ ಮಾತಾಡುತ್ತಿದ್ದರೂ ನಿಜವಾಗಿ ಮಾಡುತ್ತಿರುವ ಹುನ್ನಾರ ಚೆನ್ನಾಗಿ ಬೆಳೆದಿರುವ ನಾಡುಗಳಿಗೆ ತಮ್ಮ ಜನರನ್ನು ನುಗ್ಗಿಸುವಿಕೆಗೆ ಬೆಂಬಲ!
ಈಗ ಹೇಳಿ, ನಮ್ಮೂರಿಗೆ ವಲಸೆ ಬರೋರ ಮೇಲೆ ನಮಗೆ ನಿಯಂತ್ರಣ ಬೇಡವೇ? ಇಂಥಾ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕೋ ಒಂದು "ವಲಸೆ ನೀತಿ" ಭಾರತಕ್ಕೆ ಬೇಡ್ವಾ ಗುರೂ!?
ಜನಸಂಖ್ಯಾ ನಿಯಂತ್ರಣ ಮತ್ತು ವಲಸೆ...
ಭಾರತ ದೇಶದ ಸ್ವರೂಪ ಮತ್ತು ಜನದಟ್ಟಣೆ
ಭಾರತವೂ ಕೂಡಾ ಏರುಮುಖವಾಗಿರುವ ಜನಸಂಖ್ಯೆ ಹೊಂದಿದ್ದು (ಈಗಿನ ಫಲವತ್ತತೆ ಸೂಚ್ಯಂಕ ೨.೯) ತನ್ನ ಜನಸಂಖ್ಯೆಯನ್ನು ಸ್ಫೋಟವಾಗಲು ಬಿಡದಂತೆಯೂ, ಈಗ ಇರುವಷ್ಟೇ ಕಾಪಾಡಿಕೊಳ್ಳಲೂ ಯೋಜಿಸಿದೆ. ಆ ಕಾರಣಕ್ಕಾಗಿಯೇ ೨೦೨೦ರ ಹೊತ್ತಿಗೆ ಫಲವತ್ತತೆ ಸೂಚ್ಯಂಕವನ್ನು ೨.೧ಕ್ಕೆ ಇಳಿಸಲು ಯೋಜಿಸಿದೆ. ಆದರೆ ಯೋಜನೆ ಜಾರಿ ಮಾಡುವ ಭರದಲ್ಲಿ ಕೆಲಜನಾಂಗಗಳ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ. ಹೌದೂ.. ಭಾರತದ ಪ್ರಸ್ತುತ ಜನಸಂಖ್ಯಾ ನಿಯಂತ್ರಣ ಯೋಜನೆಯ ರೂಪುರೇಶೆಯನ್ನು ಅರಿತುಕೊಂಡರೆ ಈ ದಿಟವು ಗೋಚರವಾಗುತ್ತದೆ. ಇದು ಹುನ್ನಾರವೇ? ಅವಿವೇಕವೇ? ಉದ್ದೇಶಪೂರ್ವಕವೇ? ದಡ್ಡತನವೇ? ಎಂಬುದನ್ನು ವಿಶ್ಲೇಷಿಸುವುದು ನಿಮಗೆ ಬಿಟ್ಟದ್ದು. ಜನಸಂಖ್ಯಾ ದಟ್ಟಣೆಯ ವಸ್ತುಸ್ಥಿತಿ ನಿಯಂತ್ರಣೆಯ ಬಗ್ಗೆ ಮಾತಾಡುವ ಮೊದಲು ಕರ್ನಾಟಕದ ಜನಸಂಖ್ಯಾ ದಟ್ಟಣೆಯ ಬಗ್ಗೆ ಒಂದಷ್ಟು ಅಂಕಿ ಅಂಶಗಳತ್ತ ಕಣ್ಣು ಹಾಯಿಸೋಣ.
ಈ ಪಟ್ಟಿಯನ್ನೊಮ್ಮೆ ನೋಡಿ.
ಇದು ರಾಜ್ಯವಾರು ಜನದಟ್ಟಣೆಯ ಪಟ್ಟಿ. ಕರ್ನಾಟಕದ ದಟ್ಟಣೆ ಸೂಚ್ಯಂಕ ೩೧೯. ಅಂದರೆ ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರ ಸರಾಸರಿ ಸಂಖ್ಯೆ ೩೧೯. ಭಾರತದ ಸರಾಸರಿ ಜನದಟ್ಟಣೆ ೩೬೮. ನಮಗಿಂತಾ ಜನದಟ್ಟಣೆಯಲ್ಲಿ ೧೮ ರಾಜ್ಯಗಳು ಮುಂದಿವೆ. ನಮ್ಮದು ೧೯ನೇ ಸ್ಥಾನ. ಅಂದರೆ ಕರ್ನಾಟಕದ ಇಂದಿನ ಜನದಟ್ಟಣೆಯು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆಯಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡುವಿನಂತಹ ರಾಜ್ಯಗಳಲ್ಲಿ ಜನದಟ್ಟಣೆ ಕರ್ನಾಟಕದ ಎರಡು ಪಟ್ಟು ಮೂರು ಪಟ್ಟುಹೆಚ್ಚಿವೆ. ಇದರ ಪರಿಣಾಮ ನೇರವಾಗಿ ಕರ್ನಾಟಕಕ್ಕೆ ಪರಭಾಷಿಕರ ವಲಸೆಯೇ ಆಗಿದೆ. ಆ ಮೂಲಕ ನಮ್ಮ ನಾಡಿನ ಸಂಪನ್ಮೂಲಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅನಿವಾರ್ಯತೆ ನಮ್ಮದಾಗಿದೆ. ಇನ್ನು ಜಗತ್ತಿನ ಕೆಲವು ದೇಶಗಳ ಜೊತೆ ತುಲನೆ ಮಾಡೋಣ.
ಈ ಒಂದು ನಕ್ಷೆ ನೋಡಿರಿ.
ನಮ್ಮನ್ನು ಇಲ್ಲವಾಗಿಸುವ ಹುನ್ನಾರ?
ಹೋಗಲೀ, ಕೇಂದ್ರಸರ್ಕಾರ ಕನ್ನಡಿಗರ ಈಗಿನ ಜನಸಂಖ್ಯೆಯನ್ನು ಉಳಿಸಿಕೊಂಡು ಹೋಗಬೇಕೆಂಬ ಉದ್ದೇಶವನ್ನಾದರೂ ಹೊಂದಿದೆಯೇ? ಇಲ್ಲ...ಇದು ಕನ್ನಡಿಗರ ಜನಸಂಖ್ಯೆಯನ್ನು ಇಳಿಮುಖವಾಗಿಸಬೇಕೆಂಬ ಗುರಿ ನಮಗಿತ್ತಿದೆ. ಹೌದೂ! ಇಂತಹ ಕ್ರಮಕ್ಕೆ ಭಾರತ ಸರ್ಕಾರದ ಜನಸಂಖ್ಯಾ ನಿಯಂತ್ರಣ ಯೋಜನೆ ಮುಂದಾಗಿದೆ ಎಂದರೆ ನಂಬಲೇಬೇಕಾಗಿದೆ. ಯಾಕೆಂದರೆ ಕರ್ನಾಟಕದ ಮುಂದೆ ಕೇಂದ್ರಸರ್ಕಾರವು ಇಟ್ಟಿರುವ ಸೂಚ್ಯಂಕದ ಗುರಿ ೧.೯. ಕರ್ನಾಟಕ ಸರ್ಕಾರವೂ ತನಗೆ ತಾನೇ ವಿಧಿಸಿಕೊಂಡಿರುವ ಗುರಿ ೧.೬ ಆಗಿದ್ದು ವಿಚಿತ್ರವಾಗಿದೆ. ಈ ೧.೬ರ ಗುರಿಯನ್ನೇನಾದರೂ ಕನ್ನಡಿಗರು ಸಾಧಿಸಿಬಿಟ್ಟರೆ ಕನ್ನಡಿಗರು ನೂರಿನ್ನೂರು ವರ್ಷಗಳಲ್ಲಿ ಭೂಪಟದಿಂದ ಮರೆಯಾಗಬೇಕಾಗುತ್ತದೆ. ಈಗಾಗಲೇ ೨.೩ರಷ್ಟು ಸೂಚ್ಯಂಕ ಸಾಧಿಸಿರುವ, ೩೧೯ರ ಜನದಟ್ಟಣೆಯನ್ನು ಹೊಂದಿರುವ ಕರ್ನಾಟಕಕ್ಕೆ ೨.೧ಕ್ಕಿಂತ ಕೆಳಗಿನ ಗುರಿಯನ್ನು ಕೊಟ್ಟಿರುವುದರ ಉದ್ದೇಶವೇನಿರಬಹುದು? ಜನರಿಂದ ತುಂಬಿ ತುಳುಕುತ್ತಿರುವ ಉತ್ತರದ ಹಿಂದೀಭಾಷಿಕ ಪ್ರದೇಶಗಳಾದ ಬಿಹಾರ, ಉತ್ತರಪ್ರದೇಶ ಮೊದಲಾದ ಈಗಾಗಲೇ ಹೆಚ್ಚಿನ ಬಹಳ ಜನದಟ್ಟಣೆಯಿರುವ, ಹೆಚ್ಚಿನ ಫಲವತ್ತತೆ ಸೂಚ್ಯಂಕವಿರುವ ರಾಜ್ಯಗಳಿಗೆ ನೀಡಿರುವ ಗುರಿ ೩.೦ ಆಗಿದೆ. ಅಂದರೆ ‘ಕಾಲಾಂತರದಲ್ಲಿ ದಕ್ಷಿಣ ಭಾರತೀಯರೆಲ್ಲಾ ಜನಸಂಖ್ಯೆಯ ಕುಸಿತದ ಕಾರಣದಿಂದಾಗಿ ವಿನಾಶ ಹೊಂದಿರಿ, ಉತ್ತರದ ಹಿಂದೀ ಭಾಷಿಕರು ಮಕ್ಕಳು ಮರಿ ಹುಟ್ಟಿಸಿಕೊಂಡು ಮುಂದುವರಿಯಲಿ. ನಿಮ್ಮ ನಾಡಿನ ಸಂಪನ್ಮೂಲಗಳನ್ನೆಲ್ಲಾ ಅವರು ಬದುಕಲು ಬಿಟ್ಟುಕೊಡಿ’ ಅಂದಂತಾಯಿತಲ್ಲಾ?
ಸರಿಯಾದ ‘ಜನಸಂಖ್ಯಾ ಸ್ಫೋಟ ನಿಯಂತ್ರಣ’ಕ್ರಮ ಹೀಗಿರಲಿ!
ಭಾರತವು ನಾನಾಭಾಷಿಕ ಜನಾಂಗಗಳ ತವರಾಗಿದೆಯಷ್ಟೇ ಅಲ್ಲದೆ ನಾನಾ ತೆರನಾದ ಭೌಗೋಳಿಕ ವೈವಿಧ್ಯತೆಯನ್ನೂ ಹೊಂದಿದೆ. ಇಲ್ಲಿ ಸಹಜವಾಗಿಯೇ ಒಂದು ಪ್ರದೇಶಕ್ಕೂ ಮತ್ತೊಂದಕ್ಕೂ ಒಂದು ಜನಾಂಗಕ್ಕೂ ಮತ್ತೊಂದಕ್ಕೂ ಜನಸಂಖ್ಯಾ ದಟ್ಟಣೆಯ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಹಾಗಾಗಿ ಜನಸಂಖ್ಯಾ ನಿಯಂತ್ರಣವೆನ್ನುವ ಅಸ್ತ್ರವನ್ನು ವಿವೇಚನೆಯೊಂದಿಗೆ ಸರಿಯಾಗಿ ಪ್ರಯೋಗಿಸಬೇಕಾಗಿದೆ. ಸರಿಯಾದ ವಿಧಾನದಲ್ಲಿ ಪ್ರತಿಯೊಂದು ರಾಜ್ಯಕ್ಕೂ ೨.೧ರ ಸೂಚ್ಯಂಕವನ್ನು ಸಾಧಿಸುವ ಗುರಿಯನ್ನು ನಿಗದಿ ಪಡಿಸಬೇಕಾಗಿದೆ. ಯಾವ ರಾಜ್ಯ ೨.೧ರ ಗುರಿ ಮುಟ್ಟುತ್ತದೋ ಆ ರಾಜ್ಯಕ್ಕೆ ಹೆಚ್ಚು ಯೋಜನೆಗಳ, ಸಂಪನ್ಮೂಲ ಹರಿಸುವಿಕೆಯ, ತೆರಿಗೆ ವಿನಾಯತಿಯ ಪ್ರೋತ್ಸಾಹಕ ಉಡುಗೊರೆ ಕೊಡುವ ಮೂಲಕ ಗುರಿ ಸಾಧನೆಯತ್ತ ದಾಪುಗಾಲಿಡಬಹುದಾಗಿದೆ. ಒಮ್ಮೆ ಒಂದು ರಾಜ್ಯ ಗುರಿ ಸಾಧಿಸಿದೆಯೆಂದ ಮೇಲೆ ಆ ರಾಜ್ಯದಲ್ಲಿನ್ನು ಜನಸಂಖ್ಯಾ ನಿಯಂತ್ರಣ ಪ್ರಚಾರಾಂದಲನಗಳಿಗೆ ಕೊನೆ ಹಾಡಬಹುದಾಗಿದೆ. ಆದರೆ ಇಂದು ಭಾರತ ಸರ್ಕಾರ ಅನುಸರಿಸುತ್ತಿರುವ ನೀತಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಸುರಿಯುವಂತಿದ್ದು ಕೆಲ ಜನಾಂಗಗಳನ್ನು ವಿನಾಶದೆಡೆಗೆ ತಳ್ಳುತ್ತಿದೆ. ಕಾಲಾಂತರದಲ್ಲಿ ಇವು ಹೇಳಹೆಸರಿಲ್ಲದಂತೆ ನಿರ್ನಾಮವಾಗಿಬಿಡುತ್ತವೆ. ಕಾಕತಾಳಿಯವೋ ಏನೋ, ಈ ಜನಾಂಗಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ್ದಾಗಿವೆ, ಹಿಂದಿಯೇತರ ಭಾಷಾ ಜನಾಂಗಗಳಾಗಿದೆ. ಭಾರತ ಬಹಳ ದೊಡ್ಡದು, ಹಾಗಾಗಿ ಕೇಂದ್ರಸರ್ಕಾರಕ್ಕೆ ನಾವು ಕಾಣಿಸದೇ ಇರಬಹುದು. ಆದರೆ ನಮ್ಮ ಹಿತ ಕಾಯಲೆಂದೇ ಅಸ್ತಿತ್ವದಲ್ಲಿರುವ ರಾಜ್ಯಸರ್ಕಾರಕ್ಕೆ, ರಾಜ್ಯದ ಆಡಳಿತ ಯಂತ್ರಕ್ಕೇನೂ ದೊಡ್ಡರೋಗ ಬಂದಿಲ್ಲವಲ್ಲಾ? ಇವರು ಒಟ್ಟು ಫಲವತ್ತೆತೆ ಸೂಚ್ಯಂಕವನ್ನು ಯಾವ ಕಾರಣಕ್ಕೂ ೨.೧ಕ್ಕಿಂತ ಕೆಳಗಿಳಿಸಲು ಯೋಜಿಸುವುದಾಗಲೀ, ಒಪ್ಪುವುದಾಗಲೀ ಮಾಡಬಾರದಲ್ಲಾ? ಅಂತರ ರಾಜ್ಯ ಅನಿಯಂತ್ರಿತ ವಲಸೆ ತಡೆಗಾಗಿ ಕಾಯ್ದೆ ರೂಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬಹುದಲ್ಲ. ನಮ್ಮಂತೇ ಸವೆಯುತ್ತಿರುವ ರಾಜ್ಯಗಳನ್ನು ಒಗ್ಗೂಡಿಸಿ ಸರಿಯಾದ ನೀತಿಯನ್ನು ರೂಪಿಸುವಂತೆ ಹಟ ಹಿಡಿಯಬಹುದಲ್ಲಾ? ಕಡೇಪಕ್ಷ ಗುಜರಾತಿನಂತೆ ಕರ್ನಾಟಕಕ್ಕೆ ೨.೨ನ್ನಾದರೂ ಸೂಚ್ಯಂಕ ಗುರಿಯಾಗಿಸಲು ಲಾಬಿ ಮಾಡಬಹುದಲ್ಲಾ?
ಕನ್ನಡದವರ ಬಗ್ಗೇನೂ ಇದೇ ಕಾಳಜಿ ಇದೆಯಾ?
ಅಸ್ಸಾಮಿಯರಿಗೆ ಕೆಲಸದ ಭದ್ರತೆ! ಕನ್ನಡಿಗರಿಗೆ ಬೇಡವೇ?
ಹೀಗೆ ರಾಜ್ಯವೊಂದರ ಉಪಮುಖ್ಯಮಂತ್ರಿಯೊಬ್ಬರು, ರಾಜ್ಯರಾಜ್ಯಗಳಿಗೆ ಅಲೆದು "ನಮ್ಮೂರಿಂದ ವಾಪಸ್ಸು ಹೋಗಿರೋರು ದಯವಿಟ್ಟು ಬನ್ನಿ" ಎಂದಿರೋದು ಬಹುಶಃ ಭಾರತದಲ್ಲೇ ಇದೇ ಮೊದಲಸಲಾ ಅನ್ನಿಸುತ್ತೆ! ಒಳ್ಳೇದು. ಕನ್ನಡಿಗರ ಸಹೃದಯತೆಗೆ ಇದು ಒಂದು ಉದಾಹರಣೆ. ಆದರೆ ಈ ಸಹೃದಯತೆ ಇಂದು ಆಡಳಿತ ಮಾಡುತ್ತಿರುವ ಬಿಜೆಪಿಗಾಗಲೀ, ಹಿಂದೆ ಆಳಿದ ಜೆಡಿಎಸ್, ಕಾಂಗ್ರೆಸ್ಸುಗಳಿಗಾಗಲೀ ಇದ್ದಂತಿರುವುದು ಬರೀ ಹೊರನಾಡಿಗರ ಬಗ್ಗೆ ಮಾತ್ರಾ ಆಗಿಬಿಟ್ಟರೆ ಅದಕ್ಕೇನೆನ್ನಬೇಕು? ವಲಸಿಗರ ಉದ್ಯೋಗ, ಬದುಕಿನ ಬಗ್ಗೆ ಕಾಳಜಿ ತೋರುವ ಸರ್ಕಾರಗಳು ಇದೇ ನೆಲದ ಕನ್ನಡಿಗರಿಗೆ ಕೆಲಸ ದೊರಕಿಸಿ ಕೊಡುವ "ಸರೋಜಿನಿ ಮಹಿಷಿ ವರದಿ"ಯ ಬಗ್ಗೆ ಯಾಕೆ ಕ್ರಮ ತೆಗೆದುಕೊಳ್ಳದು? ನೆರೆಯ ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ ಮೊದಲಾದ ರಾಜ್ಯಗಳು "ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ"ಯನ್ನು ೮೫%ಕ್ಕೆ ಕಡಿಮೆಯಿರದಷ್ಟು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತಂದಿರುವುದನ್ನು ನೋಡಿಯೂ ರಾಜ್ಯದಲ್ಲಿ ಕನ್ನಡಿಗರಿಗೆ ಕೆಲಸದ ಅವಕಾಶ ಒದಗಿಸುವ "ಸರೋಜಿನಿ ಮಹಿಷಿ" ವರದಿಯನ್ನು ಯಾಕೆ ಜಾರಿಗೊಳಿಸಲು ಇವರಲ್ಲಿ ಒಬ್ರೂ ಕಾಳಜಿ ತೋರುತ್ತಿಲ್ಲ? ಹೊರನಾಡುಗಳಲ್ಲಿರುವ ಕನ್ನಡಿಗರಿಗೆ, ಅವರ ಸಂಕಷ್ಟದ ಸಮಯದಲ್ಲಿ ಯಾವ ತೆರನಾದ ನೆರವನ್ನು ಇವರು ನೀಡಲು ಮುಂದಾಗಿದ್ದಾರೆ? ಗಡಿನಾಡಿನಲ್ಲಿ ಕನ್ನಡಶಾಲೆಗಳಲ್ಲಿ ಪಠ್ಯವಿಲ್ಲ, ಶಾಲೆ ಮುಚ್ಚಲಾಗುತ್ತಿದೆ ಅನ್ನೋ ಸಂದರ್ಭಗಳೆಲ್ಲಾ ಬಂದಾಗ ಏನು ಮಾಡಿದ್ದವು? ಹೋಗಲಿ... ಇದೇ ನಾಡಿನಲ್ಲಿ ಬರದಿಂದ, ನೆರೆಯಿಂದ ಕಂಗೆಟ್ಟು ವಲಸೆ ಹೋದವರಿಗೆ ಈ ತೆರನಾದ ಭರವಸೆಯನ್ನು ಎಂದಾದರೋ ಸರ್ಕಾರ ಕೊಟ್ಟಿತ್ತೇ? ಒಟ್ಟಾರೆ ಮನೆಗೆ ಮಾರಿಯಾಗದೇ ಪರರಿಗೆ ಉಪಕಾರಿಯಾಗಿರಬೇಕು ಅನ್ನೋದು ನಮ್ಮ ರಾಜ್ಯದ ರಾಜಕೀಯ ಪಕ್ಷಗಳಿಗೆ ಅರ್ಥವಾಗಲ್ವಾ ಗುರೂ!!
ಅಸ್ಸಾಂ: ಸಮಸ್ಯೆಯ ಮೂಲ ಸರಿಯಾಗಿ ಗುರುತಿಸಬೇಡವೇ?
![]() |
| (ಫೋಟೋ ಕೃಪೆ: NDTV ವೀಡಿಯೋ) |
ಸಮಸ್ಯೆ ರಾಷ್ಟ್ರೀಯತೆಯ ಮುಸುಕಲ್ಲಿ ಮರೆಯಾದೀತೇ?
ಕಾಂಗ್ರೆಸ್ಸೆಂಬ ರಾಷ್ಟ್ರೀಯ ಪಕ್ಷಕ್ಕೇನೋ ಗೋವನ್ನರೂ ಕನ್ನಡಿಗರೂ ಒಂದೇ ಇರಬಹುದು. ಇಲ್ಲಿಂದ ೨೦ ಲಕ್ಷ ಜನರು ಗೋವಾಕ್ಕೆ ಗುಳೆ ಹೋದರೆ ಏನೂ ಅನ್ನಿಸದೆಯೂ ಇರಬಹುದು. ಆದರೆ ಗೋವನ್ನರಿಗೆ? ವಲಸಿಗರಿಂದ ಗೋವಾದ ಅನನ್ಯತೆಗೆ ಒದಗುವ ಧಕ್ಕೆ ಎಂಥದ್ದು ಎನ್ನುವುದನ್ನು ಯಾರಾದರೂ ಊಹಿಸಬಹುದು. ಇಂತಹ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕಲ್ಲವೇ? ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರಿಗೆ, ಗೋವಾಕ್ಕೆ ನುಗ್ಗಿ ಅಲ್ಲಿನ ಭಾಷೆ, ಸಂಸ್ಕೃತಿ, ಅಲ್ಲಿನವರ ಬದುಕಿಗೆ ಧಕ್ಕೆ ಉಂಟು ಮಾಡುವವರು ಭಾರತೀಯರಾಗಿಬಿಟ್ಟರೆ ಪರ್ವಾಗಿಲ್ಲಾ...ಹಾಗೆ ಮಾಡುವವರು ಬೇರೆ ದೇಶದವರಾಗಿ ಮಾತ್ರಾ ಇರಬಾರದು ಎನ್ನಿಸಬಹುದೇನೋ? ಈ ಸಮಸ್ಯೆಗೆ ಶ್ರೀಮತಿ ಸೋನಿಯಾಗಾಂಧಿಯವರ ಆಶಯದಂತೆ ಪರಿಹಾರವೇನು? ಗೋವನ್ನರು ತಮ್ಮ ನಾಡಿಗೆ ಆಗಿರುವ ಕನ್ನಡಿಗರ ಅನಿಯಂತ್ರಿತ ವಲಸೆ ಬಗ್ಗೆ ದನಿ ಎತ್ತಬಾರದು ಮತ್ತು ಸೌಹಾರ್ದತೆಯಿಂದ ಅವರೊಡನೆ ಬಾಳಬೇಕು ಎನ್ನುವುದೇ? ನಿಜವಾಗಿ ನೋಡಿದರೆ ಈಗ ಯಾವುದರಿಂದಾಗಿ ಈ ಸಮಸ್ಯೆ ಹುಟ್ಟಿಕೊಂಡಿವೆಯೋ ಆ ಮೂಲಕಾರಣವನ್ನೇ ಪರಿಹಾರ ಎಂದು, ಹುಸಿ ರಾಷ್ಟ್ರೀಯತೆಯ ಸಿಹಿಯನ್ನು ಮೇಲೆ ಹಚ್ಚಿ ಶಿಫಾರಸ್ಸು ಮಾಡುತ್ತಿರುವಂತಿದೆ!
ಅಸ್ಸಾಮ್ ಆಗಿರಲೀ, ಗೋವಾ ಆಗಿರಲೀ, ಕರ್ನಾಟಕವೇ ಆಗಿರಲೀ... ನಿಜವಾದ ಸಮಸ್ಯೆಯ ಮೂಲ ಯಾವುದು ಎನ್ನುವುದನ್ನು ಗುರುತಿಸದೇ ಹೋದಲ್ಲಿ ಸರಿಯಾದ ಪರಿಹಾರ ಸಿಗುವುದಾದರೂ ಸಾಧ್ಯವೇ? ರಾಷ್ಟ್ರೀಯ ಭಾವೈಕ್ಯವೆನ್ನುವ ಮಾತಿನ ಹೊದಿಕೆಯಿಂದ ನಿಜವಾದ ಸಮಸ್ಯೆಗೆ ಪರಿಹಾರ ಸಾಧ್ಯವೇ? ಯಾವುದೇ ಒಂದು ಪ್ರದೇಶದ ಅನನ್ಯತೆ, ಭಾಷೆ, ಸಂಸ್ಕೃತಿಗಳಿಗೆ ಧಕ್ಕೆ ತರುವ ಅನಿಯಂತ್ರಿತ ವಲಸೆ ಒಂದು ಸಮಸ್ಯೆಯೇ ಅಲ್ಲವೇ? ನಾಡಿನ ಜನರ ಉದ್ಯೋಗ ಕಸಿದುಕೊಳ್ಳುವ ಅನಿಯಂತ್ರಿತ ವಲಸೆಯೆನ್ನುವ ತಡೆಯಿರದ ಅವಕಾಶವು, ಭಾರತದ ಇಂದಿನ ವ್ಯವಸ್ಥೆಯಲ್ಲಿರುವುದೇ ಇವತ್ತಿನ ಸಮಸ್ಯೆಗೆ ಮೂಲವೆನ್ನಿಸದೇ? ನಿಜಕ್ಕೂ ಅಂತರರಾಜ್ಯ ವಲಸೆಗೆ ಕಡಿವಾಣ ಬೇಕಾಗಿದೆ ಗುರೂ!
ಪರಭಾಷಿಕರಿಗೆ ಕನ್ನಡ ಕಲಿಸೋಕೆ ಶುರುವಾಗಿದೆ ಹೊಸ ಸಂಸ್ಥೆ!
ಒಂದು ಕಾಲದಲ್ಲಿ "ಉದ್ಯಾನ ನಗರಿ" ಎಂದೇ ಪ್ರಸಿದ್ದಿ ಪಡೆದಿದ್ದ "ಬೆಂದಕಾಳೂರು", ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ದೇಶ ವಿದೇಶದ ನಾನಾ ಭಾಗದಿಂದ ತಮ್ಮ ತಮ್ಮ ಕನಸುಗಳನ್ನು ಕಟ್ಟಿಕೊಂಡು ಇಲ್ಲಿಗೆ ಬರುತ್ತಿರುವ ಜನರು, ಬೆಂಗಳೂರನ್ನು ತಮ್ಮ ನೆಲೆಯನ್ನಾಗಿಸಿಕೊಂಡಿದ್ದಾರೆ. ಹಾಗೆ ಬಂದ ಬಹಳಷ್ಟು ಜನರಿಗೆ ಕನ್ನಡ ಭಾಷೆಯ ಬಗ್ಗೆ ಒಂದಿಷ್ಟು ಕುತೂಹಲವಂತೂ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಕನ್ನಡೇತರರಿಗೆ ತಲುಪಿಸುವ ಮತ್ತು ಪರಿಚಯಿಸುವ "ನಿರಂತರ ಪ್ರಯತ್ನ" ದ ಅಗತ್ಯವಿದೆ.
ಕಳೆದ ಎರಡು ವರ್ಷದಿಂದ "ಕನ್ನಡ ಕಲಿ" ಕಾರ್ಯಕ್ರಮವನ್ನು ಬೆಂಗಳೂರಿನ ಸೀಮಿತ ಪ್ರದೇಶದಲ್ಲಿ ಮಾತ್ರ ನಡೆಸಿಕೊಡುತ್ತಿದ್ದ ನಾವು, ಇಲ್ಲಿಯವರೆಗೆ ಐದು ನೂರಕ್ಕೂ ಹೆಚ್ಚು ಕನ್ನಡೇತರರಿಗೆ ಕನ್ನಡವನ್ನು ಹೇಳಿಕೊಟ್ಟಿದ್ದೇವೆ. ಈಗ ಇದರ ಮುಂದಿನ ಭಾಗವಾಗಿ, "ಕನ್ನಡ ಕಲಿಕೆಯ ಶಾಲೆ ( Kannada Learning School)" ಯನ್ನು ಪ್ರಾರಂಭಿಸಿದ್ದೇವೆ.
ಈ ಮೂಲಕ ಮೊದಲನೇ ಹಂತದಲ್ಲಿ : "ಬೆಂಗಳೂರಿನ ಎಲ್ಲ ಭಾಗಗಳಲ್ಲಿ ನೆಲೆಸಿರುವ ಮತ್ತು ಕನ್ನಡ ಕಲಿಯಲು ಆಸಕ್ತಿ ಇರುವ ಕನ್ನಡೇತರರಿಗೆ, ಕನ್ನಡವನ್ನು ಪರಿಚಯಿಸುವುದು (ಕಲಿಸುವುದು)" ಹಾಗೂ ಎರಡನೇ ಹಂತದಲ್ಲಿ :"ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಳುಗಿಹೋಗಿರುವ ನಮ್ಮ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಕನ್ನಡ ಭಾಷೆ ಮತ್ತು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಅರಿವನ್ನು ಅಥವಾ ತಿಳುವಳಿಕೆಯನ್ನು ಮೂಡಿಸುವುದು" ನಮ್ಮ ಉದ್ದೇಶಗಳಾಗಿವೆ.
ತಮ್ಮಲ್ಲಿ ಒಂದು ಕೋರಿಕೆ:
ಕನ್ನಡ ಕಲಿಯಲು ಆಸಕ್ತಿಯುಳ್ಳವರಿಗೆ "Kannada Learning School" ಬಗ್ಗೆ ತಿಳಿಸಿ ಕೊಟ್ಟರೆ ನೀವು ನಮ್ಮನ್ನು ಪ್ರೋತ್ಸಾಹಿಸಿ ದಂತಾಗುತ್ತದೆ.
ರಾಜ್ಯೋತ್ಸವ ಸಂಭ್ರಮದ ಮೈಮರೆವು ಮತ್ತು ನಿಜ ಎಚ್ಚರ.
"ಮೆಟ್ರೋಲಿ ಕನ್ನಡ ಇಲ್ವಾ? ಹಿಂದೀ ಯಾಕೆ ಬೇಡಾ?" ಅಂದ್ರೇ...
![]() |
| (ಮೆಟ್ರೋ ರೈಲು ನಿಲ್ದಾಣ - ಮಹಾತ್ಮಾಗಾಂಧಿ ರಸ್ತೆ) |
![]() |
| (ರೈಲು ಹಳಿಯ ಮೇಲಿನ ಹಿಂದೀ ಸುರಕ್ಷತಾ ಸೂಚನೆ) |
ನಮ್ಮ ಆತಂಕಕ್ಕೆ ಕಾರಣವಾಗಿರೋದು ಬೆಂಗಳೂರಿನ ಮೆಟ್ರೋದಲ್ಲಿ ಪ್ರತಿಯೊಂದೂ ಮೂರು ಭಾಷೆಯಲ್ಲಿದೆ ಅನ್ನೋದು. ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲಿವೆ. ಕನ್ನಡದಲ್ಲಿಲ್ಲಾ ಅಂದ್ರೆ ಆತಂಕ ಆಗೋದು ಸರಿ, ಈಗ್ಯಾಕೆ ಆತಂಕ ಅಂತೀರಾ? ಆತಂಕ ಇದು ಹಿಂದೀಯಲ್ಲೂ ಇದೆ ಅನ್ನೋದಕ್ಕೆ ಗುರೂ!
ಕನ್ನಡ ಇಲ್ವಾ? ಇದ್ರೂ ಯಾಕೆ ಆಕ್ಷೇಪ?
ನಮ್ಮ ಮೆಟ್ರೋ ಮತ್ತು ಅನಿಯಂತ್ರಿತ ವಲಸೆ!

ಕನ್ನಡದಲ್ಲೇಕೆ ಇಷ್ಟು ಚಿಕ್ಕದಾಗಿದೆ?
ಸಮಸ್ಯೆ ಮೇಲೆ ಕಾಣುವಷ್ಟು ಚಿಕ್ಕದಲ್ಲ!
ಈಗೇಳದಿದ್ದರೆ ಮುಂದೆ ಮಲಗಬೇಕಾದೀತು!
ಕನ್ನಡನಾಡಲ್ಲಿ ಕನ್ನಡದೋರಿಗಾಗಿ ಕನ್ನಡದಲ್ಲಿ ವ್ಯವಹಾರ ನಡ್ಸುದ್ರೆ ಸಾಲ್ದಾ? ಇಷ್ಟಕ್ಕೂ ಹಿಂದಿಗೆ ಇಲ್ಲಿ ಜಾಗ ಕೊಡೋದಾದ್ರೆ ತಮಿಳು, ಉರ್ದು, ಮಲಯಾಳಂ, ಒಡಿಯಾ, ಪಂಜಾಬಿ, ರಾಜಾಸ್ಥಾನಿ, ತೆಲುಗುಗಳಿಗೂ ಕೊಡಬೋದು ಅಲ್ವಾ? ಊಹೂಂ... ಕೇಂದ್ರಸರ್ಕಾರಕ್ಕೆ ಇರೋ ಗುರೀನೇ ಇವೆಲ್ಲಾ ವೈವಿಧ್ಯತೆಗಳನ್ನು ಅಳಿಸಿ ಹಿಂದೀನ ಇಡೀ ಭಾರತದ ತುಂಬಾ ಪ್ರತಿಷ್ಠಾಪಿಸೋ ಉಮ್ಮೇದಿ. ಇಲ್ಲೇ ಇರೋ ಕನ್ನಡಿಗನ ಹಿತ ಕಡೆಗಾಣಿಸಲ್ಪಟ್ಟರೂ ಸರಿಯೇ, ಹಿಂದಿಯವರಿಗೆ ಭಾರತದ ಯಾವ ಮೂಲೇಲೂ ತೊಡಕಾಗಬಾರದು ಅನ್ನೋ ಮನಸ್ಥಿತಿ. ಒಟ್ನಲ್ಲಿ ಹಿಂದೀ ವಸಾಹತುಶಾಹಿ ಮನಸ್ಥಿತಿಯನ್ನು ಕನ್ನಡಿಗರು ಗುರುತಿಸಿ ಮೊಳಕೆಯಲ್ಲೇ ಚಿವುಟದಿದ್ದರೆ ನಾಳೆ ನಮ್ಮ ಬದುಕು ಮತ್ತೊಮ್ಮೆ ಗುಲಾಮಗಿರಿಗೆ ಒಳಗಾಗಬೇಕಾದೀತು ಗುರೂ!
IRS ವರದಿ ಹೊರಗೆಡಹಿದ ದಿಟ!

ಕನ್ನಡ ಪತ್ರಿಕೆಗಳ ಓದುಗರ ಸಂಖ್ಯೆ...
ಈ ವರದಿಯಂತೆ, ಕರ್ನಾಟಕದಲ್ಲಿ ಮಾರಾಟವಾಗೋ ಒಟ್ಟು ದಿನಪತ್ರಿಕೆಗಳಲ್ಲಿ ಮೊದಲ ಹತ್ತು ದಿನಪತ್ರಿಕೆಗಳ
ಓದುಗರ ಸಂಖ್ಯೆ ಸುಮಾರು 2.33 ಕೋಟಿಯಂತೆ. ಇದರಲ್ಲಿ ಕನ್ನಡ ಪತ್ರಿಕೆಗಳ ಸಂಖ್ಯೆ 2.03 ಕೋಟಿ... ಅಂದ್ರೆ ನೂರಕ್ಕೆ 89.80%.
ಹಾಗೇ ಬೆಂಗಳೂರಲ್ಲಿ ಮಾರಾಟವಾಗೋ ಪತ್ರಿಕೆಗಳ ಓದುಗರ ಸಂಖ್ಯೆ 44.46 ಲಕ್ಷಗಳು. ಇದ್ರಲ್ಲಿ ಕನ್ನಡದ ಪತ್ರಿಕೆಗಳನ್ನು ಓದೋರ ಸಂಖ್ಯೆ 30.79 ಲಕ್ಷ ಗುರೂ! ಇದರರ್ಥ ನೂರಕ್ಕೆ 69.25% ಜನ ಓದುಗರು ಕನ್ನಡ ಪತ್ರಿಕೇನೆ ಓದೋದು. ಇನ್ನು ಡೆಕ್ಕನ್ ಹೆರಾಲ್ಡ್, ಟೈಮ್ಸ್, ಹಿಂದೂ ಪತ್ರಿಕೆಗಳನ್ನು ಓದೋ ಕನ್ನಡಿಗರ ಲೆಕ್ಕಾನೂ ತೊಗೊಂಡ್ರೆ... ಬೆಂಗಳೂರಲ್ಲಿ ಕನ್ನಡದವರ ಸಂಖ್ಯೆ ನೂರಕ್ಕೆ ಏನಿಲ್ಲಾ ಅಂದ್ರೂ 80ಕ್ಕಿಂತ ಖಂಡಿತಾ ಹೆಚ್ಚು ಗುರೂ!
ಬೆಂಗಳೂರಲ್ಲಿ ಕನ್ನಡದೋರು ಕಮ್ಮೀ ಅನ್ನೋ ಹುನ್ನಾರ!
"ಬೆಂಗಳೂರಲ್ಲಿ ಕನ್ನಡದೋರು ನೂರಕ್ಕೆ ಮೂವತ್ತು ಜನದಷ್ಟಿದಾರೆ. ಇಲ್ಲಿ ಬೇರೆ ಭಾಷೆಯೋರೇ ಜಾಸ್ತಿ. ಹಾಗಾಗಿ ಇಲ್ಲಿನ ವ್ಯವಸ್ಥೆಗಳಲ್ಲಿ ಕನ್ನಡ ಇರಬೇಕು ಅಂತಾ ಒತ್ತಾಯಿಸಬೇಡಿ. ಬಸ್ಸುಗಳ ಬೋರ್ಡು, ಅಂಗಡಿಗಳ ಬೋರ್ಡು ಎಲ್ಲಾದ್ರಲ್ಲೂ ಕನ್ನಡ ಇರಬೇಕು ಅನ್ನಬೇಡಿ. ಇದು ಕಾಸ್ಮೋಪಾಲಿಟಿನ್ ಸಿಟಿ" ಅಂತೆಲ್ಲಾ ಪದೇ ಪದೇ ಎಗರಾಡೋರ ಕಣ್ಣು ಈಗಾದ್ರೂ ತೆರೆದೀತಾ? ಹಾಗೇನಾದ್ರೂ ಬೆಂಗಳೂರಲ್ಲಿ ಕನ್ನಡದೋರು ಕಮ್ಮಿ ಇದ್ದಿದ್ರೆ ಈ ಪಾಟಿ ಓದುಗರು ಇರಕ್ ಆಗ್ತಿತ್ತಾ? ನಮ್ಮ ಸರ್ಕಾರ, ಆಡಳಿತ ಯಂತ್ರಗಳೆಲ್ಲಾ ‘ಬೆಂಗಳೂರಲ್ಲಿ ಕನ್ನಡದೋರು ಅಲ್ಪಸಂಖ್ಯಾತರು’ ಅನ್ನೋ ಹುಸಿಯನ್ನು ನಂಬೋದು ಬಿಡ್ಲಿ. ನಮ್ಮ ನಾಡಲ್ಲಿ ಇನ್ನಾದ್ರೂ ವಲಸಿಗರಿಗಾಗಿ ವ್ಯವಸ್ಥೆ ಕಟ್ಟೋದ್ನ ನಿಲ್ಸಿ ಕನ್ನಡಿಗರಿಗಾಗಿ ವ್ಯವಸ್ಥೆ ಕಟ್ಟೊ ಕೆಲಸಕ್ಕೆ ಮುಂದಾಗಬೇಕಾಗಿದೆ. ಏನಂತೀರಾ ಗುರೂ?
ಭಾರತ - ಒಂದು ಅಲೆಮಾರಿಗಳ ದೇಶವಾ?
- ಸಂಪಾದಕ, ಏನ್ ಗುರು
ದೊಡ್ಡ ದೊಡ್ಡ ಊರುಗಳಲ್ಲಿರೋ, ಅದರಲ್ಲೂ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕಲ್ಕತ್ತಾದಂತಹ ಊರುಗಳಲ್ಲಿ ಬೇರೆ ಬೇರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರಲ್ಲಿ, ಇಂಗ್ಲಿಷ್ ಮಾಧ್ಯಮಗಳಲ್ಲಿ ಕೆಲಸ ಮಾಡೋರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅದೇನಪ್ಪ ಅಂದ್ರೆ ಭಾರತ ಅನ್ನೋದು ಒಂದು ಅಲೆಮಾರಿಗಳ ದೇಶ, ಇಲ್ಲಿರೋ ಜನಕ್ಕೆ ಒಂದು ಊರಿಂದ ಇನ್ನೊಂದ್ ಊರಿಗೆ, ಒಂದು ರಾಜ್ಯದಿಂದ ಇನ್ನೊಂದ್ ರಾಜ್ಯಕ್ಕೆ ವಲಸೆ ಹೋಗೊದು ಬಿಟ್ರೆ ಬೇರೆ ಕೆಲ್ಸಾನೇ ಇಲ್ಲ ಅನ್ನೋದು.
ಇವರ ತಲೇಲಿರೋ ಇಂತಹ ತಪ್ಪು ಕಲ್ಪನೆಯಿಂದ ಇವರ ತಲೇಲಿ ಹುಟ್ಟಿರೋ ಭಾರತದಲ್ಲಿ ಕನ್ನಡ, ಮರಾಠಿ, ತಮಿಳು, ಬೆಂಗಾಳಿಯಂತಹ ನುಡಿಗಳಿಗೆ ಯಾವ ಬೆಲೆಯೂ ಇಲ್ಲ, ನೆಲೆಯೂ ಇಲ್ಲ. ಇವರ ಕಲ್ಪನೆಯ ಈ ಅಲೆಮಾರಿಗಳ ದೇಶದಲ್ಲಿ ಹಿಂದಿಗೆ ಮಾತ್ರ ಈ ದೇಶಾನಾ ಬೆಸೆಯೋ ಶಕ್ತಿ ಇರೋದು. ಇವರ ಕಲ್ಪನೆಯ ಭಾರತದಲ್ಲಿ ಅಲ್ಲಿನ ಕಲಿಕೆ, ಆಡಳಿತ, ಉದ್ಯೋಗವಕಾಶಗಳಿರೊದೇ ವಲಸಿಗರ ಅನುಕೂಲಕ್ಕಾಗಿ (ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕ ವಲಸಿಗರಿಗಾಗಿ). ಇವರ ಕಲ್ಪನೆಯ ಭಾರತದಲ್ಲಿ ಹಿಂದಿ ಭಾಷಿಕರ ಮುಂದೆ ಸ್ಥಳೀಯರ ಭಾರತೀಯತೆ ಸಪ್ಪೆ ಸಪ್ಪೆ.
ಹಾಗಿದ್ರೆ ಬನ್ನಿ 2001ರ ಜನಗಣತಿ ಪ್ರಕಾರ ಭಾರತದಲ್ಲಿ ಕಂಡು ಬಂದಿರುವ ವಲಸೆ ಅಂಕಿಅಂಶ ನೋಡೊಣ. ಅರಗಿಸಿಕೊಳ್ಳೊಕೆ ಕಷ್ಟ ಅನ್ನಿಸೋ ಸತ್ಯ ಏನು ಅನ್ನೋದನ್ನ ಸ್ವಲ್ಪ ನೋಡೊಣ.
2001ರ ಜನಗಣತಿಯ ಆಧಾರ ಇಟ್ಕೊಂಡು ಕೆಲವು ಲೆಕ್ಕಾಚಾರ ಹಾಕಿ, ತಾನು ಹುಟ್ಟಿರೋ ಊರು, ಜಿಲ್ಲೆ ಇಲ್ಲಾ ರಾಜ್ಯದಲ್ಲೇ ಉಳಿದುಕೊಂಡಿರೋ ಭಾರತಿಯರ ಸಂಖ್ಯೆ ಏನಿರಬಹುದು ಅಂತಾ ನೋಡಿದ್ರೆ ಕಾಣಿಸೋದು ಇಂತಿದೆ.(ಪ್ರತಿ ಸಾವಿರ ಭಾರತೀಯರಿಗೆ ಎಂದು ಅಂದಾಜಿಸಿಲಾಗಿದೆ):ಇದರಂತೆ, ಜನಗಣತಿ ತಂಡ ಮಾತನಾಡಿಸಿದ ಪ್ರತಿ ಸಾವಿರ ಜನರಲ್ಲಿ 953 ಜನ ಗಣತಿ ನಡೆದ ಆ ರಾಜ್ಯದಲ್ಲೇ ಹುಟ್ಟಿರೋದು. ಅವರು ಬೇರೊಂದು ರಾಜ್ಯದಿಂದ ವಲಸೆ ಬಂದಿರೋರಲ್ಲ. ಹಾಗೆಯೇ, ಜನಗಣತಿ ತಂಡ ಮಾತನಾಡಿಸಿದ ಪ್ರತಿ 1000 ಜನರಲ್ಲಿ 878 ಜನ ಗಣತಿ ನಡೆದ ಅದೇ ಜಿಲ್ಲೆಯಲ್ಲೇ ಹುಟ್ಟಿರೋದು. ಕೊನೆಯಲ್ಲಿ, ಪ್ರತಿ 1000 ಜನರಲ್ಲಿ ಸುಮಾರು 701 ಜನ ಗಣತಿ ನಡೆದ ಹಳ್ಳಿಯಲ್ಲೇ ಹುಟ್ಟಿರೋದು ! ಇವರು ತಮ್ಮ ಜಿಲ್ಲೆಯಲ್ಲೇ ಇನ್ನೊಂದು ಜಾಗಕ್ಕೆ ವಲಸೆ ಹೋಗಿಲ್ಲ !
ಈ ಮೇಲಿನ ಅಂಕಿಅಂಶ ಭಾರತ ಅನ್ನೋದು ಅಲೆಮಾರಿಗಳ ದೇಶವಲ್ಲ ಅನ್ನೋದನ್ನ ಒತ್ತಿ ಹೇಳುತ್ತೆ. ನೆಲೆಸಿಗನನ್ನು ಕಡೆಗಣಿಸಿ, ವಲಸಿಗನಿಗಾಗಿ ಒಂದು ನಾಡಿನ ಕಲಿಕೆ, ಆಡಳಿತ, ಉದ್ಯೋಗವಕಾಶ ಕಟ್ಟಬೇಕು ಅನ್ನೋದು ತಪ್ಪು ನಿರ್ಧಾರ ಅಂತ ಒತ್ತಿ ಹೇಳುತ್ತೆ. ಅಷ್ಟೇ ಅಲ್ಲ, ಭಾರತ ಸರ್ಕಾರವೂ ಸೇರಿದಂತೆ ಹಲವರಲ್ಲಿರೋ, ಹಿಂದಿ ಬಿಟ್ಟು ಬೇರಾವ ಭಾಷೆಯೂ ಭಾರತವನ್ನು ಪ್ರತಿನಿಧಿಸಲ್ಲ ಅನ್ನೋ ನಂಬಿಕೆ ಎಷ್ಟು ಪೊಳ್ಳು ಅನ್ನೋದನ್ನು ಎತ್ತಿ ತೋರಿಸುತ್ತೆ.
ಇನ್ನೊಂಚೂರು ಇದರ ಆಳಕ್ಕೆ ಇಳಿದು, ಭಾರತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಿಜಕ್ಕೂ ವಲಸೆ ಹೋಗೊ ಜನರಿಗೂ, ತಮ್ಮ ಹುಟ್ಟು ರಾಜ್ಯದಲ್ಲೇ ನೆಲೆಸೋ ಸ್ಥಳೀಯರ ಸಂಖ್ಯೆಗೂ ಹೋಲಿಕೆ ಮಾಡಿದ್ರೆ ಕಾಣಿಸೋದು ಇಂತಿದೆ. (ನೆನಪಿರಲಿ, ಇಲ್ಲಿ ವಲಸಿಗ ಅಂದ್ರೆ ಒಂದು ಭಾಷೆ ಮಾತಾಡೋ ರಾಜ್ಯದ ಗಡಿ ದಾಟಿ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗೋನು. ಹಾಗೇ, ಸ್ಥಳೀಯ ಅಂದ್ರೆ ಗಣತಿ ಮಾಡ್ತೀರೋ ರಾಜ್ಯದಲ್ಲೇ ಹುಟ್ಟಿದವನು)ಮೇಲೆ ಯಾವ ಅಂಕಿಅಂಶ ಹೆಚ್ಚು ಅನ್ನೋದನ್ನ ಬಾಲವಾಡಿಲೀ ಓದ್ತಿರೋ ಒಬ್ಬ ಪುಟ್ಟ ಹುಡುಗಾ ಕೂಡಾ ಹೇಳಬಲ್ಲ. ಇದನ್ನ ನೋಡಿದ ಮೇಲೆ, ದಿಲ್ಲಿ ದೊರೆಗಳು ಯಾರನ್ನ ಗಮನದಲ್ಲಿಟ್ಟುಕೊಂಡು ತಮ್ಮ ನೀತಿ-ನಿಯಮ ರೂಪಿಸಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳೊದು ನಿಜಕ್ಕೂ ಅಂತಾ ಕಷ್ಟ ಏನಲ್ಲ. ಆದ್ರೆ ಏನ್ ಮಾಡೋದು, ದಿಲ್ಲಿ ದೊರೆಗಳಿಗಿರೋ ಯೋಚನೆಗಳೇ ಬೇರೆ ಅನ್ಸುತ್ತೆ. ದಿಲ್ಲಿದೊರೆಗಳನ್ನ, ಹಾಗೇ ದೊಡ್ಡ ಊರುಗಳಲ್ಲಿರೋ ನಮ್ಮ ಕೆಲವು ಗೆಳೆಯರನ್ನ ಇನ್ನೊಮ್ಮೆ ಬಾಲವಾಡಿಗೋ, ಅಂಗನವಾಡಿಗೋ ಸೇರಸಿದ್ರೆ ಇನ್ನೊಂದ್ ಸ್ವಲ್ಪ ತಿಳುವಳಿಕೆ ಬರಬಹುದೆನೋ

ಟ್ವಿಟರ್ ನಲ್ಲಿ
ಫೇಸ್ಬುಕ್ ನಲ್ಲಿ











